Category Archives: Blog

Your blog category

ಮುಂಬೈ ಇಂಡಿಯನ್ಸ್ ಸೋತರೆ 2 ತಂಡಗಳು ಔಟ್..!

Source link

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಅವಧಿ 3 ಗಂಟೆ 9 ನಿಮಿಷ? ಹಲವು ಪದಗಳು ಮ್ಯೂಟ್ – Kannada News | Ram Charan Janhvi Kapoor starrer Peddi movie CBFC Censor Board Cuts and Run Time

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಹಾಗೂ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ (Peddi) ಜೂನ್ 4ರಂದು ತೆರೆಕಾಣಲು ಸಜ್ಜಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡ ಸೆನ್ಸಾರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈ ಚಿತ್ರದ ಮೂಲ ತೆಲುಗು ಆವೃತ್ತಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದೆ. ಅನೇಕ ಪದಗಳನ್ನು ಮ್ಯೂಟ್ ಮಾಡುವಂತೆ ತಿಳಿಸಿದೆ.

‘ಪೆದ್ದಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ (U/A 16+) ಪ್ರಮಾಣಪತ್ರವನ್ನು ನೀಡಿದೆ. ಆದರೆ ಚಿತ್ರದಲ್ಲಿ ಬಳಕೆಯಾಗಿರುವ ಹಲವು ಆಕ್ಷೇಪಾರ್ಹ ಪದಗಳು, ಸಮುದಾಯದ ಉಲ್ಲೇಖಗಳು ಹಾಗೂ ದೃಶ್ಯಗಳನ್ನು ಬದಲಾಯಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಚಿತ್ರದ ಹಿಟ್ ಗೀತೆ ‘ಚಿಕಿರಿ ಚಿಕಿರಿ’ ಹಾಡಿನಲ್ಲಿ ಬರುವ ‘ಸರುಕು ಸಾಮಾನ್’ ಎಂಬ ಪದಗಳನ್ನು ಸಹ ಬದಲಾಯಿಸಲಾಗಿದೆ.

ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ‘ರಾಜಸ್ಥಾನ’ ಪದ ಹಾಗೂ ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕಲು ಸೂಚಿಸಲಾಗಿದೆ. ದೃಶ್ಯಗಳ ವಿಚಾರಕ್ಕೆ ಬಂದರೆ, ಚಿತ್ರದಲ್ಲಿ ಪಾತ್ರವೊಂದು ಮಧ್ಯದ ಬೆರಳು ತೋರಿಸುವ ದೃಶ್ಯಕ್ಕೆ ಸಿಜಿ ಎಫೆಕ್ಟ್ ಬಳಸಿ ಮರೆಮಾಚಲು ಹೇಳಲಾಗಿದೆ.

ಚಿತ್ರತಂಡ ಈ ಎಲ್ಲಾ ಬದಲಾವಣೆಗಳನ್ನು ಮಾಡಿದ ನಂತರ ಮೇ 22ರಂದು ಅಧಿಕೃತ ಸೆನ್ಸಾರ್ ಪ್ರಮಾಣಪತ್ರವನ್ನು ಕೈಗೆತ್ತಿಕೊಂಡಿದೆ. ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ ‘ಪೆದ್ದಿ’ ಚಿತ್ರದ ಒಟ್ಟು ಅವಧಿ 189 ನಿಮಿಷಗಳು, ಅಂದರೆ 3 ಗಂಟೆ 9 ನಿಮಿಷ ಇರಲಿದೆ. ಚಿತ್ರದಲ್ಲಿ ಸಾಹಸ ಮತ್ತು ಹಿಂಸಾತ್ಮಕ ದೃಶ್ಯಗಳಿಗೆ ಯಾವುದೇ ವಿಶುವಲ್ ಕಟ್ಸ್ ನೀಡಿಲ್ಲ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

ಇದನ್ನೂ ಓದಿ: ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ

ಬುಚ್ಚಿ ಬಾಬು ಸನಾ ಕಥೆ ಬರೆದು ನಿರ್ದೇಶಿಸಿರುವ ‘ಪೆದ್ದಿ’ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ. ಈಶಾನ್ ಸಕ್ಸೇನಾ ಸಹ-ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಜೊತೆಗೆ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ, ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಉತ್ತರ ಭಾರತದಲ್ಲಿ ‘ಜಿಯೋ ಸ್ಟುಡಿಯೋಸ್’ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಈ ಸಿನಿಮಾ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲೂ ಬಿಡುಗಡೆಯಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Karnataka Weather Update: Heavy rain in Bengaluru, Orange Alert for 2 Districts

ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮೇ 22: ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಒಟ್ಟು 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಹಾಗೂ 2 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ.
  • ಬೆಂಗಳೂರು ಒಳಗೊಂಡಂತೆ ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುನ್ನೆಚ್ಚರಿಕೆ.
  • ಮೇ 25 ರವರೆಗೆ ಬಿರುಗಾಳಿ ಸಹಿತ ಭಾರಿ ಮಳೆ, ಸಾರ್ವಜನಿಕರಿಗೆ ಎಚ್ಚರಿಕೆ.

ಕೊಪ್ಪಳ, ಗದಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

ಉತ್ತರ ಒಳನಾಡಿನ ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 50-60 ಕಿ.ಮೀ ವೇಗ) ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಎರಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ಮತ್ತು ರಾಯಚೂರಿನಲ್ಲೂ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಗುಡುಗು ಸಿಡಿಲಿನ ಅಬ್ಬರ ಜೋರಾಗಿರಲಿದೆ. ಮೇ 22ರಿಂದ ಮೇ 25, 2026ರ ಅವಧಿಯಲ್ಲಿ ಇಡೀ ಒಳನಾಡು ಭಾಗದಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದ ಗಾಳಿಯೊಂದಿಗೆ ತೀವ್ರ ಸ್ವರೂಪದ ಗುಡುಗು ಸಹಿತ ಮಳೆ (Thunderstorm) ಸಂಭವಿಸುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಮೇ 21ರಿಂದ ಮೇ 25ರವರೆಗೆ ಸಿಡಿಲು ಹಾಗೂ ಮಿಂಚಿನ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರಲು ಕೋರಲಾಗಿದೆ.

ದಕ್ಷಿಣ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಪ್ರಮುಖವಾಗಿ ಒಣ ಹವಾಮಾನ ಇರಲಿದ್ದು, ಅಲರ್ಟ್ ಘೋಷಿಸಲಾಗಿರುವ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೀನ್ಸ್​​ ಖರೀದಿಯಲ್ಲಿ ಮೋಸ ಆರೋಪ: ಚಿಕ್ಕಮಗಳೂರು APMC ಗೇಟ್​​ ಲಾಕ್​​ ಮಾಡಿ ತಡರಾತ್ರಿ ರೈತರ ಪ್ರೊಟೆಸ್ಟ್​​ – Kannada News | Beans Price Scam Allegation: Farmers Lock Chikkamagaluru APMC Gate in Midnight Protest

ಚಿಕ್ಕಮಗಳೂರು, ಮೇ 24: ಎಪಿಎಂಸಿಯಲ್ಲಿ ಬೀನ್ಸ್ ವ್ಯಾಪಾರಿಗಳಿಂದ ಬೆಲೆಯಲ್ಲಿ ಮೋಸವಾಗಿದೆ ಎಂದು ಆರೋಪಿಸಿ ನೂರಾರು ರೈತರು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರಲ್ಲಿ (Chikkamagaluru) ನಡೆದಿದೆ. ಮೈಸೂರು ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಕೆಜಿಗೆ 85 ರಿಂದ 90 ರೂಪಾಯಿ ಇದ್ದು, ಚಿಕ್ಕಮಗಳೂರಿನಲ್ಲಿ ಕೇವಲ 40 ರೂಪಾಯಿಗೆ ಖರೀದಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಪಿಎಂಸಿ ಗೇಟ್‌ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಾಂಶಗಳು

  • ಬೀನ್ಸ್​​ ದರದಲ್ಲಿ ವ್ಯಾಪಾರಿಗಳಿಂದ ಮೋಸ ಆರೋಪ
  • ಚಿಕ್ಕಮಗಳೂರಲ್ಲಿ ತಡರಾತ್ರಿ ಬೀದಿಗಿಳಿದ ರೈತರು
  • APMC ಗೇಟ್​​ ಲಾಕ್​​ ಮಾಡಿ ರೈತರಿಂದ ಭಾರಿ ಆಕ್ರೋಶ

ರೈತರು ಹೇಳೋದೇನು?

ಬೀನ್ಸ್​​ಗೆ ಈ ಬಾರಿ ಉತ್ತಮ ಬೆಲೆ ಬಂದಿದೆ. ಮೈಸೂರು, ಬೆಂಗಳೂರು APMC ಮಾರುಕಟ್ಟೆಯಲ್ಲಿ 80 ರಿಂದ 90 ರೂಪಾಯಿ ಪ್ರತಿ ಕೆಜಿಗೆ ಮಾರಾಟವಾಗುತ್ತಿದೆ. ಆದರೆ ಚಿಕ್ಕಮಗಳೂರು APMC ಮಾರುಕಟ್ಟೆಯಲ್ಲಿ ಮಾತ್ರ ಇದರ ಅರ್ಧದಷ್ಟು ಬೆಲೆ ಎಂಬುದು ರೈತರ ಆರೋಪ. ಇಲ್ಲಿನ ವ್ಯಾಪಾರಿಗಳು ಕೆಜಿ ಬೀನ್ಸ್​​ನ ಕೇವಲ 40-60 ರೂಪಾಯಿಗೆ ಖರೀದಿಸುತ್ತಿದ್ದಾರೆ ಎಂಬುದು ರೈತರ ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಗಿದೆ. ಈ ಸಂಬಂಧ ಪೊಲೀಸರ ಜೊತೆಗೆ APMC ಆವರಣದಲ್ಲಿ ಸಭೆ ನಡೆಸಲಾಗಿದೆಯಾದರೂ, ರೈತರು ಮಾತ್ರ ವರ್ತಕರು, APMC ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಕಾಮಗಾರಿ ವಿಚಾರವಾಗಿ ಹೈಡ್ರಾಮ; ಆಣೆ ಪ್ರಮಾಣ ಹಂತಕ್ಕೆ ತಲುಪಿದ ಸಿ.ಟಿ ರವಿ, ತಮ್ಮಯ್ಯ ಫೈಟ್!

ರೈತರ ಆಕ್ರೋಶ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಬಂದ ಚಿಕ್ಕಮಗಳೂರು ತಹಶಿಲ್ದಾರ್ ರೇಷ್ಮಾ, ಎಸಿ ನಟೇಶ್ ರೈತರ ಸಭೆ ನಡೆಸಿದ್ದಾರೆ. ಹೀಗಿದ್ದರೂ APMC ಅಧಿಕಾರಿಗಳು ಮಾತ್ರ ನಾಪತ್ತೆಯಾಗಿದ್ದು, ಸ್ವತಃ ಎಸಿಯೇ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅಧಿಕಾರಿಗಳು ಮಾತಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಮಧ್ಯರಾತ್ರಿ 12ರ ವರೆಗೆ ರೈತರು ಪ್ರತಿಭಟನೆ ನಡೆಸಿದ್ದು, ಬೀನ್ಸ್​​ ದರ ನಿಗದಿ ಸೇರಿ ಜಿಲ್ಲಾಧಿಕಾರಿಗಳ ಜೊತೆ ರೈತರ ಸಭೆ ನಡೆಸುವ ಭರವಸೆಯನ್ನು ತಹಶೀಲ್ದಾರ್​​ ಮತ್ತು ಎಸಿ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಹಿತಶತ್ರುಗಳಿಂದ ಜಾಗರೂಕರಾಗಿರಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 24, ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು. ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ ಅಷ್ಟಮಿ, ಮಕಾ ನಕ್ಷತ್ರ, ವ್ಯಾಗತ ಯೋಗ ಮತ್ತು ಭಾವ ಕರಣದ ಈ ದಿನವು ಸೂರ್ಯನ ಲಹರಿಗಳಿಂದ ಕೂಡಿದೆ. ಇಂದು ಕಾಮನ್ ವೆಲ್ತ್ ಡೇ ಸಹ ಆಚರಿಸಲಾಗುತ್ತಿದೆ. ರಾಹುಕಾಲವು ಸಂಜೆ 4:49 ರಿಂದ 6:38 ರವರೆಗೆ ಇರಲಿದ್ದು, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಮಧ್ಯಾಹ್ನ 1:52 ರಿಂದ 3:28 ರವರೆಗೆ ಇರಲಿದೆ. ಅನಾರೋಗ್ಯ, ಮಾನಸಿಕ ನೆಮ್ಮದಿ ಇಲ್ಲದಿರುವಿಕೆ, ಅಪವಾದಗಳಲ್ಲಿ ಸಿಲುಕಿದವರು ಅಥವಾ ಕೋರ್ಟ್ ಕೇಸುಗಳಿಂದ ತೊಂದರೆ ಅನುಭವಿಸುತ್ತಿರುವವರು ಇಂದು ಸೂರ್ಯ ನಮಸ್ಕಾರ ಮಾಡಿ ಮತ್ತು ಆದಿತ್ಯ ಹೃದಯವನ್ನು ಕೇಳಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

 

 

Source link

Daily Devotional: ಸ್ತ್ರೀ ಜಾತಕದಲ್ಲಿ ಯಾವ ಗ್ರಹ ಬಲವಾಗಿದ್ರೆ ಅದೃಷ್ಟ ಗೊತ್ತಾ? – Kannada News | How Planetary Strengths Influence Women’s Personality

ಸ್ತ್ರೀ ಜಾತಕದಲ್ಲಿನ ಗ್ರಹಬಲಗಳು ಮಹಿಳೆಯರ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ. ನಮ್ಮ ಪೂರ್ವಿಕರು ಹೇಳಿದಂತೆ, ಕುಟುಂಬದಲ್ಲಿ ಮಹಿಳೆಯು ಕಾರ್ಯೇಶು ದಾಸಿ, ಕರುಣೇಶು ಮಂತ್ರಿ, ಪೂಜ್ಯೇಶು ಮಾತ, ರೂಪೇಶು ಲಕ್ಷ್ಮಿ, ಕ್ಷಮಯ ಧರಿತ್ರಿ, ಶಯನೇಶು ರಂಭ ಗುಣಗಳನ್ನು ಹೊಂದಿರಬೇಕು. ಮಹಿಳೆಯು ಈ ಗುಣಗಳನ್ನು ಅಳವಡಿಸಿಕೊಂಡರೆ ಕುಟುಂಬದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ: ಪ್ರತಿದಾಳಿಗೆ ಆಗಂತುಕ ಸಾವು – Kannada News | Shooting Near White House: Suspect Killed in Return Fire, President Donald Trump Safe

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿImage Credit source: shutterstock.com

ವಾಷಿಂಗ್‌ಟನ್, ಮೇ 24: ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್​ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ​ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದು. ಅಮೆರಿಕದ ಭದ್ರತಾ ಪಡೆಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಮೆರಿಕದ ಸೀಕ್ರೆಟ್ ಸರ್ವಿಸ್ ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಂಜೆ ಸುಮಾರು 6 ಗಂಟೆಯ ನಂತರ ವ್ಯಕ್ತಿಯೋರ್ವ ಭದ್ರತಾ ತಪಾಸಣಾ ಕೇಂದ್ರದತ್ತ ಬಂದು ತನ್ನ ಬ್ಯಾಗಿನಿಂದ ಗನ್ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ ಎನ್ನಲಾಗಿದೆ.

ಟ್ರಂಪ್​​ ಸೇಫ್​​

ಇನ್ನು ದಾಳಿಯ ವೇಳೆ ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಘಟನೆಯಲ್ಲಿ ಓರ್ವ ಪಾದಚಾರಿಗೂ ಗಾಯಗಳಾಗಿವೆ. ಆದರೆ ಆ ವ್ಯಕ್ತಿಗೆ ಶಂಕಿತನ ಗುಂಡಿನಿಂದ ಗಾಯವಾಗಿದೆಯೋ ಅಥವಾ ಅಧಿಕಾರಿಗಳ ಪ್ರತಿದಾಳಿಯ ವೇಳೆ ಗಾಯವಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ನಡೆಯುವ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಒಳಗೇ ಇದ್ದರು. ಆದರೆ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಕ್ಷಣೆಗೆ ಹೋದವರಿಗೇ ಕಾದಿತ್ತು ಆಪತ್ತು, ಅಮೆರಿಕದಲ್ಲಿ ಮೂವರನ್ನು ಬಲಿ ಪಡೆದ ನಿಗೂಢ ವಸ್ತು, ಸಿಬ್ಬಂದಿ ಅಸ್ವಸ್ಥ

ಇನ್ನು ವೈಟ್ ಹೌಸ್ ಸಮೀಪ ಗುಂಡಿನ ದಾಳಿ ನಡೆದಿರುವುದು ಇದು ಮೊದಲೇನಲ್ಲ. ಕಳೆದ ನವೆಂಬರ್‌ನಲ್ಲಿ ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್‌ನ ಇಬ್ಬರು ಸದಸ್ಯರ ಮೇಲೆ ಕೂಡ ಇದೇ ಪ್ರದೇಶದಲ್ಲಿ ದಾಳಿ ನಡೆದಿತ್ತು. ಆ ಘಟನೆಯಲ್ಲಿ ಅಮೆರಿಕ ಸೇನೆಯ ಸ್ಪೆಷಲಿಸ್ಟ್ ಸಾರಾ ಬೆಕ್‌ಸ್ಟ್ರೋಮ್ ಮೃತಪಟ್ಟಿದ್ದು, ಆಂಡ್ರೂ ವೋಲ್ಫ್ ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ ಏಪ್ರಿಲ್ 25ರಂದು ಅಧ್ಯಕ್ಷ ಟ್ರಂಪ್ ಭಾಗವಹಿಸಿದ್ದ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಡಿನ್ನರ್ ಕಾರ್ಯಕ್ರಮದ ವೇಳೆ ಹತ್ಯೆ ಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕ್ಯಾಲಿಫೋರ್ನಿಯಾದ ಕೋಲ್ ಟೋಮಾಸ್ ಆಲೆನ್ ವಿರುದ್ಧ ಟ್ರಂಪ್ ಹತ್ಯೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆತ ಫೆಡರಲ್ ಕಸ್ಟಡಿಯಲ್ಲಿ ಇದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:29 am, Sun, 24 May 26

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ, ಅತಿಯಾದ ಆತಂಕ – Kannada News | Horoscope May 24 Sunday 2026; Dina Rashi Bhavishya Today, Checkout the details here

ಮೇಷ ರಾಶಿ:

ಹಿತಶತ್ರಗಳು ಸೋಲನ್ನು ಒಪ್ಪಿದರೂ ಇನ್ನೊಂದು ರೀತಿಯಲ್ಲಿ ಗೆಲ್ಲುವ ಯೋಜನೆ ಮಾಡುವರು. ಗಳಿಸಿಕೊಂಡ‌ ಭಾವಕ್ಕಿಂತ ಉಳಿಸಿಕೊಂಡ ಭಾವವೇ ಮೇಲು. ನಿಮ್ಮ ಸಂಕೀರ್ಣವಾದ ಕಾರ್ಯವು ಮುಕ್ತಾಗೊಳ್ಳುವುದು. ಸ್ಥಿರವಾದ ಬುದ್ಧಿಯನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಬರಬಹುದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಬಾರದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಾಗುವುದು.

ವೃಷಭ ರಾಶಿ:

ನಿಮ್ಮನ್ನು ಜ್ಞಾನವನ್ನು ಪ್ರದರ್ಶಿಸುವ ಅವಕಾಶ ಸಿಗಬಹುದು. ಹೆಚ್ಚಿನ ಶ್ರದ್ಧೆ ಮತ್ತು ತಿಳುವಳಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸ್ನೇಹವನ್ನು ಉಳಿಸಿಕೊಳ್ಳಲಾಗದು. ಕಲಿಕೆಯ ವಿಚಾರದಲ್ಲಿ ನೀವು ಎಂದಿಗಿಂತ ಹೆಚ್ಚು ಪ್ರಯತ್ನಶೀಲರು. ವಿವೇಚನೆ ಹೆಚ್ಚಲಿದೆ. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು.

ಮಿಥುನ ರಾಶಿ:

ಕಷ್ಟಗಳನ್ನು ಹಂಚಿಕೊಂಡು ಹಿರಿಯರೊಂದಿಗೆ ಆತ್ಮೀಯತೆ ಬೆಳೆಯಲಿದೆ. ಕುಟುಂಬದ ಸೆಳೆತದಿಂದ ವಿದ್ಯಾಭ್ಯಾಸ ಹಾಳಾಗುವುದು. ವ್ಯಾಪಾರವನ್ನು ಬೆಳಗಿಸಲು ಅನೇಕ ಅವಕಾಶಗಳಿವೆ. ಆದರೆ ನಿಮ್ಮ ನಿರ್ಲಕ್ಷ್ಯವು ಕೆಲಸವನ್ನು ಹಾಳು ಮಾಡಬಹುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ.

ಕರ್ಕಾಟಕ ರಾಶಿ:

ಅನಗತ್ಯ ಧೈರ್ಯವನ್ನು ತೋರಿಸುವುದನ್ನು ತಪ್ಪಿಸುವುದು ಸೂಕ್ತ. ನಿಮ್ಮ ವಸ್ತುಗಳನ್ನು ಜೋಪಾನ‌‌ ಮಾಡಿಕೊಳ್ಳಬೇಕು. ನೀವು ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡಲಿದೆ. ಅನುಭವಿ ಜನರನ್ನು ಸಂಪರ್ಕಿಸಲಾಗುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯವು ಹದ ತಪ್ಪುವುದು.

ಸಿಂಹ ರಾಶಿ:

ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಈ ಸಮಯದಲ್ಲಿ ದೊಡ್ಡ ಅವಕಾಶದ ಹುಡುಕಾಟವು ಪೂರ್ಣಗೊಳ್ಳುತ್ತದೆ. ಸಂಗಾತಿಯನ್ನು ಅಮೂಲ್ಯ ವಸ್ತುಗಳಿಂದ ಸುಮ್ಮನಾಗಿಸುವಿರಿ. ಆರಂಭದಲ್ಲಿ, ಕೆಲವು ಕೆಲಸಗಳನ್ನು ಯೋಚಿಸದೆ ಮಾಡಲಾಗುತ್ತದೆ ಮತ್ತು ಕೆಲವು ಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ. ಇದು ಗುರಿಯ ಸಾಧನೆಗೆ ಅಥವಾ ಅನುಭವದ ಅನನ್ಯ ಕೊಡುಗೆಗೆ ಕಾರಣವಾಗುತ್ತದೆ. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು.

ಕನ್ಯಾ ರಾಶಿ :

ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದಾನ ಮಾಡುವ ಮನೋಭಾವವು ಹೆಚ್ಚಾಗುತ್ತದೆ. ಅಭ್ಯಾಸವನ್ನು ಸೃಜನಾತ್ಮಕವಾಗಿ ಮಾಡಿಕೊಳ್ಳುವಿರಿ. ನೀವು ಇಂದು ಮಂಗಲಕಾರ್ಯವನ್ನು ಯೋಜಿಸುವಿರಿ. ಕೆಲವು ನಕಾರಾತ್ಮಕ ಸುದ್ದಿಗಳಿಂದಾಗಿ ನಿಮ್ಮ ಮನಸ್ಸು ಚಿಂತಿತವಾಗಬಹುದು. ನೀವು ಸಂತಾನದ ಸಂತೋಷವನ್ನು ಹೊಂದಿರುತ್ತೀರಿ. ನಿಮ್ಮ‌ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು.

ತುಲಾ ರಾಶಿ:

ಶಿಕ್ಷಣದ ಬಗ್ಗೆ ನಿಮಗಿರುವ ಆಸಕ್ತಿ ಮತ್ತಷ್ಟು ಅಧಿಕವಾಗಬಹುದು. ಸೂಕ್ತ ಸಮಯಕ್ಕೆ ಚಿಕಿತ್ಸೆಯಿಂದ ಆರೋಗ್ಯ ಚೆನ್ನಾಗಿ ಆಗುವುದು. ಮಕ್ಕಳ ಚಿಂತೆಯಿಂದ ಎಲ್ಲ ಸಂತೋಷಗಳು ಮರೆಯಾಗಲಿವೆ. ಯಾರ ನಕಾರಾತ್ಮಕ ವಿಚಾರವೂ ನಿಮಗೆ ಏನೂ ಮಾಡದು. ಅನವಶ್ಯಕವಾದ ಸಮಸ್ಯೆಗಳು ನಿಮ್ಮನ್ನು ಕಾಡಿಯಾವು. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು.

ವೃಶ್ಚಿಕ ರಾಶಿ:

ವಿರೋಧಿಗಳ ಯೋಜನೆಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಅದರಿಂದ ತೃಪ್ತಿಯೂ ಆಗಲಿದೆ. ಸರ್ಕಾರಿ ಕೆಲಸಗಳು ವಿಳಂಬವಾಗುವುದು. ಅಹಂಕಾರದಿಂದ ಪರರ ಸಲಹೆಯನ್ನು ಸ್ವೀಕರಿಸಲಾರಿರಿ. ನೆಚ್ಚಿನ ಕಲಾವಿದರ ಭೇಟಿಯಾಗಲಿದೆ. ಆಪ್ತರಿಂದ ಉಡುಗೊರೆ ಸಿಗಲಿದೆ. ಸ್ವಲ್ಪ ಆಲಸ್ಯವು ನಿಮ್ಮ ಕೆಲಸವನ್ನು ಹಿಂದಿಕ್ಕುವುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ.

ಧನು ರಾಶಿ:

ನಿಮ್ಮ ಇಂದಿನ ಆರ್ಥಿಕ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು‌ ಮಾಡಲಿದೆ. ಆರೋಗ್ಯದಲ್ಲಿ ಸುಧಾರಣೆ ತಂದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನದನುವ ತುಡಿತ ಇರಲಿದೆ. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು.

ಮಕರ ರಾಶಿ :

ನಿಮಗೆ ಸಿಗುವ ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಭೂಮಿಯ ವ್ಯವಹಾರವನ್ನು ಮಾಡಲಿದ್ದೀರಿ. ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮ ಉದ್ಯಮಕ್ಕೆ ಸಹಕಾರಿ. ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಲಿವೆ. ವಿದೇಶದ ಸಂಪರ್ಕವನ್ನು ಮಾಡಲು ಅವಕಾಶ ಸಿಗಲಿದೆ. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ.

ಕುಂಭ ರಾಶಿ:

ನಿಮ್ಮ ಜಾಣ್ಮೆಯಿಂದ ಆದಾಯದ ಪೂರ್ಣಲಾಭವನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ಸಹೋದರನ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಬಹುದು. ಆರ್ಥಿಕ ಯೋಗವಿದೆ. ತರಾತುರಿಯಲ್ಲಿ ಮಾಡಿದ ಕೆಲಸವು ಹಾನಿಯನ್ನುಂಟು ಮಾಡುತ್ತದೆ. ಮಗುವಿನ ನಡವಳಿಕೆಯು ನೋವನ್ನು ಉಂಟುಮಾಡುತ್ತದೆ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು‌. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು.

ಮೀನ ರಾಶಿ:

ತ್ವರಿತ ನಿರ್ಣಯದಿಂದ ನಿಂದನೆ. ಸೃಜನಶೀಲತಯಿಂದ ನಿಮ್ಮ ಮನಸ್ಸು ಅರಳುವುದು. ನಿಮ್ಮ ಪ್ರತಿಭೆಯಿಂದ ನೀವು ಅದ್ಭುತಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯುವಿರಿ. ಅನಗತ್ಯ ವಾದಗಳನ್ನು ಮಾಡಿ, ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಸೋಮಾರಿತನದಿಂದ ಸಮಯವು ವ್ಯರ್ಥವಾಗಲಿದೆ. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಧ್ರುವ, ಕರಣ : ಬಾಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:10 – 18:46, ಯಮಗಂಡ ಕಾಲ 12:21 – 13:57, ಗುಳಿಕ ಕಾಲ 15:34 – 17:10

-ಲೋಹಿತ ಹೆಬ್ಬಾರ್-8762924271 (what’s app only)

Source link

LSG vs PBKS: ಶ್ರೇಯಸ್ ಶತಕ; ಪಂಜಾಬ್ ಪ್ಲೇಆಫ್‌ ಆಸೆ ಜೀವಂತ

ಐಪಿಎಲ್ 2026 ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಪ್ಲೇಆಫ್‌ ದೃಷ್ಟಿಯಿಂದ ಈ ಪಂದ್ಯ ಪಂಜಾಬ್ ಕಿಂಗ್ಸ್​ಗೆ ಬಹುಮುಖ್ಯವಾಗಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಪಂಜಾಬ್ ತಂಡ ತನ್ನ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 197 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ್​ನಿಂದ ಸುಲಭವಾಗಿ ಜಯ ಸಾಧಿಸಿತು.

Source link

ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ: ಡಿಕೆ ಶಿವಕುಮಾರ್

ಬೆಂಗಳೂರು, ಮೇ.23: ನಗರಕ್ಕೆ ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಯೋಜನೆಗೆ ಆನೇಕಲ್ ತಾಲ್ಲೂಕಿನ ಸೂರ್ಯ ನಗರದಲ್ಲಿ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಶಾಸಕ ಶಿವಲಿಂಗೇಗೌಡ, ಆನೇಕಲ್ ಶಿವಣ್ಣ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಉಪಸ್ಥಿತರಿದ್ದರು. ಡಿಕೆ ಶಿವಕುಮಾರ್ ಅವರು ಮಾತನಾಡಿ, ಈ ಯೋಜನೆ ಬೆಂಗಳೂರಿಗೆ ಹೊಸ ಕೊಡುಗೆಯಾಗಲಿದೆ ಎಂದು ಹೇಳಿದರು. ಲಕ್ಷಾಂತರ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಬೆಂಗಳೂರಿನ ಹೊರಗೆ ಭವ್ಯವಾದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳನ್ನು ನೋಡಲು ಅವಕಾಶವನ್ನು ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಇದು ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು. ಈ ಐತಿಹಾಸಿಕ ಕಾರ್ಯಕ್ರಮವು ಸರ್ಕಾರ ಮತ್ತು ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ರೈತರ ಸಹಕಾರ ಹಾಗೂ ಸ್ಥಳೀಯ ನಾಯಕರಾದ ಡಿ.ಕೆ. ಸುರೇಶ್ ಮತ್ತು ಶಿವಣ್ಣ ಅವರ ಪ್ರಯತ್ನಗಳು ಈ ಯೋಜನೆಗೆ ಪೂರಕವಾಗಿವೆ ಎಂದು ಡಿಕೆ ಶಿವಕುಮಾರ್ ಶ್ಲಾಘಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link