Category Archives: Blog

Your blog category

ಇಂಧನ ಬೆಲೆ ಮತ್ತಷ್ಟು ಹೆಚ್ಚಳ: ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ – Kannada News | Fuel Price Hike: Experts Warn of Eight to Ten Rupee Increase Amid Global Oil Crisis

ಬೆಂಗಳೂರು, ಮೇ 17: ಇಂಧನ ಬೆಲೆ ಏರಿಕೆ ದೇಶದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು ಲೀಟರ್‌ಗೆ ಮೂರು ರೂಪಾಯಿ ಏರಿಕೆಯಾಗಿರುವ ಬೆನ್ನಲ್ಲೇ, ಸಿಎನ್‌ಜಿ ಬೆಲೆಯು ಸಹ ಕಳೆದ ಎರಡು ದಿನಗಳಲ್ಲಿ ಒಟ್ಟು ಮೂರು ರೂಪಾಯಿ ಹೆಚ್ಚಾಗಿದೆ. ಆದರೆ, ತಜ್ಞರ ಪ್ರಕಾರ, ಈ ಏರಿಕೆ ಕೇವಲ ಆರಂಭವಷ್ಟೇ. ಜಾಗತಿಕ ತೈಲ ಬಿಕ್ಕಟ್ಟು ಮತ್ತು ಬೆಲೆ ಏರಿಕೆಯ ಪ್ರವೃತ್ತಿ ಗಮನಿಸಿದರೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಬರುವ ದಿನಗಳಲ್ಲಿ ಎಂಟರಿಂದ ಹತ್ತು ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಈ ಇಂಧನ ಬೆಲೆ ಏರಿಕೆಯು ಕೇವಲ ವಾಹನ ಸವಾರರ ಮೇಲೆ ಮಾತ್ರವಲ್ಲದೆ, ಇಡೀ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಡಿಸೇಲ್ ಬೆಲೆ ಹೆಚ್ಚಳದಿಂದ ಸರಕು ಸಾಗಣೆ ವಾಹನಗಳ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದ್ದು, ಇದು ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಪೆಟ್ರೋಲಿಯಂ ಇಲಾಖೆಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಕನಿಷ್ಠ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲಕ್ಕೆ ಬೇಡಿಕೆಯಿದ್ದು, ಸದ್ಯ 65 ದಿನಗಳಿಗೆ ಸಾಕಾಗುವಷ್ಟು ಪೆಟ್ರೋಲ್ ಮತ್ತು ಡಿಸೇಲ್ ಸಂಗ್ರಹವಿದೆ. ಈ ಪರಿಸ್ಥಿತಿಯು ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ತರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೆಟ್ರೋಲ್, ಡೀಸೆಲ್ ಬೆನ್ನಲ್ಲೇ ಔಷಧಗಳ ಬೆಲೆಯೂ ಏರಿಕೆ!

ಬೆಂಗಳೂರು, ಮೇ 17: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಈಗ ಬಿಪಿ, ಶುಗರ್ ಸೇರಿದಂತೆ ದಿನಬಳಕೆಯ ಔಷಧಿಗಳ ಬೆಲೆಯೂ ಶೇ 15 ರಿಂದ 20 ರಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ . ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋ ಕೆಮಿಕಲ್ ಅತ್ಯಗತ್ಯವಾಗಿದ್ದು, ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಇದರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಹಳೆಯ ಎಂಆರ್‌ಪಿ ದರದಲ್ಲೇ ಔಷಧಿಗಳು ಸಿಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಕೊರತೆಯಿಂದ ಬೆಲೆ ಹೆಚ್ಚಾಗುವ ಭೀತಿ ಇದೆ ಎಂದು ಮೆಡಿಕಲ್ ವಿತರಕರು ತಿಳಿಸಿದ್ದಾರೆ. ಸಾಗಾಣಿಕೆ ವೆಚ್ಚವೂ ಹೆಚ್ಚುತ್ತಿರುವುದರಿಂದ ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನೈಜ ಘಟನೆಗಳ ಆಧಾರಿತ ‘ಬೇಲ್’ ಸಿನಿಮಾ ಟೀಸರ್; ಗಮನ ಸೆಳೆದ ಶಿವಣ್ಣ ಲುಕ್ – Kannada News | Shiva Rajkumar starrer Bail Kannada movie teaser by Pavan Wadeyar KVN Productions

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shiva Rajkumar) ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಪಾತ್ರಗಳ ಮೂಲಕ ಅಭಿಮಾನಿಗಳ ಎದುರು ಬರುತ್ತಾರೆ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಆ ಪೈಕಿ ಕನ್ನಡದ ‘ಬೇಲ್’ ಸಿನಿಮಾ (Bail Kannada Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ. ಈಗ ‘ಬೇಲ್’ ಸಿನಿಮಾದ ಟೀಸರ್ (Bail Teaser) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶಿವರಾಜ್​ಕುಮಾರ್ ಅವರ ಲುಕ್ ರಿವೀಲ್ ಆಗಿದೆ. ಅಭಿಮಾನಿಗಳಿಗೆ ಶಿವಣ್ಣನ ಈ ಲುಕ್ ಇಷ್ಟ ಆಗಿದೆ.

‘ಬೇಲ್’ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್​ನಿಂದ ನಿರೀಕ್ಷೆ ಜಾಸ್ತಿ ಆಗಿದೆ. ಇದರಲ್ಲಿ ಶಿವರಾಜ್​ಕುಮಾರ್ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ. ಇದು ಪಕ್ಕಾ ಮಾಸ್ ಸಿನಿಮಾ ಎಂಬುದು ಸ್ಪಷ್ಟವಾಗಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಬೇಲ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಟೀಸರ್​ನಲ್ಲಿ ಅದ್ದೂರಿತನ ಕಾಣಿಸುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಅವರು ವಿಜಿ ಎಂಬ ಪಾತ್ರ ಮಾಡುತ್ತಿದ್ದಾರೆ. ‘ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವತ್ತೂ ಆಗೋದಿಲ್ಲ’ ಎಂಬ ಡೈಲಾಗ್ ಈಗ ಟ್ರೆಂಡ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ಬೇಲ್’ ಸಿನಿಮಾ ಬಿಡುಗಡೆ ಆಗಲಿದೆ.

‘ಬೇಲ್’ ಸಿನಿಮಾ ಟೀಸರ್:

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರು ಡಿಫರೆಂಟ್ ಸಿನಿಮಾಗಳನ್ನು ನೀಡಿದ್ದಾರೆ. ಸ್ಟಾರ್ ನಟರ ಜೊತೆ ಕೆಲಸ ಮಾಡಿ ಅವರು ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಶಿವರಾಜ್​ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಇನ್ನಷ್ಟು ಹೆಚ್ಚಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಚಿತ್ರ ಆದ್ದರಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

ಈಗ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆದಿದೆಯಾದರೂ ಚಿತ್ರದ ಕಥೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಈ ಸಣ್ಣ ತುಣುಕಿನಿಂದ ಕಥೆ ಬಗ್ಗೆ ಕುತೂಹಲ ಡಬಲ್ ಆಗಿದೆ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು! – Kannada News | 11th Century Chola Copper Plates Repatriated to India from Netherlands: PM Modi

ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು!
Image Credit source: PM Narendra Modi X account

ನೆದರ್​ಲ್ಯಾಂಡ್ಸ್, ಮೇ 17: ಪ್ರತಿ ಭಾರತೀಯನೂ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣವೊಂದಕ್ಕೆ ನೆದರ್ಲ್ಯಾಂಡ್ಸ್ ಸಾಕ್ಷಿಯಾಗಿದೆ. 11ನೇ ಶತಮಾನಕ್ಕೆ ಸೇರಿದ ಪ್ರಸಿದ್ಧ ಚೋಳ ಸಾಮ್ರಾಜ್ಯದ ತಾಮ್ರದ ಶಾಸನಗಳು (Copper Plates) ಸುದೀರ್ಘ ವರ್ಷಗಳ ನಂತರ ನೆದರ್ಲ್ಯಾಂಡ್ಸ್‌ನಿಂದ ಮತ್ತೆ ಭಾರತಕ್ಕೆ ಮರಳುತ್ತಿವೆ. ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರ ಸಮ್ಮುಖದಲ್ಲಿ ನಡೆದ ಈ ಐತಿಹಾಸಿಕ ಹಸ್ತಾಂತರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಎಲ್ಲಾ ಭಾರತೀಯರಿಗೂ ಅತ್ಯಂತ ಸಂತೋಷದ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ಚೋಳರ ಕಾಲದ ತಾಮ್ರ ಶಾಸನಗಳು ವಾಪಸ್ ಬರಲಿವೆ.
  • ತಮಿಳು ಭಾಷೆಯಲ್ಲಿರುವ ಈ ಶಾಸನಗಳು ಚೋಳರ ನೌಕಾ ಪರಾಕ್ರಮ ಸಾರುತ್ತವೆ.
  • ಶಾಸನಗಳನ್ನು ಸಂರಕ್ಷಿಸಿದ್ದ ಲೈಡನ್ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

ಚೋಳರ ತಾಮ್ರ ಶಾಸನಗಳ ವಿಶೇಷತೆಗಳು

ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಶಾಸನದ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಶಾಸನಗಳ ಸಂಗ್ರಹದಲ್ಲಿ ಒಟ್ಟು 21 ದೊಡ್ಡ ತಾಮ್ರದ ಫಲಕಗಳು ಮತ್ತು 3 ಸಣ್ಣ ಫಲಕಗಳಿವೆ. ಇವುಗಳನ್ನು ಕಂಚಿನ ಉಂಗುರದಿಂದ ಒಟ್ಟಿಗೆ ಜೋಡಿಸಲಾಗಿದ್ದು, ಅದರ ಮೇಲೆ ಚೋಳ ರಾಜವಂಶದ ರಾಜಮುದ್ರೆ ಇದೆ. ಈ ಶಾಸನಗಳಲ್ಲಿನ ಹೆಚ್ಚಿನ ಬರಹಗಳನ್ನು ವಿಶ್ವದ ಅತ್ಯಂತ ಸುಂದರವಾದ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ. ಇದರೊಂದಿಗೆ ಕೆಲವು ಭಾಗಗಳು ಸಂಸ್ಕೃತ ಭಾಷೆಯನ್ನೂ ಒಳಗೊಂಡಿವೆ ಎಂದಿದ್ದಾರೆ.

ಚೋಳ ಸಾಮ್ರಾಜ್ಯದ ಶ್ರೇಷ್ಠ ದೊರೆ ರಾಜರಾಜ ಚೋಳ I ಅವರು ನೀಡಿದ್ದ ಮೌಖಿಕ ಭರವಸೆಯನ್ನು, ಅವರ ಮಗನಾದ ಸಾಮ್ರಾಟ್ ರಾಜೇಂದ್ರ ಚೋಳ I ಅವರು ಈ ತಾಮ್ರದ ಶಾಸನಗಳ ಮೂಲಕ ಅಧಿಕೃತಗೊಳಿಸಿದ್ದರು. ಇವು ಚೋಳರ ಭವ್ಯ ಸಂಸ್ಕೃತಿ, ಆಡಳಿತ ಮತ್ತು ನೌಕಾಪಡೆಯ ಪರಾಕ್ರಮವನ್ನು ಜಗತ್ತಿಗೆ ಸಾರುತ್ತವೆ ಎಂದು ತಮ್ಮ ಪೋಸ್ಟ್​ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ನೆದರ್ಲ್ಯಾಂಡ್ಸ್ ಸರ್ಕಾರಕ್ಕೆ ಪ್ರಧಾನಿ ಧನ್ಯವಾದ

19ನೇ ಶತಮಾನದ ಮಧ್ಯಭಾಗದಿಂದ (1862) ಈ ಅಮೂಲ್ಯವಾದ ತಾಮ್ರದ ಶಾಸನಗಳನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದ ನೆದರ್ಲ್ಯಾಂಡ್ಸ್ ಸರ್ಕಾರ ಮತ್ತು ವಿಶೇಷವಾಗಿ ಅಲ್ಲಿನ ಲೈಡನ್ ವಿಶ್ವವಿದ್ಯಾಲಯಕ್ಕೆ (Leiden University) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಭಾರತವು ಕಳೆದ 14 ವರ್ಷಗಳಿಂದ ಈ ಶಾಸನಗಳ ವಾಪಸಾತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿತ್ತು. ಚೋಳರ ಈ ಸಾಂಸ್ಕೃತಿಕ ಪರಂಪರೆಯು ಭಾರತಕ್ಕೆ ಮರಳುತ್ತಿರುವುದು ದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:06 am, Sun, 17 May 26

Source link

ತಿರುವನಂತಪುರಂ–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಸಿನಿಮಾ ಸ್ಟೈಲ್​​ನಲ್ಲಿ ಪ್ರಯಾಣಿಕರ ರಕ್ಷಣೆ – Kannada News | Fire Breaks Out in Thiruvananthapuram–Hazrat Nizamuddin Rajdhani Express in Madhya Pradesh

ಭೋಪಾಲ್, ಮೇ 17:ತಿರುವನಂತಪುರಂ–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬಿ-1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಲೂನಿ ರಿಚ್ಛಾ (LNR) ಮತ್ತು ವಿಕ್ರಮ್‌ಗಢ್ ಅಲೋಟ್ (VMA) ನಿಲ್ದಾಣಗಳ ಮಧ್ಯೆ ಈ ಅವಘಡ ಸಂಭವಿಸಿದೆ. ಕೋಚ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 5.15ಕ್ಕೆ ತಿರುವನಂತಪುರಂನಿಂದ ನಿಜಾಮುದ್ದೀನ್‌ಗೆ ತೆರಳುತ್ತಿದ್ದ 12431 ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಹಿಂಭಾಗದ SLR ಹಾಗೂ B1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಗಮನಕ್ಕೆ ಬರುತ್ತಿದ್ದಂತೆ ರೈಲ್ವೆ ಸಿಬ್ಬಂದಿ ತಕ್ಷಣ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬೆಂಕಿ ತಗುಲಿದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

World Telecommunication Day 2026: ವಿಶ್ವ ದೂರಸಂಪರ್ಕ ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ – Kannada News | World Telecommunication Day 2026: Do you know the purpose of celebrating World Telecommunication Day?

ವಿಶ್ವ ದೂರ ಸಂಪರ್ಕ ದಿನImage Credit source: png magic

ಮಾನವ ಇತಿಹಾಸದುದ್ದಕ್ಕೂ ಸಂವಹನ ಸಾಧನಗಳು ನಿರಂತರವಾಗಿ ವಿಕಸನ ಹೊಂದುತ್ತಾ ಬಂದಿದೆ. ಹಿಂದೆಲ್ಲಾ ದೂರದೂರಿನಲ್ಲಿರುವ ತಮ್ಮ ಸಂಬಂಧಿಕರು, ತಮ್ಮ ಮನೆಯವರೊಂದಿಗೆ ಕೇವಲ ಪತ್ರಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ಅದೇ ದೂರಸಂಪರ್ಕ (Telecommunication) ವ್ಯವಸ್ಥೆ ಬಂದ ನಂತರ ಜಗತ್ತು ತುಂಬಾನೇ ಹತ್ತಿರವಾಗಿದೆ ಅಂತಾನೇ ಹೇಳಬಹುದು. ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್‌ಗಳು, ಉಪಗ್ರಹ ಸಂವಹನಗಳು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳಾಗಿರಲಿ, ಈ ಎಲ್ಲಾ ತಂತ್ರಜ್ಞಾನಗಳು, ದೂರಸಂಪರ್ಕ ವ್ಯವಸ್ಥೆಗಳು ಇಂದು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಡಿಜಿಟಲ್ ಯುಗದಲ್ಲಿ, ದೂರಸಂಪರ್ಕ ವ್ಯವಸ್ಥೆ ಕೇವಲ ಸಂದೇಶಗಳನ್ನು ಕಳುಹಿಸುವುದಕ್ಕೆ ಸೀಮಿತವಾಗಿಲ್ಲ, ಇದು ಶಿಕ್ಷಣ, ವ್ಯವಹಾರ, ಆರೋಗ್ಯ, ಸರ್ಕಾರಿ ಸೇವೆಗಳು ಮತ್ತು ಜಾಗತಿಕ ಸಹಕಾರದ ಅಡಿಪಾಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಸಂವಹನ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರ ಮತ್ತು ದೂರ ಸಂಪರ್ಕ ವ್ಯವಸ್ಥೆಗಳ ಬಗ್ಗೆ ಅರಿವನ್ನು ಮೂಡಿಸಲು ಪ್ರತಿವರ್ಷ ಮೇ 17 ರಂದು ವಿಶ್ವ ದೂರ ಸಂಪರ್ಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ದೂರಸಂಪರ್ಕ ದಿನದ ಇತಿಹಾಸವೇನು?

ಅಂತರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟ (ITU) ಸ್ಥಾಪನೆಯಾದ ಸ್ಮರಣಾರ್ಥವಾಗಿ 1969 ರ ಮೇ 17 ರಂದು ವಿಶ್ವ ದೂರಸಂಪರ್ಕ ದಿನದ ಆಚರಣೆಯನ್ನು ಸ್ಥಾಪಿಸಲಾಯಿತು. 1865 ರ ಮೇ  17 ರಂದು ಪ್ಯಾರಿಸ್‌ನಲ್ಲಿ ನಡೆದ ಸಮಾವೇಶದಲ್ಲಿ ಸಹಿ ಹಾಕುವ ಮೂಲಕ ಅಂತರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟವನ್ನು ರಚಿಸಲಾಯಿತು.  ನಂತರ 1932 ರಲ್ಲಿ ಇದರ ಹೆಸರನ್ನು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಎಂದು ಮರು ನಾಮಕರಣ ಮಾಡಲಾಯಿತು. ನಂತರ 1947 ರಲ್ಲಿ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಯಿತು.

ಇದರ ನಂತರ, 2005 ರಲ್ಲಿ , ವಿಶ್ವ ಶೃಂಗಸಭೆಯ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಸ್ತಾವನೆಯ ಮೇರೆಗೆ, ಮೇ 17 ಅನ್ನು ವಿಶ್ವ ಮಾಹಿತಿ ದಿನವೆಂದು ಘೋಷಿಸಲಾಯಿತು. 2006 ರ ನವೆಂಬರ್ ತಿಂಗಳಲ್ಲಿ  ಟರ್ಕಿಯ ಅಂಟಲ್ಯದಲ್ಲಿ ನಡೆದ ITU ಪ್ಲೆನಿಪೊಟೆನ್ಷಿಯರಿ ಸಮ್ಮೇಳನದಲ್ಲಿ, ಮೇ 17 ಅನ್ನು ವಿಶ್ವ ದೂರಸಂಪರ್ಕ ದಿನ ಮತ್ತು ವಿಶ್ವ ಮಾಹಿತಿ ಸೊಸೈಟಿ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮೇ 15 ರಂದೇ ಅಂತಾರಾಷ್ಟ್ರೀಯ ಕುಟುಂಬ ದಿನ ಆಚರಿಸುವುದು ಏಕೆ?

ವಿಶ್ವ ದೂರಸಂಪರ್ಕ ದಿನದ ಮಹತ್ವವೇನು?

  • ಆರ್ಥಿಕತೆ, ಸಮಾಜ ಮತ್ತು ವೈಯಕ್ತಿಕ ಜೀವನವನ್ನು ರೂಪಿಸುವಲ್ಲಿ ಇಂಟರ್ನೆಟ್‌, ಮೊಬೈಲ್‌ ನೆಟ್‌ವರ್ಕ್‌ ಸೇರಿದಂತೆ ಇತದೆ ಡಿಜಿಟಲ್‌ ತಂತ್ರಜ್ಞಾನಗಳಂತಹ ಸಂವಹನ ಸಾಧನಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
  • ವಿಶ್ವ ದೂರಸಂಪರ್ಕ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ದೂರಸಂಪರ್ಕದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.
  • ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮತ್ತು ಇತರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಬಳಸುವ ಸಾಧ್ಯತೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಪರಸ್ಪರ ಸಂವಹನವನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಬಳಕೆಗೆ ಇದು ಒತ್ತು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟೋ, ಟ್ಯಾಕ್ಸಿ​ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: CNG ದರ ಕೆಜಿಗೆ 1 ರೂ. ಹೆಚ್ಚಳ – Kannada News | CNG Price Hike Again by Centre: One Rupee Increase Shocks Auto and Taxi Drivers

ನವದೆಹಲಿ, ಮೇ 17: ಆಟೋ, ಟ್ಯಾಕ್ಸಿ​ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತೆ CNG ದರ ಏರಿಕೆ ಶಾಕ್ ನೀಡಿದ್ದು, ನೈಸರ್ಗಿಕ ಅನಿಲ(CNG) ಬೆಲೆ ಮತ್ತೆ 1 ರೂಪಾಯಿ ಏರಿಕೆಯಾಗಿದೆ. 2 ದಿನಗಳ ಹಿಂದಷ್ಟೇ ಕೆಜಿ CNG ದರ 2 ರೂಪಾಯಿಗೆ ಏರಿಕೆ ಕಂಡಿತ್ತು. ಆ ಬೆನ್ನಲ್ಲೇ 48 ಗಂಟೆಗಳಲ್ಲಿ 2ನೇ ಬಾರಿಗೆ CNG ದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿ ಸಿಎನ್​​ಜಿ ದರ 80.09 ರೂಪಾಯಿಗಳಿಗೆ ತಲುಪಿದೆ. ಈ ಹಿಂದೆ 2 ರೂ. ಏರಿಕೆಯ ಬಳಿಕ CNG ದರ 77.09 ರೂ.ಗಳಿಂದ 79.09ಕ್ಕೆ ಏರಿಕೆಯಾಗಿತ್ತು.

ಮುಖ್ಯಾಂಶಗಳು

  • ಆಟೋ, ಟ್ಯಾಕ್ಸಿ​ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ
  • ನೈಸರ್ಗಿಕ ಅನಿಲ(CNG) ಬೆಲೆ ಮತ್ತೆ 1 ರೂಪಾಯಿ ಏರಿಕೆ
  • 2 ದಿನಗಳ ಹಿಂದಷ್ಟೇ ಕೆಜಿಗೆ ರೂ. ಏರಿಕೆ ಕಂಡಿದ್ದ CNG ದರ

ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಅಸ್ಥಿರತೆಯಿಂದ ಉಂಟಾದ ಹೆಚ್ಚಿನ ಇನ್‌ಪುಟ್ ವೆಚ್ಚವನ್ನು ಸಮತೋಲನಗೊಳಿಸಲು ಸಿಎನ್‌ಜಿ ದರ ಏರಿಕೆ ಮಾಡಲಾಗಿದೆ. ಆದರೆ, ಜಾಗತಿಕ ಇಂಧನ ಬೆಲೆ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈಗಿನ ದರ ಹೆಚ್ಚಳವು ಅಲ್ಪ ಭಾಗವನ್ನಷ್ಟೇ ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿರೋದಾಗಿ ವರದಿಯಾಗಿದೆ.

ಇದನ್ನೂ ಓದಿ: ದರ ಏರಿಕೆ ಬಿಸಿ​​; ಸರ್ಕಾರದ ಮೊರೆ ಹೋದ ಆಟೋ ಚಾಲಕರು

ಸಿಎನ್​​ಜಿ ದರ ನಗರಗಳಲ್ಲಿ ಕೆಜಿಗೆ ಈಗ ಎಷ್ಟು?

  • ಬೆಂಗಳೂರು- 90 ರೂ.
  • ದೆಹಲಿ- 80.09 ರೂ.
  • ನೋಯ್ಡಾ- 80.09 ರೂ.
  • ಗುರುಗ್ರಾಮ- 84.12 ರೂ.
  • ಮುಂಬೈ- 84 ರೂ.

ಆಟೋ, ಕ್ಯಾಬ್​​ ಚಾಲಕರಿಗೆ ಸಂಕಷ್ಟ

ಸತತವಾಗಿ ಸಿಎನ್​​ಜಿ ದರ ಏರಿಕೆಯ ಪರಿಣಾಮ ಇದನ್ನೇ ನಂಬಿಕೊಂಡಿರುವ ಆಟೋ ಮತ್ತು ಬಹುತೇಕ ಕ್ಯಾಬ್​​ಗಳ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದ ಸಂದರ್ಭದಲ್ಲಿಯೇ ಈ ಬಗ್ಗೆ ಚಾಲಕ ಸಂಘಟನೆಗಳು ಅಸಮಾಧಾನ ಹೊರಹಾಕಿದ್ದವು. ದರ ಹೆಚ್ಚಳದ ಪರಿಣಾಮ ಬಾಡಿಗೆ ದರವನ್ನು ಏರಿಸಲೇ ಬೇಕಾದ ಅನಿವಾರ್ಯತೆ ಉದ್ಭವಿಸಿದೆ ಎಂದು ತಿಳಿಸಿದ್ದವು. ಬೆಂಗಳೂರಿನಲ್ಲಿಯೂ ಆಟೋ ಚಾಲಕ ಸಂಘಟನೆಗಳು ಮೀಟರ್​​ ದರ ಪರಿಷ್ಕೃತಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Venus Transit in Gemini: ಶುಕ್ರ ಮತ್ತು ಗುರುವಿನ ಸಂಯೋಜನೆಯಿಂದ ಅದ್ಭುತ ಪ್ರಯೋಜನ ಇವರಿಗೆ!! – Kannada News | Venus Transit in Gemini: Astrological Impact on Your Life, Career and Health

ಶುಕ್ರ ಮತ್ತು ಗುರುವಿನ ಸಂಯೋಜನೆImage Credit source: Pinterest

ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾದ ​​ಶುಕ್ರನು ಮಿಥುನ ರಾಶಿಯಲ್ಲಿ ಸಂಚರಿಸಲಿದ್ದು ಶನಿ, ಬುಧ, ಮಂಗಳ ಮತ್ತು ಚಂದ್ರನ ಪ್ರಭಾವಕ್ಕೆ ಸಿಕ್ಕುವ ಸಂದರ್ಭಗಳು ಬರಲಿದ್ದು, ಸಂಯೋಜನೆಯು ಭೌತಿಕ ಮತ್ತು ಮಾನಸಿಕ ಸ್ತರಗಳಲ್ಲಿ ಬದಲಾವಣೆಗಳನ್ನು ತರಲಿವೆ.

​ವಿದ್ಯಾಭ್ಯಾಸ:

​ಬುಧನ ತ್ರಿಂಶಾಂಶದಲ್ಲಿ ಶುಕ್ರನಿರುವುದು ವಿದ್ಯಾರ್ಥಿಗಳಿಗೆ ಬಹಳ ಶುಭಕರ. ಸಂಸ್ಕೃತ, ಕನ್ನಡ ಸೇರಿದಂತೆ ಭಾಷಾ ಅಧ್ಯಯನ ಮಾಡುವವರಿಗೆ ಗ್ರಹಣ ಶಕ್ತಿ ಹೆಚ್ಚಲಿದೆ. ಶನಿಯ ದ್ರೇಕ್ಕಾಣವು ಶಿಸ್ತನ್ನು ನೀಡುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಈ ಸಮಯವು ಆಳವಾದ ಅಧ್ಯಯನಕ್ಕೆ ಪೂರಕವಾಗಿದೆ. ವ್ಯಾಕರಣ ಮತ್ತು ತರ್ಕ ಶಾಸ್ತ್ರದಲ್ಲಿ ತೊಡಗಿಸಿಕೊಂಡವರಿಗೆ ಗ್ರಂಥಗಳ ಸೂಕ್ಷ್ಮ ಅರ್ಥಗಳು ಸುಲಭವಾಗಿ ಅರ್ಥವಾಗಲಿವೆ.

ಉದ್ಯೋಗ:

​ಶನಿಯ ದ್ವಾದಶಾಂಶ ಮತ್ತು ದ್ರೇಕ್ಕಾಣದ ಪ್ರಭಾವವು ವೃತ್ತಿ ಜೀವನದಲ್ಲಿ ನಿಧಾನವಾದರೂ ಸ್ಥಿರವಾದ ಪ್ರಗತಿಯನ್ನು ನೀಡುತ್ತದೆ. ಶಾಲಾ-ಕಾಲೇಜು ಅಥವಾ ಗುರುಕುಲಗಳ ಆಡಳಿತ ನಿರ್ವಹಣೆ ಮಾಡುವವರಿಗೆ ವ್ಯವಸ್ಥಿತವಾದ ವೇಳಾಪಟ್ಟಿ ಮತ್ತು ವರದಿಗಳನ್ನು ಸಿದ್ಧಪಡಿಸಲು ಇದು ಸಕಾಲ. ಶುಕ್ರನು ಕೃಷಿಗೂ ಕಾರಕ. ಅಡಿಕೆ ತೋಟ ಅಥವಾ ತೋಟಗಾರಿಕೆಯಲ್ಲಿ ತೊಡಗಿರುವವರಿಗೆ ಶನಿಯ ಪ್ರಭಾವದಿಂದಾಗಿ ದೀರ್ಘಕಾಲಿಕ ಲಾಭದ ಯೋಜನೆಗಳು ಕೈಗೂಡಲಿವೆ. ಭೂಮಿಯ ಫಲವತ್ತತೆ ಹೆಚ್ಚಿಸಲು ಮಾಡುವ ಪ್ರಯೋಗಗಳು ಸಫಲವಾಗುತ್ತವೆ.

ಆರ್ಥಿಕ ಸ್ಥಿತಿ:

​ಚಂದ್ರನ ಹೋರೆಯಲ್ಲಿ ಶುಕ್ರನಿರುವುದರಿಂದ ಆರ್ಥಿಕ ವಿಷಯಗಳಲ್ಲಿ ಚಂಚಲತೆ ಇರುತ್ತದೆ. ಆದಾಯ ಬಂದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕುಟುಂಬದ ಅಗತ್ಯಗಳಿಗಾಗಿ ಅಥವಾ ಗೃಹೋಪಯೋಗಿ ವಸ್ತುಗಳಿಗಾಗಿ ಹಣ ವ್ಯಯವಾಗಲಿದೆ. ಮಂಗಳನ ನವಾಂಶವು ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಜಾಗರೂಕತೆ ಇರಲಿ ಎಂದು ಸೂಚಿಸುತ್ತದೆ. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಯಾವುದೇ ಆಸ್ತಿ ಖರೀದಿ ಮಾಡಬೇಡಿ.

ವಿವಾಹ ಮತ್ತು ಕುಟುಂಬ:

ಶುಕ್ರನು ವೈವಾಹಿಕ ಜೀವನದ ಕಾರಕ. ಕುಜನ ನವಾಂಶದಲ್ಲಿರುವುದರಿಂದ ಸಂಬಂಧಗಳಲ್ಲಿ ಸ್ವಲ್ಪ ಖಾರ ಇರಬಹುದು. ಸಣ್ಣ ವಿಷಯಗಳಿಗೆ ಪತಿ-ಪತ್ನಿಯರ ನಡುವೆ ವಾದ ಉಂಟಾಗಬಹುದು. ಶನಿಯ ಪ್ರಭಾವವಿರುವುದರಿಂದ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಮನೆಯಲ್ಲಿ ಹಿರಿಯ ಸ್ತ್ರೀಯರ ಬಗ್ಗೆ ವಿಶೇಷವಾಗಿ ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸುವುದು ಮುಖ್ಯ. ಚಂದ್ರನ ಹೋರೆಯು ತಾಯಿಯ ಭಾವನೆಗಳಿಗೆ ಬೆಲೆ ನೀಡಲು ಸೂಚಿಸುತ್ತದೆ.

ಆರೋಗ್ಯ:

ಕುಜನ ನವಾಂಶವು ಶರೀರದಲ್ಲಿ ಪಿತ್ತ ಅಥವಾ ಉಷ್ಣದ ಪ್ರಮಾಣವನ್ನು ಹೆಚ್ಚಿಸಬಹುದು. ಬುಧನ ತ್ರಿಂಶಾಂಶವು ಮೆದುಳಿಗೆ ಹೆಚ್ಚಿನ ಕೆಲಸ ನೀಡುತ್ತದೆ, ಇದರಿಂದ ಮಾನಸಿಕ ದಣಿವು ಉಂಟಾಗಬಹುದು. ಪ್ರಾಣಾಯಾಮ ಮತ್ತು ಯೋಗದ ಮೂಲಕ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

​ರಾಶಿಗಳ ವಿಂಗಡನೆ ಮತ್ತು ಫಲದ ತೀವ್ರತೆ

ಉತ್ತಮ ಫಲವನ್ನು ವೃಷಭ, ಮಿಥುನ, ಕನ್ಯಾ, ತುಲಾ, ಕುಂಭ ರಾಶಿಗಳು ನೀಡಲಿದ್ದು ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಗೌರವ ಮತ್ತು ಧನಲಾಭ ದೊರೆಯಲಿದೆ. ಮಿಶ್ರ ಫಲವು ಮೇಷ, ಸಿಂಹ, ಧನು, ಮಕರ ರಾಶಿಯವರಿಗೆ ಲಭ್ಯವಾಗಲಿದ್ದು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆತುರ ಬೇಡ. ಕರ್ಕಾಟಕ, ವೃಶ್ಚಿಕ, ಮೀನ ರಾಶಿಯವರಿಗೆ ಆರೋಗ್ಯ ಮತ್ತು ಖರ್ಚಿನ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಸಾಮಾನ್ಯ ಫಲವನ್ನು ನಿರೀಕ್ಷಿಸಬಹುದು.

ಒಟ್ಟಾರೆಯಾಗಿ ಈ ತಿಂಗಳು ಶುಕ್ರನು ನಿಮ್ಮಲ್ಲಿ ಬೌದ್ಧಿಕ ಚತುರತೆ ಮತ್ತು ಕೆಲಸದ ಜವಾಬ್ದಾರಿ ಎರಡನ್ನೂ ಹೆಚ್ಚಿಸಲಿದ್ದಾನೆ. ಶನಿಯ ಪ್ರಭಾವವು ನಿಮ್ಮನ್ನು ಹೆಚ್ಚು ಪ್ರಬುದ್ಧರನ್ನಾಗಿ ಮಾಡಿದರೆ, ಬುಧನ ಪ್ರಭಾವವು ನಿಮ್ಮ ಸಂವಹನ ಕಲೆಯನ್ನು ವೃದ್ಧಿಸಲಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಯ್ ದೇವಗನ್​ಗಿಂತ ಅಕ್ಷಯ್ ಕುಮಾರ್ ಸಂಬಳ ಹೆಚ್ಚು? ಸ್ಪಷ್ಟನೆ ನೀಡಿದ ಚಿತ್ರತಂಡ – Kannada News | Akshay Kumar Salary Rohit shetty Picturez denies rumors of massive fee for Golmaal 5

ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಫ್ರಾಂಚೈಸಿ ‘ಗೋಲ್‌ಮಾಲ್’ 5ನೇ ಭಾಗಕ್ಕೆ (Golmaal 5) ಅಕ್ಷಯ್ ಕುಮಾರ್ ಸೇರ್ಪಡೆಯಾಗಿರುವುದು ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ, ಈ ಚಿತ್ರದಲ್ಲಿ ನಟಿಸಲು ಅಕ್ಷಯ್ ಕುಮಾರ್ (Akshay Kumar) ಅವರು ಅಜಯ್ ದೇವಗನ್ ಅವರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದವು. ಸದ್ಯ ಈ ಎಲ್ಲಾ ಲೆಕ್ಕಾಚಾರದ ಸುದ್ದಿಗಳಿಗೆ ಚಿತ್ರದ ನಿರ್ಮಾಣ ಸಂಸ್ಥೆಯಾದ ‘ರೋಹಿತ್ ಶೆಟ್ಟಿ ಪಿಕ್ಚರ್ಸ್’ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದೆ.

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಅವರು ಕೇವಲ 18ರಿಂದ 22ದಿನಗಳ ಚಿತ್ರೀಕರಣಕ್ಕಾಗಿ ಬರೋಬ್ಬರಿ 35ರಿಂದ 40 ಕೋಟಿ ರೂಪಾಯಿಗಳ ಭಾರಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ಇದು ಈ ಚಿತ್ರಕ್ಕಾಗಿ ನಟ ಅಜಯ್ ದೇವಗನ್ ಅವರು ಪಡೆದಿರುವ ಸಂಭಾವನೆಗಿಂತಲೂ ಹೆಚ್ಚು ಎಂದು ವರದಿಯಾಗಿತ್ತು.

ಈ ವದಂತಿಗಳು ವ್ಯಾಪಕವಾಗಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ‘ರೋಹಿತ್ ಶೆಟ್ಟಿ ಪಿಕ್ಚರ್ಸ್’ ಸಂಸ್ಥೆಯ ವಕ್ತಾರರು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಗೋಲ್‌ಮಾಲ್ 5 ಚಿತ್ರದ ವಾಣಿಜ್ಯ ವ್ಯವಹಾರಗಳು ಮತ್ತು ವಿಶೇಷವಾಗಿ ಅಕ್ಷಯ್ ಕುಮಾರ್ ಅವರ ಸಂಭಾವನೆಗೆ ಸಂಬಂಧಿಸಿದಂತೆ ಹಲವು ಕಾಲ್ಪನಿಕ ವರದಿಗಳು ಹರಿದಾಡುತ್ತಿವೆ. ಈ ಎಲ್ಲಾ ಹಕ್ಕುಗಳು ಅಥವಾ ವರದಿಗಳು ಸಂಪೂರ್ಣವಾಗಿ ಆಧಾರರಹಿತ, ನಿಖರವಲ್ಲದ ಮತ್ತು ಕೇವಲ ಊಹಾಪೋಹಗಳಿಂದ ಕೂಡಿವೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಸಿನಿಮಾದ ವಾಣಿಜ್ಯ ಒಪ್ಪಂದಗಳು ಅತ್ಯಂತ ಗೌಪ್ಯವಾಗಿದ್ದು, ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಮುಖ ವ್ಯಕ್ತಿಗಳು ಅಥವಾ ಸಂಸ್ಥೆಗಳು ಇದನ್ನು ಎಂದಿಗೂ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ. ಸದ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಅಂಕಿಅಂಶಗಳು ಅಥವಾ ಹಣಕಾಸಿನ ವಿವರಗಳು ಕೇವಲ ವದಂತಿಗಳಾಗಿವೆ. ನಾವು ನಿಮ್ಮೆಲ್ಲರ ಮೇಲಿನ ಅಪಾರ ಪ್ರೀತಿಯಿಂದ ಈ ಸಿನಿಮಾವನ್ನು ಮಾಡುತ್ತಿದ್ದೇವೆ. ಈ ನಮ್ಮ ಪ್ರಯಾಣಕ್ಕೆ ನಿಮ್ಮ ಬೆಂಬಲವಷ್ಟೇ ನಮಗೆ ಮುಖ್ಯ’ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ನಿರ್ದೇಶಕ ರೋಹಿತ್ ಶೆಟ್ಟಿ ಅವರ ಅತ್ಯಂತ ಯಶಸ್ವಿ ಕಾಮಿಡಿ ಸರಣಿ ಇದಾಗಿದ್ದು, ಪ್ರೇಕ್ಷಕರು ‘ಗೋಲ್‌ಮಾಲ್ 5’ ಅಪ್‌ಡೇಟ್‌ಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಅಜಯ್ ದೇವಗನ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ಶರ್ಮನ್ ಜೋಶಿ ಮತ್ತು ಕುನಾಲ್ ಖೇಮು ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ರೋಹಿತ್ ಶೆಟ್ಟಿ ಅವರು ತಮ್ಮ 52ನೇ ಜನ್ಮದಿನದ ಸಂದರ್ಭದಲ್ಲಿ ‘ಗೋಲ್‌ಮಾಲ್ 5’ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಇದೇ ವೇಳೆ ಚಿತ್ರದ ಒಂದು ಮೇಕಿಂಗ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ಅವರ ಬೋಳು ತಲೆ ಲುಕ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ ಆಗಿತ್ತು. ಅದರಿಂದಾಗಿ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟು ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ – Kannada News | PM Modi Netherlands Visit: India Gains Strategic Partnership, Investment and Tech

ನರೇಂದ್ರ ಮೋದಿ ಹಾಗೂ ನೆದರ್‌ಲ್ಯಾಂಡ್ಸ್ ಪ್ರಧಾನಿ ರೊಬ್ ಜೆಟ್ಟನ್

ಆಂಸ್ಟರ್‌ಡ್ಯಾಮ್, ಮೇ 17: ದ್ವಿಪಕ್ಷೀಯ ಸಂಬಂಧವನ್ನು ತಂತ್ರಾತ್ಮಕ ಸಹಭಾಗಿತ್ವ ಮಟ್ಟಕ್ಕೆ ಏರಿಸಲು ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಿರ್ಧರಿಸಿದ್ದು, ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ನೆದರ್‌ಲ್ಯಾಂಡ್ಸ್ ಪ್ರಧಾನಿ ರೊಬ್ ಜೆಟ್ಟನ್ ನಡುವೆ ನಡೆದ ವಿಸ್ತೃತ ಮಾತುಕತೆ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನೆದರ್‌ಲ್ಯಾಂಡ್ಸ್ ಯುರೋಪಿನಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದು, 2024-25ರಲ್ಲಿ ಉಭಯ ರಾಷ್ಟ್ರಗಳ ವ್ಯಾಪಾರ ಮೊತ್ತ 27.8 ಬಿಲಿಯನ್ ಡಾಲರ್ ತಲುಪಿದೆ. ಜೊತೆಗೆ, 55.6 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯಿಂದ ನೆದರ್‌ಲ್ಯಾಂಡ್ಸ್ ಭಾರತದಲ್ಲಿ ನಾಲ್ಕನೇ ಅತಿದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೆದರ್‌ಲ್ಯಾಂಡ್ಸ್ ಪ್ರವಾಸದಿಂದ ಭಾರತಕ್ಕೆ ಹಲವು ಲಾಭಗಳಾಗಿದ್ದು, ಚೋಳರ ಕಾಲದ ತಾಮ್ರ ಫಲಕಗಳ ಮರುಹಸ್ತಾಂತರ ಸೇರಿ ಹೂಡಿಕೆ ಮತ್ತು ತಂತ್ರಜ್ಞಾನ ಕ್ಷೇತ್ರ ಸಂಬಂಧ ಸಹಕಾರದಂತಹ ಮಾತುಕತೆಗಳು ನಡೆದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಭಾರತೀಯ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ

ಭಾರತಕ್ಕಾದ ಲಾಭಗಳೇನು?

ಭಾರತ-ನೆದರ್‌ಲ್ಯಾಂಡ್ಸ್ ತಂತ್ರಾತ್ಮಕ ಸಹಭಾಗಿತ್ವ

  • ಹೆಚ್ಚಿನ ಹೂಡಿಕೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ
  • ಶುದ್ಧ ನೀರು, ಸುರಕ್ಷಿತ ಆಹಾರ, ಹಸಿರು ನಗರಗಳು ಮತ್ತು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ
  • ಭಾರತೀಯ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರಿಗೆ ಹೆಚ್ಚುವರಿ ಅವಕಾಶಗಳು
  • ರಕ್ಷಣಾ, ಸಾಗರ, ಸೈಬರ್ ಮತ್ತು ಸರಕು ಸರಪಳಿ ಸಹಕಾರದಿಂದ ಭದ್ರತೆ ಹಾಗೂ ಆರ್ಥಿಕ ಸ್ಥಿರತೆ ಬಲಪಡಿಕೆ

ಚೋಳರ ಕಾಲದ ತಾಮ್ರ ಫಲಕಗಳ ಮರುಹಸ್ತಾಂತರ

  • ಅಮೂಲ್ಯ ತಾಮ್ರ ಫಲಕಗಳು ಭಾರತಕ್ಕೆ ಮರಳಿ ಹಸ್ತಾಂತರದಿಂದ ಭಾರತೀಯ ಪಂಡಿತರು, ಸಂಗ್ರಹಾಲಯಗಳು ಮತ್ತು ಸಾರ್ವಜನಿಕರಿಗೆ ಪರಂಪರೆ ಅಧ್ಯಯನಕ್ಕೆ ಅವಕಾಶ

ಭಾರತ-ನೆದರ್‌ಲ್ಯಾಂಡ್ಸ್ ವಲಸೆ ಮತ್ತು ಸಂಚಾರ ಸಹಕಾರ

  • ನೆದರ್‌ಲ್ಯಾಂಡ್ಸ್‌ಗೆ ವೇಗವಾದ ಮತ್ತು ಸುಲಭ ವೀಸಾ ವ್ಯವಸ್ಥೆ
  • ಭಾರತೀಯರಿಗೆ ಅಧ್ಯಯನ ಮತ್ತು ಉದ್ಯೋಗಕ್ಕೆ ದೀರ್ಘಾವಧಿ ವೀಸಾ ಅವಕಾಶ
  • ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳು
  • ಭಾರತೀಯ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು

ಟಾಟಾ ಎಲೆಕ್ಟ್ರಾನಿಕ್ಸ್​​ ಮತ್ತು ASML ಸಹಕಾರ

  • ಗುಜರಾತಿನ ಧೋಲೇರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾಪನೆಗೆ ಮಹತ್ವದ ಹೆಜ್ಜೆ
  • ಭಾರತದಲ್ಲಿ ಸಂಪೂರ್ಣ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ನಿರ್ಮಾಣಕ್ಕೆ ಉತ್ತೇಜನ
  • ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ಗೆ ಬೆಂಬಲ

ಪ್ರಮುಖ ಖನಿಜಗಳ ಕ್ಷೇತ್ರದಲ್ಲಿ ಸಹಕಾರ

  • ಪ್ರಮುಖ ಖನಿಜಗಳ ವಿಶ್ವಾಸಾರ್ಹ ಪೂರೈಕೆ
  • ಸುಧಾರಿತ ತಂತ್ರಜ್ಞಾನ, ಹೂಡಿಕೆ ಮತ್ತು ಕೌಶಲ್ಯಯುತ ಉದ್ಯೋಗಗಳು
  • ಭಾರತದ ಗಣಿಗಾರಿಕೆ ಸಾಮರ್ಥ್ಯ ವೃದ್ಧಿ

ಗುಜರಾತಿನ ಕಲ್ಪಸರ್ ಯೋಜನೆಗೆ ತಾಂತ್ರಿಕ ಸಹಕಾರ

  • ಮಹತ್ತರ ಜಲ ಮತ್ತು ಕರಾವಳಿ ಇಂಜಿನಿಯರಿಂಗ್‌ನಲ್ಲಿ ಡಚ್ ಪರಿಣತಿ
  • ಕುಡಿಯುವ ನೀರು, ನೀರಾವರಿ ಮತ್ತು ಕೈಗಾರಿಕೆಗಳಿಗೆ ತಾಜಾ ನೀರಿನ ಸಂಗ್ರಹಣಾ ಯೋಜನೆ, ಜನರ ಜೀವನಮಟ್ಟ ಸುಧಾರಣೆ

ಹಸಿರು ಹೈಡ್ರೋಜನ್ ರಫ್ತು ಮಾರುಕಟ್ಟೆ ವಿಸ್ತರಣೆ

  • ಭಾರತದ ಹಸಿರು ಹೈಡ್ರೋಜನ್‌ಗೆ ಯುರೋಪಿನಲ್ಲಿ ರಫ್ತು ಮಾರುಕಟ್ಟೆ ವಿಸ್ತರಣೆ
  • ಎಲೆಕ್ಟ್ರೋಲೈಸರ್, ಸಂಗ್ರಹಣೆ ಮತ್ತು ಬಂದರು ಮೂಲಸೌಕರ್ಯಗಳಿಗೆ ಹೂಡಿಕೆ
  • ಉನ್ನತ ಕೌಶಲ್ಯದ ಉದ್ಯೋಗಗಳು ಮತ್ತು ಜಾಗತಿಕ ಹೈಡ್ರೋಜನ್ ಹಬ್ ಆಗಿ ಭಾರತದ ಸ್ಥಾನ ಬಲಪಡಿಕೆ

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಉತ್ತೇಜನ

  • ಶುದ್ಧ ಇಂಧನ ವಿಸ್ತರಣೆಗೆ ತಂತ್ರಜ್ಞಾನ ಮತ್ತು ಹಣಕಾಸು ಸಹಕಾರ
  • ಹಸಿರು ಇಂಧನ ಕ್ಷೇತ್ರದಲ್ಲಿ ಉದ್ಯಮ, ಸಂಶೋಧಕರು ಮತ್ತು ಕಾರ್ಮಿಕರಿಗೆ ಹೊಸ ಅವಕಾಶಗಳು

NITI ಆಯೋಗ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಇಂಧನ ಸಹಕಾರ

  • ಸಂಯುಕ್ತ ಯೋಜನೆಗಳು ಮತ್ತು ಕೈಗಾರಿಕಾ ಸಹಭಾಗಿತ್ವ
  • ಶುದ್ಧ ಮತ್ತು ವಿಶ್ವಾಸಾರ್ಹ ಇಂಧನ ಮೂಲಗಳಿಂದ ಇಂಧನ ಭದ್ರತೆ
  • ಹಸಿರು ಉದ್ಯೋಗಗಳು, ಆವಿಷ್ಕಾರ ಮತ್ತು ಹೂಡಿಕೆಗಳಿಂದ ಆರ್ಥಿಕ ಅವಕಾಶಗಳು

ಪಶ್ಚಿಮ ತ್ರಿಪುರಾದಲ್ಲಿ ಇಂಡೋ-ಡಚ್ ಹೂಗಾರಿಕೆ ಕೇಂದ್ರ

  • ರೈತರಿಗೆ ಹೆಚ್ಚಿನ ಮೌಲ್ಯದ ಹೂಗಾರಿಕೆ ಚಟುವಟಿಕೆಗಳಲ್ಲಿ ಅವಕಾಶ
  • ಗುಣಮಟ್ಟ, ಸಂಗ್ರಹಣೆ ಮತ್ತು ಮಾರುಕಟ್ಟೆ ಪ್ರವೇಶ ಸುಧಾರಣೆ
  • ರೈತರ ಆದಾಯ ಹೆಚ್ಚಳ

ಬೆಂಗಳೂರಲ್ಲಿ ಡೈರಿ ತರಬೇತಿ ಕೇಂದ್ರ

  • ಉತ್ತಮ ಡೈರಿ ತಂತ್ರಜ್ಞಾನದಿಂದ ರೈತರ ಉತ್ಪಾದಕತೆ ಮತ್ತು ಆದಾಯ ಹೆಚ್ಚಳ
  • ಪಶುಸಂಗೋಪನಾ ಕ್ಷೇತ್ರಕ್ಕೆ ತಾಂತ್ರಿಕ ಕೌಶಲ್ಯ ಬಲಪಡಿಕೆ

ಪಶುಸಂಗೋಪನೆ ಮತ್ತು ಡೈರಿಂಗ್ ಸಹಕಾರ

  • ಉತ್ತಮ ಡೈರಿ ಉತ್ಪಾದನೆ ಮತ್ತು ಗುಣಮಟ್ಟ
  • ಭಾರತೀಯ ಪಶುವೈದ್ಯರು ಮತ್ತು ಡೈರಿ ತಜ್ಞರಿಗೆ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ
  • ಪಶು ಆರೋಗ್ಯ ಮತ್ತು ರೋಗ ನಿಯಂತ್ರಣ ಬಲಪಡಿಸುವಿಕೆ

ಆರೋಗ್ಯ ಕ್ಷೇತ್ರದಲ್ಲಿ ಸಹಕಾರ

  • ಸಾರ್ವಜನಿಕ ಆರೋಗ್ಯ ಸಂಶೋಧನೆ ಮತ್ತು ನವೀನತೆ ಬಲಪಡಿಸುವಿಕೆ
  • ವೈಜ್ಞಾನಿಕ ಜ್ಞಾನ ಮತ್ತು ಉತ್ತಮ ಪದ್ಧತಿಗಳ ವಿನಿಮಯ
  • ಭವಿಷ್ಯದ ಆರೋಗ್ಯ ಸವಾಲುಗಳಿಗೆ ಸಿದ್ಧತೆ

ಕಸ್ಟಮ್ಸ್ ಪರಸ್ಪರ ಆಡಳಿತ ಸಹಾಯ ಒಪ್ಪಂದ

  • ದ್ವಿಪಕ್ಷೀಯ ವ್ಯಾಪಾರ ಸುಗಮ ಮತ್ತು ಸುರಕ್ಷಿತ ಸಾಗಣೆ
  • ಆದಾಯ ರಕ್ಷಣೆ ಮತ್ತು ವ್ಯಾಪಾರಿಗಳಿಗೆ ನ್ಯಾಯ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ

  • ಭಾರತೀಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಡಚ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ/ಬೋಧನೆ ಅವಕಾಶ
  • ಜಂಟಿ ಮತ್ತು ಡ್ಯುಯಲ್ ಪ್ರೋಗ್ರಾಂಗಳಿಂದ ಉತ್ತಮ ಪದವಿ ಮತ್ತು ಉದ್ಯೋಗ ಅವಕಾಶ
  • ಸಂಯುಕ್ತ ಸಂಶೋಧನಾ ಯೋಜನೆಗಳಿಂದ ಉತ್ತಮ ಸಂಶೋಧನಾ ಫಲಿತಾಂಶಗಳು
  • ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜನ

ನಳಂದಾ ಮತ್ತು ಗ್ರೊನಿಂಗೆನ್ ವಿಶ್ವವಿದ್ಯಾಲಯಗಳ ನಡುವೆ ಸಹಕಾರ

  • ಭಾರತೀಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಜಾಗತಿಕ ಅನುಭವ
  • ಉತ್ತಮ ಗುಣಮಟ್ಟದ ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಪ್ರಕಟಣೆಗಳು
  • ಜಾಗತಿಕ ನೆಟ್‌ವರ್ಕ್ ಮತ್ತು ಸಹಭಾಗಿತ್ವ ವಿಸ್ತರಣೆ

ಲೈಡನ್ ಯೂನಿವರ್ಸಿಟಿ ಲೈಬ್ರರಿಸ್ ಮತ್ತು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡುವೆ ಸಹಕಾರ

Source link