Category Archives: Blog

Your blog category

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಆತ್ಮಹತ್ಯೆ, ಕಾರಣ ಏನು ಗೊತ್ತಾ? – Kannada News | Prisoner Suicide: Eshwarappa Pujar, Convicted for Wife’s Murder, Found Dead in Dharwad Jail

ಧಾರವಾಡ, ಜ.16: ಪತ್ನಿಯನ್ನು ಕೊಲೆ ಮಾಡಿ 14 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿ ಜೈಲಿನ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ (Dharwad Jail) ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಬಸಾಪುರ ಗ್ರಾಮದ ಈಶ್ವರಪ್ಪ ಪೂಜಾರ್ ಎಂದು ಹೇಳಲಾಗಿದೆ. ಸುಮಾರು ಏಳು ವರ್ಷಗಳ ಹಿಂದೆ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ತಮ್ಮ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಜೈಲಿನಲ್ಲೇ ಅನುಭವಿಸಿದ್ದಾರೆ. ಈಶ್ವರಪ್ಪ ಪೂಜಾರ್ ಅವರು ಜೈಲಿನ ಆವರಣದಲ್ಲಿರುವ ನಿರ್ಮಾಣ ಕಟ್ಟಡದ ಸ್ಥಳದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಜೈಲಿನಲ್ಲಿ ಕೆಲಸ ಮುಗಿಸಿದ ನಂತರ ಈಶ್ವರಪ್ಪ ಪೂಜಾರ್ ಸೇಲ್​​ಗೆ ಬಂದಿಲ್ಲ. ನಂತರ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಿರ್ಮಾಣ ಕಟ್ಟಡದ ಬಳಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಆಸ್ಪತ್ರೆ ಸಾಗಿಸಲಾಗಿದ್ದು, , ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಯಾವ ಕಾರಣಕ್ಕೆ ಈ ನಿರ್ಧಾರ ಯಾವ ಕಾರಣಕ್ಕೆ ತೆಗೆದುಕೊಂಡರು ಎಂದು ತಿಳಿದು ಬಂದಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿ ಅಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿತು ಸಾಕು ನಾಯಿ ಜಗಳ! ಅಸಲಿಗೆ ಆಗಿದ್ದೇನು ಗೊತ್ತೇ?

ಇನ್ನು ಕಟ್ಟಡ ನಿರ್ಮಾಣಕ್ಕೆಂದು ಅಲ್ಲಿ ಬಳಸಲಾಗಿದ್ದ ಹಗ್ಗದಿಂದಲ್ಲೇ ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೈದಿಗಳ ಕೆಲಸ ಮುಗಿದ ನಂತರ ಕೈದಿಗಳನ್ನು ಸೇಲ್​ಗೆ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಅಲ್ಲಿ ಸಿಬ್ಬಂದಿಗಳಿಗೆ ನೀಡಲಾಗಿತ್ತು. ಆದರೆ ಈ ಜವಾಬ್ದಾರಿಯನ್ನು ನಿಭಾಯಿಸಲು ಅಧಿಕಾರಿಗಳು ವಿಫಲಗಿದ್ದಾರೆ ಎಂದು ಅವರ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಕಾರಾಗೃಹದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂಜಾರ್ ಜೈಲಿನಲ್ಲಿ ಉತ್ತಮ ನಡವಳಿಕೆ ಕೂಡ ಇತ್ತು. ಅವರ ಆ ನಡುವಳಿಕೆ ಮೇಲೆ ಅವರನ್ನು ಕೂಡ ಬಿಡಗುಡೆ ಮಾಡುವ ಯೋಚನೆ ಕೂಡ ಇತ್ತು ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:51 pm, Fri, 16 January 26

Source link

BJP National President Election Date: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ – Kannada News | Bjp National President Election Date Announced Nominations Will Be on 19 January, Election to be held on Jan 20

ನವದೆಹಲಿ, ಜನವರಿ 16: ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ನಡೆಯಲಿದೆ. ಜನವರಿ 20 ರಂದು ಹೊಸ ಅಧ್ಯಕ್ಷರ ಹೆಸರನ್ನು ಔಪಚಾರಿಕವಾಗಿ ಘೋಷಿಸಲಾಗುವುದು. ಬಿಜೆಪಿ ನಿತಿನ್ ನಬಿನ್(Nitin Nabin) ಅವರನ್ನು ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಆದ್ದರಿಂದ, ನಿತಿನ್ ನಬಿನ್ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುವುದು ಖಚಿತವೆಂದು ಹೇಳಲಾಗುತ್ತಿದೆ. ಅವರು ಪಕ್ಷದ ಅತ್ಯಂತ ದೀರ್ಘಾವಧಿಯ ನಾಯಕರಾದ ಜೆಪಿ ನಡ್ಡಾ ಅವರ ಸ್ಥಾನಕ್ಕೆ ಬರಲಿದ್ದಾರೆ.ನಿತಿನ್ ನಬಿನ್ ಜನವರಿ 19 ರಂದು ನಾಮಪತ್ರ ಸಲ್ಲಿಸಲಿದ್ದಾರೆ.ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಕರಾಗಿ ಹಾಜರಿರುತ್ತಾರೆ .

ಇದು ಪಕ್ಷದ ಹಿರಿಯ ನಾಯಕರಲ್ಲಿ ನಬಿನ್ ಅವರ ನಾಯಕತ್ವದ ಮೇಲಿನ ಬಲವಾದ ಬೆಂಬಲ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ . ಹಲವಾರು ಹಿರಿಯ ನಾಯಕರು, ಕೇಂದ್ರ ನಾಯಕತ್ವದ ಸದಸ್ಯರು ಮತ್ತು ಪ್ರಮುಖ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಮತ್ತಷ್ಟು ಓದಿ: ಮತ್ತೊಂದು ಅಚ್ಚರಿ ಆಯ್ಕೆ: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯುವ ನಾಯಕನಿಗೆ ಮಣೆ

ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಈಗ ಪಕ್ಷದ ಶಾಶ್ವತ ಅಧ್ಯಕ್ಷರಾಗಲಿದ್ದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ನಬಿನ್ ಮಾತ್ರ ನಾಮಪತ್ರ ಸಲ್ಲಿಸಲಿದ್ದು, ಬೇರೆ ಯಾವುದೇ ನಾಯಕರು ಅವರ ವಿರುದ್ಧ ನಾಮಪತ್ರ ಸಲ್ಲಿಸುವುದಿಲ್ಲ. ಪರಿಣಾಮವಾಗಿ, ನಿತಿನ್ ನಬಿನ್ ಅವರ ಅವಿರೋಧ ಆಯ್ಕೆ ಖಚಿತ ಎಂದು ಹೇಳಲಾಗಿದೆ. ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರು ಬಿಜೆಪಿ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕರಾಗುತ್ತಾರೆ.

ನಿತಿನ್ ನಬಿನ್ ಅವರ ಅಧಿಕಾರಾವಧಿಯು ಜನವರಿ 2029 ರವರೆಗೆ ಇರಲಿದೆ. 2029 ರ ಲೋಕಸಭಾ ಚುನಾವಣೆಗಳು ನಿಗದಿಯಾಗಿರುವುದರಿಂದ, ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.

2020 ರ ಆರಂಭದಲ್ಲಿ, ಜೆಪಿ ನಡ್ಡಾ ಅವರನ್ನು ಮೊದಲು ಹಂಗಾಮಿ ಅಧ್ಯಕ್ಷರನ್ನಾಗಿ ಮತ್ತು ನಂತರ ಪಕ್ಷದ ಶಾಶ್ವತ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಬಾರಿಯೂ ಸಹ, ಚುನಾವಣಾ ಪ್ರಕ್ರಿಯೆಯ ನಂತರ ಹೊಸ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:53 pm, Fri, 16 January 26

Source link

Ballari: ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ; ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ – Kannada News | Palm Oil Tanker Overturns in Bellary District, Locals Rush to Collect Spilled Oil

ಬಳ್ಳಾರಿ, ಜನವರಿ 16: ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಬಳಿ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು,  ಅಪಾರ ಪ್ರಮಾಣದಲ್ಲಿ ಅಡುಗೆ ಎಣ್ಣೆ ಸೋರಿಕೆ ಆಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳೀಯ ಜನರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಮ್ ಆಯಿಲ್​​ ಸಂಗ್ರಹಿಸಲು ಸ್ಥಳಕ್ಕೆ ಮುಗಿಬಿದ್ದಿದ್ದಾರೆ. ಬಕೆಟ್‌, ಕ್ಯಾನ್‌ಗಳು ಮತ್ತು ವಿವಿಧ ಪಾತ್ರೆಗಳನ್ನು ಹಿಡಿದು ಬಂದು ತೈಲವನ್ನು ತುಂಬಿಸಿಕೊಂಡಿದ್ದಾರೆ. ಅಪಘಾತದಲ್ಲಿ ಅದೃಷ್ಟವಶಾತ್ ಲಾರಿಯ ಚಾಲಕ ಮತ್ತು ಕ್ಲೀನರ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಕಂಪ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Trigrahi Yoga 2026: 200 ವರ್ಷಗಳ ನಂತರ ಅಪರೂಪದ ತ್ರಿಗ್ರಹಿ ಯೋಗ; ಈ ರಾಶಿಗೆ ಸುವರ್ಣಯುಗ ಪ್ರಾರಂಭ – Kannada News | Rare Trigrahi Yoga Jan 16: Sun, Venus, Mars in Capricorn – Golden Age for 4 Zodiac Signs!

ಜನವರಿ 16 ರಂದು ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳು ಮಕರ ರಾಶಿಗೆ ಪ್ರವೇಶಿಸುವುದರೊಂದಿಗೆ ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. 200 ವರ್ಷಗಳ ನಂತರ ಈ ಯೋಗವು ರೂಪುಗೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರೊಂದಿಗೆ, ಮಕರ ಸಂಕ್ರಾಂತಿಯ ನಂತರ ಕೆಲ ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗುತ್ತದೆ. ಆ ರಾಶಿಗಳಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

ಮಕರ ಸಂಕ್ರಾಂತಿಯ ನಂತರ ಚಲನೆಯಲ್ಲಿರುವ ಗ್ರಹಗಳ ಸಂಚಾರವು ವಿವಿಧ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಸಂಕ್ರಾಂತಿಯ ನಂತರ, ಶುಕ್ರ, ಮಂಗಳ ಮತ್ತು ಶನಿಯ ಸಂಯೋಗದಿಂದಾಗಿ ಅಪರೂಪದ ಯೋಗವು ರೂಪುಗೊಳ್ಳುತ್ತಿದೆ. ಜನವರಿ 13 ರಂದು ಶುಕ್ರ ಮಕರ ರಾಶಿಯನ್ನು ಪ್ರವೇಶಿಸಿದೆ. ನಂತರ ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದೆ. ಈಗ ಜನವರಿ 16 ರಂದು ಮಂಗಳ ಮಕರ ರಾಶಿಯನ್ನು ಪ್ರವೇಶಿಸಲಿದೆ.

ಈ ಮೂರು ಗ್ರಹಗಳು ಮಕರ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. 200 ವರ್ಷಗಳ ನಂತರ ಈ ಯೋಗವು ರೂಪುಗೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರೊಂದಿಗೆ, ಮಕರ ರಾಶಿಯ ನಂತರ ಅನೇಕ ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗಲಿದೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ತ್ರಿಗ್ರಹಿ ಯೋಗವು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಸೂರ್ಯನ ನೇರ ಅಂಶವು ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಶ್ರೇಷ್ಠರಾಗುವಿರಿ. ದೊಡ್ಡ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ನಿಮ್ಮ ವೃತ್ತಿಪರ ಜೀವನದಲ್ಲಿನ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ನೀವು ಹಳೆಯ ಸಾಲಗಳನ್ನು ತೀರಿಸುವಿರಿ. ನೀವು ಈಗಾಗಲೇ ಮಾಡುತ್ತಿರುವ ಕೆಲಸದಿಂದ ಆದಾಯ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಂಕ್ರಾಂತಿಯ ನಂತರ, ಎಲ್ಲವೂ ನಿಮ್ಮ ಪರವಾಗಿ ಬದಲಾಗುತ್ತದೆ. ನಿಮ್ಮ ಕುಟುಂಬವು ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಸಂಪತ್ತು ಮತ್ತು ಅದೃಷ್ಟ ಒಟ್ಟಿಗೆ ಬರುತ್ತದೆ.

ವೃಶ್ಚಿಕ ರಾಶಿ:

ತ್ರಿಗ್ರಹಿ ಯೋಗವು ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತರುತ್ತದೆ. ನೀವು ನಿಮ್ಮ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿಮಗೆ ಹೊಸ ಆದಾಯ ಮತ್ತು ಲಾಭಗಳು ಸಿಗುತ್ತವೆ. ನಿಮ್ಮ ವೃತ್ತಿಪರ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಜಂಟಿ ವ್ಯವಹಾರಗಳ ಮೂಲಕ ನೀವು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನಿಮ್ಮ ಸಹೋದ್ಯೋಗಿಗಳ ಬೆಂಬಲ ನಿಮಗೆ ಇರುತ್ತದೆ. ವಿದೇಶಕ್ಕೆ ಹೋಗಲು ನಿಮಗೆ ಹೆಚ್ಚಿನ ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಮದುವೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಧನು ರಾಶಿ:

ತ್ರಿಗ್ರಹಿ ಯೋಗವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಶುಭ ಸಮಯದಲ್ಲಿ, ನೀವು ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ನೀವು ವೃತ್ತಿಪರವಾಗಿ ಪ್ರಗತಿ ಸಾಧಿಸುವಿರಿ. ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಮಕರ ರಾಶಿ:

ಮಕರ ರಾಶಿಯವರಿಗೆ ತ್ರಿಗ್ರಹಿ ಯೋಗವು ಅನೇಕ ಪ್ರಯೋಜನಗಳನ್ನು ತರುತ್ತದೆ. ಈ ಅವಧಿಯಲ್ಲಿ ಅವಿವಾಹಿತರು ಉತ್ತಮ ಸಂಬಂಧಗಳನ್ನು ಕಂಡುಕೊಳ್ಳುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹೊಸದಾಗಿ ಮದುವೆಯಾದವರು ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ಸಾಧನೆ ಮಾಡಿದ ಬೆಂಗಳೂರು ಏರ್​ಪೋರ್ಟ್​; ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ! – Kannada News | KIAB Sets New Air Cargo Record: 5 percent Growth at Bengaluru Airport

ವಿಶ್ವಮಟ್ಟದ ಸಾಧನೆ ಮಾಡಿದ ಬೆಂಗಳೂರು ಏರ್​ಪೋರ್ಟ್

ದೇವನಹಳ್ಳಿ, ಜನವರಿ 16: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಸರಕು ಸಾಗಾಟ ಕ್ಷೇತ್ರದಲ್ಲೂ ಹೊಸ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಕೆಐಎಬಿಯಿಂದ ಒಟ್ಟು 5 ಲಕ್ಷ 20 ಸಾವಿರ 985 ಮೆಟ್ರಿಕ್ ಟನ್ ಸರಕು ಸಾಗಾಟವಾಗಿದ್ದು, ಇದು ವಿಮಾನ ನಿಲ್ದಾಣದ ಇತಿಹಾಸದಲ್ಲೇ ಮಹತ್ವದ ಸಾಧನೆಯಾಗಿದೆ. 2024ರ ಅವಧಿಗೆ ಹೋಲಿಸಿದರೆ 2025ರಲ್ಲಿ ಸರಕು ಸಾಗಾಟದಲ್ಲಿ ಶೇ5ರಷ್ಟು ಏರಿಕೆಯಾಗಿದೆ.

ಒಂದೇ ದಿನದಲ್ಲಿ ಸಾವಿರಾರು ಮೆಟ್ರಿಕ್ ಟನ್ ಸರಕು ಸಾಗಾಟ

ಆಗಸ್ಟ್ 7ರಂದು ಒಂದೇ ದಿನದಲ್ಲಿ 2,207 ಮೆಟ್ರಿಕ್ ಟನ್ ಸರಕು ಸಾಗಾಟ ಮಾಡುವ ಮೂಲಕ ಕೆಐಎಬಿ ಗರಿಷ್ಠ ದೈನಂದಿನ ಸರಕು ಸಾಗಾಟದ ದಾಖಲೆಯನ್ನೂ ತನ್ನ ಮುಡಿಗೆ ಏರಿಸಿಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯವಾಗಿ ಒಟ್ಟು 37 ವಿಮಾನ ನಿಲ್ದಾಣಗಳಿಗೆ ಸರಕು ಸಾಗಾಟ ನಡೆಯುತ್ತಿದೆ. ಭಾರತದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕೆಐಎಬಿ, 8.2 ಎಕರೆ ವಿಸ್ತೀರ್ಣದಲ್ಲಿ 3 ಲಕ್ಷ 70 ಸಾವಿರ ಚದರ ಅಡಿ ವಿಸ್ತಾರದ ಎ-ಗ್ರೇಡ್ ಗೋದಾಮು ಹೊಂದಿದೆ.

ಜಾಗತಿಕ ಮಹತ್ವ ಇನ್ನಷ್ಟು ಹೆಚ್ಚು

ಕೆಐಎಬಿಯಿಂದ ಹೆಚ್ಚಾಗಿ ಕೃಷಿ ಉತ್ಪನ್ನಗಳು, ಔಷಧಿಗಳು, ಆಟೋ ಭಾಗಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಸಾಗಾಟ ನಡೆಯುತ್ತಿದೆ. ಚಿಕಾಗೋ, ಸಿಂಗಾಪುರ, ಲಂಡನ್, ಹೀಥ್ರೋ, ಫ್ರಾಂಕ್‌ಫರ್ಟ್ ಮತ್ತು ಲೀಪ್ಜಿಗ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ನಗರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ನಡೆಯುತ್ತಿದೆ. ಈ ಸಾಧನೆಯಿಂದ ಬೆಂಗಳೂರು ವಿಮಾನ ನಿಲ್ದಾಣದ ಜಾಗತಿಕ ಮಹತ್ವ ಇನ್ನಷ್ಟು ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಪ್ಪನಿಗೆ ಏಡ್ಸ್​ ಬಂದಾಗಲೂ ಯಾರೂ ಇರಲಿಲ್ಲ, ಎಚ್​ಐವಿಯಿಂದ ಮೃತಪಟ್ಟ ತಾಯಿಯ ಶವದ ಬಳಿ ಕುಳಿತು ಬಾಲಕನ ಕಣ್ಣೀರು – Kannada News | Orphaned by AIDS: Heartbreaking Story of Boy Losing Parents to HIV in Etah

ಅಮ್ಮನ ಶವದ ಮುಂದೆ ಮಗನ ರೋದನೆ Image Credit source: Free Press Journal

ಎಟಾ, ಜನವರಿ 16: ಎಚ್​ಐವಿ(HIV)ಯಿಂದ ಮೃತಪಟ್ಟ ತಾಯಿಯ ಶವವದೆದುರು ಒಂಟಿಯಾಗಿ ಕುಳಿತು ಬಾಲಕ ಅಳುತ್ತಿದ್ದ ಘಟನೆ ಉತ್ತರ ಪ್ರದೇಶದ ಎಟಾದಲ್ಲಿ ನಡೆದಿದೆ. ತಂದೆ ಕೂಡ ಏಡ್ಸ್​ನಿಂದ ಸಾವನ್ನಪ್ಪಿದ್ದರು ಆಗಲೂ ಕೂಡ ನಮ್ಮ ಜತೆ ಯಾರೂ ಇರಲಿಲ್ಲ, ಈಗ ತಾಯಿಯನ್ನೂ ಕಳೆದುಕೊಂಡು ಒಂಟಿಯಾಗಿದ್ದೇನೆಂದು 10 ವರ್ಷದ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ಗುರುವಾರ ಬೆಳಗ್ಗೆ ಆತ ತಾಯಿಯನ್ನು ಕಳೆದುಕೊಂಡಿದ್ದಾನೆ. ಎಟಾ ವೈದ್ಯಕೀಯ ಕಾಲೇಜಿನಲ್ಲಿ ಎಚ್ಐವಿ ಮತ್ತು ಏಡ್ಸ್ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷ ಇದೇ ಕಾಯಿಲೆಯಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದಾಗಿ ಬಾಲಕ ಹೇಳಿದ್ದಾನೆ.

ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ತಾಯಿಯನ್ನು ಉಳಿಸಿಕೊಳ್ಳಲು ಸಾರ್ಧಯವಾಗಿಲ್ಲ, ಮರಣೋತ್ತರ ಪರೀಕ್ಷೆ ನಡೆಸಿರುವ ಕೋಣೆಯಲ್ಲಿ ತಾಯಿಯ ಶವದ ಪಕ್ಕ ಕುಳಿತು ತನ್ನ ದುಃಖ ತೋಡಿಕೊಂಡಿದ್ದಾನೆ.

ಮತ್ತಷ್ಟು ಓದಿ: ಎಚ್‌ಐವಿ ಏಡ್ಸ್ ಕುರಿತು ಈಗಲೂ ತಿಳಿದುಕೊಳ್ಳಬೇಕಾದ ಅಂಶಗಳಿವು

ಅಪ್ಪನಿಗೆ ಏಡ್ಸ್​ ಬಂದಾಗ ನೆಂಟಿರಿಷ್ಟರೆಲ್ಲಾ ನಮ್ಮ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದರು, ಅಧಿಕಾರಿಗಳು ಬರುವವರೆಗೂ ಅಲ್ಲಿಂದ ಬಾಲಕ ಹೊರಟಿರಲಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಜೈತ್ರ ಪೊಲೀಸ್ ಠಾಣೆಯ ನಾಗ್ಲಾ ಧೀರಜ್ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.

ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ 45 ವರ್ಷದ ಮಹಿಳೆ ಒಂದು ವರ್ಷದ ಹಿಂದೆ ಎಚ್‌ಐವಿ ಸೋಂಕಿನಿಂದಾಗಿ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಅಂದಿನಿಂದ, ಆ ಮಹಿಳೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಇದರಿಂದಾಗಿ ಅವರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

HIV (ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್) ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವ ವೈರಸ್ ಆಗಿದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಅದು AIDS (ಸ್ವಾಧೀನಪಡಿಸಿಕೊಂಡ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಗೆ ಮುಂದುವರೆಯಬಹುದು.ಯಾವುದೇ ಯಶಸ್ವಿ ಚಿಕಿತ್ಸೆ ಇಲ್ಲ. ವ್ಯಕ್ತಿಗಳು ಎಚ್​ಐವಿಗೆ ಒಮ್ಮೆ ತುತ್ತಾದರೆ, ಅದು ಅವರ ಜೊತೆ ಜೀವನದುದ್ದಕ್ಕೂ ಇರುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ? – Kannada News | Shidlaghatta City Municipality Commissioner Threat Case: Did Accused Rajeev Gowda Try for a Compromise?

ಚಿಕ್ಕಬಳ್ಳಾಪುರ, ಜನವರಿ 16: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ ವಿಚಾರ ಸುದ್ದಿಯಾಗುತ್ತಿದ್ದಂತೆ ರಾಜೀ ಸಂಧಾನದ ಯತ್ನ ನಡೆದಿರುವ ವಿಷಯ ಬಹಿರಂಗವಾಗಿದೆ. ಪೌರಾಯುಕ್ತೆ ಅಮೃತಾ ಅವರ ತಂದೆಗೆ ರಾಜೀವ್​​ ಗೌಡ ಕಡೆಯಿಂದ ಕರೆ ಬಂದಿತ್ತು ಎನ್ನಲಾಗಿದ್ದು, ಈ ಬಗ್ಗೆ ಸ್ವತಃ ಅಮೃತಾ ಅವರೇ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ನಾವು ನಿರ್ಧಾರ ಮಾಡಲು ಆಗಲ್ಲ. ಅದು ನಮ್ಮ ಮಗಳಿಗೆ ಸಂಬಂಧಿಸಿದ ವಿಷಯ ಎಂದು ಈ ವೇಳೆ ನಮ್ಮ ತಂದೆ ತಿಳಿಸಿದ್ದಾರೆ ಎಂದು ಟಿವಿ9ಗೆ ಪೌರಾಯುಕ್ತೆಯೇ ಮಾಹಿತಿ ನೀಡಿದ್ದಾರೆ.  ಇನ್ನು ಘಟನೆ ಬಳಿಕ ಪೌರಾಯುಕ್ತೆ ಅಮೃತಾ ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ಕರ್ತವ್ಯಗಳನ್ನು ಎಂದಿನಂತೆ ನಿರ್ವಹಿಸುತ್ತಿದ್ದಾರೆ. ಅಕ್ರಮವಾಗಿ ಅಳವಡಿಸಲಾದ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಿಬ್ಬಂದಿಯೊಂದಿಗೆ ಮುಂದುವರಿಸಿದ್ದಾರೆ. ಸಿಬ್ಬಂದಿ, ಸಾರ್ವಜನಿಕರು ಹಾಗೂ ಉನ್ನತ ಅಧಿಕಾರಿಗಳಿಂದಲೂ ಅಮೃತಾರಿಗೆ ಬೆಂಬಲ ವ್ಯಕ್ತವಾಗಿರೋದು ಇಲ್ಲಿ ಗಮನಾರ್ಹ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

National Startup Day 2026: ನವೋದ್ಯಮಿಗಳ ಸ್ವಂತ ಬಿಸ್ನೆಸ್‌ ಕನಸನ್ನು ನನಸಾಗಿಸುತ್ತಿವೆ ಸ್ಟಾರ್ಟ್‌ಅಪ್‌ – Kannada News | National Startup Day 2026: What is the purpose of celebrating National Startup Day? Here is the information

ರಾಷ್ಟ್ರೀಯ ನವೋದ್ಯಮ ದಿನImage Credit source: Pinterest

ದೇಶದಲ್ಲಿಂದು ಸಾಕಷ್ಟು ಸ್ಟಾರ್ಟ್‌ಅಪ್‌ಗಳು (Startup) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಜಾಗತೀಕರಣದ ಈ ಯುಗದಲ್ಲಿ, ಭಾರತೀಯ ನವೋದ್ಯಮ ಸಂಸ್ಕೃತಿಯನ್ನು ಹೊಸ ಎತ್ತರಕ್ಕೆ ಏರಿಸಲು ಪ್ರಯತ್ನಗಳು ನಡೆಯುತ್ತಿವೆ. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಉದ್ಯೋಗ ಮತ್ತು ಅಭಿವೃದ್ಧಿಯ ಕನಸುಗಳನ್ನು ನನಸಾಗಿಸುವಲ್ಲಿ ನವೋದ್ಯಮಗಳ ಪಾತ್ರ ನಿರ್ಣಾಯಕವಾಗಿದ್ದು, ಭಾರತದಲ್ಲಿ ನವೋದ್ಯಮ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಹಾಗೂ ಭಾರತದ ಸ್ವಾವಲಂಬನೆಯ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ರಾಷ್ಟ್ರೀಯ ನವೋದ್ಯಮ ದಿನದ ಇತಿಹಾಸವೇನು?

2016 ರಲ್ಲಿ ಪ್ರಾರಂಭವಾದ ಸ್ಟಾರ್ಟ್‌ಅಪ್‌ ಇಂಡಿಯಾ ಉಪಕ್ರಮದ ಸಂಸ್ಥಾಪನಾ ದಿನವನ್ನು ಗುರುತಿಸಲು ಜನವರಿ 16, 2022 ರಂದು ಮೊದಲ ಬಾರಿಗೆ ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಯಿತು. ಜನವರಿ 15, 2022 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದರು. ಅದೇ ವರ್ಷ ಭಾರತ ತನ್ನ ಮೊದಲ ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಿತು. ಈ ದಿನವು ರಾಷ್ಟ್ರದ ಪ್ರಗತಿಗೆ ಸ್ಟಾರ್ಟ್‌ಅಪ್‌ ಸಮುದಾಯದ ಕೊಡುಗೆಗಳನ್ನು ಬೆಂಬಲಿಸುವ ಮತ್ತು ಗುರುತಿಸುವ  ಹಾಗೂ ನಾಗರಿಕರಲ್ಲಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಸ್ಟಾರ್ಟ್‌ಅಪ್‌ ಎಂದರೇನು?

ಸ್ಟಾರ್ಟ್‌ಅಪ್‌ ನವೋದ್ಯಮಿಗಳಿಗೆ ಸ್ವಂತ ಉದ್ದಿಮೆಯನ್ನು ಶುರು ಮಾಡಲು ಒಂದೊಳ್ಳೆ ವೇದಿಕೆಯಾಗಿದೆ. ಸ್ಟಾರ್ಟ್ಅಪ್ ಎಂದರೆ ಇದೀಗ ಕಾರ್ಯಾಚರಣೆ ಆರಂಭಿಸಿರುವ ಕಂಪನಿ. ಒಬ್ಬಂಟಿಯಾಗಿ ಅಥವಾ ಒಂದು ಟೀಮ್‌ನೊಂದಿಗೆ, ಇನ್ಕ್ಯುಬೇಶನ್ ಎಂಬ ಪ್ರಕ್ರಿಯೆಯ ಮೂಲಕ ಕಂಪನಿಗೆ ಅಡಿಪಾಯ ಹಾಕಲಾಗುತ್ತದೆ. ಇಲ್ಲಿ, ಜನರು ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ತಂದು ಹೊಸ ವ್ಯವಹಾರ ಕಲ್ಪನೆಯ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ರೀತಿಯ ಕಂಪನಿಯು ಗ್ರಾಹಕರಿಗೆ ವಿಶಿಷ್ಟ ಉತ್ಪನ್ನ ಅಥವಾ ಸೇವೆಯನ್ನು ನೀಡುತ್ತದೆ.

ರಾಷ್ಟ್ರೀಯ ನವೋದ್ಯಮ ದಿನದ ಉದ್ದೇಶವೇನು?

  • ಮೊದಲನೆಯದಾಗಿ, ದೇಶದ ಯುವಕರನ್ನು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರನ್ನಾಗಿ ಪರಿವರ್ತಿಸುವುದು.
  • ಎರಡನೆಯದಾಗಿ, ತಳಮಟ್ಟದ ನಾವೀನ್ಯತೆಯನ್ನು ಉತ್ತೇಜಿಸುವುದು.
  • ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ರಕ್ಷಣೆ, ಕೃಷಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು.

ಇದನ್ನೂ ಓದಿ: ಭಾರತೀಯ ಸೇನೆಯ ಅದಮ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು

ರಾಷ್ಟ್ರೀಯ ನವೋದ್ಯಮ ದಿನದ ಮಹತ್ವವೇನು?

  • ಭಾರತದಲ್ಲಿ ನವೋದ್ಯಮ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವುದು ಮತ್ತು ದೇಶಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸುವುದು ರಾಷ್ಟ್ರೀಯ ನವೋದ್ಯ, ದಿನದ ಉದ್ದೇಶವಾಗಿದೆ.
  • ಭಾರತದ ಆರ್ಥಿಕ ಬೆಳವಣಿಹೆ, ನಾವೀನ್ಯತೆ ಮತ್ತು ಉದ್ಯೋಗಸೃಷ್ಟಿಗೆ ನವೋದ್ಯಮಗಳ ಮಹತ್ವದ ಕೊಡುಗೆಗಳನ್ನು ಗೌರವಿಸಲು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ಯುವ ಪೀಳಿಗೆಗೆ ತಮ್ಮ ಆಲೋಚನೆಗಳನ್ನು ವಾಣಿಜ್ಯೀಕರಿಸಲು ಮತ್ತು ಜಾಗತಿಕವಾಗಿ ಪ್ರಸ್ತುತಪಡಿಸಲು ಸ್ಫೂರ್ತಿ ನೀಡುತ್ತದೆ.
  • ಈ ದಿನವು ದೇಶದ ಯುವಕರು ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ಅವರಿಗೆ ಹೊಸ ದಿಕ್ಕನ್ನು ನೀಡಲು ಪ್ರೇರೇಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಲಕ್ಕುಂಡಿಗೆ ವಾನರ ಸೈನ್ಯ ಎಂಟ್ರಿ – Kannada News | Monkey army enters Benalle Lakkundi, a gold treasure

ಗದಗ, ಜ.16: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿಯೊಂದು ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ನಿಧಿ ಶೋಧದ ಉತ್ಖನನ ಕಾರ್ಯ ಆರಂಭವಾಗಿದೆ. ಈ ಉತ್ಖನನ ಕಾರ್ಯವು ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಿ.ಎಂ. ಕೇಶವ ಮತ್ತು ರಾಜ್ಯ ಪುರಾತನ ಇಲಾಖೆಯ ಅಧಿಕಾರಿ ಆರ್. ತೇಜಪ್ಪ ಅವರ ಸಮರ್ಥ ನೇತೃತ್ವದಲ್ಲಿ ನಡೆಯುತ್ತಿದೆ. ಚಿನ್ನದ ನಿಧಿ ಪತ್ತೆಯಾದ ಸ್ಥಳದ ಸುತ್ತಮುತ್ತ, ಶ್ರೀ ಕೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಈಗಾಗಲೇ ಆರಂಭವಾಗಿವೆ.ಅಚ್ಚರಿಯ ಸಂಗತಿಯೆಂದರೆ, ಉತ್ಖನನ ಕಾರ್ಯ ನಡೆಯುವ ಜಾಗದಲ್ಲಿ ವಾನರ ಸೈನ್ಯವೊಂದು ಪ್ರತ್ಯಕ್ಷವಾಗಿದ್ದು, ಇದು ಸ್ಥಳೀಯರಲ್ಲಿ ಮತ್ತು ವೀಕ್ಷಕರಲ್ಲಿ ವಿಶೇಷ ಕುತೂಹಲಕ್ಕೆ ಕಾರಣವಾಗಿದೆ. ಲಕ್ಕುಂಡಿಯ ಇತಿಹಾಸ ಮತ್ತು ಸಂಸ್ಕೃತಿಗೆ ಮತ್ತೊಂದು ಹೊಸ ಅಧ್ಯಾಯ ಬರೆಯುವ ಸಾಧ್ಯತೆಯಿರುವ ಈ ನಿಧಿ ಶೋಧದ ಕಾರ್ಯಕ್ಕೆ ಎಲ್ಲರ ಕಣ್ಣು ನೆಟ್ಟಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:16 am, Fri, 16 January 26

Source link

Video: ರೆಸ್ಟೋರೆಂಟ್ ಮಾಲೀಕನ ಮೇಲೆ ಗೂಳಿ ದಾಳಿ – Kannada News | Stray Bull Attack Caught on Camera in Meerut

ಮೀರತ್, ಜನವರಿ 16: ರೆಸ್ಟೋರೆಂಟ್ ಮಾಲೀಕನ ಮೇಲೆ ಗೂಳಿಯೊಂದು ದಾಳಿ ನಡೆಸಿರುವ ಘಟನೆ ಮೀರತ್​ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೀರತ್‌ನ ಕಂಕರ್‌ಖೇರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಳಿಯೊಂದು ಹಲವು ವಾಹನಗಳಿಗೆ ಹಾನಿ ಮಾಡಿದ್ದಷ್ಟೇ ಅಲ್ಲದೆ, ಸ್ಥಳೀಯ ನಿವಾಸಿಗಳಲ್ಲೂ ಆತಂಕ ಹುಟ್ಟುಹಾಕಿದೆ. ಸಿಟಿ ಗರ್ಲ್ ರೆಸ್ಟೋರೆಂಟ್ ಕಡೆಗೆ ಹೋಗಿ ಆವರಣದ ಹೊರಗೆ ನಿಂತಿದ್ದ ರೆಸ್ಟೋರೆಂಟ್ ಮಾಲೀಕ ಧೀರಜ್ ರಥಿ ಮೇಲೆ ದಾಳಿ ಮಾಡಿದೆ. ಇದು ರೆಸ್ಟೋರೆಂಟ್ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಅವರ ಪಕ್ಕೆಲುಬಿಗೆ ಗಾಯವಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ, ಮತ್ತು ಚಿಕಿತ್ಸೆಯ ನಂತರ ಅವರು ಮನೆಗೆ ಮರಳಿದ್ದಾರೆ.

 

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link