Category Archives: Blog

Your blog category

Daily Devotional: ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕಾರ ಮಾಡಬಾರದು ಯಾಕೆ ಗೊತ್ತಾ? – Kannada News | Daily Devotional Insights: The Risks of Performing Namaskara Facing South

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ
ಹಿಂದೂ ಸಂಪ್ರದಾಯದ ಒಂದು ಪ್ರಮುಖ ಅಂಶವಾದ ನಮಸ್ಕಾರದ ಮಹತ್ವ ಮತ್ತು ಅದರ ನಿರ್ದಿಷ್ಟ ದಿಕ್ಕಿನ ಆಚರಣೆಗಳ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನೀಡಿದ್ದಾರೆ. ನಮಸ್ಕಾರವು ಕೇವಲ ಒಂದು ಕ್ರಿಯೆಯಲ್ಲದೆ, ಒಬ್ಬ ವ್ಯಕ್ತಿಯ ಸಹನೆ, ತಾಳ್ಮೆ, ಒಳ್ಳೆಯತನ ಮತ್ತು ಸಾತ್ವಿಕತೆಯನ್ನು ಪ್ರತಿಬಿಂಬಿಸುವ ಸಂಸ್ಕಾರವಾಗಿದೆ.

ಸಾಮಾನ್ಯವಾಗಿ, ನಮಸ್ಕಾರವನ್ನು ಯಾವುದೇ ದಿಕ್ಕಿಗೆ ಮಾಡಬಹುದಾದರೂ, ಧರ್ಮಗ್ರಂಥಗಳು ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕರಿಸುವುದರ ಬಗ್ಗೆ ಎಚ್ಚರಿಕೆ ನೀಡುತ್ತವೆ. ದಕ್ಷಿಣ ದಿಕ್ಕಿಗೆ ನಮಸ್ಕರಿಸುವುದು ಕೆಲವು ಆಪತ್ತುಗಳಿಗೆ ಸೂಚಕವಾಗಬಹುದು ಎಂದು ಈ ಗ್ರಂಥಗಳು ತಿಳಿಸುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ದಕ್ಷಿಣ ದಿಕ್ಕಿನ ಅಧಿಪತಿ ಯಮಧರ್ಮರಾಜ.

ನಾವು ಯಾರನ್ನಾದರೂ ನಮಸ್ಕರಿಸಿದಾಗ, ಅವರಿಂದ ಆಶೀರ್ವಾದವನ್ನು ನಿರೀಕ್ಷಿಸುತ್ತೇವೆ. ಉದಾಹರಣೆಗೆ, ಗುರುಹಿರಿಯರಿಗೆ ನಮಸ್ಕರಿಸಿದಾಗ ಶತಮಾನಂ ಭವತಿ, ದೀರ್ಘ ಸುಮಂಗಲೀಭವ, ದೀರ್ಘಾಯುಷ್ಮಾನ್ ಭವ ಮುಂತಾದ ಶುಭ ಆಶೀರ್ವಾದಗಳು ದೊರೆಯುತ್ತವೆ. ಆದರೆ ಯಮಧರ್ಮರಾಜರಿಗೆ ನಮಸ್ಕರಿಸಿದಾಗ ಅವರ ಆಶೀರ್ವಾದ ವಿಭಿನ್ನವಾಗಿರುತ್ತದೆ ಎಂದು ಧರ್ಮಗ್ರಂಥಗಳು, ವಿಶೇಷವಾಗಿ ಗರುಡಪುರಾಣದಲ್ಲಿ ಉಲ್ಲೇಖವಿದೆ. ಯಮಧರ್ಮರಾಜನು, ನಮಸ್ಕರಿಸಿದ ವ್ಯಕ್ತಿಯ ಪಾಪಕರ್ಮಗಳನ್ನು ಅನಾರೋಗ್ಯದ ರೂಪದಲ್ಲಿ ಅನುಭವಿಸಲು “ಆಶೀರ್ವದಿಸುತ್ತಾನೆ.” ಇದು ಶಾರೀರಿಕ ಕಷ್ಟಗಳಿಗೆ, ರೋಗಗಳಿಗೆ ಮತ್ತು ಪ್ರಾಣಕ್ಕೆ ಸಂಕಟಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಅನಾರೋಗ್ಯದ ಮೂಲಕ ಪಾಪಗಳನ್ನು ಅನುಭವಿಸಿ ಅವುಗಳನ್ನು ಕರಗಿಸಿಕೊಳ್ಳಲು ಇದು ಒಂದು ಮಾರ್ಗ ಎಂಬರ್ಥದಲ್ಲಿ ಯಮಧರ್ಮರಾಜನು ಆಶೀರ್ವದಿಸುತ್ತಾನೆ ಎಂದು ವಿವರಿಸಲಾಗಿದೆ.

ಹೀಗಾಗಿ, ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕಾರ ಮಾಡಬಾರದು. ಒಂದು ವೇಳೆ ಹಿರಿಯರು ಅಥವಾ ಗುರುಗಳು ದಕ್ಷಿಣ ದಿಕ್ಕಿನಲ್ಲಿ ನಿಂತಿದ್ದರೆ, ಅವರನ್ನು ಬೇರೆ ಶುಭ ದಿಕ್ಕಿಗೆ ತಿರುಗಿ ನಿಲ್ಲಿಸಿ ನಮಸ್ಕರಿಸುವುದು ಉತ್ತಮ. ಈ ಆಚರಣೆಯು ಶುಭ ಫಲಗಳನ್ನು ನೀಡುತ್ತದೆ ಮತ್ತು ಅನಾರೋಗ್ಯ ಅಥವಾ ಇತರ ಅಶುಭಗಳನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಆದರೆ, ಈ ನಿಯಮಕ್ಕೆ ಒಂದು ಪ್ರಮುಖ ಅಪವಾದವಿದೆ. ಸಂಧ್ಯಾವಂದನೆಯಂತಹ ನಿರ್ದಿಷ್ಟ ಧಾರ್ಮಿಕ ಕ್ರಿಯೆಗಳಲ್ಲಿ ಮಾತ್ರ ನಾಲ್ಕು ದಿಕ್ಕುಗಳಿಗೂ ನಮಸ್ಕರಿಸುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಾಲ್ಕು ದಿಕ್ಕುಗಳಿಗೂ ಸೇರಿ ನಮಸ್ಕರಿಸುವುದರಿಂದ ಯಾವುದೇ ತೊಂದರೆಯಿಲ್ಲ. ಇದು ಒಂದು ವಿಶೇಷ ಪದ್ಧತಿಯಾಗಿರುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ದಕ್ಷಿಣ ದಿಕ್ಕಿಗೆ ನಮಸ್ಕರಿಸುವುದರ ಹಿಂದಿರುವ ನಿಷಿದ್ಧಕ್ಕೆ ಕಾರಣವು ಯಮಧರ್ಮರಾಜನ ಆಶೀರ್ವಾದದ ವಿಶಿಷ್ಟ ಸ್ವರೂಪವಾಗಿದೆ. ಇದು ನಂಬಿಕೆಯ ಆಧಾರದ ಮೇಲೆ ರೂಢಿಯಲ್ಲಿರುವ ಒಂದು ಸಂಪ್ರದಾಯವಾಗಿದ್ದು, ಹಿಂದೂ ಧರ್ಮಗ್ರಂಥಗಳಲ್ಲಿ ಅದರ ಸೂಕ್ಷ್ಮ ಉಲ್ಲೇಖಗಳಿವೆ. ಆದ್ದರಿಂದ, ದೈನಂದಿನ ಜೀವನದಲ್ಲಿ ದಕ್ಷಿಣ ದಿಕ್ಕಿಗೆ ನಮಸ್ಕರಿಸುವುದನ್ನು ಆದಷ್ಟು ತಪ್ಪಿಸುವುದು ಶುಭಕರ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಸನ್ ಚಪ್ಪಾಳೆಯಲ್ಲಿ ಧ್ರುವಂತ್ ಹೆಸರನ್ನು ನಿರೀಕ್ಷಿಸಿರಲಿಲ್ಲ; ರಾಶಿಕಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಯಾಗಿದ್ದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಬಿಗ್ ಬಾಸ್ ಮನೆಯ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಧ್ರುವಂತ್​​ಗೆ ಕಿಚ್ಚನ ಚಪ್ಪಾಳೆ ಸಿಕ್ಕ ವಿಷಯವನ್ನೂ ಅವರು ಪ್ರಸ್ತಾಪಿಸಿದ್ದಾರೆ. ‘ಧ್ರುವಂತ್​​ಗೆ ಸೀಸನ್ ಚಪ್ಪಾಳೆ ಸಿಗಬಹುದು ಎಂದು ನಾನು ಭಾವಿಸಿರಲಿಲ್ಲ’ ಎಂದಿದ್ದಾರೆ ರಾಶಿಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಇನ್ನೂ ಅನಾರೋಗ್ಯಕರವಾಗಿಯೇ ಉಳಿದಿದೆ ಬೆಂಗಳೂರಿನ ಗಾಳಿ! – Kannada News | Bangalore Air Pollution Crisis: Bengaluru’s Air quality is reminding Delhi weather

ಇನ್ನೂ ಅನಾರೋಗ್ಯಕರವಾಗಿಯೇ ಉಳಿದಿದೆ ಬೆಂಗಳೂರಿನ ಗಾಳಿ!

ಬೆಂಗಳೂರು, ಜನವರಿ 14: ಕಳೆದ ಕೆಲ ದಿನಗಳಿಂದ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಸುಧಾರಿಸುತ್ತಿದೆ. ಅಷ್ಟೇ ಅಲ್ಲ, ಮೈಸೂರು, ವಿಜಯಪುರದಲ್ಲೂ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ 170 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್​, ವೈಟ್​ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.

ಇಂದು ಬೆಂಗಳೂರಿನ PM2.5 83 ಮತ್ತು PM10 104 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –170
  • ಮಂಗಳೂರು-110
  • ಮೈಸೂರು – 70
  • ಬೆಳಗಾವಿ – 124
  • ಕಲಬುರ್ಗಿ-81
  • ಶಿವಮೊಗ್ಗ – 146
  • ಬಳ್ಳಾರಿ – 162
  • ಹುಬ್ಬಳ್ಳಿ- 80
  • ಉಡುಪಿ –87
  • ವಿಜಯಪುರ –69

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಖಚಿತ – Kannada News | India vs New Zealand 2nd ODI: India’s Predicted Playing 11

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಏಕದಿನ ಪಂದ್ಯ ಇಂದು (ಜ.14) ನಡೆಯಲಿದೆ. ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಏಕೆಂದರೆ ವಡೋದರಾದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ ಅವರ ಬದಲಿಗೆ ಇದೀಗ ಟೀಮ್ ಇಂಡಿಯಾಗೆ ಯುವ ಆಲ್​ರೌಂಡರ್ ಆಯುಷ್ ಬದೋನಿ ಆಯ್ಕೆಯಾಗಿದ್ದಾರೆ.

ಅತ್ತ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಗುಳಿದಿರುವ ಕಾರಣ ದ್ವಿತೀಯ ಪಂದ್ಯದಲ್ಲಿ ಮತ್ತೋರ್ವ ಆಲ್​ರೌಂಡರ್​ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು. ಅದರಂತೆ ಈ ಬಾರಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು.

ಅದರಂತೆ ಆರಂಭಿಕರಾಗಿ ಈ ಪಂದ್ಯದಲ್ಲೂ ಶುಭ್​​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕ ವಿರಾಟ್ ಕೊಹ್ಲಿಗೆ ಫಿಕ್ಸ್. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ಆಗಿ ಐದನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಯಲಿದ್ದಾರೆ.

ಹಾಗೆಯೇ ಬೌಲರ್​ಗಳಾಗಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ರೋಹಿತ್ ಶರ್ಮಾ
  • ಶುಭಮನ್ ಗಿಲ್ (ನಾಯಕ)
  • ವಿರಾಟ್ ಕೊಹ್ಲಿ
  • ಶ್ರೇಯಸ್ ಅಯ್ಯರ್
  • ಕೆಎಲ್ ರಾಹುಲ್ (ವಿಕೆಟ್ ಕೀಪರ್)
  • ರವೀಂದ್ರ ಜಡೇಜಾ
  • ನಿತೀಶ್ ಕುಮಾರ್ ರೆಡ್ಡಿ
  •  ಹರ್ಷಿತ್ ರಾಣಾ
  • ಕುಲ್ದೀಪ್ ಯಾದವ್
  • ಮೊಹಮ್ಮದ್ ಸಿರಾಜ್
  • ಪ್ರಸಿದ್ಧ್ ಕೃಷ್ಣ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್,  ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆಯುಷ್ ಬದೋನಿ.

ಇದನ್ನೂ ಓದಿ: ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB

ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

Published On – 8:53 am, Wed, 14 January 26

Source link

ವಿಜಯ ಹಝಾರೆ ಟೂರ್ನಿಯ ಸೆಮಿ ಫೈನಲ್ ವೇಳಾಪಟ್ಟಿ ಪ್ರಕಟ

Source link

Video: ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಡೊನಾಲ್ಡ್​ ಟ್ರಂಪ್ – Kannada News | A Gesture That Spoke Loudly: Trump Responds to Heckler During Michigan Visit

ವಾಷಿಂಗ್ಟನ್, ಜನವರಿ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೋಪದ ಕೈಗೆ ಬುದ್ಧಿ ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಅವರು ಅಮೆರಿಕದ ಕಾರ್ಖಾನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಮಧ್ಯದ ಬೆರಳು ತೋರಿಸಿದ್ದಷ್ಟೇ ಅಲ್ಲದೆ ಕೆಟ್ಟ ಭಾಷೆಯಲ್ಲಿ ಬೈದಿರುವ ವಿಡಿಯೋ ಇದಾಗಿದೆ. ಮಿಚಿಗನ್‌ನಲ್ಲಿರುವ ಫೋರ್ಡ್ ಸ್ಥಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾಕಾರ ಟ್ರಂಪ್​ಗೆ ಶಿಶುಕಾಮಿ ಎಂದು ಕರೆದಿದ್ದರು. ಅದಕ್ಕೆ ಕೋಪಗೊಂಡ ಟ್ರಂಪ್ ಕೆಟ್ಟದಾಗಿ ಬೈದಿದ್ದಾರೆ. ಕೂಗುತ್ತಿರುವ ವ್ಯಕ್ತಿ ಕ್ಲಿಪ್‌ನಲ್ಲಿ ಗೋಚರಿಸುವುದಿಲ್ಲ ಮತ್ತು ಆಡಿಯೋ ಸ್ಪಷ್ಟವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ! ಬಿಗ್ ಹಿಂಟ್ ಕೊಟ್ರಾ ಡಿಸಿಎಂ? – Kannada News | Did DK Shivakumar Drop a Big Hint After Rahul Gandhi Meeting? Cryptic Post Sparks Karnataka Political Buzz

ಬೆಂಗಳೂರು, ಜನವರಿ 14: ‘ನೀವೇನು ಚಿಂತೆ ಮಾಡಬೇಡಿ. ನಿಮ್ಮನ್ನು ಶೀಘ್ರವೇ ದೆಹಲಿಗೆ ಕರೆಸಿಕೊಳ್ಳುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ (DK Shivakumar) ಮೈಸೂರಿನಲ್ಲಿ ಹೈಕಮಾಂಡ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ ಎನ್ನಲಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಒಂದನ್ನು ಹಂಚಿಕೊಂಡಿದ್ದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ, ಸಿಎಂ ಆಗುವ ಸುಳಿವು ಕೊಟ್ಟರಾ ಡಿಸಿಎಂ ಎಂಬ ಪ್ರಶ್ನೆಯೂ ಮೂಡಿದೆ.

ಬುಧವಾರ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಡಿಕೆ ಶಿವಕುಮಾರ್, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ

ಖಾಸಗಿ ಕಾರ್ಯನಿಮಿತ್ತ ಊಟಿಗೆ ತೆರಳಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿದ್ದ ರಾಹುಲ್ ಗಾಂಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ, ಇಬ್ಬರು ನಾಯಕರೂ ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ್ದರು.

ಡಿಕೆ ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಹೇಳಿದ್ದೇನು?

ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸೈಡ್​ಗೆ ಕರೆದುಕೊಂಡು ಹೋಗಿದ್ದ ಡಿಕೆ ಶಿವಕುಮಾರ್ ತುಸು ಹೊತ್ತು ಗಂಭೀರವಾಗಿ ಚರ್ಚಿಸುತ್ತಿರುವುದು ಕಂಡುಬಂದಿತ್ತು. ಆಗ, ನೀವು ತಲೆ ಕೆಡಿಸಿಕೊಳ್ಳಬೇಡಿ. ಶೀಘ್ರವೇ ನಿಮ್ಮನ್ನು ದೆಹಲಿಗೆ ಕರೆಯುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದರು ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿದ್ದವು. ಅದಾದ ನಂತರ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಜತೆಗೂ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲೂ ಸಂಚಲನ ಮೂಡಿಸಿತ್ತು

ಇದೀಗ, ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಹಂಚಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ?

ರಾಜ್ಯ ಕಾಂಗ್ರೆಸ್​​​ಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಬಗ್ಗೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಗಾಂಧಿ​ ಮಹತ್ವದ ಸಂದೇಶ

ಇದರ ಪೂರ್ವಭಾವಿಯಾಗಿ ಹೈಕಮಾಂಡ್ ನಾಯಕರು ಜನವರಿ 16ರಂದು ರಾಜ್ಯವಾರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಯೋಲ್ ಕುಟುಂಬದ ಜೊತೆ ಮನಸ್ತಾಪ ಇದೆಯೇ? ಹೇಮಾ ಮಾಲಿನಿ ಸ್ಪಷ್ಟನೆ – Kannada News | Hema Malini Breaks Silence on Dharmendra’s Passing, Refutes Rumors

ಬಾಲಿವುಡ್ ಉದ್ಯಮದ ಹಿರಿಯ ನಟ ಧರ್ಮೇಂದ್ರ ನವೆಂಬರ್ 24, 2025 ರಂದು ನಿಧನರಾದರು. ಧರ್ಮೇಂದ್ರ ಅವರ ಸಾವು ಡಿಯೋಲ್ ಕುಟುಂಬ ಮತ್ತು ಇಡೀ ಕಲಾ ಲೋಕಕ್ಕೆ ದುಃಖ ತಂದಿದೆ. ಡಿಯೋಲ್ ಕುಟುಂಬ ನಿಧಾನವಾಗಿ ಅದರಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಧರ್ಮೇಂದ್ರ ಅವರ ಎರಡನೇ ಪತ್ನಿ, ನಟಿ ಮತ್ತು ಸಂಸದೆ ಹೇಮಾ ಮಾಲಿನಿ ತಮ್ಮ ದುಃಖವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

‘ಧರ್ಮೇಂದ್ರ ನಿಧನವಾದಾಗ ನನಗೆ ತುಂಬಾ ನೋವಾಗಿತ್ತು. ಆ ನೋವು ಇನ್ನೂ ನನ್ನ ಮನಸ್ಸಿನಲ್ಲಿದೆ. ಆದರೆ ಕ್ರಮೇಣ ನಾನು ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ಇದೆಲ್ಲವೂ ನನ್ನ ಸಹಿಷ್ಣುತೆಗೆ ಮೀರಿದ್ದು. ಎಲ್ಲರೂ ನಾನು ಬಲಶಾಲಿ ಎಂದು ಹೇಳುತ್ತಾರೆ. ನಾನು ಬಲಶಾಲಿ, ಆದರೆ ಕೆಲವೊಮ್ಮೆ..’ ಎಂದು ಹೇಳುತ್ತಾ ಅವರು ಭಾವುಕರಾದರು.

‘ಅವರು ಕೊನೆಯ ದಿನಗಳಲ್ಲಿ ಮನೆಯಲ್ಲಿಯೇ ಇದ್ದರು. ಮೊದಲು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಮನೆಗೆ ಕರೆತರಲಾಯಿತು. ಅಲ್ಲಿಯವರೆಗೆ, ಅವರು ಚೆನ್ನಾಗಿದ್ದಾರೆ ಎಂದು ನನಗೆ ಖಚಿತವಾಗಿತ್ತು. ಅವರು ಇನ್ನೂ ಎರಡು ವರ್ಷ ನಮ್ಮೊಂದಿಗೆ ಇರುತ್ತಾರೆ ಎಂದು ನಾನು ಭಾವಿಸಿದ್ದೆ. ಅವರು ಚೆನ್ನಾಗಿದ್ದರು. ಅವರು ಅಸ್ವಸ್ಥರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಹಿಂದೆ ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತಿ ಬಾರಿ ಅವರು ನಗುತ್ತಾ ಮತ್ತು ಆರೋಗ್ಯವಾಗಿ ಹಿಂತಿರುಗಿದರು. ಈ ಬಾರಿಯೂ ಇದೇ ರೀತಿಯ ಏನಾದರೂ ಸಂಭವಿಸುತ್ತದೆ ಎಂದು ನಾವು ಆಶಿಸುತ್ತಿದ್ದೆವು. ಅವರು ಅತ್ಯುತ್ತಮ ಜೀವನವನ್ನು ನಡೆಸಿದರು. ಅವರು ಬಯಸಿದ್ದನ್ನೆಲ್ಲಾ ಪಡೆದರು. ಇಷ್ಟೊಂದು ಜನರು ಅವರನ್ನು ಪ್ರೀತಿಸುತ್ತಾರೆ ಎಂದು ನನಗೆ ಹೆಮ್ಮೆ ಇದೆ’ ಎಂದಿದ್ದಾರೆ ಹೇಮಾ ಮಾಲಿನಿ.

ಇದನ್ನೂ ಓದಿ: ನಟಿ ಹೇಮಾ ಮಾಲಿನಿಗೆ ಯಾರೋ ಕತ್ತು ಹಿಸುಕಿದ ಅನುಭವ

‘ನಮ್ಮ ಸಂಬಂಧ ಯಾವಾಗಲೂ ಉತ್ತಮ ಮತ್ತು ಸೌಹಾರ್ದಯುತವಾಗಿದೆ. ಇಂದಿಗೂ ಅದು ಹಾಗೆಯೇ ಇದೆ. ನಮ್ಮ ನಡುವೆ ಏನೋ ತಪ್ಪಾಗಿದೆ ಎಂದು ಜನರು ಏಕೆ ಭಾವಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಜನರು ಗಾಸಿಪ್ ಬಯಸುತ್ತಾರೆ. ನಾನು ಅಂತಹ ಜನರಿಗೆ ಏಕೆ ಉತ್ತರಿಸಬೇಕು? ನಾನು ವಿವರಿಸಬೇಕೇ? ನಾನು ಏಕೆ ಮಾಡಬೇಕು? ಇದು ನನ್ನ ಜೀವನ. ಇದು ನನ್ನ ಖಾಸಗಿ ಜೀವನ, ಇದು ನಮ್ಮ ಖಾಸಗಿ ಜೀವನ. ನಾವು ತುಂಬಾ ಸಂತೋಷವಾಗಿದ್ದೇವೆ, ಪರಸ್ಪರ ಹತ್ತಿರವಾಗಿದ್ದೇವೆ, ನಾನು ಹೇಳುವುದು ಇಷ್ಟೇ. ಅದನ್ನು ಹೊರತುಪಡಿಸಿ, ನಾನು ಬೇರೆ ಏನನ್ನೂ ಹೇಳಲು ಬಯಸುವುದಿಲ್ಲ” ಎಂದು ಅವರು ಉತ್ತರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ನೇಹಿತನನ್ನೇ ಕೊಂದು, ಆತನ ಮನೆಯನ್ನೇ ಲೂಟಿ ಮಾಡಿದ ಇವನೆಂಥಾ ಗೆಳೆಯ – Kannada News | Haryana: Friend Kills Friend, Robs Home, Sonipat Police Encounter and Arrests

ಹರಿಯಾಣ, ಜನವರಿ 14: ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಕೊಂದು ಆತನ ಮನೆಯನ್ನೇ ಲೂಟಿ ಮಾಡಿರುವ ಘಟನೆ ಹರಿಯಾಣದ ಸೋನಿಪತ್​ನಲ್ಲಿ ನಡೆದಿದೆ. ಶೇಖರ್ ಹಾಗೂ ಸಾಹಿಲ್ ಆತ್ಮೀಯ ಸ್ನೇಹಿತರಾಗಿದ್ದರು. ಜನವರಿ 8ರಂದು ರಾತ್ರಿ ಶೇಖರ್​ ಗ್ಯಾಂಗ್ ಸಾಹಿಲ್ ಮನೆಗೆ ನುಗ್ಗಿತ್ತು, ದರೋಡೆ ಮಾಡಲು ಮುಂದಾಗಿತ್ತು ಆಗ ಸಾಹಿಲ್ ತಡೆದಿದ್ದಕ್ಕೆ ಆತನನ್ನು ಚಾಕುವಿನಿಂದ ಇರಿದು ಕೊಲೆ(Murder) ಮಾಡಿ ಬಳಿಕ ಆಭರಣವನ್ನು ದೋಚಿದ್ದರು.

ಪೊಲೀಸರು ಎನ್​ಕೌಂಟರ್​ ನಡೆಸಿ ಗ್ಯಾಂಗ್​ನ ನಾಯಕ ಶೇಖರ್ ಹಾಗೂ ಶಫೀಕ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇಖರ್ ಮತ್ತು ಶಫೀಕ್ ನಿನ್ನೆ ತಡರಾತ್ರಿ ಮಲ್ಹಾ ಮಜ್ರಾ ಗ್ರಾಮಕ್ಕೆ ಮರಳಿದ್ದರು. ಎನ್‌ಕೌಂಟರ್ ಸಮಯದಲ್ಲಿ, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು, ಆಗ ಪೊಲೀಸರು ಶೇಖರ್ ಮತ್ತು ಶಫೀಕ್ ಅವರ ಕಾಲಿಗೆ ಗುಂಡು ಹಾರಿಸಲಾಯಿತು. ಇಬ್ಬರೂ ಪ್ರಸ್ತುತ ಸೋನಿಪತ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಶೇಖರ್ ಸಾಹಿಲ್ ಮನೆಯಲ್ಲಿ ದರೋಡೆಗೆ ಯೋಜನೆ ರೂಪಿಸಿದ್ದ. ಸಾಹಿಲ್ aದನ್ನು ವಿರೋಧಿಸಿದಾಗ, ಆತನನ್ನು ಇರಿದು ಕೊಂದಿದ್ದಾರೆ. ಆರೋಪಿ ಶೇಖರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಸಾಹಿಲ್ ಮದುವೆಗೆ ಆಭರಣಗಳನ್ನು ಆತನೇ ಮಾಡಿಕೊಟ್ಟಿದ್ದ, ಮಾಹಿತಿಯ ಪ್ರಕಾರ, ಆರೋಪಿ ಶೇಖರ್ ಮತ್ತು ಮೃತ ಸಾಹಿಲ್ ಒಂದು ಕಾಲದಲ್ಲಿ ಬಹಳ ಆಪ್ತರಾಗಿದ್ದರು.

ಮತ್ತಷ್ಟು ಓದಿ: ಸರ್ಕಾರಿ ಆಸ್ಪತ್ರೆಗೆ ಹೆಂಡತಿಯನ್ನು ನೋಡಲು ಬಂದಿದ್ದ ರೌಡಿಯ ಕೊಲೆ

ಈ ಪ್ರಕರಣದಲ್ಲಿ ಸೋನಿಪತ್ ಅಪರಾಧ ವಿಭಾಗದ ತಂಡಗಳು ನಿನ್ನೆ ಮತ್ತೊಬ್ಬ ಆರೋಪಿ ಶಹನವಾಜ್‌ನನ್ನು ಬಂಧಿಸಿವೆ. ಶಹನವಾಜ್ ಬಂಧನದ ನಂತರ, ಅಪರಾಧ ವಿಭಾಗದ ತಂಡಗಳು ಇತರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದವು. ಹಿರಿಯ ಸೋನಿಪತ್ ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

ಗಾಯಗೊಂಡ ಇಬ್ಬರು ಆರೋಪಿಗಳ ಬಳಿಯಿಂದ ಎರಡು ಅಕ್ರಮ ದೇಶೀಯ ಪಿಸ್ತೂಲ್‌ಗಳನ್ನು ಸಹ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ಇನ್ನೂ ದಾಳಿ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Happy Makara Sankranti 2026: ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿ – Kannada News | Happy Makara Sankranti 2026: Here are some Sankranti wishes for your loved ones

ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ (Makara Sankranti) ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚಲಾಗುತ್ತದೆ. ಎಳ್ಳು ಬೆಲ್ಲವನ್ನು ಹಂಚುವ ಜೊತೆಗೆ ನೀವು ನಿಮ್ಮ ಪ್ರೀತಿಪಾತ್ರರಿಗೆ, ನಿಮ್ಮ ಸ್ನೇಹಿತರಿಗೆ ಹಬ್ಬದ ಶುಭಾಶಯಗಳನ್ನು ಹೇಳಲು ಬಯಸಿದರೆ, ನಿಮಗಾಗಿ ಇಲ್ಲಿದೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಅರ್ಥಪೂರ್ಣ ಶುಭಾಶಯಗಳು.

ಮಕರ ಸಂಕ್ರಾಂತಿಯ ಅರ್ಥಪೂರ್ಣ ಶುಭಾಶಯಗಳು:

  • ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ, ಎಲ್ಲಾ ಕಹಿ ಮರೆತು ಒಳ್ಳೆಯ ಬಾಂಧವ್ಯ ಹೊಂದೋಣ ಮಕರ ಸಂಕ್ರಾಂತಿಯ ಶುಭಾಶಯಗಳು.
  • ಜೀವನವು ನೋವು ನಲಿವುಗಳ ಸರಿಸಮ ಸಂಗಮವಾಗಿದೆ. ನೋವೆಂಬ ಎಳ್ಳು ಕಡಿಮೆಯಾಗಿ, ನಲಿವೆಂಬ ಬೆಲ್ಲ ಹೆಚ್ಚಾಗಲಿ, ದುಃಖವೆಲ್ಲಾ ಮಾಯವಾಗಿ ಸಿಹಿ ಬೆಲ್ಲದಂತಹ ಸಂತೋಷದ ಜೀವನ ನಿಮ್ಮದಾಗಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಕಡಲೆಕಾಯಿಯ ಸಾರದಂಥ ಜೀವನ ನಿಮ್ಮದಾಗಲಿ, ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿ ಬೆಳಗಲಿ. ಸುಗ್ಗಿ ಹಬ್ಬದ ಶುಭಾಶಯಗಳು.
  • ಮಕರ ಸಂಕ್ರಾಂತಿಯ ಸೂರ್ಯನ ಬೆಂಕಿಯಲ್ಲಿ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಭಸ್ಮವಾಗಲಿ. ಸುಖ, ಸಂಪತ್ತು, ಸಂತೋಷದ ಬೆಳಕು ನಿಮ್ಮ ಮನೆಮನಗಳಲ್ಲಿ ಬೆಳಗಲಿ. ಸುಗ್ಗಿ ಹಬ್ಬದ ಶುಭಾಶಯಗಳು.
  • ಈ ಸಂಕ್ರಾಂತಿ ನಿಮ್ಮ ಮನದಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ, ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ, ನೀವು ಕಂಡ ಕನಸುಗಳೆಲ್ಲಾ ಬೇಗನೆ ನನಸಾಗಲಿ. ಹ್ಯಾಪಿ ಸಂಕ್ರಾಂತಿ.
  • ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ, ಉದಯ ರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಯಾಗಲಿ. ಸಂಕ್ರಾಂತಿಯ ಶುಭಾಶಯಗಳು.
  • ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ, ಸಂತೋಷ, ಸಮೃದ್ಧಿ, ಸಂಭ್ರಮ ಪಸರಿಸಲಿ.
  • ನಿಮ್ಮ ಮನೆಯಲ್ಲಿ ಸುಖ, ಸಿರಿ ಸಂಪತ್ತು ಉಕ್ಕಿ ಹರಿಯಲಿ ಎಂದು ಆಶಿಸುತ್ತಾ ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
  • ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಸೂರ್ಯ ದೇವನು ಪ್ರತಿಯೊಬ್ಬರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಆಶಿಸುತ್ತೇನೆ.
  • ನಿಮ್ಮ ಜೀವನವು ಯಾವಾಗಲೂ ಸಂತೋಷ, ಸಮೃದ್ಧಿ, ಪ್ರೀತಿಯಿಂದ ತುಂಬಿರಲಿ. ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
  • ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ ಸಮೃದ್ಧಿ ಮತ್ತು ಸುಖ ಶಾಂತಿಯನ್ನು ದಯ ಪಾಲಿಸಲಿ ವರ್ಷದ ಮೊದಲ ಹಬ್ಬದ ಶುಭಾಶಯಗಳು.
  • ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರ ಬಾಳಲ್ಲೂ ಹೊಸ ಉತ್ಸಾಹ, ನವ ಚೈತನ್ಯ, ನೆಮ್ಮದಿಯನ್ನು ಕರುಣಿಸಲಿ.
  • ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.
  • ನಿಮ್ಮ ಜೀವನವು ಸಂತೋಷ, ಪ್ರೀತಿ, ಸಮೃದ್ಧಿಯಿಂದ ತುಂಬಿರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link