18 ವರ್ಷದಿಂದ ಜಪಾನ್‌ನಲ್ಲಿ ಬ್ಯುಸಿನೆಸ್ ಮಾಡ್ತಿದ್ದವನಿಗೆ ಅಂದ್ರು ‘ಗೋ ಬ್ಯಾಕ್ ಟು ಇಂಡಿಯಾ’ – Kannada News | Japan Visa Crisis: Indian Entrepreneur Manish Kumar Faces Deportation After 30 Years
ಜಪಾನೀ ನಗರದ ಸಾಂದರ್ಭಿಕ ಚಿತ್ರImage Credit source: AI/Mediaforge/TV9 ಟೋಕಿಯೋ, ಮೇ 17: ಜಪಾನ್‌ನಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಾ, ಸೈತಾಮಾ ನಗರದಲ್ಲಿ (Saitama Prefecture) ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಭಾರತೀಯ ರೆಸ್ಟೋರೆಂಟ್ವೊಂದನ್ನು ನಡೆಸುತ್ತಿದ್ದ ಮನೀಶ್ ಕುಮಾರ್ ಎಂಬ ಭಾರತೀಯ ಉದ್ಯಮಿಗೆ ಜಪಾನ್ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ. ಜಪಾನ್‌ನ ವಲಸೆ ಸೇವಾ ಸಂಸ್ಥೆಯು (ISA) ಅವರ ಬಿಸಿನೆಸ್ ಮ್ಯಾನೇಜರ್ ವೀಸಾ (Business Manager Visa) ನವೀಕರಣವನ್ನು ತಿರಸ್ಕರಿಸಿರುವುದು ಇದಕ್ಕೆ ಕಾರಣವಾಗಿದೆ. ಟೋಕಿಯೋದಲ್ಲಿ ನಡೆದ ಪ್ರತಿಭಟನಾ…