ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ – Kannada News | Punjabi singer Inder Kaur kidnapped found dead in Ludhiana Canal Case Details
ಕಳೆದ 6 ದಿನಗಳ ಹಿಂದೆ 29 ವರ್ಷದ ಪಂಜಾಬಿ ಗಾಯಕಿ ಇಂದರ್ ಕೌರ್ (Inder Kaur) ಅವರಿಗೆ ಗನ್ ತೋರಿಸಿ ಅಪಹರಣ ಮಾಡಲಾಗಿತ್ತು. ಈಗ ಪಂಜಾಬ್ನ ಲೂಧಿಯಾನದ ಕಾಲುವೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ಮೇ 19) ಮುಂಜಾನೆ ಸ್ಥಳೀಯ ಪೊಲೀಸರು ನೀಲೋ ಕಾಲುವೆಯಿಂದ ಗಾಯಕಿಯ (Punjabi Singer) ಶವವನ್ನು ಹೊರತೆಗೆದಿದ್ದಾರೆ. ಸುಖ್ವಿಂದರ್ ಸಿಂಗ್ ಎಂಬಾತ ಇಂದರ್ ಕೌರ್ ಅವರನ್ನು ಮದುವೆಯಾಗುವಂತೆ ತೀವ್ರ ಒತ್ತಾಯ ಹೇರುತ್ತಿದ್ದರಿಂದ ಆತನ ಮೇಲೆಯೇ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಮೇ 13ರಂದು ರಾತ್ರಿ…