Headlines

ರಾಜೀವ್​​ ಗೌಡ ವಿರುದ್ಧ ಮತ್ತೊಂದು ಆರೋಪ: ತಹಶೀಲ್ದಾರ್​​ಗೂ ನಿಂದಿಸಿದ್ದನಾ ‘ಕೈ’ ಮುಖಂಡ? – Kannada News | New Allegation Against Rajeev Gowda: Congress Leader Accused of Abusing Shidlaghatta Tahsildar

ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಕಾಂಗ್ರೆಸ್​​ ಮುಖಂಡ ರಾಜೀವ್ ಗೌಡ ವಿರುದ್ಧ ಇಂತಹುದ್ದೇ ಮತ್ತೊಂದು ಆರೋಪ ಕೇಳಿಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದಿಸಿದ್ದ ಎನ್ನಲಾಗಿದ್ದು, ಆದರೆ ತಾನು ಆಡಿಯೋ ರೆಕಾರ್ಡ್​​ ಮಾಡಿಕೊಂಡಿಲ್ಲ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಆಯುಕ್ತೆ ಅಮೃತಾ, ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಬಳಿ ಅವರು ಅಳಲು ತೋಡಿಕೊಂಡಿದ್ದಾರೆ. ಆರೋಪಿಗಾಗಿ 3…

Read More

Puja Room Vastu: ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಇಡಲೇಬೇಡಿ; ಸಮಸ್ಯೆ ತಪ್ಪಿದ್ದಲ್ಲ! – Kannada News | Puja Room Vastu: Avoid These 5 Things for Positive Energy and Harmony at Home

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನೆ ನಿರ್ಮಾಣದಿಂದ ವಸ್ತುಗಳ ಜೋಡಣೆಯ ವರೆಗೂ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳಿವೆ. ಇದಲ್ಲದೆ, ಮನೆಯಲ್ಲಿರುವ ಪೂಜಾ ಕೊಠಡಿಗೆ ಸಂಬಂಧಿಸಿದ ವಿಷಯಗಳನ್ನು ವಾಸ್ತು ಸ್ಪಷ್ಟಪಡಿಸಿದೆ. ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಮುರಿದ ವಿಗ್ರಹ: ಪೂಜಾ ಕೊಠಡಿಯಲ್ಲಿ ಎಂದಿಗೂ ಮುರಿದ ದೇವರ ವಿಗ್ರಹಗಳನ್ನು ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂಜಾ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಪೂಜಿಸುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ,…

Read More

2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ – Kannada News | India’s exports to China rise almost 9pc in 2025, as bilateral trade reach all time high

ನವದೆಹಲಿ, ಜನವರಿ 15: ಕಳೆದ ವರ್ಷ ಚೀನಾ ದೇಶಕ್ಕೆ (China) ಭಾರತದ ರಫ್ತು ಸಖತ್ ಏರಿದೆ. 2024ರ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಚೀನಾಗೆ ಭಾರತದ ರಫ್ತು 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಿದೆ. 2024ರಲ್ಲಿ ಭಾರತವು ಚೀನಾಗೆ 14.25 ಬಿಲಿಯನ್ ಡಾಲರ್​​ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಭಾರತದ ರಫ್ತು 19.75 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಅಂದರೆ, ರಫ್ತಿನಲ್ಲಿ ಶೇ. 8.7ರಷ್ಟು ಏರಿಕೆ ಆಗಿದೆ. ಚೀನಾದಿಂದ ಇನ್ನೂ ಹೆಚ್ಚು ಆಮದು… ಚೀನಾಗೆ ಭಾರತದ ರಫ್ತು ಹೆಚ್ಚಿದೆಯಾದರೂ, ಅದಕ್ಕಿಂತ ಹೆಚ್ಚಳ…

Read More

Daily Devotional: ಶನಿ ಇತರೆ ಗ್ರಹಗಳೊಂದಿಗೆ ಸಂಯೋಗಗೊಂಡಾಗ ಯಾವ ಖಾಯಿಲೆ ಬರುತ್ತೆ ಗೊತ್ತಾ? – Kannada News | Saturns Influence: Health Issues Arising from Conjunctions with Other Planets

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಸಂಚಾರ ಮತ್ತು ಇತರೆ ಗ್ರಹಗಳೊಂದಿಗಿನ ಸಂಯೋಗವು ಮನುಷ್ಯನ ಜೀವನದಲ್ಲಿ ಆರೋಗ್ಯ, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿ ಸೇರಿದಂತೆ ಹಲವು ಅಂಶಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಶನಿಗ್ರಹವು ಒಂದು ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಸ್ಥಿತವಾಗಿರುತ್ತದೆ. ಈ ಅವಧಿಯಲ್ಲಿ ಇತರ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ಫಲಗಳು ಮತ್ತು ಅನಾರೋಗ್ಯ ಸಮಸ್ಯೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ…

Read More

ಸಹೋದರರ ಸಹಾಯದಿಂದ ಪತ್ನಿಯ ಕೊಂದು ರುಂಡ ಕತ್ತರಿಸಿ ಡ್ರಮ್​ನಲ್ಲಿಟ್ಟ ಪತಿ – Kannada News | Property Row Turns Fatal in UP as Woman Killed by In Laws

ಫಿರೋಜಾಬಾದ್, ಜನವರಿ 15: ಆಸ್ತಿ ವಿವಾದ ಪತ್ನಿಯನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದೆ. ಪತಿಯೊಬ್ಬ ತನ್ನ ಸಹೋದರರ ಸಹಾಯದಿಂದ ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಮೂವರು ಸಹೋದರರ ಸಹಾಯದಿಂದ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬಳಿಕ ರುಂಡವನ್ನು ಡ್ರಮ್​ನಲ್ಲಿರಿಸಿದ್ದ. ಆರೋಪಿಗಳು ಹರಿತವಾದ ಆಯುಧವನ್ನು ಬಳಸಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಯ ಮೇಲಿನ ಭಾಗವನ್ನು ಡ್ರಮ್‌ನೊಳಗೆ ಬಚ್ಚಿಟ್ಟು, ಮುಂಡವನ್ನು ಮನೆಯೊಳಗೆ…

Read More

ಇಂದು ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು? ಅರ್ಚಕ ಸೋಮಸುಂದರ ದೀಕ್ಷಿತ್ ಹೇಳಿದ್ದೇನು ನೋಡಿ – Kannada News | Sun Rays Touch Shiva Linga at Gavi Gangadhareshwara Swamy Temple Today: Significance Explained

ಬೆಂಗಳೂರು, ಜನವರಿ 15: ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಈ ದಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಸೂರ್ಯದೇವನ ರಶ್ಮಿಯು ದೇಗುಲದ ಒಳಗಿರುವ ಶಿವಲಿಂಗವನ್ನು ಸಂಜೆ 5 ಗಂಟೆ 2 ನಿಮಿಷಕ್ಕೆ ಸ್ಪರ್ಶಿಸಲಿದೆ ಎಂದು ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ. ಜತೆಗೆ, ಈ ಅಪರೂಪದ ವಿದ್ಯಮಾನದ ಧಾರ್ಮಿಕ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಇದು ಅತ್ಯಂತ ವಿಶಿಷ್ಟವಾದ…

Read More

ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ – Kannada News | The connection between Gilli Biriyani and Rajinikanth here is the story

ಬಿಗ್​​ಬಾಸ್ (Bigg Boss) ಫಿನಾಲೆ ಹತ್ತಿರದಲ್ಲಿದೆ. ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು, ಗಿಲ್ಲಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದಾರೆ. ಹೊರಗೆ ಗಿಲ್ಲಿಗೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಗಿಲ್ಲಿ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​​ಗಳು, ಹಾಡುಗಳು ಸಹ ಹರಿದಾಡುತ್ತಿವೆ. ಗಿಲ್ಲಿ ಹೆಸರಲ್ಲಿ ಆಟೋ ಸೇವೆಯನ್ನು ಉಚಿತವಾಗಿ ಕೊಡುವುದಾಗಿ ಕೆಲ ಆಟೋ ಡ್ರೈವರ್​ಗಳು ಘೋಷಣೆ ಮಾಡಿದ್ದಾರೆ. ಒಟ್ಟಾರೆ ಗಿಲ್ಲಿ ಕ್ರೇಜ್ ಜೋರಾಗಿದೆ. ಅಂದಹಾಗೆ ಗಿಲ್ಲಿ ಹೆಸರಲ್ಲಿ ಬಿರಿಯಾನಿ ಸಹ ಇದೆಯೆಂಬುದು ನಿಮಗೆ ಗೊತ್ತೆ? ಆದರೆ ಈ ‘ಗಿಲ್ಲಿ ಬಿರಿಯಾನಿ’…

Read More

Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಹೊಸ ದಾಖಲೆ – Kannada News | Gold Price Today on 15th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 15: ಚಿನ್ನದ ಬೆಲೆ ಗುರುವಾರ ತುಸು ಇಳಿಕೆಗೊಂಡಿದೆ. ಆದರೆ, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿದಿದೆ. ಇದರ ಬೆಲೆ ಇಂದು ಗ್ರಾಮ್​ಗೆ 3ರಿಂದ 5 ರೂವರೆಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 29,500 ರೂ ಮುಟ್ಟಿದೆ. ಕೆಲ ನಗರಗಳಲ್ಲಿ ಇದರ ಬೆಲೆ 31,000 ರೂಗೆ ಏರಿ ಹೋಗಿದೆ. ಚಿನ್ನದ ಬೆಲೆ (Gold Rates) ಭಾರತದಲ್ಲಿ ಗ್ರಾಮ್​ಗೆ ಸುಮಾರು 40 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಮಿಶ್ರ ಫಲ ನೀಡಿದ್ದ ಏರಿಳಿತಗಳು ದಾಖಲಾಗಿವೆ….

Read More

Indian Army Day 2026: ಭಾರತೀಯ ಸೇನೆಯ ಅದಮ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು – Kannada News | Indian Army Day 2026: Why is Indian Army Day celebrated? Here is the information

ನಾವು ದೇಶದೊಳಗೆ ಸುರಕ್ಷಿತವಾಗಿ, ಭಯಮುಕ್ತವಾಗಿ ವಾಸಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ವೀರ ಯೋಧರು (Soldiers). ಎಂತಹ ಅಪಾಯ ಎದುರಾದರೂ ಸಹ, ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಹೆಮ್ಮೆಯ ಸೈನಿಕರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ಒಟ್ಟಾರೆಯಾಗಿ ಯೋಧರು ಮತ್ತು ಭಾರತೀಯ ಸೇನೆಯನ್ನು ದೇಶದ ಭದ್ರತೆಯ ಬೆನ್ನೆಲುಬು ಅಂತಾನೇ ಹೇಳಬಹುದು. ಭಾರತೀಯ ಸೇನೆಯ ಈ ಅದಮ್ಯ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರನ್ನು ಸ್ಮರಿಸಲು ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು…

Read More

ಗೋಶಾಲೆಗಾಗಿ ಲಕ್ಷಾಂತರ ಹಣ ದೇಣಿಗೆ ನೀಡಿದ ನಟ – Kannada News | Sonu Sood donates 22 lakh rs to cow shelter in Gujarat

ಸೋನು ಸೂದ್ (Sonu Sood), ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ವಿಲನ್ ಪಾತ್ರದಲ್ಲಿ ಆದರೆ ನಿಜ ಜೀವನದಲ್ಲಿ ಅಪ್ಪಟ ಹೀರೋ. ಸೋನು ಸೂದ್ ಅವರು ಕೋವಿಡ್ ಸಮಯದಲ್ಲಿ ಮಾಡಿದ ಸೇವೆ ಲಕ್ಷಾಂತರ ಜನರಿಗೆ ಸಹಾಯ ಆಗಿತ್ತು. ಆಗ ಅವರನ್ನು ‘ಮಸೀಹ’ (ದೇವರು) ಎಂದು ಕರೆದಿದ್ದರು ದೇಶದ ಜನ. ಕೋವಿಡ್ ಬಳಿಕವೂ ಸೋನು ಸೂದ್ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದು, ನಾನಾ ರೀತಿಯ ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಸೋನು ಸೂದ್ ಅವರು ಗೋಸೇವೆಗೂ ಇಳಿದಿದ್ದು, ಗೋಶಾಲೆಗೆ ಲಕ್ಷಾಂತರ…

Read More