ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ಸೃಷ್ಟಿಸಿದ ಹಲ್ಚಲ್ ಅಷ್ಟಿಷ್ಟಲ್ಲ. ಈ ಸಿನಿಮಾದ ಟೀಸರ್ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಟೀಸರ್ನಲ್ಲಿದ್ದ ಬೋಲ್ಡ್ ದೃಶ್ಯಗಳ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದರು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಕಮಿಷನ್ ಸೆನ್ಸಾರ್ ಮಂಡಳಿಗೆ ದೂರು ನೀಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೆ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟವಾಗಿ ಹೇಳಿದೆ.
ಎನ್ಡಿಟಿವಿ ಮಾಡಿದ ವರದಿ ಪ್ರಕಾರ, ಸೆನ್ಸಾರ್ ಮಂಡಳಿ ಈ ವಿಷಯದಲ್ಲಿ ಮಧ್ಯ ಬರಲು ಸಾಧ್ಯವಿಲ್ಲ ಎಂದು ಹೇಳಿದೆಯಂತೆ. ಏಕೆಂದರೆ ‘ಟಾಕ್ಸಿಕ್’ ಟೀಸರ್ ಯೂಟ್ಯೂಬ್ ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ರಿಲೀಸ್ ಆಗಿದೆ. ಸೆನ್ಸಾರ್ ಮಂಡಳಿ ಥಿಯೇಟರ್ಗಳಲ್ಲಿ ರಿಲೀಸ್ ಆಗುವ ಸಿನಿಮಾ, ಟ್ರೇಲರ್ ಹಾಗೂ ಜಾಹೀರಾತುಗಳಿಗೆ ಮಾತ್ರ ಪ್ರಮಾಣಪತ್ರ ನೀಡುತ್ತವೆ. ಯೂಟ್ಯೂಬ್ನಲ್ಲಿ ರಿಲೀಸ್ ಆಗುವ ವಿಷಯಗಳಿಗೆ ಅವರು ಮೂಗುತೂರಿಸಲು ಸಾಧ್ಯವಿಲ್ಲ.
‘ಟಾಕ್ಸಿಕ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್ನಲ್ಲಿ. ಇದರಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸದ್ಯದ ಮಟ್ಟಿಗೆ ಟಾಕ್ಸಿಕ್ಗೆ ಸಂಬಂಧಿಸಿದಂತೆ ಸೆನ್ಸಾರ್ ಮಾಡಲು ಯಾವುದೇ ಅರ್ಜಿ ಬಂದಿಲ್ಲ. ನಾವು ಈ ಚಿತ್ರದ ಯಾವುದೇ ಕಂಟೆಂಟ್ನ ಸೆನ್ಸಾರ್ ಮಾಡಿಲ್ಲ’ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದೆ. ಸೆನ್ಸಾರ್ ಮಂಡಳಿ ಕಾರ್ಯವೈಖರಿ ಗೊತ್ತಿದ್ದರೆ ಈ ರೀತಿಯ ದೂರು ಸೆನ್ಸಾರ್ ಮಂಡಳಿಗೆ ದಾಖಲಾಗುತ್ತಿರಲಿಲ್ಲವೇನೋ.
ಈ ಮೊದಲು ಕೂಡ ಯೂಟ್ಯೂಬ್ನಲ್ಲಿ ರಿಲೀಸ್ ಆದ ಅನೇಕ ಬೋಲ್ಡ್ ಕಂಟೆಂಟ್ಗಳ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆದರೆ, ಈ ವಿಷಯದಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸೆನ್ಸಾರ್ ಮಂಡಳಿ ನೇರವಾಗಿ ಹೇಳಿತ್ತು. ಒಂದೊಮ್ಮೆ ಇದೇ ರೀತಿಯ ಬೋಲ್ಡ್ ಕಂಟೆಂಟ್ಗಳು ಸಿನಿಮಾ ಸೆನ್ಸಾರ್ ಮಾಡುವಾಗ ಕಂಡರೆ ಸೆನ್ಸಾರ್ ಮಂಡಳಿ ಅದನ್ನು ಪ್ರಶ್ನೆ ಮಾಡಬಹುದು. ಎ ಸರ್ಟಿಫಿಕೇಟ್ ನೀಡಬಹುದು. ಈಗ ಟೀಸರ್ ಯೂಟ್ಯೂಬ್ನಲ್ಲಿ ಮಾತ್ರ ರಿಲೀಸ್ ಆಗಿರುವುದರಿಂದ ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ. ಈಗ ಸೆನ್ಸಾರ್ ಮಂಡಳಿಯ ಹೇಳಿಕೆಯು ‘ಟಾಕ್ಸಿಕ್’ ತಂಡಕ್ಕೆ ದೊಡ್ಡ ರಿಲೀಫ್ ನೀಡಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಎರಡು ಉತ್ತರಗಳು ಕೇಳಿ ಬರುತ್ತಿದೆ. ಅದು ಕೂಡ ನವಿ ಮುಂಬೈ ಮತ್ತು ರಾಯ್ಪುರ್ ಕಡೆಯಿಂದ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂದಿನ ಸೀಸನ್ ಗಾಗಿ ಎರಡು ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ RCB ಕಣಕ್ಕಿಳಿಯುವುದು ಡೌಟ್.
2025ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ RCB ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಏರ್ಪಡಿಸಿತ್ತು. ಈ ವೇಳೆ ಉಂಟಾದ ಕಾಲ್ತುತಿದಿಂದಾಗಿ 11 ಮಂದಿ ಮೃತಪಟ್ಟಿದ್ದರು. ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಮೂಲಸೌಕರ್ಯಗಳ ಕೊರತೆ ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಇದೇ ಕಾರಣದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಮುಂಬರುವ ಐಪಿಎಲ್ ಪಂದ್ಯಗಳಿಗೂ ಎನ್ಒಸಿ ಸಿಗುವುದು ಅನುಮಾನ ಎನ್ನಲಾಗಿದೆ.
ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ನವಿ ಮುಂಬೈ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತನ್ನ ಹೊಸ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಈ ಸ್ಟೇಡಿಯಂನಲ್ಲಿ ಒಟ್ಟು 5 ಮ್ಯಾಚ್ ಗಳನ್ನು ಆಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಇನ್ನುಳಿದ 2 ಹೋಮ್ ಮ್ಯಾಚ್ ಗಳನ್ನು ಚಂಡೀಗಢದ ರಾಯ್ಪುರ್ನಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲು ಪ್ಲ್ಯಾನ್ ರೂಪಿಸಲಾಗಿದೆ. ಅಂದರೆ ಈ ಬಾರಿ RCB ತನ್ನ ಹೋಮ್ ಮ್ಯಾಚ್ ಗಳನ್ನು ನವಿ ಮುಂಬೈ ಮತ್ತು ರಾಯ್ಪುರ್ ನಲ್ಲಿ ಆಡುವುದು ಬಹುತೇಕ ಖಚಿತ. ಅದಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂ ಮೇಲಿನ ನಿಷೇಧ ತೆರವಾದರೆ ಮಾತ್ರ RCB ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ.
ನವದೆಹಲಿ, ಜನವರಿ 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ PSLV-C62 ಮಿಷನ್‌ನ ವೈಫಲ್ಯವು ಎಲ್ಲರಿಗೂ ಬೇಸರ ತಂದಿದೆ. 16 ಪ್ಯಾಸೆಂಜರ್ಸ್ಗಳನ್ನು ಹೊತ್ತು ಹೊರಟಿದ್ದ ರಾಕೆಟ್(Rocket)ನಲ್ಲಿ ಕೇವಲ ಕಿಡ್ ಮಾತ್ರ ಬದುಕುಳಿದಿದೆ. ಇಲ್ಲಿ ಪ್ಯಾಸೆಂಜರ್ಸ್ ಎಂದರೆ 16 ಉಪಗ್ರಹಗಳು ಎಂದರ್ಥ. ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್‌ನ “KID” ಕ್ಯಾಪ್ಸುಲ್ ದುರಂತದಿಂದ ಬದುಕುಳಿದಿದೆ.
ಈ ಫುಟ್‌ಬಾಲ್ ಗಾತ್ರದ ಕ್ಯಾಪ್ಸುಲ್ ದುರಂತದಿಂದ ಬದುಕುಳಿಯುವುದಲ್ಲದೆ, ಭೂಮಿಗೆ ಡೇಟಾವನ್ನು ಹಿಂತಿರುಗಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ರಾಕೆಟ್‌ನ ಮೂರನೇ ಹಂತದಲ್ಲಿ ವೈಫಲ್ಯ ಎದುರಾಗಿತ್ತು. ಮುಖ್ಯ ಉಪಗ್ರಹವು ಬಾಹ್ಯಾಕಾಶವನ್ನು ತಲುಪುವುದನ್ನು ತಡೆಯಿತು.
ಆದಾಗ್ಯೂ, ಈ ಸಣ್ಣ, 25 ಕಿಲೋಗ್ರಾಂ ಕ್ಯಾಪ್ಸುಲ್ 28 ಗ್ರಾಂನ ಅಗಾಧ ಒತ್ತಡವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ತೀವ್ರವಾದ ಶಾಖದ ನಡುವೆ ಮೂರು ನಿಮಿಷಗಳ ಕಾಲ ನಿರಂತರ ಸಂಕೇತಗಳನ್ನು ಕಳುಹಿಸಿತು.
ಜನವರಿ 12, 2026ರಂದು ಶ್ರೀಹರಿಕೋಟಾದಿಂದ ಇಸ್ರೋ PSLV-C62 ರಾಕೆಟ್ ಉಡಾವಣೆ ಮಾಡಿತ್ತು. ರಾಕೆಟ್‌ನ ಮೂರನೇ ಹಂತದಲ್ಲಿನ ದೋಷವು ಇಡೀ ಕಾರ್ಯಾಚರಣೆಯನ್ನೇ ತಲೆಕೆಳಗಾಗಿ ಮಾಡಿತ್ತು. ಈ ರಾಕೆಟ್16 ಉಪಗ್ರಹಗಳನ್ನು ಹೊತ್ತು ಹೊರಟಿತ್ತು.
ಮುಖ್ಯ ಉಪಗ್ರಹಗಳು ನಾಶವಾದರೂ ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್‌ನ ‘KID’ ಕ್ಯಾಪ್ಸುಲ್ನಿಂದ ಬೇರ್ಪಡುವಲ್ಲಿ ಯಶಸ್ವಿಯಾಯಿತು. ಅದರ ಮೂಲಮಾದರಿಯು ತೀವ್ರವಾದ ಶಾಖ ಮತ್ತು ಒತ್ತಡವನ್ನು ತಡೆದುಕೊಳ್ಳುತ್ತದೆ. ಕ್ಯಾಪ್ಸುಲ್ ಕಾರ್ಯನಿರ್ವಹಿಸುತ್ತಲೇ ಇತ್ತು ಮಾತ್ರವಲ್ಲದೆ ಮೂರು ನಿಮಿಷಗಳ ಕಾಲ ಟೆಲಿಮೆಟ್ರಿ ಡೇಟಾವನ್ನು ಕಳುಹಿಸಿತು. ವಿಜ್ಞಾನಿಗಳು ಈಗ ಕ್ಯಾಪ್ಸುಲ್‌ನ ಮಾರ್ಗವನ್ನು ಪುನರ್ನಿರ್ಮಿಸಲು ಈ ಡೇಟಾವನ್ನು ಬಳಸುತ್ತಿದ್ದಾರೆ.
ಇದನ್ನು ಫ್ರೆಂಚ್ ಕಂಪನಿ ರೈಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಉಪಗ್ರಹ ಸೇವೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಬಳಸಬಹುದಾದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಕಂಪನಿಯು ಗುರಿಯಾಗಿದೆ.
ಭವಿಷ್ಯದಲ್ಲಿ ಸುರಕ್ಷಿತ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಈ ಡೇಟಾವು ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ವಿಜ್ಞಾನಿಗಳ ನಂಬಿಕೆಯಾಗಿದೆ.
PSLV-C62 ಮಿಷನ್ 2026 ರ ಇಸ್ರೋದ ಮೊದಲ ಪ್ರಮುಖ ಮಿಷನ್ ಆಗಿತ್ತು. ಈ ರಾಕೆಟ್ ಡಿಆರ್ಡಿಒದ ಪ್ರಾಥಮಿಕ ಉಪಗ್ರಹ EOS-N1 (ಅನ್ವೇಷ) ಜೊತೆಗೆ ಭಾರತ ಮತ್ತು ವಿದೇಶಗಳಿಂದ ಬಂದ 15 ಇತರ ಸಣ್ಣ ಪೇಲೋಡ್‌ಗಳನ್ನು ಹೊತ್ತೊಯ್ದಿತು. ಮೂರನೇ ಹಂತದ (PS3) ಸಮಯದಲ್ಲಿ ಸಮಸ್ಯೆ ಎದುರಾಗಿತ್ತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಈ ತಾಂತ್ರಿಕ ದೋಷವು ರಾಕೆಟ್ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪುವ ಕನಸನ್ನು ಭಗ್ನಗೊಳಿಸಿತ್ತು.
ಇಸ್ರೋ ಇನ್ನೂ ಔಪಚಾರಿಕವಾಗಿ ಇದನ್ನು ಸಂಪೂರ್ಣ ವೈಫಲ್ಯ ಎಂದು ಘೋಷಿಸದಿದ್ದರೂ, ಪ್ರಾಥಮಿಕ ಉಪಗ್ರಹಗಳ ನಷ್ಟವನ್ನು ದೃಢಪಡಿಸಲಾಗಿದೆ. ಈ ನಿರಾಶೆಯ ನಡುವೆ, ಸ್ಪ್ಯಾನಿಷ್ ಕ್ಯಾಪ್ಸುಲ್‌ನ ಯಶಸ್ಸು ವಿಜ್ಞಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ.
ಬೆಂಗಳೂರು, ಜನವರಿ 14: ಬೆಂಗಳೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೆಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಇಂದು ಭೋಗಿ ಹಬ್ಬವಾಗಿದ್ದು, ಈಗಾಗಲೇ ಮಾರುಕಟ್ಟೆಗಳಲ್ಲಿ ಜನಜಂಗುಳಿ ಸೇರಿದೆ. ಕಬ್ಬು, ಎಳ್ಳು, ಬೆಲ್ಲ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವುದರಲ್ಲಿ ಜನ ನಿರತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ವ್ಯಾಪಾರ, ವಹಿವಾಟು ಭಾರಿ ಹೆಚ್ಚಾಗಿದೆ. ಬೆಳಗ್ಗೆ 3-4 ಗಂಟೆಯಿಂದಲೇ ಜನರು ಕೆಆರ್ ಮಾರುಕಟ್ಟೆಯತ್ತ ತೆರಳುತ್ತಿದ್ದು, ಅವೆನ್ಯೂ ರಸ್ತೆ ಸಂಪೂರ್ಣವಾಗಿ ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
ಬೆಲೆಗಳು ದುಪ್ಪಟ್ಟಾಗಿದ್ದರೂ, ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ಸುತ್ತಮುತ್ತ ಟ್ರಾಫಿಕ್ ಇಂದು ಮತ್ತು ನಾಳೆಯೂ ಮುಂದುವರೆಯುವ ನಿರೀಕ್ಷೆಯಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಜನವರಿ 14: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಭಗವಾನರನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ಒಂದು ರಾಶಿಯಲ್ಲಿ ಎರಡುವರೆ ವರ್ಷ ಸ್ಥಿತನಾಗಿದ್ದು, ಅದರ ಸಂಚಾರ ಮತ್ತು ದೃಷ್ಟಿಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಶನಿಯು ಏಕಾಂಗಿಯಾಗಿರುವಾಗ ವಾತ ಕಾಯಿಲೆಗಳು, ನರ ದೌರ್ಬಲ್ಯ, ಪ್ಯಾರಾಲಿಸಿಸ್, ಕಿಡ್ನಿ ವೈಫಲ್ಯ, ಅಜೀರ್ಣ ಮತ್ತು ಕೂದಲು ಉದುರುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನೀಡಬಹುದು.
ಇತರೆ ಗ್ರಹಗಳೊಂದಿಗೆ ಶನಿ ಸಂಯೋಗಗೊಂಡಾಗ, ವಿಭಿನ್ನ ರೀತಿಯ ಅನಾರೋಗ್ಯಗಳು ಮತ್ತು ತೊಂದರೆಗಳು ಉಂಟಾಗಬಹುದು. ಉದಾಹರಣೆಗೆ, ರವಿಯೊಂದಿಗೆ ಶನಿ ಸೇರಿದಾಗ ದೃಷ್ಟಿದೋಷ, ಆಲಸ್ಯ, ಅಧಿಕಾರಿಗಳಿಂದ ತೊಂದರೆಗಳು ಕಾಣಿಸಬಹುದು. ಚಂದ್ರನೊಂದಿಗೆ ಸಂಯೋಗಗೊಂಡಾಗ ಮಾನಸಿಕ ತೊಂದರೆಗಳು, ರಕ್ತಹೀನತೆ ಮತ್ತು ಮುಖದ ಕಾಂತಿಯ ನಷ್ಟವಾಗಬಹುದು. ಬುಧನೊಂದಿಗೆ ಸೇರಿದಾಗ ಚರ್ಮ ವ್ಯಾಧಿಗಳು ಮತ್ತು ಮಾತಿನ ತೊದಲಿಕೆ ಇರಬಹುದು. ಗುರು, ಶುಕ್ರ, ರಾಹು ಮತ್ತು ಕೇತುಗಳೊಂದಿಗಿನ ಸಂಯೋಗಗಳು ಸಹ ಜೀರ್ಣಕ್ರಿಯೆ ಸಮಸ್ಯೆ, ಗಂಟಲು ನೋವು, ವಿಷಭಯ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳನ್ನು ಉಂಟುಮಾಡಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಲ್ಲಿರೋ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಇಬ್ಬರ ವಯಸ್ಸು ಸರಿ ಸುಮಾರು ಒಂದೇ ರೀತಿ ಇದೆ. ಈ ಕಾರಣದಿಂದಲೇ ಬಾಂಡಿಂಗ್ ಬಿಗಿಯಾಗಿದೆ. ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ಇವರ ಕಾಲೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಈಗ ಅಶ್ವಿನಿ ಗೌಡ ಅವರು ಈ ವಿಷಯದಲ್ಲಿ ಫನ್ ಮಾಡಿದ್ದಾರೆ. ಅವರು ಹೇಳಿದ ವಾಕ್ಯಕ್ಕೆ ಬೇರೆ ಬೇರೆ ರೀತಿಯ ಅರ್ಥ ಕಲ್ಪಿಸಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ನಡೆಯುತ್ತಿರುವುದು ಕೊನೆಯ ವಾರ. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಟಫ್ ಸ್ಪರ್ಧೆ ಏರ್ಪಡುತ್ತಿದೆ. ಯಾರು ಹೋಗ್ತಾರೆ, ಯಾರು ಕಪ್ ಗೆಲ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಕೊನೆಯ ವಾರದಲ್ಲಿ ವಿವಿಧ ರೀತಿಯ ಆಸೆಗಳನ್ನು ಹೇಳಿಕೊಳ್ಳಲು ಅವಕಾಶ ಇತ್ತು. ಅದೇ ರೀತಿ ರಘು ಅವರು ತಮ್ಮ ಮಗನ ಜೊತೆ ಸ್ವಿಮ್ಮಿಂಗ್ಪೂಲ್ನಲ್ಲಿ ಆಟ ಆಡಬೇಕು ಎಂದು ಆಸೆ ಹೇಳಿದ್ದರು. ಅಂತೆಯೇ ರಘು ಮಗ ರೋನಿತ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯ ಈಜುಕೊಳದಲ್ಲಿ ರಘು ಹಾಗೂ ರೋನಿತ್ ಆಟ ಆಡುತ್ತಿದ್ದರು. ಈ ವೇಳೆ ಅಶ್ವಿನಿ ಗೌಡ ಮಾತಿಗೆ ಇಳಿದರು. ‘ನಿಮ್ಮ ಅಪ್ಪ ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಒಬ್ಬರೇ ಬರೋದಿಲ್ಲ. ಇನ್ನೊಬ್ಬರು ಅವರ ಜೊತೆ ಇರ್ತಾರೆ. ಓಕೆ ಅಲ್ಲವಾ’ ಎಂದು ಕೇಳಿದರು. ‘ಯಾರು ಇರ್ತಾರೆ’ ಎಂದು ರೋನಿತ್ ಮರು ಪ್ರಶ್ನೆ ಮಾಡಿದ. ಆಗ, ಅಶ್ವಿನಿ ಗೌಡ ಉತ್ತರಿಸಬೇಕು ಎನ್ನುವಾಗ ಬಿಗ್ ಬಾಸ್ ಹಾಡೊಂದನ್ನು ಹಾಕಿದರು. ಹೀಗಾಗಿ ಆ ಸಂಭಾಷಣೆ ಮುಂದುವರಿಯಲೇ ಇಲ್ಲ.
ಅಶ್ವಿನಿ ಗೌಡ ಹೇಳಿದ ಮಾತಿಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ. ‘ಅವರ ಜೊತೆ ನಾನು ಬರ್ತೀನಿ’ ಎಂಬರ್ಥದಲ್ಲಿ ಅವರು ಹಾಸ್ಯ ಮಾಡಿರಬಹುದು ಎಂದು ಕೆಲವರು ಹೇಳಿದ್ದಾರೆ. ರಘು ಅವರಿಗೆ ಈಗಾಗಲೇ ಮದುವೆ ಆಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಅವರದ್ದು ಶುದ್ಧ ಮನಸ್ಸು. ಹೀಗಾಗಿ, ಈ ಬಗ್ಗೆ ಅವರು ಆಲೋಚಿಸಿರುವುದಿಲ್ಲ. ಇದೆಲ್ಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಿದೆ.
ಬೆಂಗಳೂರು, ಜನವರಿ 14: ಸಂಕ್ರಾಂತಿ ಹಬ್ಬದಂದು (ಜನವರಿ 15) ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಆಯೋಜಿಸಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷದಂತೆ, ಸೂರ್ಯ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ಅಪರೂಪದ ಸನ್ನಿವೇಶವು ಈ ವರ್ಷ ಸಂಜೆ 5:2 ರಿಂದ 5:5 ರವರೆಗೆ ನಡೆಯಲಿದೆ. ಸೂರ್ಯನ ಕಿರಣಗಳು ಶಿವಲಿಂಗದ ಪಾದದಿಂದ ಕೇಶದವರೆಗೆ ಸ್ಪರ್ಶಿಸುತ್ತವೆ. ಧನುರ್ಮಾಸದ ಪೂಜೆಯು ಇಂದು ಕೊನೆಗೊಳ್ಳಲಿದ್ದು, ಜನವರಿ 15ರಂದು ವಿಶೇಷ ಅಭಿಷೇಕಗಳು ನಡೆಯಲಿವೆ. ಭಕ್ತರಿಗೆ ಸೂರ್ಯ ರಶ್ಮಿ ಸ್ಪರ್ಶದ ನೇರ ದರ್ಶನಕ್ಕಾಗಿ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಬೇಕು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ. ಎಲ್ಲದಕ್ಕೂ ಕೂಡಲೇ ಉತ್ತರವನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಅಧಿಕಾರದ ಮಾತುಗಳು ಅಹಂಕಾರದ ಮಾತಾಗುವುದು. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ ಮನೋಗತವನ್ನು ಅರಿತುಕೊಳ್ಳುವಿರಿ. ನಿಂದನೆಯನ್ನು ಸಹಜದಂತೆ ಸ್ವೀಕರಿಸುವಿರಿ.
ವೃಷಭ ರಾಶಿ:
ನಿಮ್ಮಿಷ್ಟಿದ ಸ್ಥಳಕ್ಕೆ ಹೋದರೆ ಮನಸ್ಸು ಹಗುರಾಗುವುದು. ಒಳ್ಳೆಯ ಹವ್ಯಾಸಗಳನ್ನು ಕೊಲ್ಲುವುದು ಬೇಡ. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ವಾಹನದಿಂದ ಗಾಯವಾಗುವ ಸಾಧ್ಯತೆ ಇದೆ. ನಿಮ್ಮ ಕನಸನ್ನು ಸಕಾರ ಮಾಡಿಕೊಳ್ಳಲು ಪ್ರಗತಿಯಲ್ಲಿ ಇರುವಿರಿ. ಸಹೋದರನ ಜೊತೆ ಸಣ್ಣ ವಿಷಯಕ್ಕೆ ವಿವಾದವಾಗಬಹುದು. ನೇರ ನುಡಿಗಳು ನಿಮಗೆ ಮುಜುಗರವನ್ನು ಉಂಟುಮಾಡಬಹುದು. ವಿದೇಶಕ್ಕೆ ಹೋಗಲುಬೇಕಾದ ಸಿದ್ಧತೆ ನಡೆಸುವಿರಿ. ಮನೆಯಿಂದ ದೂರ ಇದ್ದವರಿಗೆ ತೊಂದರೆ ಬರಬಹುದು.
ಮಿಥುನ ರಾಶಿ:
ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆರ್ಥಿಕತೆಯ ಯೋಜನೆಯನ್ನು ಹೆಣೆಯಬಹುದು. ಹೊಸ ಉದ್ಯೋಗದ ಅಭಿವೃದ್ಧಿಗೆ ದೇವರಲ್ಲಿ ಶರಣಾಗುವಿದರಿ. ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ. ಹಿರಿಯರಿಂದ ಮಾರ್ಗದರ್ಶನವು ಸಿಗಲಿದೆ. ಇಂದು ಉದ್ಯೋಗಕ್ಕೆ ಸಂಬಂಧಿಸಿದ ಓಡಾಟವು ವ್ಯರ್ಥವಾಗುವುದು. ಸ್ವತಂತ್ರವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಇಂದು ನೀವು ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಇರುವುದು ಇನ್ನಷ್ಟು ದುರ್ಬಲವಾಗಲು ಕಾರಣ.
ಕರ್ಕಾಟಕ ರಾಶಿ:
ಹಳೆಯ ಬಯಕೆಯನ್ನು ಇಡೇರಿಸಿಕೊಂಡು ಖುಷಿಪಡುವಿರಿ. ನಿಮ್ಮ ನಿರ್ಲಕ್ಷ್ಯದಿಂದ ಭೂಮಿಯ ಸ್ವಲ್ಪ ಭಾಗವನ್ನು ಕಳೆದುಹೋಗಬಹುದು. ಕಾನೂನಿಗೆ ಶರಣಾಗುವಿರಿ. ಉದ್ಧಟತನದ ಮಾತುಗಳಿಂದ ನಿಮ್ಮ ಸ್ವಭಾವವು ಸ್ಪಷ್ಟವಾಗುವುದು. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ಬಂದುಬಿಡುವುದು. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಭಾವನೆಗಳು ಹೇರಿದರೆ ಅದು ಸ್ಫೋಟವಾಗುವ ಸಾಧ್ಯತೆ ಇದೆ. ಸುಲಭ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ನಂಬಿಕೆಯನ್ನು ಕಳೆದುಕೊಳ್ಳುವವ ಪ್ರಸಂಗವು ಬರಬಹುದು. ಉದ್ಯಮವನ್ನು ಮುನ್ನಡೆಸಲು ಉತ್ತಮ ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ನಿಮ್ಮ ತಪ್ಪನ್ನು ಯಾರಿಂದಲೂ ಕೇಳಲು ಇಚ್ಛಿಸುವುದಿಲ್ಲ.
ಸಿಂಹ ರಾಶಿ:
ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ನಿಮ್ಮ ಸಮತೋಲನ ಮನಃಸ್ಥಿತಿಯು ಕ್ಲಿಷ್ಟ ಸಂದರ್ಭವನ್ನು ಲೀಲಾಜಾಲವಾಗಿ ದಾಟಿಸುವುದು. ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ಮನಸ್ಸಿಗೆ ಬೇರಸವಾಗುವ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಅಹಂಕಾರದ ಮಾತುಗಳು ನಿಮಗೇ ಬರಬಹುದು.
ಕನ್ಯಾ ರಾಶಿ:
ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ನಿಮ್ಮಿಂದ ಆಕರ್ಷಿತರಾಗಿ ಮೋಹಗೊಳ್ಳಬಹುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ. ಬಂಧುಗಳಿಂದ ನಿಮಗೆ ಪ್ರಶಂಸೆ ಸಿಕ್ಕರೂ ಒಳಗೇ ಆತಂಕ. ತಂದೆಯ ಮೇಲೆ ನಿಮ್ಮ ಗೌರವವು ಅಧಿಕಾಗಿದ್ದು ಅನಿರೀಕ್ಷಿತ ಉಡುಗೊರೆಯನ್ನು ಕೊಡುವಿರಿ. ಯಾರ ವಸ್ತುವನ್ನು ಕಸಿದುಕೊಳ್ಳುವ ಹಂತಕ್ಕೆ ಹೋಗುವುದು ಬೇಡ. ನಿಮ್ಮ ನಿರ್ಲಕ್ಷ್ಯದಿಂದ ಭೂಮಿಯ ಸ್ವಲ್ಪ ಭಾಗವನ್ನು ಕಳೆದುಹೋಗಬಹುದು. ಬಂಧಿವಿನಿಂದ ನೀವು ಧನವನ್ನು ಅಪೇಕ್ಷಿಸುವಿರಿ.
ತುಲಾ ರಾಶಿ:
ಶೂನ್ಯದಿಂದ ಆರಂಭಿಸುವ ಕಲೆ ನಿಮಗೆ ಗೊತ್ತಿದೆ. ನಿರೀಕ್ಷಿತ ಗೌರವವು ನಿಮಗೆ ಸಿಗಲಿದೆ. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ಸಹೋದ್ಯೋಗಿಯೊಬ್ಬನಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ. ನಿಮ್ಮ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ಎಲ್ಲರ ಮೇಲೂ ಹಿಡಿತ ಸಾಧಿಸುವ ಪ್ರಯತ್ನವು ಬೇಡ. ಮಾತನಾಡಿ ಇಂದು ಸಮಯವನ್ನು ವ್ಯರ್ಥ ಮಾಡುವಿರಿ. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸುವಿರಿ. ಕೃಷಿಕರು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವರು.
ವೃಶ್ಚಿಕ ರಾಶಿ:
ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಅಪರಿಚಿತರಿಗೆ ಮಾಡಿದ ಸಹಾಯವು ದುರುಪಯೋಗವಾಗುವುದು. ನಿಮ್ಮ ಗುಣಗಳು ಅಪ್ರಕಾಶವಾಗಬಹುದು. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಬರಬಹುದು. ಯಾರನ್ನೂ ಅವಲಂಬಿಸದೇ ನಡೆಯಬೇಕು ಎನ್ನುವ ಹಠವು ಬರುವುದು. ಪ್ರಶಂಸೆಯು ಇಲ್ಲದೇ ಕೆಲಸದಲ್ಲಿ ನಿಮ್ಮ ಆಸಕ್ತಿಯು ಕಡಿಮೆ ಆಗಬಹುದು. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಸ್ಥಳ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಬೇಕಾದೀತು. ಸ್ನೇಹಿತರ ಜೊತೆ ಎಲ್ಲಿಗಾದರೂ ಪ್ರಯಾಣವನ್ನು ಮಾಡುವಿರಿ. ಸತ್ಯವನ್ನು ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುವಿರಿ.
ಧನು ರಾಶಿ:
ನೀವು ಯಾವ ಜವಾಬ್ದಾರಿಯನ್ನೂ ಪಡೆಯಲೂ ಹಿಂಜರಿಯುವುದಿಲ್ಲ. ನಿಮ್ಮ ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ. ನಿಂದಕರಿಗೆ ಉತ್ತರವನ್ನು ಕೊಟ್ಟು ಸಿಟ್ಟಗುವಿರಿ. ಬರಲಿರುವ ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ನಿಮ್ಮ ಮೇಲೆ ಸಹಾನುಭೂತಿ ಇರಬಹುದು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ನಮ್ಮದೇ ಸರಿ ಎನ್ನುವ ವಾದವು ಸರಿಯಾಗದು. ನೀವು ಇಂದು ಯಾರ ಜೊತೆಯೂ ಬೆರೆಯಲು ಇಷ್ಟಪಡುವುದಿಲ್ಲ.
ಮಕರ ರಾಶಿ:
ಇಂದು ಇತರ ಅನುಭವವೂ ನಿಮಗೆ ಪಾಠವಾಗುವುದು. ಹಠದ ಸ್ವಭಾವದಿಂದ ಹೊರಬನ್ನಿ. ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ಅತಿ ಲೋಭದಿಂದ ಧನಾರ್ಜನೆಯನ್ನು ಮಾಡುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಓಡಾಟವು ವ್ಯರ್ಥಯವಾಗುವುದು. ಉಚಿತವಾಗಿ ಸಿಕ್ಕಿದ್ದನ್ನು ಪಡೆಯಲು ಇಚ್ಛಿಸುವುದಿಲ್ಲ. ಶ್ರಮಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ.
ಕುಂಭ ರಾಶಿ:
ಸಾಧಕರ ಒಡನಾಟವು ನಿಮ್ಮ ಆಲೋಚನೆಯ ಕ್ರಮವನ್ನು ಬದಲಿಸುವುದು. ಪ್ರಶಾಂತವಾದ ಚಿತ್ತದಿಂದ ಇದ್ದರೆ ಸಕಾರಾತ್ಮಕ ಅಂಶಗಳನ್ನು ಕಾಣುವಿರಿ. ಒತ್ತಡದ ಕಾರಣ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಅತಿ ಭೋಜನದಿಂದ ಉದರ ಬಾಧೆ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಮಿತ್ರರ ಸಹಾನುಭೂತಿಯು ನಿಮಗೆ ಉತ್ಸಾಹವನ್ನು ಕೊಡುವುದು. ಉತ್ತಮವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಕಾರ್ಯದ ಅನಿವಾರ್ಯತೆಯು ಎದ್ದು ಕಾಣಿಸುವುದು. ನಿಮ್ಮ ಸರಳ ವ್ಯಕ್ತಿತ್ವವು ಮಾದರಿಯಾಗುವುದು.
ಮೀನ ರಾಶಿ:
ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ನಿಮ್ಮಿಂದಾಗಿ ಕುಟುಂಬದ ಒತ್ತಡವು ಕಡಿಮೆ ಆಗುವುದು. ಅವಸರ ಮಾಡದೇ ಕೆಲಸವನ್ನು ಮಾಡಿ. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳುವ ಅನಿವಾರ್ಯತೆ ಇದೆ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ ಮನೋಗತವನ್ನು ಅರಿತುಕೊಳ್ಳುವಿರಿ. ಯಾರದೋ ಒತ್ತಾಯಕ್ಕೆ ಮಣಿದು ಬೇಸರಪಡುವಿರಿ. ಇಂದು ನಿಮ್ಮ ಬೆಂಬಲಕ್ಕೆ ಬರುವವರನ್ನು ಅತಿಯಾಗಿ ನಂಬುವಿರಿ. ಅರ್ಥಿಕ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳುವಿರಿ.
ಜನವರಿ 14, 2026ರ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಬುಧವಾರ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಅನೂರಾಧಾ ಯೋಗ : ಗಂಡ, ಕರಣ : ಬಾಲವ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12-33 – 13:58, ಯಮಗಂಡ ಕಾಲ 08:19 – 09:44, ಗುಳಿಕ ಕಾಲ 11:09 – 12:33
ದೀರ್ಘಕಾಲದಿಂದ ನಡೆಯುತ್ತಿರುವ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಹಿರಿಯರೊಂದಿಗೆ ತೀರ್ಥಯಾತ್ರೆಗೆ ಹೋಗುವ ಬಗ್ಗೆ ಚರ್ಚೆ ನಡೆಸುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಅಲ್ಪ ಲಾಭ ಇದ್ದರೂ ಭವಿಷ್ಯದ ಹೂಡಿಕೆಗೆ ಉತ್ತಮ ತಳಹದಿ ಸಿಗಲಿದೆ. ಸಾಲದ ಹೊರೆ ತಗ್ಗಿಸಲು ನೀವು ವಿಶೇಷ ಹಣಕಾಸಿನ ಯೋಜನೆ ರೂಪಿಸುವಿರಿ. ಕಚೇರಿಯಲ್ಲಿ ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಕೆಲಸದ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಧ್ಯಾನ, ಯೋಗದ ಅಭ್ಯಾಸದಿಂದ ಮಾನಸಿಕ ಒತ್ತಡ ಕಡಿಮೆ ಆಗಲಿದೆ.
ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಬಿಗಿಯಾದ ವರ್ತನೆ ಇದ್ದರೂ ನಿಮ್ಮ ಪ್ರಾಮಾಣಿಕತೆಯೇ ರಕ್ಷಿಸಲಿದೆ. ಕಲ್ಲಿದ್ದಲು ವ್ಯಾಪಾರಿಗಳಿಗೆ ಶುಭಪ್ರದವಾಗಿದೆ. ಆಸ್ತಿ ವಿವಾದಗಳು ಕೊನೆಗೂ ಸೌಹಾರ್ದಯುತವಾಗಿ ಬಗೆಹರಿಯುವ ಸೂಚನೆಗಳಿವೆ. ಮನೆಯಲ್ಲಿ ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು, ಆರೋಗ್ಯದ ಕಾಳಜಿ ವಹಿಸಿ, ವಿಶೇಷವಾಗಿ ಮಂಡಿ ನೋವು ಅಥವಾ ಕಾಲುಗಳ ನೋವು ಕಾಡಬಹುದು. ಹೂಡಿಕೆ ಮಾಡುವ ಮೊದಲು ಮಾರುಕಟ್ಟೆಯ ಸ್ಥಿತಿಗತಿಯನ್ನು ಅಧ್ಯಯನ ಮಾಡಿ. ಶತ್ರುಗಳು ನಿಮ್ಮನ್ನು ಕೆಣಕಲು ಪ್ರಯತ್ನಿಸಬಹುದು.
ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನದ ಸಾಧ್ಯತೆ ಇದೆ. ಸೋದರ ಸಂಬಂಧಿಗಳೊಂದಿಗೆ ಇದ್ದ ಹಣಕಾಸಿನ ವಿಚಾರದ ಮುನಿಸು ದೂರವಾಗಲಿದೆ. ರಕ್ತದೊತ್ತಡ ಅಥವಾ ಮಧುಮೇಹ ಇರುವವರು ಆಹಾರ ಪದ್ಧತಿಯಲ್ಲಿ ಶಿಸ್ತು ಪಾಲಿಸಬೇಕು. ಸಾರ್ವಜನಿಕ ಕೆಲಸಗಳಲ್ಲಿ ತೊಡಗಿರುವವರಿಗೆ ದೊಡ್ಡ ಮಟ್ಟದ ಜವಾಬ್ದಾರಿಗಳು ಸಿಗಲಿವೆ. ನಿಮ್ಮ ದೃಢ ನಿರ್ಧಾರಗಳು ವ್ಯವಹಾರದಲ್ಲಿ ಅಭಿವೃದ್ಧಿಗೆ ದಾರಿ ಮಾಡಿಕೊಡಲಿವೆ. ಲೇವಾದೇವಿ ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ಒಪ್ಪಂದಗಳು ಕೈಗೂಡಲಿವೆ. ಪ್ರೀತಿಯಲ್ಲಿ ಇರುವವರಿಗೆ ಉಡುಗೊರೆಗಳಿಗಾಗಿ ಖರ್ಚು ಆಗಲಿದೆ.
ಅಂದುಕೊಂಡಿದ್ದ ಕೆಲಸಗಳು ನಿಮ್ಮ ಪರವಾಗಿಯೇ ಇರಲಿದೆ. ಭೂಮಿ ವ್ಯವಹಾರಗಳಲ್ಲಿ ಲಾಭದ ಮುನ್ಸೂಚನೆ ಇದೆ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ದೂರದ ಊರಿನಿಂದ ಅತಿಥಿಗಳು ಬರುವವರಿದ್ದು, ಮನೆಯಲ್ಲಿ ಚಟುವಟಿಕೆಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿಗೇರಲಿದೆ, ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿರಿ. ಮಕ್ಕಳ ನಡವಳಿಕೆಯಲ್ಲಿ ಸುಧಾರಣೆ ಕಂಡುಬರಲಿದ್ದು, ಇದು ಪೋಷಕರಿಗೆ ಸಮಾಧಾನ ತರಲಿದೆ. ವಾಹನಗಳ ನಿರ್ವಹಣೆಗೆ ಹಣ ವ್ಯಯವಾಗಬಹುದು.
ಸಮಯ ಪ್ರಜ್ಞೆ ಮತ್ತು ಚತುರತೆಯಿಂದ ನೀವು ಕಠಿಣ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಹಣಕಾಸಿನ ಹರಿವು ನಿರಂತರವಾಗಿದ್ದರೂ ಐಷಾರಾಮಿ ಖರ್ಚುಗಳ ಮೇಲೆ ಹಿಡಿತವಿರಲಿ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ನಿಮ್ಮ ಸಲಹೆಗಳನ್ನು ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಪ್ರೀತಿಪಾತ್ರರ ಜೊತೆ ಹೊರಗೆ ಸುತ್ತಾಡುವ ಯೋಗ ಇದೆ. ಹೊಸ ಭಾಷೆ- ಕೌಶಲ ಕಲಿಯಲು ಆರಂಭಿಸುವಿರಿ.
ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿರಲಿದೆ. ಕುಟುಂಬದ ಸದಸ್ಯರ ಮಧ್ಯೆ ಪ್ರೀತಿ ಮತ್ತು ಸಾಮರಸ್ಯ ವೃದ್ಧಿಯಾಗಲಿದೆ. ಮನೆಯ ನವೀಕರಣದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ. ಆರ್ಥಿಕವಾಗಿ ಸಣ್ಣ ಮಟ್ಟದ ಉಳಿತಾಯ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಸೂಕ್ತ ಸಮಯ. ಸಾರ್ವಜನಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದ್ದು, ನೂತನ ಗೆಳೆಯರ ಸಂಪರ್ಕ ಸಿಗಲಿದೆ. ಮಕ್ಕಳ ಕ್ರೀಡಾ ಸಾಧನೆಯು ಹರ್ಷ ತರಲಿದೆ. ಸುತ್ತಮುತ್ತಲಿನವರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುಣಕ್ಕೆ ಮೆಚ್ಚುಗೆ ಸಿಗಲಿದೆ.