Category Archives: Blog

Your blog category

BMC Election Exit Polls: ಮುಂಬೈನಲ್ಲಿ ಉದ್ಧವ್ ಠಾಕ್ರೆಯ 25 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಗೆ ಬಹುಮತ; ಮತಗಟ್ಟೆ ಸಮೀಕ್ಷೆ ಭವಿಷ್ಯ – Kannada News | BMC Elections Exit Polls Predict BJP Allies big win and Flop Show By Uddhav Raj Thackeray Alliance

ಮುಂಬೈ, ಜನವರಿ 15: ಮಹಾರಾಷ್ಟ್ರದ ಬಿಎಂಸಿ (BMC Election) ಸೇರಿದಂತೆ 29 ಪುರಸಭೆ ಚುನಾವಣೆಗಳಿಗೆ ಮತದಾನ ಮುಕ್ತಾಯಗೊಂಡಿದೆ. ಎಲ್ಲಾ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ನಾಳೆ (ಶುಕ್ರವಾರ) ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಇಂದು ಮತದಾನ ಮುಕ್ತಾಯವಾಗುತ್ತಿದ್ದಂತೆ ಹಲವು ಏಜೆನ್ಸಿಗಳು ಚುನಾವಣೋತ್ತರ ಸಮೀಕ್ಷೆ (BMC Exit Polls) ಬಿಡುಗಡೆ ಮಾಡಿವೆ. ಅವುಗಳಲ್ಲಿ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಮೂಲಕ ಕಳೆದ 25 ವರ್ಷಗಳಿಂದ ಬಿಎಂಸಿಯ ಮೇಲೆ ಹಿಡಿತ ಹೊಂದಿರುವ ಉದ್ಧವ್ ಠಾಕ್ರೆಗೆ ಈ ಬಾರಿ ಭಾರೀ ಮುಖಭಂಗವಾಗುವುದು ಬಹುತೇಕ ಖಚಿತವಾಗಿದೆ.

ಕಳೆದ ಹಲವಾರು ದಿನಗಳಿಂದ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯು ಮಹಾರಾಷ್ಟ್ರ ರಾಜ್ಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿತ್ತು. ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಇದೀಗ ಬಿಡುಗಡೆಯಾಗಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಉದ್ಧವ್ ಠಾಕ್ರೆ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿರುವ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮೇಲೆ ಈ ಬಾರಿ ಹಿಡಿತ ಕಳೆದುಕೊಳ್ಳಲಿದ್ದಾರೆ. ಈ ಬಾರಿ ಬಿಜೆಪಿ ಮೈತ್ರಿಕೂಟ ಬಿಎಂಸಿಯ ಅಧಿಕಾರ ಪಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರತಿಭಟನೆಯಿಂದ ಉದ್ವಿಗ್ನಗೊಂಡಿರುವ ಇರಾನ್​​ನಲ್ಲಿ ಸಿಲುಕಿದ ಭಾರತೀಯರ ಸ್ಥಳಾಂತರ ನಾಳೆಯಿಂದ ಶುರು

ಈ ಬಾರಿ, ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಮಹಾಮೈತ್ರಿ ಅಧಿಕಾರಕ್ಕೆ ಬರುತ್ತದೆ ಎಂದು ಮತಗಟ್ಟೆ ಸಮೀಕ್ಷೆಯ ಅಂಕಿ-ಅಂಶಗಳು ಹೇಳುತ್ತಿವೆ. ಆದರೆ, ಇದು ಕೇವಲ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರವಾಗಿದ್ದು, ನಾಳೆ ಪ್ರಕಟವಾಗುವ ಚುನಾವಣಾ ಫಲಿತಾಂಶದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ.

ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆಗಳನ್ನು ಬಿಡುಗಡೆ ಮಾಡಿದೆ. ಈ ಮತಗಟ್ಟೆ ಸಮೀಕ್ಷೆಯು ಬಿಜೆಪಿ ಮೈತ್ರಿಕೂಟ ಬಹುಮತವನ್ನು ಗೆಲ್ಲುತ್ತದೆ ಎಂದು ಹೇಳಲಾಗಿದೆ. ಆಕ್ಸಿಸ್ ಮೈ ಇಂಡಿಯಾದ ನಿರ್ಗಮನ ಸಮೀಕ್ಷೆಯ ಪ್ರಕಾರ, ಬಿಜೆಪಿ ಹಾಗೂ ಏಕನಾಥ್ ಶಿಂಧೆ ಮೈತ್ರಿಕೂಟ 131-151 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಮೈತ್ರಿಕೂಟ 12-16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಯುಬಿಟಿ (ಉದ್ಧವ್ ಠಾಕ್ರೆ) 58-68 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಇತರರು 6-12 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿಗೆ ಅಮೋಘ ಮುನ್ನಡೆ

ಬಿಎಂಸಿ ಚುನಾವಣೆಯಲ್ಲಿ ಒಟ್ಟು 227 ವಾರ್ಡ್‌ಗಳಿಗೆ ಮತ ಚಲಾಯಿಸಲಾಗಿದೆ. ಬಿಎಂಸಿ ಚುನಾವಣೆಗೆ 822 ಪುರುಷರು ಮತ್ತು 878 ಮಹಿಳೆಯರು ಸೇರಿದಂತೆ 1,700 ಅಭ್ಯರ್ಥಿಗಳು ಕಣದಲ್ಲಿದ್ದರು.

ಜನಮತ ಪೋಲ್ಸ್‌ ಸಮೀಕ್ಷೆ ಪ್ರಕಾರ, ಬಿಜೆಪಿಗೆ 138 ಸ್ಥಾನ ಸಿಗಲಿದೆ. ಉದ್ಧವ್ ಬಣದ ಶಿವಸೇನೆ 62, ಕಾಂಗ್ರೆಸ್ 20, ಇತರರಿಗೆ 7 ಸ್ಥಾನ ಸಿಗುವ ಸಾಧ್ಯತೆಯಿದೆ.

ಡಿವಿ ರಿಸರ್ಚ್‌ ಮತಗಟ್ಟೆ ಸಮೀಕ್ಷೆ ಪ್ರಕಾರ, ಬಿಜೆಪಿ ಮೈತ್ರಿಕೂಟಕ್ಕೆ 107-122 ಸ್ಥಾನ ಸಿಗಲಿದೆ. ಉದ್ಧವ್ ಬಣದ ಶಿವಸೇನೆ 68-83, ಕಾಂಗ್ರೆಸ್ 18-25, ಎನ್‌ಸಿಪಿ 2-4, ಇತರರಿಗೆ 8-15 ಸ್ಥಾನ ಸಿಗುವ ಸಾಧ್ಯತೆಯಿದೆ.

ಜೆವಿಸಿ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿಕೂಟಕ್ಕೆ 138 ಸ್ಥಾನ, ಉದ್ಧವ್ ಬಣದ ಶಿವಸೇನೆಗೆ 59, ಕಾಂಗ್ರೆಸ್ ಪಕ್ಷಕ್ಕೆ 23, ಇತರರಿಗೆ 7 ಸ್ಥಾನ ಸಿಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:03 pm, Thu, 15 January 26

Source link

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಮಾಸ್ಟರ್​​ ಪ್ಲ್ಯಾನ್​​: ಇಲ್ಲಿದೆ ಮಾಹಿತಿ – Kannada News | Education Department Launches New Schemes to Boost Government School Admissions

ಬೆಂಗಳೂರು, ಜನವರಿ 15: ಖಾಸಗಿ ಶಾಲೆಗಳ ಹಾವಳಿ ಸೇರಿ ನಾನಾ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಸಕಾ್ರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಇಳಿಕೆ ಕಾಣುತ್ತಿದೆ. ಹೀಗಾಗಿ ಇವುಗಳನ್ನು ಇಳಿಕೆ ಮಾಡಲು ಶಿಕ್ಷಣ ಇಲಾಖೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಿನ್ನೆಲೆ ಹೊಸ ಭಾಗ್ಯಗಳ ಘೋಷಣೆಯ ಮೊರೆ ಹೋಗಿದೆ.  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಒಂದೇ ವರ್ಷದಲ್ಲಿ 2.25 ಲಕ್ಷದಷ್ಟು ಕಡಿಮೆ ಆಗಿರೋದು ಗಂಭೀರ ಪ್ರಶ್ನೆಗಳಿಗೆ ಕಾರಣವಾದ ಬೆನ್ನಲ್ಲೇ ಇಲಾಖೆ ಅಲರ್ಟ್​​ ಆಗಿದೆ.

ಹೊಸ ಯೋಜನೆ ಏನು?

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತವಾಗಿ ಪುಸ್ತಕ, ಶೂ, ಬಟ್ಟೆ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗ್ತಿದೆ. ಇದರ ಜೊತೆಗೆ ಇನ್ಮುಂದೆ ಓರ್ವ ವಿದ್ಯಾರ್ಥಿಗೆ 6 ನೋಟ್​​ ಬುಕ್​​ಗಳನ್ನೂ ಇಲಾಖೆ ನೀಡಲಿದೆ. ಹಾಗೆಯೇ ವಾರದ ಐದು ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಕೂಡ ಇರಲಿದೆ. ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭದ ಜೊತೆಗೆ ಯಾವುದೇ ಶುಲ್ಕಗಳು ಇಲ್ಲದಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಲು ಕ್ಯಾಂಪೇನ್​​ನ ​​ ಕೂಡ ಇಲಾಖೆ ಆರಂಭಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿವೆ 6,675 ಏಕೋಪಾಧ್ಯಾಯ ಶಾಲೆಗಳು, 188 ಸ್ಕೂಲ್​​ಗಳಲ್ಲಿ ಶೂನ್ಯ ದಾಖಲಾತಿ

ವಿಧಾನಪರಿಷತ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 188 ಸರ್ಕಾರಿ ಶಾಲೆಗಳಲ್ಲಿ ಒಂದೂ ಪ್ರವೇಶವಾಗಿಲ್ಲ. ಇದರಲ್ಲಿ 160 ಕಿರಿಯ ಪ್ರಾಥಮಿಕ ಶಾಲೆಗಳು, 25 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 3 ಪ್ರೌಢಶಾಲೆಗಳಿವೆ. ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳು ತುಮಕೂರಿನಲ್ಲಿ 45 ಇದ್ದು, ನಂತರ ಕಲಬುರಗಿ 21, ಕೋಲಾರ 20, ಕೊಪ್ಪಳ 18 ಮತ್ತು ಬೀದರ್​​ನಲ್ಲಿ 17 ಇವೆ.

ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚಳ

2018ರಲ್ಲಿ 3,450 ಇದ್ದ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 2025-26ನೇ ಸಾಲಿನಲ್ಲಿ 6,675ಕ್ಕೆ ಏರಿಕೆ ಕಂಡಿದೆ. 1ರಿಂದ 5ನೇ ತರಗತಿವರೆಗೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರಾದರೂ ಇರಬೇಕು ಅಥವಾ ಕನಿಷ್ಠ 12 ಮಕ್ಕಳಿದ್ದರೆ ಇಬ್ಬರು ಶಿಕ್ಷಕರಿರಬೇಕೆಂಬ ನಿಯಮ ಇದೆ. ಆದರೆ ಶಿಕ್ಷಕರ ಸಂಖ್ಯೆಯ ಕೊರತೆಯ ಕಾರಣ ಈ ನಿಯಮ ಪಾಲನೆ ಆಗುತ್ತಿಲ್ಲ. ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಅದಾಗಲೇ ಖಾಲಿ ಇದ್ದು, 2028ರವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:22 pm, Thu, 15 January 26

Source link

ಟೆಸ್ಲಾ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್? ಬೆಂಗಳೂರಿನಲ್ಲೂ ಶೋರೂಂ; ಜ. 31ರವರೆಗೂ ಟೆಸ್ಟ್ ಡ್ರೈವಿಂಗ್ ಅವಕಾಶ – Kannada News | Tesla new showroom in Bangalore, as ACKO Drive arranges Model Y car test drive till Jan 31st

ನವದೆಹಲಿ, ಜನವರಿ 15: ಟೆಸ್ಲಾ ಕಂಪನಿ (Tesla Inc) ಬೆಂಗಳೂರಿನಲ್ಲಿ ತನ್ನ ಶೋರೂಂ ತೆರೆಯುತ್ತಿದೆ. ಇದೇ ವೇಳೆ, ಟೆಸ್ಲಾದ ಮಾಡಲ್ ವೈ ಎಲೆಕ್ಟ್ರಿಕ್ ಕಾರುಗಳ ಟೆಸ್ಟ್ ಡ್ರೈವ್ ಅವಕಾಶ ಕೊಡಲಾಗಿದೆ. ಹೊಸ ಮತ್ತು ಹಳೆಯ ಕಾರುಗಳ ಮಾರಾಟ ವೇದಿಕೆಯಾದ ಆಕೋ ಡ್ರೈವ್​ನಿಂದ (ACKO Drive) ಬೆಂಗಳೂರಿನಲ್ಲಿ ಟೆಸ್ಲಾ ಕಾರುಗಳ ಟೆಸ್ಟ್ ಡ್ರೈವ್ ಅಭಿಯಾನ ನಡೆದಿದೆ. ಇವತ್ತಿನಿಂದಲೇ ಇದು ಶುರುವಾಗಿದ್ದು ಜನವರಿ 31ರವರೆಗೂ ಇರುತ್ತದೆ.

ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ಶೋರೂಮ್ ತೆರೆಯುವುದಾಗಿ ಹೇಳಿದೆ. ಇನ್ನೂ ಅದು ಆರಂಭವಾಗಿಲ್ಲ. ಬೆಂಗಳೂರಿನ ಯಾವ ಸ್ಥಳದಲ್ಲಿ ಶೂರೂಮ್ ಇರುತ್ತದೆ ಎನ್ನುವ ಮಾಹಿತಿ ಇಲ್ಲ. ಆದರೆ, ಶೂರೂಮ್ ಆರಂಭಕ್ಕೆ ಮುನ್ನ ಆಕೋ ಡ್ರೈವ್ ಮೂಲಕ ಟೆಸ್ಲಾ ಕಾರುಗಳ ಪ್ರತ್ಯಕ್ಷ ಅನುಭವವನ್ನು ಸಂಭಾವ್ಯ ಗ್ರಾಹಕರಿಗೆ ಒದಗಿಸುವ ಪ್ರಯತ್ನ ನಡೆದಿದೆ.

ಟೆಸ್ಲಾ ಕಂಪನಿ ಭಾರತದಲ್ಲಿ ಮೂರು ಕಡೆ ಶೋರೂಮ್ ಹೊಂದಿದೆ. ದೆಹಲಿ, ಮುಂಬೈ ಮತ್ತು ಗುರುಗ್ರಾಮ್​ನಲ್ಲಿ ಶೋರೂಮ್ ಇದೆ. ಬೆಂಗಳೂರಿನಲ್ಲಿ ಆರಂಭವಾದರೆ ಅದರ ನಾಲ್ಕನೇ ಶೋರೂಮ್ ಆಗುತ್ತದೆ. ಅತಿಹೆಚ್ಚು ಕಾರುಗಳನ್ನು ಹೊಂದಿರುವ ಭಾರತೀಯ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಹೀಗಾಗಿ, ಟೆಸ್ಲಾ ಬೆಂಗಳೂರಿನ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ

ಟೆಸ್ಲಾ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್?

ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಭಾರತದ ಮಾರುಕಟ್ಟೆಯನ್ನು ತಡವಾಗಿ ಪ್ರವೇಶಿಸಿದೆ. 2023 ಮತ್ತು 2024ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮಾಡಲ್ ವೈ ಕಾರನ್ನು ಭಾರತದಲ್ಲಿ 2025ರಲ್ಲ ಬಿಡುಗಡೆ ಮಾಡಿದೆ. ಆದರೆ, ಭಾರತಕ್ಕೆ ಇದನ್ನು ಆಮದು ಮಾಡಲಾಗುತ್ತಿರುವುದರಿಂದ ಶೇ. 110ರಷ್ಟು ದುಬಾರಿ ಸುಂಕಗಳ ಹೊರೆ ಇದೆ. ಹೀಗಾಗಿ, ಮಾಡಲ್ ವೈ ಕಾರು ಭಾರತದಲ್ಲಿ ದುಬಾರಿ ಬೆಲೆ ಹೊಂದಿದೆ.

ಇದೇ ವೇಳೆ, ಟೆಸ್ಲಾ ಕಾರುಗಳಿಗೆ ಭಾರತದಲ್ಲಿ ನೀರಸ ಪ್ರತಿಕ್ರಿಯೆ ಸಿಗುತ್ತಿದೆ. ಮಾಡಲ್ ವೈ ಕಾರುಗಳಿಗೆ ಭಾರತದಲ್ಲಿ ಬುಕಿಂಗ್ ಆಗಿರುವುದು 600ರ ಆಸುಪಾಸು ಮಾತ್ರವೇ. 500 ಕಾರುಗಳನ್ನು ಭಾರತಕ್ಕೆ ಸಾಗಿಸಲಾಗಿದೆ. ಆದರೆ, ಇವು ವಾಸ್ತವವಾಗಿ ಗ್ರಾಹಕರನ್ನು ಪಡೆದಿರುವುದು ಬಹಳ ಕಡಿಮೆ. 2025ರಲ್ಲಿ ಕೇವಲ 227 ಕಾರುಗಳು ಮಾತ್ರ ರಿಜಿಸ್ಟರ್ ಆಗಿವೆಯಂತೆ. ಈಗ ಮಾರಾಟವಾಗದೇ ಇನ್ವೆಂಟ್ರಿಯಲ್ಲಿ ಉಳಿದಿರುವ ಕಾರುಗಳಿಗೆ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಡಿಸ್ಕೌಂಟ್ ಕೊಡಲಾಗುತ್ತಿದೆ. ಒಂದು ಕಾರಿಗೆ ಎರಡು ಲಕ್ಷ ರೂವರೆಗೆ ಡಿಸ್ಕೌಂಟ್ ಆಫರ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೆ.

ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಲಕ್ಷುರಿ ಸೆಗ್ಮೆಂಟ್​ನಲ್ಲಿ ಚೀನಾದ ಬಿವೈಡಿ, ಜರ್ಮನಿಯ ಬಿಎಂಡಬ್ಲ್ಯು ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಭಾರತೀಯರನ್ನು ಆಕರ್ಷಿಸುತ್ತಿವೆ. ಟೆಸ್ಲಾದ ಮಾಡಲ್ ವೈ ಕಾರು ಗ್ರಾಹಕರನ್ನು ಆಕರ್ಷಿಸಲು ವಿಫಲವಾದಂತಿದೆ.

ಅಂದಹಾಗೆ, ಜನರು ಟೆಸ್ಲಾದ ಮಾಡಲ್ ವೈ ಕಾರನ್ನು ಸ್ವತಃ ಡ್ರೈವ್ ಮಾಡಿ ಅದರ ಅನುಭವ ಪಡೆಯಬಹುದು. ಬೆಂಗಳೂರಿನಲ್ಲಿ ಆಸಕ್ತರು ಟೆಸ್ಲಾ ಇಂಡಿಯಾದ ವೆಬ್​ಸೈಟ್​ಗೆ ಹೋಗಿ ಟೆಸ್ಟ್ ಡ್ರೈವ್​ಗೆ ಸಮಯ ಬುಕ್ ಮಾಡಬಹುದು. ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಒಂದು ಟೈಮ್ ಸ್ಲಾಟ್ ಪಡೆಯಬಹುದು. ಕೂಡ್ಲು ಗೇಟ್ ಬಳಿ ಟೆಸ್ಟ್ ಡ್ರೈವ್ ಸೌಲಭ್ಯ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಫೋಟೋ ಗ್ಯಾಲರಿ: ಬೆಂಗಳೂರಲ್ಲಿ ಮಹೇಶ್ ಬಾಬು ಒಡೆತನದ ಮಲ್ಟಿಪ್ಲೆಕ್ಸ್ ಹೇಗಿದೆ ನೋಡಿ..

Source link

ತಾವೇ ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ? – Kannada News | Bagalkot SP reveals Chandravva Murder Mistry And Accused Acting after Kill

ಬಾಗಲಕೋಟೆ, (ಜನವರಿ 15): ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿ ಹೆಸರು ಗಳಿಸಿದ್ದ ವೃದ್ಧೆ ಚಂದ್ರವ್ವಳನ್ನು ಆಕೆಯ ಅಣ್ಣನ ಮಕ್ಕಳೇ ಹತ್ಯೆ ಮಾಡಿದ ಘಟನೆ ರಬಕವಿ ಬನಹಟ್ಟಿ (Rabkavi Banhatti) ತಾಲೂಕಿನ ಜಗದಾಳ ಗ್ರಾಮದಲ್ಲಿ ನಡೆದಿದೆ. ಆರೋಪಿಗಳು ತಮ್ಮ ಅತ್ತೆಯನ್ನು ಜಗದಾಳ ಬಳಿಯ ಘಟಪ್ರಭಾ ಕಾಲುವೆಗೆ ತಳ್ಳಿದ್ದರು. ಬಳಿಕ ಜನರು ಬರುತ್ತಿದ್ದಂತೆ ಕಾಪಾಡುವ ನಾಟಕ ಆಡಿದ್ದರು. ನಂತರ ಶವವನ್ನು ತೆಗೆದು ಅವಸರದಲ್ಲಿ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ವ್ಯವಸ್ಥೆ ಮಾಡಿದ್ದರು. ಇದರಿಂದ ಸ್ಥಳೀಯರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬನಹಟ್ಟಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇನ್ನು ಈ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್‌ ಅವರು ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ

Source link

ಪ್ರತಿಭಟನೆಯಿಂದ ಉದ್ವಿಗ್ನಗೊಂಡಿರುವ ಇರಾನ್​​ನಲ್ಲಿ ಸಿಲುಕಿದ ಭಾರತೀಯರ ಸ್ಥಳಾಂತರ ನಾಳೆಯಿಂದ ಶುರು – Kannada News | India to begin evacuation of Indian citizens stuck in Iran from tomorrow amid protests

ನವದೆಹಲಿ, ಜನವರಿ 15: ವ್ಯಾಪಕ ಪ್ರತಿಭಟನೆಗಳ ಮಧ್ಯೆ ಭಾರತವು ನಾಳೆಯಿಂದ ಇರಾನ್‌ನಲ್ಲಿ (Iran Protest) ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಲಿದೆ. ಪ್ರತಿಭಟನೆಯಿಂದ ಇರಾನ್​​ನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಈ ಕ್ರಮ ತೆಗೆದುಕೊಂಡಿದೆ. ಮೂಲಗಳ ಪ್ರಕಾರ, ಸ್ಥಳಾಂತರಿಸುವವರ ಮೊದಲ ಬ್ಯಾಚ್ ಅನ್ನು ನಾಳೆ ಮುಂಜಾನೆಯೇ ವಿಮಾನದಲ್ಲಿ ಕಳುಹಿಸುವ ಸಾಧ್ಯತೆಯಿದೆ.

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿವಿಧ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ, ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಮತ್ತು ಫೋನ್ ಲೈನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಈ ಪ್ರಕ್ರಿಯೆ ಕೊಂಚ ತಡವಾಗುತ್ತಿದೆ.

ಇದನ್ನೂ ಓದಿ: ಅನಿವಾರ್ಯವಲ್ಲದಿದ್ದರೆ ಇರಾನ್​​ಗೆ ಹೋಗಬೇಡಿ; ಸರ್ಕಾರದಿಂದ ಭಾರತೀಯರಿಗೆ ಸೂಚನೆ

ಇರಾನ್‌ನಾದ್ಯಂತ ವ್ಯಾಪಕ ಪ್ರತಿಭಟನೆಗಳ ನಡುವೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳಗಳು ಹೆಚ್ಚಾಗಿದೆ. ಇರಾನಿನ ರಿಯಾಲ್‌ನಲ್ಲಿ ಕಳೆದ ತಿಂಗಳ ಕೊನೆಯಲ್ಲಿ ಅಶಾಂತಿ ಪ್ರಾರಂಭವಾಯಿತು. ಅಂದಿನಿಂದ ಪ್ರತಿಭಟನೆ ಎಲ್ಲಾ 31 ಪ್ರಾಂತ್ಯಗಳಿಗೆ ಹರಡಿ, ರಾಜಕೀಯ ಬಿಕ್ಕಟ್ಟಾಗಿ ರೂಪ ತಳೆದಿದೆ. ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮೇಲೆ ನಡೆಸಲಾದ ನಿಗ್ರಹ ಕಾರ್ಯಾಚರಣೆಯಲ್ಲಿ 3,428 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆದಷ್ಟು ಬೇಗ ದೇಶ ಬಿಟ್ಟು ಹೊರಡಿ; ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ, ಸಹಾಯವಾಣಿ ಸಂಖ್ಯೆ ಬಿಡುಗಡೆ

ಅಂದಾಜಿನ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 10,000ಕ್ಕೂ ಹೆಚ್ಚು ಭಾರತೀಯರು ಪ್ರಸ್ತುತ ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಭಾರತವು ಇರಾನ್ ದೇಶದಲ್ಲಿರುವ ಎಲ್ಲಾ ಪ್ರಜೆಗಳಿಗೆ ಲಭ್ಯವಿರುವ ಮಾರ್ಗಗಳ ಮೂಲಕ ತಕ್ಷಣ ಭಾರತಕ್ಕೆ ಹೊರಟುಬರಲು ಸೂಚನೆ ನೀಡಿತ್ತು. ಜೊತೆಗೆ ಸಹಾಯವಾಣಿಯನ್ನೂ ತೆರೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BPL 2026: ಬಿಸಿಸಿಐ ವಿರುದ್ಧ ತೊಡೆ ತಟ್ಟಿದ್ದ ಬಾಂಗ್ಲಾ ಮಂಡಳಿಗೆ ತನ್ನ ಆಟಗಾರರಿಂದಲೇ ಅವಮಾನ – Kannada News | Bangladesh Cricket Crisis: Player Boycott Halts BPL, BCB Under Fire for Nazmul Islam Controversy

ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ (IPL) ಹೊರಹಾಕಿದ ಬಳಿಕ ಬಿಸಿಸಿಐ (BCCI) ವಿರುದ್ಧ ಸೆಟೆದು ನಿಂತಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BPL) ಇದೀಗ ತನ್ನ ದೇಶದ ಆಟಗಾರರಿಂದಲೇ ವಿಶ್ವ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದೆ. ವಾಸ್ತವವಾಗಿ ಇಂದು ನಡೆಯಬೇಕಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನ ಪಂದ್ಯಗಳು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಗಿವೆ. ಇದ್ದಕ್ಕೆ ಕಾರಣ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘದ ನಡುವಿನ ವೈಮನಸ್ಸು. ಅಷ್ಟಕ್ಕೂ ಆಗಿದ್ದೇನೆಂದರೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ, ಆಟಗಾರರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಇದರಿಂದ ಕೆರಳಿದ ಆಟಗಾರರು ನಜ್ಮುಲ್ ಇಸ್ಲಾಂ ಅವರನ್ನು ಈ ಹುದ್ದೆಯಿಂದ ತೆಗೆದುಹಾಕದಿದ್ದರೆ, ಯಾರೂ ಕೂಡ ಕ್ರಿಕೆಟ್ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಮಂಡಳಿಗೆ ಸವಾಲೊಡ್ಡಿದ್ದರು. ಇದರ ಪರಿಣಾಮವಾಗಿ ಇಂದು ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿವೆ.

ಭಾರತಕ್ಕೆ ಬರಲೊಪ್ಪದ ಬಾಂಗ್ಲಾ

ವಾಸ್ತವವಾಗಿ ಟಿ20 ವಿಶ್ವಕಪ್​ಗಾಗಿ ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ಒಪ್ಪದ ಬಾಂಗ್ಲಾ ಮಂಡಳಿ, ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕೆಂದು ಐಸಿಸಿಗೆ ಮನವಿ ಮಾಡಿತ್ತು. ಆದರೆ ಈ ಬಗ್ಗೆ ಐಸಿಸಿಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಒಂದು ವೇಳೆ ಐಸಿಸಿ ತನ್ನ ಮನವಿಗೆ ಸ್ಪಂದಿಸದಿದ್ದರೆ, ಬಾಂಗ್ಲಾ ಮಂಡಳಿ ಟಿ20 ವಿಶ್ವಕಪ್ ಬಹಿಷ್ಕರಿಸುವ ಬಗ್ಗೆಯೂ ಚಿಂತಿಸುತ್ತಿದೆ. ಇದನ್ನು ಗಮನಿಸಿದ್ದ ಬಾಂಗ್ಲಾದೇಶ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್, ನಮ್ಮ ತಂಡ ಐಸಿಸಿ ಟೂರ್ನಿಗಳಲ್ಲಿ ಆಡುವುದು ಒಳಿತು. ಹೀಗಾಗಿ ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸುವ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದರು.

ಯಾವುದೇ ನಷ್ಟವನ್ನು ಬರಿಸುವುದಿಲ್ಲ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ, ‘ಬಾಂಗ್ಲಾದೇಶ ತಂಡವು 2026 ರ ಟಿ20 ವಿಶ್ವಕಪ್‌ನಲ್ಲಿ ಆಡದಿದ್ದರೆ ಅದು ಆಟಗಾರರಿಗೆ ಮಾತ್ರ ನಷ್ಟವನ್ನುಂಟು ಮಾಡುತ್ತದೆಯೇ ವಿನಃ ಮಂಡಳಿಗಲ್ಲ. ಮಂಡಳಿಯು ಆಟಗಾರರಿಗಾಗುವ ಯಾವುದೇ ನಷ್ಟವನ್ನು ಬರಿಸುವುದಿಲ್ಲ ಎಂದ್ದಿದ್ದರು. ಈ ಹೇಳಿಕೆಯಿಂದ ಕೆರಳಿದ್ದ ಬಾಂಗ್ಲಾದೇಶ ಕ್ರಿಕೆಟಿಗರು ಬಿಸಿಬಿ ನಿರ್ದೇಶಕ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ತಕ್ಷಣ ರಾಜೀನಾಮೆ ನೀಡದಿದ್ದರೆ ಎಲ್ಲಾ ರೀತಿಯ ಕ್ರಿಕೆಟ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.

ಪರಿಣಾಮವಾಗಿ, ಜನವರಿ 15 ರಂದು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಗಳಿಗಾಗಿ ಆಟಗಾರರು ಮೈದಾನಕ್ಕಿಳಿಯಲಿಲ್ಲ. ಈ ಕಾರಣದಿಂದಾಗಿ ಎರಡೂ ಪಂದ್ಯಗಳನ್ನು ರದ್ದುಗೊಳಿಸಲಾಯಿತು. ಇದರ ನಂತರ ಬಿಸಿಬಿ, ನಜ್ಮುಲ್ ಇಸ್ಲಾಂ ಅವರನ್ನು ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಜವಾಬ್ದಾರಿಗಳಿಂದ ವಜಾಗೊಳಿಸಿತು. ಆದಾಗ್ಯೂ, CWAB ಅಧ್ಯಕ್ಷ ಮೊಹಮ್ಮದ್ ಮಿಥುನ್ ಪತ್ರಿಕಾಗೋಷ್ಠಿಯಲ್ಲಿ ಲಿಖಿತ ಖಾತರಿಯಿಲ್ಲದೆ ಆಟಗಾರರು ಮೈದಾನಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

24 ಪಂದ್ಯಗಳು ನಡೆದಿವೆ

2025-26ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಇದುವರೆಗೆ 24 ಪಂದ್ಯಗಳು ಮಾತ್ರ ಪೂರ್ಣಗೊಂಡಿವೆ. ಜನವರಿ 15 ರಂದು ನಿಗದಿಯಾಗಿದ್ದ ಎರಡೂ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ, ಲೀಗ್ ಯಾವಾಗ ಪುನರಾರಂಭವಾಗುತ್ತದೆ ಎಂದು ಊಹಿಸುವುದು ಪ್ರಸ್ತುತ ಕಷ್ಟ. ಲೀಗ್ ಪುನರಾರಂಭವಾದರೆ, ಈ ಎರಡು ರದ್ದಾದ ಪಂದ್ಯಗಳನ್ನು ಮತ್ತೆ ಆಡಬಹುದು. ಈ ಆವೃತ್ತಿಯ ಫೈನಲ್ ಪಂದ್ಯವನ್ನು ಜನವರಿ 23 ರಂದು ನಿಗದಿಪಡಿಸಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಪುರುಷರು ಈ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಲೇಬಾರದು – Kannada News | Chanakya Niti: Chanakya says men should not share these thoughts with anyone

ಆಚಾರ್ಯ ಚಾಣಕ್ಯ (Acharya Chanakya) ಯಶಸ್ಸು, ಶ್ರೀಮಂತಿಕೆ, ವೃತ್ತಿ ಜೀವನ ಮಾತ್ರವಲ್ಲ ಪುರುಷರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಪುರುಷನಾದವನು ದಾಂಪತ್ಯ ಜೀವನವನ್ನು ಹೇಗೆ ಸಾಗಿಸಬೇಕು, ಮಕ್ಕಳಿಗೆ ಯಾವ ರೀತಿಯ ಸಂಸ್ಕಾರವನ್ನು ಕಲಿಸಿಕೊಡಬೇಕು ಎಂದು ಹೇಳಿರುವಂತೆ ಅವರು ಗಂಡಸರು ತಮಗೆ ಸಂಬಂಧಿಸಿದ ಈ ಕೆಲವೊಂದು ವಿಚಾರಗಳನ್ನು ಹೊರಗಿನ ಜನರ ಬಳಿ ಯಾವುದೇ ಕಾರಣಕ್ಕೂ ಶೇರ್‌ ಮಾಡಬಾರದು ಎಂದಿದ್ದಾರೆ. ಏಕೆಂದರೆ ಈ ವೈಯಕ್ತಿ ವಿಚಾರಗಳನ್ನು ಇತರರ ಬಳಿ ಹಂಚಿಕೊಂಡರೆ ಭವಿಷ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಯಾರೊಂದಿಗೀ ಶೇರ್‌ ಮಾಡಬಾರದ ಆ ವಿಚಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.

ಪುರುಷರೇ.. ನಿಮ್ಮ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:

ಆರ್ಥಿಕ ನಷ್ಟ: ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಇದರಿಂದ ದುಃಖವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ದುಃಖವನ್ನು ಕಡಿಮೆ ಮಾಡಲು, ಮನಸ್ಸನ್ನು ಹಗುರ ಮಾಡಿಕೊಳ್ಳಲು ಆ ವಿಚಾರವನ್ನು ಇತರರ ಬಳಿ ಹಂಚಿಕೊಳ್ಳುತ್ತಾರೆ. ಪುರುಷರು ಈ ರೀತಿ ಹಣದ ವಿಚಾರಗಳನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮನೆಯ ನ್ಯೂನತೆಗಳ ಬಗ್ಗೆ ಹೇಳಬೇಡಿ: ಮನೆಯಲ್ಲಿ ನಡೆಯುವ ಕಲಹಗಳು, ಮನೆಯ ಸದಸ್ಯರ ನ್ಯೂನತೆಗಳ ಬಗ್ಗೆ ಯಾರೊಂದಿಗೂ ಶೇರ್‌ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಈ ರೀತಿ ಹೇಳಿದಾಗ ಅವರು ನಿಮ್ಮ ಮನೆಯ ಬಗ್ಗೆ ತಪ್ಪು ಯೋಚನೆಯನ್ನು ಮಾಡುವ ಸಾಧ್ಯತೆ ಇರುತ್ತದೆ ಜೊತೆಗೆ ನಿಮ್ಮ ಬಗ್ಗೆ ನಿಮ್ಮ ಬೆನ್ನ ಹಿಂದೆಯೇ ಕೆಟ್ಟ ಮಾತುಗಳನ್ನಾಡುವ, ಗೇಲಿ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ತಪ್ಪಿಯೂ ಇಂತಹ ಜನರನ್ನು ನಿಮ್ಮ ಮನೆಗೆ ಆಹ್ವಾನಿಸಬೇಡಿ

ನಿಮಗಾದ ಮೋಸದ ಬಗ್ಗೆ ಹೇಳಬೇಡಿ: ನೀವು ಯಾರಿಂದಾದರೂ ಮೋಸಕ್ಕೊಳಗಾದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಈ ರೀತಿ ಹೇಳಿದಾಗ ಅವರು ನಿಮ್ಮ ಸಾಮರ್ಥ್ಯದ ಬಗ್ಗೆ ಕಡಿಮೆ ಅಂದಾಜು ಮಾಡುವ ಸಾಧ್ಯತೆ ಇರುತ್ತದೆ ಜೊತೆಗೆ ಅವರು ಭವಿಷ್ಯದಲ್ಲಿ ನಿಮಗೆ ಮೋಸ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಈ ಸೂಕ್ಷ್ಮ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ನಿಮಗಾದ ಅವಮಾನಗಳು: ನೀವು ಯಾರಿಂದಾದರೂ ಅವಮಾನಕ್ಕೊಳಗಾದರೆ, ಅದರ ಬಗ್ಗೆ ಎಲ್ಲರಿಗೂ ಹೇಳಬೇಡಿ. ಏಕೆಂದರೆ ಇದೇ ವಿಚಾರವನ್ನು ಇಟ್ಟುಕೊಂಡು ಅವರು ನಿಮ್ಮ ನಗೆಪಾಟಲಿಗೆ ಈಡಾಗಿಸುವ ಸಾಧ್ಯತೆ ಇರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ: ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು – Kannada News | Vijayanagara: Love Affair Ends in Tragic Murder of Mother of Three

ಬಳ್ಳಾರಿ, ಜನವರಿ 15: ಆಕೆ ಮೂರು ಮಕ್ಕಳ ತಾಯಿ (mother). ಕಳೆದ 8 ವರ್ಷಗಳಿಂದ ಗಂಡನಿಂದ ದೂರವಾಗಿದ್ದರು. ರೈಲ್ವೆ ಸ್ಟೇಷನ್​​ನಲ್ಲಿ ಸ್ಟಾಲ್‌‌ವೊಂದರಲ್ಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ತಾವಾಯ್ತು ತಮ್ಮ ಕುಟುಂಬವಾಯ್ತು ಅಂತಾ ಇದ್ದವರಿಗೆ ಯುವಕನೊಬ್ಬನ ಪರಿಚಯವಾಗಿದೆ. ಪರಿಚಯ ಸಲುಗೆಗೆ ತಿರುಗಿ ಯಾರಿಗೂ ಗೊತ್ತಾಗದ ಹಾಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದರು. ಆದರೆ ಅವರಿಬ್ಬರ ನಡುವೆ ಅದೇನಾಯ್ತು ಏನೋ ಗೊತ್ತಿಲ್ಲ ನಸುಕಿನ ಜಾವವೇ ಆಕೆಯ ಕತ್ತು ಕೊಯ್ದು ಭೀಕರ ಕೊಲೆ (Murder) ಮಾಡಿಯೇ ಬಿಟ್ಟಿದ್ದ.

ನಡೆದದ್ದೇನು?

ಉಮಾ (32) ಅವರಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಪಕ್ಕದ ರಾಜ್ಯ ಆಂಧ್ರದ ಪಾತಿಕೊಂಡ ಗ್ರಾಮದ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಮೂರು ಗಂಡು ಮಕ್ಕಳಿಗೆ ಜನ್ಮ ಕೂಡ ನೀಡಿದ್ದರು. ಆದರೆ ದಿನ ಕಳೆದಂತೆ ಗಂಡ-ಹೆಂಡತಿ ನಡುವೆ ಕಲಹ ಶುರುವಾಗಿದ್ದು, ಬಳಿಕ ಇಬ್ಬರು ದೂರುವಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ

ಗಂಡನಿಂದ ದೂರವಾಗಿದ್ದ ಉಮಾ ತಮ್ಮ ತವರೂರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ವಾಸವಾಗಿದ್ದರು. ಮೂರು ಮಕ್ಕಳನ್ನ ಕಟ್ಟಿಕೊಂಡು ಜೀವನ ನಡೆಸುವುದು ಉಮಾಗೆ ಕಷ್ಟವಾಗಿತ್ತು. ಹೀಗಾಗಿ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಇನ್ನು ಉಮಾಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಹಿರಿಯ ಮಗ ತನ್ನ ತಂದೆಯೊಂದಿಗೆ ವಾಸವಿದ್ದರೆ, ಇಬ್ಬರನ್ನು ಉಮಾ ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ತಂದೆ-ತಾಯಿಯನ್ನ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು.

ಚಾಟಿಂಗ್, ಕಾಲಿಂಗ್ ಜೋರು

ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಉಮಾರಿಗೆ ಅಂದು ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿದೆ. ಪರಿಚಯದ ನಂತರ ಆತ ದಿನವು ರೈಲ್ವೆ ಸ್ಟೇಷನ್‌ಗೆ ಬರೋದು, ಉಮಾ ಕೆಲಸ ಮಾಡುತ್ತಿದ್ದ ಸ್ಟಾಲ್ ಹತ್ತಿರ ನಿಲ್ಲುವುದು, ಅವರನ್ನು ಮಾತನಾಡಿಸು ಪ್ರಯತ್ನ ಮಾಡುವುದು ಹೀಗೆ ಕೆಲ ತಿಂಗಳು ನಡೆದಿದೆ. ಆದಾದ ಬಳಿಕ ಇಬ್ಬರು ಫೋನ್​ ನಂಬರ್ ಬದಲಾಯಿಸಿಕೊಂಡಿದ್ದಾರೆ. ನಂಬರ್​

ಪೋನ್ ನಂಬರ್ ಎಕ್ಸ್​ಚೇಂಜ್ ಆಗುತ್ತಿದ್ದಂತೆ ಇಬ್ಬರು ವಾಟ್ಸಾಪ್ ಚಾಟಿಂಗ್, ಫೋನ್​ ಕಾಲಿಂಗ್ ಜೋರಿರುತ್ತೆ. ಉಮಾ ಖಾಜಾನ ಜೊತೆಗೆ ಮಾತನಾಡುವ ವಿಷಯ ಅವರ ಮನೆಯಲ್ಲೂ ಗೊತ್ತಿರುತ್ತದೆ. ಉಮಾಳ ಸಹೋದರಿ ಯಾಕೆ ಇಷ್ಟೊಂದು ಫೋನ್​​ನಲ್ಲಿ ಮಾತಾಡೋದು, ಯಾರದು ಎಂದು ಕೇಳಿದ್ದಾರೆ. ಆಗ ಉಮಾ ಖಾಜಾ ಅಂತಾ, ಅವನು ನನ್ನ ಫ್ರೆಂಡ್ ಅಂತ ಹೇಳಿದ್ದಾರೆ. ಮೂರು ಮಕ್ಕಳ ತಾಯಿಯಾಗಿದ್ದ ಉಮಾಳಿಗೆ ಮುಸ್ಲಿಂ ಯುವಕ ಖಾಜಾ ಮೇಲೆ ಲವ್ ಆಗಿಯೇ ಬಿಟ್ಟಿದೆ. ಇತ್ತ ಖಾಜಾ ಕೂಡ ಲವ್​ನಲ್ಲಿ ಬಿದ್ದಿದ್ದ. ಇಬ್ಬರ ಪ್ರೇಮ ಪ್ರಣಯ ಶುರುವಾಗಿದೆ.

ಹಣಕಾಸಿನ ವಿಚಾರಕ್ಕೆ ಜಗಳ

ಉಮಾ ಯಾವಾಗ ಖಾಜಾನ ಪ್ರೀತಿಯಲ್ಲಿ ಬಿದ್ದರೋ, ಆಗ ಅವರು ಮನೆ-ಮಕ್ಕಳು ಎಲ್ಲವನ್ನ ಮರೆತಿದ್ದಾರೆ. ಮೂರು ಹೊತ್ತು ಖಾಜಾನ ಜೊತೆಗೆ ಮಾತು, ಚಾಟಿಂಗ್, ಡೇಟಿಂಗ್ ಜೋರಾಗಿತ್ತು. ಪರಿಚಯವಾಗಿ 8 ತಿಂಗಳ ಕಳೆದಿತ್ತು. ಅದರಲ್ಲಿ ಮನೆಯವರಿಗೆ ಹೇಳದೇನೆ ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರು ಗುಪ್ತವಾಗಿ ಮದುವೆ ಕೂಡ ಆಗಿದ್ದರಂತೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಹಣದ ವಿಚಾರ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜೊತೆಗೆ ಖಾಜಾನಿಗೆ ಉಮಾಳ ಸೌಂದರ್ಯ, ಆಕೆಯ ಮಾತು ತೆಲೆಕೆಡಿಸಿತ್ತು. ಬರುಬರುತ್ತ ಆಕೆಯ ಮೇಲೆ ಅನುಮಾನ ಪಡೋದಕ್ಕೆ ಶುರು ಮಾಡಿದ್ದ. ಉಮಾಳ ಫೋನ್​ ಬಿಜಿ ಬಂದ್ರೆ ಸಾಕು ಜೋರು ಗಲಾಟೆ ಮಡುತ್ತಿದ್ದನಂತೆ. ಉಮಾರ ಮನೆಗೆ ಯಾವತ್ತು ಖಾಜಾ ಬರುತ್ತಿರಲಿಲ್ಲ, ಬದಲಿಗೆ ಇಬ್ಬರು ಹೊರಗಡೆ ಭೇಟಿ ಮಾಡುತ್ತಿದ್ದರಂತೆ.

ಜನವರಿ 6ರಂದು ಅನುಮಾನ, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆಯಾದ ಬಳಿಕ ಉಮಾಳ ಮನೆ ಹತ್ತಿರಕ್ಕೆ ಖಾಜಾ ಬಂದಿದ್ದಾನೆ. ಮನೆ ಹತ್ತಿರ ಬರುತ್ತಿದ್ದಂತೆ ಉಮಾ ಅವರ ಮನೆ ಪಕ್ಕದ ಮನೆಯ ಮಹಡಿಗೆ ಹೋಗಿದ್ದಾರೆ. ಆಗ ಸಮಯ ಬೆಳಗಿನ ಜಾವ 4.30ರ ಸುಮಾರು, ಇಬ್ಬರು ಮಹಡಿ ಮೇಲೆ ಮಾತನಾಡುತ್ತಿದ್ದರು. ಸಿಟ್ಟಿನಲ್ಲಿದ್ದ ಖಾಜಾ ಕೊಲೆ ಮಾಡಲೇಬೇಕು ಅಂತಾ ಸಂಚು ಹಾಕಿ, ಹರಿತವಾದ ಚಾಕು ತಂದಿದ್ದ. ಮುಖಕ್ಕೆ ಟವೆಲ್ ಹಾಕಿ ಕೋಳಿ ಕುತ್ತಿಗೆ ಕೊಯ್ಯುವ ಹಾಗೆ ಉಮಾರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಉಮಾ ಸ್ಥಳದಲ್ಲೇ ಮೃತಪಟ್ಟಿದ್ದರು.

ಬೆಕ್ಕುಗಳ ಕಾದಾಟ: ಉಮಾ ಪತ್ತೆ

ರೈಲ್ವೆ ಸ್ಟೇಷನ್ ಸ್ಟಾಲ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಉಮಾ ಬೆಳಗಿನ ಜಾವ 4:30ಕ್ಕೆ ಮನೆಯಿಂದ ಆಚೆ ಹೋದವಳು ವಾಪಾಸ್ ಮನೆಗೆ ಬಂದಿಲ್ಲ. ಇತ್ತ ಗಾಬರಿಯಾಗಿದ್ದ ಮನೆಮಂದಿ ಉಮಾಳ ಹುಡುಕಾಡಿದ್ದಾರೆ. ಸಂಬಂಧಿಕರಿಗೆ, ಸ್ನೇಹಿತರಗೆ ಫೋನ್​ ಮಾಡಿ ವಿಚಾರಿಸಿದ್ದಾರೆ. ಆದರೆ ಯಾವುದು ಪ್ರಯೋಜವಾಗಿಲ್ಲ. ಇತ್ತ ಮನೆ ಪಕ್ಕದಲ್ಲಿ ಬೆಕ್ಕುಗಳ ಕಾದಾಟ ಮಾಡುತ್ತಿದ್ದವು. ಬೆಕ್ಕುಗಳು ಯಾಕಿಷ್ಟು ಕಾದಾಡುತ್ತಿವೆ. ಅಂತಾ ಮನೆ ಮಹಡಿ ನೋಡಲು ಹೋಗಿದ್ದ ಪಕ್ಕದ ಮನೆಯವರಿಗೆ ಉಮಾಳ ಶವ ಕಂಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹ ಕಂಡು ಆತಂಕಗೊಂಡಿದ್ದಾರೆ. ತಕ್ಷಣ ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹರಿತವಾದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದು ಬೆಳೆಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆಬಿಸಿದ್ದರು.

ಇದನ್ನೂ ಓದಿ: ತರಕಾರಿ ಮಾರಿ ಬಂದ ಹಣದಲ್ಲಿ ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ

ಇತ್ತ ಕೊಲೆ ಮಾಡಿದ್ದ ಖಾಜಾ ಹೊಸಪೇಟೆ ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಕೊಲೆ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಭೇಟಿ ನೀಡಿ ಆರೋಪಿ ಪತ್ತೆಗೆ ತಂಡ ಸಿದ್ಧಮಾಡಿದ್ದರು. ಮೃತ ಉಮಾಳ ಫೋನ್​ ಚೆಕ್ ಮಾಡಿ ಆಕೆಯ ಕೊನೆಯ ಕಾಲ್‌ ನಂಬರ್ ತೆಗೆದು ಟವರ್ ಟ್ರೇಸ್​ ಮಾಡಿದ್ದು, ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿ ಖಾಜಾ ಪತ್ತೆ ಮಾಡಿದ ಪೊಲೀಸರು, ಆತನನ್ನು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ಇತ್ತ ಉಮಾರನ್ನ ಕಳೆದುಕೊಂಡ ಇಡೀ ಕುಟುಂಬ ಅನಾಥವಾಗಿದೆ. ಮೊದಲೇ ತಂದೆಯಿಂದ ದೂರವಿದ್ದ ಮಕ್ಕಳು ಇದೀಗ ತಾಯಿ ಇಲ್ಲದೆ ತಬ್ಬಲಿಗಳಾಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​ – Kannada News | Double Shock for Rajeev Gowda: Congress Leader Faces Multiple Allegations, Party Issues Notice

ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ವಿಚಾರ ಪ್ರಕರಣದ ಆರೋಪಿ, ಕಾಂಗ್ರೆಸ್​​ ಮುಖಂಡ ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​ ಸಿಗ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿ ವಿರುದ್ಧ ಒಂದೊಂದಾಗಿ ಆರೋಪಗಳು ಕೇಳಿಬರುತ್ತಿದ್ದು, ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ಈತ ನಿಂದಿಸಿದ್ದ ಬಗ್ಗೆ ವರದಿಯಾಗಿತ್ತು. ಆ ಬೆನ್ನಲ್ಲೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿರುವ ಮಹಿಳಾ ಪಿಡಿಒ ಒಬ್ಬರು ಕೂಡ ‘ಕೈ’ ಮುಖಂಡನ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡೋದು ರಾಜೀವ್ ಗೌಡಗೆ ಪ್ರವೃತ್ತಿ ಎಂದು ಟಿವಿ9ಗೆ ಕರೆ ಮಾಡಿ ತಮ್ಮ ಅಳಲುತೋಡಿಕೊಂಡಿದ್ದಾರೆ.

ಪಿಡಿಒ ಆರೋಪವೇನು?

ರಾಜೀವ್ ಗೌಡ ತನಗೂ ಕೂಡ ಧಮ್ಕಿ ಹಾಕಿ ಕಿರುಕುಳ ನೀಡುತ್ತಿದ್ದರು. ಶಿಡ್ಲಘಟ್ಟದಲ್ಲಿ ಶಾಸಕರ ಬದಲು ತಮ್ಮ ಮಾತು ನಡೆಯಬೇಕು ಎನ್ನುತ್ತಿದ್ದರು. ರಾಜೀವ್ ಗೌಡ ಹೇಳಿದಂತೆ ಕೇಳದಿದ್ದರೆ ವರ್ಗಾವಣೆ ಮಾಡಿಸುತ್ತಾರೆ. ಸರಿ ಅಥವಾ ತಪ್ಪು ಎಂದು ನೋಡಲ್ಲ, ಅವರು ಹೇಳಿದಂತೆ ಮಾಡಬೇಕು. ಹಾಲಿನ ಡೇರಿಗೆ ನಾಮನಿರ್ದೇಶನ, ಚೆಕ್ ಹಾಕುವ ವಿಚಾರದಲ್ಲಿ ಕಿರುಕುಳ ನೀಡಲಾಗಿದ್ದು, ಕೆಪಿಸಿಸಿ ಕೋ-ಆರ್ಡಿನೇಟರ್ ಅನ್ನೋ ಲೆಟರ್​ಹೆಡ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಶಾಸಕರಿಗಿಂತ ಕೆಪಿಸಿಸಿ ಕೋ-ಆರ್ಡಿನೇಟರ್ ಹುದ್ದೆ ದೊಡ್ಡದು ಎಂದು ಹೇಳಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ರಾಜೀವ್​​ ಗೌಡ ವಿರುದ್ಧ ಮತ್ತೊಂದು ಆರೋಪ; ತಹಶೀಲ್ದಾರ್​​ಗೂ ನಿಂದಿಸಿದ್ದನಾ ‘ಕೈ’ ಮುಖಂಡ?

ಅಧಿಕಾರಿಗಳು ಸ್ಥಳೀಯ ಜೆಡಿಎಸ್ ಶಾಸಕರ ಮಾತು ಕೇಳ್ತಾರೆಂಬ ಭ್ರಮೆಯಲ್ಲಿ ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಇದ್ದಾರೆ. ಪೌರಾಯುಕ್ತೆ ಅಮೃತಾಗೌಡಗೆ ಬೈಯ್ದಂತೆ ನನಗೂ ಬೈಯ್ಯಲು ಯತ್ನಿಸಿದ್ದರು. ಆದರೆ ನಾನು ತಿರುಗಿಸಿ ಬೈಯ್ದಿದ್ದರಿಂದ ರಾಜೀವ್ ಗೌಡ ಸುಮ್ಮನಾಗಿದ್ದರು. ಹೇಳಿದಂತೆಲ್ಲ ಮಾಡಲಾಗಲ್ಲ, ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದಿದ್ದೆ. ಅವರು ಹೇಳಿದಂತೆ ಕೇಳಲಿಲ್ಲವೆಂಬ ಕಾರಣಕ್ಕೆ ವರ್ಗಾವಣೆ ಮಾಡಿಸಿದರು. ಶಿಡ್ಲಘಟ್ಟ ಕ್ಷೇತ್ರದ ಬಹುತೇಕ ಮಹಿಳಾ ಅಧಿಕಾರಿಗಳು ಅವರಿಂದ ಕಿರುಕುಳ ಅನುಭವಿಸಿದ್ದಾರೆ ಎಂದು ಪಿಡಿಒ ಹೇಳಿದ್ದಾರೆ.

ರಾಜೀವ್​​ ಗೌಡಗೆ ಕೆಪಿಸಿಸಿ ನೋಟಿಸ್​​

ಪಕ್ಷದ ಮುಖಂಡ ರಾಜೀವ್​​ ಗೌಡ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ವಿಚಾರ ದೊಡ್ಡದಾಗುತ್ತಿದ್ದಂತೆ ಕಾಂಗ್ರೆಸ್​​ ಡ್ಯಾಮೇಜ್​​ ಕಂಟ್ರೋಲ್​​ಗೆ ಮುಂದಾಗಿದೆ. ಪೌರಾಯುಕ್ತರೊಂದಿಗೆ ತಾವು ಆಡಿದ ಮಾತುಗಳಿಂದ ಪಕ್ಷಕ್ಕೆ ಮುಜುಗರ ಆಗಿದೆ. ಹಾಗಾಗಿ ಒಂದು ವಾರದೊಳಗೆ ಸೂಕ್ತ ಸಮಾಜಾಯಿಷಿ ನೀಡಿ. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ನೋಟಿಸ್​​ ಜಾರಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link