ಕೊಹ್ಲಿಯೊಂದಿಗೆ ಜಗಳ ಮಾಡಿಕೊಂಡಿದ್ದ ಸ್ಟಾರ್ ವೇಗಿ ಟಿ20 ವಿಶ್ವಕಪ್‌ನಿಂದ ಔಟ್
ಐಸಿಸಿ ಟಿ20 ವಿಶ್ವಕಪ್ 2026 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7 ರಂದು ಪಂದ್ಯಾವಳಿ ಆರಂಭವಾಗಲಿದ್ದು, ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಸೇರಿದಂತೆ ಹಲವಾರು ತಂಡಗಳು ತಮ್ಮ ತಂಡಗಳನ್ನು ಈಗಾಗಲೇ ಘೋಷಿಸಿವೆ. ಆದಾಗ್ಯೂ, ಪಂದ್ಯಾವಳಿಗೂ ಮುನ್ನ ಅಫ್ಘಾನಿಸ್ತಾನಕ್ಕೆ ದೊಡ್ಡ ಹಿನ್ನಡೆಯುಂಟಾಗಿದ್ದು, ಗಾಯದಿಂದಾಗಿ 2026 ರ ಟಿ20 ವಿಶ್ವಕಪ್‌ನಿಂದ ಅಫ್ಘಾನ್ನ ಸ್ಟಾರ್ ಆಟಗಾರ ಹೊರಬಿದ್ದಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನವೀನ್ ಉಲ್ ಹಕ್ ಮತ್ತೆ ಗಾಯಗೊಂಡಿದ್ದಾರೆ. ಹೀಗಾಗಿ ಮುಂದಿನ ವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು…