ಹಬ್ಬದ ದಿನವೇ ಪ್ರಯಾಣಿಕರಿಗೆ ಶುಭ ಸುದ್ದಿ ಕೊಟ್ಟ ನಮ್ಮ ಮೆಟ್ರೋ: ಇಂದಿನಿಂದ ಕ್ಯೂಆರ್ ಆಧಾರಿತ ಪಾಸ್ ಲಭ್ಯ – Kannada News | BMRCL Introduces QR Code Passes for Unlimited Metro Travel from Today
ಬೆಂಗಳೂರು, ಜನವರಿ 15: ಸಂಕ್ರಾಂತಿ ಹಬ್ಬದ ದಿನವೇ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್ ಆಧಾರಿತ ದಿನ, ಮೂರು ದಿನ ಮತ್ತು 5 ದಿನಗಳ ಪಾಸ್ ಲಭ್ಯವಿರಲಿದೆ. 1, 3, 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ನ BMRCL ಪರಿಚಯಿಸಿದ್ದು, ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟುದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು. ಅದಕ್ಕಾಗಿ ಭದ್ರತಾ ಠೇವಣಿ 50…