Category Archives: Blog

Your blog category

ಸುದೀಪ್ ಎದುರು ಮುಂದಿನ ಪ್ಲ್ಯಾನ್ ರಿವೀಲ್ ಮಾಡಿದ ಧ್ರುವಂತ್ – Kannada News | Dhruvanth Explain his plans Infront of sudeep After Bigg Boss

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಧ್ಯ ವಾರದಲ್ಲಿ ಧ್ರುವಂತ್ ಅವರು ಎಲಿಮಿನೇಟ್ ಆದರು. ಕಳೆದ ವಾರ ಕಡಿಮೆ ವೋಟ್ ಪಡೆದ ಅವರನ್ನು ಹೊರಕ್ಕೆ ಹಾಕಲಾಯಿತು. ಮನೆಯವರ ಜೊತೆ ಮಾತನಾಡಲು ಅವರಿಗೆ ಅವಕಾಶ ಸಿಗಲೇ ಇಲ್ಲ. ಈಗ ಅವರು ಕೂದಲನ್ನು ಕಟ್ ಮಾಡಿಕೊಂಡು ಹೊಸ ಸ್ಟೈಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದಕ್ಕೆ ಕಾರಣವನ್ನೂ ಅವರು ನೀಡಿದರು ಮತ್ತು ಮುಂದಿನ ಆಲೋಚನೆಯ ಬಗ್ಗೆಯೂ ಹೇಳಿದರು.

ಎಲಿನಿನೇಷನ್ ಆದ ಬಳಿಕ ಬಿಗ್ ಬಾಸ್ ವೇದಿಕೆ ಕರೆಸೋದು ಸಂಪ್ರದಾಯ. ಅರ್ಧ ವಾರದಲ್ಲಿ ಧ್ರುವಂತ್ ಹೊರಕ್ಕೆ ಹೋಗಿರುವುದರಿಂದ ಅವರಿಗೆ ಸುದೀಪ್ ಜೊತೆ ಮಾತನಾಡಲು ಅವಕಾಶ ಸಿಕ್ಕಿರಲೇ ಇಲ್ಲ. ಈ ಕಾರಣಕ್ಕೆ ಈ ವಾರ ಅವರನ್ನು ವೇದಿಕೆ ಮೇಲೆ ಕರೆಸಲಾಯಿತು ಮತ್ತು ಸುದೀಪ್ ಜೊತೆ ಮಾತನಾಡಿದರು.

‘ಇಲ್ಲಿಂದ ಹೊರ ಹೋಗುತ್ತಿದ್ದಂತೆ ಗಾಡಿನ ಚೇಸ್ ಮಾಡಿಕೊಂಡು ಬಂದರು. ಇದೊಂದು ಬ್ಯೂಟಿಫುಲ್ ಅನುಭವ. 10 ವರ್ಷದ ತಪಸ್ಸು. ನಾಲ್ಕು ತಿಂಗಳಲ್ಲಿ ಸಾಕಷ್ಟು ಸಿಕ್ಕಿತು. ಒಳಗೆ ಕಟಿಂಗ್ ಮಾಡಬೇಕು ಎಂದುಕೊಂಡಿದ್ದೆ ಆಗಿಲ್ಲ, ಹೀಗಾಗಿ ಹೊರಗೆ ಈ ಹೇರ್​ಸ್ಟೈಲ್ ಮಾಡಿಸಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಧ್ರುವಂತ್​​ಗೆ ‘ಸೀಸನ್ ಚಪ್ಪಾಳೆ’ ಕೊಟ್ಟಿದ್ದನ್ನು ಟೀಕಿಸಿದವರಿಗೆ ಕ್ಲ್ಯಾರಿಟಿ ಕೊಟ್ಟ ಸುದೀಪ್

‘ಜನರ ಪ್ರತಿಕ್ರಿಯೆ ಬಗ್ಗೆ ನನಗೆ ಸಂತೋಷ ಇದೆ. ಜೈ ಮಹಾಕಾಲ್​​ನ ಬ್ರ್ಯಾಂಡ್ ಮಾಡಿದೀರಾ. ನಾನು ಒಳ್ಳೆಯ ಫಿಲ್ಮ್​​ ಮೇಕರ್ ಆಗಬೇಕು. ಸಿನಿಮಾ ರಂಗದಲ್ಲಿ ಮತ್ತಷ್ಟು ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ನಾಲ್ಕೇ ನಾಲ್ಕು ರನ್; ಶತಕದಂಚಿನಲ್ಲಿ ಎಡವಿದ ಸ್ಮೃತಿ ಮಂಧಾನ – Kannada News | Smriti Mandhana’s 96 Powers RCB to WPL Win vs DC; Unbeaten Run Continues

ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕಿ ಸ್ನೃತಿ ಮಂಧಾನ 96 ರನ್​ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಕೇವಲ 4 ರನ್​ಗಳಿಂದ ತಮ್ಮ ಚೊಚ್ಚಲ ಡಬ್ಲ್ಯುಪಿಎಲ್ ಶತಕದಿಂದ ವಂಚಿತರಾದರು.

166 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಸ್ಮೃತಿ, ಜಾರ್ಜಿಯಾ ವಾಲ್ ಜೊತೆ ಶತಕದ ಜೊತೆಯಾಟ ಕಟ್ಟಿದರು. ಹಾಗೆಯೇ ಅರ್ಧಶತಕವನ್ನು ಸಹ ಪೂರೈಸಿದರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಸ್ಮೃತಿ ಶತಕದತ್ತ ಹೆಜ್ಜೆ ಹಾಕಿದರು. ಸ್ಮೃತಿಗೆ ಶತಕ ಬಾರಿಸುವ ಅವಕಾಶವೂ ಇತ್ತು. ಆದರೆ ಅಶ್ವನಿ ಅವರ ಬೌಲಿಂಗ್​ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿದ ಸ್ಮೃತಿ ಪಾಯಿಂಟ್​ನಲ್ಲಿ ನಿಂತಿದ್ದ ಲೂಸಿ ಹ್ಯಾಮಿಲ್ಟನ್​ಗೆ ಕ್ಯಾಚ್​ ನೀಡಿದರು.

ಲೂಸಿ ಹ್ಯಾಮಿಲ್ಟನ್ ತಮ್ಮ ಬಲಕ್ಕೆ ಜಿಗಿದು ಅತ್ಯದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್​ನ ಮೊಟ್ಟ ಮೊದಲ ಶತಕ ಬಾರಿಸುವುದನ್ನು ತಪ್ಪಿಸಿದರು. ಅಂತಿಮವಾಗಿ ಸ್ಮೃತಿ 61 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 96 ರನ್ ಬಾರಿಸಿದರು.

Source link

ಬಿಗ್​​ಬಾಸ್: ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ವೋಟ್, ಆದರೂ ಇದೆ ಕಠಿಣ ಸ್ಪರ್ಧೆ – Kannada News | Bigg Boss Kannada: Winner already got more than 37 crore votes

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಒಂದು ದಿನ ಸಹ ಬಾಕಿ ಇಲ್ಲ. ಸದ್ಯಕ್ಕೆ ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು ಆರರಲ್ಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಪ್ರೇಕ್ಷಕರು ಈಗಾಗಲೇ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾಯಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯ ವರೆಗೆ ತಮ್ಮಿಷ್ಟದ ಸ್ಪರ್ಧಿಗೆ ಮತ ಚಲಾವಣೆ ಮಾಡಬಹುದಾಗಿರುತ್ತದೆ. ಯಾವ ಸ್ಪರ್ಧಿಗೆ ಹೆಚ್ಚು ಮತಗಳು ಬಂದಿರುತ್ತವೆಯೋ ಆ ಸ್ಪರ್ಧಿಯನ್ನು ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.

ಸ್ವತಃ ಸುದೀಪ್ ಅವರು ಶನಿವಾರದ ಎಪಿಸೋಡ್​​ನಲ್ಲಿ ಈ ವಿಷಯ ಹೇಳಿದ್ದಾರೆ. ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿ ಮತಗಳು ಬಂದಿವೆ ಎಂದಿದ್ದಾರೆ. ಇದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಉದಾಹರಣೆಯನ್ನು ಸಹ ಸುದೀಪ್ ನೀಡಿದರು. ಕಳೆದ ಸೀಸನ್ ಅಂದರೆ 11ನೇ ಸೀಸನ್​​ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. ನಾಳೆಯ ವೇಳೆಗೆ ಈ ಅಂತರ ಇನ್ನೂ ಹೆಚ್ಚಾಗಲಿದೆ.

ಸುದೀಪ್ ಅವರು ಈ ಬಗ್ಗೆ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಕಳೆದ ಬಾರಿಯ ವಿನ್ನರ್​​ಗೆ ಐದು ಕೋಟಿ ಮತಗಳು ಬಂದಿದ್ದವು ಈಗ ಎಷ್ಟು ಬಂದಿರಬಹುದು ಊಹಿಸಿ ಎಂದಾಗ ಗಿಲ್ಲಿ ಸೇರಿ ಇನ್ನೂ ಕೆಲವರು 6 ಕೋಟಿ ಹೆಚ್ಚೆಂದರೆ 10 ಕೋಟಿ ಎಂದರು. ಆದರೆ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 24 ಗಂಟೆಗಿಂತಲೂ ಹೆಚ್ಚು ಸಮಯ ಇರುವಾಗಲೇ ಒಬ್ಬ ಸ್ಪರ್ಧಿಗೆ ಅಂದರೆ ಗೆಲ್ಲಲಿರುವ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಇದು ಮಾತ್ರವೇ ಅಲ್ಲದೆ ಕಳೆದ ವರ್ಷ ಹಾಗೂ ಈ ವರ್ಷ ಈ ವರೆಗೆ ಆರನೇ ಸ್ಪರ್ಧಿಗೆ ಬಂದಿರುವ ಮತಗಳ ಅಂತರವನ್ನು ಸಹ ಸುದೀಪ್ ತೋರಿಸಿದರು. 11ನೇ ಸೀಸನ್​​ನ 6ನೇ ಸ್ಪರ್ಧಿಗೆ 64 ಲಕ್ಷ ಮತಗಳು ಬಂದಿದ್ದವು. ಆದರೆ ಈ ಸೀಸನ್​​ನಲ್ಲಿ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ ಹಲವು ಗಂಟೆಗಳು ಬಾಕಿ ಇರುವಾಗಲೇ 94 ಲಕ್ಷ ಮತಗಳು ಬಂದಿವೆ. ಈ ಸಂಖ್ಯೆ ಒಂದು ಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಬಿಗ್​​ಬಾಸ್​​ನಿಂದ ಹೊರಬಂದೊಡನೆ ಹೇರ್​​ಸ್ಟೈಲ್ ಬದಲಿಸಿದ ಧ್ರುವಂತ್

ಮತ್ತೊಂದು ವಿಷಯವನ್ನು ಸಹ ಸುದೀಪ್ ಅವರು ಸ್ಪರ್ಧಿಗಳಿಗೆ ಹೇಳಿದರು. ಗೆಲ್ಲಲಿರುವ ಸ್ಪರ್ಧಿಗೆ ಈಗಾಗಲೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ ಆದರೂ ಸಹ ಮೊದಲ ಸ್ಪರ್ಧಿಗೂ ಎರಡನೇ ಸ್ಪರ್ಧಿಗೂ ಮತಗಳ ಅಂತರ ಬಹಳ ಕಡಿಮೆ ಇದೆ ಎಂದಿದ್ದಾರೆ. ಆ ಮೂಲಕ ಸ್ಪರ್ಧೆ ಇನ್ನೂ ಕಠಿಣವಾಗಿದೆ ಎಂದಿದ್ದಾರೆ. ಮಾತ್ರವಲ್ಲದೆ, ನೀವು (ಸ್ಪರ್ಧಿಗಳು) ಏನು ಪಡೆದುಕೊಂಡಿದ್ದೀರೆಂದರೆ ಎಂಬುದಕ್ಕೆ ಇದು ಸಾಕ್ಷಿ. ಮೊದಲೆಲ್ಲ ಜನ ನೋಡುತ್ತಿದ್ದರು ಆದರೆ ಮತ ಹಾಕುವವರ ಸಂಖ್ಯೆ ಕಡಿಮೆ ಇರುತ್ತಿತ್ತು, ಆದರೆ ಈಗ ಜನರ ಇನ್ವಾಲ್ವ್​​ಮೆಂಟ್ ಹೆಚ್ಚಾಗಿದೆ. ಪ್ರತಿಯೊಬ್ಬರೂ ವೋಟ್ ಹಾಕುತ್ತಿದ್ದಾರೆ. ಬಿಗ್​​ಬಾಸ್ ನಮ್ಮ ಜೀವನದ ಭಾಗ ಅಂದುಕೊಂಡಿದ್ದಾರೆ. ಈ ಬಿಗ್​​ಬಾಸ್ ವೇದಿಕೆ ಸಹ ದಿನೇ ದಿನೇ ದೊಡ್ಡದಾಗುತ್ತಿದೆ. ಭಾಗವಹಿಸಿದವರನ್ನು ಎಲ್ಲಿಗೋ ಕರೆದೊಯ್ಯುತ್ತಿದೆ, ಹಲವು ಅವಕಾಶಗಳನ್ನು ನೀಡುತ್ತಿದೆ. ಈ ರೀತಿಯ ಅವಕಾಶ ಬೇರೆ ಯಾವ ರಿಯಾಲಿಟಿ ಶೋನಲ್ಲೂ ಸಿಗುವುದಿಲ್ಲ ಎಂದರು ಸುದೀಪ್.

ಗಿಲ್ಲಿ, ಅಶ್ವಿನಿ, ರಕ್ಷಿತಾ, ಧನುಶ್, ಕಾವ್ಯಾ, ರಘು ಅವರುಗಳ ಅಭಿಮಾನಿಗಳು, ಗೆಳೆಯರುಗಳು ಈಗಾಗಲೇ ಸ್ಪರ್ಧಿಗಳ ಬಗ್ಗೆ ಅಭಿಯಾನ ಆರಂಭಿಸಿದ್ದು ಮತಗಳನ್ನು ಹಾಕಿಸುತ್ತಿದ್ದಾರೆ. ಮತ ಹಾಕುವಂತೆ ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿಗಾಗಿ ಹಲವೆಡೆ ಅಭಿಮಾನಿಗಳು ಮತ ಅಭಿಯಾನ ಮಾಡುತ್ತಿರುವುದು ಇತ್ತೀಚೆಗೆ ಸಖತ್ ಸುದ್ದಿ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:58 pm, Sat, 17 January 26

Source link

ಅಯ್ಯೋ ನಲ್ಲಿ ಮೂಳೆ ಸಹವಾಸ ಸಾಕಪ್ಪ ಎಂದ ಗಿಲ್ಲಿ – Kannada News | Bigg Boss Kannada: Gilli says no to meat

ಬಿಗ್​​ಬಾಸ್ ನಲ್ಲಿ (Bigg Boss) ಈ ವಾರ ಫಿನಾಲೆ ವಾರ ಆಗಿದ್ದ ಕಾರಣ ಯಾವುದೇ ಟಾಸ್ಕ್​​ಗಳು ಇರಲಿಲ್ಲ ಉಳಿದ ಆರು ಮಂದಿ ಸ್ಪರ್ಧಿಗಳು ಆರಾಮವಾಗಿ ಮಾತನಾಡುತ್ತಾ ಎಂಜಾಯ್ ಮಾಡುತ್ತಾ ಕಾಲ ಕಳೆದರು. ಈ ವಾರ ಮನೆಯಲ್ಲಿ ಯಾವ ಜಗಳವೂ ಸಹ ಇರಲಿಲ್ಲ. ಆದರೆ ವಾರದ ಆರಂಭದಲ್ಲಿ ಬಿಗ್​​ಬಾಸ್, ಸ್ಪರ್ಧಿಗಳಿಗೆ ಅವರ ಆಸೆ ಕೇಳಿದ್ದರು. ಆಗ ಗಿಲ್ಲಿ, ತಮಗೆ ನಲ್ಲಿ ಮೂಳೆ ತಿನ್ನುವ ಆಸೆ ಆಗಿದೆ ಎಂದಿದ್ದರು. ನಲ್ಲಿ ಮೂಳೆ ತಿಂದು ನಿದ್ದೆ ಮಾಡಬೇಕು ಆಗ ನಾಯಿಗಳು ಬೊಗಳಬಾರದು ಎಂದಿದ್ದರು. ಅದರಂತೆ ಬಿಗ್​​ಬಾಸ್ ಸಹ ನಲ್ಲಿ ಮೂಳೆ ಕಳಿಸಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ಗಿಲ್ಲಿಗೆ ನಲ್ಲಿ ಮೂಳೆ ಮೇಲೆ ಆಸೆಯೇ ಹೊರಟು ಹೋಗಿದೆ.

ನಲ್ಲಿ ಮೂಳೆ ಕಳಿಸಿದಾಗ ಗಿಲ್ಲಿ ಕಳಿಸಿದ್ದ ಅಷ್ಟೂ ನಲ್ಲಿ ಮೂಳೆಯನ್ನು ಒಬ್ಬರೇ ತಿಂದು ಬಿಟ್ಟರು. ಇತರೆ ಸ್ಪರ್ಧಿಗಳು ಎಚ್ಚರಿಕೆ ನೀಡಿದರೂ ಸಹ ಗಿಲ್ಲಿ ಲೆಕ್ಕ ಮಾಡದೆ ಒಂದೇ ಸಮನೆ ತಿಂದು ಮುಗಿಸಿದರು. ಇದರಿಂದಾಗಿ ಅವರಿಗೆ ಬೇಧಿ ಶುರುವಾಗಿತ್ತು. ಅದರಿಂದ ಬಹಳ ಕಷ್ಟಪಟ್ಟರು. ಎದೆ ಉರಿ ಪ್ರಾರಂಭ ಆಗಿತ್ತು.

ಇಂದು (ಶನಿವಾರ) ಸುದೀಪ್ ಅವರು ಗಿಲ್ಲಿಗೆ ಈ ವಿಷಯವಾಗಿ ಕೇಳಿದ್ದಕ್ಕೆ, ಅಯ್ಯೋ ನಲ್ಲಿ ಮೂಳೆ ಸಹವಾಸವೇ ಸಾಕು ಎನಿಸಿಬಿಟ್ಟಿದೆ ಎಂದರು. ಮತ್ತೊಮ್ಮೆ ನಲ್ಲಿ ಮೂಳೆ ಕಳಿಸಿಕೊಡುತ್ತೇನೆ ಎಂದರೂ ಸಹ ಗಿಲ್ಲಿ, ಬೇಡವೇ ಬೇಡ ಎಂದು ಗೋಗರೆದರು. ನಾನು ಮತ್ತೆ ನಲ್ಲಿ ಮೂಳೆ ತಿನ್ನಲ್ಲ, ಬೇಕಿದ್ದರೆ ಊಟ ಬಿಡುತ್ತೀನಿ ನಲ್ಲಿ ಮೂಳೆ ತಿನ್ನಲ್ಲ ಎಂದು ಗೋಗರೆದರು ಗಿಲ್ಲಿ.

ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

ಅಸಲಿಗೆ ಸುದೀಪ್, ಅದಕ್ಕೂ ಮುಂಚೆ ಮನೆಯವರಿಗೆಲ್ಲ ಈ ವಾರ ಪೂರ್ತಿ ಗಿಲ್ಲಿಯೇ ಅಡುಗೆ ಮಾಡಬೇಕು ಎಂದಿದ್ದರು. ಅದಕ್ಕೆ ಮನೆ ಸದಸ್ಯರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಗಿಲ್ಲಿ ಮಾತ್ರ ಉತ್ಸಾಹ ಪ್ರದರ್ಶಿಸಿದ್ದರು. ಬಳಿಕ, ಗಿಲ್ಲಿಗೆ 30 ನಲ್ಲಿ ಮೂಳೆ ಕಳಿಸುತ್ತೇನೆ ಅಷ್ಟನ್ನೂ ತಿನ್ನಬೇಕು ಎಂದಾಗ ಮಾತ್ರ ಸಾಧ್ಯವೇ ಇಲ್ಲ ಎಂದರು. ಬೇಕಿದ್ದರೆ ಅಡುಗೆ ಮಾಡುವುದು ಬಿಡುತ್ತೀನಿ, ಆದರೆ ನಲ್ಲಿ ಮೂಳೆ ಮಾತ್ರ ಕಳಿಸಬೇಡಿ ಎಂದು ಗೋಗರೆದರು ಗಿಲ್ಲಿ. ಅತಿಯಾದರೆ ಅಮೃತವೂ ವಿಷ ಎಂಬುದಕ್ಕೆ ಗಿಲ್ಲಿಯ ನಲ್ಲಿ ಪ್ರಸಂಗ ಒಂದೊಳ್ಳೆ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಸತತ 4ನೇ ಗೆಲುವು; ಸ್ಮೃತಿ ಸುನಾಮಿಗೆ ದಿವಾಳಿಯಾದ ದೆಹಲಿ – Kannada News | RCB Unbeaten Streak: Smriti Mandhana Leads 8 Wicket Win vs Delhi Capitals, Semis Secured

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್​ಗಳಿಂದ ಗೆದ್ದುಕೊಂಡು ಈ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಈ ಆವೃತ್ತಿಯಲ್ಲಿ ಆರ್​ಸಿಬಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸೆಮಿಫೈನಲ್ ಸುತ್ತಿಗೆ ತನ್ನ ಸ್ಥಾನವನ್ನು ಭಾಗಶಃ ಖಚಿತಪಡಿಸಿಕೊಂಡಿದೆ. ಇದು ಮಾತ್ರವಲ್ಲದೆ ಮೊದಲ ನಾಲ್ಕು ಪಂದ್ಯಗಳನ್ನು ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ಇತಿಹಾಸವನ್ನು ನಿರ್ಮಿಸಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 166 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಸ್ಮೃತಿ ಮಂಧಾನ ಸಿಡಿಸಿದ 96 ರನ್​ಗಳಿಂದ ಸುಲಭ ಜಯ ದಾಖಲಿಸಿತು.

ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಎರಡು ಓವರ್​ಗಳಲ್ಲಿ ಅಂದರೆ ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್​ಗಳು ಪತನಗೊಂಡವು. ಡೆಲ್ಲಿಗೆ ಆರಂಭಿಕ ಆಘಾತ ನೀಡಿದ ಲಾರೆನ್ ಬೆಲ್ ಮೊದಲ ಓವರ್​ನಲ್ಲೇ ಲಿಜೆಲ್ಲೆ ಲೀ ಹಾಗೂ ಲಾರಾ ವೊಲ್ವಾರ್ಡ್ಟ್ ಅವರನ್ನು ಪೆವಿಲಿಯನ್‌ಗಟ್ಟಿದರು. ನಂತರದ ಓವರ್​ನಲ್ಲಿ ಸಯಾಲಿ ಸತ್ಘರೆ ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್ ಹಾಗೂ ಮರಿಝನ್ನೆ ಕಪ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು.

ಹೀಗಾಗಿ ಡೆಲ್ಲಿ ತಂಡ ಕೇವಲ 10 ರನ್​ಗಳಿಗೆ ತನ್ನ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಆದಾಗ್ಯೂ ಸತತ ವಿಕೆಟ್​ಗಳ ಪತನದ ನಡುವೆಯೂ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ 62 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಲೂಸಿ ಹ್ಯಾಮಿಲ್ಟನ್ ಕೂಡ ಕೆಳಕ್ರಮಾಂಕದಲ್ಲಿ 36 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಆರ್‌ಸಿಬಿ ಪರ ಲಾರೆನ್ ಬೆಲ್ ಮತ್ತು ಸಯಾಲಿ ಸತ್‌ಘರೆ ತಲಾ ಮೂರು ವಿಕೆಟ್ ಪಡೆದರೆ, ಪ್ರೇಮಾ ರಾವತ್ ಎರಡು ವಿಕೆಟ್ ಪಡೆದರು. ಇವರ ಜೊತೆಗೆ ನಾಡಿನ್ ಡಿ ಕ್ಲರ್ಕ್ ಒಂದು ವಿಕೆಟ್ ಪಡೆದರು.

Published On – 11:01 pm, Sat, 17 January 26

Source link

IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ! – Kannada News | IndiGo Airlines fined Rs 22 crore by DGCA for flight disruptions in December 2025

ನವದೆಹಲಿ, ಜನವರಿ 17: 2025ರ ಡಿಸೆಂಬರ್​ನಲ್ಲಿ ಇಂಡಿಗೋ (IndiGo) ಪ್ರಯಾಣಿಕರಿಗೆ ಭಾರೀ ತೊಂದರೆ ಉಂಟಾಗಿತ್ತು. ಡಿಸೆಂಬರ್ 3ರಿಂದ 5ರವರೆಗೆ ಇಂಡಿಗೋ ಸಾವಿರಾರು ವಿಮಾನಗಳ ಹಾರಾಟವನ್ನು ರದ್ದುಮಾಡಿತ್ತು. ವಿಮಾನಗಳ ರದ್ದತಿ ಮತ್ತು ವಿಳಂಬಗಳಿಗೆ ಪ್ರತಿಕ್ರಿಯೆಯಾಗಿ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ಸಂಸ್ಥೆಗೆ 22.2 ಕೋಟಿ ರೂ. ದಂಡ ವಿಧಿಸಿದೆ. ಇದರ ಜೊತೆಗೆ ಇಂಡಿಗೋ ವಿಮಾನಯಾನ ಸಂಸ್ಥೆಗೆ 50 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಿದೆ.

ಡಿಸೆಂಬರ್ ಮೊದಲ ವಾರ ಇಂಡಿಗೋ 2,507 ವಿಮಾನಗಳನ್ನು ರದ್ದುಗೊಳಿಸಿತ್ತು. ಇಂಡಿಗೋದ 1,852 ವಿಮಾನಗಳ ಹಾರಾಟ ವಿಳಂಬಗೊಂಡಿತ್ತು. ಇದರಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಇದರಿಂದ ಸಾವಿರಾರು ಪ್ರಯಾಣಿಕರು ಮದುವೆ, ತಿಥಿ, ನಾಮಕರಣ ಮುಂತಾದ ತಮ್ಮ ಜೀವನದ ಅಮೂಲ್ಯ ಕ್ಷಣಗಳಿಂದ ವಂಚಿತರಾದರು. ಅನೇಕ ಜನರು ಆಹಾರ, ನಿದ್ರೆಯಿಲ್ಲದೆ ಅನಾರೋಗ್ಯಕ್ಕೂ ತುತ್ತಾದರು. ಈ ಸಮಸ್ಯೆಗಳನ್ನು ಪರಿಹರಿಸಲು ಇಂಡಿಗೋ ಸಂಸ್ಥೆ ವಿಫಲವಾದ ಕಾರಣ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರ ಕೂಡ ಇಂಡಿಗೋ ಮುಖ್ಯಸ್ಥರ ಜೊತೆ ಸಭೆ ನಡೆಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಅದರಂತೆ ಇದೀಗ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ವಿಮಾನ ರದ್ದತಿಯಿಂದ ತೀವ್ರ ತೊಂದರೆಗೊಳಗಾದ ಪ್ರಯಾಣಿಕರಿಗೆ ಇಂಡಿಗೋದಿಂದ 10,000 ರೂ. ಪ್ರಯಾಣ ವೋಚರ್‌

“ಡಿಸೆಂಬರ್ 2025ರ ಅಡಚಣೆಗಳ ಸಂದರ್ಭದಲ್ಲಿ ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಕಾರ್ಯಾಚರಣೆಯ ಲೋಪಗಳಿಗೆ ನಾವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ” ಎಂದು ಇಂಡಿಗೋ ವಕ್ತಾರರು ಹೇಳಿದ್ದಾರೆ. ಇದರ ಜೊತೆಗೆ ವಿಮಾನಗಳು ರದ್ದಾದ ಅಥವಾ 3 ಗಂಟೆಗಳಿಗಿಂತ ಹೆಚ್ಚು ವಿಳಂಬವಾದ ಪ್ರಯಾಣಿಕರಿಗೆ 10,000 ರೂ. ವೋಚರ್ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸ್ಸಾಂನಲ್ಲಿ ಪ್ರಧಾನಿ ಮೋದಿ ಮುಂದೆ 10 ಸಾವಿರ ಕಲಾವಿದರಿಂದ ಬಾಗುರುಂಬಾ ನೃತ್ಯ ಪ್ರದರ್ಶನ – Kannada News | PM Modi Witnessed 10000 Bodo Dancers Performing Bagurumba in Guwahati

ಗುವಾಹಟಿ, ಜನವರಿ 17: ಅಸ್ಸಾಂನಲ್ಲಿ ಬೋಡೋ ಸಮುದಾಯದ ಸಾಂಪ್ರದಾಯಿಕ ಬಾಗುರುಂಬಾ ನೃತ್ಯವು ಜಾಗತಿಕವಾದ ಇತಿಹಾಸ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಎದುರು ಇಂದು ರಾತ್ರಿ ಸುಮಾರು 10,000 ಕಲಾವಿದರು ಬಾಗುರುಂಬಾ ನೃತ್ಯ ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ಆಗಮಿಸಿದ್ದಾರೆ. ಗುವಾಹಟಿಯ ಸರೋಷ್‌ಜೈತ್‌ನಲ್ಲಿ ನಡೆದ ಐತಿಹಾಸಿಕ ಬಾಗ್ರುಂಬಾ ನೃತ್ಯವನ್ನು ಇಡೀ ಜಗತ್ತು ವೀಕ್ಷಿಸಿತು. ಪ್ರಧಾನಿ ಮೋದಿ ಮಾತ್ರವಲ್ಲದೆ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇತರ ನಾಯಕರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಗುವಾಹಟಿಯ ಸರೋಸ್ಜೈ ಪ್ರದೇಶದ ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. 23 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 8,000 ನೃತ್ಯಗಾರರು ಸೇರಿದಂತೆ 10,000 ಕ್ಕೂ ಹೆಚ್ಚು ಕಲಾವಿದರು ಈ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜೀವ್‌ಗೌಡಗೆ ಜಾಮೀನು ನೀಡಲು ಕೋರ್ಟ್‌ ನಕಾರ: ‘ಕೈ’ ಮುಖಂಡನ ಬಂಧನಕ್ಕೆ ಅಡ್ಡಿ ಆಗಿದ್ದಾರಾ ಸಚಿವ? – Kannada News | Rajeev Gowda Absconds After Shidlaghatta Threat Case: Bail Rejected, Land Grab Allegations Surface

ಚಿಕ್ಕಬಳ್ಳಾಪುರ, ಜನವರಿ 17: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಎಸ್ಕೇಪ್ ಆಗಿರುವ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ (Rajeev Gowda) ಮೂರು ದಿನವಾದರೂ ಪತ್ತೆ ಆಗಿಲ್ಲ. ಮೊನ್ನೆ ವೀರಾವೇಷದ ಮಾತನಾಡಿದ್ದ ರಾಜೀವ್‌ಗೌಡ, ಕೇಸ್‌ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಇದರ ನಡುವೆ ನಿರೀಕ್ಷಣಾ ಜಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು (Bail) ನೀಡಲು ನಿರಾಕರಿಸಿರುವ ಕೋರ್ಟ್‌, ವಿಚಾರಣೆಯನ್ನ ಜನವರಿ 22ಕ್ಕೆ ಮುಂದೂಡಿದೆ.

ರಾಜೀವ್‌ಗೌಡ ಪತ್ತೆಗಾಗಿ ಸಿಸಿಟಿವಿ ಮೊರೆ ಹೋದ ಖಾಕಿ!

ರಾಜೀವ್‌ಗೌಡರ ಬಂಧನಕ್ಕೆ ಮೂರು ತಂಡ ಮಾಡಿಕೊಂಡಿರುವ ಪೊಲೀಸರು, ಬೆಂಗಳೂರಿನಲ್ಲಿ ಸಿಸಿಟಿವಿ ಆಧರಿಸಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ರಾಜೀವ್‌ಗೌಡ ಫೋನ್‌ ಸ್ವೀಚ್ ಆಫ್​ ಆಗಿದ್ದು, ಅದೇ ಏರಿಯಾದಲ್ಲೇ ಶೋಧ ಆಗುತ್ತಿದೆ. ರಾಜೀವ್‌ಗೌಡರನ್ನ ಬಂಧಿಸದಂತೆ ರಾಜ್ಯದ ಪ್ರಭಾವಿ ಮಂತ್ರಿ ಪೊಲೀಸರ ಮೇಲೆ ಒತ್ತಡ ಹಾಕಿರುವ ಆರೋಪ ಕೇಳಿ ಬಂದಿದೆ.

15 ಕೋಟಿ ರೂ ಮೌಲ್ಯದ ಭೂಮಿ ಕಬಳಿಸಿದ್ರಾ ರಾಜೀವ್‌?

ಧಮ್ಕಿ ಕೇಸ್‌ನಿಂದ ರಾಜೀವ್‌ಗೌಡರ ಅಸಲಿತ್ತು ಬಯಲಾಗುತ್ತಿದ್ದಂತೆ ಒಂದೊಂದೇ ಅಕ್ರಮಗಳು ಕೂಡ ಹೊರಬರುತ್ತಿವೆ. ಇವರ ವಿರುದ್ಧ 15 ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿರುವ 15 ಕೋಟಿ ರೂ ಮೌಲ್ಯದ 1 ಎಕರೆ 18 ಗುಂಟೆ ಭೂಮಿ ರಾಜೀವ್ ಗೌಡ ಕಬಳಿಸಿದ್ದಾರೆ ಅಂತಾ ಆಶಾಲತಾ ಅನ್ನೋರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ

ಇನ್ನು ಮಂಡೂರಿನ ಸುತ್ತಮುತ್ತ ಜನರಿಗೆ ಇವರು ಮಾಡಿರುವ ವಂಚನೆ ಬಗ್ಗೆ ಭಿತ್ತಿಪತ್ರ ಮಾಡಲಾಗಿದ್ದು, ಶಿಡ್ಲಘಟ್ಟದಲ್ಲಿ ವಿತರಿಸಲಾಗ್ತಿದೆ. ಇದರ ನಡುವೆ ಹಲವು ಸಂಘಟನೆಗಳು ಪೌರಾಯುಕ್ತರ ಕಚೇರಿಗೆ ತೆರಳಿದ ಅಮೃತಾರಿಗೆ ಧೈರ್ಯ ತುಂಬುವ ಕೆಲಸ ಮಾಡಿವೆ. ರೇಷ್ಮೆ ಸೀರೆ, ಬಳೆ ಹರಿಸಿನ ಕುಂಕಮ ಸೇರಿದಂತೆ ಬಾಗಿನ ಕೊಟ್ಟು ಬೆಂಬಲಕ್ಕೆ ನಿಂತಿದ್ದಾರೆ. ಜನರ ಪ್ರೀತಿಗೆ ಅಮೃತಾ ಭಾವುಕರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಅಸ್ಸಾಂನ ಸಾಂಪ್ರದಾಯಿಕ ಸೆರ್ಜಾ ವಾದ್ಯ ನುಡಿಸಿದ ಪ್ರಧಾನಿ ಮೋದಿ – Kannada News | PM Narendra Modi tries his hand at the Serja a traditional musical instrument of the Bodo community

ಗುವಾಹಟಿ, ಜನವರಿ 17: ಅಸ್ಸಾಂನ ಗುವಾಹಟಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಸಂಸ್ಕೃತಿಗೆ ಜಾಗತಿಕ ಮನ್ನಣೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಈ ವೇಳೆ ಅಸ್ಸಾಂ ಜನರಿಗೆ ಪ್ರಧಾನಿ ಮೋದಿಗೆ (PM Modi in Guwahati) ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಸ್ಸಾಂನ ಬಗುರುಂಬಾ ದ್ವೌ 2026 ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಗೆ ಬೋಡೋ ಸಮುದಾಯದ ಸಾಂಪ್ರದಾಯಿಕ ಸಂಗೀತ ವಾದ್ಯವಾದ ಸೆರ್ಜಾವನ್ನು ನೀಡಲಾಯಿತು. ಈ ವೇಳೆ ಅದನ್ನು ಹೇಗೆ ನುಡಿಸುವುದೆಂದು ಕೇಳಿ ತಿಳಿದುಕೊಂಡ ಪ್ರಧಾನಿ ಮೋದಿ ಆ ವಾದ್ಯವನ್ನು ನುಡಿಸಿದರು. ಇದಕ್ಕೆ ಸಾವಿರಾರು ಕಲಾವಿದರಿಂದ ಭಾರೀ ಚಪ್ಪಾಳೆ ದೊರಕಿತು.

“2020ರ ಬೋರೋ ಶಾಂತಿ ಒಪ್ಪಂದವು ಶಾಶ್ವತ ಶಾಂತಿಯನ್ನು ತರುವಲ್ಲಿ ಸಹಾಯ ಮಾಡಿದೆ ಮತ್ತು ಅಸ್ಸಾಂನಲ್ಲಿ ಸಂಗೀತ ವಾದ್ಯಗಳ ಶಬ್ದವನ್ನು ಗುಂಡಿನ ಶಬ್ದವು ಬದಲಾಯಿಸಿದೆ. ನಾನು ಅಸ್ಸಾಮಿ ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿದರೆ ಅಥವಾ ನನ್ನೊಂದಿಗೆ ಗಮೋಚಾ ಹೊಂದಿದ್ದರೆ, ಕಾಂಗ್ರೆಸ್ ನನ್ನನ್ನು ಗೇಲಿ ಮಾಡುತ್ತದೆ. ಅಸ್ಸಾಂಗೆ ಆಗಾಗ ಭೇಟಿ ನೀಡುವ, ರಾಜ್ಯದ ಅಭಿವೃದ್ಧಿಗೆ ಬದ್ಧತೆಯನ್ನು ತೋರಿಸುವ ಏಕೈಕ ಪ್ರಧಾನಿ ನಾನು ಎಂದು ಪ್ರಧಾನಿ ಮೋದಿ ಹೇಳಿದರು.

“ನಾನು ಅಸ್ಸಾಂಗೆ ಭೇಟಿ ನೀಡಿದಷ್ಟು ಬೇರೆ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ. ಅಸ್ಸಾಂನ ಸಂಸ್ಕೃತಿಯನ್ನು ಜಾಗತಿಕವಾಗಿ ಗುರುತಿಸಬೇಕೆಂದು ನಾನು ಬಯಸುತ್ತೇನೆ ಮತ್ತು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದ ಮೋದಿ ಬಾಗೂರುಂಬಾ ನೃತ್ಯದ ಅಪಾರ ಸಾಂಸ್ಕೃತಿಕ ಮಹತ್ವವನ್ನು ಶ್ಲಾಘಿಸಿದರು. ಈ ಪ್ರದರ್ಶನವು ಬೋಡೋ ಸಮುದಾಯದ ಸಂಪ್ರದಾಯಗಳು, ಮೌಲ್ಯಗಳು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ: ಸಿಎಂ, ಡಿಸಿಎಂ ಭಾಗಿ – Kannada News | Veteran congress leader Dr Bhimanna Khandre funeral with full government honours: CM, DCM attend

ಬೀದರ್, ಜನವರಿ 17: ಜಿಲ್ಲೆ ಭಾಲ್ಕಿಯ ಚಿಕಲ್ ಚೆಂದ‌ ರಸ್ತೆಯ ಜಮೀನಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ಭೀಮಣ್ಣ ಖಂಡ್ರೆ ಅವರ ಅಂತ್ಯಸಂಸ್ಕಾರ ನೆರವೇರಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ತಂದೆ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮಾಡಲಾಗುತ್ತಿದ್ದು, ಪಂಚಭೂತಗಳಲ್ಲಿ ಲೀನರಾದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಉನ್ನತ ರಾಜಕೀಯ ಗಣ್ಯರು, ಮುಖಂಡರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link