Category Archives: Blog

Your blog category

ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಪೊಲೀಸರಿಗೆ ಕಾದಿತ್ತು ಶಾಕ್! ಕಳ್ಳತನ ಮಾಡಿದ್ದು ಅವನಲ್ಲ ಅವಳು! – Kannada News | Bengaluru Burglary Case: Sampigehalli Police Nab Women Thieves in Boy Guise

ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಪೊಲೀಸರಿಗೆ ಕಾದಿತ್ತು ಶಾಕ್!

ಬೆಂಗಳೂರು, ಜನವರಿ 16: ಅವರು ನೋಡಲು ಹುಡುಗರಂತೆ ಕಾಣುತ್ತಿದ್ದರು. ಶರ್ಟ್​, ಪ್ಯಾಂಟ್ ಹಾಕಿ, ಸ್ಟೈಲಿಷ್ ಆಗಿ ಓಡಾಡಿಕೊಂಡು ಹಾಡುಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದರು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಾಗಲೇ ಗೊತ್ತಾಗಿದ್ದು ಅವರು ಹುಡುಗಿಯರು ಎಂದು! ಈ ರೀತಿ ವೇಷ ಬದಲಿಸಿ ನಗರದ ಹೊರವಲಯದ ಸಂಪಿಗೆಹಳ್ಳಿಯಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಯುವತಿಯರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯಾರೂ ಇಲ್ಲದ ಮನೆಯೇ ಟಾರ್ಗೆಟ್

ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು–ನೀಲು ಎಂಬ ಯುವತಿಯರು ಹುಡುಗರ ವೇಷದಲ್ಲಿ ಬೈಕ್‌ನಲ್ಲಿ ಓಡಾಡುತ್ತಾ, ಮನೆ ಮಾಲೀಕರು ಹೊರಗೆ ಹೋದ ಸಮಯವನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಇದೇ ರೀತಿ ಜನವರಿ 13ರಂದು ಯಲಹಂಕ ಸಮೀಪದ ಅಗ್ರಹಾರ ಲೇಔಟ್‌ನಲ್ಲಿರುವ ಆಟೋ ಚಾಲಕ ಸಂಗಮೇಶ್ ಮನೆಗೆ ನುಗ್ಗಿದ್ದ ಕಳ್ಳಿಯರು, ಹಾಡಹಗಲೇ ಕನ್ನ ಹಾಕಿದ್ದರು. ಮನೆಯವರು ಹೊರಗೆ ಹೋಗಿದ್ದನ್ನೇ ಕಾದು, ನಂತರ ಮನೆಯಲ್ಲಿದ್ದ ನಗದು ಹಾಗೂ ಮೌಲ್ಯವಸ್ತುಗಳನ್ನು ದೋಚಿದ್ದರು.

ಇದನ್ನೂ ಓದಿ ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ

ಹುಡುಗರ ವೇಷದಲ್ಲಿದ್ದಿದ್ದು ಹುಡುಗಿಯರು!

ಮನೆಗೆ ವಾಪಸ್ ಬಂದ ಸಂಗಮೇಶ್, ಕಳ್ಳತನವಾಗಿರುವುದು ತಿಳಿದು ದಂಗಾಗಿದ್ದರು. ಬಳಿಕ ಸಂಪಿಗೆಹಳ್ಳಿ ಪೊಲೀಸರಿಗೆ ಚಾಲಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕಳ್ಳತನದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳಿಯರು ಬಳಸಿದ್ದ ಸ್ಕೂಟಿಯ ನಂಬರ್ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಸಿಸಿಟಿವಿ ಹಾಗೂ ವಾಹನ ನೋಂದಣಿ ಸಂಖ್ಯೆ ಆಧಾರವಾಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಠಾಣೆಗೆ ಕರೆತಂದಾಗ ಶಾಕ್ ಆಗಿದ್ದರು. ಹುಡುಗರಂತೆ ಕಾಣುತ್ತಿದ್ದ ಕಳ್ಳರು ಶಾಲು ಮತ್ತು ನೀಲು ಎಂಬ ಯುವತಿಯರು ಎನ್ನುವುದು ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಜಯಪುರ: ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣದಲ್ಲಿ ಪತ್ತೆ, ಬಯಲಾಯ್ತು ರಹಸ್ಯ! – Kannada News | GPS Tracked Vulture Found in Vijayapura Farm Reveals Maharashtra Forest Department Research

ವಿಜಯಪುರ, ಜನವರಿ 16: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು ಪತ್ತೆಯಾಗಿದ್ದು, ಈ ಘಟನೆ ಹಲವು ಅನುಮಾನಗಳಿಗೆ ತೆರೆ ಎಳೆದಿದೆ. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು ತಕ್ಷಣ 112 ಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ 112 ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡು ಬಂದಿದ್ದು, ಇದರಿಂದ ಪಕ್ಷಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ, ಈ ರಣಹದ್ದು ಮಹಾರಾಷ್ಟ್ರದ ನಾಗಪೂರ ಸಮೀಪದ ಮೇಲಘಾಟ ಪ್ರದೇಶದಿಂದ ಬಂದಿರುವುದು ತಿಳಿದುಬಂದಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚರಣೆ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಜಿಪಿಎಸ್ ಮತ್ತು ಟ್ರ್ಯಾಕರ್‌ಗಳ ಭಾರದಿಂದ ರಣಹದ್ದು ಬಸವಳಿದ ಸ್ಥಿತಿಯಲ್ಲಿ ಇದ್ದು, ಅದೇ ಕಾರಣದಿಂದ ಹಾರಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದು ಅಗತ್ಯ ಆರೈಕೆ ನೀಡುತ್ತಿದ್ದಾರೆ.

ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಿ ನೋಡಲಾಗುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಿ ಬಿಡುವ ಕುರಿತು ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಅವರ ಸೂಚನೆಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

70 ಸಾವಿರ ರೂ. ಕಾರನ್ನು ಮಾಡಿಫೈ ಮಾಡಿದ ವಿದ್ಯಾರ್ಥಿಗೆ 1 ಲಕ್ಷ ರೂ. ದಂಡ: ಫೈನ್ ಹಾಕಬೇಡಿ ಎಂದು ರಾಜಕಾರಣಿಗಳ ಒತ್ತಡ – Kannada News | Illegal Car Mod: Bangalore Student Pays 1.11 Lakh Fine for Loud Silencer

ಬೆಂಗಳೂರು, ಜ.16: ಬೆಂಗಳೂರಿನಲ್ಲಿ ಸಂಚಾರ ನಿಯಮ (Bangalore traffic fine) ಉಲ್ಲಂಘನೆ ಮಾಡಿ ದಂಡ ಹಾಕಿಸಿಕೊಳ್ಳುವುದು ಒಂದು ಕಡೆ ಹೆಚ್ಚಾಗುತ್ತಿದ್ದಾರೆ. ಮತ್ತೊಂದು ಕಡೆ ವಾಹನ ಮಾಡಿಫೈ ಮಾಡಿ ದಂಡ ಹಾಕಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ 70 ಸಾವಿರ ಕಾರಿಗೆ 1.11 ಲಕ್ಷ ರೂ. ದಂಡ ಹಾಕಿಸಿಕೊಂಡಿದ್ದಾನೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ಅಷ್ಟಕ್ಕೂ ಈ ವಿದ್ಯಾರ್ಥಿಗೆ ಅಷ್ಟೊಂದು ದಂಡ ಯಾಕೆ ಹಾಕಿದ್ದಾರೆ ಗೊತ್ತಾ? ಈ ಯುವಕ ತನ್ನ ಕಾರಿನ ಸೈಲೆನ್ಸರ್​​ನ್ನು ಅಕ್ರಮವಾಗಿ ಮಾಡಿಫೈ ಮಾಡಿದ್ದಾನೆ ಎಂದು ದಂಡ ಹಾಕಿದ್ದಾರೆ. ಈ ಸೈಲೆನ್ಸರ್​​ ಹಾಕಿದ ಕಾರಣ ವಿಪರೀತ ಶಬ್ದ ಮಾಲಿನ್ಯ ಆಗುತ್ತಿದೆ. ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಪೊಲೀಸರು ಈ ವಿದ್ಯಾರ್ಥಿಗೆ ಭಾರೀ ದಂಡ ಹಾಕಿದ್ದಾರೆ. ಈ ಮೂಲಕ ಯುವಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕೇರಳ ಮೂಲದ ವಿದ್ಯಾರ್ಥಿಯೊಬ್ಬರು ಜನವರಿ 2 ರಂದು ನಗರದ ಹೆಣ್ಣೂರು ರಸ್ತೆ ಬಳಿ ಕಾರು ಚಲಾಯಿಸುತ್ತಿದ್ದಾಗ, ಕಾರಿನ ಹಿಂದೆಯಿಂದ ಬೆಂಕಿಯ ಕಿಡಿ ಹಾಗೂ ದೊಡ್ಡ ಶಬ್ದ ಬರುವುದನ್ನು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ದಾರಿಹೋಕರೊಬ್ಬರು ಪೊಲೀಸರಿಗೆ ದೂರ ನೀಡಿದ್ದರು. ಈ ದೂರಿನ ಆಧಾರ ಮೇಲೆ ಸಂಚಾರಿ ಪೊಲೀಸರು ಕ್ಷಿಪ್ರ ಕಾರ್ಯಪವೃತ್ತರಾಗಿ ವಾಹನ ಹಾಗೂ ವಿದ್ಯಾರ್ಥಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದರು.

ಸಂಚಾರ ಪೊಲೀಸರು ಪ್ರಕರಣ ದಾಖಲಿಸುವ ಬದಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ನಿಯಮ ಉಲ್ಲಂಘನೆಯ ಬಗ್ಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ನಂತರ ಈ ಬಗ್ಗೆ ತನಿಖೆ ನಡೆಸಿದಾಗ, ಆರ್‌ಟಿಒ ಅಧಿಕಾರಿಗಳು ಕಾರಿನಲ್ಲಿ ಅಕ್ರಮವಾಗಿ ಮಾರ್ಪಡಿಸಿದ ಸೈಲೆನ್ಸರ್ ಇರುವುದನ್ನು ದೃಢಪಡಿಸಿದ್ದರು. ಅದು ಅತಿಯಾದ ಶಬ್ದವನ್ನು ಮಾತ್ರವಲ್ಲದೆ ಇತರ ವಾಹನ ಚಾಲಕರಲ್ಲಿ ಭಯವನ್ನು ಉಂಟು ಮಾಡುವಂತೆ ಸೈಲೆನ್ಸರ್​​​​ನಿಂದ ಕಿಡಿ ಬರುತ್ತಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಚಿಣ್ಣರಿಗೆ ಹೊಸ ಹಾಟ್‌ಸ್ಪಾಟ್! ಕಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್

ಈ ಮಾಡಿಫೈ ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಅಪಾಯಕಾರಿಯಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿತು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ವಿದ್ಯಾರ್ಥಿಗೆ ರಾಜಕೀಯ ಪ್ರಭಾವ ಕೂಡ ಇತ್ತು ಎಂದು ಹೇಳಲಾಗಿದೆ. ಕಡಿಮೆ ದಂಡವನ್ನು ಹಾಕಿ ಬಿಟ್ಟು ಕಳಿಸಿ ಎಂದು ಒತ್ತಡವನ್ನು ಕೂಡ ಪೊಲೀಸರ ಮೇಲೆ ಹಾಕಲಾಗಿತ್ತು. ಆದರೆ ಪೊಲೀಸರು ಇದನ್ನು ಲೆಕ್ಕಿಸದೆ 1,11,500 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ (DH) ವರದಿ ಮಾಡಿದೆ. ವಿದ್ಯಾರ್ಥಿ ಈ ದಂಡವನ್ನು ಪಾವತಿಸಿದ ನಂತರ ಕಾರನ್ನು ಬಿಟ್ಟು ಕಳಿಸಿದ್ದಾರೆ. ಈ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peacock Feather Vastu: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು! – Kannada News | Peacock Feather Vastu: Attract Wealth and Positive Energy with Kuber’s Blessings

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ ನವಿಲು ಗರಿ ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ಸರಿಯಾದ ಸ್ಥಳಗಳಲ್ಲಿ ನವಿಲು ಗರಿಗಳನ್ನು ಇರಿಸುವ ಮೂಲಕ, ನೀವು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು. ಕುಬೇರನ ಆಶೀರ್ವಾದದ ಜೊತೆಗೆ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಮನೆಯ ಈ ಜಾಗಗಗಳಲ್ಲಿ ನವಿಲು ಗರಿಯನ್ನು ಇರಿಸಿ.

ಪೂಜಾ ಕೊಠಡಿ:

ಮನೆಯ ಪೂಜಾ ಮಂಟಪದಲ್ಲಿ 3 ಅಥವಾ 7 ನವಿಲು ಗರಿಗಳನ್ನು ಇರಿಸಿ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಭಗವಾನ್ ಕುಬೇರನನ್ನು ಮೆಚ್ಚಿಸುತ್ತದೆ. ದೈನಂದಿನ ಪ್ರಾರ್ಥನೆಯ ಸಮಯದಲ್ಲಿ, ನವಿಲು ಗರಿಗಳನ್ನು ಸ್ಪರ್ಶಿಸಿ ಸಂಪತ್ತನ್ನು ಪ್ರಾರ್ಥಿಸಿ. ಈ ಆಚರಣೆಯು ನಿಮ್ಮ ಮನೆಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಹಣ ಬರುತ್ತದೆ ಎಂದು ನಂಬಲಾಗಿದೆ.

ಖಜಾನೆ ಪೆಟ್ಟಿಗೆ:

ನಿಮ್ಮ ಖಜಾನೆ ಪೆಟ್ಟಿಗೆಯಲ್ಲಿ ಅಥವಾ ನೀವು ಹಣವನ್ನು ಎಲ್ಲಿ ಇರಿಸುತ್ತೀರೋ ಅಲ್ಲಿ 5 ನವಿಲು ಗರಿಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಿ. ಕುಬೇರನು ನವಿಲು ಗರಿಗಳಿಗೆ ಆಕರ್ಷಿತನಾಗಿ ಸಂಪತ್ತನ್ನು ರಕ್ಷಿಸುತ್ತಾನೆ. ಈ ಆಚರಣೆ ಅನಗತ್ಯ ಖರ್ಚುಗಳನ್ನು ತಡೆಯುತ್ತದೆ. ಆದಾಯವನ್ನು ಹೆಚ್ಚಿಸುತ್ತದೆ. ಪ್ರತಿ ಶುಕ್ರವಾರ ನವಿಲು ಗರಿಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಇದು ಮನೆಯನ್ನು ಸಂಪತ್ತಿನಿಂದ ತುಂಬುತ್ತದೆ ಎಂದು ನಂಬಲಾಗಿದೆ.

ಪ್ರವೇಶದ್ವಾರದಲ್ಲಿ ನವಿಲು ಗರಿ:

ಏಳು ನವಿಲು ಗರಿಗಳ ಹಾರವನ್ನು ಮುಖ್ಯ ಬಾಗಿಲಿನ ಮೇಲೆ ಅಥವಾ ಹತ್ತಿರ ನೇತುಹಾಕಿ. ಇದು ಮನೆಗೆ ಪ್ರವೇಶಿಸುವ ಶಕ್ತಿಯನ್ನು ಶುದ್ಧೀಕರಿಸುತ್ತದೆ. ಇದು ಕುಬೇರನ ಆಶೀರ್ವಾದವನ್ನು ನಿರ್ದೇಶಿಸುತ್ತದೆ. ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಮತ್ತು ಸಂಪತ್ತು ಒಳಗೆ ಹರಿಯುತ್ತದೆ. ನೀವು ಬಾಗಿಲು ತೆರೆದ ತಕ್ಷಣ ನವಿಲು ಗರಿಗಳನ್ನು ನೋಡುವುದರಿಂದ ಇಡೀ ದಿನವು ಶುಭವಾಗಿರುತ್ತದೆ.

ಸ್ಟಡಿ ಟೇಬಲ್:

ನಿಮ್ಮ ಮಗುವಿನ ಸ್ಟಡಿ ಟೇಬಲ್ ಅಥವಾ ಆಫೀಸ್ ಟೇಬಲ್ ಮೇಲೆ ಮೂರು ನವಿಲು ಗರಿಗಳನ್ನು ಇರಿಸಿ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ. ವೃತ್ತಿ ಪ್ರಗತಿಯನ್ನು ಉತ್ತೇಜಿಸುತ್ತದೆ. ಓದುವಾಗ ಅಥವಾ ಕೆಲಸ ಮಾಡುವಾಗ ನವಿಲು ಗರಿಗಳನ್ನು ನೋಡುವುದರಿಂದ ಮನಸ್ಸಿನ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಮನೆಯ ಉತ್ತರ ದಿಕ್ಕು:

ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದು. ಗೋಡೆಯ ಮೇಲೆ ಅಥವಾ ಈ ದಿಕ್ಕಿನಲ್ಲಿ ಒಂದು ಮೂಲೆಯಲ್ಲಿ ಹನ್ನೊಂದು ನವಿಲು ಗರಿಗಳ ಹಾರವನ್ನು ಇರಿಸಿ. ಇದು ಸಂಪತ್ತಿನ ನಿರಂತರ ಹರಿವನ್ನು ಖಚಿತಪಡಿಸುತ್ತದೆ. ಇದು ವ್ಯವಹಾರದಲ್ಲಿ ಸಮೃದ್ಧಿ, ಉದ್ಯೋಗದಲ್ಲಿ ಪ್ರಗತಿ ಮತ್ತು ಅನಿರೀಕ್ಷಿತ ಪ್ರಯೋಜನಗಳನ್ನು ತರುತ್ತದೆ. ಉತ್ತರ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಶಾಶ್ವತ ಸಮೃದ್ಧಿ ಬರುತ್ತದೆ.

ಆರ್ಥಿಕ ಬಿಕ್ಕಟ್ಟನ್ನು ಶಾಶ್ವತವಾಗಿ ಕೊನೆಗೊಳಿಸಿ:

ಈ ಐದು ಸ್ಥಳಗಳಲ್ಲಿ ನವಿಲು ಗರಿಗಳನ್ನು ಇರಿಸಿದ ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸ ತಿಳಿಯುವಿರಿ. ಹೀಗೆ ಮಾಡುವುದರಿಂದ ಹಣ ಉಳಿಸಿಕೊಳ್ಳಲು, ಆದಾಯ ಹೆಚ್ಚಿಸಲು ಮತ್ತು ಮನೆಗೆ ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.

ನವಿಲು ಗರಿಗಳನ್ನು ಇಟ್ಟುಕೊಳ್ಳಲು ಪ್ರಮುಖ ನಿಯಮಗಳು:

ಯಾವಾಗಲೂ ನವಿಲು ಗರಿಗಳನ್ನು ಬೆಸ ಸಂಖ್ಯೆಯಲ್ಲಿ ಇಟ್ಟುಕೊಳ್ಳಿ, ಉದಾಹರಣೆಗೆ 3, 5, 7, 11. ಮುರಿದ ಅಥವಾ ಕೊಳಕಾದ ನವಿಲು ಗರಿಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ಪ್ರತಿ ಶುಕ್ರವಾರ ಅವುಗಳನ್ನು ಸ್ವಚ್ಛಗೊಳಿಸಿ. ಅವುಗಳನ್ನು ಎಂದಿಗೂ ನೆಲದ ಮೇಲೆ ಇಡಬೇಡಿ. ನವಿಲು ಗರಿಗಳನ್ನು ಖರೀದಿಸುವಾಗ “ಓಂ ಕುಬೇರ ನಮಃ” ಎಂದು ಜಪಿಸಿ. ಈ ನಿಯಮಗಳು ಕುಬೇರನ ಆಶೀರ್ವಾದವನ್ನು ದ್ವಿಗುಣಗೊಳಿಸುತ್ತವೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗಿಲ್ಲಿ ಮೇಲಿನ ಅಭಿಪ್ರಾಯ ಬದಲಾಗಿದೆ’; ಅಶ್ವಿನಿ ಗೌಡ ಪ್ರೀತಿಯ ಮಾತು – Kannada News | Gilli Ashwini Gowda Fight: Bigg Boss Journey From Conflicts to Understanding and Forgiveness

ಗಿಲ್ಲಿ ನಟ (Gilli Nata) ಹಾಗೂ ಅಶ್ವಿನಿ ಗೌಡ ಮಧ್ಯೆ ಆದ ಕಿತ್ತಾಟಗಳು ಒಂದೆರಡಲ್ಲ. ಇಬ್ಬರೂ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದು ಇದೆ. ಇವರ ಮಾತುಗಳು ಸಾಕಷ್ಟು ಬಾರಿ ಮಿತಿಮೀರಿದ್ದವು. ಈ ಬಗ್ಗೆ ಇಬ್ಬರಿಗೂ ಬೇಸರ ಇತ್ತು. ಇದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕೊಟ್ಟ ಚಟುವಟಿಕೆ ವೇಳೆ ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ. ಈ ವೇಳೆ ಕ್ಷಮೆ ಕೂಡ ಕೇಳಿದ್ದಾರೆ. ಈ ಪ್ರೀತಿಯ ಮಾತುಗಳು ವೀಕ್ಷಕರಿಗೆ ಇಷ್ಟ ಆಗಿದೆ.

ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಇದರ ಅನುಸಾರ ಯಾವುದೇ ಸ್ಪರ್ಧಿಗೆ ಕ್ಷಮೆ ಕೇಳುವ ಅವಕಾಶ ಇತ್ತು. ಆಗ ಅಶ್ವಿನಿ ಅವರು ಮೊದಲು ಗಿಲ್ಲಿಗೆ ಕ್ಷಮೆ ಕೇಳಿದರು. ‘ನಾನು ನಿನಗೆ ಸಾಕಷ್ಟು ಬೇಸರ ಮಾಡಿದ್ದೇನೆ. ಫ್ರೆಂಡ್ಸ್ ಹೇಗಿರ್ತಾರೆ ಗೊತ್ತಿಲ್ಲ, ಕಾಲೇಜು ಜೀವನ ಎಂಜಾಯ್ ಮಾಡಿಲ್ಲ. ಹೀಗಾಗಿ ಯಾರೇ ರೇಗಿಸಿದರೂ ಸಿಟ್ಟು ಬರುತ್ತಿತ್ತು. ಬಹುಶಃ ನಿನ್ನ ರೀತಿಯ ಗೆಳೆಯ ಅಥವಾ ತಮ್ಮ ಇದ್ದಿದ್ರೆ ನಾನು ಅದಕ್ಕೆ ಅಡ್ಜಸ್ಟ್ ಆಗುತ್ತಿದ್ದೆ. ರೇಗಿಸೋದು ನೋಡೋಕೆ ಆಗ್ತಾ ಇರಲಿಲ್ಲ’ ಎಂದು ಕೋಪಗೊಳ್ಳುತ್ತಿದ್ದರ ಹಿಂದಿನ ಕಾರಣವನ್ನು ಅಶ್ವಿನಿ ಹೇಳಿದರು.

‘ಹಲವು ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡೆ. ಆದರೆ, ನಿನ್ನನ್ನು ಗಮನಿಸುತ್ತಾ ಬಂದೆ. ನನಗೆ ಬೇಸರ ಆದಾಗ ನೀನು ಮಂಕಾಗುತ್ತಿದೆ. ಆಗ ನನಗೆ ಅರ್ಥ ಆಯಿತು. ಆದರೂ ರೇಗಿಸೋದು ನಿಲ್ಲಿಸಿಲ್ಲ. ನಿನ್ನ ತಂದೆ-ತಾಯಿ ಬಂದಾಗ ನಿನ್ನ ಮೇಲಿನ ಗೌರವ ಹೆಚ್ಚಾಯ್ತು.ನೀನು ಇರೋದೆ ಹೀಗೆ ಎಂದು ನಿನ್ನ ತಂದೆ ತಾಯಿಯಿಂದ ಅರಿತೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ

‘ಗಂಭೀರ ಪರಿಸ್ಥಿತಿಯಲ್ಲೂ ನಗಬಹುದು ಎಂಬುದನ್ನು ನಿನ್ನ ನೋಡಿ ಕಲಿತಿ. ನಿನ್ನ ಮೇಲೆ ಬಂದ ದಿನ ಇದ್ದ ಅಭಿಪ್ರಾಯಕ್ಕೂ, ಈಗಿನ ಅಭಿಪ್ರಾಯಕ್ಕೂ ಸಾಕಷ್ಟು ಬದಲಾಗಿದೆ. ಜೀವನನ ಲೈಟ್ ಆಗಿ ತೆಗೆದುಕೊಂಡು ಎಂಜಾಯ್ ಮಾಡಬಹುದು ಎಂಬುದನ್ನು ಕಲಿತಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿದರು. ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ. ಒಬ್ಬರ ಕೈಗೆ ಕಪ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪುಟ್ಟ ಬಾಲಕ ಸಿಎಂ ಯೋಗಿ ಬಳಿ ಇಟ್ಟ ಬೇಡಿಕೆ ಏನು ಗೊತ್ತೇ? – Kannada News | A Simple Wish Steals the Show During CM Yogi’s Interaction With a Child

ಲಕ್ನೋ, ಜನವರಿ 16: ಪುಟ್ಟ ಬಾಲಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಳಿ ಹೋಗಿ ಕಿವಿಯಲ್ಲಿ ಪಿಸುಗುಟ್ಟಿದ್ದಾನೆ. ಏನೋ ದೊಡ್ಡ ಬೇಡಿಕೆಯಲ್ಲ ಕೇಳಿದ್ದು ಒಂದು ಪ್ಯಾಕೆಟ್ ಚಿಪ್ಸ್​. ಆ ವಿಡಿಯೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಅಷ್ಟರಲ್ಲಿ ಒಂದು ಪುಟ್ಟ ಮಗು ಅವರ ಬಳಿಗೆ ಬರುತ್ತಾನೆ. ಯೋಗಿ ಮಗುವನ್ನು ನೋಡಿ ನಗುತ್ತಾ ಮಾತನಾಡುತ್ತಾನೆ. ಏನು ಬೇಕು ನಿನಗೆ ಎಂದು ಕೇಳುತ್ತಾರೆ. ಬಾಲಕ ಸಿಎಂ ಕಿವಿಯಲ್ಲಿ ನನಗೆ ಚಿಪ್ಸ್ ಬೇಕು ಎಂದು ಪಿಸುಗುಟ್ಟುತ್ತದೆ, ಇದನ್ನು ಕೇಳಿದ ಸಿಎಂ ಯೋಗಿ ಕೂಡ ನಕ್ಕರು.ನಂತರ ಯೋಗಿ ಮಗುವಿಗೆ ಚಿಪ್ಸ್ ಆರ್ಡರ್ ಮಾಡುತ್ತಾರೆ. 14 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್​​ಬಾಸ್ ಮನೆಗೆ ಬಂದ ‘ಗಿಚ್ಚಿ ಗಿಲಿ ಗಿಲಿ’ ತಂಡ: ನಗುವೋ ನಗು – Kannada News | Bigg Boss Kannada 12: Gichi Gili Gili team arrived as guest

ಬಿಗ್​​ಬಾಸ್ (Bigg Boss) ಫಿನಾಲೆ ವಾರ ಚಾಲ್ತಿಯಲ್ಲಿದೆ. ಹಿಂದೆಲ್ಲ ಜನರಿಂದ ತುಂಬಿಕೊಂಡಿರುತ್ತಿದ್ದ ಮನೆಯಲ್ಲಿ ಈಗ ಉಳಿದಿರುವುದು ಕೇವಲ ಆರು ಜನ ಮಾತ್ರ. ಮನೆಯೆಲ್ಲ ಖಾಲಿ-ಖಾಲಿ ಎನಿಸುತ್ತಿದೆ. ಆದರೆ ಅತಿಥಿಗಳು ಬಂದು ಮನೆಯನ್ನು ತುಂಬಿಸುತ್ತಿದ್ದಾರೆ. ಇಂದಿನ ಎಪಿಸೋಡ್​​ನಲ್ಲಿ ಭಾರಿ ಸಂಖ್ಯೆಯ ಅತಿಥಿಗಳೇ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದು, ‘ಜೂನಿಯರ್ ಗಿಚ್ಚಿ ಗಿಲಿ ಗಿಲಿ’ ಬಗ್ಗೆ ಸಹ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಸಹ ಹಾಸ್ಯ ಮಾಡಿ ನಕ್ಕು-ನಲಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಮೂರು ಹಿಟ್ ಕೊಟ್ಟ ನಿರ್ದೇಶಕನಿಗೆ ಎರಡನೇ ಬಾರಿ ಕೈಕೊಟ್ಟ ಅಲ್ಲು ಅರ್ಜುನ್? – Kannada News | Did Allu Arjun say no to Trivikram Srinivas again

ಅಲ್ಲು ಅರ್ಜುನ್ (Allu Arjun) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸಹ ಸೆಳೆದಿವೆ. ಇದೀಗ ಅಲ್ಲು ಅರ್ಜುನ್ ತಮಿಳಿನ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಹಾಲಿವುಡ್ ಸ್ಟುಡಿಯೋಗಳ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಈ ಸಿನಿಮಾ ಮೂಲಕ ಹಾಲಿವುಡ್ ಕದ ತಟ್ಟುವ ಆಲೋಚನೆಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಒಂದೊಂದೆ ಮೆಟ್ಟಿಲು ಏರುತ್ತಾ ಸಾಗುತ್ತಿರುವ ಅಲ್ಲು ಅರ್ಜುನ್, ಏರಲು ಸಹಾಯ ಮಾಡಿದವರನ್ನೇ ನಿರ್ಲಕ್ಷಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಅಲ್ಲು ಅರ್ಜುನ್ ಅವರಿಗೆ ಅವರ ವೃತ್ತಿ ಜೀವನದಲ್ಲಿ ಹಲವು ಅತ್ಯುತ್ತಮ ನಿರ್ದೇಶಕರುಗಳು ದೊರಕಿದ್ದಾರೆ. ಸುಕುಮಾರ್, ಭಾಸ್ಕರ್, ಕ್ರಿಶ್, ಗುಣಶೇಖರ್ ಇನ್ನೂ ಹಲವರು ಅಲ್ಲು ಅರ್ಜುನ್​​ಗೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸುಕುಮಾರ್ ಅಲ್ಲು ಅರ್ಜುನ್​​ಗಾಗಿ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದು ಮೂರಕ್ಕೆ ಮೂರು ಸೂಪರ್ ಹಿಟ್ ಆಗಿವೆ. ‘ಆರ್ಯ’, ‘ಪುಷ್ಪ’ ಮತ್ತು ‘ಪುಷ್ಪ 2’. ಆದರೆ ಸುಕುಮಾರ್ ಈ ಸಾಧನೆ ಮುಂಚೆಯೇ ಮತ್ತೊಬ್ಬ ನಿರ್ದೇಶಕ ಈ ದಾಖಲೆ ಬರೆದಿದ್ದರು ಅದುವೇ ತ್ರಿವಿಕ್ರಮ್ ಶ್ರೀನಿವಾಸ್.

ತೆಲುಗಿನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್, ತೆಲುಗು ಚಿತ್ರರಂಗಕ್ಕೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್​​ ಅವರಿಗಾಗಿ ಮೂರು ಸಿನಿಮಾ ನಿರ್ದೇಶಿಸಿ, ಮೂರಕ್ಕೆ ಮೂರು ಸಹ ದೊಡ್ಡ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿದ್ದಾರೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಳ್ಳುವ ಮೊದಲೇ ಈ ಹಿಟ್​​ಗಳನ್ನು ತ್ರಿವಿಕ್ರಮ್ ನೀಡಿದ್ದರು. ಆದರೆ ಈಗ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್​​ಗೆ ಕೈಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದೂ ಒಂದಲ್ಲ ಎರಡೆರಡು ಭಾರಿ.

ಇದನ್ನೂ ಓದಿ:ಜಪಾನ್ ಅಭಿಮಾನಿಗಳ ಜೊತೆ ಅಲ್ಲು ಅರ್ಜುನ್

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಬೇಕಿತ್ತು. ‘ಪುಷ್ಪ’ ಸಿನಿಮಾದ ಸಮಯದಲ್ಲಿಯೇ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದ ಸಿನಿಮಾಕ್ಕೆ ಎಸ್ ಹೇಳಿದರು. ಆ ಬಳಿಕ ತ್ರಿವಿಕ್ರಮ್ ಅವರು ಅದೇ ಕತೆಯನ್ನು ಜೂ ಎನ್​​ಟಿಆರ್ ಅವರಿಗೆ ಹೇಳಿದರು. ಆದರೆ ಜೂ ಎನ್​​ಟಿಆರ್ ಕತೆ ಸೂಟ್ ಆಗುವುದಿಲ್ಲವೆಂದು ನಿರ್ಧರಿಸಿ ಮತ್ತೆ ಕತೆಯನ್ನು ಅಲ್ಲು ಅರ್ಜುನ್ ಅವರಿಗೇ ಒಪ್ಪಿಸಿದರು ತ್ರಿವಿಕ್ರಮ್ ಶ್ರೀನಿವಾಸ್.

ಆದರೆ ಇದೀಗ ಮತ್ತೆ ತ್ರಿವಿಕ್ರಮ್ ಶ್ರೀನಿವಾಸ್​​ಗೆ ಕೈಕೊಟ್ಟಂತಿದೆ ಅಲ್ಲು ಅರ್ಜುನ್. ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾ ಇದೇ ವರ್ಷ ಶುರುವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರು ತಮಿಳಿನ ಲೋಕೇಶ್ ಕನಗರಾಜ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆ ಮೂಲಕ ತ್ರಿವಿಕ್ರಮ್ ಸಿನಿಮಾಕ್ಕೆ ಮತ್ತೊಮ್ಮೆ ನೋ ಹೇಳಿರುವುದು ಖಾತ್ರಿ ಆಗಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಅವರು, ದೇವರು ಸುಬ್ರಹ್ಮಣ್ಯ ಅಥವಾ ಮುರುಗನ್ ಅವರನ್ನು ಆಧರಿಸಿದ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು. ಅದಕ್ಕೆ ಅಲ್ಲು ಅರ್ಜುನ್ ಅವರೇ ಸೂಕ್ತ ಎಂಬ ನಂಬಿಕೆಯಲ್ಲಿದ್ದಾರೆ ಆದರೆ ಅಲ್ಲು ಅರ್ಜುನ್ ಪದೇ ಪದೇ ಸಿನಿಮಾಕ್ಕೆ ನೋ ಹೇಳುತ್ತಿದ್ದಾರೆ. ಇದೀಗ ಈ ಸಿನಿಮಾ ಮತ್ತೆ ಜೂ ಎನ್​​ಟಿಆರ್ ಪಾಲಾಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ – Kannada News | Mining Dust Chokes Lives in Chitradurga: Farmers’ Union Protests as Government Remains Silent

ಚಿತ್ರದುರ್ಗ, ಜನವರಿ 16: ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಸ್ಥಳೀಯ ಜನಜೀವನಕ್ಕೆ ಸಮಸ್ಯೆಯಾಗಿ ಪರಿಣಮಿಸಿವೆ. ಇಲ್ಲಿನ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಗಣಿ ಲಾರಿಗಳು ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿವೆ. ಈ ಲಾರಿಗಳಿಗೆ ಟಾರ್ಪಲ್ ಹೊದಿಸದಿರುವುದು ಮತ್ತು ರಾತ್ರಿ ಮಾತ್ರ ಸಂಚಾರ ಮಾಡಬೇಕೆಂಬ ನಿಯಮವನ್ನು ಪಾಲಿಸದಿರುವುದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ.

ಈ ನಿಯಮಬಾಹಿರ ಸಂಚಾರದಿಂದಾಗಿ ಬೆಳೆದ ಬೆಳೆಗಳು ಹಾಳಾಗುತ್ತಿವೆ. ಭಾರಿ ಗಾತ್ರದ ಲಾರಿಗಳ ಸಂಚಾರದಿಂದ ಸಮೀಪದ ಮನೆಗಳು ಕಂಪಿಸುತ್ತಿವೆ ಹಾಗೂ ಧೂಳಿನಿಂದ ಜನರ ಆರೋಗ್ಯ ಹದಗೆಡುತ್ತಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗಣಿಗಾರಿಕೆ ನಡೆಯುತ್ತಿದ್ದರೂ, ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಿಲ್ಲ. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಡಿಎಂಎಫ್ ನಿಧಿಯನ್ನೂ ಸರಿಯಾಗಿ ಬಳಸುತ್ತಿಲ್ಲ ಎಂಬ ಆರೋಪವಿದೆ. ಜಿಲ್ಲಾಡಳಿತದ ಮೌನದಿಂದ ರೋಸಿಹೋಗಿರುವ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು – Kannada News | Uttar Pradesh: Was It Choice or Influence Student’s Dress Decision Draws Attention

ಲಕ್ನೋ, ಜನವರಿ 16: ಮುಸ್ಲಿಂ ಸ್ನೇಹಿತೆಯರು ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಕೋಚಿಂಗ್ ಕ್ಲಾಸ್​ನಿಂದ ಮನೆಗೆ ಹೊರಡುವಾಗ ಆಕೆಗೆ ಸ್ನೇಹಿತೆಯರು ಬುರ್ಖಾವನ್ನು ತಂದುಕೊಟ್ಟಿದ್ದು, ಆಕೆ ಧರಿಸಿರುವುದನ್ನು ಕಾಣಬಹುದು, ಆದರೆ ಅವರು ಬುರ್ಖಾ ಧರಿಸುವಂತೆ ಒತ್ತಡ ಹೇರಿದ್ದರೋ ಅಥವಾ ಆಕೆಯೇ ಇಷ್ಟ ಪಟ್ಟು ಧರಿಸಿದ್ದಾಳೋ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ದಿ ತತ್ವ ಎನ್ನುವ ಎಕ್ಸ್​ ಅಕೌಂಟ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link