ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್: ಅಟ್ಟಾಡಿಸಿ ಅಟ್ಯಾಕ್
ಚಾಮರಾಜನಗರ, ಮೇ 21: ಜಿಲ್ಲೆಯ ತಮಿಳುನಾಡಿನ ಗಡಿ ತಾಳವಾಡಿಯ ಮರೂರು ಬಳಿ ಸಂಜೆಯಾದರೆ ಒಂಟಿ ಸಲಗ ರಸ್ತೆಗಿಳಿಯುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿಯೇ ದಿನ ದೂಡುವಂತಾಗಿದೆ. ವಾಹನಗಳು ಬಂದರೆ ಈ ಆನೆ ಅಟ್ಟಾಡಿಸುವ ಕಾರಣ ಸಂಜೆ ವೇಳೆ ರಸ್ತೆಯಲ್ಲಿ ಸಂಚರಿಸಲೂ ವಾಹನ ಸವಾರರು ಭಯಪಡಬೇಕಾದ ಸ್ಥಿತಿ ಉದ್ಭವಿಸಿದೆ. ಬೆಳಗಿನ ವೇಳೆ ಜಮೀನುಗಳತ್ತ ಲಗ್ಗೆ ಇಡುತ್ತಿದ್ದ ಕಾಡಾನೆಗಳು ಇದೀಗ ಗ್ರಾಮಗಳ ಸುತ್ತಮುತ್ತವೇ ಸಂಚಾರ ನಡೆಸುತ್ತಿರೋದು ಆತಂಕ ಹೆಚ್ಚಿಸಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. Source link