ಇಂಧನ ಬೆಲೆ ಮತ್ತಷ್ಟು ಹೆಚ್ಚಳ: ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ – Kannada News | Fuel Price Hike: Experts Warn of Eight to Ten Rupee Increase Amid Global Oil Crisis
ಬೆಂಗಳೂರು, ಮೇ 17: ಇಂಧನ ಬೆಲೆ ಏರಿಕೆ ದೇಶದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು ಲೀಟರ್ಗೆ ಮೂರು ರೂಪಾಯಿ ಏರಿಕೆಯಾಗಿರುವ ಬೆನ್ನಲ್ಲೇ, ಸಿಎನ್ಜಿ ಬೆಲೆಯು ಸಹ ಕಳೆದ ಎರಡು ದಿನಗಳಲ್ಲಿ ಒಟ್ಟು ಮೂರು ರೂಪಾಯಿ ಹೆಚ್ಚಾಗಿದೆ. ಆದರೆ, ತಜ್ಞರ ಪ್ರಕಾರ, ಈ ಏರಿಕೆ ಕೇವಲ ಆರಂಭವಷ್ಟೇ. ಜಾಗತಿಕ ತೈಲ ಬಿಕ್ಕಟ್ಟು ಮತ್ತು ಬೆಲೆ ಏರಿಕೆಯ ಪ್ರವೃತ್ತಿ ಗಮನಿಸಿದರೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಬರುವ ದಿನಗಳಲ್ಲಿ ಎಂಟರಿಂದ ಹತ್ತು…