ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ – Kannada News | Basangouda Patil Yatnal Drops Explosive Remarks on Harihar Panchamasali Peeth Dispute
ಹುಬ್ಬಳ್ಳಿ, ಮೇ 20: ಹರಿಹರ ಪೀಠದ ವಿವಾದ ಬಗೆಹರಿಸುವ ಕೆಲಸ ಮಾಡಿದ್ದೇವೆ. ಟ್ರಸ್ಟ್ ಲೆಕ್ಕಪತ್ರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಮಾಜಕ್ಕೆ ಧಕ್ಕೆ ಬರುವ ಘಟನೆಗಳು ನಡೆದಿವೆ, ಅವುಗಳನ್ನು ಎರಡು ಕಡೆಯವರನ್ನು ಸೇರಿಸಿ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ. ಇಂದು ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಪಂಚಮಸಾಲಿ ಪೀಠಗಳ ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಮಾಜದ ಗೊಂದಲ ನಿವಾರಣೆಗಾಗಿ ಸೂಕ್ತ…