Category Archives: Blog

Your blog category

ಶಿಡ್ಲಘಟ್ಟ ಪೌರಾಯುಕ್ತೆಗೆ ಅಶ್ಲೀಲ ನಿಂದನೆ ಮಾಡಿದ ಕಾಂಗ್ರೆಸ್ ಮುಖಂಡನಿಗೆ ಎದುರಾಯ್ತು ಎರಡೆರಡು ಸಂಕಷ್ಟ – Kannada News | Congress Leader Faces Double Trouble for Obscene Abuse Against Shidlaghatta Municipal Commissioner

ರಾಜೀವ್ ಗೌಡ (ಎಡಚಿತ್ರ) ಹಾಗೂ ಅವರ ವಿರುದ್ಧ ದೂರು ನೀಡುತ್ತಿರುವುದು

ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿರುವ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡಗೆ (Rajeev Gowda) ಈಗ ಎರಡೆರಡು ಸಂಕಷ್ಟ ಎದುರಾಗಿದೆ. ರಾಜೀವ್ ಗೌಡ ವಿರುದ್ಧ ಪೌರಾಯುಕ್ತ ಅಮೃತ ಗೌಡ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, ಇದೀಗ ಜೆಡಿಎಸ್ ಮುಖಂಡರು ಕೂಡ ದೂರು ನೀಡಿದ್ದಾರೆ. ಸ್ಥಳೀಯ ಜೆಡಿಎಸ್ ಶಾಸಕ ಬಿಎಂ ರವಿಕುಮಾರ್ ವಿರುದ್ಧವೂ ರಾಜೀವ್ ಗೌಡ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಜೆಡಿಎಸ್ ವತಿಯಿಂದ ದೂರು ನೀಡಲಾಗಿದೆ. ಇವುಗಳನ್ನು ಆಧರಿಸಿ ಸದ್ಯ 2 ಎಫ್‌ಐಆರ್‌ಗಳು ದಾಖಲಾಗಿವೆ.

ತಲೆಮರೆಸಿಕೊಂಡಿರುವ ರಾಜೀವ್ ಗೌಡ

ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷರರೂ ಆಗಿರುವ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದಿದ್ದರು. ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಆರೋಪಿ ರಾಜೀವ್ ಗೌಡ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಫೋನ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ರಾಜೀವ್ ಗೌಡರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ವಿಪಕ್ಷಗಳು, ಪುರಸಭೆ ನೌಕರರು, ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ತೀವ್ರ ಆಗ್ರಹ ವ್ಯಕ್ತವಾಗಿತ್ತು.

ಜನಪ್ರತಿನಿಧಿ ಅಲ್ಲದಿದ್ದರೂ ಆಡಳಿತ ನಡೆಸಲು ಯತ್ನ ಆರೋಪ

ರಾಜೀವ್ ಗೌಡ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ದರ್ಬಾರ್ ನಡೆಸಲು ರಾಜೀವ್ ಗೌಡ ಯತ್ನಿಸುತ್ತಿದ್ದಾರೆ. ಯಾರೇ ಅಧಿಕಾರಿಗಳು ಬಂದರೂ ತಮ್ಮ ಸಮ್ಮತಿ ಪಡೆಯುವಂತೆ ಒತ್ತಡ ಹೇರುತ್ತಿದ್ದರು. ವಿವಿಧ ಇಲಾಖೆಗಳಲ್ಲಿ ತಮ್ಮದೇ ಮಾತು ನಡೆಯಬೇಕು ಎಂದು ಒತ್ತಡ ಹೇಳುತ್ತಿದ್ದರು ಎಂಬ ಆರೋಪಗಳು ಕೂಡ ಈಗ ಕೇಳಿ ಬಂದಿವೆ.

ಪ್ರಕರಣದ ಹಿನ್ನೆಲೆ

ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿದ್ದರಿಂದ ಸಿಟ್ಟಾಗಿದ್ದ ರಾಜೀವ್ ಗೌಡ ಪೌರಾಯುಕ್ತೆ ಅಮೃತ ಗೌಡಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲವಾಗಿ ನಿಂದಿಸಿದ್ದಾರು. ಈ ವಿಚಾರವಾಗಿ ಅಮೃತ ಗೌಡ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ, ಪೊಲೀಸರಿಗೂ ದೂರು ನೀಡಿದ್ದರು. ಈ ವಿಚಾರ ನಂತರ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲೂ ಬ್ಯಾನರ್ ಗಲಾಟೆ: ಕಾಂಗ್ರೆಸ್ ನಾಯಕನ ಅಶ್ಲೀಲ ನಿಂದನೆಗೆ ಕಣ್ಣೀರು ಹಾಕಿದ ಪೌರಾಯುಕ್ತೆ

ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ನಗರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಪ್ರತಿಪಕ್ಷಗಳು ಕೂಡ ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐದು ವರ್ಷದ ಬಾಲಕಿಯನ್ನು ಬೆದರಿಸಿ 55 ವರ್ಷದ ವ್ಯಕ್ತಿಯಿಂದ 5 ದಿನಗಳ ಕಾಲ ಅತ್ಯಾಚಾರ – Kannada News | Chhattisgarh man, Physically assaults 5 year old, threatens to kill her if she complains

ಛತ್ತೀಸ್​ಗಢ, ಜನವರಿ 15: ಐದು ವರ್ಷದ ಬಾಲಕಿ(Girl)ಗೆ ಐದು ದಿನಗಳ ಕಾಲ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಚಾಕೊಲೇಟ್ ಕೊಟ್ಟು ಮನೆಗೆ ಕರೆದೊಯ್ದ ಅನ್ಸಾರಿ ಜನವರಿ 7ರಿಂದ 11ರವರೆಗೆ ಐದು ದಿನಗಳ ಕಾಲ ನಿರಂತರವಾಗಿ ದೌರ್ಜನ್ಯವೆಸಗಿರುವುದು ಬೆಳಕಿಗೆ ಬಂದಿದೆ. ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಆರೋಪಿ ಬೆದರಿಕೆ ಹಾಕಿದ್ದರಿಂದ ಬಾಲಕಿ ಭಯದಿಂದ ಮೌನವಾಗಿಯೇ ಉಳಿದಿದ್ದಳು. ದೈಹಿಕ ನೋವು ಸಹಿಸಲಾಗದಿದ್ದಾಗ ಬಾಲಕಿ ನಡೆದಿರುವ ವಿಚಾರವನ್ನು ಮನೆಯಲ್ಲಿ ಹೇಳಿಕೊಂಡಿದ್ದಾಳೆ.

ಜನವರಿ 12 ರಂದು ಬಾಲಕಿಗೆ ಚಿಕ್ಕಮ್ಮ ಸ್ನಾನ ಮಾಡಿಸುವಾಗ ತನ್ನ ಖಾಸಗಿ ಭಾಗಗಳಲ್ಲಿ ತೀವ್ರ ನೋವಿದೆ ಎಂದು ಹೇಳಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ. ಮಗುವಿನ ಸ್ಥಿತಿ ಮತ್ತು ಯಾತನೆಯಿಂದ ಗಾಬರಿಗೊಂಡ ಕುಟುಂಬ ಸದಸ್ಯರು ಅವಳನ್ನು ನಿಧಾನವಾಗಿ ಪ್ರಶ್ನಿಸಿದಾಗ, ಅವಳು ಹಲವಾರು ದಿನಗಳಿಂದ ಅನುಭವಿಸಿದ ಯಾತನೆಯ ಬಗ್ಗೆ ವಿವರಿಸಿದ್ದಾಳೆ.

ಪೊಲೀಸರು ದಾಖಲಿಸಿಕೊಂಡಿರುವ ಹೇಳಿಕೆಯ ಪ್ರಕಾರ, ಅನ್ಸಾರಿ ಹತ್ತಿರದ ಅಂಗಡಿಯಿಂದ ಚಾಕೊಲೇಟ್ ಮತ್ತು ಇತರ ವಸ್ತುಗಳನ್ನು ನೀಡುವ ನೆಪದಲ್ಲಿ ಅಪ್ರಾಪ್ತ ವಯಸ್ಕನನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ. ಕುಟುಂಬವು ತಕ್ಷಣ ಸಿವಿಲ್ ಲೈನ್ಸ್ ಪೊಲೀಸರನ್ನು ಸಂಪರ್ಕಿಸಿತು, ನಂತರ ಪ್ರಕರಣ ದಾಖಲಿಸಲಾಯಿತು ಮತ್ತು ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.

ಮತ್ತಷ್ಟು ಓದಿ: ರಸ್ತೆ ಬದಿ ನಿಂತಿದ್ದ ಅಪ್ರಾಪ್ತೆಯನ್ನೂ ಬಿಡದ ಕಾಮುಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ?

ತನಿಖೆ ನಡೆಯುತ್ತಿದೆ ಮತ್ತು ಕಾನೂನಿನ ಪ್ರಕಾರ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರದೇಶದಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ.

ಈ ಪ್ರಕರಣವು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಬಜರಂಗದಳದ ಸದಸ್ಯರು, ಬಾಲಕಿಯ ಕುಟುಂಬದೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು.

ಈ ಘಟನೆಯು ಮಕ್ಕಳ ನಿರಂತರ ದುರ್ಬಲತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ ಮತ್ತು ಮಕ್ಕಳ ಸುರಕ್ಷತೆ ಮತ್ತು ಸಮುದಾಯದ ಜಾಗರೂಕತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ.
ಛತ್ತೀಸ್‌ಗಢ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ಅಪರಾಧಗಳ ಪ್ರಕರಣಗಳು ವರದಿಯಾದ ಸಂಖ್ಯೆಯಲ್ಲಿ ಏರಿಳಿತಗಳು ಕಂಡುಬರುತ್ತಿವೆಯಷ್ಟೇ.  ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಶೀತಗಾಳಿ ವಾತಾವರಣ, ಆರೋಗ್ಯದ ಕಡೆ ಇರಲಿ ಗಮನ – Kannada News | Bangalore Temperature 28°C: IMD Forecasts Mixed Karnataka Weather and Cold Wave

ಬೆಂಗಳೂರು, ಜ.15: ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ (Karnataka Weather) ವಾತಾವರಣ ಹೇಗಿದೆ. ಹವಾಮಾನ ಇಲಾಖೆ ನೀಡಿದ ಸೂಚನೆಗಳೇನು?  ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು,  ಕರ್ನಾಟಕದಾದ್ಯಂತ ಹವಾಮಾನವು ಮಿಶ್ರವಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹಿತಕರವಾದ ವಾತಾವರಣವಿದೆ.  ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿಯ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನ ನಗರದಲ್ಲಿ ಇಂದು ಗರಿಷ್ಠ ತಾಪಮಾನ 28°C ರಿಂದ 29°C ವರೆಗೆ ಇರಲಿದ್ದು, ಕನಿಷ್ಠ ತಾಪಮಾನ 16°C ಇರಲಿದೆ. ಮುಂಜಾನೆ ಮಂಜು ಮುಸುಕಿದ ವಾತಾವರಣವಿದ್ದು, ದಿನವಿಡೀ ಮೋಡ ಕವಿದ ಹವಾಮಾನವಿರುತ್ತದೆ. ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.

ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶೀತಗಾಳಿ (Cold Wave) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಭಾಗಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ ಕಡಿಮೆಯಾಗಲಿದೆ. ಇನ್ನು ಹೊನ್ನಾವರ, ಮಂಗಳೂರು ಮತ್ತು ಕಾರವಾರ ಭಾಗಗಳಲ್ಲಿ ಶುಷ್ಕ ಹವಾಮಾನವಿದ್ದು, ಗರಿಷ್ಠ ತಾಪಮಾನವು 33°C – 35°C ರವರೆಗೆ ದಾಖಲಾಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಣ ಹವಾಮಾನವಿರಲಿದ್ದು, ರಾತ್ರಿಯ ಸಮಯದಲ್ಲಿ ಚಳಿ ಹೆಚ್ಚಿರಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್​ನಲ್ಲಿ ಇಂದಿನಿಂದ 7ನೇ ರೈಲು ಸಂಚಾರ

ಇನ್ನು ರಾಜ್ಯದ ಹವಾಮಾನ ವರದಿಯ ಪ್ರಕಾರ, ಕರ್ನಾಟಕದ ಬಯಲು ಪ್ರದೇಶವಾದ ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 11.0°C ದಾಖಲಾಗಿದೆ. ಈ ಮಧ್ಯೆ, ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶುಷ್ಕ ಹವಾಮಾನದ ಪರಿಸ್ಥಿತಿ ಇರಲಿದೆ. ಭಾಗಶಃ ಮೋಡ ಕವಿದಿರುತ್ತದೆ, ಬೆಳಗಿನ ಜಾವ ಮಂಜಿನ ವಾತಾರಣ ಇರಲಿದೆ. ಹಗಲು ಮತ್ತು ರಾತ್ರಿ ತಾಪಮಾನವು ಸ್ಥಿರವಾಗಿರುತ್ತದೆ . ಗರಿಷ್ಠ 27°C ಮತ್ತು ಕನಿಷ್ಠ 17°C ಹತ್ತಿರ ಇರುತ್ತದೆ. ಒಟ್ಟಾರೆಯಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದರೆ, ಉತ್ತರ ಭಾಗದಲ್ಲಿ ಚಳಿಯ ಪ್ರಭಾವ ಹೆಚ್ಚಿರುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:02 am, Thu, 15 January 26

Source link

ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ – Kannada News | Fire Breaks Out at Scrap Warehouse in Bengaluru’s Begur, Plastic Materials Gutted

ಬೆಂಗಳೂರು, ಜನವರಿ 15: ನಗರದ ಬೇಗೂರು ಪ್ರದೇಶದ ಅಕ್ಷಯನಗರದಲ್ಲಿರುವ ಸ್ಕ್ರಾಪ್ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಧಗಧಗನೆ ಹೊತ್ತಿ ಉರಿದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಉಂಟಾಯಿತು. ಬೆಂಕಿಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸದ್ಯ ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದೆ. ಘಟನೆ ಕುರಿತು ಬೇಗೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Source link

Horoscope Today 15 January; ಇಂದು 12 ರಾಶಿಗಳ ಅದೃಷ್ಟ ಫಲ ಹೇಗಿದೆ? – Kannada News | Makara Sankranti 2026: Astrological Forecasts for All Zodiac Signs by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 15ರ ಗುರುವಾರದ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರ, ಪುಷ್ಯಮಾಸ, ಕೃಷ್ಣಪಕ್ಷ ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿಯೋಗ ಮತ್ತು ಕೌಲವಕರಣ ಇರುವ ದಿನವಾಗಿದೆ. ರಾಹುಕಾಲವು ಮಧ್ಯಾಹ್ನ 1:54 ರಿಂದ 3:20ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಮಧ್ಯಾಹ್ನ 12:29 ರಿಂದ 1:53ರ ವರೆಗೆ ಇರುತ್ತದೆ. ಈ ದಿನದ ಪ್ರಮುಖ ಘಟನೆ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಆರಂಭ. ಸೂರ್ಯ ಭಗವಾನರು ಇಂದು ಉತ್ತರ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾರೆ. ಬೆಳಗ್ಗೆ 6:44 ರಿಂದ 10:11ರ ವರೆಗೆ ಈ ಪುಣ್ಯಕಾಲವಿರುತ್ತದೆ. ಇಂದು ಶ್ರೀರಂಗಪಟ್ಟಣದಲ್ಲಿ ಲಕ್ಷದೀಪೋತ್ಸವ, ಶಿವಗಂಗೋತ್ಪತ್ತಿ ಹಾಗೂ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ರವಿ ಮಕರ ರಾಶಿಯಲ್ಲೂ ಮತ್ತು ಚಂದ್ರ ವೃಶ್ಚಿಕ ರಾಶಿಯಲ್ಲೂ ಸಂಚರಿಸಲಿದ್ದಾರೆ. ಇದರ ಜತೆಗೆ ಬಸವರಾಜ ಗುರೂಜಿ 12 ರಾಶಿಗಳ ಆರ್ಥಿಕ, ಉದ್ಯೋಗ, ಕೌಟುಂಬಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಫಲಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಅದೃಷ್ಟದ ಸಂಖ್ಯೆ, ಶುಭ ಬಣ್ಣ ಮತ್ತು ಪಠಿಸಬೇಕಾದ ಮಂತ್ರಗಳನ್ನು ತಿಳಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್​ನಲ್ಲಿ ಇಂದಿನಿಂದ 7ನೇ ರೈಲು ಸಂಚಾರ – Kannada News | Good News for Namma Metro Commuters: 7th Train Starts Operations on Yellow Line from Today

ಬೆಂಗಳೂರು, ಜನವರಿ 15: ನಮ್ಮ ಮೆಟ್ರೋ (Namma Metro) ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. ಆರ್.ವಿ.ರೋಡ್–ಬೊಮ್ಮಸಂದ್ರ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸೇವೆಗೆ ಸೇರ್ಪಡೆಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಬೆಳಗ್ಗೆ 6 ಗಂಟೆಯಿಂದಲೇ ಯೆಲ್ಲೋ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತಿದ್ದು, ರೈಲುಗಳ ಸಂಚಾರದ ನಡುವಿನ ಅಂತರ ಕಡಿಮೆಯಾಗಿದೆ. ಈವರೆಗೆ ಈ ಮಾರ್ಗದಲ್ಲಿ ಪ್ರತಿ 13 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚರಿಸುತ್ತಿತ್ತು. ಇದೀಗ 7ನೇ ರೈಲು ಸೇರ್ಪಡೆಯೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಪ್ರತಿ 10 ನಿಮಿಷಕ್ಕೊಮ್ಮೆ ಒಂದು ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್​ಸಿಎಲ್ (BMRCL) ತಿಳಿಸಿದೆ.

ಭಾನುವಾರಗಳಂದು ಈ ಹಿಂದೆ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸುತ್ತಿದ್ದರೆ, ಈಗ ಹೊಸ ರೈಲು ಸೇರ್ಪಡೆಯಿಂದ 14 ನಿಮಿಷಕ್ಕೊಮ್ಮೆ ಸೇವೆ ಲಭ್ಯವಾಗಲಿದೆ. ಆದರೆ ಮೊದಲ ಹಾಗೂ ಕೊನೆಯ ಮೆಟ್ರೋ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದೀಗ ಮತ್ತೊಂದು ರೈಲು ಸೇರ್ಪಡೆಯೊಂದಿಗೆ ಪ್ರಯಾಣಿಕರ ಒತ್ತಡ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಯೆಲ್ಲೋ ಲೈನ್‌ನಲ್ಲಿ ಸಂಚಾರ ಮಾಡುವುದಕ್ಕೆ 7ನೇ ಚಾಲಕರಹಿತ ರೈಲು ಡಿಸೆಂಬರ್​​ನಲ್ಲೇ ಬೆಂಗಳೂರಿಗೆ ಆಗಮಿಸಿತ್ತು. ನಂತರ ಟೆಸ್ಟಿಂಗ್ ಕಾರ್ಯಗಳು ನಡೆದಿದ್ದವು.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಬೆಂಗಳೂರು ಮೆಟ್ರೋ ಹಳದಿ ಮಾರ್ಗವು 19.15 ಕಿಮೀ ಇದ್ದು, ಇದು ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿದೆ. ರಾಷ್ಟ್ರೀಯ ವಿದ್ಯಾಲಯ (ಆರ್‌ವಿ) ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು? – Kannada News | Makar Sankranti 2026: Why Celebrate on January 15th? Rituals and Significance

ಮಕರ ಸಂಕ್ರಾಂತಿ 2026 ರ ಆಚರಣೆಯ ದಿನಾಂಕದ ಕುರಿತು ಜನರಲ್ಲಿ ಗೊಂದಲಗಳಿವೆ. ಕೆಲವರು ಜನವರಿ 14 ಅಥವಾ 15 ರಂದು ಆಚರಿಸಬೇಕೇ ಎಂಬ ಪ್ರಶ್ನೆಯನ್ನು ಹೊಂದಿದ್ದಾರೆ. ಈ ಗೊಂದಲವನ್ನು ನಿವಾರಿಸಲು, ಸೂರ್ಯ ಸಿದ್ಧಾಂತದ ಪ್ರಕಾರ, 2026 ರ ಜನವರಿ 15 ರಂದು ಮಕರ ಸಂಕ್ರಾಂತಿ ಆಚರಣೆ ಸೂಕ್ತವಾಗಿದೆ.ಸೂರ್ಯ ಭಗವಾನರು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರಯಾಣ ಬೆಳೆಸುವ ಈ ಕಾಲವನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ. ಇದು ದೇವತೆಗಳಿಗೆ ಹಗಲಿನ ಕಾಲವೆಂದು ಸಹ ಪರಿಗಣಿಸಲಾಗುತ್ತದೆ. 2026 ರಲ್ಲಿ, ಜನವರಿ 14 ರಂದು ಮಧ್ಯಾಹ್ನ 3:30 ಕ್ಕೆ ಸೂರ್ಯನ ಮಕರ ರಾಶಿ ಪ್ರವೇಶವು ಸಂಭವಿಸುವುದರಿಂದ, ಸೂರ್ಯೋದಯ ಕಾಲದಲ್ಲಿ ಆಚರಣೆಗೆ ಮಾರನೇ ದಿನವಾದ ಜನವರಿ 15, ಗುರುವಾರವು ಹೆಚ್ಚು ಶುಭಕರವಾಗಿದೆ. ಈ ದಿನ ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ ಇರುತ್ತದೆ. ಈ ದಿನ ಎಳ್ಳು-ಬೆಲ್ಲ ಹಂಚುವುದು, ರಂಗೋಲಿ ಹಾಕುವುದು, ಮನೆಯನ್ನು ಸ್ವಚ್ಛಗೊಳಿಸಿ ಹಬ್ಬವನ್ನು ಆಚರಿಸುವುದು ವಾಡಿಕೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳುತ್ತಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಳಯರಾಜ ಹಾಡು ಬಳಸಿದರೂ ಬಿದ್ದಿಲ್ಲ ಕಾಪಿ ರೈಟ್ಸ್; ಟೆಕ್ನಿಕ್ ತಿಳಿಸಿದ ನಿರ್ದೇಶಕ – Kannada News | How Mana Shankara Vara Prasad Garu escapade from Copyrights of Ilaiyaraaja

ಇಳಯರಾಜ ಕಂಪೋಸ್ ಮಾಡಿದ ಯಾವುದೇ ಹಾಡನ್ನು ಸಿನಿಮಾದಲ್ಲಿ ಬಳಿಸಿದರೂ ಅವರು ಕೇಸ್ ಹಾಕುತ್ತಾರೆ. ಈ ಸಂಬಂಧ ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಕೇವಲ ಮ್ಯೂಸಿಕ್ ಕಂಪನಿಯ ಹಕ್ಕನ್ನು ಪಡೆದರೆ ಮಾತ್ರ ಆಗೋದಿಲ್ಲ, ತಮ್ಮ ಒಪ್ಪಿಗೆಯನ್ನು ಪಡೆಯಬೇಕು ಎಂದು ಅವರು ಹೇಳುತ್ತಾರೆ. ಈಗ ಚಿರಂಜೀವಿ ಸಿನಿಮಾದಲ್ಲಿ ಇಳಯರಾಜ ಹಾಡು ಬಳಕೆ ಮಾಡಲಾಗಿದೆ. ಆದರೂ ಕೇಸ್ ಬಿದ್ದಿಲ್ಲ. ಈ ಬಗ್ಗೆ ನಿರ್ದೇಶಕ ಮಾತನಾಡಿದ್ದಾರೆ.

ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಅವರು ಬರೋ ದೃಶ್ಯಕ್ಕೆ ‘ಸುಂದರಿ ಕಣ್ಣಾಲ್’ ಹಾಡು ಬಳಕೆ ಆಗಿದೆ. ಇದು 1991ರ ‘ದಳಪತಿ’ ಚಿತ್ರದ ಹಾಡು. ಈ ಹಾಡಿಗೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರು.

ಇದನ್ನು ನೋಡಿದ ಅನೇಕರು, ಇಳಯರಾಜ ಸಿನಿಮಾ ಮೇಲೆ ಕೇಸ್ ಹಾಕುತ್ತಾರೆ ಎಂದುಕೊಂಡಿದ್ದರು. ಇದಕ್ಕೆ ಅನಿಲ್ ಸ್ಪಷ್ಟನೆ ನೀಡಿದ್ದಾರೆ. ‘ಇಳಯರಾಜ ಕೇಸ್ ಹಾಕ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಜನರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ನಾವು ಸಿನಿಮಾ ಮಾಡಿದ ಬಳಿಕ ಅವರ ಬಳಿ ತೆರಳಿ, ಒಪ್ಪಿಗೆ ಬೇಕಿತ್ತು ಎಂದು ಕೇಳಿದರೆ ಅವರು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ’ ಎಂದರು.

‘ನನ್ನ ನಿರ್ಮಾಪಕರು ಅವರ ಬಳಿ ತೆರಳಿ ಒಪ್ಪಿಗೆ ಕೇಳಿದರು. ಚಿರಂಜೀವಿ ಸಿನಿಮಾದಲ್ಲಿ ನಿಮ್ಮ ಹಾಡುಬಳಸಿಕೊಳ್ಳಬೇಕು ಎಂದುಕೊಂಡಿದ್ದೇವೆ ಎಂದೆವು. ಇದಕ್ಕೆ ಅವರು ಖುಷಿಯಿಂದ ಒಪ್ಪಿದರು’ ಎಂದು ಅನಿಲ್ ರವಿಪುಡಿ ಹೇಳಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳ ಮೇಲೆ ಇಳಯರಾಜ ಕೇಸ್ ಹಾಕಿದ್ದಾರೆ. ‘ಮಂಜುಮೇಲ್ ಬಾಯ್ಸ್’ ತಂಡ ದೊಡ್ಡ ಮೊತ್ತದ ಹಣವನ್ನು ಇಳಯರಾಜ ಅವರಿಗೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ಇದನ್ನೂ ಓದಿ: ‘ನಾನು ಕರ್ನಾಟಕದವನು, ನನ್ನ ಅವ್ವ ಇಲ್ಲೇ ಇರೋದು’: ಇಳಯರಾಜ ಕನ್ನಡ ಪ್ರೇಮ

‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಬಗ್ಗೆ ಹೇಳಬೇಕಾದರೆ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ದೊಡ್ಡ ಯಶಸ್ಸು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಲ್ಲಿ ಜನವರಿ 16ಕ್ಕೆ ಎಎಂಬಿ ಸಿನಿಮಾಸ್ ಕಾರ್ಯಾರಂಭ; ವಿಶೇಷತೆ ಏನು? – Kannada News | Amb Cinemas Kapali To start from Jan 16 In Gandhi Nagara

ಮಹೇಶ್ ಬಾಬು ಅವರು ಕೇವಲ ನಟನೆ ಮಾತ್ರವಲ್ಲದೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಅವರ ಒಡೆತನದ ಎಎಂಬಿ ಸಿನಿಮಾಸ್ ಕೂಡ ಒಂದು. ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಚೈನ್ ಆಗಿದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭ ಆಗುತ್ತಿದೆ. ಇದಕ್ಕೆ ದಿನಾಂಕ ಫಿಕ್ಸ್ ಆಗಿದೆ. ಮಹೇಶ್ ಬಾಬು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ. ಬೆಂಗಳೂರಿನ ಗಾಂಧಿ ನಗರದಲ್ಲಿ ಹಲವು ಚಿತ್ರಮಂದಿರಗಳು ಇದ್ದವು. ಇದರ ಪೈಕಿ ಕಪಾಲಿ ಚಿತ್ರಮಂದಿರ ಕೂಡ ಒಂದಾಗಿತ್ತು. ಇಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಪ್ರದರ್ಶನ ಕಂಡಿದ್ದವು. ಈಗ ಹೊಸ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಇದು ಡಿಸೆಂಬರ್​​ನಲ್ಲೇ ಆರಂಭ ಆಗಬೇಕಿತ್ತು. ಆದರೆ, ಒಂದು ತಿಂಗಳು ತಡವಾಗಿದೆ.

ಮಹೇಶ್ ಬಾಬು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜನವರಿ 16ರಂದು ಬೆಂಗಳೂರಿನಲ್ಲಿ AMB ಸಿನಿಮಾಸ್ ಕಾರ್ಯಾರಂಭ ಮಾಡಲಿದೆ. ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಥಿಯೇಟರ್ ಇದು. ಇದನ್ನು ಮಾಡಲು ಎಎಂಬಿ ತಂಡ ಸಾಕಷ್ಟು ಶ್ರಮ ಹಾಕಿದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ನೋಡಲು ಕಾದಿದ್ದೇನೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಕಾನಿಕ್ ಚಿತ್ರಮಂದಿರ ಇದ್ದ ಜಾಗದಲ್ಲೇ ಹೊಸ ಚಿತ್ರಮಂದಿರ ನಿರ್ಮಿಸಿದ ಮಹೇಶ್ ಬಾಬು

ಈ ಥಿಯೇಟರ್ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಅಟ್ಮೋಸ್ ಚಿತ್ರಮಂದಿರ ಆಗಿರಲಿದೆ. 60 ಅಡಿ ಅಗಲದ 9 ಸ್ಕ್ರೀನ್​​ಗಳು ಇದರಲ್ಲಿ ಇರಲಿವೆ. ಪ್ರತಿ ಸ್ಕ್ರೀನ್​​ನಲ್ಲಿ 600 ಪ್ರೇಕ್ಷಕರು ಒಮ್ಮೆಲೆ ಸಿನಿಮಾ ನೋಡಬಹುದಾಗಿದೆ. ಸ್ಕ್ರೀನ್ ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಹೊಂದಿರಲಿದೆಯಂತೆ. ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್​​ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!

ಬುಧ ಮತ್ತು ಆದಿತ್ಯರು ಖಗೋಳದಲ್ಲಿ ಆಗಾಗ ಸಂಧಿಸುತ್ತಿರುತ್ತಾರೆ. ಇವರ ಸಂಯೋಗದಿಂದ ಬೌದ್ಧಿಕ, ಮಾನಸಿಕ ಹಾಗೂ ಕೌಶಲಗಳ ಆಧಿಕ್ಯವಿರಲಿದೆ. ಆದರೆ ಅವುಗಳ ಸ್ಥಿತಿಯ ಮೇಲೆ ಪರಿಣಾಮದ ವ್ಯತ್ಯಾಸ ಆಗುವುದು. ಬುಧಾದಿತ್ಯಯೋಗವು ಜನವರಿ ಹದಿನೇಳರಿಂದ ಫೆಬ್ರವರಿ ನಾಲ್ಕರ ವರೆಗೆ ಮಕದರಲ್ಲಿ ಇರಲಿದ್ದು ಬುದ್ಧಿ, ವಾಕ್‌ಶಕ್ತಿ, ಆಡಳಿತ ಸಾಮರ್ಥ್ಯ, ಲೆಕ್ಕಾಚಾರ ಮತ್ತು ನಿರ್ಣಯ ಶಕ್ತಿಗೆ ಕಾರಣವಾಗುತ್ತದೆ. ಈ ಯೋಗ ಮಕರ ರಾಶಿಯಲ್ಲಿ ನಿರ್ಮಾಣವಾಗಿದ್ದು, ಶನಿ ಅಧಿಪತ್ಯದ ಕಾರಣ ಫಲಗಳು ತಕ್ಷಣ ವ್ಯಕ್ತವಾಗದೆ ಕಾಲಾನಂತರದಲ್ಲಿ ಶ್ರಮ, ಶಿಸ್ತು ಮತ್ತು ಸಹನೆಯ ಮೂಲಕ ಫಲ ನೀಡುತ್ತವೆ.

ಶುಭ ಫಲರಾಶಿಗಳು:

  • ಮೀನ: ಧೈರ್ಯ, ಪ್ರಯತ್ನ, ಸಂವಹನ ಕ್ಷೇತ್ರದಲ್ಲಿ ಪ್ರಗತಿ. ಬರವಣಿಗೆ, ಮಾಧ್ಯಮ, ವ್ಯವಹಾರಗಳಲ್ಲಿ ಲಾಭ. ಸಹೋದರರಿಂದ ಸಹಕಾರ ದೊರೆಯುತ್ತದೆ.
  • ವೃಷಭ: ಬುದ್ಧಿವಂತಿಕೆ, ವಿದ್ಯಾಭ್ಯಾಸ, ಮಕ್ಕಳ ವಿಷಯದಲ್ಲಿ ಶುಭ. ಸೃಜನಶೀಲತೆ, ಹೂಡಿಕೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು.
  • ಕನ್ಯಾ: ಭಾಗ್ಯೋದಯ, ಧರ್ಮ–ವಿದ್ಯೆ, ಗುರುಕೃಪೆ. ದೂರ ಪ್ರಯಾಣ ಲಾಭಕರ. ಜೀವನದ ದಿಕ್ಕು ಸ್ಪಷ್ಟವಾಗಿ ರೂಪುಗೊಳ್ಳುತ್ತದೆ.
  • ತುಲಾ: ಉದ್ಯೋಗ, ಅಧಿಕಾರ, ಆಡಳಿತ ಕ್ಷೇತ್ರದಲ್ಲಿ ಉನ್ನತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಹೆಸರು–ಪ್ರತಿಷ್ಠೆ ಹೆಚ್ಚಳ.
  • ವೃಶ್ಚಿಕ: ಆದಾಯ ವೃದ್ಧಿ, ಆಶಾಪೂರ್ತಿ. ಸ್ನೇಹ ವಲಯ ವಿಸ್ತರಣೆ. ಹಿರಿಯರ ಸಹಕಾರದಿಂದ ಲಾಭಕರ ಯೋಜನೆಗಳು.

ಅಶುಭ ಫಲರಾಶಿಗಳು:

  • ಮಿಥುನ: ಷಷ್ಠದಲ್ಲಿ ಶತ್ರುಕಾಟ, ಸಾಲ, ಆರೋಗ್ಯ ಸಮಸ್ಯೆ. ಉದ್ಯೋಗ ಒತ್ತಡ. ಕಾನೂನು ವಿಷಯಗಳಲ್ಲಿ ಎಚ್ಚರ ಅಗತ್ಯ.
  • ಕರ್ಕಾಟಕ: ಸಪ್ತಮದಲ್ಲಿ ದಾಂಪತ್ಯ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಅಹಂಕಾರ, ಮಾತಿನ ಗೊಂದಲದಿಂದ ದೂರ ಸಂಭವ.
  • ಸಿಂಹ : ರವಿಯ ರಾಶಿಯಗಿದ್ದರೂ ಅಷ್ಟಮಸ್ಥಾನವಾಗಿದ್ದು ಅನಿರೀಕ್ಷಿತ ವಿಘ್ನ, ಭಯ, ಮಾನಸಿಕ ಒತ್ತಡ. ಆರೋಗ್ಯ ಕಡೆ ಹೆಚ್ಚು ಜಾಗ್ರತೆ ಅಗತ್ಯ.
  • ಧನು: ದ್ವಾದಶದ ಈ ರಾಶಿಯವರಿಗೆ ಆರ್ಥಿಕ ವೆಚ್ಚ ಹೆಚ್ಚಳ, ನಿದ್ರಾಭಂಗ, ಏಕಾಂತ ಭಾವನೆ. ವಿದೇಶ ಸಂಬಂಧಿತ ಚಿಂತನೆ. ಫಲ ವಿಳಂಬ.

ಮಿಶ್ರ ಫಲ ರಾಶಿಗಳು:

  • ಮಕರ: ಈ ರಾಶಿಯಲ್ಲಿಯೇ ಇರುವ ಬುಧಾದಿತ್ಯರಿಂದ ಆತ್ಮವಿಶ್ವಾಸ, ವ್ಯಕ್ತಿತ್ವ ಬಲ. ಆದರೆ ಅಹಂಕಾರ, ಆರೋಗ್ಯದ ನಿರ್ಲಕ್ಷ್ಯ ಸಾಧ್ಯ. ಶ್ರಮದ ನಂತರ ಫಲ.
  • ಕುಂಭ: ಹಣ ಮತ್ತು ವಾಕ್‌ ಶಕ್ತಿಯ ವೃದ್ಧಿ. ಆದಾಯ ಇದ್ದರೂ ಕುಟುಂಬ ಕಲಹ ಸಾಧ್ಯ. ಮಾತಿನಲ್ಲಿ ಸಂಯಮ ಅಗತ್ಯ.
  • ಮೇಷ: ಈ ರಾಶಿಯವರಿಗೆ ಮನೆ, ಆಸ್ತಿ ಲಾಭ. ಒಳಮನಸ್ಸಿನ ಅಶಾಂತಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ.

– ಲೋಹಿತ ಹೆಬ್ಬಾರ್

Source link