Category Archives: Blog

Your blog category

ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು: ಪ್ರಯಾಣಿಕರು ಫುಲ್​​ ಖುಷ್​​ – Kannada News | Bengaluru Metro Yellow Line Boosts Connectivity with 7th Train, Frequency Now 10 Minutes

ಬೆಂಗಳೂರು, ಜನವರಿ 15: ನಮ್ಮ ಮೆಟ್ರೋದ ಯೆಲ್ಲೋ ಲೈನ್‌ನಲ್ಲಿ 7ನೇ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ. ಆ ಮೂಲಕ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಇದುವರೆಗೆ 13-15 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿದ್ದ ರೈಲುಗಳ ಸಮಯ  ಈಗ 10 ನಿಮಿಷಕ್ಕೆ ಇಳಿದಿದ್ದು, ದೈನಂದಿನ ಪ್ರಯಾಣಿಕರಿಗೆ ಖುಷಿ ತಂದಿದೆ. ಈ ಮಾರ್ಗದಲ್ಲಿ ಇದುವರೆಗೆ ಆರು ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದವು. 7ನೇ ರೈಲಿನ ಸೇರ್ಪಡೆಯಿಂದಾಗಿ, ರೈಲಿಗೆ ಪ್ರಯಾಣಿಕರು ಕಾಯಬೇಕಾದ ಸಮಯ ಇಳಿಕೆಯಾಗಿದೆ. ನಮ್ಮ ಮೆಟ್ರೋ ಒಟ್ಟು 16 ರೈಲುಗಳಿಗೆ ಆರ್ಡರ್ ನೀಡಿದ್ದು, ಈಗಾಗಲೇ ಎಂಟು ರೈಲುಗಳು ಬಿಎಂಆರ್‌ಸಿಎಲ್‌ ತಲುಪಿವೆ. ಎಂಟನೇ ರೈಲಿನ ಪರೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲೇ ಅದು ಕೂಡ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​​: ರಾಜೀವ್​ ಗೌಡ ಪರ ಸಚಿವ ಮುನಿಯಪ್ಪ ಬ್ಯಾಟಿಂಗ್​ – Kannada News | Shidlaghatta Banner Row: Minister Muniyappa Says Accused Rajeev Gowda Is a Quiet Person

ಬೆಂಗಳೂರು, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ‘ಕೈ’ ಮುಖಂಡನಿಂದ ನಿಂದನೆ ವಿಚಾರ ಸಂಬಂಧ ಆರೋಪಿ ರಾಜೀವ ಗೌಡ ಪರ ಸಚಿವ ಕೆ. ಹೆಚ್. ಮುನಿಯಪ್ಪ ಬ್ಯಾಟಿಂಗ್​​ ಮಾಡಿದ್ದಾರೆ. ರಾಜೀವ್ ಗೌಡ ಸೌಮ್ಯ ಸ್ವಭಾವದವರಾಗಿದ್ದು, ಕರೆದು ಆತನಿಗೆ ಬುದ್ಧಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಯಾರೂ ಹೀಗೆ ಮಾತನಾಡಬಾರದು ಎಂದಿದ್ದಾರೆ. ಅಲ್ಲದೆ ಶಿಡ್ಲಘಟ್ಟದಲ್ಲಿ ಜೆಡಿಎಸ್​ನವರು ಈ ಹಿಂದೆ ಬ್ಯಾನರ್ ಹಾಕಿದಾಗ ತೆಗೆಸಿಲ್ಲ, ಆದರೆ ಈಗ ತೆಗೆದಿದ್ದಾರೆ ಅಂತಾ ರಾಜೀವ್ ಹೇಳ್ತಿದ್ದಾರೆ. ಆ ಅಧಿಕಾರಿ ಜೆಡಿಎಸ್​ ಪಕ್ಷದ ಪೋಸ್ಟರ್, ಬ್ಯಾನರ್ ತೆಗೆಯುತ್ತಿಲ್ಲ. ಕೇವಲ ಕಾಂಗ್ರೆಸ್​ ಬ್ಯಾನರ್​ ತೆಗೆದಿದ್ದಾರೆ ಎಂಬುದು ರಾಜೀವ್ ವಾದ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೈಟ್ ಒತ್ತುವರಿ ಪ್ರಕರಣ: ನ್ಯಾಯಾಲಯದಲ್ಲಿ ಯಶ್ ತಾಯಿಗೆ ಹಿನ್ನಡೆ

ನಟ ಯಶ್ (Yash) ಅವರ ತಾಯಿ ಅವರಿಗೆ ಸೇರಿದ್ದು ಎನ್ನಲಾಗಿದ್ದ ಸೈಟಿಗೆ ಕಟ್ಟಲಾಗಿದ್ದ ಕಾಂಪೌಂಡ್ ಅನ್ನು ಒಡೆದುಹಾಕಿದ್ದು ಇತ್ತೀಚೆಗೆ ಸುದ್ದಿ ಆಗಿತ್ತು. ಹಾಸನದಲ್ಲಿ ಯಶ್ ಅವರ ತಾಯಿ ಪುಷ್ಪ ಅವರಿಗೆ ಸೇರಿದ ಮನೆಗೆ ಹೊಂದಿಕೊಂಡಂತೆ 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆ ಕಾಂಪೌಂಡ್ ಅನ್ನು ದೇವರಾಜು ಎಂಬುವರು ಜೆಸಿಬಿ ಬಳಸಿ ಒಡೆದು ಹಾಕಿದ್ದರು. ಆದರೆ ಇದನ್ನು ಯಶ್ ತಾಯಿ ಖಂಡಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಹ ನೀಡಿದ್ದರು. ವಕೀಲರ ಸಹಾಯದಿಂದ ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದ್ದರು. ಆದರೆ ಇದೀಗ ನ್ಯಾಯಾಲಯದಲ್ಲಿ ಪುಷ್ಪ ಅವರಿಗೆ ಹಿನ್ನಡೆ ಆಗಿದೆ.

ಯಶ್ ತಾಯಿ ಪುಷ್ಪ ಮತ್ತು ನಟರಾಜ್ ಎಂಬುವರು ದೇವರಾಜ್ ಅವರ ವಿರುದ್ಧ ಹಾಸನದ ನಾಲ್ಕನೇ ಜೆಎಂಎಫ್​​ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪುಷ್ಪ ಅವರು, ಸೈಟಿನ ಪ್ರಕರಣದಲ್ಲಿ ಈ ಹಿಂದೆ ನೀಡಿರುವ ಆದೇಶಕ್ಕೆ ತಡೆ ನೀಡುವುದು ಹಾಗೂ ದೇವರಾಜುಗೆ ನೊಟೀಸ್ ನೀಡುವ ಮೊದಲು ಪ್ರತಿಬಂಧಕಾಜ್ಞೆ ನೀಡುವಂತೆ ಬೇಡಿಕೆ ಇರಿಸಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ನಟರಾಜು ಎಂಬುವರು ಸಹ ದೇವರಾಜುಗೆ ಈ ಹಿಂದೆ ನೀಡಲಾಗಿರುವ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದ್ದರು. ಆದರೆ ಈ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಇದನ್ನೂ ಓದಿ:ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು

ಯಶ್ ಅವರ ತಾಯಿ ಹೇಳಿರುವಂತೆ ಕೆಲವು ವರ್ಷಗಳ ಹಿಂದೆ ಗಿರೀಶ್ ಎಂಬುವರಿಂದ ಹಾಸನದ ವಿದ್ಯಾನಗರದಲ್ಲಿರುವ ಸರ್ವೆ ನಂಬರ್ 90ರ 125*45 ಅಡಿ ಅಳತೆಯ ಸೈಟನ್ನು ಖರೀದಿಸಿದ್ದರಂತೆ. ಅದರ ಬಂದೋಬಸ್ತಿಗೆ ಕಾಂಪೌಂಡ್ ಹಾಕಿದ್ದರು. ಆದರೆ ದೇವರಾಜ್ ಅಕ್ರಮವಾಗಿ ತಮ್ಮ ಕಾಂಪೌಂಡ್ ಒಡೆದು ಸೈಟನ್ನು ವಶಕ್ಕೆ ಪಡೆದಿದ್ದು, ಸೈಟ್​​ನಲ್ಲಿ ಬೋರ್ಡ್ ಸಹ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಯಶ್​ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಯಶ್ ತಾಯಿ ಆರೋಪಿಸಿದ್ದರು.

ಆದರೆ ದೇವರಾಜ್ ಅವರು ಹೇಳಿರುವಂತೆ ಮೈಸೂರಿನ ನಿವಾಸಿ ಲಕ್ಷ್ಮಮ್ಮ ಎಂಬುವರಿಂದ ದೇವರಾಜ್ ಅವರು ಕೆಲ ವರ್ಷಗಳ ಹಿಂದೆ ಸೈಟನ್ನು ಜಿಪಿಎ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಆ ಸೈಟು ತಮ್ಮದು ಎಂಬುದನ್ನು ನ್ಯಾಯಾಲಯ ಸಹ ಒಪ್ಪಿಕೊಂಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ತಾವು ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಸೈಟಿನ ವಿಚಾರವಾಗಿ ಪುಷ್ಪ ಕಡೆಯವರು ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ಸಹ ಆರೋಪಿಸಿದ್ದರು.

ಇದೀಗ ನಾಲ್ಕನೇ ಜೆಎಂಎಫ್​​ಸಿ ನ್ಯಾಯಾಲಯವು ದೇವರಾಜ್​​ಗೆ ನೊಟೀಸ್ ಮಾತ್ರವೇ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜನವರಿ 31ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸಭೆ ಚುನಾವಣೆಗೆ ಪ್ರತಾಪ್​​ ಸಿಂಹ ಸ್ಪರ್ಧೆ ಫಿಕ್ಸ್​​: ಕ್ಷೇತ್ರ ಯಾವುದು ಗೊತ್ತಾ? – Kannada News | Former MP Prathap Simha Declares He Is a BJP Ticket Aspirant from Mysuru’s Chamaraja Constituency

ಮೈಸೂರು, ಜನವರಿ 15: ಇತ್ತೀಚೆಗಷ್ಟೇ ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ನೀಡಿದ್ದ ಮಾಜಿ ಸಂಸದ ಪ್ರತಾಪ್​​ ಸಿಂಹ ತಾನು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಗೂ ಆಕಾಂಕ್ಷಿಗೂ ವ್ಯತ್ಯಾಸ ಇದ್ದು, ವ್ಯತ್ಯಾಸ ಗೊತ್ತಿಲ್ಲದೆ ಕೆಲವರು ಮಾತನಾಡ್ತಿದ್ದಾರೆ. ಅಭ್ಯರ್ಥಿ ಯಾರು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ಮುಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ. ಚಾಮರಾಜ ಕ್ಷೇತ್ರದ ಜನ ವಿದ್ಯಾವಂತ ಪ್ರತಿನಿಧಿ ಬಯಸುತ್ತಾರೆ. ವಾಸು, H.S. ಶಂಕರಲಿಂಗೇಗೌಡರ ಹಾದಿಯಲ್ಲಿ ತಾನು ನಡೆಯುತ್ತೇನೆ ಎಂದು ಪ್ರತಾಪ್​​ ಸಿಂಹ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಬಾಂಗ್ಲಾದೇಶ್ ಕ್ರಿಕೆಟ್​ನಲ್ಲಿ ಕೋಲಾಹಲ… ರಾಜೀನಾಮೆ ನೀಡಿದ್ರೆ ಮಾತ್ರ ಆಡ್ತೇವೆ! – Kannada News | Bangladesh Players demands resignation of Najmul Hasan

ಬಾಂಗ್ಲಾದೇಶ್ ಕ್ರಿಕೆಟ್​ ಬೋರ್ಡ್ ಸಂಕಷ್ಟದಿಂದ ಸಂಕಷ್ಟಕ್ಕೆ ಒಳಗಾಗುತ್ತಿದೆ. ಒಂದೆಡೆ ಟಿ20 ವಿಶ್ವಕಪ್​ ಪಂದ್ಯಗಳ ಸ್ಥಳಾಂತರಕ್ಕೆ  ಒತ್ತಾಯಿಸುತ್ತಿರುವ ಬಿಸಿಬಿಯ ಮನವಿಗೆ ಐಸಿಸಿ ಕ್ಯಾರೆ ಅನ್ನುತ್ತಿಲ್ಲ. ಮತ್ತೊಂಡೆ ಆಟಗಾರರಿಂದಲೇ ಬಿಸಿಬಿಗೆ ಒತ್ತಡ ಎದುರಾಗಿದೆ. ಅದು ಕೂಡ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಹಣಕಾಸು ಸಮಿತಿ ಅಧ್ಯಕ್ಷನ ರಾಜೀನಾಮೆ ಕೇಳುವ ಮೂಲಕ..!

ಹೌದು, ಬಾಂಗ್ಲಾದೇಶ್ ಆಟಗಾರರು ಇದೀಗ ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ರಾಜೀನಾಮೆಯನ್ನು ಆಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಮಾಜಿ ಆಟಗಾರ ತಮೀಮ್ ಇಕ್ಬಾಲ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಬಾಂಗ್ಲಾ ಕ್ರಿಕೆಟಿಗರು ನಜ್ಮುಲ್ ಹಸನ್ ವಿರುದ್ಧ ತಿರುಗಿ ನಿಂತಿದ್ದಾರೆ.

ಬಾಂಗ್ಲಾ ಕ್ರಿಕೆಟಿಗರ ಬೆದರಿಕೆ:

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ ( ಬಿಪಿಎಲ್) ಮುಂದಿನ ಪಂದ್ಯಕ್ಕೂ ಮುನ್ನ ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಆಟಗಾರರು ಇನ್ನು ಮುಂದೆ ಕ್ರಿಕೆಟ್ ಆಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘ ( ಸಿಡಬ್ಲ್ಯೂಎಬಿ) ಬುಧವಾರ ಘೋಷಿಸಿದೆ.

ಅಂದರೆ ನಜ್ಮುಲ್ ಹಸನ್ ರಾಜೀನಾಮೆ ನೀಡಿದರೆ ಮಾತ್ರ ಬಾಂಗ್ಲಾದೇಶ್ ಕ್ರಿಕೆಟಿಗರು ಬಿಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿಯೇ ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳು ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ನಜ್ಮುಲ್ ಹಸನ್ ಗುರಿಯಾಗಿದ್ದೇಕೆ?

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡುವ ವೇಳೆ, ಐಸಿಸಿ ಟಿ20 ವಿಶ್ವಕಪ್ 2026 ರಿಂದ ಬಾಂಗ್ಲಾದೇಶ್ ತಂಡವನ್ನು ಹೊರಗಿಟ್ಟರೆ, ಮಂಡಳಿಯು ಯಾವುದೇ ಆರ್ಥಿಕ ನಷ್ಟವನ್ನು ಅನುಭವಿಸುವುದಿಲ್ಲ.

ಬಾಂಗ್ಲಾದೇಶ್ ತಂಡ ಆಡದಿದ್ದರೆ ಅದು ಆಟಗಾರರಿಗೆ ಮಾತ್ರ ನಷ್ಟವಾಗುತ್ತದೆ. ಏಕೆಂದರೆ ಅವರಿಗೆ ಪಂದ್ಯ ಶುಲ್ಕ ಸಿಗುವುದಿಲ್ಲ. ಇದರ ಹೊರತಾಗಿಯೂ ಯಾರಿಗೂ ನಷ್ಟವಿಲ್ಲ ಎಂಬ ಹೇಳಿಕೆ ನೀಡಿದ್ದರು.

ಟಿ20 ವಿಶ್ವಕಪ್​ನಲ್ಲಿ ಭಾಗವಹಿಸದೇ ಇದ್ದರೆ 2027 ರವರೆಗೆ ನಮ್ಮ ಆದಾಯದ ಮೇಲೆ ಪರಿಣಾಮ ಬೀರುವುದಿಲ್ಲ, ಏಕೆಂದರೆ ಇದನ್ನು 2022 ರ ಐಸಿಸಿ ಹಣಕಾಸು ಸಭೆಯಲ್ಲಿ ಈಗಾಗಲೇ ನಿರ್ಧರಿಸಲಾಗಿತ್ತು. ಆಟಗಾರರು ಆಡುವ ಪ್ರತಿಯೊಂದು ಪಂದ್ಯಕ್ಕೂ ಪಂದ್ಯ ಶುಲ್ಕವನ್ನು ಪಡೆಯುವುದರಿಂದ ಅವರು ತೊಂದರೆ ಅನುಭವಿಸುತ್ತಾರೆ.

ಒಬ್ಬ ಆಟಗಾರನು ಪಂದ್ಯದಲ್ಲಿ ಭಾಗವಹಿಸಿದರೆ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ ಅಥವಾ ವಿಶೇಷ ಪ್ರದರ್ಶನ ನೀಡಿದರೆ, ಅವರು ಐಸಿಸಿ ನಿಯಮಗಳ ಪ್ರಕಾರ ತಮ್ಮ ಶುಲ್ಕಗಳಿಗೆ ಅರ್ಹರಾಗಿರುತ್ತಾರೆ. ಆ ಹಣವು ಸಂಪೂರ್ಣವಾಗಿ ಆಟಗಾರನಿಗೆ ಸೇರಿದೆ. ಬಾಂಗ್ಲಾದೇಶ್ ಇಲ್ಲಿ ಆಡಲಿ ಅಥವಾ ಆಡದಿದ್ದರೂ, ಮಂಡಳಿಗೆ ಯಾವುದೇ ಲಾಭ ಅಥವಾ ನಷ್ಟವಿಲ್ಲ ನಜ್ಮುಲ್ ಹಸನ್ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನಂತಹ ಟೂರ್ನಿಯಲ್ಲಿ ಬಾಂಗ್ಲಾದೇಶ್ ತಂಡದ ಆಟಗಾರರು ಏನೂ ಮಾಡಲು ಸಾಧ್ಯವಾಗದಿದ್ದರೆ, ಅವರಿಗಾಗಿ ಖರ್ಚು ಮಾಡಿದ ಕೋಟ್ಯಂತರ ರೂಪಾಯಿಗಳನ್ನು ನಾವು ಅವರಿಂದ ಹಿಂಪಡೆಯಲಾಗುತ್ತದೆಯೇ? ಇಲ್ಲ ತಾನೆ, ಹಾಗಾಗಿ ಮಂಡಳಿಯಿಲ್ಲದೆ ಆಟಗಾರರು ಬದುಕುವುದು ಕಷ್ಟ  ಎಂದಿದ್ದರು.

ಮತ್ತೊಂದೆಡೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಯಂತಹ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ನಾಯಕ ತಮೀಮ್ ಇಕ್ಬಾಲ್ ಹೇಳಿಕೆ ನೀಡಿದ್ದರು. ಅಲ್ಲದೆ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವ ನಿರ್ಧಾರದಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ಮತ್ತು ಕ್ರಿಕೆಟ್‌ಗೆ ಆದ್ಯತೆ ನೀಡುವಂತೆ ತಮೀಮ್ ಮಂಡಳಿಗೆ ಸಲಹೆ ನೀಡಿದ್ದರು.

ತಮೀಮ್ ಇಕ್ಬಾಲ್ ಅವರ ಈ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ನಜ್ಮುಲ್ ಹಸನ್, ಅವನು “ಭಾರತೀಯ ಏಜೆಂಟ್ ” ಎಂದು ಕರೆದು ವಾಗ್ದಾಳಿ ನಡೆಸಿದ್ದರು.

ಮಾಜಿ ಆಟಗಾರನ ವಿರುದ್ಧ ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನೀಡಿದ ವಿವಾದಾತ್ಮಕ ಹೇಳಿಕೆಗೆ ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ ನಜ್ಮುಲ್ ಹಸನ್ ವಿರುದ್ಧ ಅನೇಕ ಕ್ರಿಕೆಟಿಗರು ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಅಗ್ರಸ್ಥಾನಕ್ಕೇರಿದ 7 ಗಂಟೆಯೊಳಗೆ ದ್ವಿತೀಯ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ

ಇದೀಗ ನಜ್ಮುಲ್ ಹಸನ್ ಅವರ ರಾಜೀನಾಮೆಯನ್ನು ಆಗ್ರಹಿಸುವ ಮೂಲಕ ಬಾಂಗ್ಲಾದೇಶ್ ಆಟಗಾರರು ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ ಅನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ.

Published On – 12:40 pm, Thu, 15 January 26

Source link

Pearl Ring: ಮುತ್ತಿನ ಉಂಗುರ ಧರಿಸುವುದರಿಂದ ಸಿಗುತ್ತೆ ಅಪಾರ ಪ್ರಯೋಜನ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Astrological Benefits of Pearl Ring: Enhance Mental Peace and Financial Stability

ಭಾರತೀಯ ಸಂಪ್ರದಾಯದಲ್ಲಿ ರತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಿಶೇಷವಾಗಿ ಮುತ್ತನ್ನು ಬಹಳ ಶುಭ ರತ್ನವೆಂದು ಪರಿಗಣಿಸಲಾಗುತ್ತದೆ. ಮುತ್ತಿನ ಉಂಗುರವನ್ನು ಧರಿಸುವುದರಿಂದ ಮಾನಸಿಕ ಶಾಂತಿಯಿಂದ ಹಿಡಿದು ಆರ್ಥಿಕ ಸ್ಥಿರತೆಯವರೆಗೆ ಅನೇಕ ಪ್ರಯೋಜನಗಳಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಜ್ಯೋತಿಷ್ಯದ ಪ್ರಕಾರ, ಮುತ್ತು ಚಂದ್ರ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ಚಂದ್ರನು ನಮ್ಮ ಮನಸ್ಸು, ಭಾವನೆಗಳು, ಶಾಂತಿ, ತಾಯಿಯೊಂದಿಗಿನ ಸಂಬಂಧ ಮತ್ತು ಸ್ಮರಣೆಯನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ, ಚಂದ್ರನ ಪ್ರಭಾವದಿಂದ ದುರ್ಬಲರಾಗಿರುವವರಿಗೆ ಮುತ್ತು ತುಂಬಾ ಪ್ರಯೋಜನಕಾರಿಯಾಗಿದೆ.

ಮುತ್ತಿನ ಉಂಗುರ ಧರಿಸುವುದರಿಂದಾಗುವ ಪ್ರಯೋಜನಗಳು:

ಮುತ್ತುಗಳನ್ನು ಧರಿಸುವುದರಿಂದ ಮಾನಸಿಕ ಶಾಂತಿ ಹೆಚ್ಚಾಗುತ್ತದೆ ಮತ್ತು ಒತ್ತಡ, ಆತಂಕ ಮತ್ತು ಕೋಪ ಕಡಿಮೆಯಾಗುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ . ಹೆಚ್ಚಿನ ಮಟ್ಟದ ಉದ್ವೇಗಕ್ಕೆ ಒಳಗಾಗುವವರಿಗೆ ಇದು ವಿಶೇಷವಾಗಿ ಒಳ್ಳೆಯದು.

ನಿದ್ರೆಯ ಸಮಸ್ಯೆಯಿಂದ ಮುಕ್ತಿ:

ನಿದ್ರಾಹೀನತೆ, ಚಡಪಡಿಕೆ ಮುಂತಾದ ಸಮಸ್ಯೆಗಳಿರುವವರು ಮುತ್ತುಗಳನ್ನು ಧರಿಸುವುದರಿಂದ ಉತ್ತಮ ನಿದ್ರೆ ಪಡೆಯಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಮುತ್ತು ಅನಗತ್ಯ ಚಿಂತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಆಲೋಚನೆಗಳಲ್ಲಿ ಸ್ಥಿರತೆಯನ್ನು ತರುತ್ತದೆ.

ಆರ್ಥಿಕ ಸ್ಥಿರತೆ:

ಚಂದ್ರನು ಬಲವಾಗಿದ್ದರೆ, ಕುಟುಂಬ ಜೀವನ ಮತ್ತು ಸಂಪತ್ತಿನ ವಿಷಯಗಳು ಸ್ಥಿರವಾಗಿರುತ್ತವೆ ಎಂದು ನಂಬಲಾಗಿದೆ. ಖರ್ಚುಗಳನ್ನು ನಿಯಂತ್ರಿಸಬಹುದು ಮತ್ತು ಆದಾಯವು ಸ್ಥಿರವಾಗಿರುತ್ತದೆ.

ಆರೋಗ್ಯಕ್ಕೆ ಒಳ್ಳೆಯದು:

ಜ್ಯೋತಿಷ್ಯದ ಪ್ರಕಾರ, ಮುತ್ತುಗಳು ದೇಹದಲ್ಲಿನ ದ್ರವಗಳ ಸಮತೋಲನವನ್ನು ಸುಧಾರಿಸುತ್ತದೆ. ಇದು ಹಾರ್ಮೋನುಗಳ ಅಸಮತೋಲನ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪರಿಹಾರವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಮಹಿಳೆಯರಿಗೆ ವಿಶೇಷ ಪ್ರಯೋಜನ:

ಮಹಿಳೆಯರಲ್ಲಿ ಹಾರ್ಮೋನುಗಳ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡಕ್ಕೆ ಮುತ್ತು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಗರ್ಭಧಾರಣೆಯ ಸಮಸ್ಯೆಗಳಿರುವವರಿಗೂ ಇದನ್ನು ಶಿಫಾರಸು ಮಾಡಲಾಗುತ್ತದೆ.

ಮುತ್ತು ಯಾರು ಧರಿಸಬೇಕು?

ಸಾಮಾನ್ಯವಾಗಿ ದುರ್ಬಲ ಚಂದ್ರ, ಕರ್ಕಾಟಕ ರಾಶಿಯ ಜನರಿಗೆ ಸೂಕ್ತವಾಗಿದೆ. ಮಿಥುನ, ತುಲಾ, ಮೀನ ರಾಶಿಯವರು ತಜ್ಞರ ಸಲಹೆಯೊಂದಿಗೆ ಇದನ್ನು ಧರಿಸಬಹುದು.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಮುತ್ತಿನ ಉಂಗುರ ಧರಿಸುವುದು ಹೇಗೆ?

ಬೆಳ್ಳಿಯ ಉಂಗುರದಲ್ಲಿ ಮುತ್ತು ಹುದುಗಿದ್ದರೆ ಉತ್ತಮ. ಬಲಗೈಯ ಕಿರುಬೆರಳಿಗೆ ಧರಿಸುವುದು ಶುಭ. ಸೋಮವಾರ ಬೆಳಿಗ್ಗೆ ಶುಭ ಸಮಯದಲ್ಲಿ ಇದನ್ನು ಧರಿಸಬೇಕು. ಧರಿಸುವ ಮೊದಲು ಚಂದ್ರ ಮಂತ್ರವನ್ನು ಪಠಿಸುವುದು ಒಳ್ಳೆಯದು. “ಓಂ ಸೋಮಾಯ ನಮಃ” ಎಂದು 11 ಅಥವಾ 108 ಬಾರಿ ಜಪಿಸಿ.

ನಕಲಿ ಮುತ್ತು ಧರಿಸಿದರೆ ಏನಾಗುತ್ತದೆ?

ನಕಲಿ ಅಥವಾ ಕಳಪೆ ಗುಣಮಟ್ಟದ ಮುತ್ತುಗಳನ್ನು ಧರಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದಿರಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ನಕಾರಾತ್ಮಕ ಪರಿಣಾಮಗಳೂ ಉಂಟಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ಆದ್ದರಿಂದ, ವಿಶ್ವಾಸಾರ್ಹ ರತ್ನ ವ್ಯಾಪಾರಿಗಳಿಂದ ಮಾತ್ರ ಖರೀದಿಸಬೇಕು. ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಬ್ಬದ ದಿನವೇ ಪ್ರಯಾಣಿಕರಿಗೆ ಶುಭ ಸುದ್ದಿ​​ ಕೊಟ್ಟ ನಮ್ಮ ಮೆಟ್ರೋ: ಇಂದಿನಿಂದ ಕ್ಯೂಆರ್​ ಆಧಾರಿತ ಪಾಸ್​​ ಲಭ್ಯ – Kannada News | BMRCL Introduces QR Code Passes for Unlimited Metro Travel from Today

ಬೆಂಗಳೂರು, ಜನವರಿ 15: ಸಂಕ್ರಾಂತಿ ಹಬ್ಬದ ದಿನವೇ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್​ ಆಧಾರಿತ ದಿನ,‌ ಮೂರು ದಿನ ಮತ್ತು 5 ದಿನಗಳ ಪಾಸ್ ಲಭ್ಯವಿರಲಿದೆ. 1, 3, 5 ದಿನಗಳ ಅನಿಯಮಿತ ಪ್ರಯಾಣದ ಪಾಸ್​​ನ BMRCL ಪರಿಚಯಿಸಿದ್ದು, ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಈ​ ಕ್ರಮ ಕೈಗೊಳ್ಳಲಾಗಿದೆ. ಇಷ್ಟುದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್​​ ಕಾರ್ಡ್​ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು. ಅದಕ್ಕಾಗಿ ಭದ್ರತಾ ಠೇವಣಿ 50 ರೂಪಾಯಿ ಪಾವತಿ ಮಾಡಬೇಕಿತ್ತು. ಆದರಿನ್ನು ಮೊಬೈಲ್‌ನಲ್ಲೇ QR ಕೋಡ್ ಬಳಸಿ ಪಾಸ್ ಪಡೆಯಬಹುದಾಗಿದ್ದು, ಯಾವುದೇ ಭದ್ರತಾ ಠೇವಣಿ ಇರುವುದಿಲ್ಲ. 1 ದಿನದ ಮೆಟ್ರೋ ಪ್ರಯಾಣ ಪಾಸ್​​ಗೆ 250 ರೂ., 3 ದಿನಗಳ ಮೆಟ್ರೋ ಪ್ರಯಾಣ ಪಾಸ್​​ಗೆ 550 ರೂ. ಮತ್ತು 5 ದಿನಗಳ ಮೆಟ್ರೋ ಪ್ರಯಾಣ ಪಾಸ್​ಗೆ 850 ರೂ. ನಿಗದಿ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ – Kannada News | US immigrant visa freeze on 75 countries, including Pakistan, Bangladesh

ವಾಷಿಂಗ್ಟನ್, ಜನವರಿ 15: ದೇಶದೊಳಗೆ ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ತರಬಲ್ಲಂತಹ ವಿದೇಶೀಯರನ್ನು ನಿರ್ಬಂಧಿಸುವ ಸಲುವಾಗಿ ಅಮೆರಿಕ ಸರ್ಕಾರ ಕೆಲ ದೇಶಗಳ ನಿವಾಸಿಗಳಿಗೆ ವೀಸಾ ನೀಡುವಿಕೆಯನ್ನು (US Immigration Visa) ಸ್ಥಗಿತಗೊಳಿಸಿದೆ. ಒಟ್ಟು 75 ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ಫ್ರೀಜ್ ಮಾಡಲಾಗಿದೆ. ಈ 75 ದೇಶಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದವರು ಸೇರಿವೆ. ಪಾಕಿಸ್ತಾನದೊಂದಿಗೆ ಅಮೆರಿಕದ ಸಂಬಂಧಕ್ಕೆ ಹೊಸ ಪುಷ್ಟಿ ಸಿಕ್ಕಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ.

ಗಮನಿಸಬೇಕಾದ ಸಂಗತಿ ಎಂದರೆ ಮೇಲಿನ ವೀಸಾ ನಿರ್ಬಂಧವು ವಲಸಿಗರಿಗೆ ಮಾತ್ರವೇ ಅನ್ವಯ ಆಗುವುದು. ಇಮ್ಮೈಗ್ರೇಶನ್ ವೀಸಾ ಅರ್ಜಿ ಸಲ್ಲಿಸಿರುವವರ ಪೈಕಿ ಆಯ್ದ 75 ದೇಶಗಳ ಜನರ ಅರ್ಜಿ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಆದರೆ, ಪ್ರವಾಸ, ಬ್ಯುಸಿನೆಸ್ ಇತ್ಯಾದಿ ತಾತ್ಕಾಲಿಕವಾಗಿ ಬಂದು ಹೋಗುವವರಿಗೆ ತಡೆ ಇರುವುದಿಲ್ಲ, ವೀಸಾ ನಿರಾಕರಿಸಲಾಗುವುದಿಲ್ಲ.

ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಅಮೆರಿಕದ ವಲಸೆ ವೀಸಾ ಸ್ಥಗಿತಗೊಂಡಿರುವ 75 ದೇಶಗಳ ಪಟ್ಟಿ

  1. ಅಫ್ಗಾನಿಸ್ತಾನ
  2. ಆಲ್ಬೇನಿಯಾ
  3. ಆಲ್ಜೀರಿಯಾ
  4. ಆಂಟಿಗುವಾ ಬರ್ಬುಡಾ
  5. ಆರ್ಮೇನಿಯಾ
  6. ಅಜರ್ಬೈಜಾನ್
  7. ಬಹಾಮಸ್
  8. ಬಾಂಗ್ಲಾದೇಶ
  9. ಬಾರ್ಬಡಾಸ್
  10. ಬೆಲಾರಸ್
  11. ಬೆಲಿಜೆ
  12. ಭೂತಾನ್
  13. ಬೋಸ್ನಿಯಾ ಹರ್ಜೆಗೋವಿನಾ
  14. ಬ್ರೆಜಿಲ್
  15. ಕಾಂಬೋಡಿಯಾ
  16. ಕ್ಯಾಮರೂನ್
  17. ಕೇಪ್ ವೆರ್ಡೆ
  18. ಕೊಲಂಬಿಯಾ
  19. ಕೋಟೆ ಡೀ ಐವೋರೆ (ಐವರಿ ಕೋಸ್ಟ್)
  20. ಕ್ಯೂಬಾ
  21. ಕಾಂಗೊ ಡೆಮಾಕ್ರಟಿಕ್ ರಿಪಬ್ಲಿಕ್
  22. ಡಾಮಿನಿಕಾ
  23. ಈಜಿಪ್ಟ್
  24. ಎರಿಟ್ರಿಯಾ
  25. ಇಥಿಯೋಪಿಯಾ
  26. ಫಿಜಿ
  27. ಗಾಂಬಿಯಾ
  28. ಜಾರ್ಜಿಯಾ
  29. ಘಾನಾ
  30. ಗ್ರೆನಾಡಾ
  31. ಗಾಟಿಮಾಲ
  32. ಗಿನಿಯಾ
  33. ಹೈಟಿ
  34. ಇರಾನ್
  35. ಇರಾಕ್
  36. ಜಮೈಕಾ
  37. ಜಾರ್ಡಾನ್
  38. ಕಜಕಸ್ತಾನ್
  39. ಕೊಸೋವೋ
  40. ಕುವೇತ್
  41. ಕಿರ್ಗಿಸ್ತಾನ್
  42. ಲಾವೋಸ್
  43. ಲೆಬನಾನ್
  44. ಲೈಬೀರಿಯಾ
  45. ಲಿಬಿಯಾ
  46. ನಾರ್ತ್ ಮೆಸಿಡೋನಿಯಾ
  47. ಮಾಲ್ಡೋವಾ
  48. ಮಂಗೋಲಿಯಾ
  49. ಮಾಂಟೆನೀಗ್ರೋ
  50. ಮೊರಾಕ್ಕೋ
  51. ಮಯನ್ಮಾರ್
  52. ನೇಪಾಳ್
  53. ನಿಕಾರಾಗುವಾ
  54. ನೈಜೀರಿಯಾ
  55. ಪಾಕಿಸ್ತಾನ್
  56. ಕಾಂಗೋ ರಿಪಬ್ಲಿಕ್
  57. ರಷ್ಯಾ
  58. ರುವಾಂಡ
  59. ಸೇಂಟ್ ಕಿಟ್ಸ್ ಅಂಡ್ ನೆವಿಸ್
  60. ಸೇಂಟ್ ಲೂಸಿಯಾ
  61. ಸೇಂಟ್ ವಿನ್ಸೆಂಟ್ ಅಂಡ್ ಗ್ರಿನಾಡಿನ್ಸ್
  62. ಸೆನೆಗಲ್
  63. ಸಿಯೆರಾ ಲಿಯೋನೆ
  64. ಸೊಮಾಲಿಯಾ
  65. ಸೌತ್ ಸುಡಾನ್
  66. ಸುಡಾನ್
  67. ಸಿರಿಯಾ
  68. ತಾಂಜಾನಿಯಾ
  69. ಥಾಯ್ಲೆಂಡ್
  70. ಟೋಗೋ
  71. ಟುನಿಶಿಯಾ
  72. ಉಗಾಂಡ
  73. ಉರುಗ್ವೆ
  74. ಉಜ್ಬೆಕಿಸ್ತಾನ್
  75. ಯೆಮೆನ್

ಅಕ್ರಮ ವಲಸಿಗರ ಹಾವಳಿ ತಪ್ಪಿಸಲು ಈ ಕ್ರಮ

ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯಗಳು ಉತ್ತಮವಾಗಿವೆ. ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದು, ಡ್ರಗ್ಸ್, ಅಪರಾಧ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳ ಮೂಲಕ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯ ತರಬಹುದು. ಇದನ್ನು ನಿಯಂತ್ರಿಸಲು ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ ಮೇಲೆ ತಿಳಿಸಿದ 75 ದೇಶಗಳ ಜನರ ವಲಸೆ ಅರ್ಜಿಗಳನ್ನು ಪ್ರೋಸಸ್ ಮಾಡಲಾಗುವುದಿಲ್ಲ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿಡ್ಲಘಟ್ಟ ಪೌರಾಯುಕ್ತೆಯನ್ನು ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು – Kannada News | Priyank Kharge Slams Congress Leader for Abuse of Sidlaghatta Municipal Woman Commissioner

ಬೆಂಗಳೂರು, ಜನವರಿ 15: ಶಿಡ್ಲಘಟ್ಟ ಪೌರಾಯುಕ್ತೆಯನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜೀವ್ ಗೌಡ ಅಥವಾ ಬೇರೆ ಯಾರೇ ಆಗಿರಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಬೇರೆಯವರನ್ನು ನಿಂದಿಸಲು ಅಥವಾ ಅವಾಚ್ಯ ಶಬ್ದಗಳನ್ನು ಬಳಸಲು ಯಾರಿಗೂ ಹಕ್ಕಿಲ್ಲ ಎಂದರು. ಅಲ್ಲದೆ, ಪಕ್ಷದ ಅಧ್ಯಕ್ಷರು ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಸಂಸ್ಕೃತಿ ಕಲಿಯಬೇಕಿಲ್ಲ. ಮುನಿರತ್ನ, ಸಿ.ಟಿ. ರವಿ ಯಾವ ರೀತಿ ಮಾತನಾಡಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ ಎಂದು ಉಲ್ಲೇಖಿಸಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಸಂಸ್ಕೃತಿ ಇಲ್ಲ ಎಂದು ಟೀಕಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಫ್ರಾನ್ಸ್‌ಗಿಂತ ಭಾರತ ಉತ್ತಮ; ವಿದೇಶಿ ಮಹಿಳೆ ನೀಡಿದ ಕಾರಣ ನೋಡಿ – Kannada News | These are the reasons a French woman gave why India is better than France

ಭಾರತ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ವಿದೇಶಿಗರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇಲ್ಲಿನ ವಿವಿಧ ಖಾದ್ಯಗಳ ರುಚಿಯನ್ನು ಸವಿಯುತ್ತಾರೆ. ಇನ್ನು ಕೆಲ ವಿದೇಶಿಗರು ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿಯೇ ನೆಲೆಸುತ್ತಾರೆ. ಇದೀಗ ಭಾರತದಲ್ಲಿ ಫ್ರೆಂಚ್ ಮೂಲದ ಮಹಿಳೆಯೂ (France woman) ಭಾರತದಲ್ಲಿ ವಾಸಿಸುತ್ತಿದ್ದು, ಭಾರತ ನನಗೆ ಇಷ್ಟವಾಗಿದ್ದು ಯಾಕೆ ಎನ್ನುವುದನ್ನು ವಿವರಿಸಿದ್ದಾರೆ. ಫ್ರಾನ್ಸ್‌ಗಿಂತ ಭಾರತ ಉತ್ತಮ ಎನ್ನಲು ಐದು ಕಾರಣಗಳನ್ನು ನೀಡಿದ್ದಾರೆ. ವಿದೇಶಿ ಮಹಿಳೆ ಭಾರತವನ್ನು ಹಾಡಿ ಹೊಗಳಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

freldaway ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ಕಾಣಬಹುದು. ಭಾರತ ಇಷ್ಟ ಎನ್ನಲು ಕಾರಣವಾಗಿರುವ ಐದು ವಿಚಾರಗಳನ್ನು ಈ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋಗೆ ಥಿಂಗ್ಸ್ ಇಂಡಿಯಾ ಡಸ್ ಬೆಟರ್ ದೆನ್ ಫ್ರಾನ್ಸ್” ಎಂಬ ಶೀರ್ಷಿಕೆ ನೀಡಲಾಗಿದೆ. ಕೆಲಸಕ್ಕಾಗಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿರುವ ಫ್ರಾನ್ಸ್ ಮಹಿಳೆಗೆ ಭಾರತದ ಬೀದಿಬದಿ ಆಹಾರ, ಭಾರತೀಯ ಆಕರ್ಷಕ ಆಭರಣಗಳು, ಆರಾಮದಾಯಕ ಬಸ್ ಹಾಗೂ ರೈಲು ಪ್ರಯಾಣ, ಕೂದಲ ಆರೈಕೆಗೆ ಅಳವಡಿಸಿಕೊಂಡ ಸಾಂಪ್ರದಾಯಿಕ ವಿಧಾನ ಹಾಗೂ ಭಾರತೀಯ ಅತಿಥಿ ಸತ್ಕಾರ ಈ ಎಲ್ಲಾ ಅಂಶಗಳು ಇಷ್ಟವಾಗಿದೆಯಂತೆ. ಫ್ರಾನ್ಸ್‌ನಲ್ಲಿ ಈ ಎಲ್ಲಾ ವಿಚಾರಗಳು ಕಾಣಸಿಗಲ್ಲ  ಎಂದು ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಸ್ನೇಹಿತೆಯ ಜತೆಗೆ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ ಒಬ್ಬ ಬಳಕೆದಾರ ಭಾರತೀಯನಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಂಶಗಳು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯರನ್ನು ವಿದೇಶಿಗರು ಎಷ್ಟು ಗಮನ ಹರಿಸುತ್ತಾರೆ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ. ನಿಜಕ್ಕೂ ಖುಷಿಯಾಗುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link