Category Archives: Blog

Your blog category

ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು! – Kannada News | Father dies of heart attack during daughters Kanyadan Wedding Ritual in Buldhana

ನವದೆಹಲಿ, ಮೇ 15: ಮದುವೆ ಮನೆಯ ತುಂಬ ಸಂತೋಷದ ವಾತಾವರಣವಿತ್ತು. ಮನೆ ಮಗಳ ಮದುವೆಯಾದ್ದರಿಂದ ಕುಟುಂಬದವರೆಲ್ಲ ಸಂಭ್ರಮದಲ್ಲಿದ್ದರು. ಆದರೆ, ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ಮದುವೆ (Wedding) ಮನೆ ಸೂತಕದ ಮನೆಯಾಗಿಹೋಯಿತು. ಮಹಾರಾಷ್ಟ್ರದ ಸಿಂಧ್‌ಖೇಡ್ ರಾಜಾ ತಾಲ್ಲೂಕಿನ ವರ್ದಾದಿಯಲ್ಲಿ ವಧುವಿನ ಕನ್ಯಾದಾನ ಮಾಡಿದ ತಂದೆ ತಂದೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವರ್ದಾದಿಯ ಕುರುಮದಾಸ್ ಭೂತೇಕರ್ ಅವರ ಪುತ್ರಿ ನಂದಿನಿ, ಜಲ್ನಾ ಜಿಲ್ಲೆಯ ಮಾಂಥಾದ ಪ್ರದೀಪ್ ನಾನೋಟೆ ಅವರನ್ನು ವಿವಾಹವಾದರು. ಗುರುವಾರ ಸಂಜೆ ಮುಖ್ಯ ವಿವಾಹ ಸಮಾರಂಭ ಪ್ರಾರಂಭವಾಯಿತು. ಅದ್ದೂರಿಯಾಗಿ ನಡೆದ ಈ ವಿವಾಹದಲ್ಲಿ ಕುರುಮದಾಸ್ ತನ್ನ ಮಗಳ ಕೈಯನ್ನು ವರನ ಮನೆಯವರ ಕೈಗೆ ಒಪ್ಪಿಸುವ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ಅವರಿಗೆ ಎದೆಯಲ್ಲಿ ನೋವುಂಟಾಯಿತು. ಅದರ ನಂತರ, ಅವರು ವಿವಾಹ ಸಮಾರಂಭ ನಡೆಯುತ್ತಿರುವ ಸ್ಥಳದಲ್ಲಿಯೇ ಕುಸಿದುಬಿದ್ದರು.

ಇದನ್ನೂ ಓದಿ: ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ

ಆರಂಭದಲ್ಲಿ, ಅಲ್ಲಿದ್ದವರು ಒತ್ತಡ ಅಥವಾ ಆಯಾಸದಿಂದ ಅವರು ಮೂರ್ಛೆ ಹೋಗಿರಬೇಕು ಎಂದು ಭಾವಿಸಿದ್ದರು. ಸಂಬಂಧಿಕರು ಅವರನ್ನು ಬೇಗನೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದರಿಂದಾಗಿ ಸಂತೋಷ ತುಂಬಿದ್ದ ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿತು.

ಮೃತ ಕುರುಮದಾಸ್ ಭೂಟೇಕರ್ ಅವರ ಆರೋಗ್ಯ ಸ್ವಲ್ಪ ಸಮಯದಿಂದ ಕ್ಷೀಣಿಸುತ್ತಿತ್ತು. ಡಿಸೆಂಬರ್‌ನಲ್ಲಿ ಅವರಿಗೆ ಬೈಪಾಸ್ ಸರ್ಜರಿ ನಡೆದಿತ್ತು. ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರು. ಆದರೆ ಅವರು ತಮ್ಮ ಮಗಳ ಮದುವೆಯನ್ನು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮಾಡಿಸುವ ಕನಸನ್ನು ಹೊಂದಿದ್ದರು. ಈ ಕನಸನ್ನು ನನಸಾಗಿಸಲು ಅವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಮಗಳ ಮದುವೆಯಲ್ಲೇ ಅವರು ಪ್ರಾಣ ಬಿಡುವಂತಾಯಿತು.

ಇದನ್ನೂ ಓದಿ: Video: ವಂದೇ ಭಾರತ್ ರೈಲು ಟಿಕೆಟ್‌ ಹಾಫ್ ರೇಟ್‌ಗೆ ಮಾರಾಟ, ಟಿಟಿಇ ಅಮಾನತು

ಈ ಘಟನೆಯ ಸುದ್ದಿ ಆ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಮಗಳನ್ನು ಸಂತೋಷದಿಂದ ಗಂಡನ ಮನೆಗೆ ಕಳುಹಿಸಬೇಕಾದ ಮನೆಯಿಂದ ತಂದೆಯ ಅಂತ್ಯಕ್ರಿಯೆಯ ಮೆರವಣಿಗೆ ಹೊರಡುವಂತಾಯಿತು. ಇದು ಕುಟುಂಬಸ್ಥರ ಮತ್ತು ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್? – Kannada News | Mouni Roy disables Instagram comments after Divorce announcement Disha Patani trolled

ಬಾಲಿವುಡ್ ಹಾಗೂ ಕಿರುತೆರೆಯ ಖ್ಯಾತ ನಟಿ ಮೌನಿ ರಾಯ್ (Mouni Roy) ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ವಿಚ್ಛೇದನ (Divorce) ಪಡೆಯುತ್ತಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ (Disha Patani) ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದರಿಂದ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂಬ ವದಂತಿ ಹರಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಾವು ಬೇರೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ‘ನಮ್ಮ ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ ನಾವು ಪರಸ್ಪರ ಗೌರವದಿಂದಲೇ ಪ್ರತ್ಯೇಕ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಯಾವುದೇ ಸುಳ್ಳು ಕಥೆಗಳನ್ನು ಹಬ್ಬಿಸಬೇಡಿ’ ಎಂದು ಮೌನಿ ಮತ್ತು ಸೂರಜ್ ಮನವಿ ಮಾಡಿಕೊಂಡಿದ್ದಾರೆ.

ಮೌನಿ ರಾಯ್ ಅವರು ವಿಚ್ಛೇದನದ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ನಟಿ ದಿಶಾ ಪಟಾನಿ ಅವರನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡಲು ಆರಂಭಿಸಿದರು. ಮೌನಿ ಮತ್ತು ದಿಶಾ ಇಬ್ಬರೂ ಅತ್ಯಂತ ಆಪ್ತ ಸ್ನೇಹಿತೆಯರಾಗಿದ್ದು, ಹೆಚ್ಚಾಗಿ ಜೊತೆಯಾಗಿಯೇ ಪಾರ್ಟಿ, ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ದಿಶಾ ಪಟಾನಿ ಅವರೇ ಈ ದಂಪತಿಯ ಸಂಸಾರ ಒಡೆಯಲು ಕಾರಣ ಎಂದು ನೆಟ್ಟಿಗರು ಯಾವುದೇ ಆಧಾರವಿಲ್ಲದೆ ಆರೋಪಿಸಲು ಶುರು ಮಾಡಿದರು.

‘ಮೌನಿ ಮತ್ತು ಸೂರಜ್ ನಡುವೆ ನೀನೇ ಜಗಳ ತಂದಿಟ್ಟೆ’ ಎಂದು ಕೆಲವರು ಆರೋಪ ಮಾಡಿದರೆ, ಇನ್ನೂ ಕೆಲವರು ತೀರಾ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಮೌನಿ ರಾಯ್ ಮತ್ತು ದಿಶಾ ಪಟಾನಿ ಅವರ ಸ್ನೇಹವನ್ನು ಕೆಲವರು ಸಲಿಂಗ ಕಾಮ ಇರಬಹುದು ಎಂದು ಕೂಡ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಹಲವು ಮೀಮ್ ಪೇಜ್​ಗಳಲ್ಲಿ ಈ ರೀತಿ ಟ್ರೋಲ್ ಮಾಡಲಾಗಿದೆ.

ಇದನ್ನೂ ಓದಿ: ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್

ತಮ್ಮ ಡಿವೋರ್ಸ್ ಪೋಸ್ಟ್‌ನಲ್ಲಿ ಅತಿಯಾದ ನೆಗೆಟಿವಿಟಿ ಮತ್ತು ಗೆಳತಿ ದಿಶಾ ಪಟಾನಿ ವಿರುದ್ಧ ಹರಿದು ಬರುತ್ತಿದ್ದ ಟ್ರೋಲ್‌ಗಳನ್ನು ತಡೆಯಲು ಮೌನಿ ರಾಯ್ ತಕ್ಷಣವೇ ಆ ಪೋಸ್ಟ್‌ನ ಕಮೆಂಟ್ಸ್ ಅನ್ನು ಆಫ್ ಮಾಡಿದರು. ಆದರೂ ಬಿಡದ ನೆಟ್ಟಿಗರು ಮೌನಿ ರಾಯ್ ಅವರ ಹಳೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹೋಗಿ ದಿಶಾ ವಿರುದ್ಧ ಕಮೆಂಟ್ ಮಾಡಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Monsoon 2026: ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಮುಂಗಾರು ಪ್ರವೇಶ: ಮೇ 26ಕ್ಕೆ ಕೇರಳಂಗೆ, ಕರ್ನಾಟಕಕ್ಕೆ ಯಾವಾಗ ಎಂಟ್ರಿ? – Kannada News | Hailstorms and Strong Winds Expected in North Karnataka; Heavy Downpour Predicted for South Interior Districts

ಕೇರಳಂ, ಮೇ.15: ದೇಶದ ಕೃಷಿ ವಲಯದ ಜೀವನಾಡಿ ಎನಿಸಿಕೊಂಡಿರುವ ನೈಋತ್ಯ ಮುಂಗಾರು ಮಳೆಯು ಈ ವರ್ಷ ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಕೇರಳವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮೇ 26 ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸುವ ಸಾಧ್ಯತೆಯಿದ್ದು, ಇದರಲ್ಲಿ 4 ದಿನಗಳ ಹೆಚ್ಚು-ಕಡಿಮೆ (Model Error) ಇರಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಸಾಮಾನ್ಯವಾಗಿ ಜೂನ್ 1 ರಂದು ಕೇರಳಕ್ಕೆ ಪ್ರವೇಶಿಸುವ ಮುಂಗಾರು, ಈ ಬಾರಿ ಸುಮಾರು ಒಂದು ವಾರ ಮುಂಚಿತವಾಗಿಯೇ ಆರಂಭವಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಈಗಾಗಲೇ ಮುಂಗಾರು ಪ್ರವೇಶಿಸಿದ್ದು, ಅಲ್ಲಿಂದ ಕೇರಳದತ್ತ ವೇಗವಾಗಿ ಚಲಿಸುತ್ತಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​:

ಕರ್ನಾಟಕಕ್ಕೆ ಯಾವಾಗ?:

ಕೇರಳಕ್ಕೆ ಪ್ರವೇಶಿಸಿದ ಸುಮಾರು ಒಂದು ವಾರದ ನಂತರ ಮುಂಗಾರು ಮಳೆಯು ಕರ್ನಾಟಕವನ್ನು ಪ್ರವೇಶಿಸುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಜೂನ್ ಮೊದಲ ವಾರದಲ್ಲೇ ಕರುನಾಡಿಗೆ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಮಳೆ ಕೊರತೆಯಿಂದ ತತ್ತರಿಸಿದ್ದ ರಾಜ್ಯಕ್ಕೆ ಈ ಬಾರಿಯ ಮುನ್ಸೂಚನೆ ಆಶಾದಾಯಕವಾಗಿದೆ.

ಮುಂದಿನ 7 ದಿನ ರಾಜ್ಯದಲ್ಲಿ ಭಾರೀ ಮಳೆ:

ಕರ್ನಾಟಕ ರಾಜ್ಯದಾದ್ಯಂತ ಮುಂದಿನ ಒಂದು ವಾರದ ಕಾಲ ಹವಾಮಾನದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಬಿಸಿಲಿನ ಬೇಗೆ ಮುಂದುವರಿಯಲಿದ್ದರೂ, ಸಂಜೆಯ ವೇಳೆಗೆ ಮಳೆಯ ಸಿಂಚನವಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಒಣ ಹವೆ ಮತ್ತು ಬಿಗುವಿನ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುವ ನಿರೀಕ್ಷೆಯಿದೆ. ತಿದಿನ ಮಧ್ಯಾಹ್ನದ ನಂತರ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ.

ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ (Thunderstorms & Squall) ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಗುಡುಗು-ಸಿಡಿಲು ಸಂಭವಿಸುವಾಗ ಬಯಲು ಪ್ರದೇಶದಲ್ಲಿ ಇರಬಾರದು ಮತ್ತು ವಿದ್ಯುತ್ ಉಪಕರಣಗಳಿಂದ ದೂರವಿರುವಂತೆ ಸೂಚಿಸಲಾಗಿದೆ. ಬಿರುಗಾಳಿಯಿಂದಾಗಿ ಮರಗಳು ಅಥವಾ ದುರ್ಬಲ ಕಟ್ಟಡಗಳು ಬೀಳುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ: ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ

ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ‘ಯೆಲ್ಲೋ’ ಹಾಗೂ ‘ಆರೆಂಜ್’ ಅಲರ್ಟ್!

ರಾಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ಮಳೆಯ ಆರ್ಭಟ ಶುರುವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 15 ರಿಂದ 18 ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ 64.5mm ನಿಂದ 115.5mm ವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಐಎಂಡಿ ಈ ಜಿಲ್ಲೆಗಳಲ್ಲಿ ಯೆಲ್ಲೋಅಲರ್ಟ್ ಘೋಷಿಸಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದೆ. ಗುಡುಗು, ಮಿಂಚು ಮಾತ್ರವಲ್ಲದೆ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಆಲಿಕಲ್ಲು ಮಳೆ (Hailstorm) ಬೀಳುವ ಮುನ್ಸೂಚನೆ ಇರುವುದರಿಂದ ಈ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:35 pm, Fri, 15 May 26

Source link

HAL Recruitment 2026: ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗ ಪಡೆಯುವ ಸುವರ್ಣಾವಕಾಶ; 205 ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ! – Kannada News | HAL ITI Apprentice Recruitment 2026 27: 205 Posts, Direct Interview

ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನImage Credit source: Pinterest

ಐಟಿಐ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭರ್ಜರಿ ಸಿಹಿಸುದ್ದಿ ನೀಡಿದೆ. ಹೈದರಾಬಾದ್‌ನಲ್ಲಿರುವ HAL ಏವಿಯಾನಿಕ್ಸ್ ವಿಭಾಗವು 2026-27ನೇ ಸಾಲಿಗೆ ಒಟ್ಟು 205 ಐಟಿಐ ಅಪ್ರೆಂಟಿಸ್ ತರಬೇತಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ವಿಶೇಷವೆಂದರೆ, ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಯಾವೆಲ್ಲಾ ಟ್ರೇಡ್‌ಗಳಿಗೆ ಅವಕಾಶವಿದೆ?

ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಷಿನಿಸ್ಟ್, ಟರ್ನರ್, ವೆಲ್ಡರ್, ರೆಫ್ರಿಜರೇಷನ್ & ಎಸಿ, ಸಿಒಪಿಎ (COPA), ಪ್ಲಂಬರ್, ಪೇಂಟರ್, ಡೀಸೆಲ್ ಮೆಕ್ಯಾನಿಕ್, ಮೋಟಾರ್ ವೆಹಿಕಲ್ ಮೆಕ್ಯಾನಿಕ್, ಡ್ರಾಫ್ಟ್ಸ್‌ಮನ್ (ಸಿವಿಲ್ ಮತ್ತು ಮೆಕ್ಯಾನಿಕಲ್) ಹಾಗೂ ಎಲೆಕ್ಟ್ರೋಪ್ಲೇಟರ್ ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಆಸಕ್ತರು NCVT ಇಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಸಂಬಂಧಿತ ಐಟಿಐ ಪೂರ್ಣಗೊಳಿಸಿರಬೇಕು. ಆಯ್ಕೆಯಾದವರಿಗೆ 1961ರ ಅಪ್ರೆಂಟಿಸ್‌ಶಿಪ್ ಕಾಯ್ದೆಯನ್ವಯ ಶಿಷ್ಯವೇತನ ನೀಡಲಾಗುತ್ತದೆ.

ನೇರ ಸಂದರ್ಶನದ ದಿನಾಂಕ ಮತ್ತು ಸಮಯ:

ಅಭ್ಯರ್ಥಿಗಳು ತಮ್ಮ ಟ್ರೇಡ್‌ಗಳಿಗೆ ನಿಗದಿಪಡಿಸಿದ ದಿನಾಂಕದಂದು ಹೈದರಾಬಾದ್‌ನ ಬಾಲನಗರದಲ್ಲಿರುವ HAL ಕಚೇರಿಗೆ ಹಾಜರಾಗಬೇಕು:

  • ಮೇ 28: ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಡೀಸೆಲ್ ಮೆಕ್ಯಾನಿಕ್ (ಬೆಳಿಗ್ಗೆ); ಫಿಟ್ಟರ್, ಪ್ಲಂಬರ್, ಪೇಂಟರ್ (ಮಧ್ಯಾಹ್ನ).
  • ಮೇ 29: COPA, ಮೋಟಾರ್ ವೆಹಿಕಲ್ ಮೆಕ್ಯಾನಿಕ್ (ಬೆಳಿಗ್ಗೆ); ಎಲೆಕ್ಟ್ರಿಷಿಯನ್, ಡ್ರಾಫ್ಟ್ಸ್‌ಮನ್ ಮೆಕ್ಯಾನಿಕಲ್ (ಮಧ್ಯಾಹ್ನ).
  • ಜೂನ್ 1: ಮೆಷಿನಿಸ್ಟ್, ರೆಫ್ರಿಜರೇಷನ್ ಆ್ಯಂಡ್ ಎಸಿ (ಬೆಳಿಗ್ಗೆ); ಡ್ರಾಫ್ಟ್ಸ್‌ಮನ್ ಸಿವಿಲ್, ವೆಲ್ಡರ್, ಎಲೆಕ್ಟ್ರೋಪ್ಲೇಟರ್ (ಮಧ್ಯಾಹ್ನ).

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಸಂದರ್ಶನಕ್ಕೆ ಬೇಕಾಗುವ ಅಗತ್ಯ ದಾಖಲೆಗಳು:

ಸಂದರ್ಶನಕ್ಕೆ ಹೋಗುವಾಗ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳ ಮೂಲ ಮತ್ತು ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು:

  • ಆಧಾರ್ ಕಾರ್ಡ್ ಮತ್ತು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
  • ಐಟಿಐ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ.
  • ಅಪ್ರೆಂಟಿಸ್‌ಶಿಪ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿದ ಪ್ರತಿ (Registration Copy).
  • ಜನ್ಮ ದಿನಾಂಕ ದೃಢೀಕರಣ ಪತ್ರ.

ಸಂದರ್ಶನ ನಡೆಯುವ ಸ್ಥಳ: ಉತ್ಸವ್ ಸದನ್ ಆಡಿಟೋರಿಯಂ, HAL ಏವಿಯಾನಿಕ್ಸ್ ವಿಭಾಗ, ಬಾಲನಗರ, ಹೈದರಾಬಾದ್ – 500042.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

BAN vs PAK: 8 ಅಂಕಗಳೊಂದಿಗೆ ಭಾರಿ ದಂಡ; ಪಾಕ್ ತಂಡಕ್ಕೆ ಮರ್ಮಾಘಾತ ನೀಡಿದ ಐಸಿಸಿ – Kannada News | Pakistan WTC Points Deducted by ICC for Slow Over Rate in Bangladesh Test

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿರುವ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಹೀಗಾಗಿ ಪಾಕ್ ತಂಡಕ್ಕೆ ಸರಣಿ ಗೆಲ್ಲುವ ಅವಕಾಶ ಕೈತಪ್ಪಿದರೂ ಮುಂದಿನ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವ ಅವಕಾಶವಿದೆ. ಆದರೆ ಆ ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್ ತಂಡಕ್ಕೆ ಐಸಿಸಿ ( ICC) ದೊಡ್ಡ ಶಾಕ್ ನೀಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರುಗಳನ್ನು ಮುಗಿಸದ ಕಾರಣ ಐಸಿಸಿ, ಪಾಕ್ ತಂಡದ ಡಬ್ಲ್ಯೂಟಿಸಿ ಅಂಕಗಳನ್ನು ಕಡಿತಗೊಳಿಸಿದೆ (WTC points penalty).

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಪಾಕಿಸ್ತಾನ ಎಂಟು ಓವರ್‌ಗಳನ್ನು ನಿಧಾನವಾಗಿ ಬೌಲ್ ಮಾಡಿದ್ದರಿಂದ ಎಂಟು ಡಬ್ಲ್ಯೂಟಿಸಿ ಅಂಕಗಳನ್ನು ಕಡಿತಗೊಳಿಸಿದೆ. ಇದರ ಜೊತೆಗೆ ಪಾಕಿಸ್ತಾನ ತಂಡದ ಪಂದ್ಯ ಶುಲ್ಕದ ಶೇಕಡಾ 40 ರಷ್ಟು ಮೊತ್ತವನ್ನು ಕಡಿತಗೊಳಿಸಲಾಗಿದೆ.

8 ಅಂಕಗಳನ್ನುಕಿತ್ತುಕೊಂಡ ಐಸಿಸಿ

ನಿಧಾನಗತಿಯ ಓವರ್ ರೇಟ್​ಗೆ ಸಂಬಂಧಿಸಿದಂತೆ ಐಸಿಸಿಯ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ. ಐಸಿಸಿ ನಿಯಮಗಳ ಪ್ರಕಾರ, ಪ್ರತಿ ತಂಡವು ಒಂದು ಗಂಟೆಯಲ್ಲಿ 15 ಓವರ್‌ಗಳನ್ನು ಬೌಲ್ ಮಾಡಬೇಕು. ಪಂದ್ಯ ಮುಗಿದ ನಂತರ ಇದನ್ನು ಲೆಕ್ಕಹಾಕಲಾಗುತ್ತದೆ. ತಪ್ಪಿದ ಪ್ರತಿ ಓವರ್‌ಗೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. 8 ಓವರ್‌ಗಳನ್ನು ನಿಧಾನವಾಗಿ ಬೌಲ್ ಮಾಡಿದ್ದಕ್ಕಾಗಿ ಪಾಕಿಸ್ತಾನಕ್ಕೆ 8 ಅಂಕಗಳನ್ನು ಕಳೆದುಕೊಳ್ಳಬೇಕಾಗಿದೆ. ಐಸಿಸಿಯ ಈ ಕ್ರಮದ ನಂತರ, ಪಾಕಿಸ್ತಾನದ ಡಬ್ಲ್ಯೂಟಿಸಿ ಪಾಯಿಂಟ್‌ಗಳು ಈಗ ಕೇವಲ 4 ಕ್ಕೆ ಇಳಿದಿದ್ದು, 7 ನೇ ಸ್ಥಾನದಲ್ಲಿದೆ.

ಬಾಂಗ್ಲಾ ವಿರುದ್ಧ ಹೀನಾಯ ಸೋಲು

ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ.. ಆತಿಥೇಯ ಬಾಂಗ್ಲಾದೇಶ, ಪಾಕಿಸ್ತಾನವನ್ನು104 ರನ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 413 ರನ್‌ ಕಲೆಹಾಕಿದರೆ, ಪಾಕಿಸ್ತಾನ 386 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 240 ರನ್‌ಗಳಿಗೆ ಡಿಕ್ಲೇರ್ ಮಾಡಿ ಪಾಕಿಸ್ತಾನಕ್ಕೆ 268 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೇವಲ 163 ರನ್‌ಗಳಿಗೆ ಆಲೌಟ್ ಆಯಿತು.

ICC Awards: ಐಸಿಸಿ ಪ್ರಶಸ್ತಿಗೆ ಬುಮ್ರಾ, ಸ್ಯಾಮ್ಸನ್ ನಡುವೆ ಪೈಪೋಟಿ

ಈ ಪಂದ್ಯದಲ್ಲಿ, ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಮತ್ತು ವೇಗಿ ನಹಿದ್ ರಾಣಾ ಉತ್ತಮ ಪ್ರದರ್ಶನ ನೀಡಿದರು ಶಾಂಟೋ ಮೊದಲ ಇನ್ನಿಂಗ್ಸ್‌ನಲ್ಲಿ 101 ರನ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 87 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಹಿದ್ ರಾಣಾ ಐದು ವಿಕೆಟ್‌ಗಳನ್ನು ಪಡೆದರು. ಸರಣಿಯ ಕೊನೆಯ ಟೆಸ್ಟ್ ಪಂದ್ಯವು ಈಗ ಮೇ 16 ರಂದು ಸಿಲ್ಹೆಟ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿತರಕ-ಪ್ರದರ್ಶಕ-ನಿರ್ಮಾಪಕರ ಸಭೆ ಯಶಸ್ವಿ, ‘ಪೆದ್ದಿ’ಗೆ ಸಮಸ್ಯೆಯಿಲ್ಲ – Kannada News | Telugu Movie Industry: Difference between Exhibitors and Producers resolved

ತೆಲುಗು ಚಿತ್ರರಂಗದ (Tollywood) ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ. ಅತಿ ಹೆಚ್ಚು ಸಿನಿಮಾಗಳನ್ನು ಗೆಲ್ಲುತ್ತಿರುವುದು ಲಾಭ ಮಾಡುತ್ತಿರುವುದು ಅದೇ ಚಿತ್ರರಂಗದಲ್ಲಿ. ಹಣದ ಹರಿವು ಹೆಚ್ಚಾದಂತೆ ಚಿತ್ರರಂಗದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಕಳೆದ ಒಂದೆರಡು ವಾರಗಳಿಂದ, ನಿರ್ಮಾಪಕರು, ವಿತರಕರು ಪರಸ್ಪರ ಬಹಿರಂಗವಾಗಿ ಟೀಕೆ, ನಿಂದನೆಗಳನ್ನು ಮಾಡುತ್ತಿದ್ದರು. ಆದರೆ ತೆಲುಗು ಸಿನಿಮಾ ಚೇಂಬರ್​​ ಮಧ್ಯಸ್ಥಿಕೆಯಲ್ಲಿ ಇಂದು ಅತ್ಯಂತ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಸಹ ಬಹಳ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೊನೆಗೂ ಎಲ್ಲವೂ ಶಾಂತವಾಗಿ ಮುಗಿದಿದೆ ಎನ್ನಲಾಗಿದೆ.

ವಿತರಕರು ಮತ್ತು ಸಿನಿಮಾ ಪ್ರದರ್ಶಕರು ತಮಗೂ ಲಾಭ ಹಂಚಿಕೆ ವಿಧಾನದಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮಲ್ಟಿಪ್ಲೆಕ್ಸ್​​ಗಳು ಹೇಗೆ ಸಿನಿಮಾದ ಗಳಿಕೆಯಲ್ಲಿ ಪರ್ಸೆಂಟೇಜು ಲಾಭ ಪಡೆಯುತ್ತವೆಯೋ ಹಾಗೆಯೇ ತಮಗೂ ಪರ್ಸೆಂಟೇಜು ಮಾದರಿಯಲ್ಲಿ ಹಣ ಬೇಕು ಎಂದು ಒತ್ತಾಯಿಸಿದ್ದರು. ಆದರೆ ಸಿನಿಮಾ ನಿರ್ಮಾಪಕರುಗಳು ಇದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ತೆಲುಗು ಚಿತ್ರರಂಗದಲ್ಲಿ ಎರಡು ಮೂರು ಬಣಗಳೇ ಆಗಿಬಿಟ್ಟಿದ್ದವು. ನಿರ್ಮಾಪಕ ನಾಗವಂಶಿ ಹಾಗೂ ಇನ್ನಿತರರು ಕೆಲ ವಿತರಕರು, ಸಿನಿಮಾ ಪ್ರದರ್ಶಕರ ಮೇಲೆ ಏಕವಚನದ ವಾಗ್ದಾಳಿ ಸಹ ನಡೆಸಿದ್ದರು. ವಿಶೇಷವಾಗಿ ಖ್ಯಾತ ನಿರ್ಮಾಪಕ, ಹಲವಾರು ಸಿನಿಮಾ ಮಂದಿರಗಳ ಮಾಲೀಕ ಆಗಿರುವ ಏಷಿಯನ್ ಸುನಿಲ್ ವಿರುದ್ಧ ಹಲವು ನಿರ್ಮಾಪಕರುಗಳು ಗರಂ ಆಗಿದ್ದರು.

ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಗೆ ಕಂಬ್ಯಾಕ್ ತಡವಾಗುತ್ತಿರುವುದಕ್ಕೆ ರಾಜಕೀಯವಲ್ಲ ಕಾರಣ

ಆದರೆ ಇಂದು ಚೇಂಬರ್ ಅಧ್ಯಕ್ಷ ಖ್ಯಾತ ನಿರ್ಮಾಪಕ ಸುರೇಶ್ ಬಾಬು ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲೂ ಸಹ ನಾಗವಂಶಿ ಸೇರಿದಂತೆ ಕೆಲವಾರು ನಿರ್ಮಾಪಕರು ಏಷಿಯನ್ ಸುನಿಲ್ ಮತ್ತು ಅವರ ಆಪ್ತರೊಡನೆ ಏರಿದ ಧನಿಯಲ್ಲಿ ಜಗಳ ಮಾಡಿದ್ದಾರೆ. ಆದರೆ ಸುರೇಶ್ ಹಾಗೂ ತೆಲಂಗಾಣ ಸಿನಿಮಾ ಸಮಿತಿ ಅಧ್ಯಕ್ಷ ದಿಲ್ ರಾಜು ಅವರ ಮಧ್ಯಸ್ಥಿಕೆಯಿಂದ ಸಂಧಾನ ಯಶಸ್ವಿ ಆಗಿದ್ದು, ನಿರ್ಮಾಪಕರುಗಳು ಲಾಭಾಂಶ ಹಂಚಿಕೆಗೆ ಒಪ್ಪಿಗೆ ನೀಡಿದ್ದಾರೆ.

ಸಭೆಯ ಬಳಿಕ ಫಿಲಂ ಚೇಂಬರ್ ಅಧ್ಯಕ್ಷ ಸುರೇಶ್ ಬಾಬು ಹೇಳಿದಂತೆ, ‘ನಿರ್ಮಾಪಕರುಗಳು ಲಾಭಾಂಶ ಹಂಚಿಕೆಗೆ ಒಪ್ಪಿಕೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಸಮಿತಿಯೊಂದನ್ನು ರಚಿಸಲಾಗುತ್ತದೆ. ಮತ್ತು ಆ ಸಮಿತಿಯು ವಿವಿಧ ಸೆಂಟರ್​​ಗಳ ಲಾಭಾಂಶ ಹಂಚಿಕೆ ಪ್ರಮಾಣವನ್ನು ನಿರ್ಧರಿಸುತ್ತದೆ’ ಎಂದಿದ್ದಾರೆ. ‘ಪೆದ್ದಿ’ ಸಿನಿಮಾಕ್ಕೂ ಲಾಭಾಂಶ ಹಂಚಿಕೆ ಬೇಕೆಂದು ಪ್ರದರ್ಶಕರು, ವಿತರಕರು ಪಟ್ಟು ಹಿಡಿದಿದ್ದರು, ಆದರೆ ನಿರ್ಮಾಪಕರು ಕಡ್ಡಾಯವಾಗಿ ಇದಕ್ಕೆ ಒಪ್ಪದ ಕಾರಣ ‘ಪೆದ್ದಿ’ ಸಿನಿಮಾದ ಬಳಿಕ ಬಿಡುಗಡೆ ಆಗುವ ಸಿನಿಮಾಗಳಿಗೆ ಮಾತ್ರವೇ ಲಾಭಾಂಶ ಹಂಚಿಕೆ ಆಗಲಿದೆ. ಲಾಭಾಂಶ ಹಂಚಿಕೆ ಮಾದರಿಯಿಂದ ತಪ್ಪಿಸಿಕೊಳ್ಳಲೆಂದು ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬೇಗನೆ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ – Kannada News | BMRCL Announces Temporary Suspension of Purple Line Metro Services for 2 Hours on May 17

ನೇರಳೆ ಮಾರ್ಗದ ಮೆಟ್ರೋImage Credit source: bmrc.co.in

ಬೆಂಗಳೂರು, ಮೇ 15: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Purple Line) ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಮೇ​ 17ರಂದು ಅಂದರೆ ಭಾನುವಾರ ನೇರಳೆ ಮಾರ್ಗದ ಕೆಲವು ನಿಲ್ದಾಣಗಳ ನಡುವೆ ಬೆಳಗ್ಗೆ 2 ಗಂಟೆಗಳ ಕಾಲ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಮುಖ್ಯಾಂಶಗಳು

  • ಮೈಸೂರು ರಸ್ತೆಯಲ್ಲಿ ಪ್ರಯಾಣ ಮಾಡುವವರಿಗೆ ಸಂಡೇ ಶಾಕ್​​
  • 17ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
  • ಅಗತ್ಯ ನಿರ್ವಹಣೆ ಕಾಮಗಾರಿ ಹಿನ್ನೆಲೆ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ನಮ್ಮ ಮೆಟ್ರೋ ಟ್ವೀಟ್​

Temporary Suspension of Metro Services on Purple Line for 2 hours on 17.05.2026

ದಿನಾಂಕ 17.05.2026 ರಂದು ನೇರಳೆ ಮಾರ್ಗ ಮೆಟ್ರೋ ಸೇವೆ 2 ರಡು ಗಂಟೆ ಅವಧಿಗೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ@srivasrbmrccoi1 @Secretary_MoHUA @mlkhattar @officeofmlk pic.twitter.com/EypWaXblqy

— ನಮ್ಮ ಮೆಟ್ರೋ (@OfficialBMRCL) May 15, 2026

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ (ಸೆಂಟ್ರಲ್ ಕಾಲೇಜ್) ನಡುವೆ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ, ಭಾನುವಾರ ಬೆಳಗ್ಗೆ 07 ಗಂಟೆಯಿಂದ 09 ಗಂಟೆಯವರೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರ ಇರುವುದಿಲ್ಲ.

ಎಲ್ಲೆಲ್ಲಿ ಮೆಟ್ರೋ ಲಭ್ಯವಿರಲಿದೆ?

ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 07 ಗಂಟೆಯಿಂದ 09 ಗಂಟೆ ಅವಧಿಯಲ್ಲಿ ಕೆಳಕಂಡ ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.

  • ಚಲ್ಲಘಟ್ಟ – ವಿಜಯನಗರ
  • ಎಂ.ಜಿ. ರಸ್ತೆ – ವೈಟ್ ಫೀಲ್ಡ್, ಕಾಡುಗೋಡಿ
  • ಮಾದಾವರ – ಸಿಲ್ಕ್ ಇನ್‌ಸ್ಟಿಟ್ಯೂಟ್
  • ಆರ್.ವಿ. ರಸ್ತೆ – ಬೊಮ್ಮಸಂದ್ರ

ಇದನ್ನೂ ಓದಿ: ಬೆಂಗಳೂರಿನ ಕನಸಿನ ಯೋಜನೆಗೆ ಸಿಕ್ತು ವೇಗ: 153 ಮೆಟ್ರೋ ಕೋಚ್‌ ಖರೀದಿಗೆ ಐಸಿಎಫ್ ಜೊತೆ ಒಪ್ಪಂದ

ಭಾನುವಾರ ಬೆಳಗ್ಗೆ 09 ಗಂಟೆಯ ನಂತರ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಪುನಃ ಆರಂಭಗೊಳ್ಳಲಿವೆ. ಪ್ರಯಾಣಿಕರು ಈ ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭೋಜಶಾಲಾ ಇನ್ಮುಂದೆ ದೇವಾಲಯ; ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ತೀರ್ಪು – Kannada News | Bhojshala complex is a temple Madhya Pradesh High Court delivers verdict on disputed site

ನವದೆಹಲಿ, ಮೇ 15: ಮಧ್ಯಪ್ರದೇಶದ ಹೈಕೋರ್ಟ್ (Madhya Pradesh High Court) ಹಿಂದೂಗಳ ಪರವಾಗಿ ತೀರ್ಪು ನೀಡುವ ಮೂಲಕ ಭೋಜಶಾಲಾವನ್ನು (Bhojshala) ದೇವಾಲಯವೆಂದು ಘೋಷಿಸಿದೆ. ಈ ಸ್ಥಳದ ಐತಿಹಾಸಿಕ ಸಾಹಿತ್ಯವು ಇದು ರಾಜ ಭೋಜನಿಗೆ ಸಂಬಂಧಿಸಿದ ಸಂಸ್ಕೃತ ಕಲಿಕೆಯ ಕೇಂದ್ರವಾಗಿತ್ತು ಎಂದು ತಿಳಿಸಿದೆ. ಇದು ಧಾರ್‌ನಲ್ಲಿ ವಾಗ್ದೇವಿ ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯದ ಅಸ್ತಿತ್ವವನ್ನು ಸೂಚಿಸುತ್ತದೆ. ಆದ್ದರಿಂದ, ಈ ಪ್ರದೇಶ ವಾಗ್ದೇವಿ ಸರಸ್ವತಿಯ ದೇವಾಲಯವಾಗಿತ್ತು ಎಂಬುದಕ್ಕೆ ಪುರಾವೆ ಸಿಕ್ಕಿದಂತಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಈ ಸಂರಕ್ಷಿತ ಸ್ಮಾರಕದಲ್ಲಿ ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸಬಹುದು ಮತ್ತು ಮುಸ್ಲಿಮರು ಶುಕ್ರವಾರದ ನಮಾಜ್ ಮಾಡಬಹುದು ಎಂಬ ASIನ 2003ರ ಸುತ್ತೋಲೆಯನ್ನು ಕೂಡ ಈ ಹೈಕೋರ್ಟ್ ರದ್ದುಗೊಳಿಸಿದೆ. ಈ ಸ್ಥಳದ ಗುರುತಿನ ಕುರಿತು ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವಿನ ದೀರ್ಘಕಾಲೀನ ವಿವಾದಕ್ಕೆ ಈ ಅಂಶ ಕೂಡ ಕಾರಣವಾಗಿತ್ತು. ಇದೀಗ ಕೊನೆಗೂ ಹೈಕೋರ್ಟ್ ಈ ವಿವಾದಕ್ಕೆ ಪೂರ್ಣ ವಿರಾಮವನ್ನು ಇಟ್ಟಿದೆ.

ಈ ತೀರ್ಪು ನೀಡಿದ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರ ವಿಭಾಗೀಯ ಪೀಠವು ಈ ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳು, ಪುರಾತತ್ತ್ವ ಶಾಸ್ತ್ರದ ವಸ್ತುಗಳು ಮತ್ತು ಸಾಹಿತ್ಯಿಕ ಪುರಾವೆಗಳು ಧಾರ್​ನ ಭೋಜಶಾಲಾವನ್ನು ಸಂಸ್ಕೃತ ಕಲಿಕೆಯ ಕೇಂದ್ರವನ್ನಾಗಿ ಮಾಡಿದ ಪರ್ಮಾರ್ ಆಡಳಿತಗಾರ ರಾಜ ಭೋಜನಿಗೆ ಸಂಬಂಧಿಸಿದ ಸರಸ್ವತಿ ದೇವಾಲಯವಾಗಿತ್ತು ಎಂದು ತಿಳಿಸುತ್ತಿವೆ ಎಂದು ಹೇಳಿದೆ.

ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ ಎನ್ನಲಾದ ಸರಸ್ವತಿ ದೇವಿಯ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಹಿಂದೂ ಅರ್ಜಿದಾರರ ಬೇಡಿಕೆಗಳನ್ನು ಸಹ ಪೀಠವು ಗಮನಿಸಿತು. ಈ ವಿಗ್ರಹವನ್ನು ಹಿಂದಿರುಗಿಸುವುದು ಮತ್ತು ಭೋಜಶಾಲಾ ಸಂಕೀರ್ಣದೊಳಗೆ ಈ ಮೂರ್ತಿಯ ಸ್ಥಾಪನೆಯನ್ನು ಮಾಡುವ ಬಗ್ಗೆಯೂ ಸರ್ಕಾರ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯದಲ್ಲಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿಗೆ ಸಿದ್ಧತೆ

ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ಪೀಠವು ಇಂದು ಹಿಂದೂ ಕಡೆಯ ವಾದವನ್ನು ಆಲಿಸಿ, ಇದು ಭೋಜಶಾಲಾವನ್ನು ದೇವಾಲಯವೆಂದು ಘೋಷಿಸಿತು. ಪ್ರಾಚೀನ ಸ್ಮಾರಕಗಳು ಅಥವಾ ರಚನೆಗಳು, ಪುರಾತತ್ವ ಮತ್ತು ಐತಿಹಾಸಿಕ ಮಹತ್ವದ ದೇವಾಲಯಗಳನ್ನು ಮಾತ್ರವಲ್ಲದೆ ಎಲ್ಲಾ ರೀತಿಯ ಧಾರ್ಮಿಕ ಸ್ಥಳಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಂದು ಸರ್ಕಾರದ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಯಾತ್ರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಕೆಲವು ಸ್ಥಳಗಳಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಇದಲ್ಲದೆ, ಈ ಸ್ಥಳದ ಪಾವಿತ್ರ್ಯವನ್ನು ಕಾಪಾಡುವುದು ಮತ್ತು ದೇವತೆಯ ಸ್ವರೂಪವನ್ನು ಕಾಪಾಡುವುದು ಸಹ ಅತ್ಯಗತ್ಯ ಎಂದು ಕೋರ್ಟ್ ಹೇಳಿದೆ.

ಏನಿದು ವಿವಾದ?:

ಭೋಜಶಾಲಾ ವಿವಾದವು ದಶಕಗಳಷ್ಟು ಹಿಂದಿನದು. ಹಿಂದೂಗಳು ಈ ಸ್ಥಳವನ್ನು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವೆಂದು ಪರಿಗಣಿಸುತ್ತಾರೆ. ಆದರೆ ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ನಂಬುತ್ತಾರೆ. ಇದರ ಜೊತೆಗೆ ಜೈನರು ಇದು ಜೈನ ಗುರುಕುಲವಾಗಿತ್ತು ಎಂದು  ಕೋರ್ಟ್​ನಲ್ಲಿ ಹಲವು ಮೊಕದ್ದಮೆಗಳನ್ನು ಸಲ್ಲಿಸಿದ್ದರು. ಇದರಲ್ಲಿ ವಿಶೇಷ ಹಿಂದೂ ಪೂಜಾ ಹಕ್ಕುಗಳು ಮತ್ತು ಸ್ಥಳದಲ್ಲಿ ನಮಾಜ್ ಮೇಲಿನ ನಿರ್ಬಂಧಗಳನ್ನು ಕೋರುವ ಮನವಿಗಳು ಕೂಡ ಸೇರಿವೆ. ವಿಚಾರಣೆಯ ಸಮಯದಲ್ಲಿ ಹೈಕೋರ್ಟ್ ಸ್ಮಾರಕದ ವೈಜ್ಞಾನಿಕ ASI ಸಮೀಕ್ಷೆಗೆ ಆದೇಶಿಸಿತ್ತು.

ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಭೋಜಶಾಲ ಮೂಲತಃ ರಾಜ ಭೋಜನ ಆಳ್ವಿಕೆಯ ಹಿಂದಿನ ಸರಸ್ವತಿ ದೇವಾಲಯವಾಗಿತ್ತು ಎಂದು ಹೇಳಿದ್ದಾರೆ. ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ಧಾರ್ಮಿಕ ಸ್ಥಳದ ಪುರಾವೆಯಾಗಿ ಶಾಸನಗಳು, ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ತೋರಿಸಿದರು. ಆದರೆ, ಮುಸ್ಲಿಂ ಅರ್ಜಿದಾರರು ಖಿಲ್ಜಿ ಯುಗದ ಐತಿಹಾಸಿಕ ದಾಖಲೆಗಳು ಸರಸ್ವತಿ ದೇವಾಲಯದ ನಾಶದ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ ಎಂದು ವಾದಿಸಿದ್ದರು. ಹಿಂದಿನ ಧಾರ್ ಆಡಳಿತಗಾರ ಆ ಸ್ಥಳದಲ್ಲಿ ನಮಾಜ್‌ಗೆ ಅನುಮತಿ ನೀಡಿ 1935ರಲ್ಲಿ ಹೊರಡಿಸಿದ “ಅಲಾನ್” ಅನ್ನು ಉಲ್ಲೇಖಿಸಿದ್ದರು. ಜೈನ ಅರ್ಜಿದಾರರು ಸಹ ಈ ಸ್ಥಳಕ್ಕೆ ಸಂಬಂಧಿಸಿದ ವಿಗ್ರಹವು ಜೈನ ದೇವತೆ ಅಂಬಿಕೆಗೆ ಸೇರಿದ್ದು ಮತ್ತು ಮೌಂಟ್ ಅಬುವಿನಲ್ಲಿ ದೇವಾಲಯದ ವಾಸ್ತುಶಿಲ್ಪದೊಂದಿಗೆ ಇದರ ಹೋಲಿಕೆಯಿದೆ ಎಂದು ವಾದಿಸಿದ್ದರು.

ಇದನ್ನೂ ಓದಿ: Hanuman Temples: ಸ್ತ್ರೀ ರೂಪದ ಹನುಮ, ತಲೆಕೆಳಗಾದ ಆಂಜನೇಯ; ಅಚ್ಚರಿ ಮೂಡಿಸುವ 5 ಅಪರೂಪದ ದೇವಾಲಯಗಳಿವು

ವಿಚಾರಣೆಯ ಸಮಯದಲ್ಲಿ, ಹಿಂದೂ, ಮುಸ್ಲಿಂ ಮತ್ತು ಜೈನ ಸಮುದಾಯಗಳ ಅರ್ಜಿದಾರರು ವಿವರವಾದ ವಾದಗಳನ್ನು ಮಂಡಿಸಿದರು ಮತ್ತು ಸ್ಮಾರಕದಲ್ಲಿ ತಮ್ಮ ಸಮುದಾಯಗಳಿಗೆ ವಿಶೇಷ ಪೂಜಾ ಹಕ್ಕುಗಳನ್ನು ಕೋರಿದರು. ಈ ಸ್ಮಾರಕದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದ ನಂತರ, ASI ತನ್ನ 2,000ಕ್ಕೂ ಹೆಚ್ಚು ಪುಟಗಳ ವರದಿಯಲ್ಲಿ ಧಾರ್‌ನ ಪರ್ಮಾರ್ ರಾಜರ ಆಳ್ವಿಕೆಯ ಹಿಂದಿನ ಬೃಹತ್ ರಚನೆಯು ಮಸೀದಿಗಿಂತ ಹಿಂದಿನದು ಎಂದು ಸೂಚಿಸಿದೆ.

ನ್ಯಾಯಾಲಯದ ಮುಂದಿದ್ದ ಮುಖ್ಯವಾದ ಪ್ರಶ್ನೆಯೆಂದರೆ ಅದು ಹಿಂದೂ ದೇವಸ್ಥಾನವೇ (ವಾಗ್ದೇವಿ ದೇವಸ್ಥಾನ) ಅಥವಾ ಮುಸ್ಲಿಂ ಮಸೀದಿಯೇ (ಕಮಲ್ ಮೌಲಾ ಮಸೀದಿ) ಎಂಬುದು. “ಇದು ಸಂರಕ್ಷಿತ ಕಟ್ಟಡ ಎಂಬುದು ಸ್ಪಷ್ಟವಾಗಿದೆ. ASI ಇದರ ಮೇಲ್ವಿಚಾರಣೆ ಮತ್ತು ಇದರ ಸಂರಕ್ಷಣೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ” ಎಂದು ನ್ಯಾಯಾಲಯ ಹೇಳಿದೆ. ಹಾಗೇ, ಮುಸ್ಲಿಂ ಕಡೆಯವರು ಮಸೀದಿಗಾಗಿ ಬೇರೆ ಜಾಗಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್ ಆದೇಶದ ಮೇರೆಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತು. ಈ ಸಮೀಕ್ಷೆಯು 98 ದಿನಗಳ ಕಾಲ ನಡೆಯಿತು. ಇದಾದ ಬಳಿಕ ASI ಜುಲೈ 15, 2024ರಂದು ಸುಮಾರು 2,000 ಪುಟಗಳ ವಿವರವಾದ ವರದಿಯನ್ನು ಸಲ್ಲಿಸಿತು. ಈ ವರದಿಯ ಪ್ರಕಾರ, ಪ್ರಸ್ತುತ ರಚನೆಯನ್ನು ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಅವಶೇಷಗಳು ಮತ್ತು ಕಂಬಗಳನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ಪರ್ಮಾರ್ ಅವಧಿಯ ಶಿಲ್ಪಗಳು, ಕೆತ್ತಿದ ಕಲ್ಲುಗಳು ಮತ್ತು ಶಾಸನಗಳು ಅಲ್ಲಿ ಕಂಡುಬಂದಿವೆ ಎಂದು ತಿಳಿಸಲಾಗಿದೆ.

2003ರ ASI ಆದೇಶದ ಪ್ರಕಾರ, ಹಿಂದೂಗಳು ಪ್ರತಿ ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಸಲ್ಲಿಸಲು ಅವಕಾಶವಿದೆ ಮತ್ತು ಮುಸ್ಲಿಮರು ಪ್ರತಿ ಶುಕ್ರವಾರ ಮಧ್ಯಾಹ್ನ 1ರಿಂದ 3ರವರೆಗೆ ನಮಾಜ್ ಮಾಡಲು ಅವಕಾಶವಿದೆ. ಇತರ ದಿನಗಳಲ್ಲಿ ಈ ಸ್ಥಳ ಪ್ರವಾಸಿಗರಿಗೆ ತೆರೆದಿರುತ್ತದೆ. ಈ ಆದೇಶವನ್ನು ಕೂಡ ಹೈಕೋರ್ಟ್ ರದ್ದಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:49 pm, Fri, 15 May 26

Source link

ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ – Kannada News | Narendra Modi UAE visit, Energy security, defence and other major pacts between 2 countries

ಯುಎಇ ಅಧ್ಯಕ್ಷ ಶೇಖ್ ಜೊತೆ ನರೇಂದ್ರ ಮೋದಿImage Credit source: PTI

ನವದೆಹಲಿ, ಮೇ 15: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇಗೆ (UAE) ನೀಡಿರುವ ಭೇಟಿಯಿಂದ ಹಲವು ನಿರೀಕ್ಷೆಗಳಿವೆ. ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನಿ ಭೇಟಿಯ ಪ್ರಮುಖ ಕಾರ್ಯಸೂಚಿಯಾಗಿದೆ. ಇಂಧನ ಭದ್ರತೆ, ರಕ್ಷಣಾ ಕ್ಷೇತ್ರ ಹಾಗೂ ವ್ಯಾಪಾರದಲ್ಲಿ ಎರಡೂ ದೇಶಗಳ ಮಧ್ಯೆ ಪ್ರಮುಖ ಒಪ್ಪಂದ ಏರ್ಪಟ್ಟಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ಸುಮಾರು 3 ರೂಪಾಯಿಗಳಷ್ಟು ಏರಿಕೆಯಾಗಿವೆ. ಯುಎಇ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಎಲ್‌ಪಿಜಿ (LPG) ಪೂರೈಕೆ ಮತ್ತು ಪೆಟ್ರೋಲಿಯಂ ಮೀಸಲು (Strategic Petroleum Reserves) ಕುರಿತು ಪ್ರಮುಖ ಒಪ್ಪಂದಗಳಿಗೆ ಸಹಿ (ಎಂಒಯು) ಹಾಕಲಾಗಿದೆ.

ಇದನ್ನೂ ಓದಿ: ಖೈಬರ್ ಪಖ್ತುಂಖ್ವಾದಲ್ಲಿ ಭಾರಿ ಉಗ್ರ ದಾಳಿ: ಪಾಕಿಸ್ತಾನದ 18 ಮಂದಿ ಭದ್ರತಾ ಸಿಬ್ಬಂದಿ ಸಾವು

ಭಾರತದ ಮೂಲಸೌಕರ್ಯ, ಆರ್​ಬಿಎಲ್ ಬ್ಯಾಂಕ್ ಮತ್ತು ಸಮ್ಮಾನ್ ಕ್ಯಾಪಿಟಲ್​ನಲ್ಲಿ ಯುಎಇಯಿಂದ 5 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಬರಲಿದೆ. ಗುಜರಾತ್​ನ ದ್ವಾರಕಾದಲ್ಲಿರುವ ವಾದಿನಾರ್​ನಲ್ಲಿ ಹಡಗು ದುರಸ್ತಿ ಕೇಂದ್ರವನ್ನು ಸ್ಥಾಪಿಸಲೂ ಸಹಿ ಹಾಕಲಾಗಿದೆ.

ಯಾವುದೇ ಪರಿಸ್ಥಿತಿಯಲ್ಲೂ ಯುಎಇಗೆ ಬೆಂಬಲ: ಮೋದಿ

ನಿಯೋಗ ಮಟ್ಟದ ಮಾತುಕತೆ ವೇಳೆ ಮಾತನಾಡಿದ ನರೇಂದ್ರ ಮೋದಿ, ಯುಎಇಗೆ ಎಲ್ಲಾ ರೀತಿಯಲ್ಲೂ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲಾ ಪರಿಸ್ಥಿತಿಯಲ್ಲೂ ಯುಎಇಯೊಂದಿಗೆ ಭಾರತ ಹೆಗಲಿಗೆ ಹೆಗಲು ಕೊಡುತ್ತಾ ಬಂದಿದೆ. ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಿ ತರಲು ಭಾರತ ಸಾಧ್ಯವಾದ ಎಲ್ಲಾ ಸಹಕಾರ ಕೊಡುತ್ತದೆ ಎಂದೂ ಮೋದಿ ತಿಳಿಸಿದ್ದಾರೆ. ಹಾಗೆಯೇ, ಇರಾನ್, ಅಮೆರಿಕ ಯುದ್ಧದ ಮಧ್ಯೆ ಯುಎಇಯ ಸ್ಥಳಗಳ ಮೇಲೆ ನಡೆದ ದಾಳಿಯನ್ನೂ ಮೋದಿ ಇದೇ ವೇಳೆ ಖಂಡಿಸಿದ್ದಾರೆ.

ಭಾರತದ ಇಂಧನ ಭದ್ರತೆಗೆ ಸರ್ಕಾರದ ಪ್ರಯತ್ನಗಳು

ಯುದ್ಧದಿಂದಾಗಿ ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಬೀಳುತ್ತಿರುವುದರಿಂದ, ಪ್ರಧಾನಿಯವರು ದೇಶದ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಮಿತವ್ಯಯದ ಕ್ರಮಗಳನ್ನು ಅನುಸರಿಸಲು ಕರೆ ನೀಡಿದ್ದಾರೆ. ಭಾರತೀಯ ತೈಲ ನಿಗಮ (IOC) ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ನಡುವೆ ಎಲ್‌ಪಿಜಿ ಪೂರೈಕೆಗಾಗಿ ಒಪ್ಪಂದ.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ತೈಲ ಸಂಗ್ರಹಣೆಯನ್ನು ಹೆಚ್ಚಿಸಲು ಭಾರತೀಯ ಆಯಕಟ್ಟಿನ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನೊಂದಿಗೆ ಸಹಯೋಗ ಪಡೆಯಲಾಗಿದೆ.

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇ. 88 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ತೈಲ ಸಾಗಣೆಗೆ ಅಡ್ಡಿಯಾಗಿರುವುದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

ಜಾಗತಿಕ ಅಸ್ಥಿರತೆಯ ನಡುವೆ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ಯುಎಇ ಭೇಟಿ ಅತ್ಯಂತ ನಿರ್ಣಾಯಕವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RRB ALP Recruitment 2026: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ – Kannada News | RRB ALP Recruitment 2026: 11,127 Assistant Loco Pilot Vacancies! Apply by June 14

ರೈಲ್ವೆ ನೇಮಕಾತಿ ಮಂಡಳಿಯು (RRB) ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ ನೀಡಿದೆ. ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸುಮಾರು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಭಾರತೀಯ ರೈಲ್ವೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ತಾಂತ್ರಿಕ ಪದವೀಧರರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದು, ಮೇ 15 ರಿಂದಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಪೋರ್ಟಲ್ rrbapply.gov.in ಗೆ ಭೇಟಿ ನೀಡಿ ತಮ್ಮ ಆದ್ಯತೆಯ ರೈಲ್ವೆ ವಲಯವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಮಾನದಂಡಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರುವುದರ ಜೊತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ (ITI) ಪದವಿ ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಬಿಇ/ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷದೊಳಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ:

ಒಟ್ಟು ಐದು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBT-1 ಮತ್ತು CBT-2) ನಡೆಯುತ್ತವೆ, ನಂತರ ಆಪ್ಟಿಟ್ಯೂಡ್ ಪರೀಕ್ಷೆ (CBAT), ದಾಖಲೆ ಪರಿಶೀಲನೆ ಮತ್ತು ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಇರುತ್ತದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 1/3 ಅಂಕಗಳನ್ನು ಕಡಿತಗೊಳಿಸುವ (Negative Marking) ವ್ಯವಸ್ಥೆ ಇರುವುದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಉತ್ತರಿಸಬೇಕಾಗುತ್ತದೆ. ಅಂತಿಮ ಮೆರಿಟ್ ಪಟ್ಟಿಯನ್ನು CBT-2 ಮತ್ತು ಆಪ್ಟಿಟ್ಯೂಡ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link