ಚಿಕನ್ ನೆಕ್ ಕಾರಿಡಾರ್ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ – Kannada News | West Bengal CM Suvendu Adhikari Governmet decided to transfer 120 Acres In Chicken Neck Corridor To Centre
ಕೊಲ್ಕತ್ತಾ, ಮೇ 19: ಪಶ್ಚಿಮ ಬಂಗಾಳ ಸರ್ಕಾರವು ಸಿಲಿಗುರಿ ಕಾರಿಡಾರ್‌ನಲ್ಲಿರುವ (Siliguri Corridor) 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ “ಚಿಕನ್ ನೆಕ್” (Chicken Neck Corridor) ಕಾರಿಡಾರ್ ಉದ್ದಕ್ಕೂ ಭದ್ರತೆ, ಗಡಿ ಬೇಲಿ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಹಿರಿಯ ಬಿಎಸ್ಎಫ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಸಿಲಿಗುರಿ ಕಾರಿಡಾರ್ ಭಾರತದ ಈಶಾನ್ಯ ರಾಜ್ಯಗಳನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಕಿರಿದಾದ, 20-22…