Category Archives: Blog

Your blog category

ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಮಾರಾಮಾರಿ: ಕಲ್ಲು ತೂರಾಟ, ಮನೆ ಧ್ವಂಸ – Kannada News | Belagavi Valmiki Bhavan Clash: Land Dispute Sparks Violence and Stone Pelting in Deshanur

ಬೆಳಗಾವಿ, ಜನವರಿ 15: ಸರ್ಕಾರಿ ಜಾಗದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದಿದೆ. ಘಟನೆ ವೇಳೆ ಕಲ್ಲು ತೂರಾಟ ಕೂಡ ನಡೆದಿದ್ದು, ಸಮಯಕ್ಕೆ ಸರಿಯಾಗಿ ಪೊಲೀಸರ ಮಧ್ಯ ಪ್ರವೆಶದಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆ ಸಂಬಂಧ ದೂರು ಮತ್ತು ಪ್ರತಿದೂರುಗಳು ದಾಖಲಾಗಿವೆ.

ವಾಲ್ಮೀಕಿ ಭವನ ನಿರ್ಮಾಣ ಸಂಬಂಧ ಸರ್ವೇ ಕಾರ್ಯಕ್ಕೆ ಬಂದ ವೇಳೆ ಎಸ್ಸಿ ಅವರ ಮನೆ ಬಳಿ ಇವೆಲ್ಲ ಯಾಕೆ ಎಂದು ಗ್ರಾಮದ ಸದಾಶಿವ ಭಜಂತ್ರಿ ಕುಟುಂಬ ತಕರಾರು ತೆಗೆದಿದೆ. ಇದೇ ವಿಚಾರಕ್ಕೆ ವಾಗ್ವಾದ ಕೂಡ ಆರಂಭವಾಗಿದ್ದು, ಆರಂಭದಲ್ಲಿ ಭಜಂತ್ರಿ ಕುಟುಂಬದವರು ಎಸ್ಟಿ ಸಮುದಾಯದವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಸಮುದಾಯದ ಜನರು ಗುಂಪು ಕಟ್ಟಿಕೊಂಡು ಬಂದು ಸದಾಶಿವ ಭಜಂತ್ರಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಅಡಗಿ ಕುಳಿತರೂ ಬಿಡದೆ ಮನೆ ಮೇಲೆ ಕಲ್ಲು ತೂರಿ, ಕಟ್ಟಿಗೆಯಿಂದ ಬಾಗಿಲಿಗೆ ಹೊಡೆದು ಅವುಗಳನ್ನು ಮುರಿದ್ದಾರೆ. ಈ ವೇಳೆ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಜೊತೆಗೆ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಕೂಡ ಹಾಕಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ

ಅಷ್ಟಕ್ಕೂ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗ ಭಜಂತ್ರಿ ಕುಟುಂಬಕ್ಕೆ ಸೇರಿದ್ದಲ್ಲ. ಸರ್ಕಾರಿ ಗೈರಾಣು ಜಾಗದಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದರೂ ವಿರೋಧ ಮಾಡ್ತಿರೋದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಬಂದ ನೇಸರಗಿ ಠಾಣೆ ಪೊಲೀಸರು ಹೆಚ್ಚಿನ ಅನಾಹುತ ತಡೆಯುವಲ್ಲಿ ಸಫಲರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಸ್ಪಿ ಕೆ. ರಾಮರಾಜನ್ ಕೂಡ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ.

ಇನ್ನು ಗಲಾಟೆ ಹಿನ್ನೆಲೆ ಬಿಗಿ ಪೊಲೀಸ್​​ ಬಂದೋಬಸ್ತ್​​ ಕೈಗೊಳ್ಳಲಾಗಿದ್ದು, ಎರಡು ಕೆಎಸ್ಆರ್​​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಹೀಗಿದ್ದರೂ ಪೊಲೀಸರ ಸಮ್ಮುಖದಲ್ಲೇ ಉದ್ರಿಕ್ತರು ಸದಾಶಿವ ಭಜಂತ್ರಿ ವಿರುದ್ದ ಕ್ರಮ ಆಗಬೇಕು ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಕಡೆಯಿಂದ ದೂರು ಪ್ರತಿ ದೂರು ದಾಖಲಾಗಿದ್ದು, ಗಲಾಟೆಯ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ. ಗ್ರಾಮದ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

T20 World Cup 2026: ಕೆನಡಾ ಟಿ20 ವಿಶ್ವಕಪ್ ತಂಡದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ – Kannada News | Canada’s T20 World Cup 2026 Squad Announced: Dilpreet Bajwa Captains, Ansh Patel In

ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗಾಗಿ ಕೆನಡಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಿಂಗಳ ಕೊನೆಯಲ್ಲಿ 23ನೇ ವಸಂತಕ್ಕೆ ಕಾಲಿಡುವ ದಿಲ್‌ಪ್ರೀತ್ ಬಾಜ್ವಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.ಕೆನಡಾ ತಂಡವು ಎಲ್ಲಾ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಆವೃತ್ತಿಯ ಐಸಿಸಿ ಪುರುಷರ ಟಿ20 ವಿಶ್ವಕಪ್ ಅಮೆರಿಕಾಸ್ ಪ್ರಾದೇಶಿಕ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಟಿ20 ವಿಶ್ವಕಪ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ.

ಈ ತಂಡದಲ್ಲಿ ಬರೋಡಾ ಪರ ದೇಶೀಯ ಕ್ರಿಕೆಟ್ ಆಡಿದ್ದ ಅಂಶ್ ಪಟೇಲ್ ಕೂಡ ಇದ್ದಾರೆ. ಐಪಿಎಲ್ 2022 ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 20 ಲಕ್ಷಕ್ಕೆ ಖರೀದಿಸಿತು. ಆದಾಗ್ಯೂ, ಅವರಿಗೆ ಆಡಲು ಅವಕಾಶ ಸಿಗಲಿಲ್ಲ , ಮುಂದಿನ ಆವೃತ್ತಿಗೂ ಮುನ್ನ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಕಳೆದ ವರ್ಷ ಕೆನಡಾ ಪರ ಪಾದಾರ್ಪಣೆ ಮಾಡಿದ ಅಂಶ್, ಎರಡು ಏಕದಿನ ಮತ್ತು ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ, ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಪ್ರತಿ ವಿಕೆಟ್‌ಗೆ ಸರಾಸರಿ 7 ರನ್‌ಗಳಂತೆ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಕೆನಡಾ ತಂಡವು ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಯುಎಇ ಜೊತೆಗೆ ಗ್ರೂಪ್ ಡಿಯಲ್ಲಿ ಸ್ಥಾನ ಪಡೆದಿದೆ. ಕೆನಡಾ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 9 ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ನಂತರ ಯುಎಇ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದು ಕೆನಡಾದ ಎರಡನೇ ಟಿ20 ವಿಶ್ವಕಪ್ ಆಗಿದ್ದು , ಈ ಹಿಂದೆ 2024 ರ ಆವೃತ್ತಿಯಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತ್ತು.

ಕೆನಡಾದ ವೇಳಾಪಟ್ಟಿ

ಕೆನಡಾ vs ದಕ್ಷಿಣ ಆಫ್ರಿಕಾ: ಫೆಬ್ರವರಿ 9

ಕೆನಡಾ vs ಯುಎಇ: ಫೆಬ್ರವರಿ 13

ಕೆನಡಾ vs ನ್ಯೂಜಿಲೆಂಡ್: ಫೆಬ್ರವರಿ 17

ಕೆನಡಾ vs ಅಫ್ಘಾನಿಸ್ತಾನ: ಫೆಬ್ರವರಿ 19

ಟಿ20 ವಿಶ್ವಕಪ್​ಗೆ ಕೆನಡಾ ತಂಡ

ದಿಲ್‌ಪ್ರೀತ್ ಬಾಜ್ವಾ (ನಾಯಕ), ಅಜಯ್‌ವೀರ್ ಹುಂದಾಲ್, ಅಂಶ್ ಪಟೇಲ್, ದಿಲನ್ ಹೇಳೈಗರ್, ಹರ್ಷ್ ಠಾಕರ್, ಜಸ್ಕರನ್‌ದೀಪ್ ಬಟ್ಟಾರ್, ಕಲೀಮ್ ಸನಾ, ಕನ್ವರ್‌ಪಾಲ್ ತತ್‌ಗುರ್, ನವನೀತ್ ಧಲಿವಾಲ್, ನಿಕೋಲಸ್ ಕಿರ್ಟನ್, ರವೀಂದರ್‌ಪಾಲ್ ಸಿಂಗ್, ಸಾದ್ ಬಿನ್ ಜಾಫರ್, ಶಿವಂ ಶರ್ಮಾ, ಶ್ರೇಯಸ್ ಮೊವ್ವಾ, ಯುವರಾಜ್ ಸಾಮ್ರಾ.

Source link

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ, ಅದರಲ್ಲೂ ಇವೆ ಲೆಕ್ಕವಿಲ್ಲದಷ್ಟು ಪ್ರಯೋಜನ – Kannada News | You must know about the benefits of orange peel

ಕಿತ್ತಳೆ ಹಣ್ಣಿನ ಸಿಪ್ಪೆImage Credit source: vecteezy

ವಿಟಮಿನ್‌ ಸಿ, ವಿಟಮಿನ್‌ ಎ, ವಿಟಮಿನ್‌ ಬಿ, ಉತ್ಕರ್ಷಣ ನಿರೋಧಕಗಳು, ಅಮೂನO ಆಮ್ಲಗಳು, ಕ್ಯಾಲ್ಸಿಯಂ, ಅಯೋಡಿನ್‌, ರಂಜಕ, ಫೈಬರ್‌ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿತ್ತಳೆ  ಹಣ್ಣು (orange) ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಹೆಚ್ಚಿನ ಜನರು ಈ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಏನು ಗೊತ್ತಾ, ಕಿತ್ತಳೆ ಹಣ್ಣಿನಂತೆ, ಇದರ ಸಿಪ್ಪೆ ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದ್ದು,  ಇವು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಪ್ರಯೋಜನಕಾರಿ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಅದರ ಪುಡಿಯನ್ನು ಬಳಸಿ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ನೀವು ಗಿಡಮೂಲಿಕೆ ಚಹಾವನ್ನು ತಯಾರಿಸಿ ಕುಡಿಯಬಹುದು. ಹಾಗಿದ್ರೆ ಕಿತ್ತಳೆ ಹಣ್ಣಿನ ಸಿಪ್ಪೆಯ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಕಿತ್ತಳೆ ಹಣ್ಣಿನ ಸಿಪ್ಪೆಯ ಪ್ರಯೋಜನಗಳೇನು?

ಜೀರ್ಣಕ್ರಿಯೆಗೆ ಸಹಕಾರಿ: ಕಿತ್ತಳೆ ಸಿಪ್ಪೆಗಳು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಪರಿಣಾಮಕಾರಿ. ಅವುಗಳಲ್ಲಿ ಫೈಬರ್ ಇದ್ದು, ಇದು ಮಲಬದ್ಧತೆ, ಅಜೀರ್ಣ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಕಿತ್ತಳೆ ಸಿಪ್ಪೆಗಳನ್ನು ಅಥವಾ ಅದರ ಪುಡಿಯನ್ನು ನೀರಿನೊಂದಿಗೆ ಕುಡಿಯಬಹುದು.

ತಲೆಹೊಟ್ಟು ನಿವಾರಣೆ: ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ:  ಕಿತ್ತಳೆ ಸಿಪ್ಪೆಯ ಪುಡಿಯನ್ನು ಚರ್ಮಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿಡುತ್ತದೆ. ಇದು ಚರ್ಮದ ಎಣ್ಣೆಯನ್ನು ನಿಯಂತ್ರಿಸುತ್ತದೆ ಮತ್ತು ಅದರ ವಯಸ್ಸಾದ ವಿರೋಧಿ ಗುಣಗಳಿಂದಾಗಿ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯ ಹೆಚ್ಚಳ: ಕಿತ್ತಳೆ ಹಣ್ಣಿನಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ಸಿ ಇರುತ್ತದೆ, ಅದೇ ರೀತಿ ಅದರ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಇರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೀವು ಕಿತ್ತಳೆ ಸಿಪ್ಪೆಯಿಂದ ಚಹಾ ತಯಾರಿಸಿ ಪ್ರತಿದಿನ ಕುಡಿಯಬಹುದು.

ತೂಕ ಇಳಿಸಿಕೊಳ್ಳಲು ಸಹಕಾರಿ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಿತ್ತಳೆ ಸಿಪ್ಪೆಯಿಂದ ಚಹಾ ತಯಾರಿಸಿ ಕುಡಿಯಬಹುದು. ಈ ಸಿಪ್ಪೆಯಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಕೈ ಕಾಲುಗಳನ್ನು ಸ್ವಚ್ಛಗೊಳಿಸುತ್ತದೆ: ಕಿತ್ತಳೆ ಸಿಪ್ಪೆಯನ್ನು ಕೈಕಾಲು ಶುಚಿಗೊಳಿಸುವಿಕೆಗೂ ಬಳಸಬಹುದು. ಈ ಸಿಪ್ಪೆಯು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕೈ ಮತ್ತು ಪಾದಗಳನ್ನು ಸ್ವಚ್ಛಗೊಳಿಸಲು ನೀವು ಕಿತ್ತಳೆ ಸಿಪ್ಪೆಯನ್ನು ಪಾದಗಳ ಮೇಲೆ ಉಜ್ಜಿ ಮೇಲೆ ಉಜ್ಜಬಹುದು, ಇದರಿಂದ ನಿಮ್ಮ ಚರ್ಮವು ಮೃದು ಮತ್ತು ಸುಂದರವಾಗಿರುತ್ತದೆ. ಕಿತ್ತಳೆ ಸಿಪ್ಪೆಯಿಂದ ತಯಾರಿಸಿದ ನೈಸರ್ಗಿಕ ಸ್ಕ್ರಬ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.

ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ: ಕಿತ್ತಳೆ ಸಿಪ್ಪೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ಸಿಪ್ಪೆಯನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆಯೂ ನಿವಾರಣೆಯಾಗುತ್ತದೆ. ಹೆಚ್ಚುವರಿಯಾಗಿ, ಕಿತ್ತಳೆ ಸಿಪ್ಪೆಯಿಂದ ತಯಾರಿಸಿದ ಬಾಯಿ ಮುಕ್ಕಳಿಸುವ ದ್ರವ ಗಂಟಲಿನ ಸಮಸ್ಯೆಗಳನ್ನು ಸಹ ಶಮನಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿದಿನ 15 ನಿಮಿಷ ಬಿಡುವು ಮಾಡಿಕೊಂಡು ಸ್ಕಿಪ್ಪಿಂಗ್ ಮಾಡಿ, ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತೆ ನೋಡಿ! – Kannada News | Amazing Health Benefits of Skipping Rope

ಇಂದಿನ ಕಾರ್ಯನಿರತ ಜೀವನಶೈಲಿಯಲ್ಲಿ, ನಮ್ಮ ಆರೋಗ್ಯದ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಊಟ ಬಿಡುವುದು, ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು ವ್ಯಾಯಾಮದ ಕೊರತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಬರಮಾಡಿಕೊಳ್ಳುವಂತೆ ಮಾಡಿದೆ. ಅಷ್ಟೇಅಲ್ಲ, ಈ ಎಲ್ಲಾ ಅಂಶಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಆರೋಗ್ಯವಾಗಿರಲು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಆದರೆ ಅದಕ್ಕೂ ಸಮಯ ಇಲ್ಲ ಎನ್ನುವವರು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ (Skipping) ಅಥವಾ ಹಗ್ಗದ ಸಹಾಯದಿಂದ ಜಿಗಿಯುವ ವ್ಯಾಯಾಮವನ್ನು ಮಾಡಬಹುದು. ಈ ಒಂದು ಅಭ್ಯಾಸದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಪ್ರತಿದಿನ 15 ನಿಮಿಷ ಸ್ಕಿಪ್ಪಿಂಗ್ ಮಾಡುವುದರಿಂದಾಗುವ ಪ್ರಯೋಜನಗಳೇನು?

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಸ್ಕಿಪ್ಪಿಂಗ್ ಹೃದಯವನ್ನು ಬಲಪಡಿಸುವ ಮತ್ತು ರಕ್ತ ಪರಿಚಲನೆ ಸುಧಾರಿಸುವ ಉತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ. ಅಷ್ಟೇಅಲ್ಲ, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ

ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಹಂಬಲಿಸುತ್ತಿರುವವರು ಪ್ರತಿದಿನ 15 ನಿಮಿಷ ಸ್ಕಿಪ್ಪಿಂಗ್ ಮಾಡಿ. ಇದು ಕ್ಯಾಲೊರಿಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಹಾಗಾಗಿ ವೇಗವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತೆ

ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಕಾಲು, ತೊಡೆ, ತೋಳು ಮತ್ತು ಭುಜಗಳಲ್ಲಿನ ಸ್ನಾಯುಗಳು ಉತ್ತೇಜನಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ದುರ್ಬಲ ಸ್ನಾಯುಗಳನ್ನು ಹೊಂದಿರುವವರಿಗೆ ಸ್ಕಿಪ್ಪಿಂಗ್ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಪ್ರತಿದಿನ ವಾಕಿಂಗ್, ಜಾಗಿಂಗ್ ಬದಲು ಕೇವಲ 15 ನಿಮಿಷ ಸ್ಕಿಪ್ಪಿಂಗ್ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ಮಧುಮೇಹ ನಿಯಂತ್ರಣ

ಸ್ಕಿಪ್ಪಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ, ನಿದ್ರಾಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ ಮಾಡಬೇಕು. ಇದು ದೇಹವನ್ನು ದಣಿಸಿ ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ.

ಒತ್ತಡ, ಆತಂಕವನ್ನು ನಿವಾರಿಸುತ್ತದೆ

ನೀವು ಕೂಡ ಸಣ್ಣ ಸಣ್ಣ ವಿಷಯಗಳಿಗೆ ಒತ್ತಡಕ್ಕೊಳಗಾಗುತ್ತಿದ್ದರೆ, ಪ್ರತಿದಿನ 15 ನಿಮಿಷ ಸ್ಕಿಪ್ಪಿಂಗ್ ಮಾಡಲು ಪ್ರಯತ್ನಿಸಿ. ಈ ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಅಷ್ಟೇ ಅಲ್ಲ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಈ ವ್ಯಾಯಾಮವು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು – Kannada News | Actress Dhanya talks about senior actor Saikumar’s discipline

ಪೃಥ್ವಿ ಅಂಬರ್, ಧನ್ಯಾ ರಾಮ್​​ಕುಮಾರ್, ಸಾಯಿ ಕುಮಾರ್ ಇನ್ನೂ ಕೆಲವು ಹಿರಿಯ ನಟರು ನಟಿಸಿರುವ ‘ಚೌಕಿಧಾರ್’ ಸಿನಿಮಾದ ಟ್ರೈಲರ್ ಲಾಂಚ್ ಇತ್ತೀಚೆಗಷ್ಟೆ ನಡೆಯಿತು. ಟ್ರೈಲರ್ ಲಾಂಚ್​​ನಲ್ಲಿ ಸಿನಿಮಾದ ಪ್ರಮುಖ ನಟ-ನಟಿಯರು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಧನ್ಯಾ, ಸಾಯಿ ಕುಮಾರ್ ಅವರನ್ನು ತಾವು ಪರದೆಯ ಮೇಲೆ ಹೇಗೆ ನೋಡಿದ್ದೆ, ಆದರೆ ಅವರು ಸೆಟ್​​ನಲ್ಲಿ ಎಷ್ಟು ತಮಾಷೆಯಾಗಿ, ಶಾಂತವಾಗಿ ಇರುತ್ತಾರೆ ಎಂದು ಹೇಳಿದರು. ಧನ್ಯಾ ಹೇಳಿದ್ದೇನು ಇಲ್ಲಿದೆ ನೋಡಿ ವಿಡಿಯೋ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ಳಿ ಬೆಲೆ ಕುಸಿತ ಕಾಣಲಿದೆ: ರಾಬರ್ಟ್ ಕಿಯೋಸಾಕಿ ಎಚ್ಚರಿಕೆ – Kannada News | Silver price may crash, warns Robert Kiyosaki

ವಾಷಿಂಗ್ಟನ್, ಜನವರಿ 15: ಸಿಕ್ಕಾಪಟ್ಟೆ ಏರುತ್ತಿರುವ ಬೆಳ್ಳಿ ಬೆಲೆ ಮತ್ತೆ ಇಳಿಕೆ ಆಗುತ್ತಾ? ಬೆಳ್ಳಿಯ ಪ್ರೈಸ್ ಕರೆಕ್ಷನ್ ಆಗುತ್ತಾ ಎನ್ನುವ ಪ್ರಶ್ನೆ ಮತ್ತು ಆತಂಕ ಹಲವು ಭಾರತೀಯರಿಗೆ ಇದೆ. ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಸರಣಿಯ ಪುಸ್ತಕಗಳ ಕರ್ತೃ ರಾಬರ್ಟ್ ಕಿಯೋಸಾಕಿ ಅವರ ಪ್ರಕಾರ ಬೆಳ್ಳಿ ಬೆಲೆ ಸದ್ಯದ ಮಟ್ಟಿಗೆ ಗರಿಷ್ಠ ಮಟ್ಟ ಮುಟ್ಟಿದ್ದು, ಯಾವಾಗ ಬೇಕಾದರೂ ಕುಸಿತ ಕಾಣಬಹುದು. ಬೆಲೆ ಕುಸಿತ ಕಂಡ ಬಳಿಕ ಬೆಳ್ಳಿಗೆ ಮತ್ತೆ ಬೇಡಿಕೆ ಶುರುವಾಗುತ್ತದೆ ಎಂದೂ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ.

ಲಾಭಕ್ಕೆ ಬೆಳ್ಳಿ ಮಾರಾಟವಾಗುತ್ತಿರುವ ಪರಿಣಾಮ…

ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿರುವುದರಿಂದ ಲಾಭಕ್ಕೆ ಮಾರುವವರ ಸಂಖ್ಯೆ ಹೆಚ್ಚಬಹುದು. ಇದರಿಂದ ಬೆಳ್ಳಿ ಬೆಲೆ ಕುಸಿತ ಕಾಣಬಹುದು ಎಂದು ಹೇಳುವ ರಾಬರ್ಟ್ ಕಿಯೋಸಾಕಿ, ಬೆಲೆ ಕುಸಿತ ಕಂಡ ಬಳಿಕ ಬೆಳ್ಳಿ ಬೆಲೆ ಮತ್ತೆ ಏರಲು ತೊಡಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಹೊಸ ದಾಖಲೆ

ರಾಬರ್ಟ್ ಕಿಯೋಸಾಕಿ ಏನು ಮಾಡುತ್ತಾರೆ?

ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಬರಹಗಾರರಾದ ಕಿಯೋಸಾಕಿ ಅವರು ಬೆಳ್ಳಿ ಬೆಲೆ ಔನ್ಸ್​ಗೆ 100 ಡಾಲರ್ ಆಗುವವರೆಗೂ ಆ ಲೋಹದ ಖರೀದಿ ಮಾಡುತ್ತಾರಂತೆ. ಆ ಬಳಿಕ ಸೂಕ್ತ ಸಮಯಕ್ಕೆ ಕಾಯುತ್ತಾರಂತೆ.

ಸದ್ಯ ಬೆಳ್ಳಿ ಬೆಲೆ ಒಂದು ಔನ್ಸ್​ಗೆ ಸುಮಾರು 89-90 ಡಾಲರ್ ಇದೆ. ಕಿಯೋಸಾಕಿ ಪ್ರಕಾರ ಬೆಳ್ಳಿ ಇನ್ನೂ ಶೇ. 10ರಷ್ಟು ಬೆಳೆದ ಬಳಿಕ ಕುಸಿಯುವ ಸಾಧ್ಯತೆ ಇದೆ. ಬೆಳ್ಳಿಯನ್ನು ಮಾರಿ ಡಾಲರ್ ಪಡೆಯುವುದು ಮೂರ್ಖತನ ಎನ್ನುವ ಅವರು, ಬೆಳ್ಳಿ ಮಾರಿದರೆ ಅದನ್ನು ಚಿನ್ನದ ಮೇಲೆ ಹೂಡಿಕೆ ಮಾಡುವುದಾಗಿ ಹೇಳುತ್ತಾರೆ.

ಬೆಳ್ಳಿ ಬೆಲೆ ಕುಸಿತ ಮುಗಿದು ಮತ್ತೆ ಏರಿಕೆಯ ಹಾದಿಗೆ ಬಂದಾಗ ರಾಬರ್ಟ್ ಕಿಯೋಸಾಕಿ ಮತ್ತೆ ಬೆಳ್ಳಿಗೆ ಹೂಡಿಕೆ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ. ರಾಬರ್ಟ್ ಕಿಯೋಸಾಕಿ ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿಯೋಸಾಕಿ ಅವರು ಮಾರುಕಟ್ಟೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅಥವಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹಲವು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ

ರಾಬರ್ಟ್ ಕಿಯೋಸಾಕಿ ಅವರು ಬಹಳ ವರ್ಷಗಳಿಂದಲೂ ಷೇರು ಮಾರುಕಟ್ಟೆ ಮತ್ತು ಕರೆನ್ಸಿ ಹಣದ ವಿರುದ್ಧ ಜನರನ್ನು ಎಚ್ಚರಿಸುತ್ತಲೇ ಇದ್ದಾರೆ. ಸದ್ಯ ಷೇರು ಮಾರುಕಟ್ಟೆ ಅತ್ಯಂತ ಉಬ್ಬರದ ಸ್ಥಿತಿಯಲ್ಲಿದ್ದು, ಇದು ಬಲೂನಿನಂತೆ ಠುಸ್ ಎನ್ನಲಿದೆ ಎಂದು ಕಳೆದ ಒಂದೆರಡು ವರ್ಷದಿಂದಲೂ ವಾದಿಸುತ್ತಲೇ ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಬ್ಬದಂದೇ ಕೋಲಾರದಲ್ಲಿ ಭೀಕರ ಕೊಲೆ: ಪ್ರಿಯತಮೆಯನ್ನು ಕೊಂದ ಪ್ರಿಯಕರ – Kannada News | Kolar Lover Brutal Murder: girl Stabbed by lover on Bangarapet Road

ಕೊಲೆಯಾದ ಸುಜಾತಾ, ಆರೋಪಿ ಚಿರಂಜೀವಿ

ಕೋಲಾರ, ಜನವರಿ 15: ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಹತ್ಯೆ (murder) ನಡೆದಿರುವಂತಹ ಘಟನೆ ಕೋಲಾರ (Kolar) ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಸುಜಾತಾ(27)ರನ್ನು ಚಿರಂಜೀವಿ ಕೊಲೆಗೈದಿದ್ದಾನೆ. ಕಳೆದ ಕೆಲವು ದಿನಗಳಿಂದ ಇಬ್ಬರ ಪ್ರೀತಿಯಲ್ಲಿ ವಿರಸ ಉಂಟಾಗಿದ್ದು, ಅದುವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಸದ್ಯ ಸ್ಥಳೀಯರು‌ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು? 

ಕೊಲೆಯಾದ ಸುಜಾತಾ ಬಂಗಾರಪೇಟೆಯ ಮಾರುತಿ ನಗರದ ನಿವಾಸಿ. ಕಳೆದ ಮೂರು ತಿಂಗಳಿಂನಿಂದ ಬೆಲ್ರೈಸ್ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಚಿರಂಜೀವಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ತ್ರೀ ಸಂಘಗಳ ಮುಖಾಂತರ ಸಾಲ ನೀಡಿ ಹಣ ವಸೂಲಿ ಮಾಡುತ್ತಿದ್ದ, ಈ ವೇಳೆ ಪರಿಚಯವಾಗಿತ್ತು.

ಅಳಲು ತೊಡಿಕೊಂಡ ತಂದೆ

ಈ ಬಗ್ಗೆ ಸುಜಾತಾ ತಂದೆ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದು, ಈ ಹಿಂದೆಯೂ ಹಣಕಾಸು ವಿಚಾರಕ್ಕೆ ಸುಜಾತಾ ಮೇಲೆ ಚಿರಂಜೀವಿ ಹಲ್ಲೆ ಮಾಡಿದ್ದ. ಈ ಕುರಿತು ಬಂಗಾರಪೇಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕ್ರಮಕೈಗೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಈಗ ನನ್ನ ಮಗಳ ಕೊಲೆ ಮಾಡಿಬಿಟ್ಟ. ಆಗಲೇ ಸರಿಯಾದ ಕ್ರಮಕೈಗೊಂಡಿದ್ದರೆ ಇಂದು ನನ್ನ ಮಗಳು ಬದುಕಿರುತ್ತಿದ್ದಳು ಎಂದು ಕೃಷ್ಣಮೂರ್ತಿ ಅಳಲು ತೊಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಮನಗರ: ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಪೊಲೀಸ್ ಠಾಣೆ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಇನ್ನು ಸ್ಥಳಕ್ಕೆ ಕೋಲಾರ ಎಸ್​​ಪಿ ಕನ್ನಿಕಾ ಸುಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸೋಕೋ ತಂಡ ಶವವನ್ನು ಕೋಲಾರ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಆರೋಪಿಗೆ ಸ್ಥಳೀಯರು ಥಳಿತ ಹಿನ್ನೆಲೆ ಆತನಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನ ಕೊಲೆ

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನ ಕೊಲೆ ಮಾಡಿರುವಂತಹ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ. ಮೂವರು ಅಪ್ರಾಪ್ತರಿಂದ ನಿಂಗರಾಜ್ ಅವಾರಿ(16) ಕೊಲೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ

ನಿಂಗರಾಜ್ ಅನುದಾನಿತ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಓದುತ್ತಿದ್ದ. ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಅಪ್ರಾಪ್ತ ಬಾಲಕನ ಕೊಲೆ ಮಾಡಲಾಗಿದೆ. ಕೃತ್ಯವೆಸಗಿದ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ: ಸಚಿವ ಕೆ.ಎಚ್. ಮುನಿಯಪ್ಪ – Kannada News | Minister K.H. Muniyappa Discusses Dalit CM Representation and Official Safety in Karnataka.

ಬೆಂಗಳೂರು,ಜ.15: ದಲಿತ ಸಮುದಾಯದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಮತ್ತು ಹೈಕಮಾಂಡ್‌ನ ಪಾತ್ರ ಕುರಿತು ಸಚಿವ ಕೆ.ಎಚ್. ಮುನಿಯಪ್ಪ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ದಲಿತ ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ಇದ್ದ ಆಸೆ, ಹೊಸದೇನಲ್ಲ ಎಂದರು. ಹೈಕಮಾಂಡ್ ಎಲ್ಲವನ್ನೂ ಅರ್ಥ ಮಾಡಿಕೊಂಡಿದೆ ಮತ್ತು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮುನಿಯಪ್ಪ ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೂ 80 ಸೀಟುಗಳನ್ನು ಪಡೆದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿದರು. ಶೇ.25ರಷ್ಟು ಸಮುದಾಯಗಳು ಶೇ.75ರಷ್ಟು ಮತಗಳನ್ನು ಕಾಂಗ್ರೆಸ್‌ಗೆ ನೀಡಿದರೂ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದರು. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು. 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಗ್ಯಾರಂಟಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಟಿ20 ವಿಶ್ವಕಪ್​ಗೆ ಭಾರತ ತಂಡದ ಇಬ್ಬರು ಡೌಟ್ – Kannada News | Tilak Varma and Washington Sundar Doubtful for T20 World Cup 2026

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್. ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್.

Source link

Video: ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿದ ಮಾಯಾವತಿ – Kannada News | Smoke Disrupts Mayawati’s Press Meet in Lucknow

ಲಕ್ನೋ, ಜನವರಿ 15: ಲೈಟ್​ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅರ್ಧಕ್ಕೆ ಪತ್ರಿಕಾಗೋಷ್ಠಿ ಮೊಟಕುಗೊಳಿಸಿ ತೆರಳಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಅವರು ಪಕ್ಷ ಮತ್ತು ಮೈತ್ರಿಕೂಟದ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದರು. ದೇಶದಲ್ಲಿ ಬಿಎಸ್ಪಿ ಚಳವಳಿಯನ್ನು ತಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ವಿವಿಧ ತಂತ್ರಗಳನ್ನು ಬಳಸುತ್ತಿವೆ ಎಂದು ಮಾಯಾವತಿ ಹೇಳಿದರು. ನಮ್ಮ ಪಕ್ಷವು ಯಾವಾಗಲೂ ಬ್ರಾಹ್ಮಣರಿಗೆ ಸರಿಯಾದ ಗೌರವವನ್ನು ನೀಡಿದೆ. ಬ್ರಾಹ್ಮಣರಿಗೆ ಯಾರ ದಾನವೂ ಅಗತ್ಯವಿಲ್ಲ.

ಅವರನ್ನು ಬಿಜೆಪಿ, ಎಸ್‌ಪಿ ಅಥವಾ ಕಾಂಗ್ರೆಸ್ ದಾರಿ ತಪ್ಪಿಸಬಾರದು. ಬಿಎಸ್‌ಪಿ ಸರ್ಕಾರ ರಚನೆಯಾದಾಗ, ಬ್ರಾಹ್ಮಣರಿಗೆ ಸಂಪೂರ್ಣ ಗೌರವ ಸಿಗುತ್ತದೆ, ಕ್ಷತ್ರಿಯ ಸಮುದಾಯವನ್ನು ಸಹ ನೋಡಿಕೊಳ್ಳಲಾಗುತ್ತದೆ ಮತ್ತು ಜಾಟ್ ಸಮುದಾಯವನ್ನು ಸಹ ನೋಡಿಕೊಳ್ಳಲಾಗುತ್ತದೆ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕೂಡ ಸಮಾನವಾಗಿ ನೋಡಲಾಗುತ್ತದೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link