Category Archives: Blog

Your blog category

ಗುರುವಿನ‌ ಸಂಚಾರದಿಂದ ಈ ರಾಶಿಗಳಿಗೆ ಊಹಿಸಲಾಗದ ಲಾಭ!

​ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ಸ್ಥಾನವು ಅತ್ಯಂತ ಮಹತ್ವದ್ದು. ಗುರುವು ಜ್ಞಾನ, ಸಂತಾನ ಮತ್ತು ಸಂಪತ್ತಿನ ಕಾರಕ. ಪ್ರಸ್ತುತ ಗುರುವು ಬುಧನ ರಾಶಿಯಾದ ಮಿಥುನ ರಾಶಿಯಲ್ಲಿ ಇದ್ದು, ಶನಿಯ ದ್ರೇಕ್ಕಾಣ, ಚಂದ್ರನ ಹೋರೆ, ಬುಧನ ನವಾಂಶ ಹಾಗೂ ಶುಕ್ರನ ದ್ವಾದಶಾಂಶ ಮತ್ತು ತ್ರಿಂಶಾಂಶಗಳಲ್ಲಿ ಸ್ಥಿತನಾಗಿರುವುದು ಒಂದು ವಿಶಿಷ್ಟ ಯೋಗವಾಗಿದೆ. ಈ ಸೂಕ್ಷ್ಮ ವಿಭಾಗೀಯ ಸ್ಥಿತಿಗಳು ವ್ಯಕ್ತಿಯ ಜೀವನದ ಮೇಲೆ ವೈವಿಧ್ಯಮಯ ಪ್ರಭಾವಗಳನ್ನು ಬೀರುತ್ತವೆ.

​ಗುರುವಿನ ಸ್ಥಿತಿ:

ಗುರುವು ಮಿಥುನ ರಾಶಿಯಲ್ಲಿದ್ದಾಗ ಸಾಮಾನ್ಯವಾಗಿ ಬೌದ್ಧಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಇಲ್ಲಿ ಗುರುವು ಶನಿಯ ದ್ರೇಕ್ಕಾಣದಲ್ಲ ಇರುವುದರಿಂದ ಕಠಿಣ ಪರಿಶ್ರಮ ಮತ್ತು ಶಿಸ್ತಿನ ನಂತರವೇ ಯಶಸ್ಸು ಲಭಿಸುತ್ತದೆ. ಚಂದ್ರನ ಹೋರೆಯಲ್ಲಿರುವುದು ಮಾನಸಿಕ ಶಾಂತಿ ಮತ್ತು ಸೃಜನಶೀಲತೆಯನ್ನು ನೀಡಿದರೆ, ಬುಧನ ನವಾಂಶವು ವ್ಯವಹಾರ ಜ್ಞಾನವನ್ನು ಚುರುಕುಗೊಳಿಸುತ್ತದೆ. ವಿಶೇಷವಾಗಿ ಶುಕ್ರನ ದ್ವಾದಶಾಂಶ ಮತ್ತು ತ್ರಿಂಶಾಂಶಗಳಲ್ಲಿ ಗುರು ಇರುವುದು ಲೌಕಿಕ ಸುಖ, ಐಷಾರಾಮಿ ಜೀವನ ಮತ್ತು ಕಲಾತ್ಮಕ ಹವ್ಯಾಸಗಳ ಮೂಲಕ ಲಾಭವನ್ನು ಸೂಚಿಸುತ್ತದೆ.

ವಿವಿಧ ರಾಶಿಗಳಿಗೆ ಗುರು ದಶೆಯ ಫಲಗಳು:

ಈ ವಿಶಿಷ್ಟ ಸ್ಥಿತಿಯ ಗುರು ದಶೆಯು ಚಾಲ್ತಿಯಲ್ಲಿದ್ದಾಗ, ಆಯಾ ರಾಶಿಗಳಿಗೆ ಈ ಕೆಳಗಿನ ಫಲಗಳು ದೊರೆಯಲಿವೆ. ಮಿಥುನ, ತುಲಾ, ಕುಂಭಗಳು ​ವಾಯು ತತ್ವದ ರಾಶಿಯಾಗಿದ್ದು, ಈ ರಾಶಿಯವರಿಗೆ ಗುರು ದಶೆಯು ಅತ್ಯಂತ ಲಾಭದಾಯಕ. ಸಂವಹನ ಕಲೆ ಸಿದ್ಧಿಸಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಹೊಸ ಒಪ್ಪಂದಗಳು ಕೈಗೂಡಲಿವೆ. ವಿಶೇಷವಾಗಿ ಲೇಖಕರು, ಮಾಧ್ಯಮದವರು ಮತ್ತು ಕಲಾವಿದರಿಗೆ ಇದು ಸುವರ್ಣ ಕಾಲ.

ಮೇಷ, ಸಿಂಹ, ಧನು​ಗಳಯ ಅಗ್ನಿ ತತ್ವ ರಾಶಿಯಾಗಿದ್ದು ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ದೂರ ಪ್ರಯಾಣದಿಂದ ಲಾಭವಾಗಲಿದ್ದು, ಉನ್ನತ ಶಿಕ್ಷಣದಲ್ಲಿ ಪ್ರಗತಿ ಕಂಡುಬರಲಿದೆ. ಶುಕ್ರನ ಪ್ರಭಾವದಿಂದ ಕೌಟುಂಬಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ.

ವೃಷಭ, ಕನ್ಯಾ, ಮಕರಗಳು ​ಭೂ ತತ್ವ ರಾಶಿಯಾಗಿದ್ದು ಇವರು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಾರೆ. ಶನಿಯ ದ್ರೇಕ್ಕಾಣದ ಪ್ರಭಾವದಿಂದಾಗಿ ಕೆಲಸದಲ್ಲಿ ಆರಂಭದಲ್ಲಿ ವಿಳಂಬವಾದರೂ, ಅಂತಿಮವಾಗಿ ಸ್ಥಿರವಾದ ಆದಾಯ ಲಭಿಸುತ್ತದೆ. ಆಸ್ತಿ ಖರೀದಿ ಅಥವಾ ಹೂಡಿಕೆಗೆ ಇದು ಪೂರಕ ಸಮಯ.

ಕರ್ಕಾಟಕ, ವೃಶ್ಚಿಕ, ಮೀನಗಳು ​ಜಲ ತತ್ವ ರಾಶಿಯಾಗಿದ್ದು ಇವರಿಗೆ ಮಾನಸಿಕ ನೆಮ್ಮದಿ ಮುಖ್ಯವಾಗಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಹಿರಿಯರ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ರಿಯಲ್ ಎಸ್ಟೇಟ್ ಅಥವಾ ಕೃಷಿ ಕ್ಷೇತ್ರದಲ್ಲಿ ಲಾಭ ನಿರೀಕ್ಷಿಸಬಹುದು.

​ಲಾಭ ಕಾರ್ಯ :

ಗುರುವು ಈ ಸ್ಥಿತಿಯಲ್ಲಿರುವಾಗ ಈ ಕೆಳಗಿನ ಕಾರ್ಯಗಳು ವಿಶೇಷ ಯಶಸ್ಸನ್ನು ನೀಡುತ್ತವೆ. ಬೋಧನೆ, ತರಬೇತಿ ಕೇಂದ್ರಗಳು ಮತ್ತು ಕಾನೂನು ಸಲಹಾ ಕೇಂದ್ರಗಳನ್ನು ಆರಂಭಿಸುವುದು ಲಾಭದಾಯಕ.

​ಶುಕ್ರನ ಅಂಶವಿರುವುದರಿಂದ ಫ್ಯಾಷನ್ ಡಿಸೈನಿಂಗ್, ಆಭರಣಗಳ ವ್ಯಾಪಾರ ಅಥವಾ ಅಲಂಕಾರಿಕ ವಸ್ತುಗಳ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ಅಭಿವೃದ್ಧಿ ತರಲಿದೆ.

​ಸಾಫ್ಟ್‌ವೇರ್ ಅಭಿವೃದ್ಧಿ, ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಬರವಣಿಗೆಯಂತಹ ಕ್ಷೇತ್ರಗಳು ಉತ್ತಮ ಫಲ ನೀಡಲಿವೆ.

ಮಿಥುನ ರಾಶಿಯ ಗುರುವು ವಿವಿಧ ವರ್ಗಗಳಲ್ಲಿ ಶನಿ, ಬುಧ ಮತ್ತು ಶುಕ್ರನ ಪ್ರಭಾವಕ್ಕೆ ಒಳಗಾಗಿರುವುದರಿಂದ, ಈ ದಶೆಯು ಕೇವಲ ಜ್ಞಾನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಮತ್ತು ಲೌಕಿಕ ಬೆಳವಣಿಗೆಗೂ ದಾರಿಯಾಗುತ್ತದೆ. ಶ್ರದ್ಧೆಯಿಂದ ಕೆಲಸ ಮಾಡುವವರಿಗೆ ಮತ್ತು ನೈತಿಕ ಹಾದಿಯಲ್ಲಿ ನಡೆಯುವವರಿಗೆ ಈ ಕಾಲವು ಅತ್ಯಂತ ಫಲಪ್ರದವಾಗಲಿದೆ. ಶುಭ ಫಲಗಳ ವೃದ್ಧಿಗಾಗಿ ಗುರುವಾರ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದು ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಉತ್ತಮ.

– ಲೋಹಿತ ಹೆಬ್ಬಾರ್

Source link

IPL 2026: ಇಂದಿನ  ಪಂದ್ಯಕ್ಕೂ RCB ತಂಡದ ಸ್ಟಾರ್ ಆಟಗಾರ ಅಲಭ್ಯ!

Source link

Vasthu Shastra: ಮನೆ ಸಮೀಪ ನುಗ್ಗೆ ಮರ ಯಾಕೆ ಇರಬಾರದು? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Why You Should Not Plant a Drumstick Tree Close to Your House: A Comprehensive Guide

ಶಾಸ್ತ್ರೀಯ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ , ನುಗ್ಗೆ ಮರವನ್ನು ಮನೆಯ ಹತ್ತಿರ, ವಿಶೇಷವಾಗಿ ಆಗ್ನೇಯ, ಈಶಾನ್ಯ, ವಾಯುವ್ಯ, ನೈರುತ್ಯ ದಿಕ್ಕುಗಳಲ್ಲಿ ಬೆಳೆಸುವುದು ಅಷ್ಟು ಶುಭಕರವಲ್ಲ, ಬದಲಿಗೆ ಅಶುಭ ಎಂದು ಶಾಸ್ತ್ರಗಳು ಹೇಳುತ್ತವೆ. ವಾಸ್ತು ಶಾಸ್ತ್ರದ ಪ್ರಕಾರವೂ ಇದು ಮನೆಯ ಅಂಗಳದಲ್ಲಿ ಅಥವಾ ಯಾವುದೇ ಪ್ರಮುಖ ದಿಕ್ಕುಗಳಲ್ಲಿ ಇರುವುದು ಅಷ್ಟೊಂದು ಉತ್ತಮವಲ್ಲ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ನಂಬಿಕೆಗಳ ಪ್ರಕಾರ, ನುಗ್ಗೆ ಮರವು ಕೆಲವು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಅಕಾಲಿಕ ಮರಣ ಹೊಂದಿದವರು, ರೋಗರುಜಿನಗಳಿಂದ ಮೃತರಾದವರ ಆತ್ಮಗಳು ಇದರ ಹತ್ತಿರ ವಾಸಿಸುತ್ತವೆ ಎಂಬ ನಂಬಿಕೆಯಿದೆ. ಇದು ಗಂಡ-ಹೆಂಡತಿಯರ ನಡುವೆ ಕೋಪ, ಮನಸ್ತಾಪಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಆರೋಗ್ಯದ ಮೇಲೂ ಇದರ ಪ್ರಭಾವ ಬೀರಬಹುದು. ಜ್ಯೋತಿಷ್ಯದ ಪ್ರಕಾರ, ನುಗ್ಗೆ ಮರದ ಮೇಲೆ ರಾಹು ಮತ್ತು ಕೇತುಗಳ ಅಂಶ ಹೆಚ್ಚಾಗಿರುತ್ತದೆ. ಗ್ರಹ ದೋಷಗಳಿಗೆ ಕಾರಣವಾಗಬಹುದಾದ ಈ ಗುಣಲಕ್ಷಣಗಳಿಂದಾಗಿ, ಇದನ್ನು ಆತ್ಮಗಳು ವಾಸಿಸುವ ಮರ ಎಂದೂ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ವೈಜ್ಞಾನಿಕ ಕಾರಣ:

ನುಗ್ಗೆ ಮರವು ಉಷ್ಣಾಂಶದ ಮರವಾಗಿದೆ. ಇದರ ಕಾಂಡ ತೆಳುವಾಗಿರುವುದರಿಂದ, ಮಕ್ಕಳು ಅಥವಾ ಹಿರಿಯರು ಮರ ಹತ್ತಿದಾಗ ಅದು ಬೇಗನೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ನುಗ್ಗೆ ಮರದ ಆಯಸ್ಸು ತುಲನಾತ್ಮಕವಾಗಿ ಕಡಿಮೆ.

ಇದಲ್ಲದೆ, ನುಗ್ಗೆ ಮರದಲ್ಲಿ ಕಂಬಳಿ ಹುಳುಗಳು ಹೆಚ್ಚಾಗಿ ಇರುತ್ತವೆ. ಇವು ಮಕ್ಕಳಿಗೆ, ವೃದ್ಧರಿಗೆ ತೊಂದರೆ ಉಂಟುಮಾಡಬಹುದು, ಕಿವಿಗೆ ಹೋಗುವ ಸಾಧ್ಯತೆಗಳೂ ಇರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ, ನುಗ್ಗೆ ಮರವನ್ನು ಮನೆಗೆ ಅಂಟಿಕೊಂಡು ಬೆಳೆಸುವುದು ಅಷ್ಟು ಶುಭಕರವಲ್ಲ. ಇದನ್ನು ಮನೆಯ ಕಾಂಪೌಂಡ್ ಆಚೆ, ಸ್ವಲ್ಪ ದೂರದಲ್ಲಿ ಅಥವಾ ಹೊಲಗದ್ದೆಗಳಲ್ಲಿ ಬೆಳೆಸುವುದು ಹೆಚ್ಚು ಉತ್ತಮ. ಮನೆ ಹತ್ತಿರ ಬೆಳೆಸುವುದು ಮಾನಸಿಕವಾಗಿ ತೃಪ್ತಿದಾಯಕವಲ್ಲ ಎಂದು ಗುರೂಜಿ ಸಲಅಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs GT: 16,776 ಪಂದ್ಯಗಳ ಬಳಿಕ ಹೀಗೊಂದು ವಿಶ್ವ ದಾಖಲೆ..! – Kannada News | KKR vs GT: First Ever T20 Match With Six 50+ Scores

ಟಿ20 ಕ್ರಿಕೆಟ್​ನಲ್ಲಿ 16,776 ಪಂದ್ಯಗಳು ನಡೆದಿದೆ. ಈ ಪಂದ್ಯಗಳಲ್ಲಿ ಕಂಡು ಬರದ ವಿಶೇಷ ವಿಶ್ವ ದಾಖಲೆಯೊಂದಕ್ಕೆ ಐಪಿಎಲ್​ನ 60ನೇ ಮ್ಯಾಚ್ ಸಾಕ್ಷಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಫಿನ್ ಅಲೆನ್, ಅಂಗ್​ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಕೆಕೆಆರ್ ತಂಡವು 20 ಓವರ್​ಗಳಲ್ಲಿ 247 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಶುಭ್​ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 29 ರನ್​ಗಳಿಂದ ಸೋತಿದೆ. ಈ ಸೋಲಿನ ಹೊರತಾಗಿಯೂ ಈ ಮ್ಯಾಚ್  ದಾಖಲೆಯ ಪುಟ ಸೇರಿದೆ.

ವಿಶ್ವ ದಾಖಲೆ:

ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಒಟ್ಟು ಆರು ಬ್ಯಾಟರ್​ಗಳು 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಕೆಕೆಆರ್ ಮತ್ತು ಜಿಟಿ ಬ್ಯಾಟರ್​ಗಳು ಜೊತೆಗೂಡಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಲ

  • ಫಿನ್ ಅಲೆನ್ (KKR): 93 ರನ್ (35 ಎಸೆತ)
  • ಶುಭ್‌ಮನ್ ಗಿಲ್ (GT): 85 ರನ್ (49 ಎಸೆತ)
  • ಅಂಗ್‌ಕ್ರಿಶ್ ರಘುವಂಶಿ (KKR): 82* ರನ್ (44 ಎಸೆತ)
  • ಜೋಸ್ ಬಟ್ಲರ್ (GT): 57 ರನ್ (35 ಎಸೆತ)
  • ಸಾಯಿ ಸುದರ್ಶನ್ (GT): 53* ರನ್ (28 ಎಸೆತ)
  • ಕ್ಯಾಮರೋನ್ ಗ್ರೀನ್ (KKR): 52* ರನ್ (28 ಎಸೆತ)

ಇದನ್ನೂ ಓದಿ: 16 ಅಂಕಗಳಿದ್ದರೂ ಹೊರಬೀಳುವ ಭೀತಿಯಲ್ಲಿ ಗುಜರಾತ್ ಟೈಟಾನ್ಸ್!

ಹಳೆಯ ದಾಖಲೆ ಧೂಳೀಪಟ:

ಇದಕ್ಕೂ ಮುನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ 20 ಬಾರಿ ಮಾತ್ರ ಒಂದೇ ಪಂದ್ಯದಲ್ಲಿ 5 ಅರ್ಧಶತಕಗಳು ದಾಖಲಾಗಿದ್ದವು. ಅಂದರೆ ಈವರೆಗೆ ಯಾವುದೇ ಮ್ಯಾಚ್​ನಲ್ಲೂ 6 ಅರ್ಧಶತಕ ಮೂಡಿಬಂದಿರಲಿಲ್ಲ.

  • ಭಾರತ ಮತ್ತು ನ್ಯೂಝಿಲೆಂಡ್ (ಆಕ್ಲೆಂಡ್, 2020): ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲೇ ಮೊದಲ ಬಾರಿಗೆ  ಪಂದ್ಯವೊಂದರಲ್ಲಿ 5 ಅರ್ಧಶತಕಗಳು ದಾಖಲಾಗಿದ್ದವು. ನ್ಯೂಝಿಲೆಂಡ್ ಪರ ಕಾಲಿನ್ ಮುನ್ರೊ (59), ಕೇನ್ ವಿಲಿಯಮ್ಸನ್ (51), ಮತ್ತು ರಾಸ್ ಟೇಲರ್ (54*) ಫಿಫ್ಟಿ ಬಾರಿಸಿದರೆ, ಭಾರತದ ಪರ ಕೆ.ಎಲ್. ರಾಹುಲ್ (56) ಮತ್ತು ಶ್ರೇಯಸ್ ಅಯ್ಯರ್ (58*) ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು.
  • ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ (ಸೆಂಚುರಿಯನ್, 2023): ವೆಸ್ಟ್ ಇಂಡೀಸ್ ನೀಡಿದ 258 ರನ್‌ಗಳ ಬೃಹತ್ ಗುರಿಯನ್ನು ಸೌತ್ ಆಫ್ರಿಕಾ ಬೆನ್ನಟ್ಟಿದ ಈ ಐತಿಹಾಸಿಕ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಸೇರಿದಂತೆ ಒಟ್ಟು 5 ಆಟಗಾರರು ಅರ್ಧಶತಕದ ಗಡಿ ದಾಟಿದ್ದರು.
  • ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಐಪಿಎಲ್ 2024): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ರನ್ ಮಳೆಯ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ ತಂಡದ ಬ್ಯಾಟರ್‌ಗಳು ಸೇರಿ ಒಟ್ಟು 5 ಅರ್ಧಶತಕಗಳನ್ನು ಸಿಡಿಸಿದ್ದರು.

ಆದರೆ ಇದೀಗ ಗುಜರಾತ್ ಟೈಟಾನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿ ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್, ಫಿನ್ ಅಲೆನ್, ಅಂಗ್​ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಪಂದ್ಯವೊಂದು 6 ಅರ್ಧಶತಕಗಳಿಗೆ ಸಾಕ್ಷಿಯಾಗಿದೆ.

Source link

‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ಹಲವು ಬಲವಾದ ಕಾರಣಗಳಿವೆ: ನಟಿ ತಾರಾ ಸುತಾರಿಯಾ – Kannada News | Yash starrer Toxic movie delayed due to valid reasons says Tara Sutaria

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಬಿಡುಗಡೆ ತಡವಾಗುತ್ತಿರುವುದು ಅಭಿಮಾನಿಗಳಲ್ಲಿ ತುಸು ನಿರಾಸೆ ಮೂಡಿಸಿರುವುದು ನಿಜ. ಆದರೆ, ಈ ವಿಳಂಬದ ಹಿಂದೆ ಸೂಕ್ತ ಹಾಗೂ ಬಲವಾದ ಕಾರಣಗಳಿವೆ ಎಂದು ಚಿತ್ರದ ನಟಿ ತಾರಾ ಸುತಾರಿಯಾ (Tara Sutaria) ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ಈ ಕಾಯುವಿಕೆ ಖಂಡಿತವಾಗಿಯೂ ಸಾರ್ಥಕವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆದ ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ನಟ ಯಶ್ ಅವರು ಚಿತ್ರದ ಜಾಗತಿಕ ವಿತರಣೆ ಮತ್ತು ಕಾರ್ಯತಂತ್ರದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಸಿನಿಮಾ ಮತ್ತಷ್ಟು ಮುಂದೂಡಲ್ಪಟ್ಟಿದೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದರು.

ಈ ವಿಳಂಬವನ್ನು ಒಬ್ಬ ನಟಿಯಾಗಿ ತಾವು ಹೇಗೆ ಸ್ವೀಕರಿಸಿದ್ದಾರೆ ಎಂಬುದರ ಕುರಿತು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆ ತಾರಾ ಸುತಾರಿಯಾ ಮಾತನಾಡಿದ್ದಾರೆ. ‘ನಾನು ತುಂಬಾ ತಾಳ್ಮೆಯಿಂದ ಇರಬಲ್ಲೆ. ಸಿನಿಮಾ ತಕ್ಷಣವೇ ಬಿಡುಗಡೆಯಾಗದಿದ್ದರೆ ನನಗೆ ಏನಾಗಬಹುದು ಎಂಬ ಸಂಕುಚಿತ ಯೋಚನೆ ನನ್ನದಲ್ಲ. ನಾನು ಯಾವಾಗಲೂ ದೊಡ್ಡ ಚಿತ್ರಣವನ್ನು ಗಮನಿಸುತ್ತೇನೆ. ಒಬ್ಬ ನಟಿಯಾಗಿ ನಾನು ಸಿನಿಮಾವನ್ನು ಕೇವಲ ನನ್ನದು ಎಂದು ಭಾವಿಸಲಾಗುವುದಿಲ್ಲ. ಅದು ಇಡೀ ತಂಡದ ಸಿನಿಮಾ’ ಎಂದು ಅವರು ಎಂದಿದ್ದಾರೆ.

‘ಒಬ್ಬ ನಟಿಯಾಗಿ ನನ್ನ ಕೆಲಸ ಮಾಡುವುದು ಮಾತ್ರ ನನ್ನ ಜವಾಬ್ದಾರಿ ಎಂಬುದು ನನಗೆ ತಿಳಿದಿದೆ. ಅದರಾಚೆಗೆ, ನಿರ್ಮಾಪಕರು ಅಥವಾ ನಿರ್ದೇಶಕರಿಗೆ ಇರುವ ಉದ್ಯಮದ ಸೂಕ್ಷ್ಮ ತಿಳುವಳಿಕೆ ನಮಗೆ ಇರುವುದಿಲ್ಲ. ಸಿನಿಮಾ ವಿಳಂಬವಾಗುತ್ತಿರುವುದರ ಹಿಂದೆ ಹಲವು ಪ್ರಮುಖ ಕಾರಣಗಳಿವೆ ಮತ್ತು ಆ ಕಾರಣಗಳು ಅತ್ಯಂತ ತಾರ್ಕಿಕ ಹಾಗೂ ಬಲವಾಗಿವೆ ಎಂದು ನಾನು ನಂಬುತ್ತೇನೆ. ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದು ನನಗೆ ಅರ್ಥವಾಗುತ್ತದೆ. ನನಗೂ ಅದೇ ಕುತೂಹಲವಿದೆ. ಆದರೆ ಈ ಕಾಯುವಿಕೆ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ತಂದುಕೊಡಲು ಸಹಕಾರಿಯಾಗಲಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ; ಹುಡುಗ ಯಾರು?

ಸಿನಿಮಾ ಎರಡನೇ ಬಾರಿ ಮುಂದೂಡಲ್ಪಟ್ಟಾಗ ನಟ ಯಶ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದರು. ‘ನಾವು ಕೆಲವು ಸಿನಿಮಾಗಳನ್ನು ಸುಮ್ಮನೇ ಮಾಡುತ್ತೇವೆ, ಆದರೆ ಇನ್ನು ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ. ಸಿನೆಮಾಕಾನ್​ನಲ್ಲಿ ನಮ್ಮ ಚಿತ್ರವನ್ನು ಪ್ರಸ್ತುತಪಡಿಸಿದಾಗ ಸಿಕ್ಕ ಜಾಗತಿಕ ಪ್ರತಿಕ್ರಿಯೆಯು, ಈ ಸಿನಿಮಾ ವಿಶ್ವಾದ್ಯಂತ ತಲುಪಲು ಅರ್ಹವಾಗಿದೆ ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ’ ಎಂದು ಯಶ್ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿಗಿಂತ ಮಡಿಕೇರಿಯ ವಾಯುಗುಣಮಟ್ಟವೇ ಉತ್ತಮ! – Kannada News | Bengaluru Air Quality Index Today: City Records Moderate AQI, Madikeri Cleanest

ಬೆಂಗಳೂರಿಗಿಂತ ಮಡಿಕೇರಿಯ ವಾಯುಗುಣಮಟ್ಟವೇ ಉತ್ತಮ

ಬೆಂಗಳೂರು, ಮೇ 17: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟದ ನಡುವೆಯೇ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಇಂದಿನ ವರದಿಯ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರಿನ ಒಟ್ಟಾರೆ ವಾಯು ಗುಣಮಟ್ಟವು ಸಾಧಾರಣ ವಲಯದಲ್ಲಿದೆ. ಆದರೆ ಗದಗ ಮತ್ತು ಮಡಿಕೇರಿಯ ವಾಯು ಗುಣಮಟ್ಟ ಉತ್ತಮವಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟವು ಇಂದು 75 AQI ದಾಖಲಾಗಿದೆ
  • ಮಡಿಕೇರಿ ಮತ್ತು ಗದಗದ ಗಾಳಿ ಅತ್ಯಂತ ಆರೋಗ್ಯಕರ ಹಾಗೂ ಸ್ವಚ್ಛವಾಗಿದೆ
  • ಜಯನಗರದಲ್ಲಿ ಅತ್ಯಧಿಕ ಮಾಲಿನ್ಯವಿದ್ದು, ಉಸಿರಾಟದ ಸಮಸ್ಯೆಯಿದ್ದವರು ಮಾಸ್ಕ್ ಧರಿಸುವುದು ಸೂಕ್ತ

ಬೆಂಗಳೂರಿನ ಎಕ್ಯೂಐ ಹೇಗಿದೆ?

ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 75 AQI ದಾಖಲಾಗಿದೆ. ನಗರದ ಪ್ರಮುಖ ಗಾಳಿ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಕ್ರಮವಾಗಿ 44 µg/m³ ಮತ್ತು 54 µg/m³ ಮಟ್ಟದಲ್ಲಿದ್ದು, ನಿಯಂತ್ರಣದಲ್ಲಿದೆ.

ಆದಾಗ್ಯೂ, ನಗರದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ವ್ಯತ್ಯಾಸವಾಗಿದೆ. ಜಯನಗರ 5ನೇ ಬ್ಲಾಕ್ ಭಾಗದಲ್ಲಿ ಅತ್ಯಧಿಕ ಅಂದರೆ 134 AQI ದಾಖಲಾಗುವ ಮೂಲಕ ಕಳಪೆ (Poor) ವಿಭಾಗಕ್ಕೆ ಸೇರಿದರೆ, ಬಿಡಬ್ಲ್ಯೂಎಸ್ಎಸ್‌ಬಿ ಕಾಡುಬೀಸನಹಳ್ಳಿ ಭಾಗದಲ್ಲಿ ಅತ್ಯಂತ ಕಡಿಮೆ ಅಂದರೆ 91 AQI ದಾಖಲಾಗಿದೆ. ನಿನ್ನೆ ನಗರದ ಒಟ್ಟಾರೆ ಮಾಲಿನ್ಯ ಸೂಚ್ಯಂಕ 168 ಇದ್ದು, ಇಂದು ಮಳೆಯ ಪ್ರಭಾವದಿಂದಾಗಿ ವಾಯು ಗುಣಮಟ್ಟದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ.

ರಾಜ್ಯದ ಇತರ ಜಿಲ್ಲೆಗಳ ಪರಿಸ್ಥಿತಿ

ಕರ್ನಾಟಕದ ಕೆಲವು ಜಿಲ್ಲೆಗಳು ದೇಶದಲ್ಲೇ ಅತ್ಯಂತ ಸ್ವಚ್ಛ ಮತ್ತು ಕಡಿಮೆ ಮಾಲಿನ್ಯ ಹೊಂದಿದ ನಗರಗಳಾಗಿ ಹೊರಹೊಮ್ಮಿವೆ. ಮಡಿಕೇರಿ ಮತ್ತು ಗದಗ ಜಿಲ್ಲೆಗಳು ಕೇವಲ 11 ಮತ್ತು 12 AQI ದಾಖಲಿಸುವ ಮೂಲಕ ಅತ್ಯಂತ ಆರೋಗ್ಯಕರ ಹಾಗೂ ಸ್ವಚ್ಛ ಗಾಳಿಯನ್ನು ಹೊಂದಿವೆ. ಮತ್ತೊಂದೆಡೆ, ಉತ್ತರ ಒಳನಾಡಿನ ಕಲಬುರಗಿ ಜಿಲ್ಲೆಯಲ್ಲಿ ತಾಂತ್ರಿಕ ಕಾರಣಗಳು ಅಥವಾ ಸ್ಥಳೀಯ ಧೂಳಿನ ಪ್ರಭಾವದಿಂದಾಗಿ ಅತಿ ಹೆಚ್ಚಿನ ಮಾಲಿನ್ಯ ಸೂಚ್ಯಂಕ ದಾಖಲಾಗಿದೆ. ಚಾಮರಾಜನಗರದಲ್ಲಿ 74 AQI ನೊಂದಿಗೆ ಸಾಧಾರಣ ವಾಯು ಗುಣಮಟ್ಟವಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ರಸ್ತೆ ಕಾಮಗಾರಿಗಳು ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಉಸಿರಾಟದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಮಾಸ್ಕ್ ಧರಿಸುವುದು ಸೂಕ್ತ. ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿನ ಧೂಳಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಪಕ್ಷ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶ: ಮಂಗಳೂರಲ್ಲಿ ಭುಗಿಲೆದ್ದ ಅಸಮಾಧಾನ – Kannada News | BJP Workers Turn Against MP Brijesh Chowta Over Bannadk Road Issue; Discontent Erupts in Mangaluru

ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶImage Credit source: Tv9 Kannada

ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯ ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಸಂಸದ ಕ್ಯಾ‌.ಬ್ರಿಜೇಶ್ ಚೌಟ ವಿರುದ್ಧ ಬಿಜೆಪಿ ಮಂಡಲ ಉಪಾಧ್ಯಕ್ಷನಿಂದಲೇ ಅಸಮಾಧಾನ ವ್ಯಕ್ತವಾಗಿದ್ದು, ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದವರಿಗೆ ಅವಮಾನ ಆರೋಪ ಕೇಳಿಬಂದಿದೆ. ಸಂಸದರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂದೂ ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಾಕಿ ಮೂಲ್ಕಿ-ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ಕಿಡಿ ಕಾರಿದ್ದಾರೆ.

ಆಗಿದ್ದೇನು?

ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳು ನಡೆಯುತ್ತಿದ್ದು, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಮೂರು ವರ್ಷಗಳಲ್ಲಿ 8ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಮಂಗಳೂರಿನಿಂದ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರ ಭೀಕರ ಅಪಘಾತಗಳು ನಡೆಯುತ್ತಿದ್ದು, ಕೇವಲ ಮೂರು ದಿನಗಳಲ್ಲಿ 4 ಅಪಘಾತ ನಡೆದು ಓರ್ವ ಮಹಿಳೆ ಮೃತಪಟ್ಟಿದ್ದರು. ಈ ವಿಚಾರವಾಗಿ ಸಂಸದರನ್ನ ಭೇಟಿಯಾಗಲು ಬಿಜೆಪಿ ಮುಖಂಡ ಸೂರಜ್ ಜೈನ್ ತಂಡ ತೆರಳಿತ್ತು. ಆ ವೇಳೆ ಸಂಸದ ಬ್ರಿಜೇಶ್ ಚೌಟ ಉಡಾಫೆ ಉತ್ತರ ನೀಡಿದ ಆರೋಪ‌ ಕೇಳಿಬಂದಿದೆ.

ಇದನ್ನೂ ಓದಿ: ಫಲನಾಭವಿಗಳು ಮೃತಪಟ್ಟ ಬಳಿಕವೂ ಖಾತೆಗೆ ಗೃಹಲಕ್ಷ್ಮಿ ಹಣ; ದಕ್ಷಿಣ ಕನ್ನಡದಲ್ಲಿ 22 ಕೋಟಿ ಜಮೆ ಬೆಳಕಿಗೆ

ಅವಘಡಗಳಿಗೆ ಹೆದ್ದಾರಿ ಇಲಾಖೆಯ ಕಾಮಗಾರಿಯೇ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ? ಈ ಕಾಮಗಾರಿ ಪೂರ್ಣ ಆಗುವವರೆಗೆ ಸರ್ವಿಸ್ ರಸ್ತೆ ಮಾಡಲು ಸಾಧ್ಯವಿಲ್ಲ. 2023ರಲ್ಲಿ ಮನವಿ ಕೊಟ್ಟಿದ್ದರೆ ಕೊಟ್ಟಿರುವವರ ಬಳಿ ಹೋಗಿ ಕೇಳಿ. ನೀವು ಹೇಳಿದಂತೆ ಕಾಮಗಾರಿ ಮಾಡಲು ಆಗಲ್ಲ. ಜನರ ಪ್ರತಿಭಟನೆಗೆ ನಾನು ಹೆದರೋದಿಲ್ಲ. ಸ್ಥಳಕ್ಕೆ ಭೇಟಿ ನೀಡಲು ಕೇಳಿಕೊಂಡರೆ ಸದ್ಯಕ್ಕೆ ಸಾಧ್ಯವಿಲ್ಲ. ಆ ಕಡೆ ಬಂದಾಗ ಸ್ಥಳಕ್ಕೆ ಬರುತ್ತೇನೆ ಎಂದು ಸಂಸದರು ಹೇಳಿರೋದಾಗಿ ದೂರಲಾಗಿದೆ. ಬನ್ನಡ್ಕ ಸರಣಿ ಅಪಘಾತಗಳನ್ನ ಕಂಡು ಧೃತಿಗೆಟ್ಟಿರುವ ಸಾರ್ವಜನಿಕರಿಂದ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

16 ಅಂಕಗಳಿದ್ದರೂ ಹೊರಬೀಳುವ ಭೀತಿಯಲ್ಲಿ ಗುಜರಾತ್ ಟೈಟಾನ್ಸ್!

Source link

ನಿಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ – Kannada News | NEET Paper Leak: Rahul Demands Education Minister Dharmendra Pradhan’s Sacking

ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ

ನವದೆಹಲಿ, ಮೇ 17: ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​​ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ವಿಪಕ್ಷ ನಾಯಕ ರಾಹುಲ್​​ ಗಾಂಧಿ ಆಗ್ರಹಿಸಿದ್ದಾರೆ. 22 ಲಕ್ಷ NEET ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗಿದೆ. ಆದರೂ ಮೋದಿ ಜೀ ಒಂದು ಮಾತೂ ಆಡುತ್ತಿಲ್ಲ. ಧರ್ಮೇಂದ್ರ ಪ್ರಧಾನರನ್ನು ತಕ್ಷಣ ವಜಾಗೊಳಿಸಿ, ಇಲ್ಲವೇ ನೀವು ಹೊಣೆ ಹೊರಿ ಎಂದು ಅವರು ಎಕ್ಸ್​​ ಪೋಸ್ಟ್​​ ಮೂಲಕ ಆಗ್ರಹಿಸಿದ್ದಾರೆ.

ವಿಡಿಯೋ ಹಂಚಿಕೊಂಡ ರಾಹುಲ್​​ ಗಾಂಧಿ

ಎರಡು ವರ್ಷಗಳಿಂದ 22 ಲಕ್ಷ ವಿದ್ಯಾರ್ಥಿಗಳು ಹಗಲು-ರಾತ್ರಿ ಶ್ರಮಪಟ್ಟಿದ್ದರು. ಆದರೆ ಅವರ ಪರಿಶ್ರಮ ವ್ಯರ್ಥವಾಗಿದೆ. ಪರೀಕ್ಷೆಗೆ ಎರಡು ದಿನ ಮೊದಲೇ NEET ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಹಂಚಿಕೆಯಾಗಿದ್ದು ಇಡೀ ದೇಶಕ್ಕೆ ಗೊತ್ತಿದೆ ಎಂದು ರಾಹುಲ್​​ ಗಾಂಧಿ ಆರೋಪಿಸಿದ್ದಾರೆ.ಭಾರತದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಇದಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ. ಸಮಿತಿ ನೀಡಿದ ಶಿಫಾರಸುಗಳನ್ನು ಅವರು ಕಸದ ಬುಟ್ಟಿಗೆ ಹಾಕಿದರು. ಸಮಿತಿಯಲ್ಲಿ ವಿರೋಧ ಪಕ್ಷದವರೂ ಇದ್ದು, ಅದಕ್ಕೆ ಅರ್ಥವೇ ಇಲ್ಲ. ನೀವು ಭಾರತದ ಮೂಲ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಪ್ರಧಾನಮಂತ್ರಿ ತಕ್ಷಣ ಆದೇಶ ನೀಡಿ ಧರ್ಮೇಂದ್ರ ಪ್ರಧಾನರನ್ನು ವಜಾಗೊಳಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಹಾಕಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯನ್ನು ಮಂಗಳವಾರ ರದ್ದುಗೊಳಿಸಿತ್ತು. ಪರೀಕ್ಷೆಯಲ್ಲಿದ್ದ ಹಲವು ಪ್ರಶ್ನೆಗಳು ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿದ್ದವು ಎಂಬ ಸಾಕ್ಷ್ಯಗಳು ತನಿಖೆಯಲ್ಲಿ ಪತ್ತೆಯಾಗಿದ್ದವು. ಬಳಿಕ ಕೇಂದ್ರ ಸರ್ಕಾರ ಪ್ರಕರಣವನ್ನು CBIಗೆ ಹಸ್ತಾಂತರಿಸಿತ್ತು. ಆ ಬೆನ್ನಲ್ಲೇ ಮರು ಪರೀಕ್ಷೆಯನ್ನು ಜೂನ್ 21ಕ್ಕೆ ನಿಗದಿಪಡಿಸಿರುವ ಬಗ್ಗೆ ತಿಳಿಸಲಾಗಿತ್ತು. ಪರೀಕ್ಷೆ ರದ್ದಾದ ಪರಿಣಾಮ ಸುಮಾರು 23 ಲಕ್ಷ ವಿದ್ಯಾರ್ಥಿಗಳಿಗೆ ತೀವ್ರ ಹಿನ್ನಡೆಯಾಗಿದೆ. 2019ರಲ್ಲಿ NTA ಪರೀಕ್ಷೆ ನಡೆಸಲು ಆರಂಭಿಸಿದ ಬಳಿಕ ಸಂಪೂರ್ಣ NEET-UG ಪರೀಕ್ಷೆಯನ್ನೇ ರದ್ದುಪಡಿಸಿರುವುದು ಇದೇ ಮೊದಲು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Karnataka Weather Forecast: ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ, ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್! – Kannada News | Karnataka rain Update: Heavy Rain Forecast, Orange Alert Issued for Chikkamagaluru, Fishermen Warning

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ, ಚಿಕ್ಕಮಗಳೂರಿನಲ್ಲಿ ‘ಆರೆಂಜ್ ಅಲರ್ಟ್’!
Image Credit source: google Gemini

ಬೆಂಗಳೂರು, ಮೇ 17: ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ (Weather) ಮತ್ತು ಗಾಳಿ ಸಹಿತ ಗುಡುಗು ಸಿಡಿಲಿನ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಮಲೆನಾಡು ಭಾಗ ಹಾಗೂ ಪಶ್ಚಿಮಘಟ್ಟಗಳ ಸಾಲಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸಿಡಿಲು ಮತ್ತು 40-50 ಕಿ.ಮೀ ವೇಗದ ಗಾಳಿಯ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಮುಂದಿನ ನಾಲ್ಕು ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ.
  • ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಅಲರ್ಟ್ ಘೋಷಣೆ.
  • ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್​

ಎಲ್ಲೆಲ್ಲಿ ಮಳೆ?

ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಭಾರಿ ಮಳೆ/ಗುಡುಗು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಜೂನ್ 19ರವರೆಗೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವಿರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ

ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ (ಕೆಲವೊಮ್ಮೆ 60 ಕಿ.ಮೀ ವರೆಗೆ) ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಮೇ 19ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮುಂದಿನ 5 ದಿನಗಳ ಕಾಲ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ತರ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಸಿಡಿಲು ಮತ್ತು ಬಿರುಗಾಳಿ ಬೀಸುವ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:22 am, Sun, 17 May 26

Source link