Headlines

WPL 2026: ಆರ್​ಸಿಬಿ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ; 7 ಎಸೆತಗಳಲ್ಲಿ 4 ವಿಕೆಟ್ ಪತನ – Kannada News | RCB vs DC WPL 2026: Delhi Capitals Suffer Early Collapse, Lose 4 Wickets

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಡೆಲ್ಲಿ ತಂಡ ಮೊದಲ ಎರಡು ಓವರ್​ಗಳಲ್ಲೇ ಆಘಾತ ಎದುರಿಸಿದೆ. ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್​ಗಳು ಪತನಗೊಂಡಿವೆ. ಅದರಲ್ಲೂ 7 ಎಸೆತಗಳಲ್ಲಿ ಡೆಲ್ಲಿ ತಂಡದ 4 ವಿಕೆಟ್​ಗಳು ಉದುರಿದ್ದು, ಆರ್​ಸಿಬಿಯ ಮಾರಕ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು. ಮೊದಲ ಓವರ್​ನಲ್ಲಿ 2 ವಿಕೆಟ್ ಡೆಲ್ಲಿ ಪರ…

Read More

ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ – Kannada News | India slapped 30 percent tariff on US pulse crops US Senators Urges Trump To talk with PM Modi

ನವದೆಹಲಿ, ಜನವರಿ 17: ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30ರಷ್ಟು ಸುಂಕವನ್ನು ವಿಧಿಸಿದೆ. ಹೀಗಾಗಿ, ಉತ್ತರ ಡಕೋಟಾ ಮತ್ತು ಮೊಂಟಾನಾ ಸೆನೆಟರ್‌ಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬಳಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಅಮೆರಿಕದ ರೈತರಿಗೆ ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಭಾರತದೊಂದಿಗೆ ವ್ಯಾಪಾರ ಮಾತುಕತೆಗಳು ಮುಂದುವರಿದಂತೆ ಅಮೆರಿಕದ ಎರಡು ರಾಜ್ಯಗಳ ಶಾಸಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈ ಸಲಹೆ ನೀಡಿದ್ದಾರೆ. ಅಮೆರಿಕದ ದ್ವಿದಳ ಧಾನ್ಯಗಳ ಆಮದಿನ…

Read More

ಡಾಲಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜು, ‘ಜೆಸಿ’ ಇದು ಜೈಲಿನ ಕರಾಳ ಕತೆ – Kannada News | Daali Pictures JC Movie trailer released, Movie release date announce

ಡಾಲಿ ಧನಂಜಯ್ (Daali Dhananjay) ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದೆ. ಡಾಲಿ ಅವರು ಪರ ಭಾಷೆ ಸಿನಿಮಾಗಳಲ್ಲಿ ಅಥವಾ ತಮ್ಮ ಗೆಳೆಯರ ಸಿನಿಮಾಗಳ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿ ಅವರ ಸಿನಿಮಾ ಬರದೇ ಇದ್ದರೂ ಸಹ ಡಾಲಿ ಅವರ ನಿರ್ಮಾಣದ ಸಿನಿಮಾಗಳು ಮಾತ್ರ ಒಂದರ ಹಿಂದೊಂದು ಬಿಡುಗಡೆ ಆಗಲು ಸಜ್ಜಾಗುತ್ತಿವೆ. ಕೆಲ ದಿನಗಳ ಹಿಂದಷ್ಟೆ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಹೆಗ್ಗಣ ಮುದ್ದು’ ಸಿನಿಮಾ ಘೋಷಿಸಲಾಗಿತ್ತು. ಇದೀಗ ಡಾಲಿ ಪಿಕ್ಚರ್ಸ್…

Read More

WPL 2026: ಟಾಸ್ ಗೆದ್ದ ಆರ್​ಸಿಬಿ ತಂಡದಲ್ಲಿ ಬರೋಬ್ಬರಿ 3 ಬದಲಾವಣೆ – Kannada News | WPL 2026: RCB vs DC at DY Patil Stadium – Toss and playing 11 details

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ನ (Women’s Premier League) ನಾಲ್ಕನೇ ಆವೃತ್ತಿಯ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಬರುತ್ತಿರುವ ಕಾರಣ ಈ ಪಂದ್ಯದಲ್ಲಿ ಯಾರಿಗೆ ಗೆಲುವು ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಒಂದೆಡೆ ಆರ್​ಸಿಬಿ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇತ್ತ ಡೆಲ್ಲಿ ತಂಡ…

Read More

ಒಟಿಟಿಗೆ ಬರುತ್ತಿದೆ ಸುದೀಪ್​ ನಟನೆಯ ‘ಮಾರ್ಕ್’: ಎಲ್ಲಿ? ಯಾವಾಗ ನೋಡಬಹುದು? – Kannada News | Sudeep starrer Mark Kannada movie to stream on Jio Hotstar on January 23

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಡಿಸೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ ಸಿನಿಮಾ. ಈಗಾಗಲೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಘೋಷಣೆ ಮಾಡಲಾಗಿದೆ? ಮಾರ್ಕ್ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಮತ್ತು ಎಂದಿನಿಂದ ಪ್ರದರ್ಶನ ಆರಂಭಿಸಲಿದೆ? ಇಲ್ಲಿದೆ ಮಾಹಿತಿ… ಸುದೀಪ್ ನಟನೆಯ ‘ಮಾರ್ಕ್’…

Read More

ಬಿಗ್​​ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು – Kannada News | Bigg Boss Kannada 12: Sudeep gave Voting count

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಾಳೆ (ಜನವರಿ 18) ನಡೆಯಲಿದೆ. ಇಂದು (ಶನಿವಾರ) ಪ್ರೀ ಫಿನಾಲೆ ಇಂದು ನಡೆಯಲಿದೆ. ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದಿದ್ದು, ಅಭಿಮಾನಿಗಳು ತಮ್ಮಿಷ್ಟದ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ. ಈ ಬಾರಿ ಅಂತೂ ದಾಖಲೆ ಸಂಖ್ಯೆಯ ವೋಟುಗಳು ಸ್ಪರ್ಧಿಗಳಿಗೆ ಬಂದಿವೆ. ಈ ವರೆಗೆ ಬಂದ ಮತಗಳ ಸಂಖ್ಯೆಯನ್ನು ಖುದ್ದು ಸುದೀಪ್ ಅವರು ಬಹಿರಂಗಪಡಿಸಿದ್ದಾರೆ. ಈಗಾಗಲೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ. ನಾಳೆಯ ವರೆಗೆ ವೋಟಿಂಗ್ ಲೈನ್ ತೆರೆದಿರಲಿದೆ. ವಿಡಿಯೋ ನೋಡಿ… ಸಿನಿಮಾ…

Read More

ದೇವನಹಳ್ಳಿ: ಹೆದ್ದಾರಿಯಲ್ಲಿ ಭೀಕರ ಅಪಘಾತ; ಲಾಂಗ್ ಡ್ರೈವ್​​ ಹೊರಟ್ಟಿದ್ದ ಮೂವರು ಸ್ನೇಹಿತರು ಬಲಿ​​ – Kannada News | Devanahalli: Horrific Highway Accident Claims Lives of Three Friends on Long Drive

ದೇವನಹಳ್ಳಿ, ಜನವರಿ 17: ಅವರೆಲ್ಲಾ ಪಿಯು ವಿದ್ಯಾರ್ಥಿಗಳು. ಇಂದು ವೀಕೆಂಡ್ ಹಿನ್ನೆಲೆ ಬೈಕ್ ಏರಿ ಲಾಂಗ್ ಡ್ರೈವ್​ಗೆ ಹೊರಟ್ಟಿದ್ದರು. ಹೀಗೆ ಲಾಂಗ್ ಡ್ರೈವ್​​​ ಹೋದ ಮೂವರು ಸ್ನೇಹಿತರ ಪಾಲಿಗೆ ಅದು ಲಾಸ್ಟ್ ಡ್ರೈವ್​ ಆಗಿದ್ದು, ಭೀಕರ ಅಪಘಾತಕ್ಕೆ (Accident) ಸ್ಥಳದಲ್ಲೇ ಮೂವರು ದುರಂತ ಅಂತ್ಯವಾಗಿದ್ದಾರೆ (death). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದ ಅಗಲಕೋಟೆ ಬಳಿ ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ನಡೆದದ್ದೇನು? ಇಂದು ಬೆಳಗ್ಗೆ 11: 20ರ…

Read More

8 ಲಕ್ಷ ರೂ. ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ: ಟಿಕೆಟ್​​ ಪಡೆಯುವುದು ಕಡ್ಡಾಯ – Kannada News | Karnataka Bus Fines Soar: KSRTC Collects 8 Lakh for Ticketless Commute

ಬೆಂಗಳೂರು, ಜ.17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರತಿದಿನ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ನೀಡುತ್ತಿರುತ್ತದೆ. ಆದ್ರೂ ಜನ ಈ ಬಗ್ಗೆ ಗಮನ ನೀಡುವುದಿಲ್ಲ. ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಪ್ರಯಾಣಿಸಬೇಡಿ ಪ್ರತಿ ಭಾರೀ ಹೇಳಿದ್ರೂ ಇದಕ್ಕೆ ಕೇರ್​​ ಎನ್ನುತ್ತಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಟಿಕೆಟ್​​ ಪಡೆಯದವರಿಗೆ ದಂಡ ಹಾಕುತ್ತಾರೆ. ಇದೀಗ 2025ರಲ್ಲಿ ಕೆಎಸ್‌ಆರ್‌ಟಿಸಿ 8,08,704 ರೂ. ದಂಡವನ್ನು ವಸೂಲಿ ಮಾಡಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟನೆಯೊಂದನ್ನು ಹೊರಡಿಸಿದೆ. ಈ ಹಿಂದೆ…

Read More

ಅಬುಧಾಬಿ ಬಿಎಪಿಎಸ್ ದೇವಾಲಯ ಏಕತೆಯ ಸಂಕೇತ; ಯುಎಇ ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರರಿಂದ ಶ್ಲಾಘನೆ – Kannada News | UAE Cultural Advisor Zaki Anwar Nusseibeh visit to BAPS Hindu Mandir in Abu Dhabi

ನವದೆಹಲಿ, ಜನವರಿ 17: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರ ಮತ್ತು ಯುಎಇ ವಿಶ್ವವಿದ್ಯಾಲಯದ ಕುಲಪತಿ ಜಾಕಿ ಅನ್ವರ್ ನುಸ್ಸೀಬೆಹ್ ಅವರು ಇತ್ತೀಚೆಗೆ ಅಬುಧಾಬಿಯಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯಕ್ಕೆ (BAPS Hindu Temple) ಭೇಟಿ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ, ಅವರು ದೇವಾಲಯದ ಮುಖ್ಯಸ್ಥ ಸ್ವಾಮಿ ಬ್ರಹ್ಮವಿಹಾರಿ ದಾಸ್ ಅವರನ್ನು ಭೇಟಿಯಾದರು. ಅವರು ಬಿಎಪಿಎಸ್ ದೇವಾಲಯವನ್ನು 21ನೇ ಶತಮಾನದ ಜಾಗತಿಕ ಏಕತೆಯ ದಾರಿದೀಪವೆಂದು ಶ್ಲಾಘಿಸಿದರು. ಈ ದೇವಾಲಯವು ಸಂಸ್ಕೃತಿ ಮತ್ತು ಮೌಲ್ಯಗಳ ಕೇಂದ್ರವಾಗಿದೆ ಎಂದು…

Read More

Apply Now: ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ – Kannada News | UAS Bengaluru Professor Jobs: PhD Holders Apply Now for Career Opportunity

ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು(UAS) ಅಧಿಕೃತ ಅಧಿಸೂಚನೆಯ ಮೂಲಕ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 02 ರ ಮೊದಲು ಅರ್ಜಿ ಸಲ್ಲಿಸತಕ್ಕದ್ದು. ಶೈಕ್ಷಣಿಕ ಅರ್ಹತೆ: ಯುಎಎಸ್ ಬೆಂಗಳೂರು ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿರಬೇಕು. ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ…

Read More