Category Archives: Blog

Your blog category

ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ – Kannada News | BMC election results Big Victory for BJP Led Mahayuti in Mumbai Thackeray falls after 25 years

ಮುಂಬೈ, ಜನವರಿ 16: 25 ವರ್ಷಗಳ ನಂತರ ಮುಂಬೈ ನಾಗರಿಕ ಸಂಸ್ಥೆಯಾದ ಬಿಎಂಸಿ ಮೇಲೆ ಠಾಕ್ರೆ ಸಹೋದರರು ಹಿಡಿತ ಕಳೆದುಕೊಂಡಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC Elections) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಭಾರಿ ಗೆಲುವು ಕಂಡಿದೆ. ಗುರುವಾರ ಬಿಎಂಸಿ ಚುನಾವಣೆ ನಡೆದಿತ್ತು. ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಅನೇಕ ಉದ್ಯಮಿಗಳು, ಸೆಲಬ್ರಿಟಿಗಳು, ರಾಜಕಾರಣಿಗಳ ವಾಸ ಸ್ಥಾನ. ಇದು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕಾರ್ಪೋರೇಷನ್ ಆಗಿದೆ. ಬಿಎಂಸಿ ಸೇರಿದಂತೆ ಮಹಾರಾಷ್ಟ್ರದಾದ್ಯಂತ 29 ನಾಗರಿಕ ಸಂಸ್ಥೆಗಳಲ್ಲಿ ಮತದಾನ ನಡೆದಿತ್ತು. ಬಹುತೇಕ ಅನೇಕ ಕಡೆ ಬಿಜೆಪಿ ಈ ಬಾರಿ ಗೆಲುವಿನ ನಗು ಬೀರಿರುವುದು ವಿಶೇಷ. ಇದು ಮಹಾರಾಷ್ಟ್ರದಲ್ಲಿ ಶಿವಸೇನೆಯ ಪತನದ ಸಂಕೇತವಾಗಿದೆ.

ವಾರ್ಷಿಕ ಬಜೆಟ್ 74,400 ಕೋಟಿ ರೂ. ಮೀರಿರುವ ಬಿಎಂಸಿಯಲ್ಲಿ 9 ವರ್ಷಗಳ ವಿಳಂಬದ ನಂತರ ನಡೆದ ಚುನಾವಣೆಯಲ್ಲಿ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2017ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ, ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಒಂದಾಗಿದ್ದ ಸಂಯುಕ್ತ ಶಿವಸೇನೆ ದಶಕಗಳಿಂದ ನಿಯಂತ್ರಿಸುತ್ತಿದ್ದ ಬಿಎಂಸಿಯ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಅವರಿಬ್ಬರೂ ಬೇರೆ ಬೇರೆಯಾಗಿ ಅಖಾಡಕ್ಕಿಳಿದಿದ್ದರು.

ಇದನ್ನೂ ಓದಿ: Pune Elections: ಮುಂಬೈ ಜೊತೆ ಪುಣೆಯಲ್ಲೂ ಬಿಜೆಪಿಯದ್ದೇ ದರ್ಬಾರ್; ಎಕ್ಸಿಟ್ ಪೋಲ್​ನಲ್ಲಿ ಏನಿದೆ?

ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟವು ವಿಜಯಶಾಲಿಯಾಗಿ ಹೊರಹೊಮ್ಮಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವದಲ್ಲಿ ಬಿಜೆಪಿ 2017ರಲ್ಲಿ ತನ್ನ ಹಿಂದಿನ ಗರಿಷ್ಠ 82 ಸ್ಥಾನಗಳನ್ನು ಮೀರಿದೆ. ಇದುವರೆಗೆ ಬಿಎಂಸಿಯ 227 ವಾರ್ಡ್‌ಗಳಲ್ಲಿ 88ರಲ್ಲಿ ಬಿಜೆಪಿ ಗೆದ್ದಿದೆ ಅಥವಾ ಮುನ್ನಡೆ ಸಾಧಿಸಿದೆ. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 28 ಸ್ಥಾನಗಳಲ್ಲಿ ಮುಂದಿದೆ. ಈ ಮಹಾಯುತಿ ಮೈತ್ರಿಕೂಟವು 114ರ ಅರ್ಧದಷ್ಟನ್ನು ಆರಾಮವಾಗಿ ದಾಟಿದೆ.

ಇದನ್ನೂ ಓದಿ: BJP National President Election Date: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ

29 ನಾಗರಿಕ ಸಂಸ್ಥೆಗಳ 893 ವಾರ್ಡ್‌ಗಳಲ್ಲಿ 2,869 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಿತು. ಮುಂಬೈನಲ್ಲಿ 1,700 ಸೇರಿದಂತೆ 15,931 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 52.94% ಮತದಾನ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬರದ ಶತಕ ಸಿಡಿಸಿ ಕಿಂಗ್ ಕೊಹ್ಲಿಯ ದಾಖಲೆ ಮುರಿದ ಡೇವಿಡ್ ವಾರ್ನರ್

Source link

ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ? ಇಬ್ಬರ ನಡುವೆ ವಯಸ್ಸಿನ ಅಂತರ – Kannada News | Mrunal Thakur and Dhanush Age Gap amid marriage rumours

ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅವರು ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಜೊತೆ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಮೃಣಾಲ್ ಠಾಕೂರ್ (Mrunal Thakur) ಅವರಾಗಲಿ, ಧನುಷ್ ಅವರಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಗಾಸಿಪ್ ಜೋರಾಗಿದೆ. ಫೆಬ್ರವರಿ 14ರಂದು ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹರಡಿದ ಬಳಿಕ ಅವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಆಗುತ್ತಿದೆ. ಧನುಷ್ ಮತ್ತು ಮೃಣಾಲ್ ಠಾಕೂರ್ ನಡುವೆ ಇರುವ ವಯಸ್ಸಿನ ಅಂತರ (Age Gap) 9 ವರ್ಷ.

ಮೃಣಾಲ್ ಠಾಕೂರ್ ಅವರು ಜನಿಸಿದ್ದು 1992ರ ಆಗಸ್ಟ್ 1ರಂದು. ಈಗ ಅವರಿಗೆ 33 ವರ್ಷ ವಯಸ್ಸು. ನಟ ಧನುಷ್ ಅವರು ಜನಿಸಿದ್ದು 1983ರ ಜುಲೈ 28ರಂದು. ಈಗ ಅವರ ವಯಸ್ಸು 42 ವರ್ಷ. 9 ವರ್ಷ ವಯಸ್ಸಿನ ಅಂತರ ಇರುವ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ಇದನ್ನು ಒಪ್ಪಿಕೊಂಡಿಲ್ಲ.

‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅವರು ನಟಿಸಿದ್ದರು. ಆ ಸಿನಿಮಾ 2025ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಯಿತು. ಆ ಚಿತ್ರದ ಪ್ರೀಮಿಯರ್ ಶೋನಲ್ಲಿ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರಿಬ್ಬರ ಬಗ್ಗೆ ಗಾಸಿಪ್ ಹರಡಲು ಶುರು ಆಯಿತು. ‘ನಾವಿಬ್ಬರು ಜಸ್ಟ್ ಫ್ರೆಂಡ್ಸ್’ ಎಂದು ಹೇಳುವ ಮೂಲಕ ಮೃಣಾಲ್ ಅವರು ತಪ್ಪಿಸಿಕೊಂಡಿದ್ದರು.

ಧನುಷ್ ಅವರು ಈ ಮೊದಲು ಐಶ್ವರ್ಯಾ ರಜನಿಕಾಂತ್ ಜೊತೆ ಮದುವೆ ಆಗಿದ್ದರು. 2004ರಲ್ಲಿ ಐಶ್ವರ್ಯಾ ಹಾಗೂ ಧನುಷ್ ಮದುವೆ ನಡೆದಿತ್ತು. ಆ ಜೋಡಿಗೆ ಯಾತ್ರ ಮತ್ತು ಲಿಂಗ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ. 20 ವರ್ಷಗಳ ದಾಂಪತ್ಯದ ಬಳಿಕ ಧನುಷ್ ಮತ್ತು ಐಶ್ವರ್ಯಾ ಸಂಸಾರದಲ್ಲಿ ಬಿರುಕು ಮೂಡಿತು. 2024ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು.

ಇದನ್ನೂ ಓದಿ: ಮೃಣಾಲ್ ಠಾಕೂರ್ ಗ್ಲಾಮರಸ್ ಫೋಟೊಶೂಟ್: ವಿಡಿಯೋ ನೋಡಿ

ಮೃಣಾಲ್ ಠಾಕೂರ್ ಅವರು ಕಿರುತೆರೆ ಸೀರಿಯಲ್​​ಗಳ ಮೂಲಕ ಜನರಿಗೆ ಪರಿಚಯ ಆದವರು. ಬಳಿಕ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅವರ ಮದುವೆ ಬಗ್ಗೆ ಹರಡಿರುವ ಗಾಸಿಪ್ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಕ್ರಮ ಗ್ಯಾಂಬ್ಲಿಂಗ್ ದಂಧೆಗೆ ಕಡಿವಾಣ; ಕೆಲವೇ ತಿಂಗಳಲ್ಲಿ 7,800ಕ್ಕೂ ಹೆಚ್ಚು ವೆಬ್​ಸೈಟ್​ಗಳನ್ನು ಬ್ಲಾಕ್ ಮಾಡಿದ ಸರ್ಕಾರ – Kannada News | Government blocks 242 illegal betting, gambling website links, number of blocked sites rise to over 7,800 in India

ನವದೆಹಲಿ, ಜನವರಿ 16: ಭಾರತ ಸರ್ಕಾರ ಅಕ್ರಮ ಬೆಟ್ಟಿಂಗ್ ದಂದೆಗಳಿಗೆ (Illegal betting and Gambling) ಕಡಿವಾಣ ಹಾಕುವ ಪ್ರಯತ್ನ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಇವತ್ತು ಒಂದೇ ದಿನ 242 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್​ಸೈಟ್​ಗಳ ಲಿಂಕ್​ಗಳನ್ನು ಬ್ಲಾಕ್ ಮಾಡಿದೆ. ಕಳೆದ ಕೆಲ ತಿಂಗಳಲ್ಲಿ ಸಾವಿರಾರು ಅಕ್ರಮ ಬೆಟ್ಟಿಂಗ್ ವೆಬ್​ಸೈಟ್​ಗಳನ್ನು ಸರ್ಕಾರ ನಿರ್ಬಂಧಿಸಿರುವುದು ಗಮನಾರ್ಹ.

2025ರ ಆಗಸ್ಟ್ ತಿಂಗಳಲ್ಲಿ ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದಿತು. ಆಗಿನಿಂದ ಇಲ್ಲಿಯವರೆಗೆ 7,800ಕ್ಕೂ ಅಧಿಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜು (ಗ್ಯಾಂಬ್ಲಿಂಗ್) ಜಾಲತಾಣಗಳ ಲಿಂಕ್​ಗಳನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ.

ಕಾಯ್ದೆ ಜಾರಿಯಾಗುವ ಮುನ್ನ, 2022ರಿಂದ 2025ರ ಜೂನ್​ವರೆಗೆ ಐಟಿ ಕಾಯ್ದೆಯ ಸೆಕ್ಷನ್ 69ಎ ಬಳಸಿ 1,524 ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ವೆಬ್​ಸೈಟ್​ಗಳು ಹಾಗೂ ಮೊಬೈಲ್ ಆ್ಯಪ್​ಗಳನ್ನು ಸರ್ಕಾರ ಬ್ಲಾಕ್ ಮಾಡಿತ್ತು. ಈಗ ಗೇಮಿಂಗ್ ಆ್ಯಕ್ಟ್ (Gaming Act 2025) ಜಾರಿಯಾಗಿ ನಾಲ್ಕೇ ತಿಂಗಳಲ್ಲಿ ಏಳು ಸಾವಿರಕ್ಕೂ ಅಧಿಕ ಜಾಲತಾಣಗಳನ್ನು ತಡೆಯಲಾಗಿರುವುದು ವಿಶೇಷ.

ಇದನ್ನೂ ಓದಿ: Solar: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ

ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್​ನಿಂದ ಯುವಜನರು ಅತಿಹೆಚ್ಚು ಹಾನಿಗೊಳಗಾಗುತ್ತಿದ್ದಾರೆ. ಬಹಳ ಜನರು ಸಾಕಷ್ಟು ಹಣ ಕಳೆದುಕೊಂಡು ತಮ್ಮ ಜೊತೆ ಕುಟುಂಬವನ್ನೂ ಬೀದಿಗೆ ಬೀಳುವಂತೆ ಮಾಡುತ್ತಿದ್ದಾರೆ. ಅಕ್ರಮವಾಗಿ ನಡೆಯುವ ಈ ಆನ್​ಲೈನ್ ಬೆಟ್ಟಿಂಗ್ ಪ್ಲಾಟ್​ಫಾರ್ಮ್​ಗಳಿಗೆ ಕಡಿವಾಣ ಹಾಕಿ ಜನರನ್ನು ರಕ್ಷಿಸಲು ಸರ್ಕಾರ ಪಣತೊಟ್ಟು ಕೆಲಸ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿದ್ದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಅಪಘಾತದ ನೆಪದಲ್ಲಿ ವ್ಯಕ್ತಿ ಹತ್ಯೆಗೆ ಸಂಚು: ಐವರ ವಿರುದ್ಧ ದಾಖಲಾಯ್ತು ಕೇಸು – Kannada News | Bengaluru: Conspiracy to murder a person under the pretext of an accident; Case registered against five

ರಾಯಲ್ ಎನ್​ಫೀಲ್ಡ್, ಟೆಂಪೊ ಟ್ರಾವೆಲರ್

ಬೆಂಗಳೂರು, ಜನವರಿ 16: ಬೈಕ್ ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಮುಗಿಸಲು ಸಂಚು ರೂಪಿಸಿದ್ದ (Murder Attempt) ಘಟನೆ ಬೆಂಗಳೂರಿನ (bangaluru) ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಕಂತಲೇ ಬೈಕ್​ಗೆ ಟೆಂಪೊ ಟ್ರಾವೆಲರ್ ಗುದ್ದಿಸಿ ನಂತರ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜನವರಿ 7ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಯಾಸೀನ್​​ ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ದೂರು ನೀಡಿದ್ದಾರೆ.

ನಡೆದದ್ದೇನು?

ಜನವರಿ 7ರಂದು ಸೈಯದ್ ಯಾಸೀನ್​​ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಉದ್ದೇಶಪೂರ್ವಕವಾಗಿ ಬೈಕ್​ಗೆ ಟಿಟಿ ಗುದ್ದಿಸಿ ಕೊಲೆಗೆ ಯತ್ನಿಸಲಾಗಿದೆ. ಅಷ್ಟೇ ಅಲ್ಲದೆ ಕೆಳಗೆಬಿದ್ದವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪ ಕೂಡ ಕೇಳಿಬಂದಿದೆ. ಮದುವೆ ನಂತರ ವೈಯಕ್ತಿಕ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಮೊದಲು ದೂರು ದಾಖಲಾಗಿತ್ತು.

ಇದನ್ನೂ ಓದಿ: ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ: ನಿಗೂಢ ಕೊಲೆಯ ಸುಳಿವು ನೀಡಿದ್ದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು

ಇನ್ನು ಸೈಯದ್ ಯಾಸೀನ್​​ಗೆ ಕಾಲಿನ ಮೂಳೆ ಮುರಿದಿದ್ದು, ಹೊಟ್ಟೆ, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ವೈದ್ಯಕೀಯ ವರದಿಯಲ್ಲೂ ಕೊಲೆ ಯತ್ನವಾಗಿದೆ ಎಂಬುದು ದೃಢವಾಗಿದೆ. ಹೀಗಾಗಿ ಆರೋಪಿಗಳು ಒಟ್ಟಾಗಿ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಐವರ ವಿರುದ್ಧ ದೂರು 

ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ಸೈಯದ್ ಯೂಸುಫ್​ರಿಂದ ದೂರು ನೀಡಲಾಗಿದೆ. ಕೆಜಕಶನ್ ಖಾಲಿದ್, ಫರ್ಹಾನ್ ಖಾಲಿದ್, ಉಸ್ಮಾನ್, ಹಾಶಿಮ್,​ ಸೈಯದ್ ರಾಹಬೆರ್ ವಿರುದ್ಧ ಕೊಲೆ ಯತ್ನ ಆರೋಪದಡಿ ದೂರು ದಾಖಲಾಗಿದೆ.

ಆಟೋಗೆ ಅಪರಿಚಿತ ವಾಹನ ಡಿಕ್ಕಿ: ಪ್ರಯಾಣಿಕ ಸಾವು

ಆಟೋಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನೆಲಮಂಗಲ ತಾಲೂಕಿನ ತಾಳೆಕೆರೆ ಗೇಟ್​ ಬಳಿ ನಡೆದಿದೆ. ಗೋವೇನಹಳ್ಳಿ ನಿವಾಸಿ ಹನುಮಂತಪ್ಪ ಮೃತ ಪ್ರಯಾಣಿಕ. ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವರದಿ: ವಿಕಾಸ್ ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್‌ ATM ದರೋಡೆ ಕೇಸ್‌ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ – Kannada News | Bidar 83 Lakh ATM Robbery: One Year On, Unsolved Heist, No clue about accused

ಬೀದರ್, ಜನವರಿ 16: ನಗರದಲ್ಲಿ ನಡೆದಿದ್ದ ಸಿಎಂಸಿ (CMC) ವಾಹನ ದರೋಡೆ ಪ್ರಕರಣ (robbery case) ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿತ್ತು. ಬರೋಬ್ಬರಿ 83 ಲಕ್ಷ ರೂ ಹಣ ದರೋಡೆ ಮಾಡಿದವರು ಇನ್ನೂ ಪತ್ತೆಯಾಗಿಲ್ಲ. ಮೂರು ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಣ ಕದ್ದು ಹಂತಕರು ಪರಾರಿಯಾಗಿ ಇಂದಿಗೆ ಒಂದು ವರ್ಷವಾದರೂ ದರೋಡೆಕೋರರ ಗ್ಯಾಂಗ್ ಇನ್ನೂ ಪತ್ತೆಯಾಗಿಲ್ಲ. ಇತ್ತ ಗುಂಡಿನ ದಾಳಿಗೆ ಗಾಯಗೊಂಡಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುವುದೆಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಕೈ ಚೆಲ್ಲಿದ್ದು, ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣ ಹಿನ್ನೆಲೆ 

ಬೀದರ್​ನಲ್ಲಿ 2025ರಲ್ಲಿ ಜನವರಿ 16ರ ಮುಂಜಾನೆ 11 ಗಂಟೆಗೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ. ಒಂದು ವರ್ಷ ಕಳೆದರೂ ಇನ್ನೂ ದರೋಡೆಕೋರರನ್ನ ಬಂಧಿಸಲು ಬೀದರ್ ಪೊಲೀಸರಿಗೆ ಸಾಧ್ಯವಾಗಿಲ್ಲ. ಬೀದರ್ ನಗರದ ಶಿವಾಜಿ ವೃತ್ತದ ಬಳಿಯಿರುವ ಎಸ್​ಬಿಐ ಬ್ಯಾಂಕ್​ ಎಟಿಎಂಗೆ ಎಸ್​ಎಂಎಸ್ ವಾಹನದಲ್ಲಿ ಎಟಿಎಂಗೆ ಹಣ ತುಂಬಿಸಲು ಸಿಬ್ಬಂದಿ ಬಂದಿದ್ದರು. ಇದೇ ವೇಳೆ ಇಬ್ಬರು ದರೋಡೆಕೋರರು ತಮ್ಮ ಕೈಯಲ್ಲಿದ್ದ ಪಿಸ್ತೂಲ್​​ನಿಂದ ಸಿಬ್ಬಂದಿ ಇಬ್ಬರನ್ನ ಶೂಟ್ ಮಾಡಿ ಹಣ ಕದ್ದು ಪರಾರಿಯಾಗಿದ್ದರು. ಹಾಡುಹಗಲೇ ನಡೆದಿದ್ದ ಘಟನೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು.

ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್​ ದರೋಡೆಕೋರರು ಎಸ್ಕೇಪ್

ದರೋಡೆಕೋರರು ಶೂಟ್ ಮಾಡಿದಾಗ ಬೀದರ್​ನ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನೂ ಗಾಯಗೊಂಡಿದ್ದ ಶಿವಕುಮಾರ್​ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೆ ಅವರಿಗೆ ಆರ್ಥಿಕ ಸಹಾಯ ಮಾಡುತ್ತೇನೆಂದು ಹೇಳಿದ್ದ ಜಿಲ್ಲಾಡಳಿತ ಕೈಚೆಲ್ಲಿದ್ದು ಕುಟುಂಬಸ್ಥರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

ಪ್ಲ್ಯಾನ್ ಪ್ರಕಾರವೇ ದರೋಡೆ

ಇನ್ನೂ ದರೋಡೆಯಲ್ಲಿ ಭಾಗವಹಿಸಿದ್ದ ಗ್ಯಾಂಗ್ ದರೋಡೆಗೂ ಮುನ್ನ ಪಕ್ಕಾಪ್ಲ್ಯಾನ್ ಮಾಡಿತ್ತು. ದರೋಡೆ ಮಾಡುವ ಎರಡು ದಿನದ ಮುಂಚೆ ಬೀದರ್​ನಲ್ಲಿ ದರೋಡೆಕೋರರು ಉಳಿದುಕೊಂಡಿದ್ದರು. ದರೋಡೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಹೋಗಬೇಕು ಅನ್ನೋದನ್ನ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್, ತಾವು ಮಾಡಿದ ಪ್ಲ್ಯಾನ್ ಪ್ರಕಾರವೇ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಬೀದರ್​ನ ಅಂಬೇಡ್ಕರ್ ವೃತ್ತದಿಂದ ಹರಳಯ್ಯ ಚೌಕ್, ಅಬಕಾರಿ ಕಚೇರಿ ರಸ್ತೆ, ಬೀದರ್ ಕೋರ್ಟ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ನೂರು ಬೆಡ್​ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಗ್ರನರಸಿಂಹ ದೇವಸ್ಥಾನ, ಮಲ್ಕಾಪುರ, ಸುಲ್ತಾನಪುರ ಮಾರ್ಗವಾಗಿ ಹೈದರಾಬಾದ್​​ಗೆ ಬೈಕ್ ಮೂಲಕವೇ ಪ್ರಯಾಣ ಮಾಡಿದ್ದರು.

ಬೀದರ್​​ನಲ್ಲಿ ಮುಂಜಾನೆ 11 ಗಂಟೆಗೆ ದರೋಡೆ ಮಾಡಿಕೊಂಡು ಇಲ್ಲಿಂದ 18 ನಿಮಿಷದಲ್ಲಿ ತೆಲಂಗಾಣ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದರು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೈದರಾಬಾದ್ ತಲುಪಿ ಅಲ್ಲಿಂದ ಸಿಕಂದ್ರಬಾದ್ ತಲುಪಿದ್ದಾರೆ. ಸಿಕಂದ್ರಬಾದ್​ನಿಂದ ರೈಲು ಮೂಲಕ ಜಾರ್ಖಂಡ್​ಗೆ ಹೋಗಿದ್ದರು. ಉತ್ತರ ಪ್ರದೇಶದ ವಾರಣಾಸಿ, ಬಿಹಾರ್, ಜಾರ್ಖಂಡ್​​ನಲ್ಲಿ ಬೀದರ್​​ ಪೊಲೀಸರು ಬೀಡುಬಿಟ್ಟು ದರೋಡೆಕೋರರ ಹೆಡೆಮುರಿಕಟ್ಟು ತಯಾರಿ ನಡೆಸಿದ್ದರು. ಆದರೆ ದರೋಡೆಕೋರರು ಪೊಲೀಸರಿಗೆ ಕಳೆದೊಂದು ವರ್ಷದಿಂದ ಚಳ್ಳೆ ಹಣ್ಣು ತಿನ್ನಿಸಿ ಓಡಾಡುತ್ತಿದ್ದಾರೆ.

ಗಾಯಾಳು ಶಿವಕುಮಾರ್ ಹೇಳಿದ್ದಿಷ್ಟು 

ಇತ್ತ ಗಾಯಾಳುವಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಇವರೆಗೆ ಕೊಟ್ಟಿಲ್ಲ. ನೀಡಿದ್ದ ನೌಕರಿ ಕೂಡ ಬೀದರ್​ನಿಂದ 12 ಕಿ.ಮೀ ದೂರವಿತ್ತು. ಹೀಗಾಗಿ ನಾನು ಆ ಕೆಲಸಕ್ಕೆ ಹೋಗಿಲ್ಲ, ನನಗೆ ಬೀದರ್​ನಲ್ಲಿಯೇ ಒಂದು ಗುತ್ತಿಗೆ ಆಧಾರದಲ್ಲಿ ನೌಕರಿ ಕೊಡಿ ಎಂದು ಗಾಯಾಳು ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು

ಬೀದರ್ ಸೇರಿದಂತೆ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಪ್ರಕರಣದ ದರೋಡೆಕಾರರನ್ನು ಹೆಡೆಮುರಿ ಕಟ್ಟಿ ಜನರು ಖಾಕಿ ಪಡೆಯ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On – 4:39 pm, Fri, 16 January 26

Source link

ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ – Kannada News | Haveri bull Death: thousands gather funeral of famous bull om 112 in karjagi

ಹಾವೇರಿ, (ಜನವರಿ 16): ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಕೊಬ್ಬರಿ ಹೋರಿಯು (Kobbari Hori) ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ ನಾಗಪ್ಪ ಮಾಣೆಗರ ಎನ್ನುವರಿಗೆ ಸೇರಿದ್ದ ಕರ್ಜಗಿ ಓಂ-112 ಹೆಸರಿನ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಇನ್ನು ಈ ಹೋರಿ ರಾಜ್ಯ ಮಟ್ಟದ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿ ಇದುವರೆಗೂ ಮೂರು ಬೈಕ್, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಹಲವು ಬಹುಮಾನ ಗೆದ್ದಿದ್ದು, ಅಭಿಮಾನಿಗಳ ಪೈಲ್ವಾನ್ ಎಂದು ಹೆಸರು ಮಾಡಿತ್ತು. ಇಷ್ಟೆಲ್ಲಾ ಸಾಧನೆ ಮಾಡಿರುವ ಹೋರಿಯನ್ನು ಕಳೆದುಕೊಂಡು ಮಾಲೀಕ ಕಣ್ಣೀರಿಟ್ಟಿದ್ದಾನೆ. ಇನ್ನು ಹೋರಿ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದು, ಅಂತಿಮವಾಗಿ ಊರಿನ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಿ ಮಾಲೀಕನ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯ್ತು.

Source link

SSC Constable GD Results Out: SSC ಕಾನ್ಸ್‌ಟೇಬಲ್ GD ಅಂತಿಮ ಫಲಿತಾಂಶ ಪ್ರಕಟ; ರಿಸ್ಟಲ್​​ ಪರಿಶೀಲಿಸುವ ವಿಧಾನ ಇಲ್ಲಿದೆ – Kannada News | SSC Constable GD 2026 Results Out: Download PDF and Next Steps for Selected Candidates

ಸಿಬ್ಬಂದಿ ಆಯ್ಕೆ ಆಯೋಗ (SSC) 2026 ರ SSC ಕಾನ್ಸ್‌ಟೇಬಲ್ GD ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಮಹತ್ವದ ಸುದ್ದಿಯಾಗಿದೆ. ಅಭ್ಯರ್ಥಿಗಳು ಈಗ ಆಯೋಗದ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಪಟ್ಟಿ ಮಾಡುವ PDF ಸ್ವರೂಪದಲ್ಲಿ ಫಲಿತಾಂಶಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.

SSC GD ಕಾನ್ಸ್‌ಟೇಬಲ್ ಫಲಿತಾಂಶ:

ಲಿಖಿತ ಪರೀಕ್ಷೆ, ಪಿಇಟಿ, ಪಿಎಸ್‌ಟಿ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಈ ಫಲಿತಾಂಶವು ನಿರ್ಣಾಯಕವಾಗಿದೆ. ಆಯೋಗವು ಬಿಡುಗಡೆ ಮಾಡಿದ ಪಿಡಿಎಫ್‌ನಲ್ಲಿ ಯಶಸ್ವಿ ಅಭ್ಯರ್ಥಿಗಳ ಹೆಸರುಗಳು ಮತ್ತು ರೋಲ್ ಸಂಖ್ಯೆಗಳು ಸೇರಿವೆ. ಇದು ವರ್ಗವಾರು ಕಟ್‌ಆಫ್‌ಗಳನ್ನು ಸಹ ಒದಗಿಸುತ್ತದೆ, ಇದು ಅಭ್ಯರ್ಥಿಗಳು ಪ್ರತಿ ವರ್ಗದಲ್ಲಿ ತಮ್ಮ ಆಯ್ಕೆ ಮಾನದಂಡಗಳನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ.

ಅಂತಿಮ ಫಲಿತಾಂಶ ಡೌನ್‌ಲೋಡ್ ಮಾಡುವುದು ಹೇಗೆ?

ಫಲಿತಾಂಶಗಳನ್ನು ಪರಿಶೀಲಿಸಲು, ಅಭ್ಯರ್ಥಿಗಳು ಮೊದಲು SSC ಯ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಬೇಕು. ಮುಖಪುಟದಲ್ಲಿರುವ ಕ್ವಿಕ್ ಲಿಂಕ್ಸ್ ವಿಭಾಗಕ್ಕೆ ಹೋಗಿ “ಫಲಿತಾಂಶ” ಕ್ಲಿಕ್ ಮಾಡಿ. ನಂತರ, SSC ಕಾನ್ಸ್‌ಟೇಬಲ್ GD ಅಂತಿಮ ಫಲಿತಾಂಶ 2026 ಗಾಗಿ ಲಿಂಕ್ ಅನ್ನು ಆಯ್ಕೆ ಮಾಡಿ. ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಪರದೆಯಲ್ಲಿ ಫಲಿತಾಂಶದ PDF ತೆರೆಯುತ್ತದೆ. ಅಭ್ಯರ್ಥಿಗಳು ತಮ್ಮ ಹೆಸರು ಮತ್ತು ರೋಲ್ ಸಂಖ್ಯೆಯನ್ನು ಹುಡುಕಬಹುದು. ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳುವುದು ಅಥವಾ PDF ಅನ್ನು ಉಳಿಸುವುದು ಉತ್ತಮ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

SSC ಅಧಿಸೂಚನೆಯ ಪ್ರಕಾರ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 50,047 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಈ ಅಭ್ಯರ್ಥಿಗಳನ್ನು ಹಲವಾರು ಸುತ್ತಿನ ಪರೀಕ್ಷೆಗಳು ಮತ್ತು ಸ್ಕ್ರೀನಿಂಗ್ ಮೂಲಕ ಆಯ್ಕೆ ಮಾಡಲಾಗಿದೆ. ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಿದ ನಂತರ, ಯಾವುದೇ ದೋಷಗಳನ್ನು ತಪ್ಪಿಸಲು ಅಭ್ಯರ್ಥಿಗಳು ತಮ್ಮ ಹೆಸರುಗಳು, ರೋಲ್ ಸಂಖ್ಯೆಗಳು ಮತ್ತು ಪಡೆದ ಅಂಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ಫಲಿತಾಂಶದ ನಂತರ ಮುಂದೇನು?

ಜಿಡಿ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳು ಈಗ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ (CAPF) ಸೇರ್ಪಡೆ ಪತ್ರಗಳನ್ನು ಸ್ವೀಕರಿಸುತ್ತಾರೆ. ಈ ಸೇರ್ಪಡೆ ಪತ್ರಗಳನ್ನು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನೀಡುವ ನಿರೀಕ್ಷೆಯಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳ ಬಗ್ಗೆ ತಿಳಿಸಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಚಿತ್ರೀಕರಣ: ಯೂಟ್ಯೂಬರ್​​ಗೆ ಶಾಕ್​​ ಕೊಟ್ಟ ಇಲಾಖೆ – Kannada News | Forest Department Files FIR Against YouTuber Over Illegal Entry, Filming in Tiger Reserve

ಯೂಟ್ಯೂಬರ್​​ ಚಿತ್ರೀಕರಿಸಿದ ದೃಶ್ಯ

ಉತ್ತರ ಕನ್ನಡ, ಜನವರಿ 16: ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅನುಮತಿ ಇಲ್ಲದೆ ತಂಗಿದ ಹಾಗೂ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಯೂಟ್ಯೂಬರ್​​ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಇಲಾಖೆ ನೋಟಿಸ್ ನೀಡಿದರೂ, ಆತ ಸಂಪರ್ಕಕ್ಕೆ ಸಿಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ @sg_malenadu ಎಂಬ ಹೆಸರಿನಿಂದ ಪರಿಚಿತನಾಗಿರುವ ಯೂಟ್ಯೂಬರ್, ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಂಗಿದ್ದು ಮಾತ್ರವಲ್ಲದೆ ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾನೆ ಎಂದು ಹೇಳಲಾಗಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಒಳಗಿನ ಕುಮ್ಬಾರವಾಡದ ಪಥೆಗುಡಿ ಪ್ರದೇಶವು ಹುಲಿಗಳ ನಿರಂತರ ಸಂಚಾರವಿರುವ ಕೋರ್ ಟೈಗರ್ ರಿಸರ್ವ್ ಆಗಿದ್ದು, ನಿಯಮಾನುಸಾರ ಇದು ಪ್ರವಾಸೋದ್ಯಮಕ್ಕೆ ಸಂಪೂರ್ಣ ನಿಷೇಧಿತ ಪ್ರದೇಶವಾಗಿದೆ. ಆದರೆ ಕಳೆದ ನವೆಂಬರ್‌ನಲ್ಲಿ ಗಂಭೀರ ನಿಯಮ ಉಲ್ಲಂಘನೆ ನಡೆದಿದೆ. 2025ರ ನವೆಂಬರ್ 5ರಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಯೂಟ್ಯೂಬರ್​​, ಬೈಕ್ ಅನ್ನು ಆ ಪ್ರದೇಶದಲ್ಲಿ ಓಡಿಸಿದ್ದಾನೆ. ಚಿತ್ರೀಕರಣ ಮಾಡಿದ ವಿಡಿಯೋವನ್ನು 2025ರ ನವೆಂಬರ್ 21ರಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ.

ಇದನ್ನೂ ಓದಿ: ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಪೊಲೀಸರಿಗೆ ಕಾದಿತ್ತು ಶಾಕ್! ಕಳ್ಳತನ ಮಾಡಿದ್ದು ಅವನಲ್ಲ ಅವಳು!

ಅಪ್ಲೋಡ್ ಆದ ವಿಡಿಯೋವನ್ನು ಇಲಾಖೆ ಪರಿಶೀಲಿಸಿದ್ದು, ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ವಿವರಣೆ ಕೇಳಿ ನೋಟಿಸ್ ನೀಡಿದೆ. ಕುಮ್ಬಾರವಾಡ ರೇಂಜ್ ಫಾರೆಸ್ಟ್ ಕಚೇರಿಗೆ ಹಾಜರಾಗಿ ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದರೂ, ಆತ ಪ್ರತಿಕ್ರಿಯಿಸದ ಕಾರಣ ಡಿಸೆಂಬರ್ 2ರಂದು ಯೂಟ್ಯೂಬರ್​​ ವಿರುದ್ಧ ದೂರು ದಾಖಲು ಮಾಡಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕುಮ್ಬಾರವಾಡ ರೇಂಜ್ ಫಾರೆಸ್ಟ್ ಅಧಿಕಾರಿ (ಆರ್‌ಎಫ್‌ಒ) ಗಿರೀಶ್ ಚೌಗಲೆ , ಆರೋಪಿತ ವ್ಯಕ್ತಿ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾನೆ . ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾವನ್ನು ತರಿಸಿ ಸಂಪೂರ್ಣ ಪರಿಶೀಲನೆ ನಡೆಸಿ ದೃಶ್ಯಗಳನ್ನು ಡಿಲೀಟ್​​ ಮಾಡುವಂತೆ ಇಲಾಖೆ ಸೂಚಿಸಿದೆ ಎಂದು ಅವರು ಹೇಳಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bedi Hanuman Temple: ಇಲ್ಲಿ ಹನುಮಂತನನ್ನು ಸರಪಳಿಯಲ್ಲಿ ಕಟ್ಟಿ ಹಾಕಿ ಪೂಜಿಸಲಾಗುತ್ತದೆ; ಈ ದೇವಾಲಯ ಎಲ್ಲಿದೆ ಗೊತ್ತಾ? – Kannada News | Bedi Hanuman Temple Puri: The Mystery of Hanuman in Golden Chains at Jagannath Dham

ಒಡಿಶಾದ ಪುರಿ ಜಗನ್ನಾಥ ದೇವಾಲಯದ ಸುತ್ತಲೂ ಅನೇಕ ಇತಿಹಾಸ ಹೊಂದಿರುವ ವಿಶಿಷ್ಟ ದೇವಾಲಯಗಳಿವೆ. ಅವುಗಳಲ್ಲಿ ಒಂದು ಹನುಮಾನ್ ದೇವಾಲಯ. ಆದರೆ ಇಲ್ಲಿನ ವಿಶಿಷ್ಟತೆ ಏನೆಂದರೆ ಈ ದೇವಾಲಯದಲ್ಲಿ ಹನುಮಂತನನ್ನು​ ಬಂಗಾರದ ಸರಪಳಿಯಲ್ಲಿ ಬಂಧಿಸಲಾಗಿದೆ. ಕೇಳೋದಕ್ಕೆ ಅಚ್ಚರಿ ಎನಿಸಿದ್ರೂ ಇದು ಸತ್ಯ. ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ. ಬಂಗಾರದ ಸರಪಳಿಯಲ್ಲಿ ಬಂಧಿಸಲ್ಪಟ್ಟಿರುವ ಈ ದೇವರನ್ನು ಕಾಣೋದಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ.

ಈ ದೇವಾಲಯವನ್ನು ‘ಬೇಡಿ ಹನುಮ ಮಂದಿರ’ ಎನ್ನುವುದೇಕೆ?

ಈ ದೇವಾಲಯಕ್ಕೆ ಬೇಡಿ ಹನುಮಾನ್ ದೇವಾಲಯ ಎಂದು ಏಕೆ ಹೆಸರಿಸಲಾಗಿದೆ ಅನ್ನೋ ಪ್ರಶ್ನೆ ಮೂಡಬಹುದು. ವಾಸ್ತವವಾಗಿ, ಇದಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಗಳನ್ನು ಕೇಳಿದರೆ, ಪ್ರಾಚೀನ ಕಾಲದಲ್ಲಿ, ಸಮುದ್ರದ ಅಲೆಗಳು ಮೂರು ಬಾರಿ ಜಗನ್ನಾಥ ದೇವಾಲಯಕ್ಕೆ ನುಗ್ಗಿ ಬರುತ್ತಾ ಇತ್ತಂತೆ. ಇದರಿಂದ ಮಹಾಪ್ರಭು ಜಗನ್ನಾಥ, ಪವನ ಪುತ್ರ ಹನುಮಂತನನ್ನು ಸಮುದ್ರವನ್ನು ನಿಯಂತ್ರಿಸಲು ಇಲ್ಲಿ ನೇಮಿಸಿದರು. ಆದರೆ ಪವನಸುತ ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು ನೋಡಲು ಒಳಗೆ ಹೋಗಲು ಪ್ರಯತ್ನಿಸಿದಾಗ, ಸಮುದ್ರವೂ ಅವನ ಹಿಂದೆ ನಗರವನ್ನು ಪ್ರವೇಶಿಸಲು ಪ್ರಾರಂಭಿಸಿತು. ಇದನ್ನು ನೋಡಿದ ಜಗನ್ನಾಥ ದೇವರು ಹನುಮಂತನನ್ನು ಈ ಚಿನ್ನದ ಸಂಕೋಲೆಗಳಿಂದ ಕಟ್ಟಿದರು. ಆದ್ದರಿಂದಲೇ ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಬೇಡಿ ಹನುಮಾನ್ ದೇವಾಲಯದ ಸೌಂದರ್ಯ:

ಪೂರ್ವಕ್ಕೆ ಮುಖ ಮಾಡಿದ ಹನಮಾನ್​ ದೇವಾಲಯದ ವಾಸ್ತುಶಿಲ್ಪವು ತುಂಬಾ ಸರಳವಾಗಿ ಸುಂದರವಾಗಿದೆ. ದೇವಾಲಯದ ಮುಖ್ಯ ದೇವರು ಹನುಮಂತನ ಬಲಗೈಯಲ್ಲಿ ಗದೆ ಮತ್ತು ಎಡಗೈಯಲ್ಲಿ ಲಡ್ಡೂ ಇದೆ. ದೇವಾಲಯದ ಹೊರ ಗೋಡೆಗಳ ಮೇಲೆ, ವಿವಿಧ ದೇವರು ಮತ್ತು ದೇವತೆಗಳ ಚಿತ್ರಗಳಿವೆ. ದಕ್ಷಿಣ ಗೋಡೆಯ ಮೇಲೆ ಗಣೇಶನ ವಿಗ್ರಹವಿದೆ. ಪಶ್ಚಿಮ ಗೋಡೆಯ ಮೇಲೆ ಹನುಮನ ತಾಯಿ ಅಂಜನಾ ವಿಗ್ರಹವಿದೆ. ಅವರ ಮಡಿಲಲ್ಲಿ ಬಾಲ ಹನುಮಂತ ಕುಳಿತಿದ್ದಾನೆ ಮತ್ತು ಉತ್ತರ ಗೋಡೆಯ ಮೇಲೆ ಅನೇಕ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಕಾಣಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link