Headlines

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಈ ಟಿಪ್ಸ್‌ ಪಾಲಿಸಿ – Kannada News | Adding these items to mop water can easily remove stains from floors

ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಹೌದು ಅದರಲ್ಲೂ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿನಿತ್ಯ ನೆಲವನ್ನು (Floor Cleaning) ಗುಡಿಸಿ ಒರೆಸಲೇಬೇಕು. ಇಲ್ಲದಿದ್ದರೆ ಕೀಟಾಣು, ಸೂಕ್ಷ್ಮಜೀವಿಗಳು ನೆಲದಲ್ಲಿಯೇ ನೆಲೆಗೊಳ್ಳುವುದು ಮಾತ್ರವಲ್ಲದೆ, ಕಲೆ, ಕೊಳೆಗಳಿಂದಾಗಿ ಟೈಲ್ಸ್‌, ಗ್ರಾನೈಟ್‌ನ ಸೌಂದರ್ಯವೇ ಹಾಳಾಗಿ ಹೋಗುತ್ತದೆ. ಅದಕ್ಕಾಗಿ ಪ್ರನಿತ್ಯ ಎಲ್ಲರೂ ನೆಲ ಒರೆಸುತ್ತಾರೆ. ಆದ್ರೆ ನಿತ್ಯ ನೆಲ ಒರೆಸಿದರೂ ಟೈಲ್ಸ್‌ ಮೇಲೆ ಅಂಟಿರುವ ಕಲೆಗಳು ಹೋಗುತ್ತಿಲ್ಲ ಎಂದು ಹಲವರು ದೂರುತ್ತಿರುತ್ತಾರೆ. ಹೀಗಿರುವಾಗ ದುಬಾರಿ ಕ್ಲೀನರ್‌ಗಳನ್ನು ಬಲಸುವ ಬದಲು ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳನ್ನು ನೆಲ…

Read More

ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು? – Kannada News | How Weather Affects BP and Heart Health

ಇತ್ತೀಚಿನ ದಿನಗಳಲ್ಲಿ, ಹವಾಮಾನ ಪದೇ ಪದೇ ಬದಲಾಗುತ್ತಿದೆ. ಕೆಲವೊಮ್ಮೆ ಶೀತ, ಆರ್ದ್ರತೆ ಮತ್ತೆ ಕೆಲವೊಮ್ಮೆ ಬೆಚ್ಚಗಿನ ವಾತಾವರಣ. ಈ ರೀತಿಯ ಏರಿಳಿತಗಳು ದೇಹದ ಸಾಮಾನ್ಯ ಸಮತೋಲನವನ್ನು ಅಡ್ಡಿಪಡಿಸಬಹುದು, ಅಷ್ಟು ಮಾತ್ರವಲ್ಲ ರಕ್ತದೊತ್ತಡ (BP) ಮತ್ತು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರಿಗೆ ಇದರಿಂದ ಆಗುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ, ರೋಗಿಗಳಿಗೆ ತಲೆನೋವು, ತಲೆತಿರುಗುವಿಕೆ, ಹಠಾತ್ ಆಯಾಸ, ಆತಂಕ, ಎದೆಯಲ್ಲಿ ಭಾರ, ಉಸಿರಾಟದ ತೊಂದರೆ, ಅತಿಯಾದ ಬೆವರುವುದು ಅಥವಾ ಅನಿಯಮಿತ ಹೃದಯ ಬಡಿತ ಕಂಡುಬರುವುದು ಸೇರಿದಂತೆ ನಾನಾ…

Read More

‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ? – Kannada News | Did Dhurandhar’s Rehman Dakait character offered to Akkineni Nagarjuna first

ಬಾಲಿವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನೇ ಬರೆದಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ಅವರಷ್ಟೆ ಪ್ರಾಮುಖ್ಯತೆಯನ್ನು ಇತರೆ ಪಾತ್ರಗಳು ಸಹ ಪಡೆದುಕೊಂಡಿವೆ. ಅದರಲ್ಲೂ ರಹಮಾನ್ ಡಕೈತ್ ಪಾತ್ರವಂತೂ ಸೂಪರ್ ಹಿಟ್ ಆಗಿದೆ. ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ತಾವೇಕೆ ಬಾಲಿವುಡ್​ನ ಪ್ರತಿಭಾವಂತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಈ ಪಾತ್ರ ಮೊದಲಿಗೆ ದಕ್ಷಿಣದ ಸ್ಟಾರ್ ನಟನಿಗೆ ಆಫರ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ…

Read More

ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ 141 ರನ್ ಚಚ್ಚಿದ ರಾಹುಲ್ – Kannada News | KL Rahul’s Century Powers Karnataka in Ranji Semifinal vs Uttarakhand

ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ 2025-26 ರ ಆವೃತ್ತಿಯ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಇಂದಿನಿಂದ ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ, ಕರ್ನಾಟಕವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡವು ಕಳಪೆ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 5 ರನ್‌ಗಳಿಸಿ ಔಟಾದರು. ಆದಾಗ್ಯೂ, ಆ ಬಳಿಕ ಜೊತೆಯಾದ ನಾಯಕ ದೇವದತ್ ಪಡಿಕ್ಕಲ್ ಹಾಗೂ ರಾಹುಲ್ 200 ಕ್ಕೂ…

Read More

Chanakya Niti: ಉಚಿತವಾಗಿ ಪಡೆಯುವ ವಸ್ತುಗಳು ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತೆ ಗೊತ್ತಾ? – Kannada News | Chanakya Niti: Do you know how free things weaken a person?

ಪುಕ್ಕಟ್ಟೆ ಏನಾದ್ರೂ ಸಿಗುತ್ತೆ ಅಂದ್ರೆ ಅದನ್ನು ಪಡೆಯಲು ಜನ ನಾಮುಂದು ತಾ ಮುಂದು ಅಂತ ಧಾವಿಸ್ತಾರೆ. ಈ ರೀತಿ ಉಚಿತವಾಗಿ ಪಡೆಯುವುದು ಮನಸ್ಸಿಗೆ ಖುಷಿಯನ್ನು ನೀಡಬಹುದು, ಆದ್ರೆ ಇದು ವ್ಯಕ್ತಿಯನ್ನು ಕ್ರಮೇಣ ದುರ್ಬಲಗೊಳಿಸುತ್ತದೆ ಎಂದು ಆಚಾರ್ಯ ಚಾಣಕ್ಯರು (Acharya Chanakya) ಎಚ್ಚರಿಕೆ ನೀಡಿದ್ದಾರೆ. ಉಚಿತವಾಗಿ ಏನಾದ್ರೂ ಸಿಗುತ್ತಿದೆ ಅಂದ್ರೆ ಅದನ್ನು ಪಡೆಯುವುದರಲ್ಲಿ ತಪ್ಪೇನಿದೆ ಎಂದು ಹಲವರು ಭಾವಿಸಬಹುದು ಆದ್ರೆ ಉಚಿತವಾಗಿ ಪಡೆಯುವ ಏನಾದರೂ ಸರಿ ಅದು ಮನುಷ್ಯನ ಸ್ವಾಭಿಮಾನಕ್ಕೆ ಹಾನಿಯುಂಟು ಮಾಡುತ್ತದೆ ಎಂದಿದ್ದಾರೆ. ಹಾಗಿದ್ರೆ ಉಚಿತವಾಗಿ ಲಭಿಸುವ…

Read More

ಬೆಳಗಾವಿಯಲ್ಲಿ 400 ಕೋಟಿ ರೂ ದರೋಡೆ ಕೇಸ್​​ಗೆ ಟ್ವಿಸ್ಟ್​​​​​: SIT ವಿರುದ್ಧವೇ ಸ್ಫೋಟಕ ಆರೋಪ – Kannada News | 400 Cr Karnataka Goa Border Robbery: Sandeep Patil Demands Belagavi FIR, Doubts SIT Probe

400 ಕೋಟಿ ದರೋಡೆ ಪ್ರಕರಣImage Credit source: tv9 kannada ಬೆಳಗಾವಿ, ಫೆಬ್ರವರಿ 15: ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ನಡೆದಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣ (400 crore robbery case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೇಶವನ್ನೇ ದಂಗಾಗಿಸಿದ ಈ ದರೋಡೆ ನಡೆದು ದಿನಗಳು ಉರುಳಿದರು ಈವರೆಗೆ ಕಂಟೇನರ್​ಗಳು ಹೋಗಿದ್ದೆಲ್ಲಿಗೆ? ಕಂಟೇನರ್​ನಲ್ಲಿದ್ದ ಹಣ ಎಲ್ಲಿದೆ ಅನ್ನೋದು ರಿವೀಲ್ ಆಗಿಲ್ಲ. ಹೀಗಿರುವಾಗ ದೂರುದಾರ ಸಂದೀಪ್ ಪಾಟೀಲ್​​ ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆಯುವ ಮೂಲಕ ಎಫ್ಐಆರ್…

Read More

ಇತ್ತ ಪೊಲೀಸರ ಪರದಾಟ, ಅತ್ತ ಪರಪುರುಷನ ಜೊತೆ ಆಟ: ಆಂಟಿಯ ಮತ್ತಷ್ಟು ನೌಟಂಕಿ ಆಟ ಬಯಲು – Kannada News | Tumakuru lady Missing Lady Found With Boy friend: here Is Kunigal Priyanka case Timeline

ಹಾಸನ/ತುಮಕೂರು, (ಫೆಬ್ರವರಿ 15): ಕುಣಿಗಲ್​​ ಮೂಲದ ಪ್ರಿಯಾಂಕಾ ಮಿಸ್ಸಿಂಗ್ (Priyanka Missing Case) ಕಹಾನಿ ರೋಚಕ ತಿರುವು ಪಡೆದುಕೊಂಡಿದೆ. ಮದ್ವೆಗೆಂದು ಹಾಸನದ ಬೇಲೂರಿಗೆ ಬಂದಿದ್ದ ಪ್ರಿಯಾಂಕಾ, ಆತ್ಮಹತ್ಯೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಕೆರೆ ಬಳಿ ಬಟ್ಟೆ, ಬ್ಯಾಗ್, ಚಪ್ಪಲಿ ಪತ್ತೆಯಾಗಿತ್ತು. ಇದರಿಂದ ಮುಳುಗುತಜ್ಞರನ್ನು ಕರೆಸಿ ಕೆರೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಕೆರೆಯ ಪರಶೀಲನೆ ನಡೆಸಿದ್ದರು. ಆದ್ರೆ, ಅತ್ಯಾಚಾರವೂ ಇಲ್ಲ, ಕೊಲೆಯೂ ಅಲ್ಲ, ಮಳ್ಳಿಯ ಬೃಹನ್ನಾಟಕ ಬಯಲಾಗಿದೆ. ಪೊಲೀಸರು ಪ್ರಿಯಾಂಕಾಳ ಪತ್ತೆಗೆ…

Read More

IND vs PAK: ಪಾಕಿಸ್ತಾನವನ್ನು ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ 8 ವಿಕೆಟ್​ಗಳಿಂದ ಗೆದ್ದ ಭಾರತ – Kannada News | India Women Dominates Pakistan A by 8 Wickets; Vrinda Dinesh Shines in Asia Cup Win

2026 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಕೆಲವೇ ಗಂಟೆಗಳಲ್ಲಿ ಪಂದ್ಯ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಬ್ಯಾಂಕಾಕ್‌ನಲ್ಲಿ ನಡೆದ ಮಹಿಳಾ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ (Women’s Rising Stars Asia Cup) ಪಾಕಿಸ್ತಾನ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ಭಾರತ ಮಹಿಳಾ ತಂಡ ದಾಖಲೆಯ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಕೇವಲ 93 ರನ್​ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ತಂಡದ…

Read More

ಅಗ್ನಿಶಾಮಕ ಇಲಾಖೆ ಹುದ್ದೆಗಳ ಮರು ನಾಮಕರಣಕ್ಕೆ ಸರ್ಕಾರ ಅಸ್ತು: ಇನ್ಮುಂದೆ ಫೈರ್​ಮ್ಯಾನ್ ಅಲ್ಲ ಫೈರ್​​​ಫೈಟರ್ – Kannada News | Karnataka fire department: Fireman Renamed Fire Fighter; 10 percent Women Quota in Recruitment

ಅಗ್ನಿಶಾಮಕ (ಸಂಗ್ರಹ ಚಿತ್ರ)Image Credit source: google ಬೆಂಗಳೂರು. ಫೆಬ್ರವರಿ 15: ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಇನ್ಮುಂದೆ ‘ಫೈರ್‌ಮ್ಯಾನ್’ (Fireman) ಬದಲಿಗೆ ‘ಫೈರ್ ಫೈಟರ್’ (Fire Fighter) ಎಂದು ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸಭೆಯ ತೀರ್ಮಾನದಂತೆ ಕ್ರಮಕೈಗೊಳ್ಳಲಾಗಿದೆ. ಆ ಮೂಲಕ ಅಗ್ನಿಶಾಮಕ ಇಲಾಖೆಯ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಿದ್ಧತೆ ನಡೆದಿದೆ. ಆದೇಶದಲ್ಲೇನಿದೆ?  ಕೇಂದ್ರ ಗೃಹ…

Read More

Mahashivratri Fasting: ಈ 5 ವರ್ಗದ ಜನರು ಹಬ್ಬದ ದಿನದಂದು ಉಪವಾಸ ಮಾಡಲೇಬೇಡಿ – Kannada News | Safe Fasting: Mahashivratri Health Guide and Precautions, Who Should Avoid Upavasa?

ಉಪವಾಸ ಎಂದರೆ ಕೇವಲ ಊಟ ತ್ಯಜಿಸುವುದಲ್ಲ, ಅದು ಮನಸ್ಸನ್ನು ಶುದ್ಧಗೊಳಿಸಿ ದೇವರ ಧ್ಯಾನದಲ್ಲಿ ತೊಡಗುವ ಒಂದು ಆಧ್ಯಾತ್ಮಿಕ ವಿಧಾನ. ವಿಶೇಷವಾಗಿ ಮಹಾಶಿವರಾತ್ರಿ ದಿನ ಉಪವಾಸವನ್ನು ಅನೇಕರು ಭಕ್ತಿಯಿಂದ ಆಚರಿಸುತ್ತಾರೆ. ಆದರೆ ಭಕ್ತಿಯ ಜೊತೆಗೆ ಆರೋಗ್ಯದ ಬಗ್ಗೆ ಜಾಗರೂಕತೆಯೂ ಅತ್ಯಗತ್ಯ. ದೇಹ ಸಹಕರಿಸದಿದ್ದರೆ ಕಠಿಣ ಉಪವಾಸ ಮಾಡುವುದು ಸೂಕ್ತವಲ್ಲ. ಮಧುಮೇಹಿಗಳು: ಮಧುಮೇಹಿಗಳು ಊಟ ಮಾಡದೇ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಕುಸಿಯುವ (ಹೈಪೊಗ್ಲೈಸಿಮಿಯಾ) ಅಪಾಯವಿದೆ. ಇದು ತಲೆ ಸುತ್ತು, ಅಸ್ವಸ್ಥತೆ, ಗಂಭೀರ ಪರಿಸ್ಥಿತಿಯಲ್ಲಿ ಕೋಮಾಗೆ ಕಾರಣವಾಗಬಹುದು. ಆದ್ದರಿಂದ…

Read More