Category Archives: Blog

Your blog category

ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು – Kannada News | Bidar Woman Accuses Police Husband of Dowry Harassment, Obscene Messages

ಬೀದರ್​​, ಜನವರಿ 12: ಪೊಲೀಸ್​​ ಕಾನ್ಸ್​​ಟೇಬಲ್ ಪತಿ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ನೀಡೋದಲ್ಲದೆ, ಮಾನಸಿಕ ಹಿಂಸೆ ಮತ್ತು ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಬೀದರ್​​ ಜಿಲ್ಲೆಯ ಔರಾದ್​ನಲ್ಲಿ ಯುವತಿಯೋರ್ವರು ಆರೋಪಿಸಿದ್ದಾರೆ. ಚಿಟಗುಪ್ಪ ಮೂಲದ ಕಾನ್ಸ್​​ಟೇಬಲ್​​ ಮಚೇಂದ್ರ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಸೀನಾ ಹೇಳಿದ್ದಾರೆ.

‘ಅಕ್ಕನ ಮಗಳ ಮದುವೆ ಆಗೋದಾಗಿ ಬೆದರಿಕೆ’

ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಣೆ ಪಿಸಿ ಆಗಿರುವ ಮಚೇಂದ್ರ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ವರದಕ್ಷಿಣೆ ಕೊಡದಿದ್ರೆ ಅಕ್ಕನ ಮಗಳನ್ನ ಮದುವೆ ಆಗೋದಾಗಿ ಪತಿ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ರೂ ಯಾವುದೇ ಕ್ರಮ ಆಗಿಲ್ಲ. ಈ ಹಿಂದೆ ಔರಾದ್ ತಾಲೂಕಿನ ಚಿಂತಾಕಿ ಠಾಣೆಯಲ್ಲೂ​​ FIR​ ಆಗಿದ್ದು,  ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನಮಗೆ ರಕ್ಷಣೆ ನೀಡುವ ಜೊತೆಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ಯುವತಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮರಣ ತಂದ ಮಹಿಳೆ ಸಂಗ; ಕೊನೆಗೂ ಬದುಕಲಿಲ್ಲ ಎಂಜಿನಿಯರ್​​!

ಸಂತ್ರಸ್ತ ಯುವತಿ ಅಳಲು

2022ರ ಡಿಸೆಂಬರ್ 14ರಂದು ಮಚೇಂದ್ರ, ಸೀನಾ ಮದುವೆ ಆಗಿತ್ತು. ಆರಂಭದಲ್ಲಿ ದಂಪತಿ ಬೆಂಗಳೂರಿನಲ್ಲಿ ಸುಖವಾಗಿಯೇ ಇದ್ದರು. ನಂತರ ಹುಷಾರಿಲ್ಲ ಅಂತ ಪತ್ನಿಯನ್ನ ಮಚೇಂದ್ರ ತವರು ಮನೆಗೆ ಬಿಟ್ಟಿದ್ದ. ಬಳಿಕ 15 ತಿಂಗಳು ಕಳೆದ್ರೂ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮಕ್ಕಳು ಆಗಿಲ್ಲ, ಹೀಗಾಗಿ ತನೆಗೆ ವರದಕ್ಷಿಣೆ ನೀಡುವಂತೆ ಆತ ಬೇಡಿಕೆ ಇಟ್ಟಿದ್ದಾನೆ. ಈಗಾಗಲೇ 26 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದೇವೆ. ಆ ಸಾಲವೇ ನಮಗೆ ತೀರಿಸಲಾಗಿಲ್ಲ ಈಗ ಮತ್ತೆ ವರದಕ್ಷಿಣೆ ನೋಡೋದು ಹೇಗೆ ಎಂದು ಸಂತ್ರಸ್ತೆ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು? ಪತ್ತೆ ಹಚ್ಚಿದವರಿಗೆ ಎಷ್ಟು ಪಾಲು? – Kannada News | Gold Treasure found In lakkundi: Who Is owner the this Property? here Is officer Explained What Says Indian Treasure Trove Act

ಗದಗ, (ಜನವರಿ 12): ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ಗುಪ್ತನಿಧಿಯನ್ನು (lakkundi Gold Treasure) ಕುಟುಂಬ ಜಿಲ್ಲಾಡಳಿತಕ್ಕೆ ಒಪ್ಪಿಸಿದೆ. ಮನೆಯ ಪಾಯಾ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕೂಡಲೇ ಕುಟುಂಬಸ್ಥರು ಅದನ್ನು ಸರ್ಕಾರಕ್ಕೆ ಒಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದೀಗ ಸಿಕ್ಕ ನಿಧಿ ಯಾರಿಗೆ ಸೇರುತ್ತೆ? ಅದರ ವಾರಸುದಾರರು ಯಾರಾಗಿರ್ತಾರೆ? ಇನ್ನು ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸಿಕ್ಕ ನಿಧಿಯನ್ನ ರಿತ್ತಿ ಕುಟುಂಬ ವಾಪಸ್​ ಕೊಟ್ರೂ ಸಹ.. ಆ ನಿಧಿ ಬಗ್ಗೆ ಚರ್ಚೆ ಆಗೇ ಆಗುತ್ತೆ.. ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ? ನಿಧಿ ಕಾಯ್ದೆಯ ಪ್ರಕಾರ ಯಾರಿಗೆ ಆ ಚಿನ್ನಾಭಾರಣ ಸೇರ್ಬೇಕು? ಅನ್ನೋದು ಕಾನೂನಿನಲ್ಲಿದೆ.
.
ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ. 100 ವರ್ಷಕ್ಕಿಂತ ಹಳೆಯದಾದ ನಿಧಿ ಸರ್ಕಾರದ ಸ್ವತ್ತು ಆಗಲಿದೆ. ಆದ್ರೆ ಆ ನಿಧಿ ಸರ್ಕಾರದ ಸ್ವತ್ತಾದ್ರೂ ಕಂಡಿಷನ್ಸ್​ ಅಪ್ಲೈ ಆಗುತ್ತೆ. ಕಾಯ್ದೆ ಪ್ರಕಾರ ನಿಧಿ ಇದ್ದ ಜಾಗದ ಮಾಲೀಕರಿಗೂ ಐದನೇ ಒಂದು ಭಾಗ ಕೊಡ್ಬೆಕಾಗುತ್ತಂತೆ. ಹಾಗೆ ನಿಧಿ ಪತ್ತೆ ಹಚ್ಚಿದವರಿಗೂ ನಿಧಿಯ ಮೌಲ್ಯ ಎಷ್ಟಿರುತ್ತೋ ಅದ್ರ ಒಂದು ಭಾಗ ಪಾಲು ಕೊಡ್ಬೆಕಾಗುತ್ತೆ. ಈಗ ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಪತ್ತೆ ಹಚ್ಚಿದ್ದು ಪ್ರಜ್ವಲ್​ ಅನ್ನೋ ಹುಡುಗ. ನಿಧಿ ಕಾಯ್ದೆ ಪ್ರಕಾರ ಇಡೀ ರಿತ್ತಿ ಕುಟುಂಬಕ್ಕೆ, ಪ್ರಜ್ವಲ್​ಗೂ ನಿಧಿಯಲ್ಲಿ ಪಾಲು ಸಿಗಬೇಕಿದೆ. ಈ ಬಗ್ಗೆ ಪುರಾತತ್ವ ಇಲಾಖೆ ನಿರ್ದೇಶಕ ಶೆಜೇಶ್ವರ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲ್ವೆ ಟಿಕೆಟ್ ಬುಕಿಂಗ್ ಅಲರ್ಟ್: ಆಧಾರ್ ದೃಢೀಕೃತ ಬಳಕೆದಾರರಿಗೆ ನಿಯಮ ಬದಲಾವಣೆ – Kannada News | IRCTC rules change for Aadhaar authenticated users, train fare change, tatkal ticket booking

ನವದೆಹಲಿ, ಜನವರಿ 12: ಐಆರ್​ಸಿಟಿಸಿಯ ಆಧಾರ್ ದೃಢೀಕೃತ ಬಳಕೆದಾರರು ಟ್ರೈನ್ ಟಿಕೆಟ್ ಬುಕ್ ಮಾಡುವ ನಿಯಮಗಳಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಜನರಲ್ ರಿಸರ್ವ್ ಟಿಕೆಟ್ ಬುಕಿಂಗ್ ಹಾಗು ಅಡ್ವಾನ್​ ರಿಸರ್ವೇಶನ್ ಪೀರಿಯಡ್ (ಎಆರ್​ಪಿ) ಸಂಬಂಧಿಸಿದ ನಿಯಮಗಳಲ್ಲಿ ಈ ಬದಲಾವಣೆಗಳಿವೆ. ಇದರಲ್ಲಿ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಆಧಾರ್ ದೃಢೀಕೃತ ಬಳಕೆದಾರರಿಗೆ ಆದ್ಯತೆ ಕೊಡುವ (ಸ್ಪೆಷಲ್ ವಿಂಡೋ) ಒಂದು ವ್ಯವಸ್ಥೆಯೂ ಇದೆ.

ಈ ಹಿಂದೆ ಇದ್ದ ನಿಯಮಗಳ ಪ್ರಕಾರ, ಆಧಾರ್ ದೃಢೀಕೃತ ಬಳಕೆದಾರರು ರಿಸರ್ವ್ಡ್ ಟಿಕೆಟ್ ಬುಕಿಂಗ್ ಆರಂಭಗೊಂಡ ಮೊದಲ ದಿನ ಬೆಳಗ್ಗೆ 8ರಿಂದ ಸಂಜೆ 4ರವವರೆಗೆ ಮಾತ್ರ ಟ್ರೈನ್ ಟಿಕೆಟ್ ಬುಕ್ ಮಾಡಲು ಅವಕಾಶ ಹೊಂದಿರುತ್ತಾರೆ. ಇವತ್ತಿನಿಂದ (ಜನವರಿ 12) ಎಆರ್​ಪಿಯ ಮೊದಲ ದಿನವನ್ನು ಸಂಪೂರ್ಣ ಆಧಾರ್ ದೃಢೀಕೃತ ಬಳಕೆದಾರರಿಗೆ ಮೀಸಲಿರಿಸಲಾಗಿದೆ. ಅಂದರೆ, ಇವರು ಮಾತ್ರವೇ ಅಂದು ಟ್ರೈನ್ ಟಿಕೆಟ್ ಬುಕಿಂಗ್ ಮಾಡಬಹುದು.

ಇದನ್ನೂ ಓದಿ: ಪಿಎಸ್​ಎಲ್​ವಿ ರಾಕೆಟ್ ವೈಫಲ್ಯ; ನಾಶಗೊಂಡ ಸೆಟಿಲೈಟ್​ಗಳ ನಷ್ಟ ಯಾರು ಭರಿಸೋದು?

ತತ್ಕಾಲ್ ಟಿಕೆಟ್ ಬುಕಿಂಗ್

ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ನೀವು ತತ್​ಕಾಲ್ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಬೇಕು. ಆಧಾರ್ ಒಟಿಪಿ ಮೂಲಕ ದೃಢೀಕರಣ ಪಡೆದರೆ ಮಾತ್ರ ತತ್ಕಾಲ್ ಟಿಕೆಟ್ ಬುಕಿಂಗ್ ಸಾಧ್ಯ. ಇದು 2025ರ ಜುಲೈನಿಂದ ಜಾರಿಗೆ ಬಂದಿರುವ ನಿಯಮ.

ಅಡ್ವಾನ್ಸ್ ರಿಸರ್ವೇಶನ್

ನೀವು ಟ್ರೈನ್ ಹೊರಡುವ ದಿನಕ್ಕೆ 60 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ಕೊಡಲಾಗಿದೆ. ಅಂದರೆ ಅಡ್ವಾನ್ಸ್ ರಿಸರ್ವೇಶನ್ 60 ದಿನಗಳಷ್ಟು ಇದೆ.

ಇದನ್ನೂ ಓದಿ: ರೆಸ್ಟೋರೆಂಟ್​ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್​ಲೈನ್​ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್​ನದ್ದೋ, ಹೋಟೆಲ್​ನದ್ದೋ?

ಟ್ರೈನ್ ಪ್ರಯಾಣ ದರ ಹೆಚ್ಚಳ

2025ರ ಡಿಸೆಂಬರ್ 26ರಂದು ರೈಲ್ವೇಸ್ ತನ್ನ ಪ್ರಯಾಣ ಸೇವೆಯ ದರಗಳನ್ನು ಹೆಚ್ಚಿಸಿದೆ. 216ರಿಂದ 750 ಕಿಮೀ ಅಂತರಕ್ಕೆ 5 ರೂ ಟಿಕೆಟ್ ಬೆಲೆ ಏರಿಕೆ ಮಾಡಲಾಗಿದೆ. 751 ಕಿಮೀಯಿಂದ 1,250 ಕಿಮೀವರೆಗಿನ ಅಂತರಕ್ಕೆ 10 ರೂ; 1,251 ಕಿಮೀಯಿಂದ 1,750 ಕಿಮೀವರೆಗಿನ ಅಂತರಕ್ಕೆ 15 ರೂ; 1,751 ಕಿಮೀಯಿಂದ 2,250 ಕಿಮೀವರೆಗಿನ ಅಂತರಕ್ಕೆ 20 ರೂನಷ್ಟು ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ. ಸ್ಲೀಪರ್ ಕ್ಲಾಸ್ ಮತ್ತು ಫಸ್ಟ್ ಕ್ಲಾಸ್ ಆರ್ಡಿನರಿ ಟಿಕೆಟ್​ನಲ್ಲಿ ಪ್ರತೀ ಕಿಮೀಗೆ ಒಂದು ಪೈಸೆ ಬೆಲೆ ಏರಿಕೆ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಿಮಾಚಲ ಪ್ರದೇಶದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ – Kannada News | 8 Year Old Child Killed Several Trapped As Himachal Building Gutted In Fire

ಸೋಲನ್, ಡಿಸೆಂಬರ್ 12: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಅಪಾರ್ಟ್​​​ಮೆಂಟ್ ಕಟ್ಟಡವೊಂದರಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ (Fire Accident) 8 ವರ್ಷದ ಮಗು ಸಾವನ್ನಪ್ಪಿದ್ದು, ನೇಪಾಳಿ ಮೂಲದ ವಲಸೆ ಕಾರ್ಮಿಕರು ಸೇರಿದಂತೆ ಹಲವರು ಸಿಲುಕಿಕೊಂಡಿದ್ದಾರೆ. ಹಲವಾರು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಆದರೂ ನಿರಂತರವಾಗಿ ಸಿಲಿಂಡರ್ ಸ್ಫೋಟಗಳು ಉಂಟಾಗಿದ್ದರಿಂದ ಬೆಂಕಿ ನಂದಿಸುವುದು ಕಷ್ಟವಾಯಿತು. ಇಂದು ಬೆಳಿಗ್ಗೆ 8 ಗಂಟೆಯವರೆಗೂ ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ಬೆಂಕಿಯನ್ನು ನಿಯಂತ್ರಿಸಲು, ಹತ್ತಿರದ ಅಂಗಡಿಗಳು ಮತ್ತು ಮನೆಗಳಿಗೆ ಹರಡದಂತೆ ತಡೆಯಲು 6 ಅಗ್ನಿಶಾಮಕ ದಳದ ವಾಹನಗಳು ಮತ್ತು ನೀರಿನ ಟ್ಯಾಂಕರ್‌ಗಳನ್ನು ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ಸಹ ಕರೆಸಿಕೊಳ್ಳಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ಜನ ನಾಯಗನ್’ ಸಿನಿಮಾ ವಿವಾದ – Kannada News | Thalapathy Vijay starrer Jana Nayagan movie Producer moves to Supreme Court over CBFC issue

ನಟ ದಳಪತಿ ವಿಜಯ್ (Thalapathy Vijay) ಅವರ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜನ ನಾಯಗನ್’ (Jana Nayagan) ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿ 9ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿತ್ತು. ಅಡ್ವಾನ್ಸ್ ಬುಕಿಂಗ್ ಕೂಡ ಶುರುವಾಗಿತ್ತು. ಆದರೆ ಅಂತಿಮ ಹಂತದಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಯಿತು. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡುವುದು ಅನಿವಾರ್ಯ ಆಯಿತು. ಈಗ ಈ ವಿವಾದ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ.

ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಸಿಗದೇ ಇರುವುದನ್ನು ಪ್ರಶ್ನಿಸಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶ ನೀಡಿತ್ತು. ಆದರೆ ಕೆಲವೇ ಗಂಟೆಗಳ ಬಳಿಕ ಈ ಆದೇಶಕ್ಕೆ ಸ್ವತಃ ಮದ್ರಾಸ್ ಹೈಕೋರ್ಟ್ ತಡೆ ನೀಡಿತು.

ಈ ಅರ್ಜಿಯ ಸೂಕ್ತ ವಿಚಾರಣೆ ನಡೆಯದೆಯೇ ಆದೇಶ ನೀಡಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಹಾಗಾಗಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಲಾಯಿತು. ಅಂದರೆ, ಅಲ್ಲಿಯ ತನಕ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಅವಕಾಶ ಇಲ್ಲದಂತಾಯಿತು. ಈಗ ನಿರ್ಮಾಪಕರು ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದ್ದಾರೆ. ಮದ್ರಾಸ್ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

‘ಜನ ನಾಯಗನ್’ ಸಿನಿಮಾದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಕತೆ ಇದೆ ಎನ್ನಲಾಗಿದೆ. ಸ್ವತಃ ವಿಜಯ್ ಅವರು ಸಿನಿಮಾ ಬಿಟ್ಟು ರಾಜಕೀಯದ ಕಡೆಗೆ ಹೊರಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿಯೇ ‘ಜನ ನಾಯಗನ್’ ಸಿನಿಮಾಗೆ ತೊಂದರೆ ಕೊಡಲಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ವಿವಾದವು ಈಗ ರಾಜಕೀಯದ ತಿರುವು ಪಡೆದುಕೊಂಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಜನವರಿ 21ಕ್ಕೆ ಮದ್ರಾಸ್ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇದರ ವಿಚಾರಣೆ ನಡೆದು, ಅಂತಿಮ ತೀರ್ಪು ಯಾವಾಗ ಬರಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಿರ್ಮಾಣ ಸಂಸ್ಥೆಗೆ ಸಾಕಷ್ಟು ನಷ್ಟ ಆಗಲಿದೆ. ‘ಜನ ನಾಯಗನ್’ ಬಿಡುಗಡೆ ದಿನಾಂಕ ಅನಿಶ್ವಿತ ಆಗಿರುವುದರಿಂದ ಇನ್ನುಳಿದ ಸಿನಿಮಾ ಮೇಲೂ ಇದು ಪರಿಣಾಮ ಬೀರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶೌಚಾಲಯ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನ: ಖಾಲಿ ಕೈಯಲ್ಲಿ ಹಿಂದಿರುಗಿದ ಕಳ್ಳರು – Kannada News | Uttara Kannada Bank Robbery Foiled: Thieves Drill Toilet Wall at Bank of Baroda

ಕಾರವಾರ, ಜನವರಿ 12: ಖದೀಮರು ಶೌಚಾಲಯದ (Toilet) ಗೋಡೆ ಕೊರೆದು ಬ್ಯಾಂಕ್​​ ದರೋಡೆಗೆ (Bank Robbery) ಯತ್ನಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದೆ. ಸದ್ಯ ಸ್ಥಳಕ್ಕೆ ಉತ್ತರ ಕನ್ನಡ ಎಸ್​​ಪಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶ್ವಾನ ದಳ ಸೇರಿದಂತೆ ತಜ್ಞರ ತಂಡ ಕಾರ್ಯಾಚರಣೆ ಮಾಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಬ್ಯಾಂಕ್ ಆಫ್ ಬರೋಡಾ ಇದೆ. ಶೌಚಾಲಯ ಪ್ರದೇಶ ಬಿಟ್ಟು ಬೇರೆ ಕಡೆ ಸಿಸಿ ಕ್ಯಾಮರಾ ಇರುವುದನ್ನು ತಿಳಿದ ಖದೀಮರು ಶೌಚಾಲಯದ ಹಿಂಭಾಗದ ಗೋಡೆಯನ್ನು ಕೊರೆದು ಒಳಹೊಕ್ಕಿದ್ದಾರೆ. ಬ್ಯಾಕ್​ನ ಸ್ಟ್ರಾಂಗ್ ರೂಮ್ ಗೋಡೆ ಒಡೆಯಲು ಯತ್ನಿಸಿದ್ದಾರೆ, ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಕಳ್ಳರು ಖಾಲಿ ಕೈಯಲ್ಲಿ ಹಿಂತಿರುಗಿದ್ದಾರೆ.

ಐಷಾರಾಮಿ ಬೈಕ್ ಮನೆ ಮುಂದೆ ನಿಲ್ಲಿಸುವ ಮುನ್ನ ಎಚ್ಚರ: 4 ಲಕ್ಷ ರೂ ಮೌಲ್ಯದ ಬೈಕ್​​ ಕಳ್ಳತನ

ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಲಕ್ಷ ರೂ ಬೆಲೆ ಬಾಳುವ ಡ್ಯೂಕ್​ ಬೈಕ್ ಕಳ್ಳತನ ನಡೆದಿರುವಂತಹ ಘಟನೆ ನೆಲಮಂಗಲದ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನಡೆದಿದೆ. ರಾಜೇಶ್ ಎಂಬುವವರಿಗೆ ಸೇರಿದ್ದ ಡ್ಯೂಕ್ ಬೈಕ್​​ ಕಳ್ಳತನವಾಗಿದೆ.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ಕಳ್ಳತನ: ಪೊಲೀಸ್ರು ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗಡೆ ತೂರಿದ ದರೋಡೆಕೋರರು

ರಾಜೇಶ್ ಇಂಜಿನಿಯರಿಂಗ್ ಮುಗಿಸಿ ಸ್ಟಾರ್ಟಪ್ ಕಂಪನಿ‌ ನಡೆಸುತ್ತಿದ್ದಾರೆ. ಕೆಲಸ ಮಗಿಸಿ ಮನೆ ಮುಂದೆ ಡ್ಯೂಕ್​ ಬೈಕ್ ನಿಲ್ಲಿಸಿದ್ದರು. ಬೆಳಿಗ್ಗೆ ಜಿಮ್​ಗೆ ಹೋಗಲು ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬೆಂಗಳೂರು ವಾಯುವ್ಯ ವಿಭಾಗ ಗಂಗಮ್ಮ ಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ.

ಶ್ರೀಗಂಧದ ಮರ ಕಳ್ಳತನ ಮಾಡ್ತಿದ್ದ ಮೂವರ ಬಂಧನ 

ಶ್ರೀ ಗಂಧದ ಮರ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಸವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 5 ಲಕ್ಷ ರೂ ಮೌಲ್ಯದ ಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಆಂಜನೇಯ, ಸುಬ್ರಹ್ಮಣ್ಯ ಮತ್ತು ಸಂಜಯ್ ಬಂಧಿತ ಆರೋಪಿಗಳು. ಮೂರು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು – Kannada News | Bigg Boss Kannada 12 in trouble Again Case Registered

ಬಿಗ್​ಬಾಸ್ ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಕಾರಣ ಆಗಿದ್ದು ಸುದೀಪ್ ಬಳಕೆ ಮಾಡಿದ ಪದ. ರಣಹದ್ದುಗಳ ಬಗ್ಗೆ ನಟ ಸುದೀಪ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ! ಸುದೀಪ್ ವಿರುದ್ಧ ಪಕ್ಷಿಪ್ರೇಮಿಗಳು ಹಾಗೂ ರಹಣದ್ದು ಸಂರಕ್ಷಣಾ ಟ್ರಸ್ಟ್​ನಿಂದ ಬೆಂಗಳೂರು ದಕ್ಷಿಣ DFO ರಾಮಕೃಷ್ಣಪ್ಪಗೆ ದೂರು ದಾಖಲು ಮಾಡಲಾಗಿದೆ.  ರಣಹದ್ದುಗಳು ಹೊಂಚು ಹಾಕಿ ಕರೆಕ್ಟ್ ಟೈಮ್​ಗೆ ಹಿಡಿಯುತ್ತೆಂಬ ಹೇಳಿಕೆಯೇ ದೂರು ನೀಡಲು ಕಾರಣ! ಹದ್ದುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಹೂವು ಇಲ್ಲದೆ ಜಾತ್ರೆಯೇ ಇಲ್ಲ: ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಈ ಹೂ ಸಮರ್ಪಣೆ ಮಾಡಿದ್ರೆ ಕಷ್ಟ ದೂರ

Source link

Video: ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ – Kannada News | A young woman says Bangalore is the city I never want to visit.

ಬೆಂಗಳೂರು, ಜನವರಿ 12: ಬೆಂಗಳೂರು (Bengaluru) ಅಂದರೆ ಅದೇನೋ ಸೆಳೆತ. ಹೀಗಾಗಿ ಅದೆಷ್ಟೋ ಯುವ ಮನಸ್ಸುಗಳನ್ನು ಕೈ ಬೀಸಿ ತನ್ನತ್ತ ಕರೆಯುತ್ತದೆ. ಆದರೆ ಇದೀಗ ಯುವತಿಯೊಬ್ಬಳು (Young woman) ತಾನು ಎಂದಿಗೂ ಬೆಂಗಳೂರಿಗೆ ಬರಲು ಬಯಸಿರಲಿಲ್ಲ. ಆದರೆ ಇಲ್ಲಿಗೆ ಬಂದ ನಂತರದಲ್ಲಿ ನನ್ನ ಆರಂಭಿಕ ದಿನಗಳ ಹಿಂಜರಿಕೆ ಹಾಗೂ ಕಾಲಾನಂತರದಲ್ಲಿ ಆ ಭಾವನೆಗಳು ಸಂಪೂರ್ಣವಾಗಿ ಬದಲಾಗಿವೆ ಎಂಬುವುದನ್ನು ತಿಳಿಸಿದ್ದಾಳೆ. ರಾಜಧಾನಿ ಬೆಂಗಳೂರಿಗೆ ತೆರಳಿ ಒಂದು ವರ್ಷ ಪೂರೈಸಿದ ಬಗ್ಗೆ ಪ್ರಗತಿ ಝಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿ ಕೊಂಡಿದ್ದು ಜೀವನ ಬದಲಾಯಿಸಿದ ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಪ್ರಗತಿ ಝಾ (Pragathi Jha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿ ಜನವರಿ 5, 2025 ರಂದು ಬೆಂಗಳೂರಿಗೆ ಬಂದಿಳಿದದ್ದನ್ನು ನೆನಪಿಸಿಕೊಳ್ಳುತ್ತಾ ಕಾಲೇಜು ಪ್ಲೇಸ್‌ಮೆಂಟ್ ವೇಳೆ ನಾನು ಎಂದಿಗೂ ಇಲ್ಲಿಗೆ ಬರಲು ಬಯಸಿರಲಿಲ್ಲ. ದೇವರ ಯೋಜನೆಯನ್ನು ಕಣ್ಣು ಮುಚ್ಚಿ ಒಪ್ಪಬೇಕು. ನಾನು ಈ ಬೆಂಗಳೂರಿಗೆ ಬಂದು ನಿಖರವಾಗಿ ಒಂದು ವರ್ಷವಾಗಿದೆ ಎಂದು ಹೇಳುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಆದರೆ ಈ ಬೆಂಗಳೂರಿನ ಹೊರತಾಗಿ ಬೇರೆಲ್ಲಿಯಾದರೂ ನನಗೆ ಪ್ಲೇಸ್ ಮೆಂಟ್ ಆಗಲಿ ಎಂದು ಸಕ್ರಿಯವಾಗಿ ಪ್ರಾರ್ಥಿಸುತ್ತಿದ್ದೆ. ಇದು ತುಂಬಾ ದೊಡ್ಡ ನಗರ, ಸಂಚಾರ, ಜನದಟ್ಟಣೆ ಎಲ್ಲವೂ ಹೆಚ್ಚು. ನಾನು ಯಾವಾಗಲೂ ಈ ಜನಸಂದಣಿಯಿಂದ ದೂರವಿರಲು ಬಯಸುತ್ತೇನೆ. ಆದರೆ ವಿಧಿಯ ಯೋಜನೆಯೇ ಬೇರೆಯಾಗಿತ್ತು. ಬೆಂಗಳೂರು ತನ್ನನ್ನು ತಾನು ಊಹಿಸಿದ್ದಕ್ಕಿಂತ ಹೆಚ್ಚು ಬಲಶಾಲಿಯನ್ನಾಗಿ ಮಾಡಿತು ಎಂದಿದ್ದಾಳೆ.

ಅಂತಿಮ ಪರೀಕ್ಷೆಯ ವೇಳೆ ತಾನು ಕಾಲೇಜಿಗೆ ಮತ್ತೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾ, ನಾನು ಬೆಂಗಳೂರಿಗೆ ಹಿಂತಿರುಗಲು ಬಯಸುತ್ತೇನೆ ಎಂದು ನನಗೆ ಅನಿಸಿತು. ನಾನು ನನ್ನ ನಗರಕ್ಕೆ ಹಿಂತಿರುಗಲು ಬಯಸುತ್ತೇನೆ. ಇಲ್ಲಿನ ವಾತಾವರಣವು ಬೆಚ್ಚಗಿನ ಅಪ್ಪುಗೆಯಂತೆ ಭಾಸವಾಗುತ್ತದೆ. ಪ್ರತಿ ಏರಿಳಿತದಲ್ಲಿ ತನ್ನೊಂದಿಗೆ ನಿಂತಿದ್ದಕ್ಕಾಗಿ ಈ ನಗರಕ್ಕೆ ಧನ್ಯವಾದ. ಈ ನಗರವು ಎಲ್ಲಾ ಏರಿಳಿತಗಳನ್ನು ಕಂಡಿದೆ ಮತ್ತು ನನ್ನನ್ನು ತುಂಬಾ ಬಲಶಾಲಿಯನ್ನಾಗಿ ಮಾಡಿದೆ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಎಚ್ಚರಿಕೆ ನೀಡಿದ ತಜ್ಞರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರು ನಿಜವಾಗಿಯೂ ಅದ್ಭುತ ನಗರ. ನಾನು ಈ ನಗರವನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ದೇವರ ಯೋಜನೆಯನ್ನು ನಂಬಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬೆಂಗಳೂರಿನ ಮೇಲಿನ ನಿಮ್ಮ ಪ್ರೀತಿ ಅಪ್ರತಿಮ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿ-ಖಾತಾದಿಂದ ಎ-ಖಾತಾಗೆ ಕನ್ವರ್ಟ್​ ಆಗಲು ನಿಯಮವನ್ನು ಕಠಿಣಗೊಳಿಸಿದ ಜಿಬಿಎ; ಯಾವೆಲ್ಲಾ ದಾಖಲೆಗಳು ಬೇಕು? – Kannada News | Bangalore A Khata Rules: E Khata Mandatory for B Khata Apartment Conversion

ಬಿ-ಖಾತಾ ಹೊಂದಿರುವ ಅಪಾರ್ಟ್​ಮೆಂಟ್ ಮಾಲೀಕರು ಎ-ಖಾತಾಗೆ ಕನ್ವರ್ಟ್​ ಆಗೋದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಜನವರಿ 12: ನವೆಂಬರ್ 1 ರಿಂದ ಬಿ-ಖಾತಾ ಆಸ್ತಿ ದಾಖಲೆಗಳ ಎ-ಖಾತಾ ಪರಿವರ್ತನೆಗೆ ಇ- ಖಾತಾ ಹೊಂದಿರುವುದು ಅಗತ್ಯ ಎಂದು GBA ಹೇಳಿತ್ತು. ಈ ಹಿನ್ನೆಲೆ ರಾಜ್ಯದಲ್ಲಿ ಆಸ್ತಿ ನೋಂದಣಿ ಹಾಗೂ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಎ-ಖಾತಾ ನೀಡುವ ಪ್ರಕ್ರಿಯೆಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ . ಈ ನಿಯಮಗಳು ವಿಶೇಷವಾಗಿ ಬಿ-ಖಾತಾ ಹೊಂದಿರುವ ಅನುಮೋದಿತ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್​ಗಳಿಗೆ ಮಹತ್ವದ್ದಾಗಿವೆ.

ಇ-ಖಾತಾ ದೊರಕಿದ ನಂತರವೇ ಎ-ಖಾತಾಗೆ ಅರ್ಜಿ

ಅಧಿಕಾರಿಗಳು ಹೇಳುವಂತೆ ಅನುಮೋದಿತ ಲೇಔಟ್‌ಗಳು ಹಾಗೂ ಅನುಮೋದಿತ ಕಟ್ಟಡಗಳಲ್ಲಿನ ಫ್ಲಾಟ್ ಮಾಲೀಕರು ಈಗ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಮೊದಲು ಪ್ರತಿಯೊಬ್ಬ ಫ್ಲಾಟ್ ಮಾಲೀಕರು ಕಡ್ಡಾಯವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಇ-ಖಾತಾ ಪಡೆಯಬೇಕು. ಇ-ಖಾತಾ ದೊರಕಿದ ನಂತರವೇ ಎ-ಖಾತಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಪ್ರತ್ಯೇಕ ಫ್ಲಾಟ್ ಮಾಲೀಕರಿಂದ ವೈಯಕ್ತಿಕ ಅರ್ಜಿಯೇ ಕಡ್ಡಾಯವಾಗಿದೆ.

ಇದನ್ನೂ ಓದಿ B ಖಾತೆಯಿಂದ A ಖಾತೆಗೆ ಕನ್ವರ್ಟ್​ ಮಾಡಲು ಬೇಕೇ ಬೇಕು E ಖಾತೆ

ಪರಿಷ್ಕೃತ ವ್ಯವಸ್ಥೆಯಡಿ ಮಾಲೀಕರು ತಮ್ಮ ಮಾಲೀಕತ್ವದ ದಾಖಲೆಗಳು ಹಾಗೂ ಆಸ್ತಿ ತೆರಿಗೆ ಪಾವತಿ ವಿವರಗಳನ್ನು ಅಪ್‌ಲೋಡ್ ಮಾಡಿ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆಗೆ ಪ್ರಸ್ತುತ ವರ್ಷದ ಆಸ್ತಿ ತೆರಿಗೆಯ ಸಂಪೂರ್ಣ ಪಾವತಿ, ಮಂಜೂರಾದ ಕಟ್ಟಡ ಯೋಜನೆ ಹಾಗೂ ಬಿ-ಖಾತಾ ಹೊಂದಿರುವ ಭೂಮಿಯ ದಾಖಲೆಗಳನ್ನು ಹೊಂದಿರುವುದು ಅಗತ್ಯವಾಗಿದೆ. 1961ರ ಪುರಸಭೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಅಪಾರ್ಟ್‌ಮೆಂಟ್‌ಗಳನ್ನೂ ಎ-ಖಾತಾಗೆ ಪರಿಗಣಿಸಬಹುದು. ಆದರೆ ಉಲ್ಲಂಘನೆಯ ಪ್ರಮಾಣದ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಪ್ರಮುಖ ನಿರ್ಮಾಣ ಉಲ್ಲಂಘನೆಗಳಿದ್ದರೆ ಮಾರ್ಗದರ್ಶನ ಮೌಲ್ಯದ ಶೇಕಡಾ 5 ರಿಂದ 50 ರವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link