Category Archives: Blog

Your blog category

ಪುಟ್ಟ ಮನೆಯಲ್ಲಿ ಸಾಧನೆಯ ಭಂಡಾರ: ಹೇಗಿದೆ ನೋಡಿ ಗಿಲ್ಲಿಯ ಸಣ್ಣ ಸೂರು – Kannada News | Gillis Triumphant Return: Dadadapura Village Celebrates BBK12 Winners Success Story

ಬಿಗ್​​​ಬಾಸ್​​​​​ ಕನ್ನಡ 12 ವಿಜೇತ ಗಿಲ್ಲಿ ಅವರ ಯಶಸ್ಸನ್ನು ಅವರ ಹುಟ್ಟೂರು ದಡದಪುರ ಅದ್ಧೂರಿಯಾಗಿ ಆಚರಿಸುತ್ತಿದೆ. ದಡದಪುರದಲ್ಲಿರುವ ಗಿಲ್ಲಿ ಅವರ ಮನೆಯಲ್ಲಿ ಅವರನ್ನು ಭೇಟಿಯಾಗಲು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಗಿಲ್ಲಿ ತುಂಬಾ ಬಡತನದ ಮನೆಯಿಂದ ಬಂದವರು, ಹಲವಾರು ಶೋಗಳಲ್ಲಿ ಭಾಗವಹಿಸಿದ್ದಾರೆ. ಒಂದಿಷ್ಟು ಹಣವನ್ನು ಸಂಪಾದಿಸಿದ್ದಾರೆ. ಅದರೂ ಅವರು ಇಂದಿಗೂ ಪುಟ್ಟ ಮನೆಯಲ್ಲೇ ವಾಸವಾಗಿದ್ದಾರೆ. ಅವರ ಮನೆ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ತೋರಿಸಿದೆ ನೋಡಿ. ಇದು ಗಿಲ್ಲಿ ಆಡಿ ಬೆಳೆದ ಪುಟ್ಟ ಮನೆ. ಬಡತನದ ಹಿನ್ನೆಲೆಯಿಂದ ಬಂದ ಗಿಲ್ಲಿ ಇಂದು  ಎತ್ತರಕ್ಕೆ ಬೆಳೆದಿರುವುದು ವಿಶೇಷ. ಅವರು ತಮ್ಮ ಪ್ರತಿಭೆಯಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ಗಿಲ್ಲಿ ಕೇವಲ ಬಡವರ ಮಗ ಮಾತ್ರವಲ್ಲ, ಅವರು ಅಸಾಧಾರಣ ಪ್ರತಿಭಾವಂತರು. ಅವರ ಈ ಪ್ರತಿಭೆಯೇ ಅವರ ಇಷ್ಟೊಂದು ದೊಡ್ಡ ಯಶಸ್ಸಿಗೆ ಕಾರಣವಾಯಿತು. ಮೊದಲು ಯೂಟ್ಯೂಬ್ ಮೂಲಕ ಜನಪ್ರಿಯತೆ ಗಳಿಸಿದ ಗಿಲ್ಲಿ, ನಂತರ ಬೆಳ್ಳಿ ಪರದೆಗೂ ಕಾಲಿಟ್ಟಿದ್ದಾರೆ. ಗಿಲ್ಲಿ ಅವರ ಮನೆಯಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಫೋಟೋಗಳು, ನಟರೊಂದಿಗೆ ತೆಗೆಸಿಕೊಂಡ ಚಿತ್ರಗಳು, ಮತ್ತು ಅಭಿಮಾನಿಗಳು ಅವರಿಗೆ ನೀಡಿದ ಪ್ರಶಸ್ತಿಗಳು ಹಾಗೂ ಉಡುಗೊರೆಗಳನ್ನು ಇಟ್ಟಿದ್ದಾರೆ. ಇವೆಲ್ಲವೂ ಅವರ ಯಶಸ್ಸಿನ ಪಯಣಕ್ಕೆ ಸಾಕ್ಷಿಯಾಗಿವೆ. ಗ್ರಾಮಸ್ಥರು ಸಹ ಗಿಲ್ಲಿಯ ಈ ಸಾಧನೆಗೆ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಿಗ್​​ ಬಾಸ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಆಸ್ಟ್ರೇಲಿಯಾ ಟಿ20 ತಂಡ ಪ್ರಕಟ: ನಾಲ್ವರು ಪ್ರಮುಖ ಆಟಗಾರರು ಔಟ್ – Kannada News | Australia T20 Squad For Pakistan Series

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪಿ, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

Source link

ಸೇಫ್ ಸಿಟಿ, 112 ತುರ್ತು ಸೇವೆ: ಬೆಂಗಳೂರಲ್ಲಿ ಮಕ್ಕಳ ಸುರಕ್ಷತೆಗೆ ತಂತ್ರಜ್ಞಾನದ ಹೊಸ ಹೆಜ್ಜೆ – Kannada News | Bengaluru Police Use Safe City Tech and Namma 112 to Rapidly Rescue Missing Children

ಬೆಂಗಳೂರು, ಜನವರಿ 19: ಕಳೆದ 12 ದಿನಗಳಲ್ಲಿ ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ತಂತ್ರಜ್ಞಾನ ಆಧಾರಿತ ತ್ವರಿತ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿ ಕಾಣೆಯಾಗಿದ್ದ ಮತ್ತು ನಿರ್ಲಕ್ಷ್ಯವಾಗಿ ಉಳಿದಿದ್ದ ಹಲವು ಮಕ್ಕಳನ್ನು ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ಕುಟುಂಬಗಳಿಗೆ ಸುರಕ್ಷಿತವಾಗಿ ಒಪ್ಪಿಸುವ ಕೆಲಸವನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಈ ಬಗ್ಗೆ ಸ್ವರ್ತ ಇಲಾಖೆಯೇ ಮಾಹಿತಿ ಹಂಚಿಕೊಂಡಿದೆ.

ಬೆಂಗಳೂರು ಸೇಫ್ ಸಿಟಿ ಯೋಜನೆ ಹಾಗೂ ನಮ್ಮ-112 ತುರ್ತು ವ್ಯವಸ್ಥೆಯ ಮೂಲಕ ಈ ಕಾರ್ಯಾಚರಣೆ ನಡೆಸಲಾಗಿದ್ದು, ಇದರಿಂದ ಜಿಪಿಎಸ್ ಆಧಾರಿತ ಪೇಟ್ರೋಲ್ ವಾಹನಗಳ ನಿಯೋಜನೆ ಹಾಗೂ ನಿಯಂತ್ರಣ ಕೊಠಡಿ ಮತ್ತು ಸ್ಥಳೀಯ ಸಿಬ್ಬಂದಿ ನಡುವೆ ಸಮನ್ವಯ ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ. ನಿಯಂತ್ರಣ ಕೊಠಡಿ ಮತ್ತು ಕ್ಷೇತ್ರದಲ್ಲಿರುವ ಸಿಬ್ಬಂದಿ ನಡುವಿನ ಸಮನ್ವ ಈ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ನಗರದಲ್ಲಿ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆಗೆ ನೀಡಿರುವ ಮಹತ್ವವನ್ನು ಇದು ಸಾಬೀತು ಮಾಡಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ; 2026ಕ್ಕೆ ಎಲ್ಲ ವಾಹನಗಳಿಗೆ ಅಳವಡಿಕೆ

ಮೊದಲ ಘಟನೆ 2025ರ ಡಿಸೆಂಬರ್ 27ರಂದು ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಮಾನಸಿಕವಾಗಿ ಅಸ್ಥಿರಳಾಗಿದ್ದ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಕರೆದೊಯ್ಯಲು ಯತ್ನಿಸಿದ್ದರು. ಘಟನೆಯನ್ನು ಗಮನಿಸಿದ ಸಹಾಯಕ ಉಪನಿರೀಕ್ಷಕರು ತಕ್ಷಣ ನಮ್ಮ-112ಗೆ ಮಾಹಿತಿ ನೀಡಿದ್ದು, ಐದು ನಿಮಿಷಗಳೊಳಗೆ ಹೋಯ್ಸಳಾ ಪೇಟ್ರೋಲ್ ವಾಹನ ಸ್ಥಳಕ್ಕೆ ತಲುಪಿ ಮಗುವನ್ನು ಸುರಕ್ಷಿತವಾಗಿ ತಾಯಿಗೆ ಒಪ್ಪಿಸಲಾಗಿದೆ.

ಅದೇ ರಾತ್ರಿ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 16 ವರ್ಷದ ಮಾನಸಿಕವಾಗಿ ಸವಾಲುಗಳನ್ನು ಎದುರಿಸುತ್ತಿದ್ದ ಬಾಲಕನನ್ನು ತುರ್ತು ಕರೆ ಬಂದ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ ತಾಯಿಯೊಂದಿಗೆ ಮರಳಿ ಸೇರಿಸಲಾಗಿದೆ. ಬೆಳ್ಳಂದೂರು, ರಾಜಗೋಪಾಲನಗರ, ಕಾಡುಗೋಡಿ ಹಾಗೂ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂಟಿಯಾಗಿ ಕಂಡುಬಂದ ಮಕ್ಕಳನ್ನು ಪತ್ತೆಹಚ್ಚಿ ಅವರ ಕುಟುಂಬಗಳಿಗೆ ಸುರಕ್ಷಿತವಾಗಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 14ರಂದು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರಹಳ್ಳಿ ಫ್ಲೈಓವರ್ ಸಮೀಪ ನಡೆದಿದ್ದು, ಗದ್ದಲಭರಿತ ರಸ್ತೆಯಲ್ಲಿ ಒಂದು ಮಗುವಿನ ಓಡಾಟ ಗಮನಕ್ಕೆ ಬಂದಿದೆ. ನಾಲ್ಕು ನಿಮಿಷಗಳೊಳಗೆ ಸ್ಥಳ ತಲುಪಿದ ಪೊಲೀಸ್​​ ಸಿಬ್ಬಂದಿ ಪರಿಶೀಲನೆ ಬಳಿಕ ಮಗುವನ್ನು ಪೋಷಕರಿಗೆ ಒಪ್ಪಿಸಿದೆ. ಈ ಎಲ್ಲ ಘಟನೆಗಲಲ್ಲಿಯೂ ಪೊಲೀಸರ ಪ್ರತಿಕ್ರಿಯೆಯ ಸಮಯ 20 ನಿಮಿಷಗಳ ಒಳಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:03 pm, Mon, 19 January 26

Source link

Video: ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ – Kannada News | Teacher Shaves Her Head to Stand With Student Battling Cancer

ಕ್ಯಾನ್ಸರ್ ಎಂಬುದು ಮನುಷ್ಯನ ಇಡೀ ಜೀವನವನ್ನೇ ನರಕಕ್ಕೆ ತಳ್ಳಿಬಿಡುತ್ತದೆ. ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಚಿಕಿತ್ಸೆಗಳು ಲಭ್ಯವಿಲ್ಲದ ಕಾರಣ ಜನರು ಕಷ್ಟದಲ್ಲೇ ದಿನದೂಡಬೇಕಾಗುತ್ತದೆ. ಶಾಲಾ ವಿದ್ಯಾರ್ಥಿನಿಗೆ ಕ್ಯಾನ್ಸರ್ ಬಂದಿದ್ದಕ್ಕೆ ಶಿಕ್ಷಕಿ ನಡೆದುಕೊಂಡ ರೀತಿ ಎಲ್ಲರ ಮನ ಗೆದ್ದಿದೆ. ಕ್ಯಾನ್ಸರ್ ಬಂದಾಗ ಕೀಮೋ ಥೆರಪಿ ಮಾಡುವುದು ಸಾಮಾನ್ಯ, ಆಗ ತಲೆ ಕೂದಲನ್ನು ತೆಗೆಯುತ್ತಾರೆ.  ಶಾಲೆಗೆ ಬಂದಾಗ ಈ ವಿದ್ಯಾರ್ಥಿನಿಗೆ   ಮುಜುಗರವಾಗುವುದು ಸಹಜ, ಹಾಗಾಗಬಾರದೆಂದು ಶಿಕ್ಷಕಿಯೊಬ್ಬರು ತಾನು ತಲೆ ಬೋಳಿಸಿಕೊಂಡಿದ್ದಲ್ಲದೆ, ವಿದ್ಯಾರ್ಥಿನಿಯ ಸಹಪಾಠಿಯ ಕೂದಲನ್ನೂ ತೆಗೆಸಿರುವ ವಿಡಿಯೋ ವೈರಲ್ ಆಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ – Kannada News | Bengaluru: A female auto driver in Bengaluru earns Rs 45,000 per month

ಬೆಂಗಳೂರು, ಜನವರಿ 19: ಮಹಿಳೆಯರು ಆಟೋ ಓಡಿಸುವುದು ತುಂಬಾನೇ ಕಡಿಮೆ ಎನ್ನುವ ಕಾಲವಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಜೀವನ ನಿರ್ವಹಣೆಗಾಗಿ ಆಟೋ ಓಡಿಸುವ ಅದೆಷ್ಟೋ ಮಹಿಳೆಯರು ಇದ್ದಾರೆ. ಕೆಲವರು ಇಷ್ಟ ಪಟ್ಟು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಬದುಕಿನ ನಿರ್ವಹಣೆಗಾಗಿ ಈ ಕಾಯಕ ಅನಿವಾರ್ಯವಾಗಿರುತ್ತದೆ. ಆದರೆ ಮಹಿಳೆ ಓಡಿಸುವ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಆಟೋ ಚಾಲಕಿಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಆಟೋ ಓಡಿಸುವ ಈ ಮಹಿಳೆ ತಿಂಗಳಿಗೆ 45 ಸಾವಿರ ರೂ ಸಂಪಾದಿಸುತ್ತಾರಂತೆ. ಈ ವೇಳೆ ಮಹಿಳಾ ಆಟೋ ಚಾಲಕಿ (woman auto driver) ಕೋರಮಂಗಲದ ನಿವಾಸಿಯಾಗಿರುವುದು ತಿಳಿದು ಬಂದಿದೆ. ಮಹಿಳಾ ಪ್ರಯಾಣಿಕರೊಬ್ಬರು ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ ಈ ಆಟೋ ಚಾಲಕಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಸ್ನೇಹಾ ಪ್ರಭು (Sneha Prabhu) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಆಟೋ ಬುಕ್ ಮಾಡಿದಾಗ ಸಿಕ್ಕ ಮಹಿಳಾ ಆಟೋ ಚಾಲಕಿ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಈ ಮಹಿಳೆಯ ಜತೆಗೆ ಮಾತು ಕಥೆ ನಡೆಸಿದ ವೇಳೆ ಸಿಕ್ಕ ಅನುಭವವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಈ ಪೋಸ್ಟ್‌ನಲ್ಲಿ ಆಟೋ ಚಾಲಕಿ ಜತೆಗೆ ಮಾತಿಗಿಳಿದಾಗ  ಏನೆಲ್ಲಾ ಹೇಳಿದಳು ಎನ್ನುವುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಮಹಿಳಾ ಚಾಲಕಿಯೂ ನಮ್ಮ ಯಾತ್ರೆಯಿಂದ ಸುಮಾರು 40 ದಿನಗಳ ತರಬೇತಿ ಪಡೆದಿದ್ದಾರೆ. ಇವರಿಗೆ ಎಲೆಕ್ಟ್ರಿಕ್ ಆಟೋ ಓಡಿಸುವುದು ಸುಲಭವಂತೆ. ಸಾಲ ಪಡೆದು ಆಟೋ ಖರೀದಿಸಿದ್ದು, ಈಗಾಗಲೇ 2.5 ಲಕ್ಷ ರೂಪಾಯಿ ಸಾಲ ತೀರಿಸಿದ್ದಾರೆ. ತಿಂಗಳಿಗೆ ಸರಿ ಸುಮಾರು 45,000 ರೂಪಾಯಿ ಸಂಪಾದನೆ ಮಾಡುತ್ತಿದ್ದು, ಅದಕ್ಕಿಂತಲೂ ಸಂಪಾದನೆಯಾಗುತ್ತದೆ ಎಂದು ಹೇಳಿರುವ ಬಗ್ಗೆ ಇಲ್ಲಿ ಬರೆದುಕೊಂಡಿದ್ದಾರೆ.

ಕೋರಮಂಗಲದಾದ್ಯಂತ 300 ಮಹಿಳಾ ಆಟೋ ಡ್ರೈವರ್‌ಗಳಿದ್ದಾರೆ. ಅವರೆಲ್ಲರೂ ಇವರ ಸಂಪರ್ಕದಲ್ಲಿದ್ದಾರಂತೆ. ಇಲ್ಲಿಯವರೆಗೆ ನನ್ನನ್ನು ಕೀಳರಿಮೆಯಿಂದ ನೋಡಿಲ್ಲ. ಯಾರೂ ತನ್ನನ್ನು ಅಸಭ್ಯವಾಗಿ ನಡೆಸಿಕೊಂಡಿಲ್ಲ, ಜನಸಾಮಾನ್ಯರು ಹೆಚ್ಚಾಗಿ ಬೆಂಬಲ ನೀಡುತ್ತಾರೆ. ನನಗೆ ನನ್ನ ಈ ಕೆಲಸದಲ್ಲಿ ತನಗೆ ಖುಷಿ ಕೊಡುವ ಸಂಗತಿ ಎಂದರೆ, ಟ್ರಾಫಿಕ್ ಸಿಗ್ನಲ್ ಬಳಿ ಯುವಕರು, ಅದರಲ್ಲೂ ಹೆಣ್ಣುಮಕ್ಕಳು ತನ್ನೊಂದಿಗೆ ಮಾತನಾಡುವುದು. ಅವರು ಹೆಮ್ಮೆಯಿಂದ, ಸಂತೋಷದಿಂದ ಕೈ ಬೀಸುತ್ತಾ, ನಗುತ್ತಾ ಮಾತನಾಡುತ್ತಾರೆ. ಪ್ರಯಾಣಿಕರು ನನಗೆ ಒಳ್ಳೆಯದಾಗಲಿ ಎಂದು ಹೇಳಿದಾಗ ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ನಾನು ತುಂಬಾ ಖುಷಿಯಾಗಿದ್ದೇನೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ಈ ಮಹಿಳಾ ಪ್ರಯಾಣಿಕರು ಬೆಂಗಳೂರಿನಲ್ಲಿ ಇಂಥ ಒಳ್ಳೊಳ್ಳೆ ವಿಚಾರಗಳು ನೋಡಲು ಸಿಗುತ್ತದೆ ಎಂದು ಈ ಪೋಸ್ಟ್ ಕೊನೆಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ

ಈ ಪೋಸ್ಟ್ ಮೂರು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ಅದೆಷ್ಟೋ ಮಹಿಳಾ ಆಟೋ ಚಾಲಕಿ ಭದ್ರ ಬದುಕನ್ನು ಕಟ್ಟಿಕೊಂಡಿದ್ದಾರೆ, ಇದನ್ನು ನೋಡುವಾಗ ಖುಷಿಯಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಈ ಕಥೆಯನ್ನು ಹಂಚಿಕೊಂಡಿದ್ದು ಅದ್ಭುತವಾಗಿದೆ. ನಮ್ಮ ಯಾತ್ರಿಯಿಂದ ತರಬೇತಿ ಪಡೆಯುವುದು ಮತ್ತು ಎಲೆಕ್ಟ್ರಿಕ್ ಆಟೋವನ್ನು ಸುಲಭವಾಗಿ ಓಡಿಸಬಹುದು ಎಂದು ಹೇಳುವುದನ್ನು ಕೇಳಿದರೆ ಖುಷಿಯಾಗುತ್ತದೆ. ಆ ರೀತಿಯಾಗಿ ತನ್ನದೇ ಆದ ಹಾದಿಯನ್ನು ನಿರ್ಮಿಸಿಕೊಳ್ಳುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬರು, ಭಾರತ ದೇಶದಲ್ಲಿ ಮಹಿಳಾ ಆಟೋ ಮತ್ತು ಕ್ಯಾಬ್ ಚಾಲಕಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಖುಷಿಯ ಸಂಗತಿ. ರಾತ್ರಿ ವೇಳೆ ಮಹಿಳೆಯರು ಹೆಚ್ಚು ಸುರಕ್ಷಿತರಾಗಿ ಪ್ರಯಾಣಿಸಲು ಸಾಧ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ – Kannada News | Gilli Reflects on Bigg Boss Journey: From Unexpected Public Love to Celebrity Endorsements

ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ, ಬಿಗ್ ಬಾಸ್ ಮನೆಯೊಳಗಿನ ಅನುಭವಗಳ ಬಗ್ಗೆ ಹಂಚಿಕೊಳ್ಳುವ ವೇಳೆ ದರ್ಶನ ಅವರ ಬಗ್ಗೆಯೂ ಅಚ್ಚರಿಯ ವಿಚಾರಗಳನ್ನು ಹೇಳಿದ್ದಾರೆ.  ಡೆವಿಲ್ ಚಿತ್ರೀಕರಣದ ವೇಳೆ ಡಿ ಬಾಸ್ ದರ್ಶನ್ ಅವರನ್ನು ಭೇಟಿ ಮಾಡಿದ್ದ ಘಟನೆಯನ್ನು ಗಿಲ್ಲಿ ಟಿವಿ9 ಕನ್ನಡ ಜತೆಗೆ ಹಂಚಿಕೊಂಡಿದ್ದಾರೆ. ‘ದರ್ಶನ್ ಅವರು ನನ್ನನ್ನು ಕರೆದು ಹಾಸ್ಯ ಪ್ರಜ್ಞೆಯನ್ನು ಮೆಚ್ಚಿ, ನೀವು ಕಾಮಿಡಿ ಎಲ್ಲಾ ಸಕ್ಕತ್ತಾಗಿ ಮಾಡ್ತೀರಾ ಎಂದು ಹೇಳಿದ್ದರು. ದರ್ಶನ ಜತೆಗೆ ಈ ಸಿನಿಮಾದಲ್ಲಿ ನಟಿಸಿರುವುದು ನನಗೆ ತುಂಬಾ ಖುಷಿ ಇದೆ. ಜತೆಗೆ ಇದು ನನ್ನ ಅದೃಷ್ಟ’ ಎಂದು ಗಿಲ್ಲಿ ಹೇಳಿದ್ದಾರೆ. ಇದರ ಜತೆಗೆ ನಟ ಶಿವರಾಜ್‌ಕುಮಾರ್ ಅವರು ಗಿಲ್ಲಿ ವಿನ್ನರ್ ಆಗಿ ಹೊರಬಂದಾಗ ಶುಭ ಹಾರೈಸಿದ್ದಾರೆ ಎಂದು ಹೇಳಿದ್ದಾರೆ. ಜನರಿಂದ ಸಿಕ್ಕ ಪ್ರೀತಿ, ಸೆಲೆಬ್ರಿಟಿಗಳ ಮೆಚ್ಚುಗೆಯನ್ನು ಗಿಲ್ಲಿ ಮರೆಯಲಾಗದ ನೆನಪು ಎಂದು ಬಣ್ಣಿಸಿದ್ದಾರೆ.

ಬಿಗ್​​ ಬಾಸ್​​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Video: ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು – Kannada News | Snake Drops Into Cooking Pot Mid Meal, Woman Keeps Her Cool

ಅಡುಗೆ ಮನೆಯಲ್ಲಿ ಒಂದು ಜಿರಳೆ ಬಂದರೆ ಹೆಣ್ಣುಮಕ್ಕಳು ಹೌಹಾರುತ್ತಾರೆ. ಅಂಥಹುದರಲ್ಲಿ ಪಾತ್ರೆಯೊಳಗೆ ಹಾವು ಬಿದ್ದರೆ ಹೇಗಾಗಬೇಡ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಹಿಳೆ ಎಂದಿನಂತೆ ಅಡುಗೆ ಮಾಡುತ್ತಿರುತ್ತಾರೆ.  ಅವರ ಮನೆಯ ಬೆಕ್ಕು ಅಡುಗೆ ಬೆಡ್ ಮೇಲೆ ಕುಳಿತು ಏನೋ ದಿಟ್ಟಿಸಿ ನೋಡುತ್ತಿರುತ್ತದೆ.  ನೋಡ ನೋಡುತ್ತಲೇ ಚಿಮಣಿಯಿಂದ ಏಕಾಏಕಿ ಹಾವು ಅಡುಗೆಯ ಪಾತ್ರೆಯೊಳಗೆ ಬಿದ್ದಿದೆ. ಕೂಡಲೇ ಮಹಿಳೆ ಒಮ್ಮೆ ಗಾಬರಿಗೊಂಡರೂ ಕೂಡಲೇ ಆ ಪಾತ್ರೆಗೆ ಮುಚ್ಚುಳವನ್ನು ಮುಚ್ಚಿದ್ದಾರೆ. ಭಯ ಮತ್ತು ಆತಂಕದ ಹೊರತಾಗಿಯೂ, ಆ ಮಹಿಳೆ ಧೈರ್ಯ ಪ್ರದರ್ಶಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ಗೆಲ್ಲಲ್ಲ ಎಂದಿದ್ದ ಜ್ಯೋತಿಷಿ ಭವಿಷ್ಯ ಸುಳ್ಳಾಯ್ತು; ಸೋಶಿಯಲ್ ಮೀಡಿಯಾದಲ್ಲಿ ಟೀಕೆ – Kannada News | Gilli Wins Bigg Boss Kannada 12: Astrologer Kini’s Failed Prediction Sparks Social Media Outcry

‘ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ಅಂತೂ ಆಗಲ್ಲ’ ಹೀಗೆಂದು ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ಡಿಸೆಂಬರ್​​​ನಲ್ಲಿ ಮಾಡಿದ್ದ ಈ ಟ್ವೀಟ್ ವೈರಲ್ ಆಗಿತ್ತು. ಆದರೆ, ಭವಿಷ್ಯ ಸುಳ್ಳಾಗಿದೆ. ಗಿಲ್ಲಿ ಅವರೇ ಬಿಗ್ ಬಾಸ್ ಗೆದ್ದು ಬೀಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿಷಿಗೆ ಕಿವಿಮಾತು ಹೇಳುವ ಕೆಲಸ ಆಗುತ್ತಿದೆ. ಗಿಲ್ಲಿ (Gilli Nata) ದೊಡ್ಡ ವೋಟಿಂಗ್ ಅಂತರದಲ್ಲೇ ಗೆದ್ದಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.

ಪ್ರಶಾಂತ್ ಕಿಣಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಅವರು ತಮ್ಮನ್ನು ಜ್ಯೋತಿಷಿ ಎಂದು ಕರೆದುಕೊಂಡಿದ್ದಾರೆ. ‘ಗಿಲ್ಲಿ ಫಿನಾಲೆ ತಲುಪುತ್ತಾರೆ’ ಎಂದು ಅವರು ಅಕ್ಟೋಬರ್​ನಲ್ಲಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. ಗಿಲ್ಲಿಯ ಮೊದಲಿನ ಶೋಗಳನ್ನು ನೋಡಿದವರಿಗೆ ಅವರು ಫಿನಾಲೆ ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಈ ವಿಷಯದಲ್ಲಿ ಭವಿಷ್ಯ ನುಡಿದಿದ್ದು ಏನೂ ವಿಶೇಷವಿರಲಿಲ್ಲ.

ಇದನ್ನೂ ಓದಿ:  ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ, ಮಹಿಳಾ ಸ್ಪರ್ಧಿ ವಿನ್ನರ್; ಭವಿಷ್ಯ ನುಡಿದ ಜ್ಯೋತಿಷಿ

ಆದರೆ, ಡಿಸೆಂಬರ್​​​ನಲ್ಲಿ ‘ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆಗಲ್ಲ, ಈ ಬಾರಿ ಗೆಲ್ಲೋದು ಮಹಿಳಾ ಸ್ಪರ್ಧಿ’ ಎಂದು ಪ್ರಶಾಂತ್ ಕಿಣಿ ಮಾಡಿದ್ದ ಟ್ವೀಟ್ ಗಮನ ಸೆಳೆದಿತ್ತು. ಈ ಟ್ವೀಟ್​​ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈಗ ಗಿಲ್ಲಿ ನಟ ಅವರು ವಿನ್ ಆಗಿದ್ದಾರೆ. ಈ ಮೂಲಕ ಪ್ರಶಾಂತ್ ಕಿಣಿ ಅವರ ಭವಿಷ್ಯ ಸುಳ್ಳಾಗಿದೆ. ‘ನಿಮ್ಮ ಭವಿಷ್ಯವನ್ನು ಸುಳ್ಳು ಮಾಡಿ ತೋರಿಸುತ್ತೇವೆ’ ಎಂದು ಗಿಲ್ಲಿ ಅಭಿಮಾನಿಗಳು ಆಗಲೇ ಚಾಲೆಂಜ್ ಮಾಡಿದ್ದರು. ಈ ಚಾಲೆಂಜ್ ಅಲ್ಲಿ ಗಿಲ್ಲಿ ಫ್ಯಾನ್ಸ್ ಗೆದ್ದಿದ್ದಾರೆ.

ಗಿಲ್ಲಿ ನಟ ಅವರು ಮೊದಲಿನಿಂದಲೂ ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಹಲವು ಫ್ಯಾನ್ ಪೇಜ್​ಗಳು ಸೃಷ್ಟಿ ಆಗಿವೆ. ಅವರು ಪ್ರಶಾಂತ್ ಕಿಣಿಯನ್ನು ಟೀಕಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾದೇಶ್ ತಂಡದ ‘ವಿಶ್ವಕಪ್ ಭವಿಷ್ಯ’ ನಿರ್ಧಾರಕ್ಕೆ ಗಡುವು ನಿಗದಿ – Kannada News | Bangladesh’s participation in T20 World Cup 2026 to be finalised by January 21

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ್ ತಂಡ ಭಾಗವಹಿಸಲಿದೆಯಾ? ಈ ಪ್ರಶ್ನೆಗೆ ಜನವರಿ 21 ರಂದು ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ವಿಶ್ವಕಪ್​​ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಐಸಿಸಿ ಗಡುವು ನೀಡಿದೆ.

ಜನವರಿ 17 ರಂದು ಢಾಕಾದಲ್ಲಿ ನಡೆದ ಸಭೆಯಲ್ಲಿ ಐಸಿಸಿ ಈ ಹೊಸ ಗಡುವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಆಡಬೇಕೆ ಬೇಡವೇ ಎಂಬುದನ್ನು ಮಾತ್ರವಲ್ಲದೆ, ಟೂರ್ನಮೆಂಟ್‌ಗಾಗಿ ಭಾರತಕ್ಕೆ ಪ್ರಯಾಣಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲು ಬಾಂಗ್ಲಾದೇಶಕ್ಕೆ ಜನವರಿ 21 ರವರೆಗೆ ಸಮಯಾವಕಾಶ ನೀಡಲಾಗಿದೆ.

ಪಂದ್ಯಗಳ ಸ್ಥಳಾಂತರವಿಲ್ಲ:

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಭಾರತದಲ್ಲಿ ಪಂದ್ಯವಾಡಲು ಹಿಂದೇಟು ಹಾಕುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಬಿಸಿಬಿ ಮನವಿ ಮಾಡಿದೆ. ಈ ಮನವಿಯ ಹೊರತಾಗಿಯೂ ಪಂದ್ಯಗಳ ಸ್ಥಳಾಂತರಿಸಲಾಗುವುದಿಲ್ಲ ಎಂದು ಐಸಿಸಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ತಿಳಿಸಿದೆ.

ಹಿಂದೇಟು ಹಾಕಲು ಕಾರಣವೇನು?

ಕೆಲ ದಿನಗಳ ಹಿಂದೆಯಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್​​ನಲ್ಲಿ ಹಿಂದೂಗಳ ಮೇಲಿನ ನಡೆಯುತ್ತಿರುವ ದೌರ್ಜನ್ಯ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹತ್ಯೆಯನ್ನು ಖಂಡಿಸಿ ಇತ್ತೀಚೆಗೆ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಈ ಪ್ರತಿಭಟನೆ ವೇಳೆ ಬಾಂಗ್ಲಾದೇಶ್ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಕೆಕೆಆರ್ ಪರ ಕಣಕ್ಕಿಳಿಯಲು ಬಿಡುವುದಿಲ್ಲ ಎಂದು ಕೆಲ ಸಂಘಟನೆಗಳು ಘೋಷಿಸಿದ್ದವು. ಹೀಗಾಗಿ ಐಪಿಎಲ್​ನಿಂದ ಬಾಂಗ್ಲಾ ವೇಗಿಯನ್ನು ಕೈ ಬಿಡುವಂತೆ ಬಿಸಿಸಿಐ ಸೂಚಿಸಿತ್ತು. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.

ಬಾಂಗ್ಲಾದೇಶ್ ಆಟಗಾರನನ್ನು ಐಪಿಎಲ್​ನಿಂದ ಕೈ ಬಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಟಿ20 ವಿಶ್ವಕಪ್​ನಲ್ಲಿ ತಮ್ಮ ತಂಡದ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಭಾರತದಲ್ಲಿ ಓರ್ವ ಆಟಗಾರನಿಗೆ ಸಂಪೂರ್ಣ ಸುರಕ್ಷತೆ ನೀಡಲು ಸಾಧ್ಯವಾಗದೇ ಇದ್ದರೆ, ಬಿಸಿಸಿಐ ಹೇಗೆ ಬಾಂಗ್ಲಾದೇಶ್ ತಂಡಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಹೀಗಾಗಿ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿದೆ. ಬಿಸಿಬಿಯ ಈ ಮನವಿಯ ಹೊರತಾಗಿಯೂ, ಭಾರತದಲ್ಲೇ ಟೂರ್ನಿ ಆಡುವಂತೆ ಸೂಚಿಸಲಾಗಿದೆ. ಅಲ್ಲದೆ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಜನವರಿ 21 ರವರೆಗೆ ಗಡುವು ನೀಡಲಾಗಿದೆ.

ಯಾರಿಗೆ ಸಿಗಲಿದೆ ಅವಕಾಶ?

ಒಂದು ವೇಳೆ ಬಾಂಗ್ಲಾದೇಶ್ ತಂಡವು ಟಿ20 ವಿಶ್ವಕಪ್​ನಿಂದ ಹಿಂದೆ ಸರಿದರೆ, ಟಿ20 ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಸ್ಕಾಟ್ಲೆಂಡ್ ತಂಡಕ್ಕೆ ಚಾನ್ಸ್ ಸಿಗಲಿದೆ. ಹೀಗಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಮುಂದಿನ ನಿಲುವೇನು ಎಂಬುದನ್ನು ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಎದುರು ನೋಡುತ್ತಿದೆ.

Source link

50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ? ವಿವರಿಸಿದ ಬಿಗ್ ಬಾಸ್ ವಿನ್ನರ್ – Kannada News | Gilli Natas Inspiring Journey: From Bengaluru Struggles to Bigg Boss Victory and Future Dreams

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟ, ತಮಗೆ ಸಿಕ್ಕ 50 ಲಕ್ಷ ರೂಪಾಯಿ ಬಹುಮಾನದ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಟಿವಿ9 ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಅವರ ನೈಜತೆಯೇ ಗೆಲುವಿಗೆ ಕಾರಣವಾಯಿತು. ಹಿಂದಿನ ಸೀಸನ್‌ಗಳ ಸ್ಪರ್ಧಿಗಳಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ತಮ್ಮದೇ ಆದ ವ್ಯಕ್ತಿತ್ವದಿಂದ ಎಲ್ಲರನ್ನು ಗಮನ ಸೆಳೆದಿದ್ದಾರೆ. ಬೆಂಗಳೂರಿಗೆ ಬಂದಾಗ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡ ಗಿಲ್ಲಿ, “ಊಟ, ಮನೆಗಾಗಿ  ಒದ್ದಾಡಿದ್ದೇನೆ. ಕೈಯಲ್ಲಿ ಹಣ ಇಲ್ಲದ ಸಮಯದಲ್ಲಿ ಬೆಂಗಳೂರಿಗೆ ಬಂದೆ, ಊಟಕ್ಕಾಗಿ ದೇವಾಲಯ, ಚೌಟ್ರಿಗಳನ್ನು ಹುಡುಕಿದೆ” ಎಂದು ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ. ಇದೀಗ 50 ಲಕ್ಷ ರೂಪಾಯಿ ಕೈಯಲ್ಲಿರುವಾಗ, ಬೆಂಗಳೂರಿನ ಜಂಜಾಟದಿಂದ ದೂರವಾಗಿ, ತಮ್ಮ ಊರಿನಲ್ಲಿ ಒಂದು ಜಮೀನು ಖರೀದಿಸಿ, ಫಾರ್ಮ್‌ಹೌಸ್ ನಿರ್ಮಿಸಿ ಕೃಷಿ ಮಾಡುವ ಕನಸು ಕಂಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ನಮ್ಮ ಹಳ್ಳಿಯಲ್ಲೇ ಉಳಿದುಕೊಳ್ಳುವ ಯೋಜನೆಯನ್ನು ಗಿಲ್ಲಿ ಹಾಕಿಕೊಂಡಿದ್ದಾರೆ.

ಬಿಗ್​​​ಬಾಸ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link