Category Archives: Blog

Your blog category

ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್? – Kannada News | Bigg Boss Kannada: Dog Satish said he tried to hit Gilli in Bigg Boss house

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯುತ್ತಾ ಬಂದಿದೆ. ಆರಂಭದಲ್ಲಿ ಹಲವು ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದರು ನಿಯಮದಂತೆ ಒಬ್ಬೊಬ್ಬರಾಗಿ ಎಲ್ಲರೂ ಹೊರಗೆ ಹೋಗಿ ಈಗ ಏಳು ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಬಿಗ್​​ಬಾಸ್ ಮನೆಗೆ ಹೋಗಿ ಬಂದವರು ಸಖತ್ ಜನಪ್ರಿಯತೆ ಗಳಿಸುತ್ತಾರೆ ಆದರೆ ಹೀಗೆ ಆಚೆ ಬಂದವರು ಬಿಗ್​​ಬಾಸ್ ವಿರುದ್ಧವಾಗಿ ಮಾತನಾಡಿರುವುದು ಕಡಿಮೆ. ಆದರೆ ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಿ ಕೆಲ ವಾರವಷ್ಟೆ ಇದ್ದು ಹೊರಗೆ ಬಂದ ಡಾಗ್ ಸತೀಶ್ ಅವರು ಹೊರಗೆ ಬಂದಾಗಿನಿಂದಲೂ ಶೋ ಬಗ್ಗೆ, ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳಾಗಿದ್ದವರ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ. ಅದರ ಜೊತೆಗೆ ತಮ್ಮ ಬಗ್ಗೆ ಬಹುವಾಗಿ ಸ್ವಯಂ ಹೊಗಳಿಕೆ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ.

ಬಿಗ್​​ಬಾಸ್​​ನಿಂದ ಬಂದ ಬಳಿಕ ಒಂದರ ಮೇಲೊಂದು ಸಂದರ್ಶನಗಳನ್ನು ನೀಡುತ್ತಾ ತಮ್ಮ ಜನಪ್ರಿಯತೆ ಹೆಚ್ಚು ಮಾಡಿಕೊಳ್ಳುತ್ತಲೇ ಇರುವ ಡಾಗ್ ಸತೀಶ್ ಅವರನ್ನು ಇದೇ ಸೀಸನ್​​ಗೆ ಅತಿಥಿಯಾಗಿ ಹೋಗಿ ಕೆಲ ವಾರ ಇದ್ದ ಹಾಗೂ ಈ ಹಿಂದಿನ ಸೀಸನ್​​ನಲ್ಲೂ ಶೋಗೆ ಹೋಗಿದ್ದ ರಜತ್ ಅವರು ಸಂದರ್ಶನ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಬಗ್ಗೆ ಬಲು ತಾತ್ಸಾರವಾಗಿ, ನಿಂದನಾತ್ಮಕವಾಗಿ ಡಾಗ್ ಸತೀಶ್ ಮಾತನಾಡಿದ್ದಾರೆ.

ಗಿಲ್ಲಿ ಬಗ್ಗೆ ರಜತ್ ಕೇಳಿದಾಗ, ಗಿಲ್ಲಿಯನ್ನು ಕಳ್ಳ, ಸುಳ್ಳ, ಕೊಳಕ ಎಂದೆಲ್ಲ ಸತೀಶ್ ಹೇಳಿದ್ದಾರೆ. ಮನೆಯಲ್ಲಿ ಎಲ್ಲರನ್ನೂ ಕಂಡಮ್ ಮಾಡುತ್ತಿದ್ದ, ಕೆಟ್ಟದಾಗಿ ಮಾತನಾಡುತ್ತಿದ್ದ, ಚೀಪ್ ಆಡಿಕೊಂಡು ನಗುತ್ತಿದ್ದ. ಆದರೆ ಯಾರಿಗೂ ಅವನೆಂದರೆ ಇಷ್ಟ ಇಲ್ಲ. ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದವರು ಅವನ ಜನಪ್ರಿಯತೆ ನೋಡಿ ಅವನ ಬಗ್ಗೆ ಮಾತನಾಡದೆ ಸುಮ್ಮನಾಗುತ್ತಿದ್ದಾರೆ. ಆದರೆ ನಾನು ಹಾಗಲ್ಲ, ನನಗೆ ಅನ್ನಿಸಿದ್ದು ನಾನು ಹೇಳುತ್ತೀನಿ, ಅವನೊಬ್ಬ ಕಳ್ಳ, ಸುಳ್ಳ, ಕೊಳಕ, ಅವನಿಂದಲೇ ನಾನು ಬಿಗ್​​ಬಾಸ್ ಮನೆಯಲ್ಲಿ ಸೈಲೆಂಟ್ ಆದೆ ಎಂದಿದ್ದಾರೆ ಡಾಗ್ ಸತೀಶ್.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

‘ಬಿಗ್​​ಬಾಸ್ ಮನೆಯಲ್ಲಿ ನೀವು ಸಹ ಅವನಿಗೆ ಎದುರುತ್ತರ ಕೊಡಬೇಕಿತ್ತಲ್ಲ’ ಎಂಬ ಪ್ರಶ್ನೆಗೆ, ಡಾಗ್ ಸತೀಶ್, ‘ನಾನು ಸಾಕಷ್ಟು ಸಲ ಮಾತನಾಡಿದ್ದೀನಿ, ಅಶ್ಲೀಲ ಪದ ಬಳಸಿ ಬೈದಿದ್ದೀನಿ, ಒಮ್ಮೆ ಅಂತೂ ಹೊಡೆಯಲು ಸಹ ಹೋಗಿದ್ದೆ ಆದರೆ ಅದನ್ನೆಲ್ಲ ಕಟ್ ಮಾಡಿಬಿಟ್ಟಿದ್ದಾರೆ. ಅದು ಯಾವುದನ್ನೂ ತೋರಿಸಿಲ್ಲ. ಅವನು ಹೊರಗೆ ಬಂದ ಮೇಲೂ ಸಹ ಅವನ್ನು ಯಾವುದಕ್ಕೂ ನನ್ನ ಹತ್ತಿರ ಸಹ ಸೇರಿಸಲ್ಲ’ ಎಂದಿದ್ದಾರೆ ಡಾಗ್ ಸತೀಶ್.

ಗಿಲ್ಲಿ ಅಭಿಮಾನಿಗಳು ಈಗಾಗಲೇ ಡಾಗ್ ಸತೀಶ್ ಅನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಗಿಲ್ಲಿ ಫಿನಾಲೆ ಎಂಟ್ರಿ ಆಗಿದ್ದು, ಒಂದೊಮ್ಮೆ ಗಿಲ್ಲಿ ಗೆದ್ದರೆ ಡಾಗ್ ಸತೀಶ್ ಇನ್ನಷ್ಟು ಟ್ರೋಲ್ ಆಗುವುದಂತೂ ಗ್ಯಾರೆಂಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:16 pm, Wed, 14 January 26

Source link

ರಾಯಚೂರು: 2 ಕೋಟಿ ರೂ ಬಿಲ್ ಪಾವತಿಸದ ಸಮಾಜ ಕಲ್ಯಾಣ ಇಲಾಖೆಗೆ ಕೋರ್ಟ್ ತಕ್ಕ ಶಾಸ್ತಿ – Kannada News | Raichur Social Welfare Dept: Court Orders Seizure Over Rs 2 Cr Ration Bill Arrears

ರಾಯಚೂರು, ಜನವರಿ 14: ಸಮಾಜ ಕಲ್ಯಾಣ ಇಲಾಖೆ (Social Welfare Dept), ತಮ್ಮ ಹಾಸ್ಟೆಲ್​ಗಳಿಗೆ ರೇಷನ್​​ ಸರಬರಾಜು ಮಾಡಿರುವ ವ್ಯಾಪಾರಿಗೆ ಕೋಟ್ಯಂತರ ರೂ ಬಿಲ್ ಪಾವತಿಸದೇ (Ration Bill) ಡೋಂಟ್ ಕೇರ್ ಎಂದಿದೆ. ಕೋರ್ಟ್ ಸಮ್ಮುಖದಲ್ಲಿ ಹಣ ಕೊಡುತ್ತೇವೆ ಅಂತ ಒಪ್ಪಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ಪೀಠೋಪಕರಣಗಳ ಜಪ್ತಿಗೆ ಆದೇಶಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

2 ಕೋಟಿ 19 ಲಕ್ಷ ರೂ. ಬಿಲ್ ಬಾಕಿ

ದೂರುದಾರ ಮತಿ ಸಾಗರ್​ ಎನ್ನುವವರು ಕೋರ್ಟ್ ಆದೇಶದನ್ವಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಇವರು ಪದ್ಮಾವತಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ರಾಯಚೂರಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಾನ್ವಿ, ಲಿಂಗಸುಗೂರು ತಾಲೂಕಿನಲ್ಲಿ ಇಲಾಖಾ ವ್ಯಾಪ್ತಿಯ ಹಾಸ್ಟೆಲ್​ಗಳಿಗೆ ರೇಷನ್ ಸಪ್ಲೈ ಮಾಡುತ್ತಿದ್ದರು. ಈ ಬಗ್ಗೆ ಟೆಂಡರ್ ಪಡೆದಿದ್ದ ಮತಿ ಸಾಗರ್​ಗೆ ಹಳೆ ಬಿಲ್ ಪಾವತಿಯಾಗಿಲ್ಲ.

ಇದನ್ನೂ ಓದಿ: ರೈತರಿಗೆ ಪರಿಹಾರ ನೀಡಲು ವಿಳಂಬ: ಡಿಸಿ ಕಾರು, ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶ

ಮಾನ್ವಿ ತಾಲೂಕು ಕಚೇರಿಯ 1 ಕೋಟಿ 87 ಲಕ್ಷ ರೂ ಹಾಗೂ ಲಿಂಗಸುಗೂರು ತಾಲೂಕು ಕಚೇರಿಯಿಂದ 32 ಲಕ್ಷ 50 ಸಾವಿರ ರೂ. ಹಣ ಬಾಕಿ ಇದೆ. ಹೀಗೆ ಒಟ್ಟು 2 ಕೋಟಿ 19 ಲಕ್ಷ ರೂ. ಬಿಲ್ ಬಾಕಿ ಇದೆ. ಬಿಲ್ ಕ್ಲಿಯರ್ ಮಾಡುವುದುಕ್ಕೆ ತಾಲೂಕು ಅಧಿಕಾರಿಗಳು ಬಿಲ್ ಮಾಡ್ತಿದ್ದಾರೆ. ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರ ತಿರಸ್ಕರಿಸಿ ಮಾಡುತ್ತಿದ್ದಾರಂತೆ. ಈ ಬಗ್ಗೆ ಸುಮಾರು 20 ಪತ್ರಗಳನ್ನ ಬರೆದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ ಮಾಲೀಕ ಮತಿ ಸಾಗರ್ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ವಿಚಾರಣೆ ವೇಳೆ ಅಧಿಕಾರಿಗಳು ಬಾಕಿ ಬಿಲ್ ಪಾವತಿಗೆ ಒಪ್ಪಿಕೊಂಡಿದ್ದರು. ಆದರೆ ಸಂಧಾನದಂತೆ ಹಣ ಪಾವತಿ ಮಾಡದ ಹಿನ್ನೆಲೆ ಜಪ್ತಿ ಕಾರ್ಯ ನಡೆದಿದೆ.

ಜಿಲ್ಲಾ ಸತ್ರ ನ್ಯಾಯಾಲಯದ ಕಮರ್ಷಿಯಲ್ ಕೋರ್ಟ್ ಆದೇಶ ಬೆನ್ನಲ್ಲೇ ಜಪ್ತಿ ಮಾಡಲಾಗಿದೆ. ಜಪ್ತಿ ವೇಳೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಉಪ ನಿರ್ದೇಶಕಿ ಸಿಂಧು ಕೂಡ ಕಚೇರಿಯಲ್ಲೇ ಇದ್ದರು. ಈ ವೇಳೆ ಉಪ ನಿರ್ದೇಶಕಿ ಸಿಂಧು ಕೊಠಡಿಯ ಖುರ್ಚಿ ಸಹ ಬಿಡದೇ ಜಪ್ತಿ ಕಾರ್ಯ ಮಾಡಲಾಯಿತು. ಈ ವೇಳೆ ಅವರು ಗಲಿಬಿಲಿಗೊಂಡಿದ್ದು ಕಂಡುಬಂತು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಳಿದ್ದಿಷ್ಟು 

ಕುರ್ಚಿಗಳು, ಟೇಬಲ್​ಗಳು, ಕಂಪ್ಯೂಟರ್​ಗಳು, ಪ್ರಿಂಟರ್ ಸೇರಿ ವಿವಿಧ ಬೆಲೆ ಬಾಳುವ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಈ ಜಪ್ತಿ ಕಾರ್ಯದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಮಾತನಾಡಿದ್ದು, ಈ ಕೇಸ್​ನ ಎಲ್ಲಾ ಬಿಲ್ ಆಗಿದ್ದು ಹಣ ಪಾವತಿ ಮಾಡಿದ್ದೇವೆ. ಆ ಬಗ್ಗೆ ದಾಖಲೆಗಳು ನಮ್ಮಲ್ಲಿವೆ. ದೂರುದಾರರ ಬಳಿ ಸಾಕ್ಷಿಗಳಿದ್ದರೇ ನಾವು ಬಿಲ್ ಮಾಡುತ್ತೇವೆ. ಇಲ್ಲಾ ಹಿರಿಯ ಅಧಿಕಾರಿಗಳು ಹೇಳುವ ರೀತಿ ಕ್ರಮಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡು 30 ವರ್ಷವಾದರೂ ಪರಿಹಾರ ನೀಡದ ನೀರಾವರಿ ಇಲಾಖೆ: ಕಚೇರಿಯ ಎಲ್ಲ ಪೀಠೋಪಕರಣ ಜಪ್ತಿ ಆಯ್ತು

ಒಟ್ಟಿನಲ್ಲಿ ಸದ್ಯ ಕೋರ್ಟ್ ಆದೇಶದನ್ವಯ ಜಪ್ತಿ ಕಾರ್ಯ ಮಾಡಲಾಗಿದ್ದು, 2 ಕೋಟಿ ರೂ ಬಾಕಿ ಬಿಲ್ ಅನ್ನ ಸಮಾಜ ಕಲ್ಯಾಣ ಇಲಾಖೆ ಹೇಗೆ ಪಾವತಿಸತ್ತೆ ಕಾದುನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಕ್ತಹೀನತೆ ನಿವಾರಿಸುವ, ಮೈ ಬೆಚ್ಚಗಾಗಿಸುವ ನೈಸರ್ಗಿಕ ವಿಧಾನಗಳು: ಬಾಬಾ ರಾಮದೇವ್ ಶಿಫಾರಸು – Kannada News | Baba Ramdev advices natural methods to keep body warm in winters

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಬಹುದಾದ ವಿವಿಧ ನೈಸರ್ಗಿಕ ವಿಧಾನಗಳನ್ನು ಬಾಬಾ ರಾಮದೇವ್ ವಿವರಿಸುತ್ತಾರೆ. ನೀವು ಗಮನಿಸಿ ನೋಡಿ, ಕೆಲ ವ್ಯಕ್ತಿಗಳ ದೇಹವು ಬೇರೆಯವರಿಗೆ ಹೋಲಿಸಿದರೆ ತಣ್ಣಗಿರುತ್ತದೆ. ದೇಹದಲ್ಲಿ ರಕ್ತದ ಅಂಶ ಕಡಿಮೆ ಇದ್ದರೆ ಹೀಗಾಗಬಹುದು. ಇದಲ್ಲದೆ, ಕಳಪೆ ಜೀರ್ಣಕ್ರಿಯೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವು ಸರಳ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ದೀರ್ಘಕಾಲದವರೆಗೆ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಬಹುದು ಎಂದು ರಾಮದೇವ್ (Baba Ramdev) ಹೇಳುತ್ತಾರೆ. ವಾಸ್ತವವಾಗಿ, ಕಳಪೆ ಜೀರ್ಣಕ್ರಿಯೆ ಇರುವ ಜನರು ಅಜೀರ್ಣ, ಗ್ಯಾಸ್ ಮತ್ತು ಆ್ಯಸಿಡಿಟಿಯಿಂದ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿದ ಇನ್ಸುಲಿನ್ ಸಂವೇದನೆಯಿಂದಾಗಿ, ಮಧುಮೇಹ ಬರುವ ಅಪಾಯ ಹೆಚ್ಚಾಗುತ್ತದೆ. ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಸ್ಥಳೀಯ ವಿಧಾನಗಳೊಂದಿಗೆ ಚಿಕಿತ್ಸೆ ನೀಡಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹಿಮೋಗ್ಲೋಬಿನ್ ಕೊರತೆ (ರಕ್ತಹೀನತೆ) ಮತ್ತು ಕಳಪೆ ಜೀರ್ಣಕ್ರಿಯೆ ಸಮಸ್ಯೆಗಳು ಇಂದಿನ ಜೀವನಶೈಲಿಯ ಪರಿಣಾಮಗಳಾಗಿವೆ. ಇದು ದೌರ್ಬಲ್ಯ, ಶೀತ ಕೈ ಮತ್ತು ಶೀತ ಪಾದಗಳು ಮತ್ತು ನಿಶಕ್ತಿಗೆ ಕಾರಣವಾಗುತ್ತದೆ. ಈ ಆರೋಗ್ಯ ಸವಾಲುಗಳನ್ನು ಪರಿಹರಿಸಲು ಸ್ವಾಮಿ ರಾಮದೇವ್ ಆಯುರ್ವೇದ ಸಹಾಯವನ್ನು ಶಿಫಾರಸು ಮಾಡುತ್ತಾರೆ. ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಬಲ್ಲ ಕೆಲ ತಿನಿಸುಗಳ ಮಾಹಿತಿ ಇಲ್ಲಿದೆ…

ಹಿಮೋಗ್ಲೋಬಿನ್ ಕೊರತೆ ನಿವಾರಿಸುವುದು ಹೇಗೆ?

ಕೆಲವರು ಚಳಿಯಲ್ಲಿ ಕಂಬಳಿ ಹೊದ್ದುಕೊಂಡಿದ್ದರೂ ನಡುಗುತ್ತಾರೆ. ಇದಕ್ಕೆ ರಕ್ತಹೀನತೆಯೂ ಒಂದು ಕಾರಣವಾಗಿರಬಹುದು ಎಂಬುದು ಬಾಬಾ ರಾಮದೇವ್ ಅವರ ಅನಿಸಿಕೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಒಂದು ವಿಡಿಯೋದಲ್ಲಿ ಅವರು ಹಿಮೋಗ್ಲೋಬಿನ್ ಹೆಚ್ಚಿಸುವ ಕೆಲ ತಿನಿಸುಗಳ ವಿವರ ನೀಡಿದ್ದಾರೆ. ಕ್ಯಾರೆಟ್, ಟೊಮೆಟೊ, ಬೀಟ್​ರೂಟ್ ಮತ್ತು ನೆಲ್ಲಿಕಾಯಿ ರಸವನ್ನು ಕುಡಿಯುವ ಮೂಲಕ ನಿಮ್ಮ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಈ ಚಳಿಗಾಲದ ಹಣ್ಣುಗಳು ಕಬ್ಬಿಣದಿಂದ ಸಮೃದ್ಧವಾಗಿವೆ ಮತ್ತು ಇತರ ಪೋಷಕಾಂಶಗಳನ್ನು ಒದಗಿಸುತ್ತವೆ. ಚಳಿಗಾಲದಲ್ಲಿ ಈ ರಸಗಳನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಕ್ಯಾರೆಟ್ ಬ್ಲಡ್ ಕೌಂಟ್ ಹೆಚ್ಚಿಸುವುದಲ್ಲದೆ, ನಮ್ಮ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶವಾದ ವಿಟಮಿನ್ ಎ ಅನ್ನು ಸಹ ಹೊಂದಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ

ಆಮ್ಲಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ತಿನ್ನುವುದು ಅಥವಾ ಅದರ ರಸವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಮ್ಲಾ ಯಕೃತ್ತನ್ನು ನಿರ್ವಿಷಗೊಳಿಸುವುದು, ಕೂದಲು ಉದುರುವುದನ್ನು ತಡೆಯುವುದು ಮತ್ತು ಹೊಟ್ಟೆಯ ಗ್ಯಾಸ್ ಅನ್ನು ಕಡಿಮೆ ಮಾಡುವಂತಹ ಪ್ರಯೋಜನಗಳನ್ನು ಸಹ ನೀಡುತ್ತದೆ.

ಶುಂಠಿ ರಸವನ್ನು ಕುಡಿಯುವುದರಿಂದ ದೇಹವು ಬೆಚ್ಚಗಾಗುತ್ತದೆ. ಇದು ಚಯಾಪಚಯ ಕ್ರಿಯೆ ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಉರಿಯೂತ ನಿವಾರಕ ಗುಣಗಳು ಚಳಿಗಾಲದಲ್ಲಿ ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೀಟ್​ರೂಟ್ ನೋಡಲು ಕೆಂಪು ಬಣ್ಣದ್ದಾಗಿರುವುದು ಮಾತ್ರವಲ್ಲದೆ ನಮ್ಮ ರಕ್ತನಾಳಗಳನ್ನು ರಕ್ತದಿಂದ ತುಂಬಿಸುತ್ತದೆ. ಇದನ್ನು ಸೇವಿಸುವುದರಿಂದ ಚಳಿಗಾಲದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ರಸವನ್ನು ಕುಡಿಯುವುದರಿಂದ ನಮ್ಮ ಮೈಬಣ್ಣವೂ ಹೊಳೆಯುತ್ತದೆ.

ಪಾಲಕ್, ಬಾತುವಾ ಮತ್ತು ಮೆಂತ್ಯವನ್ನು ತಿನ್ನಿರಿ

ನಿಮ್ಮ ಕಬ್ಬಿಣದ ಅಗತ್ಯವನ್ನು ಪೂರೈಸಲು ನೀವು ಪಾಲಕ್ ಅನ್ನು ಸಹ ತಿನ್ನಬಹುದು. ಬಾಬಾ ರಾಮದೇವ್ ಅವರು ಸ್ವಲ್ಪ ಬಾತುವಾ ಮತ್ತು ಮೆಂತ್ಯ ಸೊಪ್ಪಿನೊಂದಿಗೆ ಪಾಲಕ್ ಅನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇವು ದೇಹವನ್ನು ಬೆಚ್ಚಗಾಗಿಸುತ್ತದೆ. ನಿಂಬೆ, ಶುಂಠಿ ಮತ್ತು ಅರಿಶಿನವನ್ನು ಸಾಗುವಿಗೆ ಸೇರಿಸುವುದರಿಂದ ದೇಹವು ಬೆಚ್ಚಗಾಗುತ್ತದೆ, ಏಕೆಂದರೆ ಅವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಗಳಿಗೆ ಶ್ವಾಸರಿ ವಟೀ; ಪತಂಜಲಿಯ ಈ ಆಯುರ್ವೇದ ಔಷಧದ ಪ್ರಯೋಜನ ಮತ್ತು ಬಳಕೆ ವಿಧಾನ ತಿಳಿಯಿರಿ

ವಿಶೇಷವೆಂದರೆ ಈ ಪದಾರ್ಥಗಳು ಅಗ್ಗವಾಗಿದ್ದು, ಸ್ವಲ್ಪ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಿಂದ ಜೀರ್ಣಿಸಿಕೊಳ್ಳಲು ಸುಲಭ. ನೀವು ಬಯಸಿದರೆ, ನೀವು ಸಾಗು ಬದಲಿಗೆ ರೈತಾವನ್ನು (ಮೊಸರು) ಸಹ ತಿನ್ನಬಹುದು ಎಂದು ರಾಮದೇವ್ ಹೇಳುತ್ತಾರೆ.

ಪ್ರತಿದಿನ ಮಂಡೂಕಾಸನ ಮತ್ತು ಭುಜಂಗಾಸನ ಮಾಡಿ

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ನೀವು ಯೋಗವನ್ನು ಬಳಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ವಾಸ್ತವವಾಗಿ, ಯೋಗವು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುವುದಲ್ಲದೆ, ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮಂಡೂಕಾಸನ ಮತ್ತು ಭುಜಂಗಾಸನವನ್ನು ಮಾಡಲು ಶಿಫಾರಸು ಮಾಡುತ್ತಾರೆ. ಹನುಮಾನ್ ದಂಡವನ್ನು ಸಹ ಶಿಫಾರಸು ಮಾಡುತ್ತಾರೆ, ಏಕೆಂದರೆ ಇದು ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಮೂತ್ರಪಿಂಡಗಳು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುವ ಹಾರ್ಮೋನ್ ಆದ ಎರಿಥ್ರೋಪೊಯೆಟಿನ್ ಅನ್ನು ಉತ್ಪಾದಿಸುತ್ತವೆ. ಹೀಗಾಗಿ, ಹಿಮೋಗ್ಲೋಬಿನ್ ಉತ್ಪಾದನೆಗೆ ಆರೋಗ್ಯಕರ ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯವು ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಹ್ಲಿಗೆ ನೀಡಲು 15 ಲಕ್ಷ ರೂ. ಮೌಲ್ಯದ ಉಡುಗೊರೆ ತಂದ ಅಭಿಮಾನಿ; ವಿಡಿಯೋ – Kannada News | Surat Fan wants to give 15 Lakh Worth Gold Mobile Cover to Virat Kohli

ನ್ಯೂಜಿಲೆಂಡ್ ವಿರುದ್ಧದ ರಾಜ್‌ಕೋಟ್‌ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸದೆ ಇರಬಹುದು. ಆದರೆ ತಮ್ಮ ಅಲ್ಪ ಇನ್ನಿಂಗ್ಸ್ ಮೂಲಕ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಕಿವೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಇದು ಪಂದ್ಯದ ವಿಚಾರವಾದರೆ, ಪಂದ್ಯದ ಹೊರಗಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿಗೆ ನೀಡಲು ಅತಿ ದುಬಾರಿ ಉಡುಗೊರೆಯೊಂದನ್ನು ತಂದಿದ್ದಾನೆ.

ವಾಸ್ತವವಾಗಿ ಸೂರತ್ ಮೂಲಕ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಲೆಂದು ಚಿನ್ನದಿಂದ ಮಾಡಿರುವ ಐಫೋನ್​ ಬ್ಯಾಕ ಕೇಸ್​ ಅನ್ನು ತಂದಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದ ಮುಂದೆ ಆ ಬ್ಯಾಕ್​ ಕೇಸ್​ ಅನ್ನು ಕ್ಯಾಮೆರಾಗಳಿಗೆ ಪ್ರದರ್ಶಿಸಿ ಇದನ್ನು ಕೊಹ್ಲಿಗೆ ನೀಡಲು ತಂದಿರುವುದಾಗಿಯೂ ಇದರ ಬಲೆ 1.5 ಮಿಲಿಯನ್ ಅಂದರೆ 15 ಲಕ್ಷ ರೂಪಾಯಿಗಳು ಎಂಬುದನ್ನು ಬಹಿರಂಗಪಡಿಸಿದ್ದಾನೆ.

ಈ ಬ್ಯಾಕ್ ಕೇಸ್​ನ ಇನ್ನೊಂದು ವಿಶೇಷತೆ ಏನೆಂದರೆ, ಇದರಲ್ಲಿ ವಿರಾಟ್ ಕೊಹ್ಲಿ ಅವರ ಫೋಟೋ ಮತ್ತು ಅವರ ಹೆಸರನ್ನು ಕೆತ್ತಲಾಗಿದೆ. ಇದೀಗ ಈ ಚಿನ್ನದ ಬ್ಯಾಕ್​ ಕೇಸ್​ನ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಕೊಹ್ಲಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಫಿನಾಲೆ: ಅಶ್ವಿನಿ ಗೌಡ ಪರವಾಗಿ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ಹೋಗಿದ್ದು ನಿಜವೇ? – Kannada News | Bigg Boss Kannada 12 Finale This is why Karave Narayana Gowda visited Kichcha Sudeep house

ಈಗ ಎಲ್ಲೆಲ್ಲೂ ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata), ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್, ಮ್ಯೂಟೆಂಟ್ ರಘು ಅವರು ಫಿನಾಲೆ ವಾರದ ತನಕ ಸಾಗಿಬಂದಿದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ಫೋಟೋ ವೈರಲ್ ಆಗಿದೆ. ಕಿಚ್ಚ ಸುದೀಪ್ ಮನೆಗೆ ನಾರಾಯಣ ಗೌಡ ಅವರು ಹೋಗಿರುವುದು ಈ ಫೋಟೋದಲ್ಲಿ ಕಾಣಿಸಿದೆ. ಅಶ್ವಿನಿ ಗೌಡ (Ashwini Gowda) ಅವರ ಪರವಾಗಿ ಮಾತಾಡಲು ನಾರಾಯಣ ಗೌಡ ಹೋಗಿದ್ದರು ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಬಗ್ಗೆ ಕರವೇ ಧರ್ಮಣ್ಣ ಅವರು ಸ್ಪಷನೆ ನೀಡಿದ್ದಾರೆ.

ಅಂದಹಾಗೆ, ಈ ಭೇಟಿಗೂ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ. ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದಾಗ ತೆಗೆದ ಫೋಟೋ ಇದು. ಈ ಫೋಟೋವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆ ಬಗ್ಗೆ ಕರವೇ ಧರ್ಮಣ್ಣ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

‘ನಾರಾಯಣ ಗೌಡ ಅವರು ಮಗನ ಮದುವೆ ಪತ್ರಿಕೆಯನ್ನು ಕೊಡುತ್ತಿರುವುದನ್ನು ತಿಂಗಳ ಹಿಂದೆಯೇ ರಾಜ್ಯದ ಜನರು ನೋಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಹಾಗೂ ಕಲಾವಿದರಿಗೆ ನಾರಾಯಣ ಗೌಡ ಅವರು ಮದುವೆ ಪತ್ರಿಕೆ ನೀಡುತ್ತಿದ್ದಾರೆ. ಹಾಗಾಗಿ ಸುದೀಪ್ ಅವರು ನಿನ್ನೆ ಬರಲು ಹೇಳಿದ್ದರು. ಅವರನ್ನು ಭೇಟಿ ಮಾಡಿ ಮದುವೆ ಆಹ್ವಾನ ಪತ್ರಿಕೆ ನೀಡಲಾಗಿದೆ’ ಎಂದು ಧರ್ಮಣ್ಣ ಅವರು ಹೇಳಿದ್ದಾರೆ.

‘ಬೇರೆಯವರ ರೀತಿಯೇ ಸುದೀಪ್ ಅವರಿಗೆ ಮದುವೆ ಪತ್ರಿಕೆ ನೀಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಅದನ್ನು ಕೆಲವು ಟ್ರೋಲ್ ಪೇಜ್​​ಗಳು ತೆಗೆದುಕೊಂಡು ಈ ರೀತಿ ಮಾಡುತ್ತಿದ್ದಾರೆ. ನಾರಾಯಣ ಗೌಡ್ರು ಹಾಗೂ ಸುದೀಪ್ ಅವರ ವಿರೋಧಿಗಳು ಈ ರೀತಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದಕ್ಕೆ ನಾಚಿಕೆ ಆಗಬೇಕು’ ಎಂದು ಧರ್ಮಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದುಗಳು ನೋಡಿ..

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಆಟ ಎಲ್ಲರಿಗೂ ಮೆಚ್ಚುಗೆ ಆಗಿದೆ. ಹಾಗಾಗಿ ಅವರೇ ಗೆಲ್ಲಬಹುದು ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಜನವರಿ 17 ಮತ್ತು 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್​ರಚಾರ ಮಾಡಲಾಗುತ್ತಿದೆ. ಗಿಲ್ಲಿ ಹವಾ ಸಿಕ್ಕಾಪಟ್ಟೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Makara Jyothi: ಮಳೆಯ ಭೀತಿಯ ನಡುವೆಯೂ ಶಬರಿಮಲೆಯ ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ – Kannada News | Thousands of Lord Ayyappa devotees who witnessed sacred Makara Jyothi on Ponnambalamedu Hill

ಶಬರಿಮಲೆ, ಜನವರಿ 14: ಪ್ರತಿ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆಯ (Sabarimala) ಪೊನ್ನಂಬಲಮೇಡು ಬೆಟ್ಟದಲ್ಲಿ ಕಾಣುವ ಪವಿತ್ರವಾದ ಮಕರ ಜ್ಯೋತಿಯನ್ನು ವೀಕ್ಷಿಸಲು ಕಾಯುತ್ತಿರುತ್ತಾರೆ. ಇಂದು ಮಳೆಯ ಆತಂಕದ ನಡುವೆಯೇ ಮಕರ ಜ್ಯೋತಿಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದರು. ಕೊನೆಗೂ ಇಂದು ಸಂಜೆ 6.45ಕ್ಕೆ ಶಬರಿಮಲೆಯಿಂದ 8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ.

ಅಯ್ಯಪ್ಪ ಸ್ವಾಮಿ ಭಕ್ತರು ಕೈಜೋಡಿಸಿ, ಸ್ವಾಮಿ ಶರಣಂ ಅಯ್ಯಪ್ಪ ಎಂದು ಪಠಿಸುತ್ತಾ ಮಕರ ಜ್ಯೋತಿಯನ್ನು ವೀಕ್ಷಿಸಿದರು. ಈ ವೇಳೆ ನಕ್ಷತ್ರವು ಆಕಾಶದಲ್ಲಿ ಬೆಳಗಿ ಭಕ್ತರಿಗೆ ಆಶೀರ್ವಾದವನ್ನು ತಂದಿತು. ಆಕಾಶದಲ್ಲಿ ಬೇರೆ ಯಾವುದೇ ನಕ್ಷತ್ರಗಳಿಲ್ಲದೆ ಉತ್ರಮ ನಕ್ಷತ್ರದ ದರ್ಶನವನ್ನು ಪಡೆದ ಭಕ್ತರು ಧನ್ಯರಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಲ್ಮೀಕಿ ನಿಗಮ ಹಗರಣ: ಮತ್ತೆ ಬಂಧನದ ಭೀತಿಯಲ್ಲಿದ್ದ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬಿಗ್ ರಿಲೀಫ್ – Kannada News | Karnataka Valmiki Corporation scam Case: Bellary Congress MLA Nagendra Gets Bail

ಬೆಂಗಳೂರು, (ಜನವರಿ 14): ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Karnataka Valmiki Corporation scam) ಮಾಜಿ ಸಚಿವ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ (B Nagendra) ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸಿಬಿಐ ನೋಟಿಸ್ ಹಿನ್ನೆಲೆಯಲ್ಲಿ ಜಾಮೀನಿಗೆ ಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜೋರ್ಟ್​, ಕೆಲ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ. 2 ಲಕ್ಷ ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿದೆ. ಅಲ್ಲದೇ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ನಾಗೇಂದ್ರಗೆ ಕೋರ್ಟ್​ ಷರತ್ತು ಹಾಕಿದೆ.

ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ (CBI) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ (ಜನವರಿ 13) ವಿಚಾರಣೆ ನಡೆಸಿದ್ದ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಸಿಬಿಐ ಕುಣಿಕೆಯಿಂದ ಬಚಾವ್ ಆಗಿದ್ದಾರೆ.

ಇದನ್ನೂ ಓದಿ:  ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರಗೆ ಇಡಿ ಬಿಗ್ ಶಾಕ್

ವಾದ-ಪ್ರತಿವಾದ ಹೇಗಿತ್ತು?

ಮಂಗಳವಾರ(ಜನವರಿ 13) ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದಮಂಡನೆ ಮಾಡಿದ್ದರು. ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರನ್ನು ಸಿಐಡಿ, ಇಡಿ ತನಿಖೆ ಮಾಡಿದೆ. ಅದಕ್ಕಿಂತ ಮುಂದುವರೆದು ಇದರಿಂದ ಫಲಾನುಭವಿಗಳು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಇಲ್ಲಿಯವರೆಗೂ ನಡೆದ ತನಿಖೆಯ ಕೆಲ ಮಾಹಿತಿಗಳನ್ನ ತೆರೆದ ನ್ಯಾಯಾಲಯದಲ್ಲಿ ಹೇಳಲು ಸಾಧ್ಯವಿಲ್ಲ. ಮುಂಬೈನಲ್ಲಿ ಕೂಡ ದಾಳಿ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಹಗರಣದ ಹಣ ಚಿನ್ನ, ಬುಲಿಯನ್ ಆಗಿ ಕನ್ವರ್ಟ್ ಆಗಿದೆ. ಇದರ ಹಿಂದೆ ನಾಗೇಂದ್ರ, ಅವರ ಸಹಚರರು ಭಾಗಿಯಾಗಿದ್ದಾರೆ. ಇದರ ಹಿಂದೆ ಕೆಲ ಬೋಗಸ್ ಕಂಪನಿಗಳು ಭಾಗಿಯಾಗಿವೆ. ಈ ಪ್ರಕರಣದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನ ಕಲೆ ಹಾಕಲಾಗಿದೆ ಎಂದು ಹೇಳಿ ಕೋರ್ಟ್‌ಗೆ ತಂದಿದ್ದ ಎರಡು ಸೂಟ್‌ಕೇಸ್ ದಾಖಲೆಗಳನ್ನ ತನಿಖಾಧಿಕಾರಿ ತೋರಿಸಿದ್ದರು.

ಇದಕ್ಕೆ ಪ್ರತಿಯಾಗಿ ನಾಗೇಂದ್ರ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರ ಅವರ ವೈಯಕ್ತಿಕವಾಗಿದೆ. ಸಿಬಿಐ ಹೇಳುತ್ತಿರುವ ಟೆಂಡರ್‌ಗೂ ಈ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲ ಅಂತಾ ವಾದಿಸಿದ್ದರು. ಈ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಅಂತಿಮವಾಗಿ ನಾಗೇಂದ್ರಗೆ ಜಮೀನು ಮಂಜೂರು ಮಾಡಿದೆ.

8.07 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಇದೇ ವಾಲ್ಮೀಕಿ ಅಭಿೃದ್ಧಿ ನಿಗಮ ಹಗರಣದಲ್ಲಿ ಈ ಹಿಂದೆ ಜೈಲು ಪಾಲಾಗಿದ್ದ ಬಿ ನಾಗೇಂದ್ರ ನಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಇನ್ನು ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ 8.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಏನಿದು ಪ್ರಕರಣ?

ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ನಂತರ ಈ ಹಣವನ್ನು ಶೆಲ್ ಕಂಪನಿಗಳ ಮೂಲಕ ಲೂಟಿ ಮಾಡಲಾಗಿತ್ತು ಎಂಬ ಆರೋಪದ ಮೇಲೆ ಕರ್ನಾಟಕ ಪೊಲೀಸರು ಮತ್ತು ಸಿಬಿಐ ಎಫ್‌ಐಆರ್ ದಾಖಲಿಸಿದ್ದವು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಈ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಿ. ನಾಗೇಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಮೊಬೈಲ್, ಲ್ಯಾಪ್‌ಟಾಪ್‌ ಹೆಚ್ಚಾಗಿ ಬಳಸುತ್ತೀರಾ? ಹಾಗಿದ್ರೆ ಈ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಲೇಬೇಕು! – Kannada News | Screen Time & Pain: How to Reduce Risk

ಇಂದಿನ ಕಾಲದಲ್ಲಿ, ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ಕೆಲಸ, ಅಧ್ಯಯನ, ಮನರಂಜನೆ ಮತ್ತು ಸಾಮಾಜಿಕ ಮಾಧ್ಯಮಕ್ಕಾಗಿ ಇವುಗಳ ಬಳಕೆ ಹೆಚ್ಚಾಗಿದೆ. ಆದರೆ ದೀರ್ಘಕಾಲದವರೆಗೆ ಮೊಬೈಲ್ ಫೋನ್ ನೋಡುವುದು ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಿಂದ ಕುತ್ತಿಗೆ (Neck) ಬಾಗುತ್ತದೆ ಮತ್ತು ಕಣ್ಣುಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದು ಬಿಗಿತ, ಕುತ್ತಿಗೆ ನೋವು (neck pain) ಮತ್ತು ಕಣ್ಣುಗಳಲ್ಲಿ ಸುಡುವ ಸಂವೇದನೆಗೆ ಕಾರಣವಾಗಬಹುದು. ಅನೇಕರು ಆರಂಭದಲ್ಲಿ ಇದನ್ನು ನಿರ್ಲಕ್ಷಿಸುತ್ತಾರೆ, ಆದರೆ ಕಾಲಾನಂತರದಲ್ಲಿ, ಈ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ, ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯ. ಅದಲ್ಲದೆ ನಿರಂತರವಾಗಿ, ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ ನೋಡುವುದು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ತಲೆನೋವಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಪರಿಹರಿಸಿಕೊಳ್ಳದಿದ್ದರೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆ ತಡೆಯಲು ಯಾವ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕುತ್ತಿಗೆ ಮತ್ತು ಕಣ್ಣು ನೋವನ್ನು ತಡೆಗಟ್ಟಲು ಏನು ಮಾಡಬೇಕು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಕುತ್ತಿಗೆ ಮತ್ತು ಕಣ್ಣಿನಲ್ಲಿ ಕಂಡುಬರುವ ನೋವನ್ನು ತಡೆಗಟ್ಟಲು, ಮೊದಲು ನಿಮ್ಮ ಸ್ಕ್ರೀನ್-ವೀಕ್ಷಣಾ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಅವಶ್ಯಕ. ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವಾಗ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಮರೆಯಬೇಡಿ. ಜೊತೆಗೆ ಕುತ್ತಿಗೆಯನ್ನು ಹೆಚ್ಚು ಬಗ್ಗಿಸುವುದನ್ನು ಕಡಿಮೆಮಾಡಿ. ಗಂಟೆಗಳ ಕಾಲ ನಿರಂತರವಾಗಿ ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ನೋಡಬೇಡಿ. ಅದರ ಬದಲು ನಡುವೆ ವಿರಾಮ ತೆಗೆದುಕೊಳ್ಳಿ. ಕಣ್ಣುಗಳಿಗೆ ಬಹಳ ಹತ್ತಿರದಲ್ಲಿ ಯಾವುದನ್ನು ಇಟ್ಟುಕೊಳ್ಳಬೇಡಿ. ಈ ಅಭ್ಯಾಸ ಹಾನಿಕಾರಕ. ಅಷ್ಟೇಅಲ್ಲ, ಕೆಲಸ ಮಾಡುವಾಗ ಕುರ್ಚಿ ಮತ್ತು ಮೇಜಿನ ಎತ್ತರ ಸರಿಯಾಗಿರಬೇಕು. ಇಲ್ಲವಾದಲ್ಲಿ ಕೆಟ್ಟ ಅಭ್ಯಾಸಗಳು ಕಾಲಾನಂತರದಲ್ಲಿ ನೋವನ್ನು ಹೆಚ್ಚಿಸಬಹುದು, ಆದ್ದರಿಂದ ಅವುಗಳನ್ನು ಸಮಯಕ್ಕೆ ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ನಿಮಗೂ ಪದೇ ಪದೇ ತಲೆ ನೋವಿನ ಜೊತೆಗೆ ಕಣ್ಣು ನೋವು ಬರುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?

ಕುತ್ತಿಗೆ ಮತ್ತು ಕಣ್ಣು ನೋವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಗಂಭೀರ ಸಮಸ್ಯೆಗಳು ಉಂಟಾಗಬಹುದು. ಗರ್ಭಕಂಠದ ನೋವು, ಸ್ನಾಯು ಸೆಳೆತ ಮತ್ತು ಕುತ್ತಿಗೆಯಲ್ಲಿ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ದೃಷ್ಟಿ ದುರ್ಬಲಗೊಳ್ಳಬಹುದು, ಒಣ ಕಣ್ಣಿನ ಸಿಂಡ್ರೋಮ್ ಉಂಟಾಗಬಹುದು ಮತ್ತು ತಲೆನೋವು ನಿರಂತರವಾಗಿ ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ, ನಿದ್ರೆಯ ಕೊರತೆ ಮತ್ತು ಹೆಚ್ಚಿದ ಒತ್ತಡವು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ:

  • ಪ್ರತಿ 20 ನಿಮಿಷಗಳಿಗೊಮ್ಮೆ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ.
  • ಮೊಬೈಲ್ ಬಳಸುವಾಗ ಸರಿಯಾದ ಅಂತರವನ್ನು ಕಾಪಾಡಿಕೊಳ್ಳಿ.
  • ಕುತ್ತಿಗೆ ಮತ್ತು ಕಣ್ಣುಗಳ ಆರೋಗ್ಯ ಕಾಪಾಡಲು ಲಘು ವ್ಯಾಯಾಮ ಮಾಡಿ.
  • ಸ್ಕ್ರೀನ್ ಸಮಯವನ್ನು ಮಿತಿಗೊಳಿಸಿ.
  • ಮಲಗುವ ಮೊದಲು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಗೆದ್ರೆ ಉಚಿತ ಪ್ರಯಾಣ: ಬೆಂಬಲ ಘೋಷಿಸಿದ ಆಟೋ ಡ್ರೈವರ್​ಗಳು – Kannada News | Auto drivers says if Gilli wins Bigg Boss they will give free auto rides

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆ ವಾರ ಶುರುವಾಗಿದೆ. ಸ್ಪರ್ಧಿಗಳಿಗಾಗಿ ವೋಟಿಂಗ್ ಲೈನ್ ಓಪನ್ ಆಗಿದ್ದು, ಪ್ರೇಕ್ಷಕರು ತಮಗೆ ಬೇಕಾದವರಿಗೆ ಮತಗಳನ್ನು ಹಾಕುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಹ ಅಭಿಯಾನ ಆರಂಭಿಸಿದ್ದು, ಗಿಲ್ಲಿಯ ಗೆಳೆಯರು ಕೆಲವು ಅಭಿಮಾನಿಗಳು ಇತ್ತೀಚೆಗೆ ಪ್ರೊಸೆಷನ್ ಸಹ ನಡೆಸಿದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಖುದ್ದು ಗಿಲ್ಲಿ ಪರವಾಗಿ ಮತ ಚಲಾಯಿಸುವಂತೆ ಕೋರಿದ್ದರು. ಇದೀಗ ಬೆಂಗಳೂರಿನ ಕೆಲ ಆಟೋ ಡ್ರೈವರ್​​ಗಳು ಗಿಲ್ಲಿಗೆ ಬೆಂಬಲ ಘೋಷಿಸಿದ್ದು, ಗಿಲ್ಲಿ ಬಿಗ್​​ಬಾಸ್ ಗೆದ್ದರೆ ಬೆಳಿಗ್ಗೆ ಐದು ಗಂಟೆಯಿಂದ ಸಂಜೆ ಏಳು ಗಂಟೆ ವರೆಗೂ ಉಚಿತ ಪ್ರಯಾಣ ಸೇವೆ ಕೊಡುವುದಾಗಿ ಘೋಷಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿ ಮೈಲಾರಲಿಂಗ ಜಾತ್ರೆಯಲ್ಲಿ ಹಳದಿ ಮಾರುತ: ಭಂಡಾರದೋಕುಳಿಯಲ್ಲಿ ಮುಂದೆದ್ದ ಭಕ್ತರು – Kannada News | Yadagiri Mailaralingana Jatre: Mylapura Ancient Grand Bhandara

ಪಲ್ಲಿಕ್ಕಿ ಮೆರವಣಿಗೆಯನ್ನ ನೋಡುವುದ್ದಕ್ಕೆ ಸಾವಿರಾರು ಜನ ಸುತ್ತಮುತ್ತಲಿನ ಗುಡ್ಡ, ಮನೆಯ ಮಹಡಿ ಮೇಲೆ ಕುಳಿತುಕೊಂಡು ಪಲ್ಲಕ್ಕಿ ಮೇಲೆ ಭಂಡಾರವನ್ನ ಎರಚಿದರು. ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ವಾಡಿಕೆಯಿತ್ತು. ಆದರೆ ಪ್ರಾಣಿ ಹಿಂಸೆ ನಿಷೇಧಿಸಲಾಗಿದೆ. ಇದರ ಜೊತೆಗೆ ರೈತರು ಬೆಳೆದ ಜೋಳದ ದಂಡು (ಸೊಪ್ಪೆ) ಹಾಗೂ ಕುರಿಗಳ ಉಣ್ಣೆಯನ್ನ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಹೀಗೆ ಮಾಡುವುದರಿಂದ ಕುರಿಗಳಿಗೆ ಯಾವುದೇ ರೋಗ ರುಜಿನ ಬರಲ್ಲ, ಹಾಗೆ ಬೆಳೆ ಕೂಡ ಚೆನ್ನಾಗಿ ಬರುತ್ತೆ ಎನ್ನುವುದು ಭಕ್ತರ ನಂಬಿಕೆ. 

Source link