Category Archives: Blog

Your blog category

ಸಿಎಂ ವಿಜಯ್ ಅನ್ನು ಭೇಟಿಯಾದ ಸಿನಿಮಾ ನಿರ್ದೇಶಕರ ತಂಡ: ಕಾರಣ? – Kannada News | Tamil Nadu movie industry directors association members meet CM Vijay

ವಿಜಯ್ (Vijay) ತಮಿಳುನಾಡಿನ ಸಿಎಂ ಆಗಿ ವಾರವಾಗುತ್ತಾ ಬಂದಿದೆ. ಸಿಎಂ ಆದ ಬಳಿಕ ಕೆಲವು ಪ್ರಮುಖ ನಿರ್ಧಾರಗಳನ್ನು ವಿಜಯ್ ಪ್ರಕಟಿಸಿರುವ ಜೊತೆಗೆ ಮಂತ್ರಿ ಮಂಡಲದ ರಚನೆಯನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೆ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್, ಸಿಎಂ ವಿಜಯ್ ಅವರನ್ನು ಭೇಟಿಯಾಗಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು, ಮನವಿಗಳನ್ನು ಮಾಡಿದ್ದರು. ಅದರ ಬೆನ್ನಲ್ಲೆ ಇದೀಗ ತಮಿಳುನಾಡು ಚಿತ್ರರಂಗದ ನಿರ್ದೇಶಕ ಸಂಘದ ಸದಸ್ಯರು ವಿಜಯ್ ಅವರನ್ನು ಭೇಟಿ ಆಗಿದ್ದಾರೆ. ಅದರಲ್ಲಿ ಕೆಲವಾರು ಮಂದಿ ಈಗಾಗಲೇ ವಿಜಯ್ ಜೊತೆಗೆ ಕೆಲಸ ಮಾಡಿರುವವರೇ ಆಗಿರುವುದು ವಿಶೇಷ.

ತಮಿಳು ಚಿತ್ರರಂಗದಲ್ಲಿ ನಟ, ನಿರ್ದೇಶಕ, ಟಿವಿ ಆಂಕರ್ ಆಗಿ ಗುರುತಿಸಿಕೊಂಡಿರುವ ರಾಜ್‌ಮೋಹನ್ ಅವರನ್ನು ವಿಜಯ್ ಸಿನಿಮಾಟೊಗ್ರಫಿ ಸೇರಿದಂತೆ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ ಇಲಾಖೆಯ ಸಚಿವರನ್ನಾಗಿ ನೇಮಿಸಿದರು. ಇದೇ ಕಾರಣಕ್ಕೆ ತಮಿಳು ಚಿತ್ರರಂಗದ ನಿರ್ದೇಶಕರ ಸಂಘದವರು ವಿಜಯ್ ಅವರನ್ನು ಭೇಟಿಯಾಗಿ ಅವರನ್ನು ಅಭಿನಂದಿಸಿದ್ದಾರೆ. ಮೇ 19 ರಂದು, ತಮಿಳು ಚಿತ್ರೋದ್ಯಮದ ನಿರ್ದೇಶಕರ ಸಂಘದ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.

ವಿಜಯ್ ಅವರನ್ನು ಭೇಟಿ ಮಾಡಿದ ನಿರ್ದೇಶಕರಲ್ಲಿ ಅವರ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (ಗೋಟ್) ಸಿನಿಮಾದ ನಿರ್ದೇಶಕ ವೆಂಕಟ್ ಪ್ರಭು ಕೂಡ ಇದ್ದರು. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ನನ್ನ ನಿರ್ದೇಶಕರ ಸಂಘದ ಕುಟುಂಬಕ್ಕೆ ಧನ್ಯವಾದಗಳು. ನಮ್ಮ ಸಚಿವಾಲಯದಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಅಣ್ಣನ ಜೊತೆ ಎರಡನೇ ಸುತ್ತಿನ ಭೇಟಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ದಳಪತಿ’ ರಾಜಕೀಯ ತಮಿಳುನಾಡಿಗೆ ಮಾತ್ರ ಸೀಮಿತವೇ? ಕೇರಳಂ ಸಿಎಂ ವಿಡಿ ಸತೀಶನ್ ಪದಗ್ರಹಣಕ್ಕೆ ವಿಜಯ್ ಗೈರು

ಕೆಲವು ದಿನಗಳ ಹಿಂದೆ, ಅವರು ತಮ್ಮ 2024 ರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ವೈರಲ್ ಆಗಿದ್ದ ‘TN07 CM 2026’ ನಂಬರ್ ಪ್ಲೇಟ್ ಅನ್ನು ವಿಜಯ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಆ ನಂಬರ್ ಪ್ಲೇಟ್ ಅನ್ನು ಮೂಲತಃ ಸಿನಿಮಾದಲ್ಲಿ ಬಳಸಲಾಗಿತ್ತು. ಸಿನಿಮಾನಲ್ಲಿ ಅವರು ಊಹಿಸಿದಂತೆ ಇದೀಗ ನಿಜಕ್ಕೂ 2026ರಲ್ಲಿ ವಿಜಯ್ ಸಿಎಂ ಆಗಿದ್ದಾರೆ.

ವಿಜಯ್ ಅವರನ್ನು ಭೇಟಿಯಾದ ತಂಡದಲ್ಲಿ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ಸಹ ಇದ್ದು, ‘ಕೆಲವು ಕ್ಷಣಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ, ಅಂತಹ ಕ್ಷಣಗಳಲ್ಲಿ ಇದೂ ಒಂದು. ನಮ್ಮ ಪ್ರೀತಿಯ ವಿಜಯ್ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರ ಹೊಸ ಪಾತ್ರದಲ್ಲಿ ಭೇಟಿ ಮಾಡಿದ್ದು ಮತ್ತು ನಮ್ಮ ನಿರ್ದೇಶಕರ ಸಂಘದ ಪರವಾಗಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದು ಅದ್ಭುತವಾಗಿತ್ತು. ಈ ವಿಶೇಷ ಮತ್ತು ಸ್ಮರಣೀಯ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಮೇ 16 ರಂದು, ಹಿರಿಯ ನಟ ಕಮಲ್ ಹಾಸನ್ ಅವರು ವಿಜಯ್ ಅವರನ್ನು ಭೇಟಿ ಮಾಡಿ, ತಮಿಳು ಚಿತ್ರೋದ್ಯಮಕ್ಕೆ ಬೆಂಬಲ ನೀಡುವ ಅಗತ್ಯದ ಕುರಿತು 6 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಅವರು, “ವಿವಿಧ ಅಡೆತಡೆಗಳನ್ನು ಎದುರಿಸುತ್ತಿರುವ ತಮಿಳು ಚಿತ್ರೋದ್ಯಮಕ್ಕೆ ಬೆಂಬಲ ಮತ್ತು ಸಹಕಾರದ ಅಗತ್ಯವನ್ನು ಒತ್ತು ತೇಳಿ ನಾನು ತಮಿಳುನಾಡು ಸರ್ಕಾರಕ್ಕೆ 6 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದೇನೆ. ಇದರ ಪ್ರಯೋಜನಗಳು ವೃದ್ಧಿಸಲಿ’ ಎಂದು ಅವರು ಬರೆದುಕೊಂಡಿದ್ದರು. ತಮಿಳುನಾಡು ಸರ್ಕಾರದ ಒಟಿಟಿ (OTT) ಪ್ಲಾಟ್‌ಫಾರ್ಮ್ ಪ್ರಾರಂಭಿಸುವುದು, ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆ ರದ್ದುಪಡಿಸುವುದು ಮತ್ತು ಬಲಿಷ್ಠ ಪೈರಸಿ ವಿರೋಧಿ ತಂಡವನ್ನು ರಚಿಸುವುದು ಈ ವಿನಂತಿಗಳಲ್ಲಿ ಸೇರಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ ನಟಿ ರಿಯಾ ಚಕ್ರವರ್ತಿ – Kannada News | Rhea Chakraborty announces social media break and acting comeback Family Business

ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮಾಜಿ ಗೆಳತಿ, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ತಾತ್ಕಾಲಿಕವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಡಿಜಿಟಲ್ ಲೋಕದಲ್ಲಿನ ನಿರಂತರವಾದ ಗದ್ದಲ ಮತ್ತು ಒತ್ತಡಗಳು ತಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ರಿಯಾ ಚಕ್ರವರ್ತಿ (Rhea Chakraborty) ಅವರು ತಿಳಿಸಿದ್ದಾರೆ. ತಮ್ಮ 3.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರಿಯಾ, ಆನ್‌ಲೈನ್ ಪ್ರಪಂಚದ ಒತ್ತಡದಿಂದ ಹೊರಬಂದು ನೈಜ ಜಗತ್ತಿನೊಂದಿಗೆ ಮರುಸಂಪರ್ಕ ಸಾಧಿಸಲು ಬಯಸಿದ್ದಾರೆ.

‘ಇತ್ತೀಚೆಗೆ ನನ್ನನ್ನು ನಾನೇ ಸ್ವಲ್ಪ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿರಂತರವಾದ ಗದ್ದಲ, ಸ್ಕ್ರೋಲಿಂಗ್ ಮತ್ತು ಎಲ್ಲದರ ಜೊತೆ ಅಪ್‌ಡೇಟ್ ಆಗಿರುವುದು. ಇದೆಲ್ಲವೂ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಭಾರ ಎನಿಸುತ್ತಿದೆ. ಅದಕ್ಕಾಗಿಯೇ ನಾನು ಸ್ವಲ್ಪ ಸಮಯದವರೆಗೆ ಇವುಗಳಿಂದ ದೂರ ಸರಿಯುತ್ತಿದ್ದೇನೆ. ನಿಧಾನವಾಗಿ ಸಾಗಲು, ಆಳವಾಗಿ ಉಸಿರಾಡಲು ಮತ್ತು ಯಾವುದು ನೈಜವೋ ಅದರೊಂದಿಗೆ ಮತ್ತೆ ಕನೆಕ್ಟ್ ಆಗಲು ಈ ನಿರ್ಧಾರ ಮಾಡಿದ್ದೇನೆ. ಸದ್ಯಕ್ಕೆ ಪೋಸ್ಟ್ ಮಾಡುವ ಕ್ಷಣಗಳಿಗಿಂತ, ಬದುಕುವ ಕ್ಷಣಗಳನ್ನು ಆರಿಸಿಕೊಳ್ಳುತ್ತಿದ್ದೇನೆ’ ಎಂದು ರಿಯಾ ಬರೆದುಕೊಂಡಿದ್ದಾರೆ.

2020ರಲ್ಲಿ ನಟ ಸುಶಾಂತ್ ಸಿಂಗ್ ರಜ್‌ಪೂತ್ ನಿಧನದ ನಂತರ ರಿಯಾ ಚಕ್ರವರ್ತಿ ತೀವ್ರವಾಗಿ ಸಾರ್ವಜನಿಕ ಟೀಕೆಗಳನ್ನು ಎದುರಿಸಬೇಕಾಗಿತ್ತು. ಆ ಕಠಿಣ ದಿನಗಳ ನಂತರ ಅವರು ನಿಧಾನವಾಗಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರಚಾರದಿಂದ ದೂರವಿದ್ದ ಅವರು, ಆಯ್ದ ಕಾರ್ಯಕ್ರಮಗಳು ಮತ್ತು ಪ್ರಾಜೆಕ್ಟ್‌ಗಳ ಮೂಲಕ ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳುತ್ತಿದ್ದಾರೆ.

ರಿಯಾ ಚಕ್ರವರ್ತಿ ಈಗ ನಟನೆಗೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಪ್ರಸಿದ್ಧ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಮುಂಬರುವ ನೆಟ್‌ಫ್ಲಿಕ್ಸ್ ಡ್ರಾಮಾ ಸರಣಿ ‘ಫ್ಯಾಮಿಲಿ ಬಿಸ್ನೆಸ್’ನಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಅನಿಲ್ ಕಪೂರ್, ವಿಜಯ್ ವರ್ಮಾ, ನೇಹಾ ಧೂಪಿಯಾ ಮತ್ತು ಧ್ರುವ್ ಸೆಹಗಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 2021ರಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದ ‘ಚೆಹ್ರೆ’ ಚಿತ್ರದ ನಂತರ ರಿಯಾ ಅವರು ನಟನೆಗೆ ಮರಳುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಕೇಸ್​ನಲ್ಲಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್; ದೇವಸ್ಥಾನಕ್ಕೆ ಬಂದ ನಟಿ

ಇತ್ತೀಚೆಗಷ್ಟೇ ರಿಯಾ ಚಕ್ರವರ್ತಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ನ್ಯಾಯಾಲಯವು ಅವರ ಬ್ಯಾಂಕ್ ಖಾತೆಗಳನ್ನು ಬಳಸಲು ಅನುಮತಿ ನೀಡಿದೆ. 2020ರಲ್ಲಿ ಸುಶಾಂತ್ ಸಿಂಗ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮಾದಕವಸ್ತು ನಿಯಂತ್ರಣ ದಳವು ರಿಯಾ ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ವರ್ಷಗಟ್ಟಲೆ ಖಾತೆಗಳನ್ನು ಫ್ರೀಜ್ ಮಾಡಿಟ್ಟಿರುವುದರಿಂದ ತಮಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಮತ್ತು ಇನ್ನು ಮುಂದೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂಬ ರಿಯಾ ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇ 24ರಂದು ನಿರ್ದೇಶಕಿಯರ ಕಿರುಚಿತ್ರೋತ್ಸವ ‘ಅವಳ ಹೆಜ್ಜೆ’; ವಿಜೇತರಿಗೆ 1 ಲಕ್ಷ ರೂ. ಬಹುಮಾನ – Kannada News | Avala Hejje Womens Short Film Festival 2026 Bengaluru Cash Prize and Date

ಚಿತ್ರರಂಗದಲ್ಲಿ ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮೇ 24ರ ಭಾನುವಾರದಂದು ‘ಅವಳ ಹೆಜ್ಜೆ ಕಿರುಚಿತ್ರೋತ್ಸವ 2026’ (Avala Hejje Women’s Short Film Festival) ಚಲನಚಿತ್ರ ಹಬ್ಬ ಆಯೋಜನೆಗೊಂಡಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7ರವರೆಗೆ ನಡೆಯಲಿರುವ ಈ ಸಿನಿಮಾ ಉತ್ಸವದಲ್ಲಿ ಮಹಿಳೆಯರೇ ನಿರ್ದೇಶಿಸಿದ ಆಯ್ದ ಕಲಾತ್ಮಕ ಹಾಗೂ ವಿಭಿನ್ನ ಕಿರುಚಿತ್ರಗಳು (Short Films) ಪ್ರದರ್ಶನಗೊಳ್ಳಲಿದ್ದು, ಅತ್ಯುತ್ತಮ ಚಿತ್ರಕ್ಕೆ ಭರ್ಜರಿ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆಯಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಈ ಚಿತ್ರೋತ್ಸವದಲ್ಲಿ ಒಟ್ಟು 2 ಹಂತಗಳಲ್ಲಿ ಪ್ರದರ್ಶನಗಳು ನಡೆಯಲಿವೆ. ಮೊದಲ ಅವಧಿಯಲ್ಲಿ ಅನು ಕುಲಕರ್ಣಿ ಅವರ ‘ಕಾಶಿ ಕೈಲಾಸ’, ಅಶ್ವಿನಿ ಅನೀಶ್ ಅವರ ‘ಸೋರುತಿಹುದು ಮನೆಯ ಮಾಳಿಗಿ’, ಸುಪ್ರಿಯಾ ಶಂಕರ ನಿಪ್ಪಾಣಿ ಅವರ ‘ರೊಟ್ಟಿ’, ಸೀಮಾ ಶಶಿಧರ್ ಅವರ ‘ಎ ಲಿಟ್ಲ್ ಕೇರ್’ ಹಾಗೂ ಸೌರಭಾ ರಾವ್ ನಿರ್ದೇಶನದ ‘ಹುಲಿಯಪ್ಪ’ ಚಿತ್ರಗಳ ಪ್ರದರ್ಶನ ಆಗಲಿದೆ.

ಮಧ್ಯಾಹ್ನದ ನಂತರದ ದ್ವಿತೀಯ ಅವಧಿಯಲ್ಲಿ ಸುಷ್ಮಾ ಭಾರದ್ವಾಜ್ ಅವರ ‘ದಾರಿ’, ಸುನಯನಾ ಸುರೇಶ್ ಅವರ ‘ಮೌನ ರಾಗ’, ಶ್ರೇಯ ಸುನಿಲ್ ಅವರ ‘ಆ ಮಾಡಿ’, ಹರ್ಷಿತಾ ಜಿ. ಮತ್ತು ರಚನಾ ಸುವರ್ಣ ಜಂಟಿಯಾಗಿ ನಿರ್ದೇಶಿಸಿರುವ ‘ಗೆಜ್ಜೆ’ ಹಾಗೂ ವನು ಪಾಟೀಲ್ ಅವರ ‘ನಿತ್ಯ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕೇವಲ ಸಿನಿಮಾ ವೀಕ್ಷಣೆಗಷ್ಟೇ ಸೀಮಿತವಾಗದೆ, ಚಿತ್ರಪ್ರೇಮಿಗಳಿಗೆ ನಿರ್ದೇಶಕಿಯರೊಂದಿಗೆ ನೇರವಾಗಿ ಸಂವಹನ ನಡೆಸಲು ಪ್ರಶ್ನೋತ್ತರ ಅವಧಿಯನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿ ಸಂಜೆ 5 ಗಂಟೆಗೆ ‘ಸಿನಿಮಾದಲ್ಲಿ ಅವಳ ಹೆಜ್ಜೆ ಅ-ಅಃ ವರೆಗೆ’ ಎಂಬ ವಿಶೇಷ ಚರ್ಚಾಗೋಷ್ಠಿ ಆಯೋಜಿತವಾಗಿದೆ. ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲ ನಡೆಸಿಕೊಡಲಿರುವ ಈ ಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್ ನಟಿ ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ ಮತ್ತು ಸಂಜೋತಾ ಭಂಡಾರಿ ಭಾಗವಹಿಸಿ ಚಿತ್ರರಂಗದಲ್ಲಿ ಮಹಿಳೆಯರ ಪಯಣದ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ವಿಜೇತರ ಹೆಸರುಗಳನ್ನು ಪ್ರಕಟಿಸಿ, ಪ್ರಶಸ್ತಿ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ವಿತರಿಸಲಾಗುವುದು. ಸಿನಿಮಾ ಆಸಕ್ತರಿಗೆ ಇದೊಂದು ಅತ್ಯುತ್ತಮ ಸಾಂಸ್ಕೃತಿಕ ವೇದಿಕೆಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಟ್ರಸ್ಟ್ ಕೋರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಗೆ ಬಂದ ತುತ್ತು ಬಾಯಿಗಿಲ್ಲ! ಪ್ರವಾಸಿಗರಿಗೆ ಸ್ವರ್ಗ, ಸ್ಥಳೀಯರಿಗೆ ನರಕ: ಇದು ಉತ್ತರ ಕನ್ನಡದ ಕುಗ್ರಾಮದ ಕಥೆ – Kannada News | Heaven for Tourists, Hell for Locals: The Untold Story of Medini Village in Uttara Kannada

ರಸ್ತೆ ಇಲ್ಲದೆ ಗ್ರಾಮಸ್ಥರು ಪರದಾಟImage Credit source: tv9 kannada

ಉತ್ತರ ಕನ್ನಡ, ಮೇ 20: ಉತ್ತರ ಕನ್ನಡ (uttara kannada) ಜಿಲ್ಲೆಯ ನೈಸರ್ಗಿಕ ಸೌಂದರ್ಯಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅದೇ ಜಿಲ್ಲೆಯ ಘಟ್ಟದ ಮೇಲಿನ ಮೇದಿನಿ ಗ್ರಾಮದ ಜನ ಇಂದಿಗೂ ಮೂಲಭೂತ ಸೌಕರ್ಯಕ್ಕಾಗಿ ಹೋರಾಡುತ್ತಿದ್ದಾರೆ. ನಿತ್ಯಹರಿದ್ವರ್ಣ ಕಾಡಿನ ಮಧ್ಯದಲ್ಲಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ (Road) ಇಲ್ಲದ ಕಾರಣ ದಶಕಗಳಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಇಲ್ಲದಕ್ಕೆ ಯುವಕರಿಗೆ ಕನ್ಯಾ ಕೂಡ ಕೊಡುತ್ತಿಲ್ಲ.

ಮುಖ್ಯಾಂಶಗಳು

  • ಮೂಲಭೂತ ಸೌಕರ್ಯಕ್ಕಾಗಿ ದಶಕಗಳಿಂದ ಹೋರಾಟ
  • ರಸ್ತೆ ಇಲ್ಲದಕ್ಕೆ ಯುವಕರಿಗಿಲ್ಲ ವಿವಾಹ ಭಾಗ್ಯ!
  • ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ನಿಯಮಗಳ ತೊಡಕು?

ಉತ್ತರ ಕನ್ನಡ ಜಿಲ್ಲೆ ಹತ್ತು ಹಲವು ವಿಶೇಷತೆಗಳ ತವರೂರು. ಚಿಕ್ಕ ಮಕ್ಕಳಿಂದ ವಯೋ ವೃದ್ಧರ ವರೆಗೆ ಪ್ರತಿಯೊಬ್ಬರೂ ಎಂಜಾಯ್ ಮಾಡಬಹುದಾದ ಸ್ಥಳ ಮತ್ತ ವಾತಾವರಣ ಈ ಜಿಲ್ಲೆ ಹೊಂದಿದೆ. ಹೀಗಾಗಿ ಕೇವಲ ಕರ್ನಾಟಕ ಅಷ್ಟೆ ಅಲ್ಲ ದೇಶ ವಿದೇಶಗಳಿಂದಲೂ ಜನ ಬಂದು ಇಲ್ಲಿ ಕಾಲ ಕಳೆಯುತ್ತಾರೆ. ಆದರೆ ನಿತ್ಯಹರಿದ್ವರ್ಣದ ಕಾಡಿನಿಂದ ಆವೃತ್ತವಾಗಿರುವ ಘಟ್ಟದ ಮೇಲಿನ ಗ್ರಾಮ ಮೇದಿನಿ ಜನ ಪಡುವ ಕಷ್ಟ ನೋಡಿದರೆ ನಿಜಕ್ಕೂ ಪಾಪ ಅನಿಸುತ್ತೆ. ಇಲ್ಲಿನ ಜನ ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತ ಆಗುವುದಕ್ಕೆ ವ್ಯವಸ್ಥೆಯೇ ಕಾರಣವಾಗಿದೆ. ಈ ಗ್ರಾಮಕ್ಕೆ ಬರಲು ಸೂಕ್ತ ರಸ್ತೆ ಇಲ್ಲ. ದಶಕಗಳ ಹೋರಾಟದ ಫಲವಾಗಿ ರಸ್ತೆ ಮಂಜೂರುಗೊಂಡಿದ್ದರೂ ಅರಣ್ಯ ಇಲಾಖೆಯ ನೀತಿನಿಯಮಗಳಿಂದ ರಸ್ತೆ ಕಾಮಗಾರಿಗೆ ಅವಕಾಶ ಸಿಗುತ್ತಿಲ್ಲ.

ಇದನ್ನೂ ಓದಿ: ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಮೇದಿನಿ ಗ್ರಾಮಸ್ಥರ ಸಮಸ್ಯೆ ಹೊಸದಲ್ಲ. ರಸ್ತೆ ಇಲ್ಲದ ಕಾರಣ ಕಳೆದ 10 ವರ್ಷಗಳಿಂದ ಇಲ್ಲಿನ ಯುವಕರಿಗೆ ಮದುವೆಗೆ ಕನ್ಯೆ ಸಿಗುತ್ತಿಲ್ಲ ಎಂಬ ವರದಿಯನ್ನು ಟಿವಿ9 ಈ ಹಿಂದೆಯೇ ಪ್ರಸಾರ ಮಾಡಿತ್ತು. ಈ ಬಗ್ಗೆ ಸುದ್ದಿ ಪ್ರಸಾರವಾದ ನಂತರ ಶಾಸಕ ದಿನಕರ ಶೆಟ್ಟಿ ರಸ್ತೆ ಮಂಜೂರಾತಿಗೆ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಸ್ತೆ ಕಾಮಗಾರಿಗೆ ಹಣವನ್ನು ಮಂಜೂರು ಮಾಡಿದ್ದಾರೆ. ಆದರೆ ನಿತ್ಯ ಹರಿದ್ವರ್ಣದ ಕಾಡಿನ ನಡುವೆ ರಸ್ತೆ ನಿರ್ಮಾಣವಾಗಿರುವುದರಿಂದ ಅರಣ್ಯ ಇಲಾಖೆಯ ಅನುಮತಿಯ ಕೊರತೆಯಿಂದ ‘ಕೈಗೆ ಬಂದ ತುತ್ತು ಬಾಯಿಗೆ ಬಾರದ’ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ರಸ್ತೆ ಇಲ್ಲದ ಈ ಕುಗ್ರಾಮದ ಯುವಕರಿಗೆ ಯಾರೂ ಹುಡುಗಿ ಕೊಡುತ್ತಿಲ್ಲ! ಪಕ್ಕದೂರಲ್ಲೇ ಸಂಪುಟ ಸಭೆ ನಡೆದರೂ ಇವರ ಸಮಸ್ಯೆಗಿಲ್ಲ ಮುಕ್ತಿ

ಒಟ್ಟಾರೆಯಾಗಿ ಅರಣ್ಯ ಇಲಾಖೆಯ ನಿಯಮಗಳ ತೊಡಕಿನಿಂದ ಮೇದಿನಿ ಗ್ರಾಮಸ್ಥರ ಕಷ್ಟಕ್ಕೆ ಅಂತ್ಯವಿಲ್ಲದಂತಾಗಿದೆ. ಅರಣ್ಯ ಇಲಾಖೆ ಆದಷ್ಟು ಬೇಗ ಪರವಾನಗಿ ನೀಡಿದರೆ ಮಾತ್ರ ಈ ಗ್ರಾಮದ ಜನರ ದಶಕಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾರು, ಆಟೋ ನಡುವೆ ಮುಖಾಮುಖಿ ಡಿಕ್ಕಿ: 10 ಮಂದಿಗೆ ಗಂಭೀರ ಗಾಯ – Kannada News | Horrific Crash In Mysuru: Over 10 Injured As Speeding Car Rams Into Auto In T Narasipura

ಮೈಸೂರು, ಮೇ 20: ಕಾರು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಚೌಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮೈಸೂರಿನ ಕೆ.ಆರ್​.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಟಿ.ನರಸೀಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಮ್ಮ ಮೆಟ್ರೋಗೆ ಸೌರಶಕ್ತಿ: ವಾರ್ಷಿಕ 61 ಕೋಟಿ ರೂ. ಉಳಿತಾಯಕ್ಕೆ ಐಐಎಸ್‌ಸಿ ಶಿಫಾರಸು – Kannada News | IISc Recommends Solar Power for Namma Metros Blue Line, Projecting 61 Crore Annual Savings

ಬೆಂಗಳೂರು, ಮೇ 20: ನಮ್ಮ ಮೆಟ್ರೋ ರೈಲುಗಳ ಕಾರ್ಯಾಚರಣೆಯನ್ನು ಸೌರಶಕ್ತಿಯಿಂದ ನಡೆಸುವ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 53 ಕಿಲೋಮೀಟರ್ ಉದ್ದದ ನೀಲಿ ಮಾರ್ಗದ ರೈಲುಗಳನ್ನು ಸಂಪೂರ್ಣವಾಗಿ ಸೌರಶಕ್ತಿ ಬಳಸಿ ಚಲಾಯಿಸುವುದರಿಂದ ವಾರ್ಷಿಕ 61 ಕೋಟಿ ರೂಪಾಯಿ ಉಳಿತಾಯ ಮಾಡಬಹುದೆಂದು ಐಐಎಸ್‌ಸಿ ತನ್ನ ವರದಿಯಲ್ಲಿ ತಿಳಿಸಿದೆ. ಪ್ರೊಫೆಸರ್ ಆಶೀಷ್ ವರ್ಮ ನೇತೃತ್ವದಲ್ಲಿ ನಡೆದ ಈ ಅಧ್ಯಯನವು ಮೆಟ್ರೋ ನಿಲ್ದಾಣಗಳ ಮೇಲ್ಚಾವಣಿ, ಹಳಿಗಳ ಪಕ್ಕದ ಗೋಡೆಗಳು ಮತ್ತು ಡಿಪೋಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸಲಹೆ ನೀಡಿದೆ.

ಮೊದಲ ಹಂತದಲ್ಲಿ 30 ನಿಲ್ದಾಣಗಳ ಮೇಲ್ಚಾವಣಿಯಲ್ಲಿ 29.75 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲು ಸುಮಾರು 48 ರಿಂದ 63 ಕೋಟಿ ರೂಪಾಯಿ ವೆಚ್ಚವಾಗಲಿದೆ. ಆದರೆ, ಬಿಎಂಆರ್‌ಸಿಎಲ್ ಈ ಹೂಡಿಕೆಯನ್ನು ಕೇವಲ ಎರಡು ವರ್ಷಗಳಲ್ಲಿ ಮರುಪಾವತಿ ಮಾಡಿಕೊಳ್ಳಬಹುದು. ಮೊದಲ ವರ್ಷವೇ 36.4 ಕೋಟಿ ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಸೌರ ವಿದ್ಯುತ್ ಪ್ರತಿ ಯೂನಿಟ್‌ಗೆ 1.20 ರಿಂದ 1.38 ರೂಪಾಯಿ ಆಗಲಿದ್ದು, ಇದು ಬೆಸ್ಕಾಂನ ಪ್ರಸ್ತುತ ದರಕ್ಕಿಂತ (6-7 ರೂಪಾಯಿ) ಗಮನಾರ್ಹವಾಗಿ ಕಡಿಮೆ ಇರುತ್ತದೆ. ಈ ಯೋಜನೆಯು ನಮ್ಮ ಮೆಟ್ರೋವನ್ನು ದೇಶದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರ ಸ್ನೇಹಿಯಾಗಿ ಚಲಿಸುವ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡಲಿದೆ ಎಂದು ತಿಳಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತಿದಿನ ದೇವಸ್ಥಾನಕ್ಕೆ ಹೋಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | What are the benefits of visiting a temple every day?

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಜನ ಮನೆಯಲ್ಲಿ ಪ್ರತಿನಿತ್ಯ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಗಳಿಗೆ ಹೋಗಿ ಅಲ್ಲಿನ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಕಷ್ಟ ಅಂತ ಬಂದಾಗ ದೇವರ ಬಳಿ ಹೋದ್ರೆ ಇನ್ನೂ ಕೆಲವರು ಪ್ರತಿನಿತ್ಯ ದೇವಸ್ಥಾನಕ್ಕೆ (temple) ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಹೋಗುವುದು ಕೇವಲ ಧಾರ್ಮಿಕ ಚಟುವಟಿಕೆಯಲ್ಲ, ಇದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ. ಹೌದು ದೇವಸ್ಥಾನದ ಪ್ರಶಾಂತ ವಾತಾವರಣ, ಪೂಜೆ, ಹೋವ ಹವನ, ಗಂಟೆ ಸದ್ದು, ಮಂತ್ರ ಪಠಣೆ ಇವೆಲ್ಲವೂ ಮನಸ್ಸು ಮತ್ತು ದೇಹಕ್ಕೆ ಸಕಾರಾತ್ಮಕ ಚೈತನ್ಯವನ್ನು ತುಂಬುತ್ತದೆ. ಅಲ್ಲದೆ ನಿತ್ಯವೂ ದೇವಾಲಯಕ್ಕೆ ಭೇಟಿ ನೀಡುವುದರಿಂದ ಒಂದಷ್ಟು ಆರೋಗ್ಯ ಪ್ರಯೋಜನಗಳೂ ಲಭಿಸುತ್ತವೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಲಭಿಸುವ ಪ್ರಯೋಜನಗಳೇನು?

ಮನಸ್ಸನ್ನು ಶಾಂತವಾಗಿಸುತ್ತದೆ: ದೇವಾಲಯದಲ್ಲಿ ಧೂಪದ್ರವ್ಯ ಮತ್ತು ದೀಪಗಳನ್ನು ಬೆಳಗಿಸಲಾಗುತ್ತದೆ, ಮತ್ತು ಶಂಖ ಮತ್ತು ಗಂಟೆಯ ಶಬ್ದವು ಸಹ ಕೇಳಿಬರುತ್ತದೆ, ಇದು ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಅಲ್ಲದೆ ದೇವಾಲಯದಲ್ಲಿನ ಸಕಾರಾತ್ಮಕ ವಾತಾವರಣವು ನಮ್ಮ ಮನಸ್ಸಿನ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಸಕಾರಾತ್ಮಕತೆಯನ್ನು ತುಂಬುತ್ತದೆ, ಮನಸ್ಸನ್ನು ನಿರಾಳವಾಗಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ: ದೇವಾಲಯವನ್ನು ಪ್ರವೇಶಿಸುವಾಗ, ನಾವು ಬರಿಗಾಲಿನಲ್ಲಿ ನಡೆಯುತ್ತೇವೆ. ಬರಿಗಾಲಿನಲ್ಲಿ ನಡೆಯುತ್ತಾ ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ. ಹೀಗೆ ಬರಿಗಾಲಿನಲ್ಲಿ ನಡೆದಾಗ ಪಾದಗಳಲ್ಲಿನ ಒತ್ತಡ ಬಿಂದುಗಳ ಮೇಲೆ ಒತ್ತಡ ಉಂಟಾಗುತ್ತದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ: ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗ, ದೇವರ ವಿಗ್ರಹವನ್ನು ದಿಟ್ಟಿಸಿ ನೋಡುತ್ತೇವೆ, ಇದು ನಮ್ಮ ಮನಸ್ಸನ್ನು ಸ್ವಲ್ಪ ಸಮಯದವರೆಗೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ದೇವರ ದರ್ಶನದ ನಂತರ, ಹಣೆಗೆ ತಿಲಕವನ್ನು ಹಾಕಲಾಗುತ್ತದೆ, ಇದು ಮೆದುಳಿನ ಒಂದು ನಿರ್ದಿಷ್ಟ ಭಾಗದ ಮೇಲೆ ಒತ್ತಡವನ್ನು ಬೀರುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿ: ದೇವಾಲಯದಲ್ಲಿ ಗಂಟೆಗಳನ್ನು ಬಾರಿಸಲಾಗುತ್ತದೆ. ಅದರ ಶಬ್ದವು ನಮ್ಮ ಕಿವಿಗಳಲ್ಲಿ ಸ್ವಲ್ಪ ಸಮಯದವರೆಗೆ ಪ್ರತಿಧ್ವನಿಸುತ್ತದೆ. ಈ ಶಬ್ದವು ನಮ್ಮ ದೇಹದ ಕೆಲವು ಭಾಗಗಳನ್ನು ಸಕ್ರಿಯಗೊಳಿಸುತ್ತದೆ, ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಒತ್ತಡವನ್ನು ನಿವಾರಿಸುತ್ತದೆ:  ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ ಮಂತ್ರ ಪಠಣೆ ಮತ್ತು ಶಂಖ, ಗಂಟೆ ಶಬ್ದವು ನಮ್ಮ ಕಿವಿಗಳಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುತ್ತದೆ. ಇದರಿಂದಾಗಿ ನಾವು ಜೀವನದ ಗದ್ದಲ ಮತ್ತು ಒತ್ತಡವನ್ನು ಮರೆತುಬಿಡುತ್ತೇವೆ. ಇದು ಒತ್ತಡವನ್ನು ನಿವಾರಿಸುತ್ತದೆ.

ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುತ್ತದೆ: ದೇವಾಲಯದ ವಾತಾವರಣವು ಮನಸ್ಸನ್ನು ಶಾಂತಗೊಳಿಸುತ್ತದೆ. ಇಲ್ಲಿಗೆ ಭೇಟಿ ನೀಡುವುದರಿಂದ ಚಡಪಡಿಕೆ ಕಡಿಮೆಯಾಗುತ್ತದೆ ಮತ್ತು ಶುದ್ಧ ಆಲೋಚನೆಗಳು ಬೆಳೆಯುತ್ತವೆ. ಸಕಾರಾತ್ಮಕ ಭಾವನೆಗಳು ಹೆಚ್ಚಾಗುತ್ತದೆ. ಅಲ್ಲದೆ ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗುವುದರಿಂದ ಅವರೂ ಸಹ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು  ಅರ್ಥಮಾಡಿಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಇಟಲಿ ನಡುವೆ ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ: ಪಿಎಂ ಮೋದಿ ಘೋಷಣೆ – Kannada News | Modi Meloni Historic Meet: India & Italy Forge New Strategic Alliance for Global Growth

ಇಟಲಿಯಲ್ಲಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿImage Credit source: AP

ರೋಮ್, ಮೇ 20: ಭಾರತ ಹಾಗೂ ಇಟಲಿ ದೇಶಗಳ ಸಂಬಂಧವು ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ (Special Strategic Partnership) ಮಟ್ಟಕ್ಕೆ ಏರಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಘೋಷಿಸಿದ್ದಾರೆ. ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಟಲಿಗೆ ಭೇಟಿ ನೀಡಿದ್ದು, ಅಲ್ಲಿ ಮೆಲೋನಿ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಅದಾದ ಬಳಿಕ ಉಭಯ ನಾಯಕರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಘೋಷಣೆ

ರೋಮ್‌ನ ವಿಲ್ಲಾ ಪಾಂಫಿಲ್‌ನಲ್ಲಿ ನಡೆದ ಮಾತುಕತೆಯ ನಂತರ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಸಂಬಂಧವನ್ನು ‘ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ’ಗೆ ಮೇಲ್ದರ್ಜೆಗೆ ಏರಿಸುತ್ತಿರುವುದನ್ನು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ತಿಳಿಸಿದರು. ಭಾರತ ಮತ್ತು ಐರೋಪ್ಯ ಒಕ್ಕೂಟದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಇಟಲಿ ನೀಡಿದ ಬೆಂಬಲಕ್ಕಾಗಿ ಮೆಲೋನಿ ಅವರಿಗೆ ಮೋದಿ ಧನ್ಯವಾದ ಕೂಡ ಹೇಳಿದರು. ಇಟಲಿ ಮತ್ತು ಭಾರತದ ನಡುವಿನ ಸಂಬಂಧಕ್ಕೆ ಹೊಸ ಎತ್ತರ ಸಿಕ್ಕಿದ್ದು, ಇದು ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿನ ಸಹಕಾರದ ಪ್ರಮುಖ ವಿಸ್ತರಣೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ

ಮೋದಿ ಭೇಟಿಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಮೆಲೋನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಈ ಭೇಟಿಯನ್ನು ಉಭಯ ದೇಶಗಳ ಸಂಬಂಧದಲ್ಲಿ ಒಂದು “ಐತಿಹಾಸಿಕ ದಿನ” ಎಂದು ಬಣ್ಣಿಸಿದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರು ಇಟಲಿಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಈ ಹಿಂದೆ ಭಾರತದ ಪ್ರಧಾನಿಯೊಬ್ಬರು ಇಟಲಿಗೆ ದ್ವಿಪಕ್ಷೀಯ ಭೇಟಿ ನೀಡಿದ್ದು 2000ನೇ ಇಸವಿಯಲ್ಲಿ. ಈಗ ಮೋದಿ ಭೇಟಿಯಿಂದ ಭಾರತ ಹಾಗು ಇಟಲಿ ನಡುವಿನ ಸಂಬಂಧಕ್ಕೆ ಹೊಸ ಚೈತನ್ಯ ನೀಡಲಾಗುತ್ತಿದೆ ಎಂದು ಮೆಲೋನಿ ಅಭಿಪ್ರಾಯಪಟ್ಟರು.

ರಕ್ಷಣೆ ಮತ್ತು ಆರ್ಥಿಕ ಸಹಕಾರ

ಉಭಯ ದೇಶಗಳು ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುತ್ತಿವೆ. ಪ್ರಧಾನಿ ಮೋದಿ ಅವರು, “ಭಾರತ ಮತ್ತು ಇಟಲಿಯಲ್ಲಿ ಜಂಟಿಯಾಗಿ ಉತ್ಪಾದಿಸಿ, ಜಗತ್ತಿಗೆ ತಲುಪಿಸಿ” (Develop in India and Italy and deliver to the world) ಎಂಬ ದೂರದೃಷ್ಟಿಯೊಂದಿಗೆ ಜಂಟಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ (Supply chain) ವಿಧಾನವನ್ನು ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಸ್ತುತ 1,000ಕ್ಕೂ ಹೆಚ್ಚು ಭಾರತೀಯ ಮತ್ತು ಇಟಾಲಿಯನ್ ಕಂಪನಿಗಳು ಪರಸ್ಪರರ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಎರಡೂ ದೇಶಗಳ ಸಂಬಂಧದ ಪ್ರಮುಖ ಗುರಿಗಳು

  • ದ್ವಿಪಕ್ಷೀಯ ವ್ಯಾಪಾರ: ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 2029ರ ವೇಳೆಗೆ 20 ಬಿಲಿಯನ್ ಯೂರೋಗಳಿಗಿಂತ ಹೆಚ್ಚು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
  • ಉದಯೋನ್ಮುಖ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲಾಗುವುದು. AI ತಂತ್ರಜ್ಞಾನವು ಮಾನವ ಕೇಂದ್ರಿತವಾಗಿರಬೇಕು ಎಂಬ ಭಾರತದ ‘ಮಾನವ್’ (MANAV) ಪರಿಕಲ್ಪನೆ ಮತ್ತು ಇಟಲಿಯ ನೈತಿಕ ಚೌಕಟ್ಟನ್ನು ಒಟ್ಟಿಗೆ ತರಲಾಗುವುದು.
  • ಪ್ರಾದೇಶಿಕ ಸಂಪರ್ಕ: ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಯೋಜನೆಗೆ ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಭೌಗೋಳಿಕವಾಗಿ ಇಂಡೋ-ಪೆಸಿಫಿಕ್ ಮತ್ತು ಮೆಡಿಟರೇನಿಯನ್ ಪ್ರದೇಶಗಳನ್ನು ಜೋಡಿಸುವ ಮೂಲಕ ಈ ಪಾಲುದಾರಿಕೆ ಜಾಗತಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಲಿದೆ ಎಂದು ಈ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ

ಕನ್ನಡದ ನಟಿ ರೀಷ್ಮಾ ನಾಣಯ್ಯ (Reeshma Nanaiah) ಇತ್ತೀಚೆಗಿನ ವರ್ಷಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ನಟನಾ ಪ್ರತಿಭೆ, ಸೌಂದರ್ಯದ ಜೊತೆಗೆ ರೀಷ್ಮಾ ಬಹಳ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ. ಈ ಹಿಂದೆಯೂ ಕೆಲ ಸಿನಿಮಾಗಳಲ್ಲಿ ರೀಷ್ಮಾ ಅವರು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ‘ಕೆಡಿ’ ಸಿನಿಮಾದ ಹಾಡಿಗೆ ರೀಷ್ಮಾ ಮಾಡಿರುವ ಡ್ಯಾನ್ಸ್ ಸಖತ್ ಸದ್ದು ಮಾಡುತ್ತಿದೆ. ಅದರ ವಿವಿಧ ವಿಡಿಯೋಗಳನ್ನು ನಟಿ ರೀಷ್ಮಾ ತಮ್ಮ ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ – Kannada News | A little girl scolding her parents in her own language

ಅಪ್ಪ ಅಂದ್ರೆ ಹೆಣ್ಣು ಮಕ್ಕಳಿಗೆ (daughter) ತುಂಬಾನೇ ಇಷ್ಟ. ಮನೆಯಲ್ಲಿ ಹೆಣ್ಣು ಮಗುವಿದ್ದರೆ ತಾಯಿಗಿಂತ ತಂದೆಯನ್ನೇ ಹೆಚ್ಚು ಹಚ್ಚಿಕೊಂಡು ಬಿಡುವುದಿದೆ. ಇದೀಗ ಪುಟ್ಟ ಮಗುವೊಂದು ಹೆತ್ತವರ ಮೇಲೆ ಕೋಪಗೊಂಡಂತಿದೆ. ಹೀಗಾಗಿ ಅಪ್ಪನ ಮುಂದೆ ನಿಂತು ತನ್ನದೇ ಭಾಷೆಯಲ್ಲಿ ಬೈಯುತ್ತಿದ್ದು, ಈ ಮುದ್ದಾದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಪುಟಾಣಿಯ ಕ್ಯೂಟ್ ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ.

Alpha Culture ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯ ಮುದ್ದಾದ ಬೈಗುಳದ ದೃಶ್ಯ ಇದಾಗಿದೆ. ಈ ಪುಟ್ಟ ಹುಡುಗಿ ಯಾವುದೋ ವಿಷಯದ ಬಗ್ಗೆ ತನ್ನ ಹೆತ್ತವರ ಮೇಲೆ ಕೋಪಗೊಂಡಿದ್ದಾಳೆ. ಹೀಗಾಗಿ ತನ್ನ ಎದುರಿಗಿರುವ ತಂದೆಯ ಮೇಲೆ ಕೋಪಗೊಂಡು ತನ್ನದೇ ಭಾಷೆಯಲ್ಲಿ ಕೂಗಾಡುತ್ತಿದ್ದಾಳೆ. ಮಗಳು ಬೈಯುವುದನ್ನು ಕಂಡು ತಂದೆಯೂ ಕೀಟಲೆ ಮಾಡುತ್ತಿರುವುದನ್ನು ನೋಡಬಹುದು. ಇದು ಪುಟಾಣಿಯ ಪಿತ್ತನೆತ್ತಿಗೇರುವಂತೆ ಮಾಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಈ ಪುಟಾಣಿಗೆ ಸಪೋರ್ಟ್ ಮಾಡ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಗಂಭೀರ ವಿಷ್ಯ ಎಂದು ಕಾಣಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಈಗ್ಲೇ ಹೀಗೆ, ಮುಂದೆ ಈ ಪುಟಾಣಿಯನ್ನು ಸಂಭಾಳಿಸೋದು ತುಂಬಾನೇ ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link