ಅಸ್ಸಾಂ ಮೂಲದ ಕಾರ್ಮಿಕನ ಸಾವಿಗೆ ಸಿನಿಮೀಯ ಟ್ವಿಸ್ಟ್: ಮಗನಿಂದಲೇ ತಂದೆಯ ಹತ್ಯೆ! – Kannada News | Drunken Brawl Leads to Son Killing Father in Madikeri
ಮಡಿಕೇರಿ, ಜನವರಿ 15: ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಭಾನುವಾರ ಅಸಹಜ ಸಾವಿನ ಪ್ರಕರಣವೊಂದು ನಡೆದಿತ್ತು. ಅಸ್ಸಾಂ ಮೂಲದ ಕಾರ್ಮಿಕ ಬೂನೋ ಎಂಬಾತ ಮೃತಪಟ್ಟಿದ್ದು, ಬಿದ್ದು ಗಾಯಗೊಂಡ ಕಾರಣ ಆತ ಇಹಲೋಕ ತ್ಯಜಿಸಿರೋದಾಗಿ ಹೇಳಲಾಗಿತ್ತು. ಹೀಗಾಗಿ ಆತನ ಅಂತ್ಯ ಸಂಸ್ಕಾರವನ್ನೂ ಮಕ್ಕಳು ಮತ್ತು ಆತ ಕೆಲಸಕ್ಕಿದ್ದ ಎಸ್ಟೇಟ್ ಮಾಲೀಕ ಸೇರಿ ನಡೆಸಿದ್ದರು. ಆದರೆ ಕಾರ್ಮಿಕನ ಸಾವಿನ ಬಗ್ಗೆ ಊರಿನವರಿಗೆ ಮೂಡಿದ್ದ ಅನುಮಾನವೀಗ ಇಡೀ ಪ್ರಕರಣದ ದಿಕ್ಕನ್ನೇ ಬದಲಾಯಿಸಿದೆ. ಬೂನೋದು ಅಸಹಜ ಸಾವಲ್ಲ ಬದಲಾಗಿ ಮರ್ಡರ್…