Category Archives: Blog

Your blog category

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಬಹಳ ಪ್ರೀತಿಸುವ ವ್ಯಕ್ತಿಯನ್ನ ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ – Kannada News | Numerology Prediction: Birth Numbers 4,5,6 Horoscope for January 16

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಶೀತ, ಕಫ, ಕೆಮ್ಮು ಈ ರೀತಿಯ ತೊಂದರೆಗಳು ಜಾಸ್ತಿ ಆಗಲಿದ್ದು, ವೈದ್ಯರಿಗೆ ತೋರಿಸಿದ ನಂತರದಲ್ಲಿಯೂ ಹತೋಟಿಗೆ ಬಾರದೆ ಆತಂಕಕ್ಕೆ ಕಾರಣ ಆಗಲಿದೆ. ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ, ಅದರಲ್ಲಿಯೂ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಮಾತನಾಡುವಾಗ ಬಳಕೆ ಮಾಡುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಿ. ಅತ್ಯುತ್ಸಾಹದಲ್ಲೋ ಅಥವಾ ತಮಾಷೆ ಎಂದುಕೊಂಡು ನೀವಾಡಿದ ಮಾತುಗಳಿಂದ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ತನಕ ಹೋಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನೀವು ಒಪ್ಪಿಸಿದ ಕೆಲಸಗಳನ್ನು ಆಗ- ಈಗ ಎಂದು ಮುಂದಕ್ಕೆ ಹಾಕುತ್ತಾ ಇರುವವರ ಬಳಿ ಗೆರೆ ಕೊಯ್ದಂತೆ ಮಾತನಾಡಲಿದ್ದೀರಿ. ಒಂದು ವೇಳೆ ಈಗಾಗಲೇ ಆ ಕೆಲಸದ ಸಲುವಾಗಿ ಅಡ್ವಾನ್ಸ್ ರೂಪದಲ್ಲಿ ಹಣವನ್ನು ನೀಡಿದ್ದಲ್ಲಿ ಅದನ್ನು ಹಿಂತಿರುಗಿಸುವಂತೆ ಕೇಳಲಿದ್ದೀರಿ. ನಿಮ್ಮ ಸ್ನೇಹಿತರ ಪೈಕಿ ಒಬ್ಬರು ತಮಗೆ ಸಾಲದ ಅಗತ್ಯ ಇದ್ದು, ಜಾಮೀನು ನೀವು ನೀಡಬೇಕು ಎಂದು ಕೇಳಿಕೊಂಡು ಬರಬಹುದು. ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಹೆಚ್ಚಿನ ಮೊತ್ತದ ದಂಡವನ್ನು ಪಾವತಿಸುವಂತೆ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ರಾಜಕಾರಣಿಗಳಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮಹತ್ವಾಕಾಂಕ್ಷೆಯಿಂದ ನಡೆಸುವಂಥ ಸಮಾವೇಶದ ಮುಂದಾಳತ್ವ ನೀವೇ ವಹಿಸಬೇಕು ಎಂದು ತಿಳಿಸಲಿದ್ದಾರೆ. ನೀವು ಬಹಳ ಪ್ರೀತಿಸುವ ವ್ಯಕ್ತಿಗಳನ್ನು ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ. ಬಿಡುವೇ ಸಿಗದಷ್ಟು ಕೆಲಸಗಳಲ್ಲಿ ಮುಳುಗಿ ಹೋಗುವಂತೆ ಆಗಲಿದ್ದು, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಸಹ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಮಾರ್ಕೆಟಿಂಗ್- ಜಾಹೀರಾತು ವಿಭಾಗದಲ್ಲಿ ಇರುವವರಿಗೆ ಬಡ್ತಿ ಸಿಗುವ ಮಾಹಿತಿ ಸಿಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 16ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾವುದೇ ವಿಚಾರದಲ್ಲೂ ಅತುರ ಮಾಡಬೇಡಿ. ನಿಮ್ಮ ಎದುರಿಗೆ ಇರುವಂಥವರು ಪೂರ್ಣವಾಗಿ ಮಾತು ಮುಗಿಸುವ ತನಕ ಕೇಳಿಸಿಕೊಳ್ಳಿ. ಹೇಳಿದ್ದನ್ನೇ ಹೇಳುತ್ತಾ ಇದ್ದಾರೆ ಎಂದೆನಿಸಿದರೂ ಮಧ್ಯೆ ಮಾತಾಡುವುದಕ್ಕೋ ಹೋಗಬೇಡಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಸಮಸ್ಯೆ ತೀವ್ರವಾಗಲಿದೆ. ಈಗ ಔಷಧ ತೆಗೆದುಕೊಳ್ಳುತ್ತಾ ಇದ್ದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇಲ್ಲ ಎಂಬ ಕಾರಣಕ್ಕೆ ಬದಲಾವಣೆ ಸಲಹೆ ನೀಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮಗಿಂತ ಕಿರಿಯ ವಯಸ್ಸಿನವರಿಗೆ ಹೊಸ ಬಟ್ಟೆಗಳನ್ನು ಕೊಡಿಸಲಿದ್ದೀರಿ. ನಿರ್ದಿಷ್ಟ ಸಮಯದೊಳಗೆ ಕೆಲವು ಕಾರ್ಯಗಳನ್ನು ಮುಗಿಸಿಕೊಡುವ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆ ಇದೆ. ಒಂದೇ ಕೆಲಸಕ್ಕೆ ನಾಲ್ಕಾರು ಸಲ ಓಡಾಡುವಂತೆ ಆಗಲಿದ್ದು, ನೀವು ಯಾವ ಕಾರ್ಯಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅದರ ಎಲ್ಲ ದಾಖಲೆ- ಪತ್ರಗಳು ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ತೀವ್ರ ಬಗೆಯಲ್ಲಿ ಹಲ್ಲು ನೋವು ಕಾಡಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹಣಕಾಸು ವಿಚಾರದಲ್ಲಿ ವೇಗವಾಗಿ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳ ಬಾರದು. ಷೇರು- ಮ್ಯೂಚುವಲ್ ಫಂಡ್ ಹೂಡಿಕೆಗೆ ಸಲಹೆ ನೀಡುವಂಥ ಫೈನಾನ್ಷಿಯಲ್ ಅಡ್ವೈಸರ್- ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಆಗಿರುತ್ತದೆ. ಕಣ್ತಪ್ಪಿನಿಂದ ಆದ ಸಮಸ್ಯೆಯನ್ನು ಬಗೆಹರಿಸಲು ಕಲಿತ ವಿದ್ಯೆ- ಬುದ್ಧಿಯನ್ನೆಲ್ಲ ಖರ್ಚು ಮಾಡುವಂತೆ ಆಗಲಿದೆ. ನಿಮ್ಮ ಜವಾಬ್ದಾರಿ ಇತರರಿಗೆ ವರ್ಗಾಯಿಸಬೇಡಿ. ಸಂಖ್ಯೆಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷೆ ಮಾಡಿದ ನಂತರದಲ್ಲಿ ವ್ಯವಹಾರ ಮಾಡಿ.

ಲೇಖನ- ಸ್ವಾತಿ ಎನ್.ಕೆ.

Source link

WPL 2026: ಅವಮಾನಿಸಿದ ಕೋಚ್; ಬೌಂಡರಿಗಳಿಂದಲೇ 48 ರನ್ ಚಚ್ಚಿದ ಹರ್ಲೀನ್! ವಿಡಿಯೋ – Kannada News | Harleen Deol’s Fiery Reply: Unbeaten 64* Against MI Seals WPL Win for UP Warriorz

ಹರ್ಲೀನ್ ಡಿಯೋಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ, ಯುಪಿ ವಾರಿಯರ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, 2026 ರ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 161 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಯುಪಿ 18.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಜಯದ ನಗೆಬೀರಿತು. ಯುಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್ಲೀನ್ 39 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ಅಜೇಯ 64 ರನ್ ಗಳಿಸಿದರು.

ಅಚ್ಚರಿಯ ಸಂಗತಿಯೆಂದರೆ ಇದೇ ಹರ್ಲೀನ್ ಡಿಯೋಲ್ ಕಳೆದ ಪಂದ್ಯದಲ್ಲಿ ಮುಖ್ಯ ಕೋಚ್ ಅಭಿಷೇಕ್ ಶರ್ಮಾರಿಂದ ಅವಮಾನಕ್ಕೊಳಗಾಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ ತಾನು ಏನು ಎಂಬುದನ್ನು ಸಾಭೀತುಪಡಿಸಿದ ಹರ್ಲೀನ್ ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಕೋಚ್​ಗೆ ಉತ್ತರ ನೀಡಿದರು.

ವಾಸ್ತವವಾಗಿ ಡಬ್ಲ್ಯುಪಿಎಲ್ 7ನೇ ಪಂದ್ಯದಲ್ಲಿ ಯುಪಿ ತಂಡ ಡೆಲ್ಲಿ ತಂಡವನ್ನು ಎದುರಿಸಿತ್ತು. ಜನವರಿ 14 ರಂದು ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಯುಪಿ ಪರ ಹರ್ಲೀನ್ 36 ಎಸೆತಗಳಲ್ಲಿ 47 ರನ್ ಬಾರಿಸಿದ್ದರು. ಆದರೆ ತಂಡದ ಮುಖ್ಯ ಕೋಚ್ ಅಭಿಷೇಕ್ ಶರ್ಮಾ, ಹರ್ಲೀನ್ ನಿಧಾನಗತಿಯ ಬ್ಯಾಟಿಂಗ್‌ ಮಾಡುತ್ತಿದ್ದಾರೆಂದು ಅವರನ್ನು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ವಾಪಸ್ ಕರೆಸಿಕೊಂಡಿದ್ದರು. ಇದರಿಂದ ಹರ್ಲೀನ್​ ಬಹಿರಂಗವಾಗಿಯೇ ಮುಜುಗರಕ್ಕೊಳಗಾಗಿದ್ದರು.

ಆದರೆ ಇಂದಿನ ಪಂದ್ಯದಲ್ಲಿ ಕೋಚ್​ಗೆ ಸರಿಯಾದ ಪ್ರತ್ಯುತ್ತರ ನೀಡಿದ ಹರ್ಲೀನ್, ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು. ಮುಂಬೈ ತಂಡದ ಪ್ರತಿಯೊಬ್ಬ ಬೌಲರ್​ಗೂ ಬೌಂಡರಿ ರುಚಿ ತೋರಿಸಿದ ಹರ್ಲೀನ್ ತಮ್ಮ ಇನ್ನಿಂಗ್ಸ್​ನಲ್ಲಿ 12 ಬೌಂಡರಿಗಳನ್ನು ಬಾರಿಸಿದರು. ಅಂದರೆ ಕೇವಲ ಬೌಂಡರಿಗಳಿಂದಲೇ ಹರ್ಲೀನ್ 48 ರನ್ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಯ್ತು ಗಿಲ್ಲಿ ಮನಸ್ಸು; ಅಶ್ವಿನಿಗೆ ಮುದುಕಿ, ನೀನು, ತಾನು ಎಂದಿದ್ದಕ್ಕೆ ಕ್ಷಮೆ – Kannada News | Gilli Nata apologizes to Ashwini Gowda in Bigg Boss Kannada Season 12 ahead of Finale

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ (Ashwini Gowda), ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ಧನುಷ್ ಅವರು ಫಿನಾಲೆಗೆ ಬಂದಿದ್ದಾರೆ. ಈ ಶೋನಲ್ಲಿ ಸ್ಪರ್ಧಿಗಳ ನಡುವೆ ನಡೆದ ಜಗಳ ಒಂದೆರಡಲ್ಲ. ಈಗ ಅದೆಲ್ಲವನ್ನೂ ಮರೆತು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವ ಸಮಯ ಎದುರಾಗಿದೆ. ಕೊನೇ ವಾರದಲ್ಲಿ ಒಬ್ಬರಿಗೊಬ್ಬರು ಕ್ಷಮೆ ಕೇಳಿದ್ದಾರೆ. ಗಿಲ್ಲಿ ನಟ ಅವರು ತಾವು ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅಶ್ವಿನಿ ಗೌಡಗೆ ಮಾತ್ರವಲ್ಲದೇ ಕಾವ್ಯಾ ಶೈವ, ರಘು ಅವರಿಗೂ ಗಿಲ್ಲಿ ನಟ (Gilli Nata) ಕ್ಷಮೆ ಕೇಳಿದ್ದಾರೆ.

‘ನಾವಿಬ್ಬರು ಟೀಮ್ ಉಸ್ತುವಾರಿ ಮಾಡುವಾಗ ಜಗಳದ ಭರದಲ್ಲಿ ನಾನು ನಿಮಗೆ ಹೋಗೆ, ಬಾರೆ ಅಂತ ಬೈಯ್ದಿದ್ದೆ. ಆ ಸಮಯದಲ್ಲಿ ನಾನೇ ಸಮಾಧಾನ ಆಗಬಹುದಿತ್ತು. ನೀವು ಅವಿ ಅಣ್ಣನ ಬಳಿ ಹೇಳಿಕೊಂಡು ಅತ್ತಿದ್ರಿ. ಅದು ನನಗೆ ಗೊತ್ತಾಯಿತು. ನೀವು ವಯಸ್ಸಿನಲ್ಲಿ ದೊಡ್ಡವರು. ಅದು ನನಗೂ ಗೊತ್ತಿತ್ತು. ನೀವು ಅತ್ತಿದ್ದು ತಿಳಿದು ಬಹಳ ಬೇಜಾರು ಆಯ್ತು’ ಎಂದು ಗಿಲ್ಲಿ ನಟ ಅವರು ಹೇಳಿದರು.

‘ನಿಮ್ಮ ಜಾಗದಲ್ಲಿ ನಮ್ಮ ಅಕ್ಕನೋ ಅಥವಾ ಅಮ್ಮನೋ ಇದ್ದಿದ್ದು ಬೇರೆ ಯಾರಾದರೂ ಆ ರೀತಿ ಮಾತನಾಡಿದ್ದರೆ ನಾನು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದೆ ಅಂತ ನನಗೆ ಅನಿಸಿತು. ಎಲ್ಲರಿಗೂ ಫ್ಯಾಮಿಲಿ ಇರುತ್ತದೆ. ಅವರ ಕುಟುಂಬದವರು ಇದನ್ನು ನೋಡುತ್ತಿರುತ್ತಾರೆ. ಅವರಿಗೆ ಹೇಗೆ ಅನಿಸಬಹುದು. ಪ್ರತಿಬಾರಿ ನಿಮ್ಮನ್ನು ರೇಗಿಸುವಾಗ, ಜಗಳ ಆಡುವಾಗ ಮುದುಕಿ ಅಂದಿದ್ದೇನೆ, ಹಲ್ಲು ಸೆಟ್ ಹಾಕಿಕೊಂಡು ಬಂದಿದ್ದೀರಿ ಅಂತ ಹೇಳಿದ್ದೇನೆ. ನೀವೇ ಚೆನ್ನಾಗಿ ಮಾತನಾಡಿಸಲು ಬಂದಾಗಲೂ ನಾನು ಮತ್ತೆ ರೇಗಿಸಿದೆ. ನಿಮ್ಮ ಮನಸ್ಸಿಗೆ ನಾನು ತುಂಬಾ ಬೇಜಾರು ಮಾಡಿಸಿದ್ದೇನೆ. ನನ್ನಿಂದ ಏನೇ ಬೇಜಾರು ಆಗಿದ್ದರು ಕ್ಷಮಿಸಿ’ ಎಂದು ಗಿಲ್ಲಿ ನಟ ಅವರು ಹೇಳಿದರು.

ಮ್ಯೂಟೆಂಟ್ ರಘು ಅವರಿಗೂ ಗಿಲ್ಲಿ ಕ್ಷಮೆ ಕೇಳಿದರು. ‘ತಲೆಯಲ್ಲಿ ಕೂದಲು ಇಲ್ಲ, ದವಡೆ ಹಲ್ಲು ಇಲ್ಲ ಅಂತ ನಿಮಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ’ ಎಂದು ಅವರು ಹೇಳಿದರು. ಸೀಕ್ರೆಟ್ ಟಾಸ್ಕ್​​ನಲ್ಲಿ ಕಾವ್ಯಾಗೆ ಗಿಲ್ಲಿ ಅವರು ಕಣ್ಣೀರು ಹಾಕಿಸಿದ್ದರು. ಅದಕ್ಕಾಗಿ ಅವರು ಈಗ ಕ್ಷಮೆ ಕೇಳಿದ್ದಾರೆ. ‘ನಿನಗೆ ತುಂಬಾ ಕಿರಿಕಿರಿ ಮಾಡಿದ್ದೇನೆ. ಪ್ರತಿ ವಾರ ನೀನು ನನ್ನನ್ನು ಕ್ಷಮಿಸಿದ್ದೀಯ. ನಿನಗೆ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಗಿಲ್ಲಿ.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಅಭಿಮಾನಿಗಳು

ಅಶ್ವಿನಿ ಗೌಡ ಅವರು ಕೂಡ ಗಿಲ್ಲಿಯ ಬಳಿ ಕ್ಷಮೆ ಕೇಳಿದ್ದಾರೆ. ಈಗ ಎಲ್ಲ ಸ್ಪರ್ಧಿಗಳು ಪರಸ್ಪರ ದ್ವೇಷ ಮರೆತು ಒಂದಾಗಿದ್ದಾರೆ. ಸಂಕ್ರಾಂತಿ ಹಬ್ಬದ ದಿನವೇ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಜನವರಿ 17 ಮತ್ತು 18ರಂದು ಬಿಗ್​ ಬಾಸ್ ಫಿನಾಲೆ ನಡೆಯಲಿದೆ. ಈ 6 ಜನರ ಪೈಕಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾರುಣ್ಯ ರಾಮ್ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್ – Kannada News | Karunya Ram sister Samruddhi Ram threatening me Says Prajwal

ನಟಿ ಕಾರುಣ್ಯ ರಾಮ್ ಅವರ ಸಹೋದರಿ ಸಮೃದ್ಧಿ ರಾಮ್ (Samruddhi Ram) ಅವರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ಕೊಟ್ಟವರು ಹಣ ವಾಪಸ್ ಕೇಳಿದ್ದಕ್ಕೆ ಕಾರುಣ್ಯ ರಾಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಅವರಿಗೆ ಸಾಲ ನೀಡಿರುವ ಪ್ರಜ್ವಲ್ ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಲ ಪಡೆಯುವಾಗ ಒಂದು ಮಾತು ಹೇಳಿದ್ದರು. ಅಕ್ಕನ ಮುಖ ನೋಡಿ ಸಾಲ ಕೊಡಿ ಎಂದಿದ್ದರು. ಅದಕ್ಕಾಗಿಯೇ ನಾನು ಕಾರುಣ್ಯ ರಾಮ್ (Karunya Ram) ಅವರಿಗೆ ಫೋನ್ ಮಾಡಿ ಹಣ ಕೇಳಿದೆ. ಅವರು ಜೋರಾಗಿ ಮಾತನಾಡಿದರು. ಈಗ ಸಮೃದ್ಧಿ ರಾಮ್ ಅವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆರಂಭದಲ್ಲಿ ಸ್ವಲ್ಪ ಹಣ ವಾಪಸ್ ಕೊಟ್ಟರು. ಆಮೇಲೆ ಫೋನ್ ಸ್ವಿಚ್ ಆಫ್ ಮಾಡಿಕೊಂಡರು. ನಂಬರ್ ಬ್ಲಾಕ್ ಮಾಡಿದರು’ ಎಂದು ಪ್ರಜ್ವಲ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಹಾಲಿ ಚಾಂಪಿಯನ್‌ ಮುಂಬೈ ಮಣಿಸಿ ಮೊದಲ ಗೆಲುವು ದಾಖಲಿಸಿದ ಯುಪಿ – Kannada News | Harleen Deol’s Heroics Lead UP Warriors to First WPL 4 Win Over Defending Champs MI

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ 4ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಆವೃತ್ತಿಯಲ್ಲಿ ಯುಪಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿರುವುದರಿಂದ ಇಂದಿನ ಪಂದ್ಯದಲ್ಲೂ ಮುಂಬೈ ತಂಡವೇ ಗೆಲುವಿನ ಫೇವರೇಟ್ ಎನಿಸಿಕೊಂಡಿತ್ತು. ಆದರೆ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಯುಪಿ ತಂಡ ಬಲಿಷ್ಠ ಮುಂಬೈ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಈ ಆವೃತ್ತಿಯಲ್ಲಿ ಮೊದಲು ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್ಲೀನ್ ಡಿಯೋಲ್ 39 ಎಸೆತಗಳಲ್ಲಿ 64 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Source link

Video: ಅಪಘಾತ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ – Kannada News | Saudi Arabia Quick Thinking Saves Mother and Children From Runaway Car

ಸೌದಿ ಅರೇಬಿಯಾ, ಜನವರಿ 15: ಯುವತಿಯೊಬ್ಬಳು ಅಪಘಾತವಾಗುವುದನ್ನು ತಡೆದು ಇಡೀ ಕುಟುಂಬನ್ನೇ ರಕ್ಷಿಸಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಕಾರನ್ನು ಸರಿಯಾಗಿ ಪಾರ್ಕ್​ ಮಾಡದೆ ವ್ಯಕ್ತಿಯೊಬ್ಬರು ಕಾರಿನಲ್ಲಿ ತಾಯಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದರು. ಇದ್ದಕ್ಕಿದ್ದಂತೆ ಕಾರು ಹಿಮ್ಮುಖವಾಗಿ ಚಲಿಸಲು ಶುರುವಾಗಿತ್ತು, ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರು ಕೂಡಲೇ ಓಡಿ ಹೋಗಿ ಕಾರಿನಲ್ಲಿ ಕುಳಿತುಕೊಂಡು ಬ್ರೇಕ್ ಹಾಗೂ ಎಲ್ಲರ ಪ್ರಾಣ ಉಳಿಸಿದ್ದಾಳೆ. ಒಂದೆರಡು ಸೆಕೆಂಡ್ ತಡವಾಗಿದ್ದರೂ ಕಾರು ಮಧ್ಯದಾರಿಗೆ ಹೋಗಿರುತ್ತಿತ್ತು, ದೊಡ್ಡ ಅಪಘಾತದವೇ ಸಂಭವಿಸುವ ಸಾಧ್ಯತೆ ಇತ್ತು. ಆಕೆಯ ಸಮಯಪ್ರಜ್ಞೆ ಎಲ್ಲರ ಜೀವ ಉಳಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂಬತ್ತು ವರ್ಷಗಳ ಬಳಿಕ ಅಮೂಲ್ಯ ಕಮ್​​ಬ್ಯಾಕ್: ನಾಯಕ ಯಾರು? – Kannada News | Amulya re entry to sandalwood from Pikaboo movie

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಅಮೂಲ್ಯ (Amulya) ನಾಯಕಿಯಾಗಿ ಸಖತ್ ಸದ್ದು ಮಾಡಿದ್ದವರು. ಆದರೆ ಹಲವು ನಾಯಕಿಯರಂತೆ ಮದುವೆ, ಮಕ್ಕಳ ಬಳಿಕ ಚಿತ್ರರಂಗದಿಂದ ದೂರಾದರು. ಇದೀಗ ನಟಿ ಅಮೂಲ್ಯ ಬರೋಬ್ಬರಿ ಎಂಟು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ತಮ್ಮಂತೆ ಕ್ಯೂಟ್ ಆದ ಹೆಸರಿರುವ ಸಿನಿಮಾ ಮೂಲಕ. ಅಷ್ಟಕ್ಕೂ ಕ್ಯೂಟ್ ನಟಿ ಅಮೂಲ್ಯಗೆ ನಾಯಕ ಯಾರು?

‘ಪೀಕಬೂ’ ಹೆಸರಿನ ಸಿನಿಮಾನಲ್ಲಿ ಅಮೂಲ್ಯ ನಟಿಸುತ್ತಿದ್ದು, ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಲುಕ್ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಅಮೂಲ್ಯ ಜೊತೆಗೆ ನಾಯಕನ ಲುಕ್​​ನ ಪರಿಚಯವನ್ನೂ ಸಹ ಮಾಡಿಕೊಡಲಾಗಿದೆ. ನಟಿ ಅಮೂಲ್ಯಾಗೆ ಜೋಡಿಯಾಗಿ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ನಟಿಸಿ ಅನುಭವ ಇರುವ ಶ್ರೀರಾಮ್ ‘ಪೀಕಬೂ’ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

2008 ರಲ್ಲಿ “ರಿಷಭಪ್ರಿಯ ಎಂದ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶ್ರೀರಾಮ್, ಬಳಿಕ ಧಾರಾವಾಹಿಯಲ್ಲಿ ಬ್ಯುಸಿಯಾದರು. ನಂತರ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಮೂಲಕ ನಾಯಕನಾಗಿ ಗಮನ ಸೆಳೆದರು. ‘ಗಜಾನನ ಅಂಡ್ ಗ್ಯಾಂಗ್’, ‘ಹೊಂದಿಸಿ ಬರೆಯಿರಿ’ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಅಮೂಲ್ಯ ಜೊತೆ ‘ಪೀಕಬೂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ಸಖತ್ ಕ್ಯೂಟ್ ಆಗಿದ್ದು, ಸಿನಿಮಾದ ಕತೆಯೂ ಅಷ್ಟೆ ಕ್ಯೂಟ್ ಆಗಿರುವ ನಿರೀಕ್ಷೆ ಪ್ರೇಕ್ಷಕರದ್ದು.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?

ಪಿಕಬೂ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಆಗಿದೆ. ಮಕ್ಕಳಿಗೆ ಒಮ್ಮೊಮ್ಮೆ ಮುದ್ದಾಗಿ ಪಿಕಬೂ ಎಂದು ಸಹ ಕರೆಯುವುದುಂಟು. ಇದೇ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ಸದ್ಯ ‘ಪೀಕಬೂ’ ಚಿತ್ರದ ಅರ್ಧದಷ್ಟು ಭಾಗ ಶೂಟಿಂಗ್ ಮುಗಿಸಿದೆ. ಚಿತ್ರಕ್ಕೆ ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ ಆಗಿದ್ದು. ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾದ ನಂತ್ರ ಮತ್ತೆ ಅಮೂಲ್ಯ ಅವರಿಗೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ ನಿರ್ದೇಶಕ ಮಂಜು ಸ್ವರಾಜ್‌. ಶ್ರೀ ಕೆಂಚಾಂಬಾ ಫಿಲಂಸ್‌ ಅಡಿಯಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ನಟಿ ಅಮೂಲ್ಯ ಕೊನೆಯದಾಗಿ ಗಣೇಶ್ ನಟಿಸಿದ್ದ ‘ಮುಗುಳು ನಗೆ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಬಳಿಕ ಇನ್ಯಾವ ಸಿನಿಮಾನಲ್ಲಿಯೂ ಅಮೂಲ್ಯ ಕಾಣಿಸಿಕೊಂಡಿಲ್ಲ. ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ನಾಯಕಿಯಾಗಿ ಮರು ಎಂಟ್ರಿ ನೀಡುತ್ತಿದ್ದಾರೆ ಅಮೂಲ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ: ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸಂಗ್ರಹಿಸಿದ ವಸ್ತುಗಳನ್ನ ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ – Kannada News | Lakkundi Ancient Treasure: 91 Yr Old Totayya Unearths Rare Gems and Gold in Gadag

ಗದಗ, ಜನವರಿ 15: ಗದಗ ತಾಲೂಕಿನ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಮತ್ತೆ ಪುರಾತನ ವಸ್ತುಗಳು ಪತ್ತೆ ಆಗಿವೆ. 91 ವರ್ಷದ ತೋಟಯ್ಯ ಕಾಶಯ್ಯ ಪತ್ರಿಮಠ ಅವರಿಗೆ ಪುರಾತನ ವಸ್ತುಗಳು ಸಿಕ್ಕಿವೆ. ಪಂಚ ನೀಲ, ಗಾಣಿಗ ನೀಲ, ಇಂದ್ರನೀಲ, ನೀಲದ ಹರಳುಗಳು, ಜಂಬನೀಲ, ಹುಳುಗಳು, ಚಿನ್ನ, ವಜ್ರ ಪಚ್ಚ, ಸ್ಫಟಿಕ ನಾಣ್ಯಗಳು ಪತ್ತೆ ಆಗಿವೆ. ನಿಧಿ ಸಂಗ್ರಹಣೆ ಮಾಡುವುದೇ ತೋಟಯ್ಯ ಅವರ ಕಾಯಕವಂತೆ. ಮಳೆಯಾದರೆ ಸಾಕು ನಿಧಿಯನ್ನು ಸಂಗ್ರಹಣೆ ಮಾಡಲು ಮಾಡುತ್ತಿದ್ದರು. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಅನ್ವೇಷಣೆ ‌ಮಾಡಿದ್ದಾರೆ. ತಮಗೆ ಸಿಕ್ಕ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಲಕ್ಕುಂಡಿ ಗ್ರಾಮದ ದೇವಸ್ಥಾನಗಳ ಬಳಿ ಸಾಕಷ್ಟು ನಿಧಿಯಿದೆ. ನಾನು ಸಂಗ್ರಹಿಸಿದ ವಸ್ತುಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಡ್ಗಿಚ್ಚಿನಿಂದ ನಾಶವಾಯ್ತು ಉತ್ತರಾಖಂಡದ ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು – Kannada News | Fire breaks out in the Nanda Devi Reserve Forest Helicopter deployed to control Fire

ಉತ್ತರಾಖಂಡ, ಜನವರಿ 15: ಉತ್ತರಾಖಂಡದ ನಂದಾ ದೇವಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸತತ 5ನೇ ದಿನವೂ ಬೆಂಕಿ (Fire Accident) ಹೊತ್ತಿ ಉರಿಯುತ್ತಿದೆ. ಅತ್ಯಮೂಲ್ಯವಾದ ಸಸ್ಯ ಸಂಪತ್ತು, ಔಷಧೀಯ ಸಸ್ಯಗಳು ಸುಟ್ಟು ಬೂದಿಯಾಗಿದೆ. ಇಂದು ಇಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಯಿತು. ಈ ಕಣಿವೆಯು ಅಪರೂಪದ ಹೂವುಗಳಿಗೆ ಹೆಸರುವಾಸಿಯಾಗಿದೆ. ಲಕ್ಷ್ಮಣ ಗಂಗಾ ಮತ್ತು ಅಲಕನಂದಾ ನದಿಗಳ ನಡುವೆ ಇರುವ, 3500-4200 ಮೀಟರ್ ಎತ್ತರದಲ್ಲಿರುವ UNESCO ವಿಶ್ವ ಪರಂಪರೆಯ ತಾಣ ಇದಾಗಿದೆ.

ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ ಕೊರತೆಯೇ ಈ ರೀತಿಯ ಬೆಂಕಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅತಿ ಎತ್ತರದ ಪ್ರದೇಶವಾದ್ದರಿಂದ ಇಲ್ಲಿನ ಬೆಂಕಿ ನಂದಿಸಲು ಅತ್ಯಂತ ಕಷ್ಟವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link