Category Archives: Blog

Your blog category

‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’; ಹರಾಮ್ ವಿಷಯದಲ್ಲಿ ಝೈದ್ ಖಾನ್ ಖಡಕ್ ತಿರುಗೇಟು – Kannada News | Zaid Khan on ‘Cult’ Movie, Haram Controversy and Religion: Actor’s Bold Stance Ahead of Jan 23 Release

ನಟ ಝೈದ್ ಖಾನ್ ಅವರು ‘ಕಲ್ಟ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​​​ನಲ್ಲಿ ಝೈದ್ ಖಾನ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಶೇಡ್​​​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಝೈದ್ ಖಾನ್ ಅವರಿಗೆ ಹರಾಮ್ ವಿಷಯದ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’ ಎಂದು ನೇರಮಾತುಗಳಲ್ಲಿ ಹೇಳಿದ್ದಾರೆ.

ಝೈದ್ ಖಾನ್ ಅವರು ಮುಸ್ಲಿಂ ಧರ್ಮದವರು. ಆದರೆ, ಅವರು ಎಲ್ಲಾ ಧರ್ಮಕ್ಕೂ ಸಮಾನ ಆದ್ಯತೆ ನೀಡುತ್ತಾರೆ. ಅವರ ಮೊದಲ ಸಿನಿಮಾ ‘ಬನಾರಸ್’ ಕಾಶಿ ಭಾಗದಲ್ಲಿ ಶೂಟ್ ಆಗಿದೆ. ಇತ್ತೀಚೆಗೆ ‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಇದನ್ನು ಅವರ ಧರ್ಮದವರು ಪ್ರಶ್ನೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ನಾನು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತೇನೆ’ ಎಂದಿದ್ದಾರೆ.

ಆ ಬಳಿಕ ಝೈದ್ ಖಾನ್ ಅವರಿಗೆ ಹರಾಮ್ ಬಗ್ಗೆ ಪ್ರಶ್ನೆ ಎದುರಾಯಿತು. ‘ಕುರಾನ್ ಅಲ್ಲಿ ಮದ್ಯ ಸೇವನೆ ಮಾಡಬಾರದು, ಹಿಂಸಾಚಾರ ಮಾಡಬಾರದು ಎಂದೆಲ್ಲ ಇದೆ. ಅದೆಲ್ಲ ಹರಾಮ್. ಆದರೆ, ಸಿನಿಮಾದಲ್ಲಿ ಅದನ್ನೇ ತೋರಿಸಿದ್ದೀರಿ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ನಟನೆಯನ್ನು ನಟನೆಯಾಗಿ ಮಾತ್ರ ನೋಡುತ್ತೇನೆ. ಅದಕ್ಕೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬಾರದು’ ಎಂದರು.

ಇದನ್ನೂ ಓದಿ: ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್

ಆ ಬಳಿಕ ಮತ್ತೆ ಇದೇ ವಿಷಯವಾಗಿ ಪ್ರಶ್ನೆಗಳು ಎದುರಾದವು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ಸತ್ತ ಮೇಲೆ ನಾನು ದೇವರಿಕೆ ಲೆಕ್ಕ ಕೊಟ್ಟುಕೊಳ್ಳುತ್ತೇನೆ’ ಎಂದರು. ಅವರ ಉತ್ತರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.
ಝೈದ್ ಖಾನ್ ಅವರ ಕಲ್ಟ್ ಸಿನಿಮಾ ಜನವರಿ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಝೈದ್ ಜೊತೆ ರಂಗಾಯಣ ರಘು, ಮಲೈಕಾ ವಾಸುಪಾಲ್, ರಚಿತಾ ರಾಮ್, ಅಚ್ಯುತ್ ಕುಮಾರ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vande Bharat Sleeper Train: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ – Kannada News | PM Narendra Modi Flags Off India’s First Vande Bharat Sleeper Train Today

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್​ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಚಾಲನೆ ನೀಡುತ್ತಿದ್ದಾರೆ. ಈ ರೈಲು ಹೌರಾ ಮತ್ತು ಗುವಾಹಟಿ ನಡುವೆ ಸಂಚರಿಸಲಿದೆ. ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ರಾತ್ರಿ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಪೂರ್ಣ ಹವಾನಿಯಂತ್ರಿತ ರೈಲು ಆಗಿದೆ. ಅಸ್ತಿತ್ವದಲ್ಲಿರುವ ವಂದೇ ಭಾರತ್ ಚೇರ್ ಕಾರ್ ಸೇವೆಗಳಿಗಿಂತ ಭಿನ್ನವಾಗಿ, ಈ ಆವೃತ್ತಿಯು ದೀರ್ಘ ಪ್ರಯಾಣದ ಸಮಯಕ್ಕೆ ಅಗತ್ಯವಾದ ಸೌಕರ್ಯವನ್ನು ಕೇಂದ್ರೀಕರಿಸುತ್ತದೆ. ಮೆತ್ತನೆಯ ಬರ್ತ್‌ಗಳು, ಸೌಂಡ್ ಪ್ರೂಫ್ ಬರ್ತ್​​ನೊಂದಿಗೆ 11 ಎಸಿ 3-ಟೈರ್ ಕೋಚ್‌ಗಳು, 4 ಎಸಿ 2-ಟೈರ್ ಕೋಚ್‌ಗಳು, 1 ಎಸಿ 1ಟೈರ್ ಕೋಚ್ ಅನ್ನು ಈ ರೈಲು ಒಳಗೊಂಡಿರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Devotion: ದೇವಸ್ಥಾನಕ್ಕೆ ಯಾವ ಹಣ್ಣು ತೆಗೆದುಕೊಂಡು ಹೋಗುವುದು ಶುಭ? – Kannada News | The Spiritual Significance of Fruit Offerings in Hindu Devotion

ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗೆ ತೆರಳಿದಾಗ, ಗುರುಗಳನ್ನು, ಪುಟ್ಟ ಮಕ್ಕಳನ್ನು, ಬಂಧುಗಳನ್ನು, ವೃದ್ಧರನ್ನು ಅಥವಾ ಅನಾರೋಗ್ಯ ಪೀಡಿತರನ್ನು ನೋಡಲು ಹೋದಾಗ ಕೈಯಲ್ಲಿ ಹಣ್ಣು ಅಥವಾ ಇತರ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವ ಸಂಪ್ರದಾಯವಿದೆ. ಇದು ನಮ್ಮ ಸಂಸ್ಕೃತಿಯ ಪರಂಪರೆಯಾಗಿದೆ. ದೇವಸ್ಥಾನಗಳಿಗೆ ಭೇಟಿ ನೀಡಿದಾಗ, ನಿಮ್ಮ ಇಷ್ಟ ದೈವರು ಅಥವಾ ಕುಲದೈವರೇ ಆಗಿರಲಿ, ಅಲ್ಲಿ ಭಕ್ತಿ ಮತ್ತು ಭಾವನೆ ಪ್ರಮುಖವಾಗಿದೆ. ದೇವರು ಸರ್ವಾಂತರಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿದ್ದಾನೆ. ಆದರೆ, ನಿರ್ದಿಷ್ಟ ಹಣ್ಣುಗಳನ್ನು ದೇವರಿಗೆ ಅರ್ಪಿಸುವುದರಿಂದ ನಿರ್ದಿಷ್ಟ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ದೇವಸ್ಥಾನಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಮತ್ತು ಇತರ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದು ಸಾಮಾನ್ಯ. ಈ ಹಣ್ಣುಗಳ ಅರ್ಪಣೆಯಿಂದ ದೊರೆಯುವ ಫಲಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬಾಳೆಹಣ್ಣು:

ಬಾಳೆಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಮತ್ತು ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಬಾಳೆಹಣ್ಣು ಗುರುಗಳಿಷ್ಟವಾದ ಹಣ್ಣು ಎಂದು ಸಹ ಹೇಳಲಾಗುತ್ತದೆ.

ತೆಂಗಿನಕಾಯಿ:

ತೆಂಗಿನಕಾಯಿಗೆ ಹಲವು ವ್ಯಾಖ್ಯಾನಗಳಿವೆ. ಇದನ್ನು ನಮ್ಮ ಅಹಂ ಅನ್ನು ಭಗವಂತನಿಗೆ ಅರ್ಪಿಸುವುದರ ಸಂಕೇತವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿ ಕಲ್ಪವೃಕ್ಷವಿದ್ದಂತೆ. ಇದನ್ನು ಅರ್ಪಿಸುವುದರಿಂದ ಹೊಸ ಯೋಜನೆಗಳಿಗೆ ಸ್ಪಷ್ಟ ಆಲೋಚನೆಗಳು ದೊರೆಯುತ್ತವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಶುಭವಾಗುತ್ತದೆ, ವೃತ್ತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಅಲ್ಲದೆ, ಅಧಿಕಾರಿಗಳೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತವೆ ಮತ್ತು ನಿಮ್ಮ ಯೋಜನೆಗಳಿಗೆ ಮನ್ನಣೆ ಸಿಗುತ್ತದೆ.

ಸೇಬು:

ಸೇಬನ್ನು ದೇವರಿಗೆ ಅರ್ಪಿಸುವುದರಿಂದ ದೇಹದ ರೋಗಗಳು ನಿವಾರಣೆಯಾಗಿ ಆರೋಗ್ಯ ವೃದ್ಧಿಸುತ್ತದೆ. ರೋಗಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ, ಇದು ದಾರಿದ್ರ್ಯ ನಿರ್ಮೂಲನೆಗೂ ಸಹಕಾರಿಯಾಗಿದೆ. ಸಾಲ ಬಾಕಿ ಇರುವ ಹಣ ವಸೂಲಾಗಲು ಸಹ ಸಹಾಯ ಮಾಡುತ್ತದೆ.

ದ್ರಾಕ್ಷಿ:

ಹಸಿ ದ್ರಾಕ್ಷಿ, ಒಣ ದ್ರಾಕ್ಷಿ, ಕಪ್ಪು ದ್ರಾಕ್ಷಿ ಹೀಗೆ ಯಾವುದೇ ವಿಧದ ದ್ರಾಕ್ಷಿಯನ್ನು ಅರ್ಪಿಸುವುದರಿಂದ ಸುಖ, ಸಂತೋಷ, ನೆಮ್ಮದಿ ಮತ್ತು ಮಾನಸಿಕ ತೃಪ್ತಿ ದೊರೆಯುತ್ತದೆ. ಉತ್ತಮ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತವೆ.

ಸಪೋಟ (ಚಿಕ್ಕು):

ಸಪೋಟ ಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ಶೀಘ್ರ ವಿವಾಹ ಯೋಗ ಕೂಡಿಬರುತ್ತದೆ. ಶತ್ರುಗಳು ದಮನಗೊಳ್ಳುತ್ತಾರೆ ಮತ್ತು ಸಂಬಂಧಗಳಲ್ಲಿ ಸ್ಥಿರತೆ ಉಂಟಾಗುತ್ತದೆ. ಉತ್ತಮ ಸಂಬಂಧಗಳು ಗಟ್ಟಿಯಾಗುತ್ತವೆ.

ಮಾವಿನ ಹಣ್ಣು:

ಇದು ಕಾಲೋಚಿತ ಹಣ್ಣಾದರೂ, ಈಗ ಎಲ್ಲಾ ಕಾಲದಲ್ಲೂ ಲಭ್ಯ. ಮಾವಿನ ಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ಗೃಹ ನಿರ್ಮಾಣ ಯೋಗ, ಮನೆ ಅಥವಾ ನಿವೇಶನ ಖರೀದಿಸುವ ಯೋಗ ಕೂಡಿಬರುತ್ತದೆ. ಸಾಲ ಬಾದೆಯಿಂದ ಮುಕ್ತಿ ದೊರೆತು ಇಎಂಐಗಳ ತೊಂದರೆ ಕಡಿಮೆಯಾಗಿ ಒಂದೇ ಬಾರಿಗೆ ಸಾಲ ತೀರಿಸುವ ಸಾಧ್ಯತೆ ಹೆಚ್ಚುತ್ತದೆ. ಬಾಕಿಗಳು ಸಹ ವಸೂಲಿಯಾಗುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ನೇರಳೆ ಹಣ್ಣು:

ನೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ. ಜ್ಯೋತಿಷ್ಯದ ಪ್ರಕಾರ, ಇದನ್ನು ಅರ್ಪಿಸುವುದರಿಂದ ಶನಿ ದೇವ ಸಂತುಷ್ಟನಾಗುತ್ತಾನೆ ಮತ್ತು ಅವನ ಕೃಪೆ ದೊರೆಯುತ್ತದೆ. ಸಾಡೇಸಾತಿ, ಪಂಚಮ ಶನಿ, ಅರ್ಧಾಷ್ಟಮ ಶನಿ ಮುಂತಾದ ಶನಿ ದೋಷಗಳು ಕಡಿಮೆಯಾಗುತ್ತವೆ. ಕೋರ್ಟ್ ಕೇಸ್‌ಗಳಿಂದ ಮುಕ್ತಿ ದೊರೆಯುತ್ತದೆ, ದಾರಿದ್ರ್ಯ ನಾಶವಾಗಿ ರೋಗಗಳು ಕಡಿಮೆಯಾಗುತ್ತವೆ.

ಡ್ರೈ ಫ್ರೂಟ್ಸ್:

ಒಣ ಹಣ್ಣುಗಳನ್ನು ದೇವರಿಗೆ ಪೂರ್ಣವಾಗಿ ಅರ್ಪಿಸುವುದರಿಂದ ದೇವರ ದೃಷ್ಟಿ ನಿಮ್ಮ ಕಡೆಗೆ ತಿರುಗುತ್ತದೆ ಎಂದು ಹೇಳಲಾಗುತ್ತದೆ. ಒಣ ಹಣ್ಣುಗಳನ್ನು ನೀಡುವುದರಿಂದ ಬಾಂಧವ್ಯಗಳು ಗಟ್ಟಿಯಾಗುತ್ತವೆ ಎಂದು ಸಹ ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕೋಳಿ ಮರಿಯನ್ನು ಹುಡುಕಬಲ್ಲಿರಾ – Kannada News | Optical illusion: Can you find the hidden chicks in this picture in just 35 seconds

ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Social Media

ಒಗಟು ಎಂದರೆ ಕೆಲವರ ಕಣ್ಣು ಹಾಗೂ ಕಿವಿ ಅರಳುತ್ತದೆ. ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳನ್ನು ಬಿಡಿಸುತ್ತ ಟೈಮ್ ಪಾಸ್ ಮಾಡುತ್ತಾರೆ. ಇದು ನಿಮ್ಮ ಕಣ್ಣಿನ ದೃಷ್ಟಿ, ತಾಳ್ಮೆ ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದ್ದರೆ ಈ ಇಲ್ಯೂಷನ್ ಚಿತ್ರ ಬಿಡಿಸಿ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ಕೋಳಿ ಮರಿಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಈ ಹಿಂದೆ ನೀವು ಇಂತಹ ಒಗಟು ಬಿಡಿಸುವಲ್ಲಿ ವಿಫಲರಾಗಿರಬಹುದು. ಇದೀಗ ನಿಮಗೆ ಮತ್ತೊಂದು ಅವಕಾಶವಿದೆ. ಈ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಕೋಳಿ ಮರಿಯನ್ನು 35 ಸೆಕೆಂಡುಗಳೊಳಗೆ ಕಂಡು ಹಿಡಿಯಬೇಕು.

ಈ ಚಿತ್ರ ನೋಡಿದಾಗ ಏನು ಕಾಣಿಸಿತು?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಫಾರ್ಮ್ ಹೌಸ್. ಈ ಫಾರ್ಮ್‌ಹೌಸ್‌ನಲ್ಲಿ ಅನೇಕ ಪ್ರಾಣಿ ಪಕ್ಷಿಗಳಿವೆ. ಆದರೆ ಫೋಟೋದಲ್ಲಿರುವ ಕೋಳಿಯೂ ಕಾಣೆಯಾದ ತನ್ನ ನಾಲ್ಕನೇ ಮರಿಯನ್ನು ಹುಡುಕುತ್ತಿದೆ. ನೀವು ಕೋಳಿಮರಿ ಎಲ್ಲಿದೆ ಎಂದು ಹೇಳಬೇಕು.  35 ಸೆಕೆಂಡುಗಳೊಳಗೆ ಈ ಕೋಳಿಮರಿಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನೀವು ಅತೀ ಬುದ್ಧಿವಂತರು ಎಂದರ್ಥ.

ಇದನ್ನೂ ಓದಿ: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿಂಕೆಯನ್ನು ಕಂಡು ಹಿಡಿಯಿರಿ

ನಿಮ್ಮ ಕಣ್ಣಿಗೆ ಕೋಳಿ ಮರಿ ಕಾಣಿಸಿತೇ?

ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಗಮನವನ್ನು ಸ್ವಲ್ಪವೂ ಬೇರೆಡೆ ಹರಿಸಿದರೂ ಒಗಟು ಬಿಡಿಸುವುದು ಕಷ್ಟವಾಗಬಹುದು. ತೀಕ್ಷ್ಣವಾದ ಕಣ್ಣು ನಿಮ್ಮದಾಗಿದ್ದರೆ ಈ ಚಿತ್ರದ ಇಂಚಿಂಚು ಕಣ್ಣಾಯಿಸಿ. ಎಷ್ಟೇ ಪ್ರಯತ್ನ ಪಟ್ಟರೂ ಕೋಳಿ ಮರಿ ಕಣ್ಣಿಗೆ ಬಿದ್ದಿಲ್ಲವೇ, ನಾವೇ ನಿಮಗೆ ಈ ಒಗಟಿನ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಕೋಳಿ ಮರಿ ಎಲ್ಲಿದೆ ಎಂದು ಗುರುತಿಸಿದ್ದೇವೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಡ್ಲಘಟ್ಟ ಫ್ಲೆಕ್ಸ್ ವಿವಾದ: ಕ್ಷಮೆ ಕೇಳಿದ ನಟ ಝೈದ್ ಖಾನ್

‘ಕಲ್ಟ್’ ಸಿನಿಮಾದ ಈವೆಂಟ್ ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ನಡೆದಿತ್ತು. ಕೋಟೆ ವೃತ್ತದ ಬಳಿ ದಾರಿಗೆ ಅಡ್ಡಲಾಗಿ ಫ್ಲೆಕ್ಸ್​​ಗಳನ್ನು ಹಾಕಲಾಗಿತ್ತು. ಇದರಿಂದ ಸಂಚಾರಕ್ಕೆ ಅಡ್ಡಿ ಆಗಿತ್ತು. ಆ ಬಳಿಕ ನಗರಸಭೆಗೆ ದೂರು ಬಂದಿದ್ದರಿಂದ ಅದನ್ನು ತೆಗೆದು ಹಾಕಲಾಗಿತ್ತು. ಈ ಸಂಬಂಧ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅಸಮಾಧಾನ ಹೊರಹಾಕಿದ್ದರು. ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿ ಕಿಡಿಕಾರಿದ್ದರು. ಅವರು ಬೈದಿದ್ದಾರೆ ಎಂದೆಲ್ಲ ಆರೋಪ ಮಾಡಿದ್ದರು. ಈ ಎಲ್ಲಾ ಘಟನೆ ಬಗ್ಗೆ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

‘ನನ್ನ ಅಭಿಮಾನಿಗಳ ಪರವಾಗಿ ಕ್ಷಮೆ ಕೇಳುತ್ತೇನೆ. ಈ ಘಟನೆ ಬಗ್ಗೆ ನನಗೆ ತಿಳಿದಿರಲಿಲ್ಲ. ಆ ಘಟನೆ ನಡೆಯಬಾರದಿತ್ತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಮಿತ್ ಸಿಡಿಲಬ್ಬರ… ಒಂದೇ ಓವರ್​ನಲ್ಲಿ ದಾಖಲೆ ಉಡೀಸ್

ಬಿಗ್ ಬ್ಯಾಷ್ ಲೀಗ್​ನಲ್ಲಿ ಸ್ಟೀವ್ ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಕಲೆಹಾಕುವ ಮೂಲಕ. ಎಸ್​ಸಿಜಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ಕಲೆಹಾಕಿದ್ದು ಬರೋಬ್ಬರಿ 189 ರನ್​ಗಳು.

ಈ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ಪರ ಸ್ಟೀವ್ ಸ್ಮಿತ್ ಅಕ್ಷರಶಃ ಅಬ್ಬರಿಸಿದರು. ಅದರಲ್ಲೂ ರಯಾನ್ ಹ್ಯಾಡ್ಲಿ ಎಸೆದ 11ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್  4 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಈ ಓವರ್​ನಲ್ಲಿ ಬರೋಬ್ಬರಿ 32 ರನ್ ಕಲೆಹಾಕುವ ಮೂಲಕ ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದರು.

ಅಂದರೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಸ್ಟೀವ್ ಸ್ಮಿತ್ ಪಾಲಾಗಿದೆ. ಅತ್ತ ಬಿಬಿಎಲ್​ನಲ್ಲಿ ಅತೀ ದುಬಾರಿ ಓವರ್ ಎಸೆದ ಹೀನಾಯ ದಾಖಲೆ ರಯಾನ್ ಹ್ಯಾಡ್ಲಿ ಹೆಸರಿಗೆ ಸೇರ್ಪಡೆಯಾಗಿದೆ.

ಇದಕ್ಕೂ ಮುನ್ನ ಬಿಗ್ ಬ್ಯಾಷ್ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ದಾಖಲೆ ಆರೋನ್ ಫಿಂಚ್ ಹೆಸರಿನಲ್ಲಿತ್ತು.

2023 ರಲ್ಲಿ ಆ್ಯಂಡ್ರ್ಯೂ ಟೈ ಓವರ್​ನಲ್ಲಿ  ಫಿಂಚ್ ಬರೋಬ್ಬರಿ 31 ರನ್ ಬಾರಿಸಿದ್ದರು. ಇದೀಗ 32 ರನ್​ಗಳಿಸುವ ಮೂಲಕ ಸ್ಟೀವ್ ಸ್ಮಿತ್ ಬಿಗ್ ಬ್ಯಾಷ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಈ ಅಬ್ಬರದೊಂದಿಗೆ ಸ್ಟೀವ್ ಸ್ಮಿತ್ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ನೆರವಿನೊಂದಿಗೆ ಸಿಡ್ನಿ ಸಿಕ್ಸರ್ಸ್ ತಂಡವು 17.2 ಓವರ್​ಗಳಲ್ಲಿ 191 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

 

Source link

ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ: ಆರೋಪಿಗಳಷ್ಟೇ ಅಲ್ಲ ಕಾಲೇಜುಗಳೂ ಬ್ಲಾಕ್ ಲಿಸ್ಟ್​ಗೆ, ಮಾನ್ಯತೆ, ಅನುದಾನಕ್ಕೂ ಕತ್ತರಿ – Kannada News | Strict Action to Curb Question Paper Leak: Karnataka Board to Blacklist Colleges, Cut Recognition and Grants

ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಜನವರಿ 17: ಪಿಯುಸಿ ಪರೀಕ್ಷೆ (PUC Exam) ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಮಾಡಿ ಮಕ್ಕಳಲ್ಲಿ ಪೋಷಕರಲ್ಲಿ ಆತಂಕ ತಂದಿದ್ದಾರೆ. ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರದ ಬಳಿಕ ಎಚ್ಚೆತ್ತುಗೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಅಲರ್ಟ್ ಆಗಿದೆ. ಪ್ರಶ್ನೆಪತ್ರಿಕೆ ಲೀಕ್ ಮಾಡುವ ಉಪನ್ಯಾಸಕರು ಕೆಲಸ ಮಾಡುವ ಕಾಲೇಜುಗಳನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಲು ಮುಂದಾಗಿದೆ. ಕಪ್ಪು ಪಟ್ಟಿಗೆ ಸೇರುವ ಜೊತೆಗೆ ಮಾನ್ಯತೆ ಹಾಗೂ ಅನುದಾನಕ್ಕೂ ಕತ್ತರಿ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಇನ್ಮುಂದೆ ಪ್ರಶ್ನೆ ಪತ್ರಿಕೆ ಲೀಕ್ ಆದರೆ ಯಾವ ಕಾಲೇಜಿನಿಂದ ಲೀಕ್ ಆಯಿತೋ ಆ ಕಾಲೇಜನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಮಾನ್ಯತೆ, ಅನುದಾನಕ್ಕೆ ಕತ್ತರಿ ಹಾಕುವ ಬಗ್ಗೆಯೂ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರಿ ಕಾಲೇಜುಗಳಾದರೆ ಅನುದಾನದ ಜೊತೆಗೆ ಕಪ್ಪುಪಟ್ಟಿಗೆ ಸೇರಿಸುವುದು ಹಾಗೂ ಅನುದಾನ ರಹಿತ ಕಾಲೇಜಾದರೆ ಅಂತಹ ಖಾಸಗಿ ಕಾಲೇಜಿನ ಮಾನ್ಯತೆ ರದ್ದು ಮಾಡುವ ಬಗ್ಗೆ ಕ್ರಮಕ್ಕೆ ಮುಂದಾಗಿದೆ.

ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಾಮೀಲಾದ ಶಿಕ್ಷಕರ ಮೇಲೆಯೂ ಕಾನೂನು ಕ್ರಮಕ್ಕೆ ಹಾಗೂ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ಒರಿಜಿನಲ್ ಅಂತ ನಕಲಿ 2nd PU ಪ್ರಶ್ನೆಪತ್ರಿಕೆ ಹರಿಬಿಟ್ಟಿದ್ದ ಕಿಡಿಗೇಡಿಗಳು: ಯೂಟ್ಯೂಬ್ ಚಾನೆಲ್ ವಿರುದ್ಧ ದೂರು

ಸಾಮಾಜಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಲೀಕ್ ಮಾಡಿ ವೈರಲ್ ಮಾಡುವ ಕಿಡಗೇಡಿಗಳ ವಿರುದ್ಧವೂ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಣದಲ್ಲಿನ ಕಿಡಗೇಡಿಗಳ ಖಾತೆಗಳ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋವಿಡ್ ಗಿಂತ ಅಪಾಯಕಾರಿಯೇ ಈ ಗುಯಿಲಿನ್‌ ಬಾರ್‌ ಸಿಂಡ್ರೋಮ್‌? ಲಕ್ಷಣಗಳು ಹೇಗಿರುತ್ತೆ, ತಡೆಗಟ್ಟುವುದು ಹೇಗೆ? – Kannada News | GBS Symptoms: What You Need to Know

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿ ಪರಿಣಮಿಸಿದ್ದು ಕೊರೊನಾದ ನಂತರ ಈಗ ಜಿಬಿಎಸ್‌ (GBS) ಅಥವಾ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಎಂಬ ರೋಗ ಭಾರಿ ಸುದ್ದಿಯಲ್ಲಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಈ ಬಗ್ಗೆ ಕಳವಳ ಹೆಚ್ಚಾಗಿದ್ದು, ಸರಿಯಾದ ಮಾಹಿತಿ ಇಲ್ಲದೆಯೇ ಭಯ ಪಡುವಂತಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು, ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗುತ್ತಿದೆ. ಈ ರೋಗದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲವಾದರೂ ಕೂಡ ಸರಿಯಾಗಿ ತಿಳಿದುಕೊಂಡು ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಈ ಸಿಂಡ್ರೋಮ್‌ ಹೇಗೆ ಬರುತ್ತೆ, ಲಕ್ಷಣಗಳು ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಿ.

ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಬಗ್ಗೆ ತಜ್ಞರ ಅಭಿಪ್ರಾಯ

ಈ ಬಗ್ಗೆ ಕೆಎಂಸಿ ಆಸ್ಪತ್ರೆಯ ನರರೋಗ ತಜ್ಞ ಶಿವಾನಂದ ಪೈ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಸಿಂಡ್ರೋಮ್‌ ಹೊಸದಾಗಿ ಬಂದದ್ದಲ್ಲ. ಈ ಹಿಂದೆಯೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಕಾಣಿಸಿಕೊಂಡಿದ್ದು ರೋಗಿಗಳನ್ನು ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಆದರೆ ಈ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಅಪರೂಪವಾಗಿ ಕಂಡುಬಂದರೂ ಸಹ ಗಂಭೀರವಾದ ನರಮಂಡಲದ ಸಮಸ್ಯೆಯಾಗಿದೆ. ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆ (ರೋಗ ನಿರೋಧಕ) ನರಮಂಡಲದ ಮೇಲೆ ದಾಳಿ ಮಾಡುತ್ತವೆ ಇದರಿಂದ ಜಿಬಿಎಸ್‌ ಸಿಂಡ್ರೋಮ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವಾಗುವ ಕ್ಯಾಂಪೈಲೋಬ್ಯಾಕ್ಟರ್‌ ಜೆಜುನಿ (Campylobacter jejuni) ಸೋಂಕು, ಅಶುದ್ಧ ಆಹಾರ, ನೀರು ಸೇವನೆಯಿಂದ ದೇಹವನ್ನು ಸೇರುತ್ತವೆ. ಈ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಂದರ್ಭದಲ್ಲಿ ದೇಹದ ಪ್ರತಿರೋಧಕ ವ್ಯವಸ್ಥೆ ನರಗಳ ಮೇಲೆ ದಾಳಿ ನಡೆಸುತ್ತದೆ. ಬಳಿಕ 1- 3 ವಾರದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಲಕ್ಷಣಗಳು?

ಸ್ನಾಯು ದೌರ್ಬಲ್ಯದಿಂದ ಆರಂಭವಾಗಿ, ಕೈ ಕಾಲುಗಳಲ್ಲಿ ಜುಮ್‌ ಎನಿಸುವ ಅನುಭವ ಕಾಡುತ್ತದೆ. ಸಮಸ್ಯೆ ತೀವ್ರವಾದಂತೆ ಪಾರ್ಶ್ವವಾಯು, ಉಸಿರಾಟದ ಸಮಸ್ಯೆ ಕಂಡುಬರುವ ಸಾಧ್ಯತೆ ಇರುತ್ತದೆ. ಜೊತೆಗೆ ಚಿಕುನ್‌ಗುನ್ಯ, ಡೆಂಗ್ಯೂ ನಂತಹ ಸೋಂಕು ದೇಹದಲ್ಲಿದ್ದಾಗಲೂ ಕೂಡ ಈ ಗುಯಿಲಿನ್‌ ಸಿಂಡ್ರೋಮ್‌ ಉಂಟಾಗಬಹುದು. ಇದರ ಜೊತೆಗೆ ಅತಿಸಾರ, ಹೊಟ್ಟೆ ನೋವು, ಜ್ವರ, ವಾಂತಿ ಕೂಡ ರೋಗದ ಲಕ್ಷಣಗಳಾಗಿವೆ. ಜಿ ಬಿ ಸಿಂಡ್ರೋಮ್‌ ಪ್ರಕರಣಗಳು ಡಿಸೆಂಬರ್‌ನಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್‌ ಸಮಯದಲ್ಲಿ ಹೆಚ್ಚಾಗಿ ವರದಿಯಾಗುತ್ತವೆ.

ಯಾವ ರೀತಿಯ ಚಿಕಿತ್ಸೆ ನೀಡಬೇಕು?

ಕಾಲುಗಳಲ್ಲಿ ಜುಮ್‌ ಎನಿಸುವ ಅನುಭವ, ನಿಶ್ಶಕ್ತಿ ಇವೆಲ್ಲವೂ ಇದರ ಆರಂಭಿಕ ಲಕ್ಷಣಗಳಾಗಿದ್ದು ಇದು ತೋಳುಗಲ್ಲಿ ಕಾಣಿಸಿಕೊಂಡು ದೇಹದ ವಿವಿಧ ಭಾಗಗಳಿಗೂ ಹರಡಬಹುದು. ಇದನ್ನು ಕಡೆಗಣಿಸಿದಲ್ಲಿ ರೋಗಿಯಲ್ಲಿ ಉಸಿರಾಟದ ಸಮಸ್ಯೆ ಕಂಡುಬರಬಹುದು ಹಾಗಾಗಿ ಈ ಸಮಯದಲ್ಲಿ ತುರ್ತು ವೈದ್ಯಕೀಯ ನೆರವು ಅತ್ಯಗತ್ಯವಾಗಿರುತ್ತದೆ. ಜಿಬಿ ಸಿಂಡ್ರೋಮ್‌ನ್ನು ಪತ್ತೆಹಚ್ಚಲು ರೋಗಿಯ ನರ ಮಂಡಲ ಪರೀಕ್ಷೆ, ಸೆರೆಬ್ರೋ ಸ್ಪೈನಲ್‌ ದ್ರವ ಪರೀಕ್ಷೆ ಸೇರಿ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ವಿಧಾನವನ್ನು ಅನುಸರಿಸುತ್ತಾರೆ. 99% ಪ್ರಕರಣಗಳಲ್ಲಿ ಈ ರೋಗವನ್ನು ಗುಣಪಡಿಸಬಹುದು ಆದರೆ ರೋಗಿಯು ಗುಣಮುಖವಾಗುವ ಸಮಯ ರೋಗಿಯಿಂದ ರೋಗಿಗೆ ಬೇರೆ ಬೇರೆಯಾಗಿರುತ್ತದೆ. ರೋಗ ಕಾಣಿಸಿಕೊಂಡರೂ ಚಿಕಿತ್ಸೆಗೆ ತಡಮಾಡಿದರೆ ಈ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ. ಹಾಗಾಗಿ ರೋಗ ಲಕ್ಷಣ ಕಾಣಿಸಿಕೊಂಡ ಬಳಿಕ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಯುವಜನರಲ್ಲಿ ಕಂಡುಬರುತ್ತಿರುವ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್’ಗೆ ಕಾರಣವೇನು? ಇಲ್ಲಿದೆ ಮನಶಾಸ್ತ್ರಜ್ಞರ ಅಭಿಪ್ರಾಯ

ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ತಡೆಯಬಹುದೇ?

ನಿಖರವಾಗಿ ಯಾವ ಕಾರಣಕ್ಕೆ ಜಿಬಿ ಸಿಂಡ್ರೋಮ್‌ ಕಾಣಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಸಾಂಕ್ರಾಮಿಕವಲ್ಲದ ಆದರೆ ದೇಹದೊಳಗೆ ಹೊಕ್ಕಿದ ಬ್ಯಾಕ್ಟೀರಿಯಾದಿಂದಲೇ ಜಿ ಬಿ ಸಿಂಡ್ರೋಮ್‌ ಸಮಸ್ಯೆ ಆರಂಭವಾಗುತ್ತದೆ. ಹೀಗಾಗಿ ಆಹಾರದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಹಣ್ಣು, ತರಕಾರಿಗಳನ್ನು ಶುಚಿಗೊಳಿಸಿ ಸೇವಿಸಿ. ಮಾಂಸಾಹಾರವನ್ನು ಸರಿಯಾದ ಪ್ರಮಾಣದಲ್ಲಿ ಬೇಯಿಸಿ ಸೇವಿಸಿ. ಅಡಿಗೆ ತಯಾರಿಸುವ ಪ್ರದೇಶ ಶುಚಿಯಾಗಿರುವಂತೆ ನೋಡಿಕೊಳ್ಳಿ. ನೀರು ಕುದಿಸಿ ಕುಡಿಯುವ ಅಭ್ಯಾಸವಿರಲಿ.

ಸರ್ಕಾರದಿಂದ ಸಿಗುವ ಸೌಲಭ್ಯ

ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಚಿಕಿತ್ಸೆ ದುಬಾರಿಯಾಗಿದ್ದು ಅದನ್ನು ತಡೆಯಲು ಸರ್ಕಾರ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆ ಹೊರಡಿಸಲಾಗಿದೆ. ರೋಗಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಈ ಚಿಕಿತ್ಸಾ ಸೌಲಭ್ಯ ನೀಡಲಾಗಿದ್ದು ಔಷಧಿಯ ದರವನ್ನು ಪ್ರತಿ ಗ್ರಾಂಗೆ 2,000 ರೂಪಾಯಿಗಳಂತೆ ನಿಗದಿಪಡಿಸಲಾಗಿದೆ. ರೋಗಿಯ ತೂಕದ ಆಧಾರದ ಮೇಲೆ ಡೋಸೇಜ್ ನೀಡಲು ಸೂಚಿಸಲಾಗಿದ್ದು ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡುವಾಗ ಔಷಧದ ಬಾಟಲಿ (Vial), ಅದರ ಬ್ಯಾಚ್ ಸಂಖ್ಯೆ, ರೋಗಿಯ ಹೆಸರಿರುವ ಫೋಟೋ ಹಾಗೂ ವೈದ್ಯರು ದೃಢೀಕರಿಸಿದ ಡೋಸೇಜ್ ಪಟ್ಟಿಯನ್ನು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚನೆ ನೀಡಲಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:36 am, Sat, 17 January 26

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ, ರಾಜ್ಯದೆಲ್ಲೆಡೆ ಒಣ ಹವೆ – Kannada News | Bengaluru temperature: Misty weather in Bengaluru, Dry weather elsewhere

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ, ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರು, ಜನವರಿ 17: ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಒಣ ಹವೆಯ ವಾತಾವರಣವಿದೆ(Weather Forecast) . ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ – Kannada News | Gilli’s Popularity Exploited? Chandrachud Condemns “Drama” in His Name

ಯಾರಾದರೂ ಒಬ್ಬರು ಹೆಸರು ಮಾಡುತ್ತಿದ್ದಾರೆ ಎಂದರೆ ಅದರ ಲಾಭ ಪಡೆಯಲು ಕೆಲವರು ಮುಂದಾಗುತ್ತಾರೆ. ಅವರ ಜನಪ್ರಿಯತೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಗಿಲ್ಲಿ ವಿಷಯದಲ್ಲಿ ಹೀಗೆಯೇ ಆಗುತ್ತಿದೆ ಎಂದು ಸುದೀಪ್ (Sudeep) ಆಪ್ತ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಹಾರೈಸಿರೋ ಅವರು, ಗಿಲ್ಲಿ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟವನ್ನು ಖಂಡಿಸಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮದೇ ಯೂಟ್ಯೂಬ್ ಚಾನೆಲ್ ಪಾಡ್​​ಕಾಸ್ಟ್​​ನಲ್ಲಿ ಚಕ್ರವರ್ತಿ ಮಾತನಾಡಿದ್ದಾರೆ. ‘ಕಾಲಾಪತ್ಥರ್ ಸಿನಿಮಾದಲ್ಲಿ ಗಿಲ್ಲಿ ನನ್ನ ಜೊತೆ ನಟಿಸಿದ್ದ. ಅವನನ್ನು ಹತ್ತಿರದಿಂದ ಕಂಡಿದ್ದೇನೆ. ಅವನು ಬಡವರ ಮಗ. ಯೂಟ್ಯೂಬ್ ಮಾಡಿಕೊಂಡು, ವಿವಿಧ ಶೋ ಮಾಡಿಕೊಂಡು ಇಲ್ಲಿಗೆ ತಲುಪಿದ್ದಾನೆ. ಹೊರಗೆ ಅವನ ಹೆಸರಲ್ಲಿ ಒಂದಷ್ಟು ಜನರು ಪಿಆರ್ ಮಾಡುತ್ತಿದ್ದಾರೆ. ಗಿಲ್ಲಿ ಆ ನಟನ ಪರ, ಈ ನಟನ ವಿರುದ್ಧ, ಗಿಲ್ಲಿ ಆ ಜಾತಿ ಎಂದೆಲ್ಲ ದೊಡ್ಡ ಮಾಫಿಯಾ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಈ ಬೆಳವಣಿಗೆ ಗಿಲ್ಲಿಗೆ ಗೊತ್ತಿಲ್ಲ ಎಂದು ನನಗೆ ಅನಿಸುತ್ತದೆ. ಆಚೆ ಬಂದಮೇಲೆ ಇದರ ಪರಿಣಾಮ, ದುಷ್ಪರಿಣಾಮ ಎರಡೂ ತಿಳಿಯುತ್ತದೆ. ಗಿಲ್ಲಿ ನಂಗೂ ಇಷ್ಟ. ಆದರೆ, ಅವನ ಹೆಸರಲ್ಲಿ ದೊಂಬರಾಟ ಇಷ್ಟ ಆಗ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಎಂದರೆ ಯಾಕೆ ಅಷ್ಟು ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..

‘ಅವನ ಹೆಸರಲ್ಲಿ ಜಾತಿ ಶುರು ಮಾಡಿದ್ದಾರೆ, ಅವನ ಹೆಸರಲ್ಲಿ ಪ್ರಾದೇಶಿಕತೆ ಶುರು ಮಾಡಿದ್ದರೆ. ರಾಜಕೀಯ ಮಾಡಿದ್ದಾರೆ. ಈಗ ಅವನ ಹೆಸರಲ್ಲಿ ಸಿನಿಮಾ ಮಾಡ್ತೀನಿ ಎಂದು ಹೊರಟಿದ್ದಾರೆ. ಆರು ತಿಂಗಳು ಬಿಟ್ಟು ಇವರೆಲ್ಲ ಏನು ಮಾಡ್ತಾರೆ ಎಂಬುದನ್ನು ನೋಡಬೇಕಿದೆ. ಆತ ಪ್ರತಿಭಾವಂತ, ಅವನಿಗೆ ಒಳ್ಳೆದಾಗಬೇಕು. ಆದರೆ, ಅವನ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟಕ್ಕೆ ಪ್ರೋತ್ಸಾಹಿಸಬಾರದು. ಇದು ಸಂಪತ್ತಿಗೆ ಸವಾಲ್ ಸಿನಿಮಾ ರೀತಿ ಕಾಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link