Headlines

ಇನ್​ಸ್ಟಾ, ಫೇಸ್​ಬುಕ್, ವಾಟ್ಸಾಪ್​ಗೆ ಪೇಡ್ ಸಬ್​ಸ್ಕ್ರಿಶನ್ಸ್ ಆರಂಭಿಸಲು ಮೆಟಾ ನಿರ್ಧಾರ; ತಿಂಗಳಿಗೆ ಎಷ್ಟಿರುತ್ತೆ ಚಂದಾದಾರಿಕೆ? – Kannada News | Meta announces subscription plans for Facebook, WhatsApp, Instagram premium service

ವಾಷಿಂಗ್ಟನ್, ಜೂನ್ 17: ಮೆಟಾ ಸಂಸ್ಥೆ ತನ್ನ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಕೆಗೆ ಹಣ ವಿಧಿಸಲು (Paid Subscriptions) ದಿಢೀರ್ ನಿರ್ಧಾರ ಮಾಡಿದೆ. ಮೆಟಾ ಕಂಪನಿಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದ ನವೋಮಿ ಗ್ಲೈಟ್ (Naomi Gleit) ಅವರು ಜಾಗತಿಕವಾಗಿ ಹೊಸ “ಪ್ಲಸ್” (Plus) ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಸಬ್​ಸ್ಕ್ರಿಪ್ಷನ್ ದರಗಳು ಈ ಕೆಳಕಂಡಂತಿವೆ: ಇನ್‌ಸ್ಟಾಗ್ರಾಮ್ ಪ್ಲಸ್ (Instagram Plus): ತಿಂಗಳಿಗೆ ಸುಮಾರು $3.99 (ಸುಮಾರು ₹377) ಫೇಸ್‌ಬುಕ್…

Read More

IND vs AFG: 22 ಬೌಂಡರಿ, 154 ರನ್..! ದಿಗ್ಗಜರ ದಾಖಲೆಗಳನ್ನು ಮುರಿದ ಶುಭ್​ಮನ್ ಗಿಲ್

ಶುಭ್​ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಏಕದಿನ ಶತಕ ಗಳಿಸಿದ್ದಾರೆ. ಲಕ್ನೋದ ಎಕಾನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, ಗಿಲ್ 77 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಅವರ ಒಂಬತ್ತನೇ ಏಕದಿನ ಶತಕವಾಗಿದ್ದು, ಈ ಶತಕದ ಮೂಲಕ ಗಿಲ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು (PC-PTI). ಈ ಶತಕದ ಇನ್ನಿಂಗ್ಸ್ ಮೂಲಕ ಗಿಲ್ ಭಾರತದಲ್ಲಿ ತಮ್ಮ 1,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದರು. ಕೇವಲ 19 ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡುವ…

Read More

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ: SIT ಮಧ್ಯಂತರ ವರದಿ ಬಹಿರಂಗಕ್ಕೆ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ – Kannada News | Dharmasthala Case: Punyakshetra Sanrakshana Samiti Urges Government to Release SIT Interim Report

ಬೆಂಗಳೂರು, ಜೂನ್​​ 17: ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala Case) ವಿರುದ್ಧ ಷಡ್ಯಂತ್ರ, ಅಪಪ್ರಚಾರ ಪ್ರಕರಣದಲ್ಲಿ ಅನೇಕರ ಚಾರಿತ್ರ್ಯ ಹನನವನ್ನು ನೋಡಿದ್ದೇವೆ. ಇಂದು ಷಡ್ಯಂತ್ರ ಹೊರ ಬಂದಿದೆ. ಅದೇ ರೀತಿ ರಾಜ್ಯದ ಬೇರೆ ಬೇರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ನಡೆದಿತ್ತು. ಬೇರೆ ಬೇರೆ ಮೂಲಗಳಿಂದ ಹಣದ ಬಂದಿತ್ತು. ನಾವು ಜನಾಗ್ರಹ ಸಭೆಗಳನ್ನು ಮಾಡುತ್ತೇವೆ. ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರದ ಬಳಿ ಹೋಗುತ್ತೇವೆ ಎಂದು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಮುಖ್ಯಾಂಶಗಳು ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ…

Read More

ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ಮೊದಲು ರಾಜೀನಾಮೆ ಕೊಡಿ; ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಸವಾಲು – Kannada News | Resign if you want to switch Sanjay Raut challenges rebel MPs of Uddhav Thackeray Shiv Sena

ನವದೆಹಲಿ, ಜೂನ್ 17: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೊಂದು ಬಿರುಕು ಮೂಡಲಿದೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಉದ್ಧವ್ ಠಾಕ್ರೆ ಬಣದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ (Sanjay Raut) ಇಂದು ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಬಂಡಾಯಗಾರರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. “ಪಕ್ಷಾಂತರ ಮಾಡಬೇಕೆಂಬ ಆಲೋಚನೆ ಇರುವವರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಲಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಯು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ…

Read More

Video: ಇದು ಟೆಕ್ನಾಲಜಿ ಎಫೆಕ್ಟ್; ಸ್ಮಾರ್ಟ್‌ ವಾಚ್‌ನಲ್ಲೇ ಕ್ಯೂಆರ್ ಕೋಡ್ ಅಳವಡಿಸಿಕೊಂಡ ಬೆಂಗಳೂರಿನ ಆಟೋ ಡ್ರೈವರ್‌ – Kannada News | Bengaluru: Auto driver receives money from passengers by showing QR code on smartwatch

ಬೆಂಗಳೂರು, ಜೂನ್ 17: ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಜನರು ಟೆಕ್ನಾಲಜಿಯನ್ನು ವಿಭಿನ್ನವಾಗಿ ಬಳಸುತ್ತಾರೆ. ಈ ಆಟೋ ಚಾಲಕನ ಐಡಿಯಾ ಮಾತ್ರ ವಿಭಿನ್ನವಾಗಿದೆ. ಹೌದು, ಆಟೋದಲ್ಲಿ ಸೀಟಿನ ಹಿಂದೆ ಕ್ಯೂಆರ್ ಕೋಡ್ ಸ್ಟಿಕ್ಕರ್ ಅಳವಡಿಸಿಕೊಂಡಿರುವುದನ್ನು ನೋಡಿರುತ್ತೀರಿ. ಆದರೆ ತನ್ನ ಆಟೋದಲ್ಲಿ ಡಿಜಿಟಲ್ ಪೇಮೆಂಟ್ ಗಾಗಿ ಹೊಸ ಐಡಿಯಾವನ್ನು ಕಂಡುಕೊಂಡಿದ್ದಾನೆ. ಬೆಂಗಳೂರಿನ (Bengaluru) ಈ ಆಟೋ ಚಾಲಕನ ಕೈಯಲ್ಲಿರುವ ಸ್ಮಾರ್ಟ್ ವಾಚ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಸ್ಮಾರ್ಟ್‌ವಾಚ್‌ನ ಸ್ಕ್ರೀನ್ ಮೇಲೆ ಕ್ಯೂಆರ್ ಕೋಡ್‌ನ್ನು ಅಳವಡಿಸಿಕೊಂಡಿದ್ದಾನೆ. ಈ ಪೋಸ್ಟ್ ಸದ್ಯ…

Read More

ಬೇರೆಯವರ ಖಾಸಗಿ ಚಿತ್ರ,ವಿಡಿಯೋ ಶೇರ್​ ಮಾಡಿದ್ರೆ ಕೇಸ್ ಫಿಕ್ಸ್: ಎಫ್ಐಆರ್ ಮಾರ್ಗಸೂಚಿ ಹೀಗಿದೆ – Kannada News | Karnataka police mandate FIRs in cases of non consensual sharing of intimate images, DG IGP Order Details

Dr. M. A. Saleem ಬೆಂಗಳೂರು, (ಜೂನ್ 17): ಬೇರೆಯವರ ಖಾಸಗಿ ಚಿತ್ರ, ವಿಡಿಯೋ ವೈರಲ್  ಮಾಡುವವರಿಗೆ ತಕ್ಕ ಶಾಸ್ತಿ ಮಾಡಲು ಗೃಹ ಇಲಾಖೆ ಮುಂದಾಗಿದೆ.  ವ್ಯಕ್ತಿಯ ಅನುಮತಿ ಪಡೆದುಕೊಳ್ಳದೆ ಅವರ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಪ್ರಕಟಿಸುವುದು ಕಾನೂನು ಪ್ರಕಾರ ಅಪರಾಧವಾಗಲಿದೆ. ಈ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ( DG-IGP Dr.M.A.Saleem) ಅವರು ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ, ವಿಸ್ತತವಾದ ಮಾರ್ಗಸೂಚಿಯನ್ನು ಹೊರಡಿಸಿದ್ದು, ಪೊಲೀಸರು ನಾನಾ ಕಾರಣಗಳನ್ನು ನೀಡಿ ಎಫ್‌ ಐ ಆರ್…

Read More

‘ಕಲ್ಕಿ 2’ ಚಿತ್ರದಲ್ಲಿ ಆಲಿಯಾ ಭಟ್, ಸಾಯಿ ಪಲ್ಲವಿ ನಟಿಸ್ತಾರಾ? ಉತ್ತರಿಸಿದ ನಿರ್ದೇಶಕ ನಾಗ್ ಅಶ್ವಿನ್ – Kannada News | Kalki 2898 AD director Nag Ashwin clarifies rumours on Alia Bhatt Sai Pallavi joining Kalki 2

‘ರೆಬೆಲ್ ಸ್ಟಾರ್’ ಪ್ರಭಾಸ್ ನಟನೆಯ, ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್ (Kalki 2) ಕುರಿತು ದಿನಕ್ಕೊಂದು ಹೊಸ ಗಾಸಿಪ್‌ಗಳು ಹುಟ್ಟಿಕೊಳ್ಳುತ್ತಿವೆ. ಚಿತ್ರದಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರನಡೆದ ಬಳಿಕ ಅವರ ಜಾಗಕ್ಕೆ ಆಲಿಯಾ ಭಟ್ (Alia Bhatt) ಅಥವಾ ಸಾಯಿ ಪಲ್ಲವಿ ಬರಲಿದ್ದಾರೆ ಎಂಬ ಬಲವಾದ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ವರ್ಷ…

Read More

ಮೇಲ್ಮನೆ ಮೇಲಾಟ: ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕರು – Kannada News | bjp expelled MLAs ST Somashekar And Shivaram Hebbar In Congress Camp at Resort ahead of MLC polls

ರಾಮನಗರ, (ಜೂನ್ 17): ವಿಧಾನ ಪರಿಷತ್ ಚುನಾವಣೆ (MLC polls) ನಾಳೆ ಅಂದರೆ ಜೂನ್ 18ರಂದು ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಕಣಕ್ಕಿಳ ಸಿದೆ. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾಪಟಿ ಜೋರಾಗಿದೆ….

Read More

Vasthu Tips: ಅಡುಗೆಮನೆಗೆ ಯಾವ ಬಣ್ಣ ಬಳಿಯಬೇಕು? ಅದೃಷ್ಟ ಬದಲಾಯಿಸಬಲ್ಲವು ಈ ಕಲರ್ಸ್! – Kannada News | Best Vastu Colors for Kitchen: Design for Harmony and Wellness at Home

ಅಡುಗೆಮನೆಗೆ ಯಾವ ಬಣ್ಣ ಬಳಕೆಯಾಗಬೇಕು?Image Credit source: Pinterest ಅಡುಗೆಮನೆಯು ಕೇವಲ ಅಡುಗೆ ಮಾಡುವ ಸ್ಥಳವಲ್ಲ, ಬದಲಿಗೆ ಇದು ಇಡೀ ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರ್ಧರಿಸುವ ಪ್ರಮುಖ ಕೋಣೆಯಾಗಿದೆ. ವಾಸ್ತು ಶಾಸ್ತ್ರದಲ್ಲಿ ಅಡುಗೆಮನೆಯನ್ನು ಮನೆಯ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅಡುಗೆಮನೆಗೆ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದರ ಜೊತೆಗೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಬಣ್ಣಗಳ ಆಯ್ಕೆಗೆ ವಿಶೇಷ ಗಮನ ನೀಡುವುದು ಅತ್ಯಗತ್ಯ. ವಾಸ್ತು ನಂಬಿಕೆಗಳ ಪ್ರಕಾರ, ಅಡುಗೆಮನೆಗೆ ಸೂಕ್ತವಾದ ಬಣ್ಣಗಳನ್ನು ಆರಿಸುವುದರಿಂದ ಮನೆಯಲ್ಲಿ ಸಂತೋಷ,…

Read More

ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ! – Kannada News | Bodybuilder Dies After Suddenly Collapsing; Son Passes Away Before Mother’s Eyes

ದಾವಣಗೆರೆ, ಜೂನ್​ 17: ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದು ಹೆಸರು ಮಾಡಿದ್ದ 26 ವರ್ಷದ ಯುವ ಬಾಡಿ ಬಿಲ್ಡರ್ (Bodybuilder) ಜಿಮ್​ನಿಂದ ಮನೆಗೆ ಬಂದ ಕೆಲ ಹೊತ್ತಲ್ಲೇ ದಿಢೀರ್​ ಕುಸಿದು ಬಿದ್ದು ಹೃದಯಾಘಾತದಿಂದ (heart attack) ಸಾವನ್ನಪ್ಪಿರುವಂತಹ ಆತಂಕಕಾರಿ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. ಸುಶೀಲಕುಮಾರ್​ ಮೃತ ಬಾಡಿ ಬಿಲ್ಡರ್​. ಸುಶೀಲಕುಮಾರ್​​ ಸಾವು ಸ್ನೇಹಿತರಿಗೆ ಅಚ್ಚರಿ​ ಮೂಡಿಸಿದೆ. ಕುಟುಂಬಸ್ಥರ ಮುಗಿಲು ಆಕ್ರಂದನ ಮುಟ್ಟಿದೆ. ಮುಖ್ಯಾಂಶಗಳು ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಯುವಕ ಹೃದಯಾಘಾತದಿಂದ ಸಾವು…

Read More