Category Archives: Blog

Your blog category

ದಿನ ಭವಿಷ್ಯ: ಇಂದು ಈ ರಾಶಿಯವರು ನಿಷ್ಠೆಯನ್ನು ಉಳಿಸಿಕೊಳ್ಳಲಾರರು – Kannada News | Horoscope May 22 Friday 2026; Dina Rashi Bhavishya Today, Checkout the details here

ಮೇಷ ರಾಶಿ :

ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ಕಛೇರಿಯಲ್ಲಿ ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ. ಒತ್ತಡದ ಕಾರಣ ವಿರಾಮವನ್ನೂ ಪಡೆಯಬಹುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ಕುಟುಂಬದ ಉಳಿದ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಅವರ ಸಂಪೂರ್ಣ ಬೆಂಬಲವೂ ಸಿಗಲಿದೆ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ವೃಷಭ ರಾಶಿ :

ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ವ್ಯವಹಾರಕ್ಕೆ ಬೇಕಾದ ಪ್ರಮುಖ ದಾಖಲೆಗಳು ಕಣ್ಮರೆಯಾಗಬಹುದು. ಪರಿಸ್ಥಿತಿ ಶೀಘ್ರದಲ್ಲೇ ನಿಮ್ಮ ಪರವಾಗಿ ಬದಲಾಗುತ್ತದೆ. ಧೈರ್ಯ ಮತ್ತು ಮನಸ್ಸಿಗೆ ಶಾಂತಿ ದೊರಕಲಿದೆ. ಇಲ್ಲವಾದರೆ ಪರಿಸ್ಥಿತಿಯು ಮತ್ತೇನೋ ಆಗುವುದು. ಕಚೇರಿಯಲ್ಲಿನ ಸೂಕ್ಷ್ಮ ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು.

ಮಿಥುನ ರಾಶಿ :

ನಿಮಗೆ ಅತೃಪ್ತಿಯ ಭಾವವು ಕಾಡಲಿದೆ. ಪಕ್ಕದರ ಪರಿಚಯವು ಸ್ನೇಹವಾಲಿದೆ. ನಿಮ್ಮ ಅಪಕ್ವತೆಯನ್ನು ತೋರಿಸುವುದು ಬೇಡ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಅಥವಾ ಸ್ಥಾನಮಾನ ಅಲ್ಲಗಳೆಯುವಿರಿ. ನಿಮ್ಮ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡುವರು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಕಛೇರಿಯಲ್ಲಿ ಸಂತೋಷದ ವಾತಾವರಣ ಇದ್ದು ನಿಮಗೆ ಕೆಲಸವನ್ನು ಮಾಡಲು ಅನುಕೂಲವಾಗುವುದು.

ಕರ್ಕಾಟಕ ರಾಶಿ :

ನಿಮಗೆ ಪ್ರಿಯವಾದದ್ದನ್ನು ಯಾರಿಂದಲಾದರೂ ಪಡೆದುಕೊಳ್ಳುವಿರಿ. ಬಹಳ ಕಾಲದಿಂದ ಮಾಡುತ್ತಿರುವ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಉದ್ವೇಗದಲ್ಲಿ ಇರುವಾಗ ಸುಮ್ಮನೆ‌ ಒಂದು ಕಡೆ ಕುಳಿತು ಶಾಂತರಾಗಿ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಗಳು ಕೂಡಲೇ ಫಲ ನೀಡಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಗೌರವದಿಂದ ವರ್ತಿಸಿ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು.

ಸಿಂಹ ರಾಶಿ :

ಸಂಶೋಧನೆ ಮಾಡುತ್ತಿರುವವರಿಗೆ ಪೂರಕ ಮಾಹಿತಿ. ಅನವಶ್ಯಕ ವೆಚ್ಚದಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಸಂಭವಿಸಬಹುದು, ಸಂಯಮ ಅಗತ್ಯ. ಅಧ್ಯಾತ್ಮದ ಬಗ್ಗೆ ಪರಿಚಿತರ ಬಳಿ ಸಂವಾದ ಮಾಡುವಿರಿ. ನೆಮ್ಮದಿಗಾಗಿ ಚಡಪಡಿಸುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸುವಿರಿ. ಯಾರಿಂದಲಾದರೂ ಮೋಸ ಹೋಗುವ ಸಾಧ್ಯತೆ ಇದೆ.

ಕನ್ಯಾ ರಾಶಿ:

ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳು ತಾನಾಗಿಯೇ ಬರಲಿವೆ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡಯುವಿರಿ. ಮನೆಯವರೊಂದಿಗೆ ಪ್ರವಾಸ ಹಾಗೂ ಬೇಕಾದ ವಸ್ತುಗಳ ಖರೀದಿಮಾಡುವಿರಿ. ಕಳಂಕರಹಿತ ವ್ಯವಹಾರವನ್ನು ಮಾಡುವಿರಿ. ಶಾಂತಿಯಿಂದ ಮುನ್ನಡೆಯಿರಿ. ನಿಮ್ಮ ಸಂಬಂಧವು ಮತ್ತಷ್ಟು ಆಪ್ತವಾಗಲು ಯೋಚಿಸುವಿರಿ. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದೇ ಕಲಹವಾಗುವುದು.

ತುಲಾ ರಾಶಿ:

ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವಿರಿ. ಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕಳೆದುಹೋದ ವಸ್ತುವಿನ ಮೌಲ್ಯವು ನಿಮಗೆ ಇಂದು ಗೊತ್ತಾಗದೇ ಹೋಗುವುದು. ಕಾರ್ಯಭಾರದಿಂದ ಕೆಲವೊಂದು ನಿರಾಶೆಗಳಾಗಬಹುದು, ಆದರೆ ದಿನದ ಕೊನೆಗೆ ಸಮಾಧಾನ ಸಿಗಲಿದೆ. ಆಸ್ತಿ ಸಂಬಂಧಿತ ವಿಚಾರದಲ್ಲಿ ಯಶಸ್ಸು ದೊರಕುವುದು. ಕೆಲವರನ್ನು ಹತ್ತಿರಕ್ಕಿಂತ‌ ದೂರದಲ್ಲಿದ್ದಾಗಲೇ ಚೆನ್ನಾಗಿ ತಿಳಿಯಬಹುದು.

ವೃಶ್ಚಿಕ ರಾಶಿ :

ಇಂದು ನಕಾರಾತ್ಮಕತೆಯ ವಿರುದ್ಧ ತೀವ್ರವಾದ ಹೋರಾಟ ಮಾಡುವಿರಿ. ನಿಮ್ಮ ಯೋಜನೆಯನ್ನು ಹೇಳಬಾರದ ಸ್ಥಿತಿಯಲ್ಲಿ ಹೇಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸುವಿರಿ. ಆರೋಗ್ಯದ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಬಹುದು. ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಒಳ್ಳೆಯ ಸ್ಥಾನ ಲಭ್ಯವಾಗಲಿದೆ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವನ್ನು ಸತತ ಪ್ರಯತ್ನದಿಂದ ಪೂರ್ಣಮಾಡುವಿರಿ.

ಧನು ರಾಶಿ :

ಉದ್ಯೋಗದಲ್ಲಿ ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ನಿಮಗೆ ಆಗದಿರುವುದನ್ನು ಬೇರೆಯವರಿಂದ ಮಾಡಿಸುವಿರಿ. ನಿಮ್ಮ ಕಾರ್ಯಕ್ಕೆ ಹಿರಿಯರಿಂದ ಮೆಚ್ಚುಗೆ ಸಿಗಬಹುದು. ವ್ಯಾಪಾರದ ತೊಂದರೆಗಳು ನಿಧಾನವಾಗಿ ಪರಿಹಾರ ಕಾಣುತ್ತವೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಸಿಕ್ಕ ಆದರದಿಂದ ಉತ್ಸಾಹವು ಬರಲಿದೆ. ನಿಮ್ಮ ಸಾವಧಾನತೆಯು ಕಿರಿಕಿರಿಯನ್ನು ಇತರರಿಗೆ ಕೊಟ್ಟೀತು.

ಮಕರ ರಾಶಿ :

ಇಂದು ನಿಮ್ಮ ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಪ್ರವಾಸವನ್ನು ಮಾಡಿ ಆನಂದಿಸುವಿರಿ. ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ನಿಮ್ಮನ್ನು ಅರಸಿಕೊಂಡ ಬರುವ ಗೌರವವೇ ನಿಜವಾದ ಸಮ್ಮಾನ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಯಾರದೋ ಅನುಭವವು ನಿಮ್ಮದಾಗದು.

ಕುಂಭ ರಾಶಿ :

ನಿಮ್ಮ ಮನಃಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ಯಾವುದೇ ಪರಿವರ್ತನೆಗೆ ಸಮಯವೂ ಅವಶ್ಯಕ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರುವುದು. ಆಸ್ತಿ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದಿರಿ. ಮನಸ್ಸಿನಲ್ಲಿ ಕೆಲವು ಗೊಂದಲಗಳು ಬರುವ ಸಾಧ್ಯತೆ ಇದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು.

ಮೀನ ರಾಶಿ :

ಸಣ್ಣ ವಿಷಯಗಳನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ಎದುರು ಮಾತನಾಡದೇ ಸುಮ್ಮನಿರಲಾಗದು. ಭವಿಷ್ಯದ ತುಂಬಾ ಆಲೋಚನೆಗಳನ್ನು ಮಾಡುವ ಅವಶ್ಯತೆ ಇಲ್ಲ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹದ ಸಂಭ್ರಮ ಮನೆಯಲ್ಲಿ ಇರುವುದು. ಗೌರವವನ್ನು ನಿರೀಕ್ಷಿಸದಿದ್ದರೂ ನಿಮಗೆ ಇಂದು ಲಭ್ಯವಾಗಲಿದೆ. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಗಂಡ, ಕರಣ : ಗರಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:21, ಯಮಗಂಡ ಕಾಲ 15:33 – 17:09, ಗುಳಿಕ ಕಾಲ 07:33 – 09:09

-ಲೋಹಿತ ಹೆಬ್ಬಾರ್-8762924271 (what’s app only)

Source link

GT vs CSK: ಸಿಎಸ್​ಕೆ ವಿರುದ್ಧ 89 ರನ್​ಗಳಿಂದ ಗೆದ್ದ ಗುಜರಾತ್‌; ಅಗ್ರಸ್ಥಾನದಲ್ಲಿ ಆರ್​ಸಿಬಿ ಸೇಫ್ – Kannada News | IPL 2026: GT Dominates CSK by 89 Runs, Secures 2nd Spot; Chennai Eliminated

ಐಪಿಎಲ್ 2026 (IPL 2026) ರ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ಪರಸ್ಪರ ಮುಖಾಮುಖಿಯಾಗಿದ್ದವು. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಲೀಗ್ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು 89 ರನ್​ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಂದರೆ ಹಾಲಿ ಚಾಂಪಿಯನ್‌ ಆರ್​ಸಿಬಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಟೈಟಾನ್ಸ್ ಮೂವರ ಅರ್ಧಶತಕದ ನೆರವಿನಿಂದ 229 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 140 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತು.

ಗುಜರಾತ್ ಬ್ಯಾಟಿಂಗ್ ಅಬ್ಬರ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 125 ರನ್ ಸೇರಿಸಿದರು. ಗಿಲ್ 37 ಎಸೆತಗಳಲ್ಲಿ 64 ರನ್ ಗಳಿಸಿದರೆ, ಸುದರ್ಶನ್ 53 ಎಸೆತಗಳಲ್ಲಿ 84 ರನ್ ಗಳಿಸಿ ಔಟಾದರು. ಇನ್ನಿಂಗ್ಸ್ ಅಂತ್ಯದ ವೇಳೆಗೆ, ಜೋಸ್ ಬಟ್ಲರ್ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 57 ರನ್ ಗಳಿಸಿದರು. ಈ ಮೂವರ ಅರ್ಧಶತಕದಿಂದಾಗಿ ಗುಜರಾತ್ 20 ಓವರ್‌ಗಳಲ್ಲಿ 229 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಸಿಎಸ್‌ಕೆ ಪರ ಸ್ಪೆನ್ಸರ್ ಜಾನ್ಸನ್, ಅನ್ಶುಲ್ ಕಾಂಬೋಜ್ ಮತ್ತು ಮುಖೇಶ್ ಚೌಧರಿ ತಲಾ 1 ವಿಕೆಟ್ ಪಡೆದರಾದರೂ ಯಾವುದೇ ಬೌಲರ್​ಗೆ ರನ್​ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಸಿಎಸ್​ಕೆ ಕಳಪೆ ಬ್ಯಾಟಿಂಗ್

230 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಆರಂಭ ಪಡೆಯಿತು. ಮೊದಲ ಓವರ್‌ನಲ್ಲೇ ಮೊಹಮ್ಮದ್ ಸಿರಾಜ್ ಸಂಜು ಸ್ಯಾಮ್ಸನ್ ಅವರನ್ನು 0 ರನ್‌ಗೆ ಔಟ್ ಮಾಡಿದರು. ನಂತರ, ರುತುರಾಜ್ ಗಾಯಕ್ವಾಡ್ ಮತ್ತು ಉರ್ವಿಲ್ ಪಟೇಲ್ ಕೂಡ ಸಿರಾಜ್ ಬೌಲಿಂಗ್‌ಗೆ ಬಲಿಯಾದರು. ಸಿರಾಜ್ ತನ್ನ ಮೊದಲ ಎರಡು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ ಸಿಎಸ್‌ಕೆ ಬೆನ್ನೆಲುಬನ್ನು ಮುರಿದರು. ಕಗಿಸೊ ರಬಾಡ ಮತ್ತು ರಶೀದ್ ಖಾನ್ ಕೂಡ ಅದ್ಭುತ ಬೌಲಿಂಗ್ ಮಾಡಿದರು. ರಬಾಡ ಮತ್ತು ರಶೀದ್ ಖಾನ್ ಕೂಡ ಮೂರು ವಿಕೆಟ್‌ಗಳನ್ನು ಪಡೆದರು.

GT vs CSK IPL 2026 Highlights: ಗುಜರಾತ್ ವಿರುದ್ಧ ಹೀನಾಯವಾಗಿ ಸೋತ ಸಿಎಸ್​ಕೆ

ಮತ್ತೊಂದೆಡೆ, ಶಿವಂ ದುಬೆ ಸಿಎಸ್​ಕೆ ಪರ ಏಕಾಂಗಿ ಹೋರಾಟ ನಡೆಸಿ 17 ಎಸೆತಗಳಲ್ಲಿ 47 ರನ್​ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಿಎಸ್​ಕೆ 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:24 pm, Thu, 21 May 26

Source link

ದರ್ಶನ್ ಜೊತೆ ಟೀ ಕುಡಿದು ಸುದ್ದಿಯಾಗಿದ್ದ ವಿಲ್ಸನ್ ಗಾರ್ಡನ್ ನಾಗ ಜೈಲಿನಿಂದ ರಿಲೀಸ್ – Kannada News | Rowdy sheeter Wilson garden naga who had tea with darshan released from Belagavi Jail

ಬೆಳಗಾವಿ, (ಮೇ 21):ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ (Darshan) ಜೊತೆ ಚಹಾ ಹೀರುತ್ತ ಧಮ್ ಹೊಡೆದು ಭಾರೀ ಸುದ್ದಿಯಾಗಿದ್ದ ವಿಲ್ಸನ್ ಗಾರ್ಡನ್ ನಾಗ (Wilson garden naga) ಜೈಲಿನಿಂದ ಬಿಡುಗಡೆಯಾಗಿದ್ದಾನೆ. ದರ್ಶನ್ ಜೊತೆ ಕೂತ ಜೈಲಿನಲ್ಲಿ ಮೋಜು ಮಸ್ತಿ ಮಾಡಿದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಹೀಗಾಗಿ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಜಾಮೀನು ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ಆದ್ರೆ, ದರ್ಶನ್ ಮಾತ್ರ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಗೆ ಮಂಗಳಸೂತ್ರವನ್ನು ತಾವೇ ವಿನ್ಯಾಸಗೊಳಿಸಿದ್ದ ನಟಿ ರಶ್ಮಿಕಾ ಮಂದಣ್ಣ – Kannada News | Rashmika Mandanna Vijay Deverakonda wedding Orange Saree and self designed Mangalsutra

ಟಾಲಿವುಡ್‌ನ ಸ್ಟಾರ್ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಕಳೆದ ಫೆಬ್ರವರಿ 26ರಂದು ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಕೆಲವು ತಿಂಗಳು ಕಳೆದರೂ ಈ ತಾರಾ ಜೋಡಿಯ ಮದುವೆಯ ಉಡುಪು, ಆಭರಣ ಮತ್ತು ಆಚರಣೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಇನ್ನೂ ನಿಂತಿಲ್ಲ. ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆಯ ಲುಕ್ ವಿನ್ಯಾಸಗೊಳಿಸಿದ್ದ ಪ್ರಸಿದ್ಧ ಸ್ಟೈಲಿಸ್ಟ್ ಪ್ರಿಯಾ ಮಗಂತಿ ಅವರು, ಮದುವೆಯ ದಿನ ರಶ್ಮಿಕಾ ಅವರ ವಿಶಿಷ್ಟ ಆಯ್ಕೆಗಳ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿರುವ ಪ್ರಿಯಾ ಮಗಂತಿ, ‘ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಮಂಗಳಸೂತ್ರವನ್ನು ತಾವೇ ಸ್ವತಃ ವಿನ್ಯಾಸಗೊಳಿಸಿದ್ದರು. ಇದು ಅವರ ವಿಭಿನ್ನ ಮತ್ತು ವಿಶಿಷ್ಟ ಅಭಿರುಚಿಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ. ಅಲ್ಲದೆ, ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತಮ್ಮ ಮದುವೆ ಬೇರೆ ಸೆಲೆಬ್ರಿಟಿಗಳ ಮದುವೆಯಂತೆ ಟ್ರೆಂಡ್‌ ಫಾಲೋ ಮಾಡಬಾರದು, ಬದಲಿಗೆ ಪ್ರತಿಯೊಂದು ಆಯ್ಕೆಯೂ ತಮ್ಮ ಮನಸ್ಸಿಗೆ ಹತ್ತಿರವಾಗಿರಬೇಕು ಅಂತ ಮೊದಲೇ ನಿರ್ಧರಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಕಿತ್ತಳೆ ಬಣ್ಣದ ಸೀರೆ ಆಯ್ಕೆ ಮಾಡಿದ್ದೇಕೆ?

ಸಾಮಾನ್ಯವಾಗಿ ಸೆಲೆಬ್ರಿಟಿ ವಧುಗಳು ತಮ್ಮ ಮದುವೆಗೆ ಕೆಂಪು, ಬಿಳಿ ಅಥವಾ ಇನ್ನಿತರ ಬಣ್ಣದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಶ್ಮಿಕಾ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ಕಿತ್ತಳೆ ಬಣ್ಣದ ಸೀರೆಯನ್ನು ಉಡಲು ಬಯಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಕೂಡ ಪ್ರಿಯಾ ಅವರು ಮಾತನಾಡಿದ್ದಾರೆ.

‘ಮದುವೆಯ ಸೀರೆಗೆ ಕಿತ್ತಳೆ ಬಣ್ಣ ಅಷ್ಟಾಗಿ ಬಳಸದ ಕಾರಣ, ಹಲವು ಪ್ರಮುಖ ಡಿಸೈನರ್​ಗಳು ರಶ್ಮಿಕಾಗೆ ಕೆಂಪು ಅಥವಾ ಬಿಳಿ ಬಣ್ಣದ ಸೀರೆ ಉಡುವಂತೆ ಸಲಹೆ ನೀಡಿದ್ದರು. ಆದರೆ ರಶ್ಮಿಕಾ ಮಾತ್ರ ಕಿತ್ತಳೆ ಬಣ್ಣಕ್ಕೇ ಪಟ್ಟು ಹಿಡಿದಿದ್ದರು. ಆಗ ನಾನು ಅವರಿಗೆ ಧೈರ್ಯ ತುಂಬಿ, ಬೇರೆಯವರ ಮಾತನ್ನು ಕೇಳಬೇಡಿ, ನಿಮ್ಮ ಮನಸ್ಸಿಗೆ ಅನಿಸಿದ್ದನ್ನೇ ಮಾಡಿ ಎಂದು ಹೇಳಿದೆ. ಅದರಂತೆ ಅವರು ಕಿತ್ತಳೆ ಬಣ್ಣದ ಸೀರೆಯಲ್ಲಿಯೇ ಮಿಂಚಿದರು’ ಎಂದು ಪ್ರಿಯಾ ಅವರು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ಇಂಟರ್ನೆಟ್‌ನಲ್ಲಿ ಯಾವುದು ಟ್ರೆಂಡ್ ಆಗುತ್ತಿದೆ ಎನ್ನುವುದಕ್ಕಿಂತ, ತಮಗೆ ಯಾವುದು ಸಂತೋಷ ನೀಡುತ್ತದೆ ಎಂಬದಕ್ಕೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆದ್ಯತೆ ನೀಡಿದ್ದರು ಎಂದು ವೆಡ್ಡಿಂಗ್ ಪ್ಲಾನರ್ ತಂಡದ ಪ್ರಿಯಾ ಹೇಳಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ರಣಬಾಲಿ’ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಳ್ಳಾರಿಯಲ್ಲಿ ಲಾಡ್ಜ್ ಮಾತ್ರವಲ್ಲ ಮನೆಗಳಲ್ಲೂ ವೇಶ್ಯಾವಾಟಿಕೆ: 8 ಮಹಿಳೆಯರ ರಕ್ಷಣೆ

ಬಳ್ಳಾರಿ, ಮೇ 21: ವಿವಿಧ ಏರಿಯಾಗಳಲ್ಲಿ ನಡೆದಿದ್ದ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸತ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧಿನಗರ, ಎಪಿಎಂಸಿ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಏಕಕಾಲದಲ್ಲಿ ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ದಂಧೆಯಲ್ಲಿ ತೊಡಗಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ 8 ಮಹಿಳಾ ಸಂತ್ರಸ್ತೆಯರನ್ನು ರಕ್ಷಣೆ ಮಾಡಲಾಗಿದೆ. ಗಾಂಜಾ, ಇಸ್ಪೀಟ್ ದಂಧೆಯಂತೆ ವೇಶ್ಯಾವಾಟಿಕೆಯೂ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

GT vs CSK: ಸತತ 5ನೇ ಅರ್ಧಶತಕ; ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್ – Kannada News | Sai Sudharsan’s IPL Record: Fifth Consecutive 50 and Orange Cap Race Lead

ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸುದರ್ಶನ್ 84 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಸದರ್ಶನ್ ಅವರ ಸತತ ಐದನೇ ಅರ್ಧಶತಕವಾಗಿದ್ದು, ಈ ಮೂಲಕ ಅವರು ಐಪಿಎಲ್‌ನಲ್ಲಿ ಏಳು ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸುದರ್ಶನ್​ಗೂ ಮೊದಲು, 2012 ರ ಐಪಿಎಲ್​ನಲ್ಲಿ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದರು. ಅವರ ನಂತರ, ಜೋಸ್ ಬಟ್ಲರ್ 2018 ರಲ್ಲಿ ಈ ಸಾಧನೆ ಮಾಡಿದರೆ, ಡೇವಿಡ್ ವಾರ್ನರ್ 2019 ರಲ್ಲಿ ಈ ಸಾಧನೆ ಮಾಡಿದ್ದರು. ಸಾಯಿ ಸುದರ್ಶನ್ ಈ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸುದರ್ಶನ್, 2024 ರ ಐಪಿಎಲ್​ನಲ್ಲಿ 527 ರನ್ ಬಾರಿಸಿದರೆ, ಐಪಿಎಲ್ 2025 ರಲ್ಲಿ 759 ರನ್ ಕಲೆಹಾಕಿದ್ದರು. ಈಗ ಈ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 638 ರನ್ ಗಳಿಸಿದ್ದಾರೆ. ಸುದರ್ಶನ್ ಈ ಸೀಸನ್​ನಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಪ್ರಕ್ರಿಯೆ ಚುರುಕು, ಮಹತ್ವದ ಬದಲಾವಣೆಯ ಸುಳಿವು ಕೊಟ್ಟ ಉಸ್ತುವಾರಿ – Kannada News | Karnataka BJP in charge radha mohan das Agarwal Hints Major Change In State Party, here Is Details of What happening

ಬೆಂಗಳೂರು, (ಮೇ 21): ಕರ್ನಾಟಕದಲ್ಲಿ (karnataka) ಮತ್ತೆ ಉಪಚುನಾವಣೆ ಮತ್ತು ಜಿಬಿಎ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ನಾಯಕತ್ವ ವಿಚಾರದಲ್ಲಿ ಸ್ಪಷ್ಟತೆ ನೀಡಲು ಬಿಜೆಪಿ (BJP) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಗೆ ಅಂತಿಮ ಪ್ರಕ್ರಿಯೆ ‌ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಆಯ್ದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮೊದಲು ಸಭೆ ನಡೆಸಿದ ಶಿವಪ್ರಕಾಶ್ ಮತ್ತು ಪಾಂಡಾ ನಂತರ ಆಯ್ದ ಮುಖಂಡರ ಜೊತೆ ಪ್ರತ್ಯೇಕ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಮಹತ್ವ ಬದಲಾವಣೆಯಾಗುವ ಬಗ್ಗೆ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಸುಳಿವು ಕೊಟ್ಟಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬೀಸಿತು ಬದಲಾವಣೆಯ ಗಾಳಿ
  • ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಯ ಪ್ರಕ್ರಿಯೆ ಚುರುಕು
  • ರಾಜ್ಯ ಬಿಜೆಪಿಯ ಆಯ್ದ ಪ್ರಮುಖರ ಅಭಿಪ್ರಾಯವನ್ನು ಆಲಿಸಿದ ವರಿಷ್ಠರು
  • ಕರ್ನಾಟಕ ಬಿಜೆಪಿಯಲ್ಲಿ ಮಹತ್ವ ಬದಲಾವಣೆ ಸುಳಿವು ಕೊಟ್ಟ ಉಸ್ತುವಾರಿ

ಸುಮಾರು 35 ಆಯ್ದ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಇಂದಿನ ಸಭೆಗೆ ವರಿಷ್ಠರಿಂದಲೇ ಆಹ್ವಾನ ನೀಡಲಾಗಿತ್ತು. ಎಲ್ಲರೂ ಒಟ್ಟಾಗಿ ಹೋಗಿ ಎನ್ನುವ ಮೂಲಕ ಸಭೆಯಲ್ಲಿ ಪರೋಕ್ಷವಾಗಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದುವರಿಕೆ ಬಗ್ಗೆ ಹೈಕಮಾಂಡ್ ನಾಯಕರ ಸುಳಿವು ನೀಡಿದ್ದಾರೆ. ಹಾಲಿ ರಾಜ್ಯಾಧ್ಯಕ್ಷರು ಮುಂದುವರಿಯಬೇಕೋ ಬೇಡವೋ, ಬದಲಾವಣೆ ಮಾಡುವುದಾದರೆ ಯಾರನ್ನು ಮಾಡಬೇಕು ಎಂದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಕೂಡಾ ಶೀಘ್ರ ರಾಜ್ಯಾಧ್ಯಕ್ಷರ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ ರಾಜಣ್ಣ: ಹಿರಿಯೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು, ಉಪಚುನಾವಣೆ ಅಖಾಡಕ್ಕೆ ರಂಗು

ಮಹತ್ವದ ಬದಲಾವಣೆ ಸುಳಿವು ಕೊಟ್ಟ ಉಸ್ತುವಾರಿ

ಪಕ್ಷದ ನಾಯಕರು ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ದೆಹಲಿ ನಾಯಕರು ಇಲ್ಲಿಗೆ ಬರಬೇಕಾಗಿಲ್ಲ.
ನಾನೇ ಮಾಹಿತಿ ಕೊಡಬಹುದು. ನಾನು ಅಧ್ಯಕ್ಷರ ಕಾರ್ಯಕರ್ತ ಅಲ್ಲ, ಪಕ್ಷದ ಕಾರ್ಯಕರ್ತ. ಕೆಲವೇ ದಿನಗಳಲ್ಲಿ ಅಧ್ಯಕ್ಷರ ಹೆಸರು ಘೋಷಣೆ ಮಾಡುತ್ತೇವೆ . ಹೊಸ ಟೀಂ ಬರುತ್ತದೆ. ಕೆಲಸ ಮಾಡದವರು ಬದಲಾಗುತ್ತಾರೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದ್ದಾರೆ.

ಕೋರ್ ಕಮಿಟಿಯಲ್ಲಿ ಯಾರು ಇರುತ್ತಾರೆ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.ಅಧ್ಯಕ್ಷ ಈಗ ಇರುವವರು ಅಧ್ಯಕ್ಷರು ಅಷ್ಟೇ. ಮುಂದುವರಿಕೆ, ಹೊಸಬರು ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನೌಕರರ ರೀತಿ ಯಾವುದೇ ಟೈಂ ಬಾಂಡ್ ಇರಲ್ಲ. ಈಗಿರುವ ಅಧ್ಯಕ್ಷ ಪವರ್ ಫುಲ್, ಹೊಸ ಅಧ್ಯಕ್ಷರಿಗೂ ಅಷ್ಟೇ ಪವರ್ ಇರುತ್ತದೆ. ಯಾರು ಅಧ್ಯಕ್ಷರಾಗುತ್ತಾರೋ ಅವರ ಅಧ್ಯಕ್ಷತೆಯಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಮೂರು ವರ್ಷದ ಅವಧಿ ಎಂದು ಇಲ್ಲ. ಗರಿಷ್ಠ ಎರಡು ಅವಧಿಗೆ ಆಯ್ಕೆ ಮಾಡಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.

ಇಂದಿನ ಅಭಿಪ್ರಾಯ ಸಂಗ್ರಹದಲ್ಲಿ ಬಹುತೇಕ ವಿಜಯೇಂದ್ರ ಪರವಾಗಿಯೇ ಸಲ್ಲಿಕೆಯಾಗಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೆ ವರದಿ ಸಲ್ಲಿಕೆಯಾಗಲಿದೆ. ಬಹುತೇಕ ಜೂನ್ ತಿಂಗಳಿನಲ್ಲಿ ಅಧ್ಯಕ್ಷ ಸ್ಥಾನದ ಘೋಷಣಾ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!

ನವದೆಹಲಿ, ಮೇ 21: ಬಿಹಾರದ ಮೋತಿಹಾರಿಯಲ್ಲಿ ದಂಪತಿಯ ನಡುವಿನ ಕೌಟುಂಬಿಕ ಕಲಹವು ತಾರಕಕ್ಕೇರಿದ್ದು, ಪತಿ ತನ್ನ ಹೆಂಡತಿಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾನೆ. ಪೊಲೀಸರು ಮತ್ತು ಆ ಮಹಿಳೆಯ ತಂದೆ ಸ್ಥಳಕ್ಕೆ ಬಂದಾಗ, ಇಡೀ ಗ್ರಾಮವನ್ನೇ ದಿಗ್ಭ್ರಮೆಗೊಳಿಸುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತು. ಹೆಂಡತಿಯೊಂದಿಗಿನ ಭಿನ್ನಾಭಿಪ್ರಾಯದಿಂದ ವ್ಯಕ್ತಿ ತನ್ನ ಹೆಂಡತಿಯನ್ನು ಕಂಬಕ್ಕೆ ಕಟ್ಟಿಹಾಕಿದ್ದಾನೆ. “ಅವಳು ಓಡಿಹೋಗುತ್ತಲೇ ಇರುತ್ತಾಳೆ. ಆದ್ದರಿಂದ ನಾನು ಅವಳನ್ನು ಕಟ್ಟಿ ಹಾಕಿದೆ” ಎಂದು ಆತ ಹೇಳಿದ್ದಾನೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಬುಡಸಮೇತ ರಸ್ತೆ ಮೇಲೆ ಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್! – Kannada News | Bengaluru Rains: Huge Tree Falls on Road, Sankaramatha Road Closed

ಬೆಂಗಳೂರು, ಮೇ 21: ಭಾರೀ ಗಾಳಿ ಮಳೆಯಿಂದಾಗಿ ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಂಕರಮಠ ರಸ್ತೆಯಲ್ಲಿ ಬುಡಸಮೇತ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಮರ ಬಿಳ್ಳುವ ವೇಳೆ ರಸ್ತೆ ಬಹುತೇಕ ಖಾಲಿ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಆದರೆ ಒಂದು ಕಾರು ಮರದ ಕೆಳಗೆ ಸಿಲುಕಿ ಜಖಂಗೊಂಡಿದೆ. ಎರಡು ಭಾಗದ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸದ್ಯ ಜಿಬಿಎ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಒಂದು ಗಂಟೆಗೂ ಹೆಚ್ಚು ಕಾಲ ಬೇಕಾಗಲಿದೆ. ಇದೇ ವೇಳೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಬಳಿ ಫ್ಲೈಓವರ್ ಮೇಲೆ ಬೃಹತ್ ಮರ ಬಿದ್ದು ಚಲಿಸುತ್ತಿದ್ದ ಎರಡು ಕಾರುಗಳು ಜಖಂಗೊಂಡಿವೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮೆಜೆಸ್ಟಿಕ್ ಕಡೆಗೆ ಹೋಗುವ ರಸ್ತೆ ಬಂದ್ ಆಗಿದ್ದು, ರಾಜಿನಗರ ಪೊಲೀಸರು ಮತ್ತು ಜಿಬಿಎ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರಿ ಗಾಳಿ ಮಳೆಯಿಂದ ಅರ್ಧದಲ್ಲೇ ನಿಂತ ಮೆಟ್ರೋ, ಸಂಚಾರದಲ್ಲಿ ವ್ಯತ್ಯಯ – Kannada News | Metal sheets from nearby structures fall on Namma Metro tracks, disrupt train services amid gusty winds And rains

ಬೆಂಗಳೂರು, (ಮೇ 21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಂದು  ಸುರಿದ ಮಳೆಯು (Bengaluru rainss) ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ದೈನಂದಿನ ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಹೌದು… ಇಂದು (ಮೇ 21) ಸಂಜೆ ಭಾರೀ ಗಾಳಿ ಮಳೆಯಿಂದಾಗಿ ಬೆಂಗಳೂರು (Bengaluru) ಮೆಟ್ರೋ ರೈಲು ನಿಗಮ ವ್ಯಾಪ್ತಿಯ ಹಸಿರು ಮತ್ತು ನೇರಳೆ ಸೇರಿದಂತೆ ಎಲ್ಲಾ ಪ್ರಮುಖ ಮೆಟ್ರೋ ಮಾರ್ಗಗಳ ರೈಲು ಸೇವೆಗಳಲ್ಲಿ ವಿಳಂಬ ಉಂಟಾಗಿದೆ.  ಇದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದು. ಈ ಬಗ್ಗೆ ಬಿಎಂಆರ್​​​​ಸಿಎಲ್  (BMRCL) ವಿಶೇಷ ಮನವಿ ಮಾಡಿಕೊಂಡಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಭಾರಿ ಗಾಳಿ ಮಳೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
  • ಇಂದು ಸಂಜೆ ಸುರಿದ ಮಳೆಗೆ ಎಲ್ಲಾ ಮೆಟ್ರೋ ಮಾರ್ಗಗಳ ರೈಲು ಸಂಚಾರದಲ್ಲಿ ವ್ಯತ್ಯಯ
  • ಅನಾನುಕೂಲತೆಗೆ ವಿಷಾದಿಸ್ತೇವೆ ಎಂದ ಬಿಎಂಆರ್​ಸಿಎಲ್

ಬಿಎಂಆರ್​​ಸಿಎಲ್ ಮಾಧ್ಯಮ ಪ್ರಕಟಣೆ

ಘಟನೆಗೆ ಸಂಬಂಧಿಸಿದಂತೆ ತುರ್ತು ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌, ಭಾರೀ ಗಾಳಿ ಹಾಗೂ ಮಳೆಯಿಂದಾಗಿ ಎಲ್ಲಾ ಮೆಟ್ರೋ ಮಾರ್ಗಗಳ ಸೇವೆಯಲ್ಲಿ ವಿಳಂಬ ಉಂಟಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನಾನುಕೂಲತೆಗೆ ವಿಷಾಧಿಸುತ್ತೇವೆ. ಸುರಕ್ಷಿತವಾಗಿ ರೈಲುಗಳನ್ನು ಕಾರ್ಯಾಚರಣೆ ಮಾಡಬೇಕಿರುವುದರಿಂದ ವೇಳಾಪಟ್ಟಿಯಲ್ಲಿ ಕೊಂಚ ಏರುಪೇರಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಿದೆ.

ಮೇ 24ರಂದು 1 ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ

ಇನ್ನು ಇದೇ ಮೇ 24ರಂದು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ನಮ್ಮ ಮೆಟ್ರೋ ಸೇವೆ ಇರಲಿದೆ. ಭಾನುವಾರ ಯುಪಿಎಸ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಆರಂಭಿಸಲಾಗುತ್ತಿದೆ. ಬೆಳ್ಳಿಗ್ಗೆ 7 ಗಂಟೆ ಬದಲಾಗಿ 6 ಗಂಟೆಯಿಂದಲೇ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾಗಿದೆ.

ನೇರಳೆ ಮಾರ್ಗದ ವೈಟ್ ಫೀಲ್ಡ್ ಟು ಚೆಲ್ಲಘಟ್ಟ, ಹಸಿರು‌ ಮಾರ್ಗದ ಮಾದವಾರ ಟು ಚೆಲ್ಲಘಟ್ಟ, ಹಳದಿ‌ ಮಾರ್ಗದ ಆರ್ ವಿ ರೋಡ್ ಟು ಬೊಮ್ಮಸಂದ್ರ ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಭಾನುವಾರ ಆರು ಗಂಟೆಯಿಂದಲೇ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link