ಬೆಂಗಳೂರು, ಜನವರಿ 15: ಸಂಕ್ರಾಂತಿ ಹಬ್ಬದ ದಿನವೇ ಪ್ರಯಾಣಿಕರಿಗೆ ನಮ್ಮ ಮೆಟ್ರೋಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್ ಆಧಾರಿತ ದಿನ, ಮೂರು ದಿನ ಮತ್ತು 5 ದಿನಗಳ ಪಾಸ್ ಲಭ್ಯವಿರಲಿದೆ. 1, 3, 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ನ BMRCL ಪರಿಚಯಿಸಿದ್ದು, ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟುದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು. ಅದಕ್ಕಾಗಿ ಭದ್ರತಾ ಠೇವಣಿ 50 ರೂಪಾಯಿ ಪಾವತಿ ಮಾಡಬೇಕಿತ್ತು. ಆದರಿನ್ನು ಮೊಬೈಲ್‌ನಲ್ಲೇ QR ಕೋಡ್ ಬಳಸಿ ಪಾಸ್ ಪಡೆಯಬಹುದಾಗಿದ್ದು, ಯಾವುದೇ ಭದ್ರತಾ ಠೇವಣಿ ಇರುವುದಿಲ್ಲ. 1 ದಿನದ ಮೆಟ್ರೋ ಪ್ರಯಾಣ ಪಾಸ್ಗೆ 250 ರೂ., 3 ದಿನಗಳ ಮೆಟ್ರೋ ಪ್ರಯಾಣ ಪಾಸ್ಗೆ 550 ರೂ. ಮತ್ತು 5 ದಿನಗಳ ಮೆಟ್ರೋ ಪ್ರಯಾಣ ಪಾಸ್ಗೆ 850 ರೂ. ನಿಗದಿ ಮಾಡಲಾಗಿದೆ.
ವಾಷಿಂಗ್ಟನ್, ಜನವರಿ 15: ದೇಶದೊಳಗೆ ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ತರಬಲ್ಲಂತಹ ವಿದೇಶೀಯರನ್ನು ನಿರ್ಬಂಧಿಸುವ ಸಲುವಾಗಿ ಅಮೆರಿಕ ಸರ್ಕಾರ ಕೆಲ ದೇಶಗಳ ನಿವಾಸಿಗಳಿಗೆ ವೀಸಾ ನೀಡುವಿಕೆಯನ್ನು (US Immigration Visa) ಸ್ಥಗಿತಗೊಳಿಸಿದೆ. ಒಟ್ಟು 75 ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ಫ್ರೀಜ್ ಮಾಡಲಾಗಿದೆ. ಈ 75 ದೇಶಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದವರು ಸೇರಿವೆ. ಪಾಕಿಸ್ತಾನದೊಂದಿಗೆ ಅಮೆರಿಕದ ಸಂಬಂಧಕ್ಕೆ ಹೊಸ ಪುಷ್ಟಿ ಸಿಕ್ಕಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ.
ಗಮನಿಸಬೇಕಾದ ಸಂಗತಿ ಎಂದರೆ ಮೇಲಿನ ವೀಸಾ ನಿರ್ಬಂಧವು ವಲಸಿಗರಿಗೆ ಮಾತ್ರವೇ ಅನ್ವಯ ಆಗುವುದು. ಇಮ್ಮೈಗ್ರೇಶನ್ ವೀಸಾ ಅರ್ಜಿ ಸಲ್ಲಿಸಿರುವವರ ಪೈಕಿ ಆಯ್ದ 75 ದೇಶಗಳ ಜನರ ಅರ್ಜಿ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಆದರೆ, ಪ್ರವಾಸ, ಬ್ಯುಸಿನೆಸ್ ಇತ್ಯಾದಿ ತಾತ್ಕಾಲಿಕವಾಗಿ ಬಂದು ಹೋಗುವವರಿಗೆ ತಡೆ ಇರುವುದಿಲ್ಲ, ವೀಸಾ ನಿರಾಕರಿಸಲಾಗುವುದಿಲ್ಲ.
ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯಗಳು ಉತ್ತಮವಾಗಿವೆ. ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದು, ಡ್ರಗ್ಸ್, ಅಪರಾಧ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳ ಮೂಲಕ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯ ತರಬಹುದು. ಇದನ್ನು ನಿಯಂತ್ರಿಸಲು ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ ಮೇಲೆ ತಿಳಿಸಿದ 75 ದೇಶಗಳ ಜನರ ವಲಸೆ ಅರ್ಜಿಗಳನ್ನು ಪ್ರೋಸಸ್ ಮಾಡಲಾಗುವುದಿಲ್ಲ ಎನ್ನಲಾಗಿದೆ.
ಬೆಂಗಳೂರು, ಜನವರಿ 15: ಶಿಡ್ಲಘಟ್ಟ ಪೌರಾಯುಕ್ತೆಯನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀವ್ ಗೌಡ ಅಥವಾ ಬೇರೆ ಯಾರೇ ಆಗಿರಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಬೇರೆಯವರನ್ನು ನಿಂದಿಸಲು ಅಥವಾ ಅವಾಚ್ಯ ಶಬ್ದಗಳನ್ನು ಬಳಸಲು ಯಾರಿಗೂ ಹಕ್ಕಿಲ್ಲ ಎಂದರು. ಅಲ್ಲದೆ, ಪಕ್ಷದ ಅಧ್ಯಕ್ಷರು ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಸಂಸ್ಕೃತಿ ಕಲಿಯಬೇಕಿಲ್ಲ. ಮುನಿರತ್ನ, ಸಿ.ಟಿ. ರವಿ ಯಾವ ರೀತಿ ಮಾತನಾಡಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ ಎಂದು ಉಲ್ಲೇಖಿಸಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಸಂಸ್ಕೃತಿ ಇಲ್ಲ ಎಂದು ಟೀಕಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಭಾರತ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ವಿದೇಶಿಗರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇಲ್ಲಿನ ವಿವಿಧ ಖಾದ್ಯಗಳ ರುಚಿಯನ್ನು ಸವಿಯುತ್ತಾರೆ. ಇನ್ನು ಕೆಲ ವಿದೇಶಿಗರು ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿಯೇ ನೆಲೆಸುತ್ತಾರೆ. ಇದೀಗ ಭಾರತದಲ್ಲಿ ಫ್ರೆಂಚ್ ಮೂಲದ ಮಹಿಳೆಯೂ (France woman) ಭಾರತದಲ್ಲಿ ವಾಸಿಸುತ್ತಿದ್ದು, ಭಾರತ ನನಗೆ ಇಷ್ಟವಾಗಿದ್ದು ಯಾಕೆ ಎನ್ನುವುದನ್ನು ವಿವರಿಸಿದ್ದಾರೆ. ಫ್ರಾನ್ಸ್‌ಗಿಂತ ಭಾರತ ಉತ್ತಮ ಎನ್ನಲು ಐದು ಕಾರಣಗಳನ್ನು ನೀಡಿದ್ದಾರೆ. ವಿದೇಶಿ ಮಹಿಳೆ ಭಾರತವನ್ನು ಹಾಡಿ ಹೊಗಳಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
freldaway ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ಕಾಣಬಹುದು. ಭಾರತ ಇಷ್ಟ ಎನ್ನಲು ಕಾರಣವಾಗಿರುವ ಐದು ವಿಚಾರಗಳನ್ನು ಈ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಈ ವಿಡಿಯೋಗೆ ಥಿಂಗ್ಸ್ ಇಂಡಿಯಾ ಡಸ್ ಬೆಟರ್ ದೆನ್ ಫ್ರಾನ್ಸ್” ಎಂಬ ಶೀರ್ಷಿಕೆ ನೀಡಲಾಗಿದೆ. ಕೆಲಸಕ್ಕಾಗಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿರುವ ಫ್ರಾನ್ಸ್ ಮಹಿಳೆಗೆ ಭಾರತದ ಬೀದಿಬದಿ ಆಹಾರ, ಭಾರತೀಯ ಆಕರ್ಷಕ ಆಭರಣಗಳು, ಆರಾಮದಾಯಕ ಬಸ್ ಹಾಗೂ ರೈಲು ಪ್ರಯಾಣ, ಕೂದಲ ಆರೈಕೆಗೆ ಅಳವಡಿಸಿಕೊಂಡ ಸಾಂಪ್ರದಾಯಿಕ ವಿಧಾನ ಹಾಗೂ ಭಾರತೀಯ ಅತಿಥಿ ಸತ್ಕಾರ ಈ ಎಲ್ಲಾ ಅಂಶಗಳು ಇಷ್ಟವಾಗಿದೆಯಂತೆ. ಫ್ರಾನ್ಸ್‌ನಲ್ಲಿ ಈ ಎಲ್ಲಾ ವಿಚಾರಗಳು ಕಾಣಸಿಗಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ ಒಬ್ಬ ಬಳಕೆದಾರ ಭಾರತೀಯನಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಂಶಗಳು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯರನ್ನು ವಿದೇಶಿಗರು ಎಷ್ಟು ಗಮನ ಹರಿಸುತ್ತಾರೆ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ. ನಿಜಕ್ಕೂ ಖುಷಿಯಾಗುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟ ದರ್ಶನ್ (Darshan) ಪಾಲಿಗೆ ಸಂಕ್ರಾಂತಿ ಹಬ್ಬ ಅತ್ಯಂತ ಮಹತ್ವದ್ದಾಗಿತ್ತು. ಈ ಹಬ್ಬವನ್ನು ಅವರೇ ತಪ್ಪದೇ ಆಚರಿಸುತ್ತಿದ್ದರು. ಪ್ರಾಣಿ ಪ್ರಿಯರಾಗಿರುವ ನಟ ದರ್ಶನ್ ತಮ್ಮ ಫಾರಂಹೌಸ್ನಲ್ಲಿರುವ ಎಲ್ಲ ಪ್ರಾಣಿಗಳಿಗೂ ಸ್ನಾನ ಮಾಡಿಸಿ, ಹೂವುಗಳಿಂದ ಸಿಂಗರಿಸಿ ಕಿಚ್ಚು ಹಾಯಿಸುತ್ತಿದ್ದರು. ಪ್ರತಿ ವರ್ಷವೂ ಇದನ್ನು ತಪ್ಪದೇ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ದರ್ಶನ್ ಜೈಲಿನಲ್ಲಿದ್ದಾರೆ ಆದರೆ ಅವರ ಫಾರಂ ಹೌಸ್ನಲ್ಲಿ ಸಂಕ್ರಾಂತಿ ನಿಂತಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಮುಂದಾಳತ್ವದಲ್ಲಿ ಫಾರಂ ಹೌಸ್ನಲ್ಲಿ ಸಂಕ್ರಾಂತಿ ಆಚರಣೆ ನಡೆದಿದೆ. ವಿಡಿಯೋ ನೋಡಿ….
ಬೆಂಗಳೂರು, ಜನವರಿ 15: ಈ ಹಿಂದೆ ಪೈಪ್‌ಲೈನ್ ಸೇರಿದಂತೆ ವಿವಿಧ ಕಡೆ ನೀರು ಸೋರಿಕೆಯಾಗಿ ವ್ಯರ್ಥವಾಗುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಯಾಗಿದ್ದ ಬೆಂಗಳೂರು ಜಲಮಂಡಳಿ (BWSSB) ಇದೀಗ ಇಂಧನ ಕ್ಷಮತೆ ಹೆಚ್ಚಿಸಲು ಮತ್ತು ವಿದ್ಯುತ್ ಪೋಲಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ ಆಧಾರಿತ ಪಂಪ್ ಮಾನಿಟರಿಂಗ್ ಆರಂಭಿಸಿದೆ. ಬೆಂಗಳೂರಿನ (Bangalore)78 ಸ್ಟೇಷನ್ಗಳಲ್ಲಿ ಎಐ ಆಧಾರಿತ ಪಂಪು ಮಾನಿಟರಿಂಗ್ ಸಾಧನೆಗಳನ್ನು ಅಳವಡಿಸಲಾಗಿದೆ. ಇದರಿಂದ ವಾರ್ಷಿಕ 40 ಕೋಟಿ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
78 ಕಡೆಗಳಲ್ಲಿ ಎಐ ಪಂಪ್ ಮಾನಿಟರಿಂಗ್ IPUMPNET ಅಳವಡಿಸಿಕೊಳ್ಳುವ ಮೂಲಕ, ಈ ಮಟ್ಟದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡ ವಿಶ್ವದ ಮೊದಲ ನೀರು ಸರಬರಾಜು ಮಂಡಳಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ಜಲ ಮಂಡಳಿ ಪಾತ್ರವಾಗಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿದೆ.
ಹೇಗೆ ಕಾರ್ಯನಿರ್ವಹಿಸುತ್ತೆ IPUMPNET?
IPUMPNET ಹೆಸರಿನ ಈ ಎಐ ಆಧಾರಿತ ವ್ಯವಸ್ಥೆಯು ರಿಯಲ್ ಟೈಮ್ ಸೆನ್ಸರ್‌ಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಸಾಧನಗಳಂತಲ್ಲದೆ ಇದು ಪ್ರತಿಕ್ಷಣವೂ ಪಂಪ್ಗಳ ಕ್ಷಮತೆಯನ್ನು ಗಮನಿಸುತ್ತಿರುತ್ತದೆ. ಅತಿಯಾದ ಇಂಧನ ಬಳಕೆ, ವಿದ್ಯುತ್ ಪೋಲಾಗುವುದನ್ನು ಗಮನಿಸಿ ಅಲರ್ಟ್ ಮಾಡುತ್ತದೆ. ಈ IPUMPNET ವ್ಯವಸ್ಥೆಯು ಈಗಾಗಲೇ ಹಲವಾರು ಪಂಪ್‌ಗಳು ಮಿತಿಗಳಿಗಿಂತ ಹೆಚ್ಚಿನ ವಿದ್ಯುತ್ ಬಳಸುತ್ತಿರುವುದನ್ನು ಗುರುತಿಸಿದೆ. ಈ ಡೇಟಾವನ್ನು ಆಧರಿಸಿ, ಜಲ ಮಂಡಳಿಯು ಕಡಿಮೆ-ದಕ್ಷತೆಯ ಪಂಪ್‌ಗಳನ್ನು ಬದಲಾಯಿಸಿ ಹೆಚ್ಚಿನ-ದಕ್ಷತೆಯ ಪಂಪ್‌ಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಎಐ ವ್ಯವಸ್ಥೆಯಿಂದಾಗಿ, ಇಂಧನ ಪೋಲಾಗುವುದನ್ನು ತಡೆಗಟ್ಟುವುದರ ಜತೆಗೆ ಜಲಮಂಡಳಿಗೆ ಆರ್ಥಿಕವಾಗಿಯೂ ಉಳಿತಾಯವಾಗಲಿದೆ. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವುದೂ ಸಾಧ್ಯವಾಗಲಿದೆ. ಇದರಿಂದಾಗಿ ಬೆಂಗಳೂರಿನ ಪರಿಸರ ಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡಿದಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರ, ಜನವರಿ 15:ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಇಂತಹುದ್ದೇ ಮತ್ತೊಂದು ಆರೋಪ ಕೇಳಿಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದಿಸಿದ್ದ ಎನ್ನಲಾಗಿದ್ದು, ಆದರೆ ತಾನು ಆಡಿಯೋ ರೆಕಾರ್ಡ್ ಮಾಡಿಕೊಂಡಿಲ್ಲ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಆಯುಕ್ತೆ ಅಮೃತಾ, ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಬಳಿ ಅವರು ಅಳಲು ತೋಡಿಕೊಂಡಿದ್ದಾರೆ.
ಆರೋಪಿಗಾಗಿ 3 ತಂಡಗಳಿಂದ ಹುಡುಕಾಟ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ವಿಚಾರವಾಗಿ ತಲೆಮರೆಸಿಕೊಂಡಿರುವ ರಾಜೀವ್ಗೌಡಗೆ 3 ತಂಡಗಳಿಂದ ಹುಡುಕಾಟ ನಡೆಸಲಾಗುತ್ತಿದೆ. ಶಿಡ್ಲಘಟ್ಟ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಮತ್ತು ಸೈಬರ್ ಪೊಲೀಸ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಬಂಧನ ಭೀತಿಯಿಂದ ನಿನ್ನೆ ರಾತ್ರಿ ರಾಜೀವ್ ಗೌಡ ಪರಾರಿಯಾಗಿದ್ದು, ಆತನ 2 ಮೊಬೈಲ್ಗಳು ಕೂಡ ಸ್ವಿಚ್ಆಫ್ ಆಗಿವೆ. ಹೀಗಾಗಿ ಬೆಂಗಳೂರಿನ ಇಂದಿರಾನಗರದಲ್ಲಿ 1 ತಂಡ, ಸಂಜಯ್ ನಗರದಲ್ಲಿ 1 ತಂಡ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಂದು ತಂಡದಿಂದ ಆರೋಪಿಗೆ ಹುಡುಕಾಟ ನಡೆಯುತ್ತಿದೆ. ಮತ್ತೊಂದೆಡೆ ರಾಜೀವ್ ಗೌಡನನ್ನು ಬಂಧಿಸದಿದ್ರೆ ಶಿಡ್ಲಘಟ್ಟ ಬಂದ್ ಮಾಡುವುದಾಗಿ ಎನ್ಡಿಎ ಮುಖಂಡರು ಪೊಲೀಸರಿಗೆ ಎಚ್ಚರಿಕೆ ಕೂಡ ನೀಡಿರುವ ಕಾರಣ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮತ್ತೊಂದೆಡೆ ಪ್ರಾಣ ಬೆದರಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ, ಸಂಬಂಧಿಕರು ಹಾಗೂ ಪ್ರಭಾವಿ ಗುತ್ತಿಗೆದಾರನ ಮೂಲಕ ಪೌರಾಯುಕ್ತೆ ಅಮೃತಾರನ್ನು ರಾಜೀವ್ ಗೌಡ ಪರೋಕ್ಷವಾಗಿ ಸಂಪರ್ಕಿಸಿದ್ದ. ರಾಜಕಾರಣಿಗಳ ವಿರೋಧ ಕಟ್ಟಿಕೊಂಡರೆ ಮುಂದೆ ಪೋಸ್ಟಿಂಗ್ ಸಿಗಲ್ಲ. ಇದೆಲ್ಲ ಯಾಕೆ ಬೇಕು ಬಿಟ್ಟು ಬಿಡು ಎಂದು ರಾಜೀವ್ ಗೌಡ ಅಣಿತಿಯಂತೆ ಗುತ್ತಿಗೆದಾರರೊಬ್ಬರು ನಗರಸಭೆ ಪೌರಾಯುಕ್ತೆಗೆ ತಿಳಿಸಿದ್ದರು. ಆದರೆ ಹುದ್ದೆಗಿಂತ ಆತ್ಮಗೌರವ ಮುಖ್ಯ, ಬೇಕಾದರೆ ಮತ್ತೆ ಸ್ವಾಫ್ಟ್ವೇರ್ ಕೆಲಸಕ್ಕೆ ಸೇರುತ್ತೇನೆ ಎಂದು ಅಮೃತಾ ಅವರು ಈ ವೇಳೆ ಹೇಳಿದ್ದಾರೆ. ಸರ್ಕಾರಿ ಕೆಲಸಕ್ಕೆ ಸೇರುವ ಮುನ್ನ ಮಾಸಿಕ 3 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದೆ. ರಾಜೀವ್ ಗೌಡ ಮಾತಿನಿಂದ ಮನೆಯವರು ಬೇಸರಗೊಂಡಿದ್ದಾರೆ ಎಂದು ಅಮೃತಾ ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನೆ ನಿರ್ಮಾಣದಿಂದ ವಸ್ತುಗಳ ಜೋಡಣೆಯ ವರೆಗೂ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳಿವೆ. ಇದಲ್ಲದೆ, ಮನೆಯಲ್ಲಿರುವ ಪೂಜಾ ಕೊಠಡಿಗೆ ಸಂಬಂಧಿಸಿದ ವಿಷಯಗಳನ್ನು ವಾಸ್ತು ಸ್ಪಷ್ಟಪಡಿಸಿದೆ. ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಮುರಿದ ವಿಗ್ರಹ:
ಪೂಜಾ ಕೊಠಡಿಯಲ್ಲಿ ಎಂದಿಗೂ ಮುರಿದ ದೇವರ ವಿಗ್ರಹಗಳನ್ನು ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂಜಾ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಪೂಜಿಸುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ, ಇದು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಪೂಜೆಯು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ.
ಒಣಗಿದ ಹೂವು:
ಪೂಜೆಯ ಸಮಯದಲ್ಲಿ ಪ್ರತಿದಿನ ದೇವರಿಗೆ ಹೂವುಗಳನ್ನು ಅರ್ಪಿಸಲಾಗುತ್ತದೆ. ಮರುದಿನ ಬೆಳಿಗ್ಗೆ, ದೇವರ ಅಲಂಕಾರದ ಸಮಯದಲ್ಲಿ, ಒಣಗಿದ ಹೂವುಗಳನ್ನು ತೆಗೆದುಹಾಕಿ. ಒಣಗಿದ ಹೂವುಗಳನ್ನು ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಪೂರ್ವಜರ ಫೋಟೋ:
ಪೂಜಾ ಮಂದಿರದಲ್ಲಿ ಪೂರ್ವಜರ ಚಿತ್ರಗಳನ್ನು ಇಡದಂತೆ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಪೂರ್ವಜರು ಮತ್ತು ದೇವತೆಗಳ ಸ್ಥಾನವನ್ನು ಧರ್ಮಗ್ರಂಥಗಳು ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತವೆ. ಆದ್ದರಿಂದ ಪೂರ್ವಜರ ಫೋಟೋಗಳನ್ನು ಇಡುವುದರಿಂದ ಅಶಾಂತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಇಡಲು ದಕ್ಷಿಣ ದಿಕ್ಕು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಪೂಜಾ ಕೋಣೆಯಲ್ಲಿ ಹರಿದ ಧಾರ್ಮಿಕ ಪುಸ್ತಕಗಳನ್ನು ಇಡಬೇಡಿ. ಪೂಜಾ ಕೋಣೆಯಲ್ಲಿ ಹರಿದ ಧಾರ್ಮಿಕ ಪುಸ್ತಕಗಳನ್ನು ಇಡುವುದರಿಂದ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಚೂಪಾದ ವಸ್ತು:
ವಾಸ್ತು ಶಾಸ್ತ್ರದ ಪ್ರಕಾರ, ಕತ್ತರಿ ಮತ್ತು ಚಾಕುಗಳಂತಹ ಹರಿತವಾದ ವಸ್ತುಗಳನ್ನು ಪೂಜಾ ಮಂದಿರದಲ್ಲಿ ಇಡಬಾರದು. ಹರಿತವಾದ ವಸ್ತುಗಳು ನಕಾರಾತ್ಮಕತೆಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ, ಆದ್ದರಿಂದ ವಾಸ್ತು ಶಾಸ್ತ್ರದಲ್ಲಿ ವಿವರಿಸಿದ ಈ ನಿಯಮಗಳನ್ನು ಪಾಲಿಸಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಜನವರಿ 15: ಕಳೆದ ವರ್ಷ ಚೀನಾ ದೇಶಕ್ಕೆ (China) ಭಾರತದ ರಫ್ತು ಸಖತ್ ಏರಿದೆ. 2024ರ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಚೀನಾಗೆ ಭಾರತದ ರಫ್ತು 5.5 ಬಿಲಿಯನ್ ಡಾಲರ್ನಷ್ಟು ಹೆಚ್ಚಿದೆ. 2024ರಲ್ಲಿ ಭಾರತವು ಚೀನಾಗೆ 14.25 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಭಾರತದ ರಫ್ತು 19.75 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಅಂದರೆ, ರಫ್ತಿನಲ್ಲಿ ಶೇ. 8.7ರಷ್ಟು ಏರಿಕೆ ಆಗಿದೆ.
ಚೀನಾದಿಂದ ಇನ್ನೂ ಹೆಚ್ಚು ಆಮದು…
ಚೀನಾಗೆ ಭಾರತದ ರಫ್ತು ಹೆಚ್ಚಿದೆಯಾದರೂ, ಅದಕ್ಕಿಂತ ಹೆಚ್ಚಳ ಆಗಿರುವುದು ಚೀನಾ ಭಾರತಕ್ಕೆ ಮಾಡಿದ ರಫ್ತಿನಲ್ಲಿ. 2025ರಲ್ಲಿ ಭಾರತಕ್ಕೆ ಚೀನಾದ ರಫ್ತಿನಲ್ಲಿ ಬರೋಬ್ಬರಿ ಶೇ. 12.8 ರಷ್ಟು ಹೆಚ್ಚಳ ಆಗಿದೆ. 2024ರಲ್ಲಿ ಭಾರತಕ್ಕೆ ಚೀನಾ 113.45 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಅದು 135.87 ಬಿಲಿಯನ್ ಡಾಲರ್ಗೆ ಏರಿದೆ.
ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ 2025ರಲ್ಲಿ ಒಟ್ಟು 155.62 ಬಿಲಿಯನ್ ಡಾಲರ್ನಷ್ಟು ಇದೆ. ಇದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಭಾರತದ ರಫ್ತು ಹೆಚ್ಚಳಕ್ಕಿಂತಲೂ ಚೀನಾದ ರಫ್ತು ಹೆಚ್ಚಳ ಅಧಿಕ ಇರುವುದರಿಂದ ಚೀನಾದೊಂದಿಗಿನ ಭಾರತದ ಟ್ರೇಡ್ ಡೆಫಿಸಿಟ್ ಕೂಡ ಅಧಿಕಗೊಂಡಿದೆ. ಇದರೊಂದಿಗೆ ಈ ಟ್ರೇಡ್ ಡೆಫಿಸಿಟ್ 116.12 ಬಿಲಿಯನ್ ಡಾಲರ್ಗೆ ಹೆಚ್ಚಿದೆ. ಇದು ಭಾರತಕ್ಕೆ ಎದುರಾಗಿರುವ ಅತಿದೊಡ್ಡ ಟ್ರೇಡ್ ಡೆಫಿಸಿಟ್ ಆಗಿದೆ.
ಸಕಾರಾತ್ಮಕ ಅಂಶವೆಂದರೆ ಚೀನಾದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭಾರತದ ಸರಕುಗಳು ಪ್ರವೇಶ ಮಾಡಿ ಸ್ಪರ್ಧೆಯೊಡ್ಡುವುದು ಹೆಚ್ಚಾಗುತ್ತಿದೆ. ಟೆಲಿಕಾಂ ಉಪಕರಣ, ಮಸಾಲೆ ಪದಾರ್ಥ, ಮೀನು ಇತ್ಯಾದಿ ವಸ್ತುಗಳು ಚೀನಾಗೆ ರಫ್ತಾಗುವುದು ಹೆಚ್ಚಿದೆ. ಇದೇ ವೇಳೆ, ಚೀನಾದ ಐಟಿ, ಫಾರ್ಮಾ ಮತ್ತು ಕೃಷಿ ಕ್ಷೇತ್ರದ ಮಾರುಕಟ್ಟೆಯ ಮೇಲೂ ಭಾರತ ಕಣ್ಣಿಟ್ಟಿದೆ.
ಇದೇ ವೇಳೆ ಚೀನಾದ ಒಟ್ಟಾರೆ ರಫ್ತು 2025ರಲ್ಲಿ ಗಣನೀಯವಾಗಿ ಹೆಚ್ಚಿದೆ. 2025ರಲ್ಲಿ ಅದರ ರಫ್ತು 3.77 ಟ್ರಿಲಿಯನ್ ಡಾಲರ್ ಇದ್ದರೆ, ಆಮದು 2.58 ಟ್ರಿಲಿಯನ್ ಡಾಲರ್ ಇದೆ. ಅಂದರೆ, ಚೀನಾಗೆ ದಾಖಲೆಯ 1.2 ಟ್ರಿಲಿಯನ್ ಡಾಲರ್ನಷ್ಟು ಟ್ರೇಡ್ ಸರ್ಪ್ಲಸ್ ಆದಂತಾಯಿತು. ಅಂದರೆ, ಆಮದಿಗಿಂತ ರಫ್ತು ಬಹಳ ಅಧಿಕ ಇದೆ. ಅಮೆರಿಕದ ಟ್ಯಾರಿಫ್ ನಡುವೆಯೂ ಚೀನಾದ ವ್ಯಾಪಾರ ಹೆಚ್ಚಿರುವುದು ಅದು ಹಲವಾರು ಕ್ಷೇತ್ರಗಳಲ್ಲಿ ರಫ್ತು ಉದ್ಯಮಗಳನ್ನು ನೆಲಗೊಳಿಸಿರುವುದು ಕಾರಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಸಂಚಾರ ಮತ್ತು ಇತರೆ ಗ್ರಹಗಳೊಂದಿಗಿನ ಸಂಯೋಗವು ಮನುಷ್ಯನ ಜೀವನದಲ್ಲಿ ಆರೋಗ್ಯ, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿ ಸೇರಿದಂತೆ ಹಲವು ಅಂಶಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಶನಿಗ್ರಹವು ಒಂದು ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಸ್ಥಿತವಾಗಿರುತ್ತದೆ. ಈ ಅವಧಿಯಲ್ಲಿ ಇತರ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ಫಲಗಳು ಮತ್ತು ಅನಾರೋಗ್ಯ ಸಮಸ್ಯೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಶನಿಗ್ರಹವು ಏಕಾಂಗಿಯಾಗಿ ಪ್ರಭಾವ ಬೀರಿದಾಗ ವಾತ ಸಂಬಂಧಿ ಕಾಯಿಲೆಗಳು, ನರಗಳ ದೌರ್ಬಲ್ಯ, ಬಲಹೀನತೆ, ಪ್ಯಾರಾಲಿಸಿಸ್, ಕಿಡ್ನಿ ಮತ್ತು ಲಿವರ್ ವೈಫಲ್ಯ, ಆಸ್ತಮಾ, ಉಸಿರಾಟದ ತೊಂದರೆಗಳು, ನ್ಯುಮೋನಿಯಾ, ಅಧಿಕ ಜ್ವರ, ಪ್ರಜ್ಞೆ ತಪ್ಪುವುದು, ಕೂದಲು ಉದುರುವುದು, ಅಜೀರ್ಣ ಮತ್ತು ದುಶ್ಚಟಗಳ ಕಡೆಗೆ ಗಮನ ಹೋಗುವುದು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಇತರೆ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ನಿರ್ದಿಷ್ಟ ಪರಿಣಾಮಗಳು:
ಶನಿ ಮತ್ತು ರವಿ ಸಂಯೋಗ:
ರವಿ ಗ್ರಹವು ಶನಿಯೊಂದಿಗೆ ಸೇರಿದಾಗ ಬಲಹೀನತೆ, ದೃಷ್ಟಿದೋಷ, ನೀರಸತೆ ಮತ್ತು ಶರೀರದಲ್ಲಿ ಉತ್ಸಾಹದ ಕೊರತೆ ಕಂಡುಬರುತ್ತದೆ. ಮೇಲಾಧಿಕಾರಿಗಳಿಂದ ತೊಂದರೆ, ತಂದೆ ಅಥವಾ ತಂದೆಗೆ ಸಮಾನರ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ, ಅಧಿಕ ಖರ್ಚುಗಳು ಮತ್ತು ಮಾನಸಿಕ ಶಾಂತಿಯ ನಷ್ಟವಾಗುತ್ತದೆ.
ಶನಿ ಮತ್ತು ಚಂದ್ರ ಸಂಯೋಗ:
ಚಂದ್ರನು ಶನಿಯೊಂದಿಗೆ ಸೇರಿದಾಗ ಮತಿಭ್ರಮಣ, ಎದೆನೋವು, ರಕ್ತಹೀನತೆ, ಮುಖದ ಕಾಂತಿ ಹೊರಟು ಹೋಗುವುದು, ಮುಖದ ಮೇಲೆ ಗುಳ್ಳೆಗಳು, ಆಲಸ್ಯ ಮತ್ತು ಆಸಕ್ತಿಯ ಕೊರತೆ ಉಂಟಾಗಬಹುದು.
ಶನಿ ಮತ್ತು ಬುಧ ಸಂಯೋಗ:
ಬುಧ ಗ್ರಹವು ಶನಿಯೊಂದಿಗೆ ಸೇರಿದಾಗ ಮಾತಿನ ತೊದಲಿಕೆ, ಚರ್ಮ ವ್ಯಾಧಿಗಳು, ಕಿವಿ ನೋವು ಮತ್ತು ಕಿವಿಯಲ್ಲಿ ಸೋರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚಿಕ್ಕ ಮಕ್ಕಳಲ್ಲಿ ಈ ಸಂಯೋಗವಿದ್ದರೆ ಬುಧಶಾಂತಿ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.
ಶನಿ ಮತ್ತು ಗುರು ಸಂಯೋಗ:
ಗುರು ಗ್ರಹವು ಶನಿಯೊಂದಿಗೆ ಸಂಯೋಗಗೊಂಡಾಗ ಜೀರ್ಣಕ್ರಿಯೆ ಸಮಸ್ಯೆಗಳು, ಅತಿಯಾದ ಬುದ್ಧಿವಂತಿಕೆ, ವಿಚಿತ್ರ ವರ್ತನೆ, ನೆನಪಿನ ಶಕ್ತಿ ನಷ್ಟ (ಮೆಮೊರಿ ಲಾಸ್) ಮತ್ತು ಆಹಾರದ ಬಗ್ಗೆ ನಿರಾಸಕ್ತಿ ಉಂಟಾಗಬಹುದು.