ಬೆಂಗಳೂರು: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ – Kannada News | Bengaluru Maid Caught: Stolen Watch on WhatsApp Status Leads to Arrest
ಬೆಂಗಳೂರು ಜ.16: ಮನೆಯ ಯಜಮಾನನ ಬ್ರಾಂಡ್ ವಾಚ್ ಕದ್ದು, ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಮನೆ ಕೆಲಸದಾಕೆ, ಇದೀಗ ಯಜಮಾನನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ (Bengaluru Maid Caught) ನಡೆದಿದೆ. ಬ್ರಾಂಡ್ ವಾಚ್ ಧರಿಸಿದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿರುವುದೇ, ಆಕೆ ಸಿಕ್ಕಿ ಬೀಳಲು ಕಾರಣವಾಗಿದೆ. ಪೊಲೀಸರು ಈ ಫೋಟೋವನ್ನು ಇಟ್ಟುಕೊಂಡು ಮನೆ ಕೆಲಸದಾಕೆಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ದೊಡ್ಡಕನ್ನನಹಳ್ಳಿ ನಿವಾಸಿ ಸೌಮ್ಯ (26) ಎಂದು ಗುರುತಿಸಲಾಗಿದೆ. ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ…