Category Archives: Blog

Your blog category

ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ! – Kannada News | Husband Kills Wife After Sabarimala Visit Over Second Marriage Row

ಆರೋಪಿ ಕುಮಾರ್​​ ಮತ್ತು ಮೃತ ಮಹಿಳೆ ರಾಧಾ.

ಹಾಸನ, ಜನವರಿ 13: ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ‌ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ರಾಧಾ(40) ಮೃತ ದುರ್ದೈವಿಯಾಗಿದ್ದು, ಶವವನ್ನು ಪತಿ ನದಿಗೆ ಎಸೆದಿದ್ದ ಎನ್ನಲಾಗಿದೆ. ಜನವರಿ 10ರರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ತನ್ನ ಮೇಲೆ ಕುಮಾರ ಅನುಮಾನ ಪಡುತ್ತಿದ್ದ ಕಾರಣ ಕಳೆದ 8 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸ ಮಾಡುತ್ತಿದ್ದರು. ಈ ನಡುವೆ ಜನವರಿ ಮೊದಲ ವಾರ ಕುಮಾರ್​​ ಶಬರಿಮಲೆಗೆ ತೆರಳಿದ್ದ. ಇರುಮುಡಿ ಕಟ್ಟುವಾಗ ಪತ್ನಿ ಸ್ಥಾನದಲ್ಲಿ ಬೇರೆ ಮಹಿಳೆಯಿಂದ ಪೂಜೆ ನಡೆದಿರುವ ಕಾರಣ ಈ ವಿಚಾರವನ್ನು ಪ್ರಶ್ನಿಸಲು ತಾನು ವಾಸವಿದ್ದ ಹಾಸನದ ಆಡುವಳ್ಳಿಯಿಂದ ಯಡೂರು ಗ್ರಾಮಕ್ಕೆ ರಾಧಾ ಬಂದಿದ್ದರು. ಇದೇ ವಿಚಾರವಾಗಿ ಜ.10ರ ರಾತ್ರಿ 10.30ರ ಸಮಯದಲ್ಲಿ ಕುಮಾರ ಮತ್ತು ರಾಧಾ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ರಾಧಾ ಕಪಾಳಕ್ಕೆ ಕುಮಾರ ಹೊಡೆದಿದ್ದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.

ಇದನ್ನೂ ಓದಿ: ಪತ್ನಿಗೆ ವಂಚಿಸಿ ಟೆಕ್ಕಿ ಪತಿ ಅಕ್ರಮ ಸಂಬಂಧ; ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ!

ಪೊಲೀಸರಿಗೆ ತಾನೇ ಮಾಹಿತಿ ನೀಡಿದ ಆರೋಪಿ

ಘಟನೆ ಬಳಿಕ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ರಾಧಾ ಶವಕ್ಕೆ ಬಟ್ಟೆ ಸುತ್ತಿ ಅದನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಹಾಸನ ಹೊರವಲಯದ ಕಂದಲಿ ಬಳಿ ಹರಿಯುವ ಯಗಚಿ ನದಿಗೆ ಕುಮಾರ ಬಿಸಾಡಿದ್ದ. ಬಳಿಕ ಘಟನೆ ಬಗ್ಗೆ ನಿನ್ನೆ ತಾನೇ ಪೊಲೀಸರಿಗೆ ಆರೋಪಿ  ಮಾಹಿತಿ ನೀಡಿದ್ದು, ಇಂದು ಯಗಚಿ ನದಿಯಿಂದ ರಾಧಾ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಸದ್ಯ ಆರೋಪಿ ಕುಮಾರ್​ನನ್ನು ಆಲೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:30 pm, Tue, 13 January 26

Source link

ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?: ಹಾಸನದಲ್ಲೊಂದು ಡೆಡ್ಲಿ ಮರ್ಡರ್​​

ಹಾಸನ, ಜನವರಿ 13: ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಪತಿ ಕುಮಾರ್ ತನ್ನ ಮೊದಲ ಪತ್ನಿ ರಾಧಮ್ಮಳನ್ನು ಹತ್ಯೆ ಮಾಡಿರುವ ಘಟನೆ ಸಂಬಂಧ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಬರಿಮಲೆ ಯಾತ್ರೆ ಮುಗಿಸಿ ಬಂದ ದಿನವೇ ಕುಮಾರ್, ಎರಡನೇ ಮದುವೆಯನ್ನು ಪ್ರಶ್ನಿಸಿದ್ದಕ್ಕೆ ರಾಧಾಳನ್ನು ಕೊಲೆ ಮಾಡಿದ್ದ. ಕುಮಾರ್ ಮತ್ತು ರಾಧಾ ದಂಪತಿಗೆ ವಿಶ್ವಾಸ್ ಎಂಬ ಮಗನಿದ್ದಾನೆ. ಕಳೆದ ಕೆಲ ವರ್ಷಗಳಿಂದ ಪತಿ ಕುಮಾರ್‌ನಿಂದ ರಾಧಾ ಪತ್ಯೇಕ ವಾಸವಿದ್ದು, ಹಾಸನದಲ್ಲಿ ಕೆಲಸ ಮಾಡಿಕೊಂಡು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಳು. ಕುಮಾರ್ ತನ್ನ ಎರಡನೇ ಮದುವೆಯಿಂದ ಹುಟ್ಟಿದ ಮಗನ ಫೋಟೋವನ್ನು ವಿಶ್ವಾಸ್‌ಗೆ ಕಳುಹಿಸಿದ್ದ. ಈ ಫೋಟೋವನ್ನು ನೋಡಿದ ರಾಧಾ, ಕುಮಾರ್‌ನ ಎರಡನೇ ಸಂಬಂಧದ ಬಗ್ಗೆ ತಿಳಿದು ಯಡೂರು ಗ್ರಾಮಕ್ಕೆ ಹೋಗಿ ಜಗಳವಾಡಿದ್ದಾಳೆ. ಯಡೂರಿಗೆ ಹೋಗದಂತೆ ರಾಧಾಗೆ ತಾಯಿ ಹೇಳಿದ್ದರು. ಆದರೂ ಕೇಳದೆ ಆಕೆ ಹೋಗಿದ್ದಳು ಎನ್ನಲಾಗಿದೆ.
ಕುಮಾರ್‌ನ ತಾಯಿ ಲಕ್ಷ್ಮಮ್ಮ ಮತ್ತು ಮಗ ವಿಶ್ವಾಸ್ ಸಹ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ? – Kannada News | Ashwini Vaishnaw participates In US India critical minerals meet, explains the discussed matter

ನವದೆಹಲಿ, ಜನವರಿ 13: ಮುಖ್ಯ ಖನಿಜಗಳ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುವ ದೃಷ್ಟಿಯಿಂದ ಅಂತರರಾಷ್ಟ್ರೀಯ ಸಚಿವ ಮಟ್ಟದ ಸಭೆ ನಡೆಯಿತು. ಅಮೆರಿಕದ ವಾಷಿಂಗ್ಟನ್​ನ್ಲಲಿ ನಡೆದ ಈ ಸಭೆಯಲ್ಲಿ ಭಾರತದ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೇ ಸಚಿವ ಡಾ. ಎ ವೈಷ್ಣವ್ ಪಾಲ್ಗೊಂಡಿದ್ದರು. ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಸಭೆ ಆಯೋಜಿಸಿದ್ದರು. ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಿಂದಲೂ ಪ್ರತಿನಿಧಿಗಳು ಪಾಲ್ಗೊಂಡು ಚರ್ಚಿಸಿದರು ಎಂದು ವರದಿಗಳು ಹೇಳುತ್ತಿವೆ.

ಆ ಸಭೆ ಹಾಗೂ ಅದರಲ್ಲಿ ಚರ್ಚಿತವಾದ ವಿಷಯದ ಬಗ್ಗೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಮುಖ್ಯ ಖನಿಜಗಳ ಪೂರೈಕೆ ಸರಪಳಿಯಲ್ಲಿ ಭಾರತವೂ ಸೇರಿದರೆ ಏನು ಲಾಭ ಎಂಬುದನ್ನೂ ಅವರು ವಿವರಿಸಿದ್ದಾರೆ.

ಇದನ್ನೂ ಓದಿ:

‘ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಬಹಳ ವೇಗದಲ್ಲಿ ಬೆಳೆಯುತ್ತಿರುವಾಗ ಮುಖ್ಯ ಖನಿಜಗಳ ಪೂರೈಕೆ ಸರಪಳಿ ವ್ಯವಸ್ಥೆ ಸಮರ್ಪಕವಾಗಿರುವುದು ಬಹಳ ಮುಖ್ಯ. ಈ ಸಭೆಯಲ್ಲಿ ಹಲವಾರು ದೇಶಗಳಿಂದ ಬಂದಿದ್ದ ಪ್ರತಿನಿಧಿಗಳು ತಮ್ಮ ಅನುಭವ ಹಂಚಿಕೊಂಡರು. ಸಪ್ಲೈ ಚೈನ್ ಸುದೃಢಗೊಳಿಸಲು, ಖನಿಜ ಅದಿರುಗಳ ಸಂಸ್ಕರಣೆ ಮಾಡುವ ತಂತ್ರಜ್ಞಾನ ಅಭಿವೃದ್ದಿಪಡಿಸುವುದು ಮೊದಲಾದ ವಿಷಯಗಳನ್ನು ಚರ್ಚಿಸಲಾಯಿತು’ ಎಂದು ಸಚಿವ ವೈಷ್ಣವ್ ತಿಳಿಸಿದ್ದಾರೆ.

ಮುಖ್ಯ ಖನಿಜಗಳು ಯಾಕೆ ಮುಖ್ಯ?

ಬ್ಯಾಟರಿ ಹಾಗೂ ನವೀಕರಣ ವಿದ್ಯುತ್ ಶಕ್ತಿ ತಯಾರಿಕೆಗೆ ಬಳಸಲು ಬಹಳ ಅಗತ್ಯವಾಗಿರುವ ಖನಿಜಗಳನ್ನು ಕ್ರಿಟಿಕಲ್ ಮಿನರಲ್ ಎಂದು ಪರಿಗಣಿಸಲಾಗುತ್ತದೆ. ಲಿಥಿಯಮ್, ಕೊಬಾಲ್ಟ್, ನಿಕಲ್, ಗ್ರಾಫೈಟ್ ಮೊದಲಾದವನ್ನು ಅತ್ಯಗತ್ಯ ಖನಿಜ ಅಥವಾ ಕ್ರಿಟಿಕಲ್ ಮಿನರಲ್ ಎನಿಸಿವೆ. ಇದರಲ್ಲಿ ನಿಯೋಡೈಮಿಯಮ್, ವೈಟ್ರಿಯಮ್, ಸೆರಿಯಂ ಇತ್ಯಾದಿ 17 ರೇರ್ ಅರ್ಥ್ ವಸ್ತು ಅಥವಾ ವಿರಳ ಭೂ ಖನಿಜಗಳೂ ಸೇರಿವೆ. 21ನೇ ಶತಮಾನದ ತಂತ್ರಜ್ಞಾನ ಅಳವಡಿಕೆಗೆ ಈ ಖನಿಜಗಳ ಅಗತ್ಯ ಬಹಳ ಇದೆ. ಸದ್ಯ ಚೀನಾ ದೇಶ ಈ ಖನಿಜಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ವಾಮ್ಯ ಹೊಂದಿದೆ. ಈ ಅವಲಂಬನೆಯಿಂದ ಹೊರಬರುವುದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಗುರಿ.

ಇದನ್ನೂ ಓದಿ:

ಖನಿಜಗಳ ಪೂರೈಕೆ ಸರಪಳಿಯ ಭಾಗವಾದರೆ ಭಾರತಕ್ಕೇನು ಲಾಭ?

ಭಾರತದಲ್ಲಿ ಎಲೆಕ್ಟ್ರಾನಿಕ್ಸ್, ಸೋಲಾರ್ ಪ್ಯಾನಲ್ ಇತ್ಯಾದಿ ಉತ್ಪಾದನೆ ನಡೆಯುತ್ತಿದ್ದು, ಅದಕ್ಕೆ ಖನಿಜಗಳ ಸ್ಥಿರ ಪೂರೈಕೆ ಸಾಧ್ಯವಾಗಬಹುದು.

ಬೇರೆ ಬೇರೆ ದೇಶಗಳ ತಂತ್ರಜ್ಞಾನಗಳ ನೆರವು ಪಡೆಯಬಹುದು.

ಬೇರೆ ಬೇರೆ ದೇಶಗಳ ಸಂಶೋಧನೆಗಳ ನೆರವು ಪಡೆಯಬಹುದು.

ವಿರಳ ಭೂ ಖನಿಜ ಸೇರಿದಂತೆ ಕ್ರಿಟಿಕಲ್ ಮಿನರಲ್​ಗಳನ್ನು ಶೋಧಿಸಿ ತೆಗೆಯಲು ಬೇಕಾದ ತಂತ್ರಜ್ಞಾನವನ್ನು ಭಾರತ ಪಡೆಯಬಹುದು.

ಭಾರತದ ಉತ್ಪಾದನಾ ಕ್ಷೇತ್ರ ಮತ್ತಷ್ಟು ಬಲಗೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ – Kannada News | Prabhas starrer The Raja Saab movie collects only 4 crore on Box office

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 09ರಂದು ಬಿಡುಗಡೆ ಆಗಿತ್ತು. ಪ್ರಭಾಸ್ ಅವರ ಈ ಹಿಂದಿನ ಸಿನಿಮಾಗಳ ರೀತಿಯೇ ಬಿಡುಗಡೆ ಆದ ಮೊದಲ ದಿನ ಭಾರಿ ಗಳಿಕೆಯನ್ನು ಸಿನಿಮಾ ಮಾಡಿತ್ತು. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 112 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನದಿಂದಲೇ ಸಿನಿಮಾದ ಉರುಳುವಿಕೆ ಪ್ರಾರಂಭವಾಯ್ತು. ಸಿನಿಮಾ ನೋಡಿದವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳ ಕ್ರಿಂಜ್ ಆದ ಕತೆ, ದೃಶ್ಯಗಳನ್ನು ಸಿನಿಮಾ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಯ್ತು. ಇದೇ ಕಾರಣಕ್ಕೆ ಎರಡನೇ ದಿನದಿಂದಲೇ ಸಿನಿಮಾದ ಕಲೆಕ್ಷನ್ ಕುಸಿಯಲು ಆರಂಭಿಸಿತು. ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ 88% ಕುಸಿತ ಕಂಡಿದೆ.

ಮೊದಲ ದಿನ 112 ಕೋಟಿ ಗಳಿಕೆ ಮಾಡಿದ್ದ ‘ದಿ ರಾಜಾ ಸಾಬ್’ ಸಿನಿಮಾ ಮೂರು ದಿನದ ಬಳಿಕ ಸೋಮವಾರ ಗಳಿಸಿರುವುದು ಕೇವಲ 6 ಕೋಟಿ ರೂಪಾಯಿ. ಆಂಧ್ರ, ತೆಲಂಗಾಣಗಳಲ್ಲಿ ಈಗ ಸಂಕ್ರಾಂತಿ ರಜೆಗಳು ಚಾಲ್ತಿಯಲ್ಲಿವೆ ಹಾಗಿದ್ದರೂ ಸಹ ‘ದಿ ರಾಜಾ ಸಾಬ್’ ಸಿನಿಮಾ ಜನರನ್ನು ಸೆಳೆಯಲು ವಿಫಲವಾಗಿದೆ. ಮೂರನೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ ಭಾರಿ ದೊಡ್ಡ ಇಳಿಕೆ ಕಂಡು ಬಂದಿದ್ದು, ಪ್ರಭಾಸ್ ಅವರ ಈ ಹಿಂದಿನ ಫ್ಲಾಪ್​​ಗಳಾದ ‘ಆದಿಪುರುಷ್’ ಮತ್ತು ‘ಸಾಹೋ’ ಸಿನಿಮಾಗಳಿಗಿಂತಲೂ ಕಳಪೆ ಆಗಿದೆ ‘ದಿ ರಾಜಾ ಸಾಬ್’ ಸಿನಿಮಾದ ಗಳಿಕೆ.

ಇದನ್ನೂ ಓದಿ:ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ!

ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 112 ಕೋಟಿ ಗಳಿಸಿದ್ದ ರಾಜಾ ಸಾಬ್. ಎರಡನೇ ದಿನ ಅಂದರೆ ಶನಿವಾರ ಭಾರತ ಬಾಕ್ಸ್ ಆಫೀಸ್​​ನಲ್ಲಿ 30 ಕೋಟಿ ರೂಪಾಯಿ ಗಳಿಸಿತು. ಬಳಿಕ ಭಾನುವಾರ ಈ ಕಲೆಕ್ಷನ್ ಇನ್ನಷ್ಟು ತಗ್ಗಿ 22 ಕೋಟಿಗೆ ಬಂತು. ಬಳಿಕ ಸೋಮವಾರದ ಕಲೆಕ್ಷನ್ ಅಂತೂ ಇನ್ನು ಧಾರುಣವಾಗಿ ಕುಸಿದಿದ್ದು ಕೇವಲ 4 ಕೋಟಿ ಗಳಿಕೆ ಮಾಡಿದೆ. ವಿದೇಶಿ ಕಲೆಕ್ಷನ್ ಸೇರಿದಂತೆ ಸುಮಾರು 6 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಆ ಮೂಲಕ ಪ್ರಭಾಸ್ ಅವರ ಇತ್ತೀಚೆಗಿನ ಫ್ಲಾಪ್​​ಗಳಲ್ಲಿಯೇ ಧಾರುಣ ಫ್ಲಾಪ್ ಆಗುವತ್ತ ದಾಪುಗಾಲು ಹಾಕುತ್ತಿದೆ ‘ದಿ ರಾಜಾ ಸಾಬ್’ ಸಿನಿಮಾ.

‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕಾಮಿಡಿ ಹಾರರ್ ಕತೆ ಒಳಗೊಂಡಿದೆ. ಸಿನಿಮಾನಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರು. ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಸಿನಿಮಾನಲ್ಲಿ ಸಂಜಯ್ ಮತ್ತು ಬೊಮನ್ ಇರಾನಿ ಅಂಥಹಾ ಪ್ರತಿಭಾವಂತ ನಟರೂ ಸಹ ಇದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಮಾತನಾಡಿದ್ದ ನಿರ್ದೇಶಕ ಮಾರುತಿ, ಭಾರತೀಯ ಚಿತ್ರರಂಗದಲ್ಲೇ ಯಾರೂ ತೆಗೆಯದ ರೀತಿ ನಾವು ಹಾರರ್ ಸಿನಿಮಾ ಮಾಡಿದ್ದೀವಿ ಎಂದಿದ್ದರು. ಭಾರಿ ಭರವಸೆಯನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದರು ಆದರೆ ಇದೀಗ ಸಿನಿಮಾ ಫ್ಲಾಪ್ ಆಗುವ ಸೂಚನೆ ದಟ್ಟವಾಗಿ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಲಾ ಸೀತಾರಾಮನ್​ಗಿದು 9ನೇ ಬಜೆಟ್; ಅವರ ಹಿಂದಿನ ಬಜೆಟ್​ಗಳ ವಿಶೇಷತೆಯೇನು? – Kannada News | From 2019 to 2025, Nirmala Sitharaman’s previous 8 budgets and highlights

2019-20ರ ಬಜೆಟ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಬಜೆಟ್ ಮಂಡನೆ. ಕುಂಠಿತ ಆರ್ಥಿಕ ಪ್ರಗತಿ, ಅಧಿಕ ನಿರುದ್ಯೋಗ, ಅನುಭೋಗದಲ್ಲಿ ಇಳಿಕೆ ಇತ್ಯಾದಿ ಆರ್ಥಿಕ ಸವಾಲುಗಳ ಸಂದರ್ಭದಲ್ಲಿ ಬಜೆಟ್ ರೂಪಿಸುವ ಸವಾಲು ಅವರದ್ದಾಗಿತ್ತು. ಬಂಡವಾಳ ಹಿಂತೆಗೆತ, ಅಧಿಕ ಟ್ಯಾಕ್ಸ್ ಸರ್ಚಾರ್ಜ್ ಇತ್ಯಾದಿ ಕ್ರಮಗಳಿಂದ ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಂಡರು. ಮುಂದಿನ ಐದು ವರ್ಷಕ್ಕೆ ಹಲವು ಲಕ್ಷ ಕೋಟಿ ರೂಗಳ ಹೂಡಿಕೆ ಯೋಜನೆ ಪ್ರಕಟಿಸಿದರು. ಬಜೆಟ್ ಪತ್ರವನ್ನು ಸೂಟ್​ಕೇಸ್​ನಲ್ಲಿ ಕೊಂಡೊಯ್ಯುವ ಸಂಪ್ರದಾಯ ಮುರಿದು, ಸಾಂಪ್ರದಾಯಿಕ ಚೀಲದಲ್ಲಿ ಮುಂಗಡಪತ್ರ ಒಯ್ದರು.

Source link

ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ – Kannada News | Rashika Shetty Express Shock Over Gilli Nata Craze

ರಾಶಿಕಾ ಶೆಟ್ಟಿ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರು ಈಗ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಗಿಲ್ಲಿ ಫ್ಯಾನ್ಸ್ ಇಷ್ಟು ಹಿರಿದಾಗಿದೆ ಎಂಬ ವಿಷಯ ಗೊತ್ತಿರಲಿಲ್ಲ ಎಂದಿದ್ದಾರೆ ಅವರು. ಪ್ರತಿ ವ್ಯಕ್ತಿ ಕೂಡ ಇದನ್ನೇ ಹೇಳುತ್ತಿದ್ದಾರೆ. ಅಭಿಮಾನಿ ಬಳಗ ನೋಡಿ ಸ್ವತಃ ಗಿಲ್ಲಿಗೆ ಅಚ್ಚರಿ ಆಗಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರಿಗೆ ಶುಭ ಸುದ್ದಿ: ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಿದ BMRCL – Kannada News | BMRCL Invites Civil Tenders for Bengaluru Orange Line Metro

ಬೆಂಗಳೂರು, ಜನವರಿ 13: ಜೆ.ಪಿ. ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್​​ಸಿಎಲ್ ಗುಡ್​​ನ್ಯೂಸ್​​ ಕೊಟ್ಟಿದೆ.​​ ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಲಾಗಿದ್ದು, ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿವರೆಗಿನ‌ ಕಾಮಗಾರಿಯನ್ನು ಇದು ಒಳಗೊಂಡಿದೆ. ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮೂರು ಪ್ಯಾಕೇಜ್ನಲ್ಲಿ BMRCL ಸಿವಿಲ್​​ ಟೆಂಡರ್​​ ಕರೆದಿದೆ. ಮೂರು ಪ್ಯಾಜೇಜ್​​ಗಳಿಗೂ ಪ್ರತ್ಯೇಕ ಬಜೆಟ್​​ ನೀಡಲಾಗಿದೆ.

ಪ್ಯಾಕೇಜ್ 1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಓವರ್‌ ತೆರವು‌ ಒಳಗೊಂಡು ಒಟ್ಟು ಜೆ.ಪಿ. ನಗರ 5ನೇ ಹಂತ, ಜೆ.ಪಿ. ನಗರ, ಕಾದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್​​ನ ಮೊತ್ತ 1,375 ಕೋಟಿ ರೂಪಾಯಿಗಳು. ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಡಬಲ್ ಡೆಕ್ಕರ್​​ನ ಪ್ಯಾಕೇಜ್ 2 ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್​​ ಹೊಸಕೆರಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣಗಳು ಸೇರಿವೆ.

ಇದನ್ನೂ ಓದಿ: ಆರೆಂಜ್ ಲೈನ್​ಗಾಗಿ 6500 ಮರ ಕಡಿಯಲು ಮುಂದಾದ ನಮ್ಮ ಮೆಟ್ರೋ; ಪರಿಸರ ಹೋರಾಟಗಾರರ ಜತೆ ಅಧಿಕಾರಿಗಳ ಸಭೆ

ಪ್ಯಾಕೇಜ್ 3ರ ಕಾರಿಡಾರ್ 1 ವಿನಾಯಕ ಲೇಔಟ್‌ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, BDA ಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣ ಇದರಲ್ಲಿ ಸೇರಿವೆ. ಹಾಗೆಯೇ ಪ್ಯಾಕೇಜ್ 3ರ ಕಾರಿಡಾರ್ 2 ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಪ್ರವೇಶ ಮಾರ್ಗ ಮತ್ತು ನಿರ್ಗಮನ ಮಾರ್ಗ ಒಳಗೊಂಡಿದ್ದು, ಇದರ ಒಟ್ಟು ಮೊತ್ತ 1415 ಕೋಟಿ ರೂಪಾಯಿಗಳಾಗಿವೆ.

ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್​​ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಇನ್ನೂ ಆರಂಭವಾಗಿರಲಿಲ್ಲ. 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇನ್ನೂ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ ಎಂಬ ಬೇಸರ ಸಿಲಿಕಾನ್​​ ಸಿಟಿ ಮಂದಿಯನ್ನು ಕಾಡಿತ್ತು. ಈ ನಡುವೆ BMRCL ಶುಭ ಸುದ್ದಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಏನಾದರೂ ತಗೊಳ್ಳಿ ಪ್ಲೀಸ್, ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ – Kannada News | Watch: Shop Assistant Breaks Down After Customer Walks Away

ಜೈಪುರ, ಜನವರಿ 13: ಯಾವುದೇ ಅಂಗಡಿಗೆ ಹೋದಾಗ ಅಲ್ಲಿರುವ ವಸ್ತುಗಳು ಇಷ್ಟವಾಗಬೇಕಂತೇನಿಲ್ಲ, ಖರೀದಿ ಮಾಡಬೇಕಂತಲೂ ಇಲ್ಲ. ಆದರೆ ಗಂಟೆಗಟ್ಟಲೆ ಅದು ತೋರಿಸಿ, ಇದು ತೋರಿಸಿ ಎಂದು ಸಿಬ್ಬಂದಿಯ ಸಮಯ ಹಾಳು ಮಾಡಿ, ಏನೂ ಕೊಳ್ಳದೆ ಹೊರಟಾಗ ಅವರಿಗೆ ಬೇಸರವಾಗದೇ ಇದ್ದೀತೆ. ಅಂಥದ್ದೇ ಘಟನೆ ಜೈಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ಜೈಪುರದ ಅಂಗಡಿಗೆ ಹೋಗಿ ಗಂಟೆಗಟ್ಟಲೆ ಸಮಯ ಹಾಳು ಮಾಡಿ ಕೊನೆಗೆ ಏನೂ ಕೊಳ್ಳದೆ ಹೊರಟಾಗ ಮಹಿಳಾ ವ್ಯಾಪಾರಿ ಗ್ರಾಹಕರ ಕಾಲಿಗೆ ಬಿದ್ದು ಏನಾದರೂ ಖರೀದಿ ಮಾಡುವಂತೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ ನಟ? ರನ್ನರ್ ಅಪ್ ಸ್ಥಾನ ಫಿಕ್ಸ್? – Kannada News | Gilli Bigg Boss Kannada Journey: Will History Repeat? Winner or Runner up Like Arun Sagar?

ಅದು 2013ರ ಸಮಯ. ಆಗತಾನೇ ಬಿಗ್ ಬಾಸ್ (Bigg Boss) ಕನ್ನಡಕ್ಕೆ ಬಂತು. ಕಿಚ್ಚ ಸುದೀಪ್ ಅವರು ಇದರ ಹೋಸ್ಟ್ ಆದರು. ಈಟಿವಿ ಕನ್ನಡದಲ್ಲಿ ಶೋ ಪ್ರಸಾರ ಕಂಡಿತು. 15 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದರು. ಈ ಪೈಕಿ ವಿಜಯ್ ರಾಘವೇಂದ್ರ ಗೆಲುವು ಕಂಡರೆ, ಅರುಣ್ ಸಾಗರ್ ರನ್ನರ್ ಅಪ್ ಆದರು. ಅರುಣ್ ಸಾಗರ್ ನಿಜವಾದ ವಿನ್ನರ್ ಆಗಬೇಕಿತ್ತು ಎಂಬುದು ವೀಕ್ಷಕರ ಅಭಿಪ್ರಾಯ ಆಗಿತ್ತು. ಈಗ ಈ ಸಾಲಿಗೆ ಗಿಲ್ಲಿ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್​​ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಆದರೆ, ಕೊನೆಯ ವಾರಗಳಲ್ಲಿ ಟ್ರೆಂಡ್ ಬದಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಕಳೆದ ವಾರ ಸೀಸನ್ ಚಪ್ಪಾಳೆಯನ್ನು ಸುದೀಪ್ ಅವರು ಧ್ರುವಂತ್​​ಗೆ ನೀಡಿದರು. ಇಡೀ ಸೀಸನ್ ಉದ್ದಕ್ಕೂ ಮನರಂಜನೆ ನೀಡಿದ್ದು ಗಿಲ್ಲಿ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಗಿಲ್ಲಿಗೆ ಚಪ್ಪಾಳೆ ಸಿಗುತ್ತಿದ್ದಂತೆ, ಗಿಲ್ಲಿ ಬಳಿ ಮಾತನಾಡಿದ್ದ ರಘು, ‘ಧ್ರುವಂತ್ ಈ ಬಾರಿ ವಿನ್ ಆದರೂ ಆಗಬಹುದು’ ಎಂದಿದ್ದರು. ಇನ್ನು, ಅಶ್ವಿನಿ ಕೂಡ ಒಳ್ಳೆಯ ಸ್ಪರ್ಧೆಯನ್ನೇ ನೀಡುತ್ತಿದ್ದು, ಅವರಿಗೂ ವಿಜಯಲಕ್ಷ್ಮೀ ಒಲಿಯಬಹುದು ಎಂಬುದು ಕೆಲವರ ಅಭಿಪ್ರಾಯ.

ಇದನ್ನೂ ಓದಿ: ಬಿಗ್ ಬಾಸ್ ಎದುರು ವಿಚಿತ್ರ ಆಸೆ ಹೇಳಿಕೊಂಡ ಗಿಲ್ಲಿ ನಟ; ಈಡೇರುತ್ತಾ ಬಯಕೆ?

ಇನ್ನು ಗಿಲ್ಲಿ ಅವರದ್ದು ಒಂದು ಕರಾಳ ಇತಿಹಾಸ ಇದೆ. ಅವರು ಸಾಕಷ್ಟು ಶೋಗಳನ್ನು ಮಾಡಿದ್ದರು ಕೂಡ ಯಾವುದನ್ನೂ ವಿನ್ ಆಗಿಲ್ಲ. ಎಲ್ಲ ಕಡೆಗಳಲ್ಲಿ ರನ್ನರ್ ಅಪ್ ಆಗಿದ್ದೇ ಹೆಚ್ಚು. ಈ ಶೋನಲ್ಲೂ ಇತಿಹಾಸ ಮರುಕಳಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹಾಗಾದಲ್ಲಿ ಅವರು ಮತ್ತೋರ್ವ ಅರುಣ್ ಸಾಗರ್ ಆಗುತ್ತಾರೆ ಎಂಬುದು ಫ್ಯಾನ್ಸ್ ಅಭಿಪ್ರಾಯ. ಅರ್ಹರಿಗೆ ಗೆಲುವು ಸಿಗಬೇಕು ಎಂಬುದು ವೀಕ್ಷಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:45 pm, Tue, 13 January 26

Source link

ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ! ಮುತ್ತು, ಹವಳ, ನೀಲಮಣಿ ಸೇರಿ ಏನೇನು ಸಿಕ್ತು? ಇಲ್ಲಿದೆ ನೋಡಿ – Kannada News | Ancient Treasure Unearthed Again in Lakkundi Village, Gadag: Pearls, Coral, Blue Sapphire and Rare Artifacts Found

ಗದಗ, ಜನವರಿ 13: ಅರ್ಧ ಕೆಜಿ ಚಿನ್ನಾಭರಣಗಳ ನಿಧಿ ಸಿಕ್ಕಿ ರಾಜ್ಯವೇ ಕುತೂಹಲದಿಂದ ನೋಡುವಂತಾಗಿರುವ ಗದಗದ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು ಪತ್ತೆಯಾಗಿವೆ. ಗ್ರಾಮದ ಬಸಪ್ಪ ಬಡಿಗೇರ ಎಂಬವರಿಗೆ ಮುತ್ತು, ಹವಳ, ನೀಲಮಣಿ, ಸ್ಫಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ಹಲವು ವಸ್ತುಗಳುಳ್ಳ ನಿಧಿ ದೊರೆತಿದೆ. ಬಸಪ್ಪ ಬಡಿಗೇರ ಗ್ರಾಮದಲ್ಲಿ ಹಲವು ವರ್ಷಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಮಾಡುತ್ತಾರೆ. ಈ ಹಿಂದೆ ಸಾಕಷ್ಟು ಪುರಾತನ ಕಾಲದ ವಸ್ತುಗಳು ಅವರಿಗೆ ಸಿಕ್ಕಿದ್ದವು ಎನ್ನಲಾಗಿದೆ. ಅವುಗಳನ್ನೆಲ್ಲ ಅವರು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಇದೀಗ, ಲಕ್ಕುಂಡಿಯಲ್ಲಿ ಅಪಾರ ಚಿನ್ನ ಇದೆ ಎನ್ನುವ ನಂಬಿಕೆ ಬೆನ್ನಲ್ಲೇ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link