Category Archives: Blog

Your blog category

ವೇದಿಕೆ ಮೇಲೆ F ಪದ ಬಳಕೆ ಮಾಡಿದ ರಶ್ಮಿಕಾ ಮಂದಣ್ಣ; ವೇದಿಕೆಯಲ್ಲೇ ಕ್ಷಮೆ ಕೇಳಿದ ನ್ಯಾಷನಲ್ ಕ್ರಶ್ – Kannada News | Rashmika Mandanna’s F Word Viral Moment at Cocktail 2 Song Launch After Marriage

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಮದುವೆ ಆದ ಬಳಿಕ ಅವರ ನಟನೆಯ ಮೊದಲ ಸಿನಿಮಾ ತೆರೆಗೆ ಬರುತ್ತಿದೆ. ಅದುವೇ ‘ಕಾಕ್‌ಟೇಲ್ 2’. ಹಿಂದಿಯ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಜೂನ್ 19ರಂದು ರಿಲೀಸ್ ಆಗಲಿರುವ ಈ ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಭಾನುವಾರ (ಮೇ 17) ರಾತ್ರಿ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಹನಟಿ ಕೃತಿ ಸನೂನ್ ಅವರ ಸೌಂದರ್ಯವನ್ನು ಹೊಗಳುವ ಬರದಲ್ಲಿ ರಶ್ಮಿಕಾ ವೇದಿಕೆಯಲ್ಲೇ ಬಾಯಿ ತಪ್ಪಿ ಇಂಗ್ಲಿಷ್‌ನ ‘F’ ಪದ ಬಳಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್, ಕೃತಿ ಸನೂನ್ ಇದ್ದರು. ಕೃತಿ ಅವರನ್ನು ನೋಡಿ ಅತಿಯಾದ ಉತ್ಸಾಹದಲ್ಲಿದ್ದ ರಶ್ಮಿಕಾ ಮಾತನಾಡಿದರು. ‘ಕಾಕ್‌ಟೇಲ್ 2 ಚಿತ್ರದಲ್ಲಿ ಏನೋ ಒಂದು ವಿಶೇಷತೆ ಇದೆ. ಕೃತಿ ನೀವು ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದೀರಾ ಎಂಬುದು ಇಡೀ ಜಗತ್ತಿಗೇ ಗೊತ್ತು. ನೀವು ನಿಜಕ್ಕೂ F****** ಹಾಟ್’ ಎಂದುಬಿಟ್ಟರು. ತಾವು ಆಡಿದ ಮಾತು ಅರಿವಿಗೆ ಬರುತ್ತಿದ್ದಂತೆ ಕೈಯಿಂದ ಬಾಯಿ ಮುಚ್ಚಿಕೊಂಡ ರಶ್ಮಿಕಾ, ‘ನನ್ನನ್ನು ಕ್ಷಮಿಸಿ! ಆ ಪದವನ್ನು ಸೈಲೆನ್ಸ್ ಮಾಡಿಬಿಡಿ’ ಎಂದು ವಿನಂತಿಸಿಕೊಂಡರು.

ರಶ್ಮಿಕಾ ಅವರು ತಾವು ಆಡಿದ ಮಾತಿನಿಂದ ಸ್ವಲ್ಪ ಮುಜುಗರವನ್ನು ಎದುರಿಸಿದರು. ಇದನ್ನು ಕಂಡು ಅಲ್ಲಿದ್ದ ಪ್ರೇಕ್ಷಕರು ಮತ್ತು ಮಾಧ್ಯಮದವರು ಜೋರಾಗಿ ನಕ್ಕು, ಚಪ್ಪಾಳೆ ತಟ್ಟಿದರು. ನಂತರ ಸಿನಿಮಾ ಬಗ್ಗೆ ರಶ್ಮಿಕಾ ಮಾತನಾಡಿದರು. ‘ನಾವೆಲ್ಲರೂ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದೇವೆ. ಇಡೀ ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯವೂ ಮ್ಯಾಜಿಕಲ್ ಆಗಿ ಮೂಡಿಬಂದಿದೆ. ಈಗ ರಿಲೀಸ್ ಆಗಿರುವುದು ಕೇವಲ ಟ್ರೈಲರ್‌ನಂತಹ ತುಣುಕು ಅಷ್ಟೇ. ಮುಂದೆ ಚಿತ್ರದಲ್ಲಿ ನೋಡಲು ತುಂಬಾ ವಿಷಯಗಳಿವೆ’ ಎಂದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದರು.

ಇದನ್ನೂ ಓದಿ: ‘ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್’; ರಶ್ಮಿಕಾ ಮಂದಣ್ಣ ಮನದಾಳದ ಮಾತು

ಹೋಮಿ ಅದಾಜಾನಿಯಾ ‘ಕಾಕ್​​ಟೇಲ್ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ದಿನೇಶ್ ವಿಜನ್ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 2012ರಲ್ಲಿ ಬಂದ ಸೂಪರ್ ಹಿಟ್ ‘ಕಾಕ್‌ಟೇಲ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಮದುವೆಯ ನಂತರ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಬರಲಿರುವ ರಶ್ಮಿಕಾ ಮಂದಣ್ಣ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VD Satheesan Oath Taking: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್ – Kannada News | Kerala swearing in ceremony, VD Satheesan Takes Oath As new chief minister Of Kerala

ತಿರುವನಂತಪುರಂ, ಮೇ 18: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೊತೆಗೆ 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್​​ ನೇತೃತ್ವದ ಯುಡಿಎಫ್, ನೂತನ ಸಿಎಂ ಆಗಿ ವಿಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ.

ಕಾಂಗ್ರೆಸ್​ನಿಂದ 11 ಮಂದಿ, ಮುಸ್ಲಿಂ ಲೀಗ್​ನ ಐವರು ಹಾಗೂ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್), ಮತ್ತು ಸಿಪಿ ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ) ಅವರಿಗೂ ಅವಕಾಶ ಮಾಡಿಕೊಡಲಾಗಿದೆ. ಕಾಂಗ್ರೆಸ್​ನಿಂದ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ ಮುರಳೀಧರನ್, ಎ ಪಿ ಅನಿಲ್ ಕುಮಾರ್, ಪಿ ಸಿ ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ ಲಿಜು, ಟಿ ಸಿದ್ದಿಕ್, ಕೆ ಎ ತುಳಸಿ ಮತ್ತು ಒ ಜೆ ಜನೀಶ್ ಸಚಿವರಾಗಲಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ: ಜಾನ್ಸ್ ಅಸೆಟ್ ಕಂಪನಿ ಮಾಲೀಕ ಎಸ್ಕೇಪ್! – Kannada News | Bengaluru Lease Fraud: Johns Asset Company Dupes 300 People of Rs 200 Crore, Owner Absconding

ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ

ಬೆಂಗಳೂರು, ಮೇ 18: ನಗರದಲ್ಲಿ ಮನೆಗಳನ್ನು ಲೀಸ್​ಗೆ (Lease) ಪಡೆಯಲು ಬಯಸುವವರನ್ನೇ ಟಾರ್ಗೆಟ್ ಮಾಡಿ ಬರೋಬ್ಬರಿ 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಜಾನ್ಸ್ ಅಸೆಟ್ (Johns Asset) ಎಂಬ ಮಿಡಿಯೇಟರ್ ಕಂಪನಿಯು ಸುಮಾರು 300ಕ್ಕೂ ಹೆಚ್ಚು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು, ಕಂಪನಿ ಮಾಲೀಕ ಪರಾರಿಯಾಗಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮನೆ ಲೀಸ್​ಗೆ ಪಡೆಯುವವರನ್ನು ಟಾರ್ಗೆಟ್ ಮಾಡಿ ಭಾರಿ ವಂಚನೆ ನೆಡೆದಿದೆ.
  • ಜಾನ್ಸ್ ಅಸೆಟ್ ಕಂಪನಿಯು 300 ಜನರಿಗೆ 200 ಕೋಟಿಗೂ ಅಧಿಕ ವಂಚಿಸಿದೆ.
  • ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾಲೀಕ ಸ್ಟೀಫನ್ ಅರ್ಥರ್ ಸದ್ಯ ಎಸ್ಕೇಪ್.

ವಂಚನೆ ನೆಟ್‌ವರ್ಕ್ ಹೇಗೆ ಕೆಲಸ ಮಾಡ್ತಿತ್ತು?

ನಗರದಲ್ಲಿ ಇತ್ತೀಚೆಗೆ ಲೀಸ್ ಮನೆಗಳ ಕೊರತೆ ಇರುವುದನ್ನು ಬಂಡವಾಳ ಮಾಡಿಕೊಂಡ ಈ ಕಂಪನಿ, ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿತ್ತು. ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ ಎಂದು ನಂಬಿಸುತ್ತಿತ್ತು. ಹಣವೂ ಉಳಿಯುತ್ತದೆ, ಬಾಡಿಗೆ ಕೊಡುವುದೂ ತಪ್ಪುತ್ತದೆ ಎಂದು ನಂಬಿದ ಸಾರ್ವಜನಿಕರಿಂದ ತಲಾ 10ರಿಂದ 75 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗಿತ್ತು. ಆರಂಭದ ಕೆಲವು ತಿಂಗಳು ಬಾಡಿಗೆ ಪಾವತಿಸಿ, ನಂತರ ಕಂಪನಿ ಕಳ್ಳಾಟ ಶುರು ಮಾಡಿದೆ.

ಲೀಸ್ ಹಣವನ್ನೇ ಇನ್ವೆಸ್ಟ್‌ಮೆಂಟ್ ಮಾಡಿಸಿ ವಂಚನೆ!

ಗಾಯಿತ್ರಿ ಎಂಬ ಸಂತ್ರಸ್ತೆ ತಮಗೆ ಆದ ವಂಚನೆ ಬಗ್ಗೆ ಮಾಹಿತಿ ನೀಡಿದ್ದು, ಅವರಿಂದಲೇ 37 ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ಗಾಯಿತ್ರಿ ಅವರು ಕಂಪನಿಯ ಬಳಿ ಹಣ ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ಕಂಪನಿಯು ಹಣ ನೀಡದೆ, ಆ ಮೊತ್ತವನ್ನು ತಮ್ಮಲ್ಲೇ ಇನ್ವೆಸ್ಟ್ ಮಾಡಿದರೆ ತಿಂಗಳಿಗೆ ಶೇ4ರಷ್ಟು ಬಡ್ಡಿ ನೀಡುವುದಾಗಿ ಆಸೆ ತೋರಿಸಿತ್ತು. ಇದನ್ನು ನಂಬಿ ಇನ್ವೆಸ್ಟ್‌ಮೆಂಟ್ ಆಗಿ ಬದಲಾಯಿಸಿಕೊಂಡ ಗಾಯಿತ್ರಿಗೆ ಕೇವಲ ಎರಡು ತಿಂಗಳು ಹಣ ನೀಡಿ ಆಮೇಲೆ ಕಂಪನಿ ಕೈಕೊಟ್ಟಿದೆ.

ಇದನ್ನೂ ಓದಿ ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!

ಮಾಲೀಕ ಎಸ್ಕೇಪ್

ಸದ್ಯ ಕಂಪನಿಯನ್ನು ಕ್ಲೋಸ್ ಮಾಡಿ ಅದರ ಮಾಲೀಕ ಸ್ಟೀಫನ್ ಅರ್ಥರ್ ಎಂಬಾತ ಕೋಟ್ಯಂತರ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ಕಳೆದುಕೊಂಡು ಕಂಗಾಲಾಗಿ ಠಾಣೆಯ ಅಲೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾಕಪ್ ಡೆತ್, ಪೊಲೀಸ್ ದೌರ್ಜನ್ಯಕ್ಕೆ ಬ್ರೇಕ್: ಐತಿಹಾಸಿಕ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ ಡಿಜಿಪಿ ಡಾ ಎಂಎ ಸಲೀಂ – Kannada News | Curbing Custodial Deaths: Karnataka DG&IGP Dr MA Saleem Issues Strict ‘Standing Order 1060’ Under BNSS

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂImage Credit source: tv9

ಬೆಂಗಳೂರು, ಮೇ 18: ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯಗಳು ಹಾಗೂ ಕಸ್ಟೋಡಿಯಲ್ ಡೆತ್ (Lockup Death) ಪ್ರಕರಣಗಳಿಗೆ ಶಾಶ್ವತ ಬ್ರೇಕ್ ಹಾಕಲು ಕರ್ನಾಟಕ ಪೊಲೀಸ್ (Karnataka Police) ಇಲಾಖೆ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ಸ್ಥಳೀಯ ಪೊಲೀಸರಿಂದ ನಡೆಯಬಹುದಾದ ತನಿಖಾ ವೈಫಲ್ಯ ಹಾಗೂ ಸಾಕ್ಷ್ಯನಾಶದ ಯತ್ನಗಳನ್ನು ತಡೆಯುವ ಸಲುವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (DG&IGP) ಡಾ. ಎಂ.ಎ. ಸಲೀಂ ಅವರು ‘ಸ್ಟ್ಯಾಂಡಿಂಗ್ ಆರ್ಡರ್ – 1060’ ಜಾರಿಗೆ ತಂದಿದ್ದಾರೆ. ಹೊಸ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)’ ಅಡಿಯಲ್ಲಿ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಮುಖ್ಯಾಂಶಗಳು

  • ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ ನಡೆದ ತಕ್ಷಣವೇ ಸ್ಥಳೀಯ ಠಾಣಾಧಿಕಾರಿ ಯಾವುದೇ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು.
  • ಘಟನೆ ನಡೆದ ತಕ್ಷಣವೇ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು.
  • ಸಂತ್ರಸ್ತರ ಹೇಳಿಕೆಗಳು ಮತ್ತು ಶವಪರೀಕ್ಷೆಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಆಡಿಯೋ-ವಿಡಿಯೋ ಮೂಲಕ ರೆಕಾರ್ಡ್ ಮಾಡಬೇಕು.

ಖಡಕ್ ನಿಯಮಗಳು ಮತ್ತು ಕಟ್ಟುನಿಟ್ಟಿನ ಕ್ರಮ

ಹೊಸ ಸ್ಟ್ಯಾಂಡಿಂಗ್ ಆರ್ಡರ್ ಪ್ರಕಾರ, ಕಸ್ಟಡಿಯಲ್ಲಿ ದೌರ್ಜನ್ಯ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಬಿಎನ್‌ಎಸ್ಎಸ್ (BNSS) ಸೆಕ್ಷನ್ 103 ಮತ್ತು 185ರ ಅಡಿಯಲ್ಲಿ ಕಡ್ಡಾಯವಾಗಿ ಸ್ಪಾಟ್ ಮಹಜರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತನಿಖೆಯ ವೇಳೆ ಸ್ಥಳೀಯ ಪೊಲೀಸರು ಯಾವುದೇ ರೀತಿಯ ಪ್ರಭಾವ ಬೀರದಂತೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸದಂತೆ ತಡೆಯಲು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಆದೇಶಿಸಲಾಗಿದೆ.

ಒಂದು ವೇಳೆ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟರೆ (ಲಾಕಪ್ ಡೆತ್), ತಕ್ಷಣವೇ ಸಂಬಂಧಪಟ್ಟ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಅಧಿಕೃತ ಮಾಹಿತಿ ನೀಡಿ ಇನ್‌ಕ್ವೆಸ್ಟ್ ಹಾಗೂ ನ್ಯಾಯಾಂಗ ತನಿಖೆಗೆ ಕೋರಬೇಕು. ಶವಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಿಸುವುದು ಕಡ್ಡಾಯವಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿ (CID) ಗೆ ವಹಿಸಿದ ಬಳಿಕ, ಸಿಐಡಿ ಅಧಿಕಾರಿಗಳು ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಅನ್ನು ಕೂಲಂಕಷವಾಗಿ ಮರುಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ: ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!

ಇಲಾಖೆಯ ಘನತೆಗೆ ಕುಂದು ತರುವ ಇಂತಹ ಪ್ರಕರಣಗಳಲ್ಲಿ ಯಾವುದೇ ಹಂತದಲ್ಲೂ ನಿಯಮ ಉಲ್ಲಂಘನೆಯಾದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಡಾ. ಎಂ.ಎ. ಸಲೀಂ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳೆಯ ದಾಖಲೆ ಧೂಳೀಪಟ… ವೈಭವ್ ಈಗ ‘ಸಿಕ್ಸರ್ ಸುಲ್ತಾನ್’

Source link

ರಜತ್ ಪಾಟಿದಾರ್ ಹೊರಗುಳಿಯಲು ‘ಐಸಿಸಿ ಹೊಸ ನಿಯಮ’ ಕಾರಣ!

Source link

ಗದಗ ಜಿಲ್ಲೆಯಲ್ಲಿ ಮಳೆ ಆರ್ಭಟ: ಲಕ್ಷ್ಮೇಶ್ವರ ಪಟ್ಟಣದ ರಸ್ತೆಗಳು ಜಲಾವೃತ – Kannada News | Heavy Rains Lash Lakshmeshwara: Gadag District Roads Waterlogged Summer Storm Havoc: Roads Submerged, Trees Fall

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ…

Read More

Source link

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು – Kannada News | Leaked Cable Renews Debate Over Imran Khan’s Exit From Power

ಇಸ್ಲಾಮಾಬಾದ್, ಮೇ 18: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ಅತ್ಯಂತ ವಿವಾದಾತ್ಮಕ ಹಾಗೂ ರಹಸ್ಯ ರಾಜತಾಂತ್ರಿಕ ದಾಖಲೆ ‘ಸೈಫರ್’ ಅನ್ನು ಅಂತಾರಾಷ್ಟ್ರೀಯ ತನಿಖಾ ಮಾಧ್ಯಮ ಸಂಸ್ಥೆ ಡ್ರಾಪ್ ಸೈಟ್ ಬಿಡುಗಡೆ ಮಾಡಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದ ಈ ರಹಸ್ಯ ಕೇಬಲ್​ನ ಅಸಲಿ ಪ್ರತಿ ಜಗತ್ತಿನ ಮುಂದೆ ಬಹಿರಂಗವಾಗಿರುವುದು ಇದೇ ಮೊದಲು.

ಏನಿದು ಸೈಫರ್ ವಿವಾದ?
2022ರಲ್ಲಿ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ, ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯು ಇಸ್ಲಾಮಾಬಾದ್​​ಗೆ ಒಂದು ರಹಸ್ಯ ಸಂದೇಶವನ್ನು(ಕೇಬಲ್ I-0678)ಕಳುಹಿಸಿತ್ತು. ವಾಷಿಂಗ್ಟನ್​​ನಲ್ಲಿ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಪಾಕಿಸ್ತಾನಿ ರಾಯಭಾರಿ ನಡವೆ ನಡೆದ ಅಧಿಕೃತ ಸಭೆಯ ಸಂಭಾಷಣೆಯ ವಿವರಗಳು ಇರದಲ್ಲಿದೆ.

ಇಮ್ರಾನ್ ಖಾನ್ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಸಮಯದಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದರಿಂದ ಅಮೆರಿಕ ತೀವ್ರ ಅಸಮಾಧಾನಗೊಂಡಿತ್ತು. ಈ ರಹಸ್ಯ ದಾಖಲೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶಿಸಿದ್ದ ಇಮ್ರಾನ್ ಖಾನ್, ನನ್ನ ಸರ್ಕಾರವನ್ನು ಉರುಳಿಸಲು ಅಮೆರಿಕ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಮತ್ತಷ್ಟು ಓದಿ: ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್, ಸುಪ್ರೀಂಕೋರ್ಟ್​​ನಲ್ಲಿ ಕಣ್ಣೀರಿಟ್ಟ ಸಹೋದರಿ

ದಾಖಲೆಯಲ್ಲಿ ಏನಿದೆ?
ಈಗ ಬಿಡುಗಡೆಯಾಗಿರುವ ಪೂರ್ಣ ಮಾಹಿತಿ ಪ್ರಕಾರ, ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪಾಕಿಸ್ತಾನಿ ರಾಯಭಾರಿಗೆ ಕಠಿಣ ಸಂದೇಶ ರವಾನಿಸಿದ್ದರು. ಇಮ್ರಾನ್ ಖಾನ್ ಅವರು ಪ್ರಧಾನಿ ಸ್ಥಾನದಲ್ಲಿ ಮುಂದುವರೆದರೆ ಪಾಕಿಸ್ತಾನವು ಜಾಗತಿಕವಾಗಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಮತ್ತು ಒಂದು ವೇಳೆ ಅವಿಶ್ವಾಸ ನಿರ್ಣಯ ಯಶಸ್ವಿಯಾಗಿ ಅವರು ಅಧಿಕಾರದಿಂದ ಹೊರಹೋದರೆ ಎಲ್ಲವನ್ನೂ ಕ್ಷಮಿಸಲಾಗುವುದು ಎಂಬ ಮಾತುಗಳು ದಾಖಲಾಗಿವೆ.

ಇಮ್ರಾನ್ ಜೈಲು ಪಾಲಾಗಲು ಇದೇ ಕಾರಣ
ಈ ರಹಸ್ಯ ಸಾಕ್ಷ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಇಮ್ರಾನ್ ಖಾನ್ ಅವರ ವಿರುದ್ಧ ಸೈಫರ್ ಪ್ರಕರಣ ದಾಖಲಿಸಲಾಯಿತು. ಇದೇ ಪ್ರಕರದಲ್ಲಿ ಅವರಿಗೆ ನ್ಯಾಯಾಲಯವು ಜೈಲು ಶಿಕ್ಷೆಯನ್ನೂ ವಿಧಿಸಿತ್ತು.

ಅಮೆರಿಕವು ಮುಂದುವರೆದ ಪ್ರಜಾಪ್ರಭುತ್ವ ರಾಷ್ಟ್ರಗಳ ಆಂತರಿಕ ರಾಜಕಾರಣದಲ್ಲಿ ಮತ್ತು ಸರ್ಕಾರಗಳನ್ನು ಬದಲಿಸುವಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತದೆ ಎಂಬುದಕ್ಕೆ ಈ ಸೈಫರ್ ಪ್ರತಿಯೇ ಸಾಕ್ಷಿ ಎಂದು ಇಮ್ರಾನ್ ಖಾನ್ ಬೆಂಬಲಿಗರು ವಾದಿಸಿದ್ದಾರೆ. ಪಾಕಿಸ್ತಾನದ ಸೇನೆ ಮತ್ತು ಈಗಿರುವ ಸರ್ಕಾರದ ನಡುವಿನ ಸಂಬಂಧಗಳು ಹಳಸಿರುವ ಈ ಸಂದರ್ಭದಲ್ಲಿ ಈ ಅಸಲಿ ದಾಖಲೆ ಬಹಿರಂಗಗೊಂಡಿರುವುದು ಪಾಕಿಸ್ತಾನದ ರಾಜಕೀಯದಲ್ಲಿ ಮತ್ತೊಂದು ಭಾರಿ ಬಿರುಗಾಳಿಗೆ ಕಾರಣವಾಗುವುದು ನಿಶ್ಚಿತವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೋಲಾರದಲ್ಲಿ ಮೃತ್ಯುಕೂಪವಾದ ಕೃಷಿ ಹೊಂಡಗಳು: 15 ದಿನದಲ್ಲಿ 7 ಮಂದಿ ಸಾವು – Kannada News | Kolar Farm Ponds Turn Deadly: 7 Deaths in 15 Days Forces DC Dr MR Ravi to Order Fencing in 7 Days or Close Ponds

ಮಾಲೂರು ತಾಲೂಕಿನ ನಕ್ಕನಹಳ್ಳಿ ಗ್ರಾಮದ ಕೃಷಿ ಹೊಂಡ (ಸಾಂದರ್ಭಿಕ ಚಿತ್ರ)Image Credit source: tv9

ಕೋಲಾರ, ಮೇ 18: ಕೋಲಾರ (Kolar) ಜಿಲ್ಲೆಯಲ್ಲಿ ಕೃಷಿ ಹೊಂಡಗಳು ಸರಣಿ ಸಾವಿನ ಮೃತ್ಯುಕೂಪಗಳಾಗಿ ಪರಿಣಮಿಸಿದ್ದು, ಕಳೆದ ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಏಳು ಜನ ಈ ಹೊಂಡಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಜಿಲ್ಲಾಧಿಕಾರಿ (DC) ಎಂ.ಆರ್. ರವಿ ಅವರು ತಕ್ಷಣವೇ ವಿಶೇಷ ಸಭೆ ಕರೆದು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಕೃಷಿ ಹೊಂಡಗಳಿಗೆ ಏಳು ದಿನಗಳ ಒಳಗಾಗಿ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಿ ಸುರಕ್ಷತೆ ಕಾಯ್ದುಕೊಳ್ಳಬೇಕು, ಇಲ್ಲದಿದ್ದರೆ ಅಂತಹ ಕೃಷಿ ಹೊಂಡಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳಿಗೆ ಮತ್ತು ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಕೋಲಾರ ಜಿಲ್ಲೆಯ ವಿವಿಧೆಡೆಗಳಲ್ಲಿ 15 ದಿನದಲ್ಲಿ 7 ಜನ ಸಾವು.
  • ಸುರಕ್ಷತಾ ಕ್ರಮಗಳಿಲ್ಲದ ಕೃಷಿ ಹೊಂಡಗಳಿಂದ ದುರಂತ.
  • ಮಾಲೂರಿನಲ್ಲಿ ತಂದೆ, ಇಬ್ಬರು ಮಕ್ಕಳ ಜಲಸಮಾಧಿ.

ಮಾಲೂರು ತಾಲೂಕಿನ ನಕ್ಕನಹಳ್ಳಿಯಲ್ಲಿ ಭಾನುವಾರ ಶ್ರೀನಿವಾಸ್ (40) ಹಾಗೂ ಅವರ ಮಕ್ಕಳಾದ ಚೇತನ್ (13), ರಾಜೇಶ್ (8) ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಸರಣಿ ದುರಂತಗಳ ಹಿನ್ನೆಲೆ

ಕೋಲಾರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಹೊಂಡಗಳಿಗೆ ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೇ 5 ರಂದು ಬಂಗಾರಪೇಟೆ ತಾಲೂಕಿನ ಬೋಡೇನಹಳ್ಳಿ ಗ್ರಾಮದಲ್ಲಿ ತನುಶ್ರೀ (15) ಮತ್ತು ಕಾರ್ತಿಕ್ (8) ಎಂಬ ಅಣ್ಣ-ತಂಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಮೇ 8 ರಂದು ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಈಜಲು ಹೋದ ನರೇಂದ್ರ (25) ಹಾಗೂ ಚಂದನ್ (25) ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು.

ಇದನ್ನೂ ಓದಿ: ಕೋಲಾರ: ಜವರಾಯನಾದ ಕೃಷಿ ಹೊಂಡ, ಈಜು ಕಲಿಸಲು ಹೋದ ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ

ಇದೀಗ ಭಾನುವಾರ ಮಾಲೂರಿನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ. ರೈತರು ತಮ್ಮ ಜಮೀನುಗಳಲ್ಲಿ ತಾವೇ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ಸೂಕ್ತ ರಕ್ಷಣೆ ಒದಗಿಸದ ಕಾರಣ ಈ ಅನಾಹುತಗಳು ಸಂಭವಿಸುತ್ತಿದ್ದು, ಸದ್ಯ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ದಾಖಲೆಗಳ ಸರದಾರನ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆ!

Source link