ಸನ್ಯಾಸತ್ವ ಸ್ವೀಕರಿಸಿದರೂ ಮಗನ ಜೀವ ಉಳಿಸಲು ಕಿಡ್ನಿಯನ್ನೇ ದಾನ ಮಾಡಿದ್ದ ಮಹಾತಾಯಿ! – Kannada News | Kaginele Shri Received Kidney Donation from His Pre Monastic Mother, Matter Revealed After His Death

ರಾಯಚೂರು, ಜನವರಿ 16: ತಿಂಥಣಿ ಕಾಗಿನೆಲೆ ಪೀಠದ ಸಿದ್ದರಾಮಾನಂದಪುರಿ ಶ್ರೀಗಳು ಬ್ರಹ್ಮೈಕ್ಯರಾದ ಬೆನ್ನಲ್ಲೇ ಅವರ ಪೂರ್ವಾಶ್ರಮದ ತಾಯಿ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಶ್ರೀಗಳಿಗೆ ಎರಡು ಕಿಡ್ನಿ ವಿಫಲವಾದಾಗ ಕಣ್ಣೀರಿಟ್ಟಿದ್ದ ತಾಯಿ ಜಯಮ್ಮ, ಸನ್ಯಾಸತ್ವ ಸ್ವೀಕರಿಸಿದರೂ ಮಗನ ಜೀವ ಉಳಿಸಲು ತಮ್ಮ ಕಿಡ್ನಿಯನ್ನೇ ದಾನ ಮಾಡಿದ್ದರು ಎಂಬ ವಿಷಯ ರಿವೀಲ್​​ ಆಗಿದೆ. ಈ ಬಗ್ಗೆ ಟಿವಿ9 ಜೊತೆ ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಜಯಮ್ಮ ಅವರ ಎಡಭಾಗದ ಕಿಡ್ನಿಯನ್ನು, ಶ್ರೀಗಳ ಬಲಭಾಗಕ್ಕೆ ಕಿಡ್ನಿ ಕಸಿ ಮಾಡಲಾಗಿತ್ತು. 7 ವರ್ಷದ…

Read More

ಬೀದಿ ನಾಯಿ ಅಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿತು ಸಾಕು ನಾಯಿ ಜಗಳ! – Kannada News | Pet Dog Dispute Reaches Police Station in Hubballi, Not a Stray Dog Issue!

ಹುಬ್ಬಳ್ಳಿ, ಜನವರಿ 16: ಬೀದಿ ನಾಯಿ (Stray Dog) ವಿಚಾರ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ವಿಚಾರಣೆಗೆ ಬಂದಿರುವುದು ನಮಗೆಲ್ಲ ಗೊತ್ತೇ ಇದೆ. ಬೀದಿ ನಾಯಿ ಕಾಟದ ವಿಚಾರ ಸದಾ ಚರ್ಚೆಗೆ ಒಳಗಾಗುತ್ತಿದೆ. ಆದರೆ, ಅಚ್ಚರಿಯೆಂಬಂತೆ ಹುಬ್ಬಳ್ಳಿಯಲ್ಲಿ ಸಾಕು ನಾಯಿ (Pet Dog) ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹುಬ್ಬಳ್ಳಿ (Hubballi) ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಅಲ್ಲದೆ, ಸಾಕು ನಾಯಿ ಉಪಟಳ ವಿಚಾರ ಹುಬ್ಬಳ್ಳಿಯ ಗುರುದೇವ ನಗರ ನಿವಾಸಿಗಳಲ್ಲಿ…

Read More

ಎಷ್ಟು ಲಕ್ಷುರಿಯಾಗಿದೆ  ನೋಡಿ ಬೆಂಗಳೂರಲ್ಲಿ ತಲೆ ಎತ್ತಿದೆ ಮಹೇಶ್ ಬಾಬು ಮಲ್ಟಿಪ್ಲೆಕ್ಸ್ 

ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಬೆಂಗಳೂರಲ್ಲಿ ಇಂದಿನಿಂದ (ಜನವರಿ 16) ಕಾರ್ಯಾರಾಂಭ ಆರಂಭಿಸಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದ ಜಾಗದಲ್ಲೇ ಇದು ತಲೆ ಎತ್ತಿದೆ. ಬೆಂಗಳೂರಿನ ಗಾಂಧಿ ನಗರದಲ್ಲಿರುವ ಕಪಾಲಿ ಮಾಲ್​​​ನಲ್ಲಿ ಈ ಮಲ್ಟಿಪ್ಲೆಕ್ಸ್  ಇದೆ. 9 ಪರದೆಗಳನ್ನು ಇದು ಹೊಂದಿದೆ.ಈ ಚಿತ್ರಮಂದಿರ ಸಾಕಷ್ಟು ಅದ್ದೂರಿಯಾಗಿದೆ. ಥಿಯೇಟರ್​​ನ ಝಲಕ್ ಇಲ್ಲಿದೆ. ಸ್ಕ್ರೀನ್ 6 ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು…

Read More

ದೈವದ ಕುರಿತ ಸೂಕ್ಷ್ಮ ವಿಷಯ ಹೇಳಲಿದೆ ‘ಕಟ್ಟೆಮಾರ್’; ಮುಖ್ಯಭೂಮಿಕೆಯಲ್ಲಿ ಜೆಪಿ, ಸ್ವರಾಜ್ ಶೆಟ್ಟಿ – Kannada News | Kattemar Film Explores Tulu Nadu Beliefs with Kantara’s Swaraj Shetty and JP Tuminad

‘ಕಾಂತಾರ’ ರಿಲೀಸ್ ಆದ ಬಳಿಕ ದೈವದ ಬಗ್ಗೆ ಹಾಗೂ ತುಳುನಾಡಿನ ಸಂಸ್ಕೃತಿ ಬಗ್ಗೆ ಅನೇಕರಿಗೆ ಪರಿಚಯ ಆಗಿದೆ. ದೇಶ-ವಿದೇಶಗಳಲ್ಲಿ ಇದರ ಜನಪ್ರಿಯತೆ ಹಬ್ಬಿದೆ. ಈಗ ದೈವದ ಕುರಿತು ಹೊಸ ಸಿನಿಮಾ ರಿಲೀಸ್​​ಗೆ ರೆಡಿ ಇದೆ. ಚಿತ್ರದ ಹೆಸರು ‘ಕಟ್ಟೆಮಾರ್’. ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಟ್ಟೆಮಾರ್’ ಚಿತ್ರದಲ್ಲಿ ದೈವಾರಾಧನೆ ವಿಷಯ ಹೇಳಲಾಗುತ್ತಿದೆಯೇ? ಇಲ್ಲ. ದೈವ ಯಾವ ರೀತಿಯಲ್ಲಿ…

Read More

ವಿಚ್ಛೇಧನದ ಬಳಿಕ ಸ್ಟಾರ್ ನಟಿಯ ವಿವಾಹವಾಗಲು ಮುಂದಾದ ನಟ ಧನುಶ್ – Kannada News | Mrunal Thakur and Dhanush may get married on February 14

ಧನುಶ್ (Dhanush) ದಕ್ಷಿಣ ಭಾರತದ ಸ್ಟಾರ್ ನಟರುಗಳಲ್ಲಿ ಒಬ್ಬರು. ಹಿಂದಿಯಲ್ಲಿಯೂ ನಟಿಸಿ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಧನುಶ್​​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಕೇವಲ ಕಮರ್ಶಿಯಲ್, ಮಾಸ್ ಮಸಾಲ ಸಿನಿಮಾಗಳನ್ನು ಮಾಡದೆ ಕತೆ ಆಧರಿತ, ನಟನೆಗೆ ಅವಕಾಶ ಇರುವ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಾರೆ ಧನುಶ್. ನಟ ಧನುಶ್ ಅವರ ವೃತ್ತಿ ಜೀವನ ಅದ್ಭುತವಾಗಿ ಸಾಗುತ್ತಿದೆ ಆದರೆ ಅವರ ಖಾಸಗಿ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸ್ಟಾರ್ ನಟ ರಜನೀಕಾಂತ್ ಪುತ್ರಿಯ ವಿವಾಹವಾಗಿದ್ದ ಧನುಶ್, ಬರೋಬ್ಬರಿ 20 ವರ್ಷಗಳ…

Read More

ಬೆಂಗಳೂರು-ಮುಂಬೈ ದುರಂತೋ ಎಕ್ಸ್‌ಪ್ರೆಸ್‌: ಪ್ರಯಾಣಾವಧಿ 18 ಗಂಟೆಗೆ ಇಳಿಕೆಯಾಗುತ್ತಾ?

ಬೆಂಗಳೂರು, ಜನವರಿ 16: ಬೆಂಗಳೂರು–ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಎರಡು ಮಹಾನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸುವ ಉದ್ದೇಶದಿಂದ ದುರಂತೋ ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಕುರಿತು ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೈಲು ಸೇವೆ ಆರಂಭವಾದರೆ, ಬೆಂಗಳೂರು–ಮುಂಬೈ ಪ್ರಯಾಣದ ಸಮಯ ಸುಮಾರು 18 ಗಂಟೆಗಳವರೆಗೆ ಇಳಿಯುವ ಸಾಧ್ಯತೆ ಇದೆ. ಏನೆಲ್ಲಾ ಸೌಲಭ್ಯ ನೀಡಲಿದೆ ದುರಂತೋ ಎಕ್ಸ್‌ಪ್ರೆಸ್‌? ಇತ್ತೀಚೆಗೆ ಬೆಂಗಳೂರು ಎಸ್‌ಎಂವಿಟಿ…

Read More

‘ಗಿಲ್ಲಿ ಹೀರೋ ಆಗೋದು ಪಕ್ಕಾ, ಜಗ್ಗೇಶ್ ಭವಿಷ್ಯ ನಿಜವಾಗುತ್ತೆ’ – Kannada News | Gilli Fans talks about him, says he will become hero

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆಗೆ ಕೆಲವೇ ದಿನ ಬಾಕಿ ಉಳಿದಿದೆ. ಗಿಲ್ಲಿ ನಟ ಈ ಬಾರಿಯ ಗೆಲ್ಲು ಸ್ಪರ್ಧಿ ಎನಿಸಿಕೊಂಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಗಿಲ್ಲಿಗೆ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಜೊತೆಗೆ ಗಿಲ್ಲಿಯ ಹಿನ್ನೆಲೆಯೂ ಸಹ ಅವರನ್ನು ಮೆಚ್ಚಿಕೊಳ್ಳಲು ಕಾರಣ ಆಗಿದೆ. ಗಿಲ್ಲಿಯ ಅಭಿಮಾನಿಗಳು ಕೆಲವರು ಇದೀಗ ಟಿವಿ9 ಜೊತೆಗೆ ಮಾತನಾಡಿದ್ದು, ಗಿಲ್ಲಿಯೇ ಈ ಬಾರಿಯ ವಿನ್ನರ್ ಆಗುವುದು ಗ್ಯಾರೆಂಟಿ. ಮಾತ್ರವೇ ಅಲ್ಲ ಗಿಲ್ಲಿ ಹೊರಗೆ ಬಂದ…

Read More

ಮಗುವಿಗೆ ಎದೆಹಾಲುಣಿಸುತ್ತಿದ್ದಾಗ ಪತ್ನಿಯನ್ನು ಕೊಂದ ಪತಿ, ಶಿಶು ಕೂಡಾ ಉಸಿರುಗಟ್ಟಿ ಸಾವು – Kannada News | Woman Killed Following Domestic Dispute in MP’s Khargone

ಮಧ್ಯಪ್ರದೇಶ, ಜನವರಿ 16: ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಪತಿ ಹಲ್ಲೆ(Attack) ನಡೆಸಿದ ಪರಿಣಾಮ ಆಕೆ ಎಲ್ಲಿಯೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್​ನಲ್ಲಿ ನಡೆದಿದೆ. ಹಲ್ಲೆಯ ಸಮಯದಲ್ಲಿ ದಂಪತಿಯ ಆರು ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಬೇಡ್ಯಾ ಪೊಲೀಸ್ ಠಾಣೆ ಪ್ರದೇಶದ ಬಕಾವಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಗುರುವಾರ ಬೆಳಗ್ಗೆ ಚಂಪಾಬಾಯಿ ಮಾನ್ಕರ್ ಮತ್ತು ಅವರ ಶಿಶು ಶವಗಳು ಅವರ ಮನೆಯಲ್ಲಿ ಪತ್ತೆಯಾಗಿತ್ತು. ಮಾಹಿತಿ ಪಡೆದ ನಂತರ…

Read More

Vastu Tips: ವಾಸ್ತು ಪ್ರಕಾರ ಆಫೀಸಿನಲ್ಲಿ ಯಾವ ದೇವರ ಫೋಟೋ ಇಡುವುದು ಶುಭ ಗೊತ್ತಾ? – Kannada News | Vastu Tips for Deity Photos: Maximize Prosperity at Home and Office

ವಾಸ್ತು ಶಾಸ್ತ್ರದ ಪ್ರಕಾರ, ದೇವರು ಮತ್ತು ದೇವತೆಗಳ ಫೋಟೋಗಳನ್ನು ಮನೆ ಮತ್ತು ಕಚೇರಿಯಲ್ಲಿ ಇಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಒಂದು ರೀತಿಯ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಆದರೆ, ದೇವರು ಮತ್ತು ದೇವತೆಗಳ ಫೋಟೋಗಳನ್ನು ಇಡುವಾಗ ಯಾವಾಗಲೂ ಜಾಗರೂಕರಾಗಿರಬೇಕು. ಯಾಕೆಂದರೆ ಈ ಫೋಟೋಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಶುಭಕ್ಕಿಂತ ಅಶುಭವೇ ಹೆಚ್ಚಾಹಬಹುದು. ಕುಬೇರನ ಫೋಟೋ ಇದ್ದರೆ ಹಣದ ಕೊರತೆ ಇರುವುದಿಲ್ಲ: ಉದಾಹರಣೆಗೆ, ನೀವು ಕುಬೇರನ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ, ನಿಮ್ಮ ಮನೆಯಲ್ಲಿ…

Read More

ಎಲ್ಲರ ಚಿತ್ತ ಲಕ್ಕುಂಡಿಯತ್ತ: ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಆರಂಭ – Kannada News | Historic Lakkundi Unveils Secrets: Excavation at Kote Veerabhadreshwara Temple

ಗದಗ, ಜ.16: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಇಂದಿನಿಂದ ಪ್ರಾರಂಭಗೊಂಡಿದೆ. ಸಿದ್ಧರಕೊಳ್ಳ ಎಂಬ ಸ್ಥಳದಲ್ಲಿ ಕೇವಲ 10 ಮೀಟರ್‌ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಸೇರಿದಂತೆ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಬಾದಾಮಿಗಿಂತಲೂ ಹೆಚ್ಚು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಅಪಾರ ಪ್ರಮಾಣದ ಇತಿಹಾಸ ಬೆಳಕಿಗೆ ಬರಲಿದೆ ಎಂಬ ನಂಬಿಕೆ…

Read More