ಮಳೆ ಮಧ್ಯೆ ಜೆಪಿ ನಗರ ಟು ಕೋರಮಂಗಲ ಜರ್ನಿ: ಆಟೋ ಚಾಲಕನ ಈ ಒಂದು ಮಾತು ಪ್ರಿಯಾಂಕಾ ಕಣ್ಣಾಲಿ ಒದ್ದೆ ಮಾಡಿದ್ದು ಯಾಕೆ ಗೊತ್ತಾ? – Kannada News | Heartwarming: Bengaluru Auto Driver’s Kindness Amidst Rain Wins Hearts
ಬೆಂಗಳೂರು, ಮೇ.1: ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳಿಂದ ಸುರಿದ ಮಳೆಗೆ ಭಾರೀ ಅನಾಹುತಗಳು ಆಗಿವೆ. ಇದರ ನಡುವೆ ಕೆಲವೊಂದು ಮಾನವೀಯತೆಯ ಘಟನೆಗಳು ಕೂಡ ನಡೆದಿದೆ. ಅದರಲ್ಲೂ ಆಟೋ ಚಾಲಕರು ಕೆಲವೊಂದು ಕಡೆ ಮಾನವೀಯತೆಯನ್ನು ಮೆರೆದಿದ್ದಾರೆ. ಇದೀಗ ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಆಟೋ ಚಾಲಕ ಮಾಡಿದ ಸಹಾಯದ ಬಗ್ಗೆ ಇಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಎಂಬ ಮಹಿಳೆ ಜೆಪಿ ನಗರದಿಂದ ಕೋರಮಂಗಲಕ್ಕೆ ದಿನನಿತ್ಯದ ಪ್ರಯಾಣದಲ್ಲಿ ಹೇಗೆ ದಯೆ ಮತ್ತು ಸಹಾನುಭೂತಿಯ ಭಾವನಾತ್ಮಕ ವಿಚಾರಗಳು ಇರುತ್ತದೆ ಎಂಬ ಬಗ್ಗೆ…