Category Archives: Blog

Your blog category

ತುಳು ಭಾಷೆಗೆ ವಿರೋಧ ಇದೆಯೇ? ಸ್ಪಷ್ಟನೆ ಕೊಟ್ಟ ನಟ ಝೈದ್ ಖಾನ್ – Kannada News | Zaid Khan talks gave clarification on his opinion on Tulu Language

ಝೈದ್ ಖಾನ್ ನಟನೆಯ ‘ಕಲ್ಟ್’ (Cult) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಝೈದ್ ಖಾನ್ (Zaid Khan) ಅವರು ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಶಿಡ್ಲಘಟ್ಟದಲ್ಲಿ ನಡೆದಿರುವ ಘಟನೆ ಝೈದ್ ಖಾನ್​​ಗೆ ನೆಗೆಟಿವ್ ಆಗಿದೆ. ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ, ಮಹಿಳಾ ಅಧಿಕಾರಿಗೆ ಹಾಕಿರುವ ಬೆದರಿಕೆಗೆ ಇದೀಗ ಝೈದ್ ಖಾನ್ ಸಹ ಕ್ಷಮೆ ಕೋರಿದ್ದಾರೆ. ಝೈದ್ ಖಾನ್ ಅವರು ಪ್ರಚಾರದ ಸಮಯದಲ್ಲಿಯೂ ಸಹ ಸತತವಾಗಿ ಇಂಥಹಾ ಪ್ರಶ್ನೆಗಳನ್ನೇ ಎದುರಿಸುತ್ತಿದ್ದು, ಇದೀಗ ಝೈದ್ ಖಾನ್​​ಗೆ ತುಳು ಭಾಷೆಯ ಬಗ್ಗೆ ವಿರೋಧ ಇದೆ ಎಂಬ ಆರೋಪವೂ ಎದುರಾಗಿದ್ದು, ಆ ಬಗ್ಗೆ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಶಿವಮೊಗ್ಗದಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ಮಾಜಿ ಪೊಲೀಸರ ಮನೆಯೇ ಈ ಕಳ್ಳರಿಗೆ ಟಾರ್ಗೆಟ್ – Kannada News | Shivamogga Theft Spree: Gold and Cash Robbed, CCTV Captures Masked Thieves

ಶಿವಮೊಗ್ಗ, ಜ.17: ಜಿಲ್ಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಶಿವಮೊಗ್ಗ ಜನರನ್ನು ಬೆಚ್ಚಿ ಬೀಳಿಸುವ ಘಟನೆಗಳು ನಡೆಯುತ್ತಿದೆ. ಒಂದು ಕಡೆ ಬಂಗಾರ ಬೆಲೆ ಏರುತ್ತಲೇ ಇದೆ. ಇನ್ನೊಂದು ಕಡೆ ಈ ಕಳ್ಳರು ಚಿನ್ನ ಕದ್ದಿಯುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.  ಶಿವಮೊಗ್ಗದ (Shivamogga theft) ಹಲವು ಕಡೆ ಕಳ್ಳತನ ಆಗಿರುವ ಘಟನೆಗಳು ಪತ್ತೆಯಾಗಿದೆ. ಜಿಲ್ಲೆಯ ಸ್ವಾಮಿ ವಿವೇಕಾನಂದ ಬಡಾವಣೆಯ ವಿಜಯಲಕ್ಷ್ಮಿ ಎಂಬುವವರ ಮನೆಗೆ ಕಳ್ಳರು ನುಗ್ಗಿ ಸುಮಾರು 15 ಲಕ್ಷದ ಚಿನ್ನಾಭಾರಣ ಹಾಗೂ 70 ಸಾವಿರ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಇಂದು (ಜ.17) ಬೆಳಗಿನ ಜಾವ ಸುಮಾರು 1 ರಿಂದ 3 ಗಂಟೆ ವೇಳೆ ಮೂವರು ಕಳ್ಳರು ಮನೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮನೆ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿ ಬಿರು ಲಾಕರ್ ಮುರಿದು  ಎಲ್ಲ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ಇನ್ನು ಈ ಕಳ್ಳರು ಬಂದಿರುವ ಮತ್ತು ಬೈಕ್​​ನಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮರ್​​ದಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋದ ಪ್ರಕಾರ, ಕಳ್ಳರು ಮುಖಕ್ಕೆ ಮಾಸ್ಕ್, ಕೈಯಲ್ಲಿ ಮಚ್ಚು ಲಾಂಗ್ ಹಾಗೂ ಕಲ್ಲು ಹಿಡಿದುಕೊಂಡಿರುವುದನ್ನು ತೋರಿಸಲಾಗಿದೆ. ಒಂದೇ ಬೈಕ್​​ನಲ್ಲಿ ಈ ಮೂವರು ಕಳ್ಳರು ಬಂದಿದ್ದಾರೆ. ಮನೆ ಯಜಮಾನಿ ವಿಜಯಲಕ್ಷ್ಮೀ ಅವರು ಮನೆಗೆ ಬೀಗ ಹಾಕಿ ಬಾಂಬೆಯಲ್ಲಿರುವ ತಮ್ಮ ಸಂಬಂಧಿಕರ ಮನೆ ಹೋಗಿದ್ದಾರೆ. ಎರಡು ಮೂರು ದಿನಗಳಿಂದ ಈ ಮನೆಗೆ ಹೊಂಚು ಹಾಕಲು ಈ ಕಳ್ಳರು ಕಾಯುತ್ತಿದ್ದರು. ವಿಜಯಲಕ್ಷ್ಮಿ ಅವರು ಬಾಂಬೆಗೆ ಹೋಗುತ್ತಿದ್ದಂತೆ ಕಳ್ಳರು ಅವರ ಮನೆಗೆ ದಾಳಿ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ಆಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಪಕ್ಕದ ಮನೆಯವರು ಬಾಂಬೆಯಲ್ಲಿದ್ದ ವಿಜಯಲಕ್ಷ್ಮಿ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ವಿಜಯಲಕ್ಷ್ಮಿ ಅವರು ಭದ್ರಾವತಿಯಲ್ಲಿರುವ ಅವರ ಸಹೋದರ ಚಂದ್ರಶೇಖರ್ ಅವರಿಗೆ ಕರೆ ಮಾಡಿ ಮನೆಯ ಬಳಿ ಹೋಗಿ ಪರಿಶೀಲಿಸುವಂತೆ ಹೇಳಿದ್ದಾರೆ. ಚಂದ್ರಶೇಖರ್ ಅವರು ಬಂದು ನೋಡಿದಾಗ ಕಳ್ಳತನ ಆಗಿರುವುದು ಬಹಿರಂಗವಾಗಿದೆ. ಇನ್ನು ವಿಜಯಲಕ್ಷ್ಮಿ ಅವರ ಮನೆಯಲ್ಲಿ ಮಾತ್ರವಲ್ಲದೆ, ಅವರ ಬಡವಾಣೆಯ ಸಾಲಿನಲ್ಲೇ ಬರುವ ಇನ್ನೊಂದು ಮನೆಯ ಬೈಕ್​​ ಕೂಡ ಕಳ್ಳತನ ಆಗಿದೆ. ನಂತರ ಈ ಬಡವಾಣೆಯ ಮುಂದೆ ಪೊಲೀಸ್​​​​ ಬಡವಾಣೆ ಇದೆ. ಅಲ್ಲಿಯೂ ಕೂಡ ಎರಡು ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲು ಮುಂದಾಗಿದ್ದಾರೆ. ಆದರೆ ಅಲ್ಲಿ ಕಳ್ಳತನ ಮಾಡಲು ಸಾಧ್ಯವಾಗಿಲ್ಲ. ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ಮಾಡುವ ಮೊದಲು ಈ ಎರಡು ಕಡೆ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆ್ಯಂಬುಲೆನ್ಸ್​​​ನಲ್ಲಿ ಕಳಿಸಿದ ಮಗಳು

ಹೆಚ್ಚುವರಿ ಎಸ್ಪಿ ಕಾರಿಯಪ್ಪ ಅವರು ಕಳ್ಳತವಾಗಿರುವ ವಿಜಯಲಕ್ಷ್ಮಿ ಮನೆಗೆ ಭೇಟಿ ನೀಡಿದ್ದರು. ಕಳ್ಳತನ ಮತ್ತು ಕಳ್ಳರ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿದ್ದಾರೆ. ಕಳ್ಳರ ಬಲೆಗೆ ಈಗಾಗಲೇ ಒಂದು ವಿಶೇಷ ತಂಡ ರಚನೆ ಮಾಡಿದ್ದಾರೆ. ಪೊಲೀಸ್ ಬಡಾವಣೆಗೆ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿದರುವುದು ಬಡಾವಣೆಯ ಜನರಿಗೆ ದೊಡ್ಡ ಆತಂಕ ಸೃಷ್ಟಿ ಮಾಡಿದೆ. ಇಲ್ಲಿ ಎಲ್ಲ ನಿವೃತ್ತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮನೆಗಳಿವೆ. ಇಂತಹ ಮನೆಗಳಿಗೆ ಕಳ್ಳರು ಕಳ್ಳತನಕ್ಕೆ ಬಂದಿರುವುದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಆರ್​ಸಿಬಿ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ; 7 ಎಸೆತಗಳಲ್ಲಿ 4 ವಿಕೆಟ್ ಪತನ – Kannada News | RCB vs DC WPL 2026: Delhi Capitals Suffer Early Collapse, Lose 4 Wickets

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಡೆಲ್ಲಿ ತಂಡ ಮೊದಲ ಎರಡು ಓವರ್​ಗಳಲ್ಲೇ ಆಘಾತ ಎದುರಿಸಿದೆ. ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್​ಗಳು ಪತನಗೊಂಡಿವೆ. ಅದರಲ್ಲೂ 7 ಎಸೆತಗಳಲ್ಲಿ ಡೆಲ್ಲಿ ತಂಡದ 4 ವಿಕೆಟ್​ಗಳು ಉದುರಿದ್ದು, ಆರ್​ಸಿಬಿಯ ಮಾರಕ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು.

ಮೊದಲ ಓವರ್​ನಲ್ಲಿ 2 ವಿಕೆಟ್

ಡೆಲ್ಲಿ ಪರ ಶಫಾಲಿ ವರ್ಮಾ ಮತ್ತು ಲಿಜೆಲ್ಲೆ ಲೀ ಆರಂಭಿಕರಾಗಿ ಕಣಕ್ಕಿಳಿದರು. ಲಿಜೆಲ್ಲೆ ಲೀ ತಾವು ಎದುರಿಸಿದ ಮೊದಲ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಲಾರೆನ್ ಬೆಲ್ ಅವರ ಇನ್​ಸ್ವಿಂಗರ್ ಎಸೆತ ಲೀ ಅವರನ್ನು ಪೆವಿಲಿಯನ್‌ಗಟ್ಟಿತು. ನಂತರ ಬಂದ ಲಾರಾ ವೊಲ್ವಾರ್ಡ್ಟ್ ಕೂಡ ಅದೇ ಓವರ್​ನಲ್ಲಿ ಎರಡು ಎಸೆತಗಳನ್ನು ಎದುರಿಸಿ ಖಾತೆ ಕೂಡ ತೆರೆಯದೆ ವಿಕೆಟ್ ಒಪ್ಪಿಸಿದರು.

2ನೇ ಓವರ್​ನಲ್ಲಿ 2 ವಿಕೆಟ್

ಇನ್ನು ಎರಡನೇ ಓವರ್​ನಲ್ಲಿ ಆರ್​ಸಿಬಿ ಪರ ಸಯಾಲಿ ಸತ್ಘರೆ ಬೌಲಿಂಗ್ ಆರಂಭಿಸಿದರೆ, ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್ ಸ್ಟ್ರೈಕ್​ನಲ್ಲಿದ್ದರು. ಜೆಮಿಮಾ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಬೌಲ್ಡ್ ಆದರು. ಹೀಗಾಗಿ ಡೆಲ್ಲಿ ತಂಡ 10 ರನ್​ಗಳಿಗೆ ತನ್ನ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್​ಗೆ ಬಂದ ಅನುಭವಿ ಮರಿಝನ್ನೆ ಕಪ್ ಅವರ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಆದರೆ ಮರಿಝನ್ನೆ ಕಪ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಡೆಲ್ಲಿಗೆ 4ನೇ ಆಘಾತ ನೀಡಿದರು. ಹೀಗಾಗಿ ಡೆಲ್ಲಿ ತಂಡ 2 ಓವರ್​ಗಳ ಅಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್ (ದಯಾಲನ್ ಹೇಮಲತಾ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್ (ಅರುಂಧತಿ ರೆಡ್ಡಿ ಬದಲಿಗೆ), ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ (ಲಿನ್ಸೆ ಸ್ಮಿತ್ ಬದಲಿಗೆ), ಲಾರೆನ್ ಬೆಲ್.

ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಝನ್ನೆ ಕಪ್, ಸ್ನೇಹ ರಾಣಾ, ನಿಕಿ ಪ್ರಸಾದ್, ಮಿನ್ನು ಮಣಿ, ಶ್ರೀ ಚರಣಿ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್ (ಚಿನೆಲ್ ಹೆನ್ರಿ ಬದಲಿಗೆ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:14 pm, Sat, 17 January 26

Source link

ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ – Kannada News | India slapped 30 percent tariff on US pulse crops US Senators Urges Trump To talk with PM Modi

ನವದೆಹಲಿ, ಜನವರಿ 17: ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30ರಷ್ಟು ಸುಂಕವನ್ನು ವಿಧಿಸಿದೆ. ಹೀಗಾಗಿ, ಉತ್ತರ ಡಕೋಟಾ ಮತ್ತು ಮೊಂಟಾನಾ ಸೆನೆಟರ್‌ಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬಳಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಅಮೆರಿಕದ ರೈತರಿಗೆ ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಭಾರತದೊಂದಿಗೆ ವ್ಯಾಪಾರ ಮಾತುಕತೆಗಳು ಮುಂದುವರಿದಂತೆ ಅಮೆರಿಕದ ಎರಡು ರಾಜ್ಯಗಳ ಶಾಸಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈ ಸಲಹೆ ನೀಡಿದ್ದಾರೆ. ಅಮೆರಿಕದ ದ್ವಿದಳ ಧಾನ್ಯಗಳ ಆಮದಿನ ಮೇಲೆ ಭಾರತ ವಿಧಿಸುತ್ತಿರುವ ಸುಂಕಗಳನ್ನು ಕಡಿಮೆ ಮಾಡಲು ಮಾತುಕತೆ ನಡೆಸುವಂತೆ ಟ್ರಂಪ್ ಅವರಿಗೆ ಒತ್ತಾಯಿಸಿದ್ದಾರೆ.

ಯುಎಸ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಮೊಂಟಾನಾ ಮತ್ತು ಉತ್ತರ ಡಕೋಟಾ ದ್ವಿದಳ ಧಾನ್ಯಗಳ ಬೆಳೆಗಳ 2 ಪ್ರಮುಖ ಉತ್ಪಾದಕರು ಮತ್ತು ಭಾರತವು ವಿಶ್ವದ ಸೇವನೆಯ ಸುಮಾರು ಶೇ. 27ರಷ್ಟು ಅತಿದೊಡ್ಡ ಗ್ರಾಹಕ ಎಂದು ಸೆನೆಟರ್‌ಗಳು ತಿಳಿಸಿದ್ದಾರೆ. ಅಮೆರಿಕದಿಂದ ರಫ್ತು ಮಾಡುವ ಹಳದಿ ಬಟಾಣಿಗಳ ಮೇಲೆ ಭಾರತ ಶೇ. 30ರಷ್ಟು ಸುಂಕವನ್ನು ಘೋಷಿಸಿದೆ. ಈ ಸುಂಕಗಳು ನವೆಂಬರ್ 2025ರಲ್ಲಿ ಜಾರಿಗೆ ಬಂದಿವೆ. ಇದಕ್ಕೂ ಮೊದಲು ಹಳದಿ ಬಟಾಣಿಗಳನ್ನು ಸುಂಕ ರಹಿತವಾಗಿ ಭಾರತಕ್ಕೆ ರಫ್ತು ಮಾಡಲು ಅವಕಾಶವಿತ್ತು.

ಇದನ್ನೂ ಓದಿ: ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?

ಈ ನಿಯಮ ಮಾರ್ಚ್ 2026ರವರೆಗೆ ಇರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಅಗ್ಗದ ಆಮದುಗಳ ಒಳಹರಿವು ಸ್ಥಳೀಯ ಬೆಳೆಗಳ ಬೆಲೆಗಳನ್ನು ನಿಗ್ರಹಿಸುವುದರಿಂದ ದೇಶೀಯ ಭಾರತೀಯ ರೈತರು ಮಧ್ಯಪ್ರವೇಶಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ ನಂತರ ಮೋದಿ ಸರ್ಕಾರ ತನ್ನ ನೀತಿಗಳನ್ನು ಬದಲಾಯಿಸಿಕೊಂಡು ಅಮೆರಿಕದ ಆಮದು ಧಾನ್ಯಗಳ ಮೇಲೆ ಸುಂಕ ಹೇರಿತ್ತು.

ದ್ವಿದಳ ಧಾನ್ಯಗಳ ಸುಂಕಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುವಂತೆ ಸೆನೆಟರ್‌ಗಳು ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. ಇದರಿಂದ ಭಾರತದಲ್ಲಿನ ಅಮೇರಿಕನ್ ಉತ್ಪಾದಕರು ಮತ್ತು ಗ್ರಾಹಕರಿಗೆ ಪ್ರಯೋಜನಕಾರಿಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತೀಯ ಸುಂಕಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸುವ ಈ ವಿನಂತಿಯು ಯುಎಸ್‌ ಭಾರತೀಯ ಆಮದುಗಳ ಮೇಲೆ ಶೇ. 50ರಷ್ಟು ಸುಂಕವುನ್ನು ಜಾರಿ ಮಾಡಿರುವ ಸಮಯದಲ್ಲಿ ಬಂದಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

ಡೊನಾಲ್ಡ್ ಟ್ರಂಪ್‌ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25ರಷ್ಟು ದಂಡದ ರೂಪದಲ್ಲಿ ಸುಂಕ ಹೇರಿದ್ದರು. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ ಶೇ. 50ರಷ್ಟು ಸುಂಕ ಹೇರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಡಾಲಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜು, ‘ಜೆಸಿ’ ಇದು ಜೈಲಿನ ಕರಾಳ ಕತೆ – Kannada News | Daali Pictures JC Movie trailer released, Movie release date announce

ಡಾಲಿ ಧನಂಜಯ್ (Daali Dhananjay) ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದೆ. ಡಾಲಿ ಅವರು ಪರ ಭಾಷೆ ಸಿನಿಮಾಗಳಲ್ಲಿ ಅಥವಾ ತಮ್ಮ ಗೆಳೆಯರ ಸಿನಿಮಾಗಳ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿ ಅವರ ಸಿನಿಮಾ ಬರದೇ ಇದ್ದರೂ ಸಹ ಡಾಲಿ ಅವರ ನಿರ್ಮಾಣದ ಸಿನಿಮಾಗಳು ಮಾತ್ರ ಒಂದರ ಹಿಂದೊಂದು ಬಿಡುಗಡೆ ಆಗಲು ಸಜ್ಜಾಗುತ್ತಿವೆ. ಕೆಲ ದಿನಗಳ ಹಿಂದಷ್ಟೆ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಹೆಗ್ಗಣ ಮುದ್ದು’ ಸಿನಿಮಾ ಘೋಷಿಸಲಾಗಿತ್ತು. ಇದೀಗ ಡಾಲಿ ಪಿಕ್ಚರ್ಸ್ ಅವರ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

ಡಾಲಿ ಧನಂಜಯ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಜೆಸಿ: ದಿ ಯೂನಿವರ್ಸಿಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾ ಫೆಬ್ರವರಿ 6ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿದೆ. ಸೂರ್ಯ ಪ್ರಖ್ಯಾತ್ ಮತ್ತು ಭಾವನಾ ರೆಡ್ಡಿ ಅವರುಗಳು ‘ಜೆಸಿ’ ಸಿನಿಮಾನಲ್ಲಿ ನಟಿಸಿದ್ದು, ನಟ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರುಗಳು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ, ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.

‘ಜೆಸಿ’ ಹೆಸರೇ ಹೇಳುತ್ತಿರುವಂತೆ ಇದು ಜೈಲಿನ ಕತೆ. ಸಹಜವಾಗಿಯೇ ಮಾಸ್ ಸಿನಿಮಾ. ಜೈಲಿನ ಸುತ್ತ ನಡೆಯುವ ಕಥೆ ಆದ್ದರಿಂದ ‘ಜೋಗಿ’ಯ ಸೂಪರ್ ಹಿಟ್ ಜೋಡಿ ಶಿವಣ್ಣ ಮತ್ತು ಪ್ರೇಮ್ ಇಬ್ಬರೂ ಸೇರಿ ಟ್ರೈಲರ್ ರಿಲೀಸ್ ಮಾಡಲು ಡಾಲಿ ಆಹ್ವಾನಿಸಿದ್ದರು. ಚೇತನ್ ಜೈರಾಮ್ ಅವರು ‘ಜೆಸಿ’ ಸಿನಿಮಾ ನಿರ್ದೇಶಿಸಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್, ಕೈದಿಗಳ ಮಾನವೀಯತೆ, ಅಮಾನವೀಯತೆ ಇನ್ನಿತರೆ ಅಂಶಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಫೈಟ್, ಕೊಲೆ, ರಕ್ತ, ಹಿಂಸೆಗಳ ನಡುವೆ ಅಪ್ಪ ಮಗನ ಭಾವನಾತ್ಮಕ ಕಥೆಯನ್ನು ಸಹ ಸಿನಿಮಾನಲ್ಲಿ ಹೇಳಲಾಗಿದೆ.

ಶಿವಣ್ಣ ಕೂಡ ಟ್ರೈಲರ್ ನೋಡಿ ತುಂಬಾ ಖುಷಿ ಪಟ್ಟರು. ಜೈಲ್ ಒಂದು ಪರಿವರ್ತನೆಯ ಜಾಗ, ಜೈಲಿಗೆ ಹೋಗಿ ಬಂದವರು ಅನೇಕರು ಬದಲಾಗುತ್ತಾರೆ ಎಂದರು. ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಕ್ವಾಲಿಟಿಗಳು ಪ್ರಖ್ಯಾತ್ ಅವರಲ್ಲಿ ಇದೆ. ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ, ಜೊತೆಗೆ ನೋಡಲು ಸಖತ್ ಸ್ಮಾರ್ಟ್ ಆಗಿದ್ದಾರೆ, ಲಕ್ ಕೂಡ ಇದೆ ಎಂದು ಪ್ರಖ್ಯಾತ್ ಅವರಿಗೆ ಹಾರೈಸಿದರು.

ಇದನ್ನೂ ಓದಿ:‘ಡಾಲಿ ಪಿಕ್ಚರ್ಸ್’ ಮೂಲಕ ಹೊಸ ಸುದ್ದಿ ನೀಡಿದ ಡಾಲಿ ಧನಂಜಯ್​

ಜೆಸಿ ದಿ ಯೂನರ್ಸಿಟಿ ಟ್ರೈಲರ್ ಅನ್ನು ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಇಬ್ಬರು ಮೆಚ್ಚಿಕೊಂಡಿದ್ದಾಗಿ ಹೇಳಿದ್ದಾರೆ. ಶಿವಣ್ಣನ ಜೋತೆಗೆ ‘ಜೋಗಿ’ ಸಿನಿಮಾದ ಶೂಟಿಂಗ್ ಅನುಭವನ್ನು ಬಿಚ್ಚಿಟ್ಟ ಪ್ರೇಮ್, ‘ಯಾರಿಗೂ ಜೈಲಿನ ಅನುಭವ ಬೇಡ, ಅಲ್ಲಿ ದುಡ್ಡು ಇರೋನಿಗೆ ಮಾತ್ರ ಬೆಲೆ, ಎಷ್ಟೋ ಜನರಿಗೆ ಬೇಲ್ ಸಿಕ್ಕಿದ್ರು ಬಿಡಿಸಿಕೊಳ್ಳಲು ಆಗಲ್ಲ ಅಂತ ಸ್ಥಿತಿಯಲ್ಲಿದ್ದಾರೆ’ ಎಂದು ಪ್ರೇಮ್ ಜೈಲಿನ ಬಗ್ಗೆ ಹೇಳಿದರು. ಜೊತೆಗೆ ಯುವ ನಟರುಗಳಿಗೆ ಕೆಲವು ಸಲಹೆಗಳನ್ನು ಸಹ ನೀಡಿದರು.

ಟ್ರೈಲರ್ ರಿಲೀಸ್ ಮಾಡಿಕೊಟ್ಟ ಶಿವಣ್ಣ ಮತ್ತು ಜೋಗಿ ಪ್ರೇಮ್ ಅವರಿಗೆ ಡಾಲಿ ಧನ್ಯವಾದ ತಿಳಿಸಿದರು. ಚಿತ್ರರಂಗದಲ್ಲಿ ಒಬ್ಬ ಅಣ್ಣನ ಹಾಗೆ ಸಹಾಯಕ್ಕೆ ನಿಂತ ವ್ಯಕ್ತಿ ಶಿವಣ್ಣ. ನನ್ನ ಮೊದಲ ನಿರ್ಮಾಣದ ಸಿನಿಮಾದಿಂದ ಇಲ್ಲಿಯ ವರೆಗೂ ತುಂಬಾ ಸಹಾಯ ಮಾಡಿದ್ದಾರೆ ಎಂದು ಶಿವಣ್ಣನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಹೀರೋ ಪ್ರಖ್ಯಾತ್ ಮಾತನಾಡಿ, ದುಡ್ಡು ಇರೋರೆಲ್ಲ ಹೀರೋ ಆಗಲು ಸಾಧ್ಯಿಲ್ಲ. ಜನ ಒಪ್ಕೊಬೇಕು, ಸರಸ್ವತಿ ಆಶೀರ್ವಾದ ಇರಬೇಕು. ಸೂಪರ್ ಸ್ಟಾರ್ ಮಕ್ಕಳುಗು ಫೇಲ್ ಆಗಿರೋದು ಇದೆ. ಬಡವರ ಮಕ್ಕಳು ಸೂಪರ್ ಸ್ಟಾರ್ ಆಗಿರುವ ಉದಾಹರಣೆಯೂ ಇದೆ. ದುಡ್ಡು ಇದ್ರೆ ಎಲಕ್ಷನ್ ಗೆಲ್ಲಬಹುದು ಆದರೆ ಸಿನಿಮಾ ಗೆಲ್ಲಿಸೋದು ಕಷ್ಟ’ ಎಂದರು. ಇನ್ನೂ ನಾಯಕಿ ಭಾವನಾ ರೆಡ್ಡಿ ಮಾತನಾಡಿ, ಹೊಸಬರಿಗೆ ಅವಕಾಶ ನೀಡುತ್ತಿರುವ ಡಾಲಿ ಧನಂಜಯ ಅವರಿಗೆ ಧನ್ಯವಾದ ತಿಳಿಸಿದರು. ಎಲ್ಲರೂ ಸಿನಿಮಾ ನೋಡಿ ಎಂದು ಕೇಳಕೊಂಡರು. ಸಿನಿಮಾ ಫೆಬ್ರವರಿ 6ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:46 pm, Sat, 17 January 26

Source link

WPL 2026: ಟಾಸ್ ಗೆದ್ದ ಆರ್​ಸಿಬಿ ತಂಡದಲ್ಲಿ ಬರೋಬ್ಬರಿ 3 ಬದಲಾವಣೆ – Kannada News | WPL 2026: RCB vs DC at DY Patil Stadium – Toss and playing 11 details

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ನ (Women’s Premier League) ನಾಲ್ಕನೇ ಆವೃತ್ತಿಯ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಬರುತ್ತಿರುವ ಕಾರಣ ಈ ಪಂದ್ಯದಲ್ಲಿ ಯಾರಿಗೆ ಗೆಲುವು ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಒಂದೆಡೆ ಆರ್​ಸಿಬಿ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇತ್ತ ಡೆಲ್ಲಿ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ರಲ್ಲಿ ಸೋತು, 1 ರಲ್ಲಿ ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಟಾಸ್ ಗೆದ್ದ ಆರ್​ಸಿಬಿ

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಮಾಡಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್‌ ಮಾಡಲಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಬ್ಬನಿ ಪ್ರಮುಖ ಪಾತ್ರವಹಿಸುವ ಕಾರಣ, ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ನೆರವು ಸಿಗಲಿದೆ. ಹೀಗಾಗಿ ಸ್ಮತಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆ ಪ್ರಕಾರ ಆರ್​ಸಿಬಿ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್ (ದಯಾಲನ್ ಹೇಮಲತಾ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್ (ಅರುಂಧತಿ ರೆಡ್ಡಿ ಬದಲಿಗೆ), ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ (ಲಿನ್ಸೆ ಸ್ಮಿತ್ ಬದಲಿಗೆ), ಲಾರೆನ್ ಬೆಲ್.

ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಝನ್ನೆ ಕಪ್, ಸ್ನೇಹ ರಾಣಾ, ನಿಕಿ ಪ್ರಸಾದ್, ಮಿನ್ನು ಮಣಿ, ಶ್ರೀ ಚರಣಿ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್ (ಚಿನೆಲ್ ಹೆನ್ರಿ ಬದಲಿಗೆ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:04 pm, Sat, 17 January 26

Source link

ಒಟಿಟಿಗೆ ಬರುತ್ತಿದೆ ಸುದೀಪ್​ ನಟನೆಯ ‘ಮಾರ್ಕ್’: ಎಲ್ಲಿ? ಯಾವಾಗ ನೋಡಬಹುದು? – Kannada News | Sudeep starrer Mark Kannada movie to stream on Jio Hotstar on January 23

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಡಿಸೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ ಸಿನಿಮಾ. ಈಗಾಗಲೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಘೋಷಣೆ ಮಾಡಲಾಗಿದೆ? ಮಾರ್ಕ್ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಮತ್ತು ಎಂದಿನಿಂದ ಪ್ರದರ್ಶನ ಆರಂಭಿಸಲಿದೆ? ಇಲ್ಲಿದೆ ಮಾಹಿತಿ…

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಜಿಯೋ ಹಾರ್ಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಒಟಿಟಿ ಬಿಡುಗಡೆಯ ಜಾಹೀರಾತುಗಳು ಈಗಾಗಲೇ ಪ್ರಸಾರವಾಗುತ್ತಿದ್ದು, ಜಿಯೋ ಹಾಟ್​​ಸ್ಟಾರ್​​ನಲ್ಲಿ ಜನವರಿ 23 ರಂದು ‘ಮಾರ್ಕ್’ ಸಿನಿಮಾ ಸ್ಟ್ರೀಮಿಂಗ್ ಆರಂಭ ಮಾಡಲಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಮಾರ್ಕ್’ ಸಿನಿಮಾ ಪ್ರಸಾರ ಆಗಲಿರುವುದನ್ನು ಒಟಿಟಿಯು ಚೆನ್ನಾಗಿಯೇ ಪ್ರಚಾರ ಮಾಡುತ್ತಿದೆ. ಬೇರೆ ಸಿನಿಮಾಗಳ ನಡುವೆ ‘ಮಾರ್ಕ್’ ಸಿನಿಮಾದ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಮಾರ್ಕ್’ ಸಿನಿಮಾ ಕನ್ನಡ ಮಾತ್ರವೇ ಅಲ್ಲದೆ ಇನ್ನೂ ಕೆಲ ಭಾರತೀಯ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ:ವಯಸ್ಸು ನಂಬರ್ ಮಾತ್ರ; ಸಿಸಿಎಲ್​​ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಕಿಚ್ಚ ಸುದೀಪ್ 

‘ಮಾರ್ಕ್’ ಸಿನಿಮಾವು 2025 ರಲ್ಲಿ ಬಿಡುಗಡೆ ಆದ ಸುದೀಪ್ ನಟನೆಯ ಏಕೈಕ ಸಿನಿಮಾ ಆಗಿದ್ದು, ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ಪೈರಸಿ ಮಾಡುವ ಬೆದರಿಕೆ ಹಾಕಲಾಗಿತ್ತು, ಅಲ್ಲದೆ ಸಿನಿಮಾದ ಬಗ್ಗೆ ನೆಗಟಿವ್ ಪ್ರಚಾರ ಇನ್ನಿತರೆಗಳನ್ನು ಸಹ ಮಾಡಲಾಗಿತ್ತು, ಅದೆಲ್ಲವನ್ನೂ ಮೀರಿ ‘ಮಾರ್ಕ್’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುವಲ್ಲಿ ಯಶಸ್ವಿ ಆಗಿದೆ. ಈಗಲೂ ಸಹ ಬೆಂಗಳೂರು ಸೇರಿದಂತೆ ಇನ್ನೂ ಕೆಲ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಭಾನುವಾರ 30 ಚಿತ್ರಮಂದಿರಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಆಗುತ್ತಿವೆ. ಆದರೆ ಅಷ್ಟರಲ್ಲೇ ಸಿನಿಮಾವನ್ನು ಒಟಿಟಿಗೆ ತರಲಾಗುತ್ತಿದೆ.

‘ಮಾರ್ಕ್’ ಸಿನಿಮಾವು ಸುದೀಪ್ ಅವರ ಈ ಹಿಂದಿನ ‘ಮ್ಯಾಕ್ಸ್’ ಸಿನಿಮಾದ ರೀತಿಯೇ ಕಡಿಮೆ ಅವಧಿಯಲ್ಲಿ ನಡೆಯುವ ಕತೆಯೊಂದನ್ನು ಆಧರಿಸಿದ ಆಕ್ಷನ್ ಥ್ರಿಲ್ಲರ್ ಜಾನರ್​​ನ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ನಾಯಕಿಯಾದ ನಿಶ್ವಿಕಾ ನಾಯ್ಡು, ರೋಷಿನಿ ಪ್ರಕಾಶ್ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು – Kannada News | Bigg Boss Kannada 12: Sudeep gave Voting count

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಾಳೆ (ಜನವರಿ 18) ನಡೆಯಲಿದೆ. ಇಂದು (ಶನಿವಾರ) ಪ್ರೀ ಫಿನಾಲೆ ಇಂದು ನಡೆಯಲಿದೆ. ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದಿದ್ದು, ಅಭಿಮಾನಿಗಳು ತಮ್ಮಿಷ್ಟದ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ. ಈ ಬಾರಿ ಅಂತೂ ದಾಖಲೆ ಸಂಖ್ಯೆಯ ವೋಟುಗಳು ಸ್ಪರ್ಧಿಗಳಿಗೆ ಬಂದಿವೆ. ಈ ವರೆಗೆ ಬಂದ ಮತಗಳ ಸಂಖ್ಯೆಯನ್ನು ಖುದ್ದು ಸುದೀಪ್ ಅವರು ಬಹಿರಂಗಪಡಿಸಿದ್ದಾರೆ. ಈಗಾಗಲೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ. ನಾಳೆಯ ವರೆಗೆ ವೋಟಿಂಗ್ ಲೈನ್ ತೆರೆದಿರಲಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Sat, 17 January 26

Source link

ದೇವನಹಳ್ಳಿ: ಹೆದ್ದಾರಿಯಲ್ಲಿ ಭೀಕರ ಅಪಘಾತ; ಲಾಂಗ್ ಡ್ರೈವ್​​ ಹೊರಟ್ಟಿದ್ದ ಮೂವರು ಸ್ನೇಹಿತರು ಬಲಿ​​ – Kannada News | Devanahalli: Horrific Highway Accident Claims Lives of Three Friends on Long Drive

ದೇವನಹಳ್ಳಿ, ಜನವರಿ 17: ಅವರೆಲ್ಲಾ ಪಿಯು ವಿದ್ಯಾರ್ಥಿಗಳು. ಇಂದು ವೀಕೆಂಡ್ ಹಿನ್ನೆಲೆ ಬೈಕ್ ಏರಿ ಲಾಂಗ್ ಡ್ರೈವ್​ಗೆ ಹೊರಟ್ಟಿದ್ದರು. ಹೀಗೆ ಲಾಂಗ್ ಡ್ರೈವ್​​​ ಹೋದ ಮೂವರು ಸ್ನೇಹಿತರ ಪಾಲಿಗೆ ಅದು ಲಾಸ್ಟ್ ಡ್ರೈವ್​ ಆಗಿದ್ದು, ಭೀಕರ ಅಪಘಾತಕ್ಕೆ (Accident) ಸ್ಥಳದಲ್ಲೇ ಮೂವರು ದುರಂತ ಅಂತ್ಯವಾಗಿದ್ದಾರೆ (death). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದ ಅಗಲಕೋಟೆ ಬಳಿ ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ನಡೆದದ್ದೇನು?

ಇಂದು ಬೆಳಗ್ಗೆ 11: 20ರ ಸಮಯ ಹೆದ್ದಾರಿಯಲ್ಲಿ ಟಿಪ್ಪರ್​ ಸೇರಿದಂತೆ ಬೈಕ್​ಗಳು ಸಹ ಎಂದಿನಂತೆ ಸಂಚರಿಸುತ್ತಿದ್ದವು. ಇದೇ ವೇಳೆ ಒಂದು ಬದಿಯಲ್ಲಿ ಹೋಗುತ್ತಿದ್ದ ಈ ಮೂವರು ಯುವಕರಿದ್ದ ಬೈಕ್​​ ಅತಿ ವೇಗದಲ್ಲಿ ಬಂದು ನೋಡ ನೋಡುತ್ತಿದ್ದಂತೆ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ನುಗ್ಗಿ, ನೇರವಾಗಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಮೂವರು ಯುವಕರ ದೇಹಗಳು ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನಿಂತಿದ್ದ ಪಿಕಪ್​​ ಟ್ರಕ್​​​ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ: ನಡು ರಸ್ತೆಯಲ್ಲಿ ಒದ್ದಾಡಿದ ಮಕ್ಕಳು

ತೌಸೀಪ್, ಶ್ರೀನಿವಾಸ್ ಮತ್ತು ಮಣಿಕಂಠ ಮೃತರು. ಮೂಲತಃ ಯಲಹಂಕದ ಹುಣಸಮಾರನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ಈ ಮೂರು ಜನ ಸ್ನೇಹಿತರು ಇಂದು ಬೆಳಗ್ಗೆ ವೀಕೆಂಡ್ ಅಂತ ಲಾಂಗ್ ಡ್ರೈವ್​​ಗೆ ಪ್ಲ್ಯಾನ್​ ಮಾಡಿ, ಅದರಂತೆ ಒಂದೇ ಬೈಕ್​ನಲ್ಲಿ ಹೊರಟಿದ್ದಾರೆ. ಹೊಸಕೋಟೆಯ ಕಂಬಳಿಪುರದ ಕಾಟೇರಮ್ಮ ದೇವಸ್ಥಾನಕ್ಕೆ ಹೋಗಿದ್ದ ಸ್ನೇಹಿತರು ವಾಪಸ್ ಯಲಹಂಕದತ್ತ ಮರಳುತ್ತಿದ್ದ ವೇಳೆ ದೇವನಹಳ್ಳಿ ಹೊರವಲಯದ ಬೂದಿಗೆರೆ ರಸ್ತೆಯ ಅಗಲಕೋಟೆ ಬಳಿ ರಸ್ತೆ ತಿರುವಿನಲ್ಲೂ ವೇಗವಾಗಿ ಬೈಕ್​​ ಓಡಿಸಿದ್ದಾರೆ. ಹೀಗಾಗಿ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ಒಂದು ಬದಿಯ ರಸ್ತೆಯಿಂದ ಮತ್ತೊಂದು ಬದಿಯ ರಸ್ತೆ ಹಾರಿದ್ದು, ಈ ವೇಳೆ ಬರುತ್ತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿ ರಭಸಕ್ಕೆ ಹೆಲ್ಮೆಟ್ ಹಾಕದ ಕಾರಣ ಯುಕರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪಿದ್ದಾರೆ.

ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಿಯರು ಜಮಾಯಿಸಿ ಆಂಬುಲೆನ್ಸ್​ಗೆ ಕರೆ ಮಾಡಿದ ಒಂದು ಗಂಟೆವರೆಗೂ ಆಂಬುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ದೇವನಹಳ್ಳಿ ಬೂದಿಗೆರೆ ರಸ್ತೆಯ ತಿರುವುಗಳಲ್ಲಿ ಸ್ಪೀಡ್ ಬ್ರೇಕರ್ ಹಾಕದ ಕಾರಣ ವಾಹನ ಸವಾರರು ಅತಿವೇಗದಲ್ಲಿ ಬಂದು ಅಪಘಾತಗಳಿಗೆ ಬಲಿಯಾಗ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ಹಿಟ್ ಆ್ಯಂಡ್​ ರನ್ ಶಂಕೆ

ಮೆಲ್ನೋಟಕ್ಕೆ ಬೈಕ್ ಸವಾರ ಅತಿವೇಗ ಹಾಗೂ ಹೆಲ್ಮೆಟ್ ಹಾಕದಿರುವುದು ಮೂವರ ದುರಂತ ಅಂತ್ಯಕ್ಕೆ ಕಾರಣವಾಗಿದೆ ಅಂತ ಪೊಲೀಸರು ಶಂಕಿಸಿದ್ದಾರೆ. ಹಿಟ್ ಆ್ಯಂಡ್​ ರನ್ ಮಾಡಿ ಎಸ್ಕೇಪ್ ಆಗಿರುವ ಟಿಪ್ಪರ್ ಪತ್ತೆಗೂ ಪೊಲೀಸರು ಮುಂದಾಗಿದ್ದು, ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

8 ಲಕ್ಷ ರೂ. ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ: ಟಿಕೆಟ್​​ ಪಡೆಯುವುದು ಕಡ್ಡಾಯ – Kannada News | Karnataka Bus Fines Soar: KSRTC Collects 8 Lakh for Ticketless Commute

ಬೆಂಗಳೂರು, ಜ.17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರತಿದಿನ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ನೀಡುತ್ತಿರುತ್ತದೆ. ಆದ್ರೂ ಜನ ಈ ಬಗ್ಗೆ ಗಮನ ನೀಡುವುದಿಲ್ಲ. ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಪ್ರಯಾಣಿಸಬೇಡಿ ಪ್ರತಿ ಭಾರೀ ಹೇಳಿದ್ರೂ ಇದಕ್ಕೆ ಕೇರ್​​ ಎನ್ನುತ್ತಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಟಿಕೆಟ್​​ ಪಡೆಯದವರಿಗೆ ದಂಡ ಹಾಕುತ್ತಾರೆ. ಇದೀಗ 2025ರಲ್ಲಿ ಕೆಎಸ್‌ಆರ್‌ಟಿಸಿ 8,08,704 ರೂ. ದಂಡವನ್ನು ವಸೂಲಿ ಮಾಡಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟನೆಯೊಂದನ್ನು ಹೊರಡಿಸಿದೆ. ಈ ಹಿಂದೆ ಅಂದರೆ 2025 ಎಪ್ರಿಲ್​​ನಲ್ಲಿ ಈ ದಂಡ ಸಾವಿರದಲ್ಲಿತ್ತು. ಇದೀಗ ಲಕ್ಷಕ್ಕೆ ದಾಟಿದೆ. 2025ರ ಡಿಸೆಂಬರ್ ತಿಂಗಳಿನಲ್ಲಿ ಕೆಎಸ್ಆರ್ಟಿಸಿ ನಿಗಮವು 8 ಲಕ್ಷದಷ್ಟು ದಂಡವನ್ನು ವಸೂಲಿ ಮಾಡಿದೆ.

ಡಿಸೆಂಬರ್ ತಿಂಗಳಿನಲ್ಲಿ ಕೆಎಸ್ಆರ್ಟಿಸಿ ನಿಗಮವು 43553 ವಾಹನಗಳನ್ನು ತನಿಖೆಗೊಳಪಡಿಸಿತ್ತು. ಅದರಲ್ಲಿ  4207 ಬಸ್ಸಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ ಹಾಗೂ ಇತರ ಪ್ರಕರಣಗಳನ್ನು ಪತ್ತೆಹಚ್ಚಿದೆ. ಇನ್ನು 4353 ಟಿಕೇಟ್ ರಹಿತ ಪ್ರಯಾಣ ಮಾಡಿರುವ ಪ್ರಕರಣಗಳು ಪತ್ತೆ ಮಾಡಿದೆ. ಒಟ್ಟು 8,08,704 ರೂ. ದಂಡದ ರೂಪದಲ್ಲಿ ವಸೂಲಿ ಮಾಡಿದೆ. ನಿಗಮದ ಆದಾಯದಲ್ಲೂ ಸೋರಿಕೆ ಆಗುತ್ತಿದ್ದು, 1,14,500 ರೂ. ನಷ್ಟ ಆಗರುವುದನ್ನು ಪತ್ತೆಹಚ್ಚಿದ್ದಾರೆ. ಇದೀಗ ಇದನ್ನು ತಡೆಯಲು ನಿಗಮ ಹಲವು ಕ್ರಮಗಳನ್ನು ತಂದಿದೆ ಅದರ ಜತೆಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೇಟ್-ಪಾಸ್ ಪಡೆಯಿರಿ ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ

ಏಪ್ರಿಲ್ 2025 ರಲ್ಲಿ 43,244 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪರಿಶೀಲಿಸಿದಾಗ, 97,576 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ 3,882 ಪ್ರಕರಣಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದರು. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 3,780 ಪ್ರಯಾಣಿಕರು ಪತ್ತೆ ಮಾಡಿ, 7,32,495 ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದರು. ಇದರ ಜತೆಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ವಿರುದ್ಧ ಕೂಡ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಅದಕ್ಕಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್​​ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link