ಡಿಕೆಶಿಗೆ ನಿಂದನೆ ಆರೋಪ: ‘ಕೈ’ ಕಾರ್ಯಕರ್ತರಿಂದ ಜನಾರ್ದನ ರೆಡ್ಡಿ ಮನೆಗೆ ಮುತ್ತಿಗೆ ಯತ್ನ – Kannada News | Congress Workers Protest at Janardhan Reddys Bengaluru Residence Following Remarks Against DCM DK Shivakumar
ಬೆಂಗಳೂರು, ಜನವರಿ 18: ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಗಾಲಿ ಜನಾರ್ದನರೆಡ್ಡಿ ನಿಂದನೆ ಆರೋಪ ಹಿನ್ನೆಲೆ ಬೆಂಗಳೂರಿನಲ್ಲಿ ರೇಸ್ಕೋರ್ಸ್ ರಸ್ತೆಯಲ್ಲಿರುವ ಶಾಸಕರ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ನಡೆದಿದೆ. ಮನೋಹರ್ ನೇತೃತ್ವದಲ್ಲಿ ಜನಾರ್ದನರೆಡ್ಡಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ದಿಢೀರ್ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನಗೆ ರಕ್ಷಣೆ ನೀಡಲಾಗಿಲ್ಲ ಅಂದ್ರೆ ಡಿಸಿಎಂ ಆಗಿ ಏನು ಕಿಸಿದಿದ್ದೀಯಾ? ಎಂದು ಬಳ್ಳಾರಿ ಸಮಾವೇಶದಲ್ಲಿ ಡಿಕೆಶಿ ಬಗ್ಗೆ ಜನಾರ್ದನರೆಡ್ಡಿ ಟೀಕೆ ಮಾಡಿದ್ದರು….