ಪ್ರತಿದಿನ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? – Kannada News | 5 Health Conditions That May Improve With Regular Beetroot Juice Intake
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕರ ಜೀವನಶೈಲಿಯತ್ತ ಹೆಜ್ಜೆಹಾಕುತ್ತಿದ್ದಾರೆ. ಆರೋಗ್ಯಕರ ಆಹಾರ ಆಯ್ಕೆ ಮಾಡುವುದು ಒಂದು ದೊಡ್ಡ ಸವಾಲಾಗಿದ್ದರೂ ಕೂಡ ನಾವು ಸೇವಿಸುವ ಆಹಾರಗಳ ಪೈಕಿ ಯಾವುದು ಆರೋಗ್ಯಕರ, ಅದನ್ನು ಯಾವ ರೀತಿ ಸೇವನೆ ಮಾಡುವುದರಿಂದ ಹೆಚ್ಚಿನ ಲಾಭ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇಂತಹ ಒಳ್ಳೆಯ ಆಹಾರಗಳ ಸಾಲಿನಲ್ಲಿ ಬೀಟ್‌ರೂಟ್ ಜ್ಯೂಸ್ ಕೂಡ ಒಂದು. ಇದು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ. ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ನೈಸರ್ಗಿಕ ನೈಟ್ರೇಟ್‌ಗಳಿಂದ ಸಮೃದ್ಧವಾಗಿರುವ ಬೀಟ್‌ರೂಟ್ ಜ್ಯೂಸ್ (Beetroot Juice) ದೇಹದ ಒಟ್ಟಾರೆ…