ಶಾಸಕರಾದ ಬಳಿಕ ಮೊದಲ ಸಭೆಗೆ ಲ್ಯಾಪ್ಟಾಪ್ ಹಿಡಿದು ಬಂದ ಸಮರ್ಥ್, ಕುಡಿಯುವ ನೀರಿಗೆ ಹೊತ್ತು – Kannada News | Samarth Shamanur First Meeting With Officer after MLA at Davanagere
ದಾವಣಗೆರೆ, (ಮೇ 15): ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಮರ್ಥ್ ಶಾಮನೂರು (Samarth Shamanur) ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಿನ್ನೆ (ಮೇ 14) ವಿಧಾನಸೌಧಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಮರ್ಥ್ ಮರುದಿನವೇ ಅಂದರೆ ಇಂದು (ಮೇ 15) ಅಧಿಕಾರಿಗಳ ಸಭೆ ನಡೆಸಿ ಗಮನಸೆಳೆದಿದ್ದಾರೆ. ದಾವಣಗೆರೆ (Davanagere) ನಗರದ ಅರುಣಾ ಸರ್ಕಲ್ ಬಳಿ ಇರುವ ಪಶುಸಂಗೋಪನೆ ಇಲಾಖೆ ಸಭಾಂಗಣದಲ್ಲಿ ಸಭೆ ನಡೆದಿದ್ದು, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಲ್ಯಾಪ್ಟಾಪ್ನಲ್ಲಿ ದಾಖಲು ಮಾಡಿಕೊಂಡರು. ಇನ್ನು…