Headlines

ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್, ಮೂವರು ಸಾವು – Kannada News | Three Die After Motorcycle Plunges Off Washed Out Bridge in Madhya Pradesh

ಮಧ್ಯಪ್ರದೇಶ, ಫೆಬ್ರವರಿ 15: ಕಳೆದ ವರ್ಷ ಮಳೆಗೆ ಕೊಚ್ಚಿ ಹೋಗಿದ್ದ ಸೇತುವೆ(Bridge)ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ಡನೆದಿದೆ. ತಡರಾತ್ರಿ ಮೂವರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತರು ರಾಹ್ಲಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಾಗಿದ್ದು, ತೆಂಡುಖೇಡಾದಿಂದ ಝಾಪನ್‌ಗೆ ಪ್ರಯಾಣಿಸುತ್ತಿದ್ದರು. ಝಾಪನ್ ಬಳಿ, ಬೈರ್ಮಾ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಕಳೆದ ವರ್ಷ ಸುರಿದ ಭಾರೀ ಮಳೆಯ ಸಮಯದಲ್ಲಿ ತೀವ್ರವಾಗಿ ಹಾನಿಗೊಳಗಾಗಿ ಭಾಗಶಃ ಕೊಚ್ಚಿಹೋಗಿತ್ತು. ಮುರಿದ ಸೇತುವೆ ಮೇಲೆ…

Read More

ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ – Kannada News | Twists in Hassan Missing Case: Priyanka and David Under Police Custody After Elopement

ಹಾಸನ/ ತುಮಕೂರು, ಫೆಬವರಿ 15: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾಳನ್ನು ಪರಪುರುಷನ ಜೊತೆ ಪತ್ತೆ ಮಾಡಿರುವ ಪೊಲೀಸರು, ಪ್ರಿಯಾಂಕಾ ಮತ್ತು ಡೇವಿಡ್ ಇಬ್ಬರನ್ನೂ ವಶಕ್ಕೆ ಪಡೆದು ಹಾಸನದ ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡುದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ತ್ತೊಂದೆಡೆ ಊರಿಗೆ ಏಕಪತ್ನಿ ವ್ರತಸ್ಥನಾಗಿ ಕಂಡವನ ಮನೆಯಲ್ಲಿಯೇ ಪ್ರಿಯಾಂಕಾ…

Read More

ಶಿವ ಶಂಭೋ ಸ್ವಯಂಭೋ: ಶಿವರಾತ್ರಿಗೆ ಹೊಂಬಾಳೆ ಫಿಲ್ಮ್ಸ್‌ ಹೊಸ ಹಾಡು – Kannada News | Shiva Shambho Swayambho: Hombale Films releases new AI song on Maha Shivaratri

ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿರುವ ‘ಹೊಂಬಾಳೆ ಫಿಲ್ಮ್ಸ್’ (Hombale Films) ಈಗ ಹೊಸ ಹೆಜ್ಜೆ ಇಟ್ಟಿದೆ. ಶಿವರಾತ್ರಿ (Maha Shivaratri) ಹಬ್ಬದ ಪ್ರಯುಕ್ತ ಹೊಸ ಭಕ್ತಿಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಶಿವನ ಕುರಿತಾದ ಈ ಹಾಡನ್ನು ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಮೂಲಕ ಅನಾವರಣ ಮಾಡಲಾಗಿದ್ದು, ಶಿವನ ಭಕ್ತರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿನಲ್ಲಿ ಎಐ ಬಳಕೆ ಗಮನ ಸೆಳೆಯುತ್ತಿದೆ. ‘ಶಿವ ಶಂಭೋ ಸ್ವಯಂಭೋ’ (Shiva Shambho Swayambho) ಹಾಡಿನ ವಿಶೇಷತೆ ಬಗ್ಗೆ ಇಲ್ಲಿದೆ ಇನ್ನಷ್ಟು…

Read More

Solar Eclipse 2026: ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Astrological Effects on Pisces by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರು 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಮೀನ ರಾಶಿಯವರ ಮೇಲೆ ಬೀರುವ ಪ್ರಭಾವದ ಕುರಿತು ಮಾಹಿತಿ ನೀಡಿದ್ದಾರೆ. ಮೀನ ರಾಶಿಯವರು ಸಾಡೇ ಸಾತಿಯ ಗರ್ಭ ಭಾಗದಲ್ಲಿರುವುದರಿಂದ ಮಿಶ್ರಫಲಗಳನ್ನು ನಿರೀಕ್ಷಿಸಬಹುದು. ಆದಾಯದಲ್ಲಿ ಏರಿಕೆ ಮತ್ತು ಉದ್ಯೋಗದಲ್ಲಿ ಶುಭ ಫಲಗಳ ಸಾಧ್ಯತೆಯಿದೆ, ಕೆಲವರಿಗೆ ಉದ್ಯೋಗ ಬದಲಾವಣೆಯ ಯೋಗವಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಚೇತರಿಕೆ ಕಾಣುವಿರಿ. ಮಾನಸಿಕವಾಗಿ ಆಪ್ತರಿಂದ ತಪ್ಪು ಕಲ್ಪನೆಗಳಿಗೆ ಒಳಗಾಗುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಶುಭವಾಗಲಿದ್ದು, ಶಿಕ್ಷಣದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ….

Read More

ಕಾರ್ಖಾನೆ ಸ್ಥಳಾಂತರದ ವೇಳೆ ಅವಘಡ: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವು – Kannada News | Mandya Chemical Tank Explosion: 2 Workers Dead During Kirti Factory Relocation

ಕೆಮಿಕಲ್ ಟ್ಯಾಂಕ್ ಸ್ಫೋಟImage Credit source: Tv9 Kannada ಮಂಡ್ಯ/ ಬೆಂಗಳೂರು, ಫೆಬ್ರವರಿ 15: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಂಡ್ಯದ ಬಸರಾಳು ಸಮೀಪದ ಕಾರೆಕಟ್ಟೆ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ನಡೆದಿದೆ. ಬಿಹಾರ ಮೂಲದ ಕಾರ್ಮಿಕರು ಕಾರೆಕಟ್ಟೆಯಿಂದ‌ ಬೇರೆ ಕಡೆಗೆ ಕಾರ್ಖಾನೆ ಶಿಫ್ಟ್​​ ಮಾಡುತ್ತಿದ್ದ ವೇಳೆ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸ್ಥಳಾಂತರ ಕೆಲಸ ಕಳೆದ ಒಂದು ತಿಂಗಳಿಂದಲೂ ನಡೆಯುತ್ತಿತ್ತು ಎನ್ನಲಾಗಿದ್ದು, ಇಂದು ಕಾರ್ಮಿಕರು ರಾಸಾಯನಿಕ ಟ್ಯಾಂಕ್​​…

Read More

IND vs PAK ಪಂದ್ಯದ ಫಲಿತಾಂಶ ನಿರ್ಧರಿಸಲು 30 ಎಸೆತಗಳನ್ನು ಎಸೆಯಲೇಬೇಕು..! – Kannada News | India vs Pakistan: 5 overs per side are required for a result

T20 World Cup 2026: ಟಿ20 ವಿಶ್ವಕಪ್​​ನ 28ನೇ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಭಾನುವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾದರೆ ಫಲಿತಾಂಶ ನಿರ್ಧರಿಸಲು ಡಕ್​ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಿದ್ದಾರೆ. ಆದರೆ ಡಕ್​​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ದ್ವಿತೀಯ ಇನಿಂಗ್ಸ್ ಆಡುವ ತಂಡವು ಕನಿಷ್ಠ 5 ಓವರ್​​ಗಳನ್ನು…

Read More

ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ – Kannada News | Trusted Tech Alliance formed by 15 companies, including Jio, Anthropic, Ericsson

ನವದೆಹಲಿ, ಫೆಬ್ರುವರಿ 15: ಎಐ ಸೆಕ್ಟರ್ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಂತೆಯೇ ಜಾಗತಿಕವಾಗಿ ಸಹಭಾಗಿತ್ವ, ಹೊಂದಾಣಿಕೆ, ಮೈತ್ರಿಗಳು ಏರ್ಪಡುವ ಟ್ರೆಂಡ್ ಶುರುವಾದಂತಿದೆ. ಜಿಯೋ ಪ್ಲಾಟ್​ಫಾರ್ಮ್ಸ್ನಿಂದ (Jio Platforms) ಹಿಡಿದು ಆಂಥ್ರೋಪಿಕ್​ವರೆಗೆ 15 ಕಂಪನಿಗಳು ಗುಂಪು ಮಾಡಿಕೊಂಡಿವೆ. ಸೆಮಿಕಂಡಕ್ಟರ್​ನಿಂದ ಹಿಡಿದು ಕ್ಲೌಡ್ ಇನ್​ಫ್ರಾಸ್ಟ್ರಕ್ಚರ್​ವರೆಗೆ ಎಐ ಸಂಬಂಧಿತ ಕ್ಷೇತ್ರಗಳಲ್ಲಿರುವ ಈ ಕಂಪನಿಗಳು ಒಟ್ಟಿಗೆ ಸೇರಿ ಟ್ರಸ್ಟೆಡ್ ಟೆಕ್ ಅಲಾಯನ್ಸ್ (Trusted Tech Alliance- ವಿಶ್ವಾಸೀ ತಂತ್ರಜ್ಞಾನ ಮೈತ್ರಿ) ಕೂಟ ರಚಿಸಿವೆ. ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್​ನಲ್ಲಿ (Munich Security…

Read More

Solar Eclipse 2026: ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ? – Kannada News | Solar Eclipse 2026: What Kumbha Rashi Can Expect, According to Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಕುಂಭ ರಾಶಿಯಲ್ಲಿ ಜನ್ಮ ಗ್ರಹಣವಾಗಿ ಸಂಭವಿಸುತ್ತಿದ್ದು, ಈ ರಾಶಿಯವರಿಗೆ ಡಾ. ಬಸವರಾಜ ಗುರೂಜಿ ಅವರು ಕೆಲವು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಧನಿಷ್ಠಾ, ಶತಭಿಷಾ, ಮತ್ತು ಪೂರ್ವಾಭಾದ್ರಾ ನಕ್ಷತ್ರದವರು, ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ಜಾಗ್ರತರಾಗಿರಬೇಕು. ಈ ಅವಧಿಯಲ್ಲಿ ದೇಹದಲ್ಲಿ ಅನಗತ್ಯ ಬದಲಾವಣೆಗಳು, ಬೇಕಾದವರು ದೂರವಾಗುವುದು, ಆರ್ಥಿಕ ನಿರ್ಧಾರಗಳಲ್ಲಿ ಗೊಂದಲ ಮತ್ತು ಅಧಿಕಾರದಲ್ಲಿ ಹಿನ್ನಡೆ ಸಂಭವಿಸಬಹುದು. ಮಧ್ಯಾಹ್ನ 3:26 ರಿಂದ ಸಂಜೆ 7:50ರವರೆಗೆ ಪ್ರಯಾಣಿಸುವುದು ಶುಭವಲ್ಲ, ವಿಶೇಷವಾಗಿ ಗರ್ಭಿಣಿಯರು, ವೃದ್ಧರು, ಅಸಹಾಯಕರು, ಮತ್ತು ಮಾನಸಿಕ…

Read More

ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ – Kannada News | Tragedy During Maternity Photoshoot: Three Year Old Child Drowns After Falling into Water

ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾವುImage Credit source: Tv9 Kannada ನೆಲಮಂಗಲ/ಚಿಕ್ಕಮಗಳೂರು, ಫೆಬ್ರವರಿ 15: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್ (3) ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು,…

Read More

Solar Eclipse 2026: ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Solar Eclipse 2026: Astrological Impact on Capricorn by Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಮಕರ ರಾಶಿಯವರ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಈ ಗ್ರಹಣವು ಮಕರ ರಾಶಿಯವರ ದ್ವಿತೀಯ ಸ್ಥಾನ, ಅಂದರೆ ವಾಕ್, ಧನ ಮತ್ತು ಕುಟುಂಬ ಸ್ಥಾನದಲ್ಲಿ ಸಂಭವಿಸಲಿದೆ. ಇದು ಶುಭ ಮತ್ತು ಅಶುಭ ಮಿಶ್ರಿತ ಫಲಗಳನ್ನು ನೀಡಲಿದ್ದು, 70% ಎಚ್ಚರಿಕೆ ಮತ್ತು 30% ಶುಭ ಫಲಗಳ ಸಾಧ್ಯತೆ ಇದೆ. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅವಸರದ ಹೂಡಿಕೆಗಳಿಂದ ನಷ್ಟವಾಗಬಹುದು. ಮಾತಿನಿಂದ ಸಮಸ್ಯೆಗಳು…

Read More