ಕೊನೆಗೂ ಡೊನಾಲ್ಡ್ ಟ್ರಂಪ್‌ಗೆ ಸಿಕ್ಕೇ ಬಿಡ್ತು ನೊಬೆಲ್ ಶಾಂತಿ ಪುರಸ್ಕಾರ – Kannada News | Donald Trump’s Symbolic Nobel Peace Prize: Machado’s Political Move for Venezuela
ವಾಷಿಂಗ್ಟನ್, ಜನವರಿ 16: ಕೊನೆಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿಬಿಟ್ಟಿದೆ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗೌರವ ಸೂಚಕವಾಗಿ ಪ್ರದಾನ ಮಾಡಿದ್ದಾರೆ. ಮಚಾದೊ ಅವರು ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, ಅಧ್ಯಕ್ಷ ಟ್ರಂಪ್‌ಗೆ ಪುರಸ್ಕಾರ ಪ್ರಧಾನ ಮಾಡಿರುವುದಾಗಿ ಹೇಳಿದರು. ಟ್ರಂಪ್ ಅದನ್ನು ಸ್ವೀಕರಿಸಿದ್ದಾರೆಯೇ ಎಂದು ಅವರು…