Category Archives: Blog

Your blog category

ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ ಹೇಳಿದ್ದಿಷ್ಟು – Kannada News | Siddaramaiah Talks about non veg Lunch In Congress Leader KN Rajanna Home at Tumakuru

ತುಮಕೂರು, (ಜನವರಿ 16): ಸಿಎಂ ಸಿದ್ದರಾಮಯ್ಯನವರು ಇಂದು (ಜನವರಿ 16) ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿದರು. ಬಳಿಕ
ಸಿದ್ದರಾಮಯ್ಯನವರು ನೇರವಾಗಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಕೆಎನ್ ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಭರ್ಜರಿ ಊಟ ಸವಿದರು. ಸಿದ್ದರಾಮಯ್ಯನವರಿಗಂತಲೇ ಅವರಿಗೆ ಇಷ್ಟವಾದ ನಾಟಿ ಕೋಳಿ ಬಾಡೂಟ ತಯಾರಿಸಲಾಗಿತ್ತು. ರಾಗಿ ಮುದ್ದೆ, ನಾಟಿಕೋಳಿ ಸಾರು, ಕಾಲ್ ಸೂಪ್ ಸೇರಿದಂತೆ ವಿವಿಧ ಖಾದ್ಯ ಸಿದ್ಧಪಡಿಸಲಾಗಿದ್ದು, ಸಿದ್ದರಾಮಯ್ಯನವರು ಸಹ ರಾಜಣ್ಣನವರ ನಿವಾಸಕ್ಕೆ ತೆರಳಿ ಬಾಡೂಟ ಸವಿದಿದ್ದಾರೆ.

ಊಟದ ಬಳಿಕ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಕೆ.ಎನ್.ರಾಜಣ್ಣ ನಿವಾಸದಲ್ಲಿ ಸಿದ್ಧಪಡಿಸಿದ್ದ ಊಟ ಚೆನ್ನಾಗಿತ್ತು. ಕಾಲ್ ಸೂಪ್, ನಾಟಿ ಕೋಳಿ ತಂದು ಅಡುಗೆ ಮಾಡಿಸಿದ್ದರು. ನನಗೆ ಹುಷಾರಿರಲಿಲ್ಲ. ಜ್ವರ ಇದ್ದುದರಿಂದ ಬಾಯಿ ಕೆಟ್ಟೋಗಿತ್ತು. ನಾನ್ ವೆಜ್ ಇತ್ತಲ್ಲ ಚೆನ್ನಾಗಿತ್ತು ಊಟ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AUS: ಭಾರತ-ಆಸ್ಟ್ರೇಲಿಯಾ ನಡುವೆ 3 ಮಾದರಿಯ ಸರಣಿ; ವೇಳಾಪಟ್ಟಿ ಪ್ರಕಟ – Kannada News | India Women vs Australia 2025: Full Series Schedule and Alyssa Healy Farewell Tour

ಪ್ರಸ್ತುತ ಭಾರತದಲ್ಲಿ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ನಡೆಯುತ್ತಿದೆ. ಹೀಗಾಗಿ ಭಾರತ ಮಹಿಳಾ ತಂಡದ ಎಲ್ಲಾ ಆಟಗಾರ್ತಿಯರು ಈ ಮಿನಿ ಟಿ20 ಸಮರದಲ್ಲಿ ನಿರತರಾಗಿದ್ದಾರೆ. ಆ ಬಳಿಕ ಹರ್ಮನ್​ಪ್ರೀತ್ ಕೌರ್ (Harmanpreet Kaur) ಪಡೆ ಏಕದಿನ, ಟಿ20 ಮತ್ತು ಏಕೈಕ ಟೆಸ್ಟ್ ಪಂದ್ಯದ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಟೀಂ ಇಂಡಿಯಾದ ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ 2025 ರಲ್ಲೇ ಪ್ರಕಟಿಸಿತ್ತು. ಈ 3 ಸರಣಿಗಳಿಗಾಗಿ ಭಾರತ, ಆಸ್ಟ್ರೇಲಿಯಾ ಪ್ರವಾಸ (India vs Australia) ಕೈಗೊಳ್ಳಲಿದ್ದು, ಅಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ಮೂರು ಏಕದಿನ ಮತ್ತು ಮೂರು ಟಿ20 ಹಾಗೂ ಏಕೈಕ 4 ದಿನಗಳ ಟೆಸ್ಟ್ ಪಂದ್ಯವನ್ನು ಆಡಲಿದೆ.

ಭಾರತ-ಆಸೀಸ್ ನಡುವೆ 3 ಮಾದರಿಯ ಸರಣಿ

ಈ ಪ್ರವಾಸವು ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20ಪಂದ್ಯ ಫೆಬ್ರವರಿ 15 ರಂದು ಸಿಡ್ನಿಯಲ್ಲಿ ನಡೆಯಲಿದೆ. ಎರಡನೇ ಟಿ20ಪಂದ್ಯ ಫೆಬ್ರವರಿ 19 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಫೆಬ್ರವರಿ 21 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 24 ರಂದು ಆರಂಭವಾಗಲಿದೆ. ಮೊದಲ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಎರಡನೇ ಏಕದಿನ ಪಂದ್ಯ ಫೆಬ್ರವರಿ 27 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಮಾರ್ಚ್ 1 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಅಂತಿಮವಾಗಿ ಮಾರ್ಚ್​ 6 ರಿಂದ 9 ರವರೆಗೆ ಏಕೈಕ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ.

ಆಸ್ಟ್ರೇಲಿಯಾದಲ್ಲಿ ಭಾರತದ ದಾಖಲೆ ಹೇಗಿದೆ?

ಆಸ್ಟ್ರೇಲಿಯಾ ಪ್ರವಾಸವು ಟೀಂ ಇಂಡಿಯಾಗೆ ಖಂಡಿತವಾಗಿಯೂ ಸುಲಭವಲ್ಲ. ಏಕೆಂದರೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ದಾಖಲೆಯು ಏಕದಿನ ಮತ್ತು ಟಿ20 ಎರಡೂ ಸ್ವರೂಪಗಳಲ್ಲಿ ಅತ್ಯಂತ ಕಳಪೆಯಾಗಿದೆ. ಮೊದಲನೆಯದಾಗಿ, ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಆಡಿದ 19 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು, 15 ಪಂದ್ಯಗಳಲ್ಲಿ ಸೋತಿದೆ. ಇದು ಮಾತ್ರವಲ್ಲದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಇದುವರೆಗೆ ಏಕದಿನ ಸರಣಿಯನ್ನು ಗೆದ್ದಿಲ್ಲ. ಇನ್ನು ಟಿ20 ಮಾದರಿಯಲ್ಲಿ, ಭಾರತ 12 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಏಳು ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಭಾರತ ಆಸ್ಟ್ರೇಲಿಯಾದಲ್ಲಿ ಒಂದು ಟಿ20 ಸರಣಿಯನ್ನು ಗೆದ್ದಿದ್ದು, ಆ ಗೆಲುವು 10 ವರ್ಷಗಳ ಹಿಂದೆ ಅಂದರೆ 2016 ರಲ್ಲಿ ಬಂದಿತ್ತು. ಈ ಬಾರಿ ಏನಾಗುತ್ತದೆ ಎಂದು ನೋಡುವುದು ಆಸಕ್ತಿದಾಯಕವಾಗಿರುತ್ತದೆ.

ಅಲಿಸಾ ಹೀಲಿಯ ಕೊನೆಯ ಸರಣಿ

ಈ ಭಾರತ-ಆಸ್ಟ್ರೇಲಿಯಾ ಸರಣಿಯು ಅಲಿಸಾ ಹೀಲಿ ಅವರ ಕೊನೆಯ ಸರಣಿಯಾಗಲಿದೆ. ಈ ಸರಣಿಯ ನಂತರ ಅವರು ನಿವೃತ್ತರಾಗಲಿದ್ದಾರೆ. ಈ ಲೆಜೆಂಡರಿ ವಿಕೆಟ್ ಕೀಪರ್-ಬ್ಯಾಟರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. 35 ವರ್ಷ ವಯಸ್ಸಿನ ಅವರು 123 ಏಕದಿನ ಪಂದ್ಯಗಳಲ್ಲಿ 35.98 ಸರಾಸರಿಯಲ್ಲಿ 3,563 ರನ್ ಗಳಿಸಿದ್ದಾರೆ, ಇದರಲ್ಲಿ ಏಳು ಶತಕಗಳು ಸೇರಿವೆ. ಹಾಗೆಯೇ ಟಿ20ಮಾದರಿಯಲ್ಲಿ 25.45 ಸರಾಸರಿಯಲ್ಲಿ 3,054 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:55 pm, Fri, 16 January 26

Source link

ಆಪರೇಷನ್ ಸಿಂಧೂರ್ ದೊಡ್ಡ ದಾಳಿಯಾಗಿತ್ತು, ಪಾಕಿಸ್ತಾನವನ್ನೇ ದಿಗ್ಭ್ರಮೆಗೊಳಿಸಿತು; ಒಪ್ಪಿಕೊಂಡ ಲಷ್ಕರ್ ಕಮಾಂಡರ್ – Kannada News | It was a major attack left Pakistan government baffled Lashkar commander Admission on massive Operation Sindoor damage

ನವದೆಹಲಿ, ಜನವರಿ 16: 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ಮೇ 6 ಮತ್ತು 7ರ ಮಧ್ಯರಾತ್ರಿಯ ದಾಳಿಯ ಸಮಯದಲ್ಲಿ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಿತ್ತು ಎಂದು ಲಷ್ಕರ್-ಎ-ತೈಬಾ (ಎಲ್‌ಇಟಿ) ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ರೌಫ್, ಆಪರೇಷನ್ ಸಿಂಧೂರ್ ಅನ್ನು ಪ್ರಮುಖ ದಾಳಿ ಎಂದು ಕರೆದಿದ್ದಾರೆ. ಆ ದಾಳಿ ಪಾಕಿಸ್ತಾನ (Pakistan) ಸರ್ಕಾರವನ್ನು ದಿಗ್ಭ್ರಮೆಗೊಳಿಸಿತು, ಆದರೆ, ಪಾಕಿಸ್ತಾನೀಯರನ್ನು ಹೇಗೋ ಅಲ್ಲಾಹ್ ರಕ್ಷಿಸಿದನು ಎಂದು ಹೇಳಿದ್ದಾರೆ.

“ಮೇ 6 ಮತ್ತು 7ರಂದು ಮುರಿಡ್ಕೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಮಸೀದಿಯನ್ನು ಗುರಿಯಾಗಿಸಿಕೊಂಡು ಕೆಡವಲಾಯಿತು. ಅದು ಒಂದು ದೊಡ್ಡ ದಾಳಿಯಾಗಿತ್ತು, ಆದರೆ ಅಲ್ಲಾಹ್ ನಮ್ಮನ್ನು ರಕ್ಷಿಸಿದನು. ಅಲ್ಲಿ ಮಕ್ಕಳು ಇರಲಿಲ್ಲ” ಎಂದು ಅವರು ಹೇಳುವ ವಿಡಿಯೋ ವೈರಲ್ ಆಗಿದೆ. “ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೋದಿ ಹೇಳಿದರು, ಆದರೆ ವಾಸ್ತವದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಾಗಿತ್ತು, ಯುದ್ಧದ ನಿಯಮಗಳು ಬದಲಾಗಿವೆ” ಎಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಭಾರತದಿಂದ ದೇವರೇ ನಮ್ಮನ್ನು ಕಾಪಾಡಿದ; ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದೇನು?

ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಲ್‌ಇಟಿಯ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮತ್ತೆ ‘ಟಾಕ್ಸಿಕ್’ ಚಿತ್ರಕ್ಕೆ ಚಿಂತೆ ತಂದಿಟ್ಟ ‘ಧುರಂದರ್ 2’ ಟೀಂ – Kannada News | Dhurandhar 2 vs Toxic: Yash’s Film Release and Akshay Khanna Reshoot Rumors Explained

‘ಧುರಂಧರ್’ ಸಿನಿಮಾ (Dhurandhar Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ 2025ರ ಡಿಸೆಂಬರ್ 5ರಂದು ತೆರೆಗೆ ಬಂತು. ಈಗಲೂ ಸಿನಿಮಾ ಅದ್ಭುತ ಕಲೆಕ್ಷನ್ ಮಾಡುತ್ತಿದೆ. ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈಗ ಸಿನಿಮಾಗೆ ಸೀಕ್ವೆಲ್ ಬರುತ್ತಿದೆ. ಮಾರ್​ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಈ ವಿಷಯದಲ್ಲಿ ಇನ್ನೂ ಗೊಂದಲ ಇದೆ. ಹೀಗಿರುವಾಗಲೇ ಒಂದು ಅಪ್​​​ಡೇಟ್ ಸಿಕ್ಕಿದೆ. ಇದು ‘ಟಾಕ್ಸಿಕ್’ ಚಿತ್ರ ತಂಡದ ಚಿಂತೆಗೆ ಕಾರಣ ಆಗಿದೆ.

‘ಧುರಂಧರ್ 2’ ಸಿನಿಮಾ ಮಾರ್ಚ್ ರೇಸ್​​ನಿಂದ ಮುಂದಕ್ಕೆ ಹೋಗಿದೆ ಎನ್ನಲಾಗಿತ್ತು. ಇದಕ್ಕೆ ಕಾರಣ ಅಕ್ಷಯ್ ಖನ್ನಾ. ‘ಧುರಂದರ್ 2’ ಚಿತ್ರದ ಕೆಲವು ದೃಶ್ಯಗಳನ್ನು ರೀಶೂಟ್ ಮಾಡುವ ಅಗತ್ಯವಿರುವ ಕಾರಣಕ್ಕೆ ಅಕ್ಷಯ್ ಖನ್ನಾ ಅವರ ಕಾಲ್​​ಶೀಟ್ ಕೇಳಲಾಗಿದೆ ಎನ್ನಲಾಗಿತ್ತು. ಆದರೆ, ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ, ಅಕ್ಷಯ್ ಖನ್ನಾ ಯಾವುದೇ ಶೂಟ್​​ನಲ್ಲಿ ಭಾಗಿ ಆಗುತ್ತಿಲ್ಲವಂತೆ.

ಆದಿತ್ಯ ಧಾರ್ ಅವರು ಪರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದಾರೆ. ಅವರು ಸ್ಕ್ರಿಪ್ಟ್​​ನ ಬರೆಯುವಾಗಲೇ ಎಲ್ಲವನ್ನೂ ಆಲೋಚಿಸಿರುತ್ತಾರೆ. ‘ಧುರಂದರ್ 2’ ವಿಷಯದಲ್ಲೂ ಅವರು ಹಾಗೆಯೇ ಮಾಡಿದ್ದಾರೆ. ಈಗಾಗಲೇ ಸಿನಿಮಾ ಶೂಟ್ ಪೂರ್ಣಗೊಂಡಿದ್ದು, ಅವರು ಭಾಗಿ ಆಗೋದಿಲ್ಲ ಎಂದು ಹೇಳಲಾಗುತ್ತಿದೆ.

ಅಕ್ಷಯ್ ಖನ್ನಾ ಅವರು ‘ಧುರಂಧರ್ 2’ ಚಿತ್ರದ ಕೆಲವೇ ದೃಶ್ಯಗಳಲ್ಲಿ ಬರಲಿದ್ದಾರೆ. ಇದನ್ನು ಈಗಾಗಲೇ ಶೂಟ್ ಮಾಡಲಾಗಿದೆ. ಹೀಗಾಗಿ, ‘ಧುಂಧರ್ 2’ ಚಿತ್ರದ ರೀಶೂಟ್ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಇದೇ ದಿನ ‘ಧುರಂದರ್ 2’ ಕೂಡ ರಿಲೀಸ್ ಆಗಲಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಬಜೆಟ್ ಸುರಿಯಲಾಗಿದೆ. ಹಿಂದಿ ಬೆಲ್ಟ್​​ನಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನಿರೀಕ್ಷಿಸಬಹುದಾಗಿದೆ.

‘ಟಾಕ್ಸಿಕ್’ ಸಿನಿಮಾಗೆ ಯಶ್ ಹೀರೋ. ಗೀತು ಮೋಹನ್​​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್​ನಲ್ಲೂ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಎಂಸಿ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ; ಭರ್ಜರಿ ಗೆಲುವಿನತ್ತ ಬಿಜೆಪಿ ಮೈತ್ರಿಕೂಟ; ಠಾಕ್ರೆ ಸಹೋದರರಿಗೆ ಹಿನ್ನಡೆ – Kannada News | BMC Election Results BJP led Mahayuti inches towards big win Thackerays Lose Grip On Mumbai

ಮುಂಬೈ, ಜನವರಿ 16: ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಸಂಗತಿಯಾಗಿರುವ ಬಿಎಂಸಿ ಚುನಾವಣೆಯ ಫಲಿತಾಂಶ ಹೊರಬೀಳಲು ಕೆಲವೇ ಕ್ಷಣಗಳು ಬಾಕಿ ಇದೆ. ಈಗಾಗಲೇ ಎಕ್ಸಿಟ್ ಪೋಲ್ (Exit Polls) ಊಹಿಸಿರುವಂತೆ ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಗಳಿಸುವುದು ಖಚಿತವಾಗಿದೆ. ಈ ಮೂಲಕ 25 ವರ್ಷಗಳಿಂದ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (BMC) ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಉದ್ಧವ್ ಠಾಕ್ರೆಗೆ ಈ ಬಾರಿ ಭಾರೀ ಮುಖಭಂಗವಾಗಲಿದೆ. ಇಂದು ಸಂಜೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಯಾರು ಮುಂದಿದ್ದಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯ ಎಲ್ಲಾ 23 ಗೊತ್ತುಪಡಿಸಿದ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿರುವಾಗ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟ ಮುಂಬೈಯನ್ನು ಮುನ್ನಡೆಸಲಿದೆ. ಇಂದು ಸಂಜೆಯೊಳಗೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗುವುದು.

227 ವಾರ್ಡ್‌ಗಳಲ್ಲಿ ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡಲು ಗುರುವಾರ (ಜನವರಿ 15) ಬಿಎಂಸಿ ಚುನಾವಣೆಗಳು ನಡೆದವು. ಇದು ಭಾರತದ ಅತಿದೊಡ್ಡ ಮತ್ತು ಶ್ರೀಮಂತ ಪುರಸಭೆ ಎಂದು ಪರಿಗಣಿಸಲ್ಪಟ್ಟಿದ್ದು, ಬಹುಮತ ಗೆಲ್ಲಲು ಕನಿಷ್ಠ 114 ಸ್ಥಾನಗಳು ಬೇಕಾಗುತ್ತವೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು. 879 ಮಹಿಳೆಯರು ಮತ್ತು 821 ಪುರುಷರು ಸೇರಿದಂತೆ ಸುಮಾರು 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸದ್ಯದ ಮಟ್ಟಿಗೆ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 115 ವಾರ್ಡ್‌ಗಳಲ್ಲಿ ಮುಂದಿದ್ದರೆ, ಠಾಕ್ರೆ ಸೋದರರು 77 ಸ್ಥಾನಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: BMC Election Exit Polls: ಮುಂಬೈನಲ್ಲಿ ಉದ್ಧವ್ ಠಾಕ್ರೆಯ 25 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಗೆ ಬಹುಮತ; ಮತಗಟ್ಟೆ ಸಮೀಕ್ಷೆ ಭವಿಷ್ಯ

ಬಿಎಂಸಿಯಲ್ಲಿ ಬಿಜೆಪಿ 136 ವಾರ್ಡ್‌ಗಳಲ್ಲಿ ಸ್ಪರ್ಧಿಸಿದರೆ, ಶಿವಸೇನೆ (ಶಿಂಧೆ ಬಣ) 89 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಮತ್ತೊಂದೆಡೆ, ಶಿವಸೇನೆ (ಯುಬಿಟಿ) 164 ವಾರ್ಡ್‌ಗಳಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 52 ವಾರ್ಡ್‌ಗಳಲ್ಲಿ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) 12 ವಾರ್ಡ್‌ಗಳಲ್ಲಿ ಸ್ಪರ್ಧಿಸಿತು. ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆ (ಶಿಂಧೆ)ಗೆ ದೊಡ್ಡ ಹಿನ್ನಡೆಯಾಗಿದ್ದು, ಶಿಂಧೆ ಸೇನಾ ಸಂಸದ ರವೀಂದ್ರ ವೈಕರ್ ಅವರ ಪುತ್ರಿ ದೀಪ್ತಿ ವೈಕರ್ ವಾರ್ಡ್ ಸಂಖ್ಯೆ 73ರಿಂದ ಚುನಾವಣೆಯಲ್ಲಿ ಸೋತಿದ್ದಾರೆ.

ಬಿಎಂಸಿಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 115 ವಾರ್ಡ್‌ಗಳಲ್ಲಿ ಮುಂದಿದೆ. ಬಿಜೆಪಿ 86 ​​ರಲ್ಲಿ ಮುನ್ನಡೆ ಸಾಧಿಸಿದರೆ, ಏಕನಾಥ್ ಶಿಂಧೆ ಅವರ ಶಿವಸೇನೆ 29 ವಾರ್ಡ್‌ಗಳಲ್ಲಿ ಮುಂದಿದೆ. ಠಾಕ್ರೆ ಸೋದರಸಂಬಂಧಿಗಳು 77 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ಸೇನೆ 71ರಲ್ಲಿ ಮುಂದಿದ್ದರೆ, ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 6 ವಾರ್ಡ್‌ಗಳಲ್ಲಿ ಮುಂದಿದೆ.

ಇದನ್ನೂ ಓದಿ: Pune Elections: ಮುಂಬೈ ಜೊತೆ ಪುಣೆಯಲ್ಲೂ ಬಿಜೆಪಿಯದ್ದೇ ದರ್ಬಾರ್; ಎಕ್ಸಿಟ್ ಪೋಲ್​ನಲ್ಲಿ ಏನಿದೆ?

ಮಹಾರಾಷ್ಟ್ರದಾದ್ಯಂತ 29 ಮುನ್ಸಿಪಲ್ ಕಾರ್ಪೊರೇಷನ್‌ಗಳ ಒಟ್ಟಾರೆ ಅಂಕಿಅಂಶಗಳು ಬಿಜೆಪಿಗೆ ಜಯ ಸಿಗಲಿದೆ ಎಂದು ಹೇಳುತ್ತಿವೆ. ಒಟ್ಟಾರೆ ಅಂಕಿ ಅಂಶಗಳು ಬಿಜೆಪಿ 909 ವಾರ್ಡ್‌ಗಳಲ್ಲಿ ಮುಂದಿದೆ ಎಂದು ತೋರಿಸುತ್ತದೆ. ಹಾಗೇ ಶಿಂಧೆ ನೇತೃತ್ವದ ಮಿತ್ರಪಕ್ಷ ಶಿವಸೇನೆ 237 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷವಾರು ಲೆಕ್ಕಾಚಾರದಲ್ಲಿ, ಕಾಂಗ್ರೆಸ್ 179 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನದಲ್ಲಿದೆ. ಶಿವಸೇನೆ (ಯುಬಿಟಿ) ನಾಲ್ಕನೇ ಸ್ಥಾನದಲ್ಲಿದೆ. ಅಜಿತ್ ಪವಾರ್ ಅವರ ಎನ್‌ಸಿಪಿ 112 ಸ್ಥಾನಗಳಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು? – Kannada News | Siddaramaiah’s Helicopter Faces Technical Problem, So CM Travel To Tumakuru By Road

ತುಮಕೂರು, (ಜನವರಿ 16):ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತೆರಳಬೇಕಿದ್ದ ಹೆಲಿಕಾಪ್ಟರ್​ನಲ್ಲಿ (helicopter) ತಾಂತ್ರಿಕ ದೋಷ ಕಂಡು ಬಂದಿದೆ. ಇಂದು (ಜನವರಿ 16) ಕರ್ನಾಟಕ ಕ್ರೀಡಾಕೂಟ ಉದ್ಘಾಟನೆಗೆಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ HAL ಏರ್​ಪೋರ್ಟ್​ನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ತುಮಕೂರಿಗೆ (Tumakuru) ತೆರಳಬೇಕಿ​ತು. ಆದ್ರೆ, ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಟೇಕಾಫ್ ಆಗಿಲ್ಲ. ಇದರಿಂದ ಸಿದ್ದರಾಮಯ್ಯ ಬೆಂಗಳೂರಿನಿಂದ ರಸ್ತೆ ಮೂಲಕವೇ ತುಮಕೂರಿಗೆ ತೆರಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಹೆಲಿಕಾಪ್ಟರ್​ ಹಾರಾಟ ಬಲು ದುಬಾರಿ: ಕೋಟ್ಯಂತರ ರೂ.ವೆಚ್ಚ, ಎಷ್ಟು ಗೊತ್ತಾ?

Source link

ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ – Kannada News | Shivarajkumar wishes Gilli Nata for Bigg Boss Kannada Season 12 Finale

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಫಿನಾಲೆ ತಲುಪಿದ್ದಾರೆ. ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ದೊಡ್ಡದು. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಕೂಡ ಗಿಲ್ಲಿ ನಟ ಎಂದರೆ ಇಷ್ಟ. ಈಗ ಶಿವರಾಜ್​​ಕುಮಾರ್ (Shivarajkumar) ಅವರು ಗಿಲ್ಲಿಗೆ ವಿಶ್ ಮಾಡಿದ್ದಾರೆ. ಅದು ಕೂಡ ಸಖತ್ ಸ್ಟೈಲಿಶ್ ಅವರು ವಿಶ್ ಮಾಡಿದ್ದಾರೆ. ‘ಗಿಲ್ಲಿ ಆಲ್​ ದ ಬೆಸ್ಟ್. 100 ಪರ್ಸೆಂಟ್’ ಎಂದು ಶಿವರಾಜ್​ಕುಮಾರ್ ಅವರ ಹೇಳಿದ್ದಾರೆ. ‘ಬಿಗ್​ ಬಾಸ್ ಕನ್ನಡ 12’ ಫಿನಾಲೆ ಜನವರಿ 17 ಮತ್ತು 18ರಂದು ನಡೆಯಲಿದೆ. ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಗಿಲ್ಲಿ ನಟ (Gilli Nata) ಹಾಗೂ ಕಾವ್ಯಾ ಶೈವ ಅವರು ಫಿನಾಲೆ ತಲುಪಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ – Kannada News | IT Salary Disparity: Bengaluru’s 1 Year Exp Engineer Gets 35 LPA, Senior Less?

ಬೆಂಗಳೂರು, ಜ.16: ಬೆಂಗಳೂರಿನಲ್ಲಿ (Bengaluru IT salary) ಕೆಲಸಕ್ಕೆ ಸೇರಿ 5 ವರ್ಷ ಅನುಭವ ಇದ್ರೂ ಸರಿಯಾದ ಸಂಬಳ ಸಿಗುವುದಿಲ್ಲ. ಅಂತದ್ರಲ್ಲಿ 1 ವರ್ಷ ಅನುಭವ ಇರುವವರಿಗೆ ಲಕ್ಷ ಸಂಬಳ ಸಿಗುತ್ತದೆ ಎಂದ್ರೆ ನಂಬುದು ಹೇಗೆ? ಆದರೆ ಈ ಪೋಸ್ಟ್​ ನೋಡಿದ ಮೇಲೆ ನಂಬಲೇಬೇಕು. ಹೌದು ಇದೀಗ ಇಲ್ಲೊಂದು ವೈರಲ್​​ ಆಗಿರುವ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ (ಎಸ್‌ಡಿಇ) ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದ್ದಾರೆ. ಇದರಲ್ಲಿ ಸಂಬಳದ ಬಗ್ಗೆ ತಿಳಿಸಿದ್ದಾರೆ. ಕಂಪನಿಯೊಂದು ಒಂದು ವರ್ಷ ಅನುಭವ ಇರುವವರಿಗೆ 1 ಲಕ್ಷ ಸಂಬಳ ನೀಡಲು ಮುಂದಾಗಿದೆ. ಈ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟ್​​ನ್ನು ಎಕ್ಸ್​​ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತದ ತಂತ್ರಜ್ಞಾನ ಉದ್ಯಮ ತಮ್ಮ ಉದ್ಯೋಗಿಗಳಿಗೆ ಹೇಗೆ ಹೆಚ್ಚಿನ ಆದಾಯವನ್ನು ನೀಡುತ್ತಿದೆ ಎಂಬುದನ್ನು ಇದು ತಿಳಿಸುತ್ತದೆ. ಈ ಬಗ್ಗೆ ನೆಟ್ಟಿಗರು ಕೂಡ ಸೋಶಿಯಲ್​​​​ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ.

ಈ ಪೋಸ್ಟ್​​ನ ಸ್ಕ್ರೀನ್‌ಶಾಟ್ ಅನ್ನು ಎಂಜಿನಾರ್ಡ್ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದು, ಈ ಸಂಬಳದ ಬಗ್ಗೆ ಟೀಕೆಗಳು ಕೂಡ ಬಂದಿದೆ. ಒಂದು ಕಡೆ ಕೆಲಸದಿಂದ ವಜಾಗಳು ನಡೆಯುತ್ತಿವೆ ಮತ್ತು ಇನ್ನೊಂದು ಕಡೆ ಕಂಪನಿಗಳು 1 ವರ್ಷದ ಅನುಭವಕ್ಕೆ ಇಷ್ಟೊಂದು ಸಂಬಳ ನೀಡುತ್ತಿದೆ ಎಂದು ಕಮೆಂಟ್​ ಮಾಡಿತ್ತಿದ್ದಾರೆ. ವಾರ್ಷಿಕ 25 ಲಕ್ಷ ರೂ. (ಎಲ್‌ಪಿಎ) ಸಂಬಳ, 20 ಲಕ್ಷ ರೂ. ಮೌಲ್ಯದ ESOP (ಉದ್ಯೋಗಿ ಷೇರು ಮಾಲೀಕತ್ವ ಯೋಜನೆ , ಸೈನ್-ಆನ್ ಬೋನಸ್ ಜತೆಗೆ ಪದೋನ್ನತಿ, ಜಿಮ್​​ನ ಖರ್ಚು, ಮನೆಯಿಂದ ಕೆಲಸ ಮಾಡಲು 21,000 ರೂ. ಭತ್ಯೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಿ ಸ್ಮಾರ್ಟ್‌ಫೋನ್, ಝೊಮ್ಯಾಟೊದಿಂದ ದಿನಕ್ಕೆ 600 ರೂ. ಮೌಲ್ಯದ ಕ್ರೆಡಿಟ್‌, ಮೊಬೈಲ್ ಫೋನ್ ಮತ್ತು ವೈಫೈ ಬಿಲ್‌ ಪಾವತಿಯನ್ನು ಈ ಕಂಪನಿಯೇ ಮಾಡುತ್ತಿದೆ ಎಂದು ಈ ಪೋಸ್ಟ್​​ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್:

ಈ ಎಲ್ಲ ಸೌಲಭ್ಯಗಳು ಸೇರಿ ಮೊದಲ ವರ್ಷಕ್ಕೆ ಒಬ್ಬ ಉದ್ಯೋಗಿಗೆ 35 ಲಕ್ಷ ರೂ. ವ್ಯಯ ಮಾಡುತ್ತದೆ. ಕೇವಲ ಒಂದು ವರ್ಷದ ಅನುಭವ ಹೊಂದಿರುವ ಎಂಜಿನಿಯರ್‌ಗೆ ಇಷ್ಟೊಂದು ಸೌಲಭ್ಯವೇ ಎಂದು ಹಲವು ಜನಗಳು ಅಚ್ಚರಿಗೊಂಡಿದ್ದಾರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುವ ಇತರ ಉದ್ಯೋಗಿಗಳಿಗೆ ಇದಕ್ಕಿಂತ ಕಡಿಮೆ ಸಂಬಳ ಇರಬಹುದು ಎಂದು ಒಬ್ಬರು ಹೇಳಿದ್ದಾರೆ. 1 ವರ್ಷ ಅನುಭವ ಇರುವ ವ್ಗಕ್ತಿಗಿಂತ 5-8 ವರ್ಷಗಳ ಅನುಭವ ಹೊಂದಿರುವ ಉದ್ಯೋಗಿಗಳಿಗೆ ಕಡಿಮೆ ವೇತನವನ್ನು ನೀಡುತ್ತದೆ. ಇದು ಐಟಿ ಕಂಪನಿಗಳ ರೂಲ್ಸ್​​ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಷ್ಠೆ, ಉಳಿಸಿಕೊಳ್ಳುವಿಕೆ ಮತ್ತು ಅನ್ಯಾಯದ ವೇತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ. ಇನ್ನೊಬ್ಬರು ಸರಳವಾಗಿ ಹೇಳಬೇಕೆಂದರೆ ಮುಗ್ಧರಾಗಿರಬೇಡಿ ಮತ್ತು ನಿಮ್ಮನ್ನು ಕಂಪನಿಗೆ ನಿಷ್ಠರಾಗಿ ಇರಬೇಕು. ಕೆಲಸವನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೇಗವಾಗಿ ಬಂದು ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ! – Kannada News | Rider Thrown 10 Feet into the Air as Car Hits Bike in Laxmeshwar, Gadag

ಗದಗ, ಜನವರಿ 16: ಬೈಕ್​​ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಬಳಿ ನಡೆದಿದೆ. ಅತಿವೇಗದಲ್ಲಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ಸವಾರ ಸುಮಾರು ಹತ್ತು ಅಡಿ ಎತ್ತರಕ್ಕೆ ಹಾರಿಬಿದ್ದಿದ್ದಾನೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎರಡು ದಿನಗಳ ಹಿಂದೆ ನಡೆದ ಅಪಘಾತ ತಡವಾಗಿ ಬೆಳಕಿಗೆ ಬಂದಿದೆ. ಗೌಸ್ಮುದ್ದೀನ್ ಒಂಟಿ (27), ಫಾತಿಮಾ ಗೌಸ್ಮುದ್ದೀನ್ ಒಂಟಿ (53), ಖುಬುದ್ದೀನ್ ಒಂಟಿ (5), ಗಂಗವ್ವ ನಾಯ್ಕರ್ (75) ಮತ್ತು ಭೀಮಪ್ಪ ನಾಯ್ಕರ್ (80) ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Solar: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ – Kannada News | India to overtake USA in 2026 to become world’s second largest Solar Market

ನವದೆಹಲಿ, ಜನವರಿ 16: ಸೌರಶಕ್ತಿ ಮತ್ತು ಸೌರ ಮಾರುಕಟ್ಟೆ (Solar Market) ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಈ ವರ್ಷ (2026) ಭಾರತ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಲಿದೆ. ಸೌರ ಮಾರುಕಟ್ಟೆ ಗಾತ್ರದಲ್ಲಿ ಭಾರತ ಮೊದಲ ಬಾರಿಗೆ ಅಮೆರಿಕವನ್ನು ಹಿಂದಿಕ್ಕಲಿದೆ. ಜಾಗತಿಕವಾಗಿ ಸೌರ ಸ್ಥಾಪನೆಗಳು (Solar Installations) ಕುಸಿಯುತ್ತಿರುವಾಗ ಭಾರತದಲ್ಲಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.

2026ರಲ್ಲ ಭಾರತದಲ್ಲಿ 50 ಗಿಗಾವ್ಯಾಟ್​ಗೂ ಅಧಿಕ ಸೌರ ವಿದ್ಯುತ್ ಶಕ್ತಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. 2025ಕ್ಕೆ ಹೋಲಿಸಿದರೆ ಸೌರ ಶಕ್ತಿ ಸಾಮರ್ಥ್ಯ ಶೇ. 6ರಷ್ಟು ಹೆಚ್ಚಾಗಬಹುದು. ಮನೆಗಳ ಮೇಲ್ಛಾವಣಿ ಸೋಲಾರ್ ಸ್ಥಾಪನೆಗೆ ಸರ್ಕಾರ ನೀಡುತ್ತಿರುವ ಉತ್ತೇಜನವು ಭಾರತದಲ್ಲಿ ಹೊಸ ಸೋಲಾರ್ ಕೆಪಾಸಿಟಿ ಸೇರ್ಪಡೆಗೆ ಇರುವ ಕಾರಣಗಳಲ್ಲಿ ಒಂದು.

ಇದನ್ನೂ ಓದಿ: Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ

ಅಮೆರಿಕದಲ್ಲಿ ಸೋಲಾರ್ ಇನ್ಸ್​ಟಲೇಶನ್​ಗಳಲ್ಲಿ ಇಳಿಮುಖ

ಜಾಗತಿಕವಾಗಿ ಸೋಲಾರ್ ಸ್ಥಾಪನೆಗಳು 2026ರಲ್ಲಿ ಮಂದಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಅಮೆರಿಕದಲ್ಲಿ ಶೇ. 14ರಷ್ಟು ಕಡಿಮೆ ಆಗಬಹುದು. ಟ್ರಂಪ್ ಸರ್ಕಾರದ ಕೆಲ ನೀತಿಗಳು ಸೋಲಾರ್ ಯೋಜನೆಗಳಿಗೆ ಹಿನ್ನಡೆ ತರಬಹುದು. ಒಂದೆಡೆ, ಅಮೆರಿಕದಲ್ಲಿ ಸೌರಶಕ್ತಿ ಸ್ಥಾಪನೆ ಕಡಿಮೆಗೊಂಡರೆ, ಭಾರತದಲ್ಲಿ ಇದು ಹೆಚ್ಚಳಗೊಳ್ಳುತ್ತದೆ. ಇದರಿಂದ ಭಾರತವು ಅಮೆರಿಕವನ್ನು ಹಿಂದಿಕ್​ಕಲು ಸಾಧ್ಯವಾಗಬಹುದು.

ಚೀನಾದ ಪ್ರಾಬಲ್ಯ ಮುಂದುವರಿಕೆ

ಸೌರಶಕ್ತಿಯ ವಿಚಾರಕ್ಕೆ ಬಂದರೆ ಚೀನಾ ವಿಶ್ವದ ಕಿಂಗ್. ಈ ಕ್ಷೇತ್ರದಲ್ಲಿ ಬಹುತೇಕ ಚೀನಾದ ಪಾರಮ್ಯತೆ ಇದೆ. ಕಳೆದ ವರ್ಷದ ಶೇ. 14ರಷ್ಟು ಇಳಿಮುಖವಾದರೂ 2026ರಲ್ಲಿ ಜಾಗತಿಕವಾಗಿಚೀನಾ 321 ಗಿಗಾವ್ಯಾಟ್​ನಷ್ಟು ಸೌರ ನಿಯೋಜನೆ ಮಾಡಬಹುದು.

ಇದನ್ನೂ ಓದಿ: India-Iran: ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾದರೂ ಭಾರತಕ್ಕೆ ಬೇಕು; ಯಾಕೆ ಗೊತ್ತಾ?

2030ರ ಗುರಿಯತ್ತ ಭಾರತ

2025ರಲ್ಲಿ ಜನವರಿಂದ ನವೆಂಬರ್​ವರೆಗೆ ಭಾರತ 35 ಗಿಗಾವ್ಯಾಟ್​ನಷ್ಟು ಹೊಸ ಸೌರವಿದ್ಯುತ್ ಸಾಮರ್ಥ್ಯ ಸೇರಿಸಿದೆ. 2030ರಲ್ಲಿ ಪಳೆಯುಳಿಕೆಯಲ್ಲದ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್​ಗೆ ಬೆಳೆಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಭಾರತ ದಾಪುಗಾಲು ಇಡುತ್ತಿದೆ.

ಭಾರತದ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಕೆಪಾಸಿಟಿ ಈಗ ವರ್ಷಕ್ಕೆ 125 ಗಿಗಾವ್ಯಾಟ್ ಮುಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link