Category Archives: Blog

Your blog category

ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು – Kannada News | Tumakuru: Miscreants Brutally Kill Father in Front of His Daughter

ತುಮಕೂರು, ಜನವರಿ 12: ಅದು ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದರು. ತಾವಾಯ್ತು ನಮ್ಮ ಬದುಕಾಯ್ತು ಎಂದು ಕುಟುಂಬ ಜೀವನ ನಡೆಸುತ್ತಿತ್ತು. ಹೀಗೆ ನೆಮ್ಮದಿ ಜೀವನ ಮಾಡುತಿದ್ದವರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ದುಷ್ಕರ್ಮಿಗಳ ಗುಂಪೊಂದು ಮನೆ ಯಜಮಾನನ ಮೇಲೆ ದಾಳಿ ಮಾಡಿದೆ. ಮಗಳ ಕಣ್ಣೆದುರೇ ಮಾರಕಾಸ್ತ್ರದ ದಾಳಿಗೆ ತಂದೆ (father) ಬಲಿಯಾಗಿದ್ದಾರೆ (Murder). ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯಲ್ಲಿ ನಡೆದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ನಿವಾಸಿ ಮಂಜುನಾಥ್​, ದಿನಸಿ ಅಂಗಡಿ ಹಾಗೂ ಟೆಂಟ್ ಹೌಸ್ ನಡೆಸುತ್ತಿದ್ದರು. ಊರಿನ ಹೊರಗಡೆಯ ತೋಟದ ಮನೆಯಲ್ಲಿ ವಾಸವಿದ್ದರು. ತಾನಾಯ್ತು ತಮ್ಮ ಬದುಕಾಯ್ತು ಅಂತ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.

ನಡೆದದ್ದೇನು? 

ಮಂಜುನಾಥ್ ತನ್ನಿಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಗೆ ಬಂದಿದ್ದರು. ಟೆಂಟ್ ಹೌಸ್​ನ ಅಂಗಡಿ ಮುಂದೆ ಮಕ್ಕಳ ಜೊತೆ ಮಾತನಾಡುತ್ತಾ ಕುಳಿತಿದ್ದರಂತೆ ಆದರೆ, ಈ ವೇಳೆ ಪ್ರತ್ಯಕ್ಷರಾದ ನಾಲ್ಕೈದು ಜನರ ಗುಂಪು ಮಂಜುನಾಥ್ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದನ್ನು ಕಂಡ ಓರ್ವ ಮಗಳು ಮನೆಯೊಳಗೆ ಓಡಿದರೆ, ಮತ್ತೊಬ್ಬಳನ್ನು ದುಷ್ಕರ್ಮಿ ಹಿಡಿದು ಕಿರುಚಾಡದಂತೆ ಬಾಯಿ ಮುಚ್ಚಿಸಿದ್ದಾರೆ. ಆ ಬಳಿಕ ಚಾಕು ತೆಗೆದ ಹಂತಕರು ಮಂಜುನಾಥ್​ನ ಎದೆ ಭಾಗ ಸೇರಿದಂತೆ ಹಲವು ಕಡೆ ಇರಿದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು

ಇನ್ನು ತಂದೆಯ ಹತ್ಯೆಯ ದೃಶ್ಯ ಕಣ್ಣಾರೆ ಕಂಡ ಮಗಳು ಬೆಚ್ಚಿಬಿದಿದ್ದಾಳೆ. ಬಳಿಕ ಆಕೆ ಮನೆಗೆ ಹೊಗಿ ತಾಯಿಗೆ ವಿಚಾರ ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಂತಕರು ಮುಖಕ್ಕೆ ಮಾಸ್ಕ್ ಹಾಗೂ ಗ್ಲೌಸ್ ತೊಟ್ಟು ಎಂಟ್ರಿ ಕೊಟ್ಟಿದ್ದು, ಯಾರು ಹಾಗೂ ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾರೆಂದು  ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Hubli: ಮರಣ ತಂದ ಮಹಿಳೆ ಸಂಗ; ಕೊನೆಗೂ ಬದುಕಲಿಲ್ಲ ಎಂಜಿನಿಯರ್​​!

ಸದ್ಯ ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಕೊಲೆಗೆ ಕಾರಣ ಏನೆಂಬುದು ಇನ್ನು ಪತ್ತೆಯಾಗಿಲ್ಲ. ಸದ್ಯ ಘಟನಾ ಸ್ಥಳದಲ್ಲಿ ಸಿಕ್ಕಿರುವ ಸಿಸಿಟಿವಿ ಹಾಗೂ ಮಾಹಿತಿಗಳ ಆಧರಿಸಿ ಹುಳಿಯಾರು ಪೊಲೀಸರು ತನಿಖೆ ಆರಂಭಿಸಿದ್ದು, ಆ ಬಳಿಕವಷ್ಟೇ ಮತ್ತಷ್ಟು ಸಂಗತಿಗಳು ತಿಳಿದು ಬರಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶುಕ್ರ ಹಾಗೂ ರವಿಯ ಅಪರೂಪದ ಸಂಯೋಗ, ಗುರುದೃಷ್ಟಿಯ ಯೋಗ – Kannada News | Sun and Venus in Jupiter’s Sign: Astrological Effects on Your Zodiac Signs

ಸೂರ್ಯ ಹಾಗು ಶುಕ್ರರು ಗುರುವಿನ ರಾಶಿಯಲ್ಲಿ ಇರುವುದು ಅಪರೂಪದ ಸಂಯೋಜನ. ಪರಮ‌ಮಿತ್ರರೂ ಪರಮಶತ್ರುಗಳೂ ಒಂದೇ ರಾಶಿಯಲ್ಲಿ ಇದೆ. ಸೂರ್ಯ ಹಾಗೂ ಶುಕ್ರ ಪರಸ್ಪರ ಶತ್ರುಗಳು. ಗುರು ಹಾಗೂ ಸೂರ್ಯರು ಪರಸ್ಪರ ಮಿತ್ರರು. ಶುಕ್ರ ಹಾಗೂ ಗುರು ಶತ್ರುವೂ ಮಿತ್ರರೂ ಅಲ್ಲದವರು. ಮಧ್ಯಮ. ಹೀಗಿರುವಾಗ ಗುರುವಿನ ರಾಶಿಯಲ್ಲಿ ಇರುವ ಈ ಗ್ರಹರು ಮತ್ತು ಗುರುವಿನ ದೃಷ್ಟಿಯುಳ್ಳವರು ಯಾವ ರಾಶಿಯವರಿಗೆ ಏನು ಫಲವನ್ನು ಕೊಟ್ಟಾರು ಎನ್ನುವದನ್ನು ಚಿಂತಿಸಬೇಕಿದೆ. ರವಿ ಹಾಗು ಶುಕ್ರರ ಕಾರಕತ್ವ ಭಿನ್ನ. ಆದರೆ ಒಂದಕ್ಕೊಂದು ಪೂರಕ.

ಸೂರ್ಯನು ರಾಜನಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಇದ್ದರೆ, ಶುಕ್ರನು ಭೋಗವನ್ನು ಪ್ರತಿನಿಧಿಸುವವನು. ಹಾಗಾಗಿ ಪರಸ್ಪರ ಸಾಮರಸ್ಯ ಇದೆ. ಇನ್ನು ಗುರುವಿನ ಪೂರ್ಣ ದೃಷ್ಟಿ ಸೂರ್ಯನ ಮೇಲೆ‌ಬರುವುದರಿಂದ ರಾಜಕೀಯ, ಸರ್ಕಾರದ ಉದ್ಯೋಗ, ಸ್ಥಾನಮಾಮ ಇವುಗಳ ಜೊತೆ, ತಂದೆಯಿಂದ ಪ್ರೀತಿ, ಲಾಭ, ಮಾಡುವ ಕಾರ್ಯದಲ್ಲಿ ಉತ್ಸಾಹ, ಆತ್ಮವಿಶ್ವಾಸ ಇವು ಹೆಚ್ಚಾಗುತ್ತದೆ. ಆದರೆ ಶುಕ್ರನಿಂದ ಅಂತಹ ಪೂರ್ಣ ಫಲವನ್ನು ನಿರೀಕ್ಷಿಸುವಂತಿಲ್ಲ. ಹಲವು ಬಾರಿ ನಿಮ್ಮ ಕನಸು ಭಗ್ನವಾಗಬಹದು ಅಥವಾ ಭಗ್ನವಾದಂತೆ ತೋರುವುದು.

ಮೇಷ ರಾಶಿ :

ನಿಮಗೆ ಭಾಗ್ಯೋದಯದ ಕಾಲ, ಉನ್ನತ ವಿದ್ಯಾಭ್ಯಾಸಕ್ಕೆ ದಾರಿ ತೆರೆಯಲಿದೆ. ವಿದೇಶ ಪ್ರಯಾಣದ ಉತ್ಸಾಹದಲ್ಲಿ ಇರುವಿರಿ. ಆತ್ಮವಿಶ್ವಾಸ ವೃದ್ಧಿ. ಸರ್ಕಾರಿ ಕಾರ್ಯಗಳಲ್ಲಿ ಅನುಕೂಲ, ಗುರುಕೃಪೆ ಲಭಿಸುತ್ತದೆ. ಧೈರ್ಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸು ತರುತ್ತವೆ.

ಸಿಂಹ ರಾಶಿ :

ಈ ರಾಶಿಗೆ ರವಿಯು ಅಧಿಪತಿಯಾದ ಕಾರಣ ನಾಯಕತ್ವ, ಕೀರ್ತಿ, ಸೃಜನಶೀಲತೆ ಹೆಚ್ಚಾಗುತ್ತದೆ. ಪ್ರೇಮ ಹಾಗೂ ಸಂತಾನ ಸುಖ ಲಭಿಸುತ್ತದೆ. ಸಮಾಜದಲ್ಲಿ ಗೌರವ, ಅಧಿಕಾರ ಮತ್ತು ಆಕರ್ಷಣೆ ಹೆಚ್ಚುವ ಕಾಲಘಟ್ಟ.

ಧನು ರಾಶಿ :

ಇದೇ ರಾಶಿಯಲ್ಲಿ ರವಿ ಹಾಗೂ ಶುಕ್ರರಿದ್ದು ವ್ಯಕ್ತಿತ್ವ ಪ್ರಕಾಶಮಾನವಾಗುತ್ತದೆ. ಆತ್ಮವಿಶ್ವಾಸ, ವಿವೇಕ, ಆಧ್ಯಾತ್ಮಿಕ ಚಿಂತನೆ ವೃದ್ಧಿ. ವಿವಾಹ, ಕಲೆ, ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ.

ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ತುಲಾ ರಾಶಿ :

ಶುಕ್ರನ ಆಧಿಪತ್ಯದ ರಾಶಿಗೆ ಮಾತುಕತೆ, ಸಂಪರ್ಕ, ಪ್ರಯಾಣ, ಕಲಾತ್ಮಕ ಚಟುವಟಿಕೆಗಳಲ್ಲಿ ಲಾಭ. ಸ್ನೇಹ ವಲಯ ವಿಸ್ತರಣೆ. ಅಹಂಕಾರ ನಿಯಂತ್ರಿಸಿದರೆ ಉತ್ತಮ ಯಶಸ್ಸು ಮತ್ತು ಮಾನಸಿಕ ಸಮತೋಲನ ಸಿಗುತ್ತದೆ.

ಮಿಥುನ ರಾಶಿ :

ಶುಕ್ರ ರವಿಯರ ದೃಷ್ಟಿ ಇರಲಿದ್ದು ಸ್ನೇಹಿತರಿಂದ ಲಾಭ, ಆದಾಯ ವೃದ್ಧಿ, ಸಾಮಾಜಿಕ ಗೌರವ ಹೆಚ್ಚಳ. ಸೃಜನಾತ್ಮಕ ಯೋಜನೆಗಳಿಗೆ ಬೆಂಬಲ. ಸಾರ್ವಜನಿಕ ಜೀವನದಲ್ಲಿ ನಿರಂತರ ತೊಡಗಿಕೊಳ್ಳುವಿರಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ? – Kannada News | Stock Market updates on Jan 12th, sensex and nifty gain big after successive losses

ನವದೆಹಲಿ, ಜನವರಿ 12: ಇವತ್ತು ಬೆಳಗ್ಗೆ ಟ್ರೇಡಿಂಗ್ ಅವಧಿಯಲ್ಲಿ ಷೇರು ಮಾರುಕಟ್ಟೆ (Stock Market) ಕಳೆಗುಂದಿತ್ತು. ಸತತ ಐದು ಸೆಷನ್ಸ್ ಕುಸಿದಿದ್ದ ಮಾರುಕಟ್ಟೆ, ಇವತ್ತು ಆರನೇ ಸೆಷನ್​ನಲ್ಲೂ ಭರ್ಜರಿ ಇಳಿಕೆಯ ಹಾದಿಯಲ್ಲಿತ್ತು. ಮಾಧ್ಯಮಗಳಲ್ಲೂ ಕೂಡ ಸತತ ಆರು ದಿನ ಷೇರು ಮಾರುಕಟ್ಟೆ ಕುಸಿದಿದೆ ಎನ್ನುವಂತಹ ಸುದ್ದಿ ಪ್ರಕಟವಾಯಿತು. ಆದರೆ, ನೋಡನೋಡುತ್ತಿದ್ದಂತೆಯೇ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಪಾಸಿಟಿವ್ ಆಗಿವೆ.

ಸೆನ್ಸೆಕ್ಸ್ ಇವತ್ತು ಟ್ರೇಡಿಂಗ್ ಕೊನೆಯಲ್ಲಿ 83,878 ಅಂಕಗಳಲ್ಲಿ ಅಂತ್ಯಗೊಂಡಿತು. 302 ಅಂಕ ಅಥವಾ ಶೇ 0.36ರಷ್ಟು ಹೆಚ್ಚಳ ಆಗಿದೆ. ನಿಫ್ಟಿ50 ಸೂಚ್ಯಂಕವು ಶೇ. 0.42 ಅಥವಾ 107 ಅಂಕ ಗಳಿಕೆಯೊಂದಿಗೆ 25,790.25 ಮಟ್ಟದಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ: ಸತತ ಆರನೇ ದಿನ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ

ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 82,861 ಅಂಕಗಳಿಗೆ ಕುಸಿದಿತ್ತು. ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡು 700 ಅಂಕಗಳನ್ನು ಗಳಿಸಿ, ಒಟ್ಟಾರೆ 302 ಅಂಕಗಳ ಮುನ್ನಡೆ ಪಡೆದಿದೆ. ಆದರೆ, ಲಾರ್ಜ್ ಕ್ಯಾಪ್ ಇಂಡೆಕ್ಸ್ ಸಕಾರಾತ್ಮಕ ಸ್ಪಂದನೆ ಪಡೆದಿವೆ. ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಷೇರುಗಳು ಹಿನ್ನಡೆ ಕಂಡಿವೆ.

ಷೇರು ಮಾರುಕಟ್ಟೆ ಸೋಮವಾರ ದ್ವಿತೀಯಾರ್ಧದಲ್ಲಿ ಜಿಗಿದಿದ್ದು ಯಾಕೆ?

ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರು ಹೇಳಿಕೆ ನೀಡಿದ್ದು ಮಾರುಕಟ್ಟೆಗೆ ಸಕಾರಾತ್ಮಕ ಭಾವನೆ ತರಲು ಸಹಾಯವಾಗಿದೆ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

‘ಅಮೆರಿಕಕ್ಕೆ ಭಾರತದಷ್ಟು ಮುಖ್ಯವಾಗಿರುವ ದೇಶ ಮತ್ತೊಂದಿಲ್ಲ. ಟ್ರೇಡ್ ಡೀಲ್ ಅಂತಿಮಗೊಳಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ನಿಜವಾದ ಸ್ನೇಹಿತರು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಕೊನೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಯಶಸ್ವಿಯಾಗುತ್ತಾರೆ’ ಎಂದು ಸರ್ಗಿಯೋ ಗೋರ್ ಹೇಳಿದ್ದಾರೆ. ಇವರ ಈ ಭರವಸೆದಾಯಕ ಮಾತುಗಳು ಮಾರುಕಟ್ಟೆಯ ಉತ್ಸಾಹ ಹೆಚ್ಚಲು ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಖಾಸಗಿ ಕಂಪನಿ – Kannada News | Bengaluru Silk Sonix Company Apologizes People Of Karnataka Over Job Post Seeking Non Kannadigas As HR

ಬೆಂಗಳೂರು, (ಜನವರಿ 12): ನಾನ್ ಕನ್ನಡಿಗ ಹೆಚ್‌ಆರ್ (Non Kannadiga HR) ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿ ಕನ್ನಡಿಗರನ್ನು ಕೆರಳಿಸಿದ್ದ ಬೆಂಗಳೂರಿನ ಖಾಸಗಿ ಕಂಪನಿ ಇದೀಗ ಕ್ಷಮೆಯಾಚಿಸಿದೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ (Skill Sonics) ಎಂಬ ಕಂಪನಿ ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂದು ನೌಕರಿ ಡಾಟ್ ಕಾಮ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಂಘಟನೆಯವರು ಜೆಪಿ ನಗರದ ಸಂಸ್ಥೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು. ಸಾಮಾಜಿಕ ಜಾಲಾತಾಣದಲ್ಲಿಯೂ ಈ ಪ್ರಕಟಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಸುದ್ದಿಯನ್ನು ಟಿವಿ9 ಕನ್ನಡ ಸಹ ವರದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಸ್ಕಿಲ್ ಸೋನಿಕ್ಸ್ ಕಂಪನಿ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ.

ಇದನ್ನೂ ನೋಡಿ: ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ: ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

Source link

ನೀನು ಬ್ಯಾಟಿಂಗ್ ಮಾಡಿದ್ದು ಸಾಕು ಬಾ; ಮೊಹಮ್ಮದ್ ರಿಜ್ವಾನ್​ಗೆ ಲೈವ್ ಪಂದ್ಯದಲ್ಲೇ ಅವಮಾನ – Kannada News | BBL Shock: Rizwan Retired Out Due to Slow Batting; Pakistan T20 Hopes Fade?

ಪಾಕಿಸ್ತಾನದ ಟಿ20 ತಂಡದಿಂದ ಹೊರಬಿದ್ದಿರುವ ತಂಡದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತೆ ತಂಡ ಕೂಡಿಕೊಳ್ಳುವುದು ಭಾಗಶಃ ಅನುಮಾನವಾಗಿದೆ. ಏಕೆಂದರೆ ಮತ್ತೆ ತಂಡ ಕೂಡಿಕೊಳ್ಳುವ ಇರಾದೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಸೇರಿಕೊಂಡಿದ್ದ ರಿಜ್ವಾನ್ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ರಿಜ್ವಾನ್ ಅವರ ಈ ಕಳಪೆ ಫಾರ್ಮ್​ ಹಾಗೂ ನಿಧಾನಗತಿಯ ಬ್ಯಾಟಿಂಗ್​ನಿಂದ ಬೇಸತ್ತಿರುವ ತಂಡದ ಮ್ಯಾನೇಜ್​ಮೆಂಟ್ ಅವರನ್ನು ಲೈವ್ ಪಂದ್ಯದಲ್ಲಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಪೆವಿಲಿಯನ್​ಗೆ ವಾಪಸ್ ಕರೆಸಿಕೊಂಡಿದೆ. ಈ ಮೂಲಕ ರಿಜ್ವಾನ್ ಬಿಬಿಎಲ್‌ನಿಂದ ನಿವೃತ್ತರಾದ ಮೊದಲ ವಿದೇಶಿ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ರಿಜ್ವಾನ್ ನಿಧಾನಗತಿಯ ಬ್ಯಾಟಿಂಗ್

ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಪಾಕಿಸ್ತಾನಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಜ್ವಾನ್ ಅವರನ್ನು ಹೆಚ್ಚಿನ ನಿರೀಕ್ಷೆಗಳೊಂದಿಗೆ ಬಿಬಿಎಲ್ 15 ಸೀಸನ್‌ಗಾಗಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ, ರಿಜ್ವಾನ್ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಈ ಆವೃತ್ಇಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಅರ್ಧಶತಕ ಗಳಿಸಲು ವಿಫಲರಾಗಿರುವ ರಿಜ್ವಾನ್, ನಿಧಾನಗತಿಯ ಬ್ಯಾಟಿಂಗ್‌ಗಾಗಿ ಹೆಚ್ಚಿನ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಬಹುಶಃ ಅವರ ಸ್ಥಿರ ಬ್ಯಾಟಿಂಗ್ ಶೈಲಿಯಿಂದಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ತಾಳ್ಮೆಯ ಕಟ್ಟೆ ಕೊನೆಗೂ ಒಡೆದಿದೆ.

ಜನವರಿ 12, ಸೋಮವಾರ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ, ರೆನೆಗೇಡ್ಸ್ ಮೊದಲು ಬ್ಯಾಟ್ ಮಾಡಿ ಒಂಬತ್ತು ಓವರ್‌ಗಳಲ್ಲಿ 83 ರನ್ ಗಳಿಸಿತು. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರಿಜ್ವಾನ್ 18 ನೇ ಓವರ್​ವರೆಗೆ ಕ್ರೀಸ್‌ನಲ್ಲಿದ್ದರು. ಈ ಸಮಯದಲ್ಲಿ, ರಿಜ್ವಾನ್ 23 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಕೇವಲ 26 ರನ್ ಕಲೆಹಾಕಿದರು. ಹೀಗಾಗಿ ತಂಡದ ಸ್ಕೋರ್ ಕೇವಲ 154 ರನ್‌ ಆಗಿತ್ತು. ಆದ್ದರಿಂದ ಕೊನೆಯ ಎರಡು ಓವರ್‌ಗಳಲ್ಲಿ ಸಾಧ್ಯವಾದಷ್ಟು ರನ್ ಗಳಿಸಲು, ನಾಯಕ ವಿಲ್ ಸದರ್ಲ್ಯಾಂಡ್, ರಿಜ್ವಾನ್ ಅವರನ್ನು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಡಗೌಟ್​ಗೆ ವಾಪಸ್ ಕರೆಸಿಕೊಂಡರು.

ಬಿಬಿಎಲ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ

ಸದರ್ಲ್ಯಾಂಡ್ ತಕ್ಷಣ ಡಗೌಟ್​ನಿಂದ ಎದ್ದು 18 ನೇ ಓವರ್ ಮುಗಿದ ತಕ್ಷಣ ರಿಜ್ವಾನ್​ಗೆ ರಿಟೈರ್ಡ್ ಔಟ್ ಆಗುವಂತೆ ಕರೆ ನೀಡಿದರು. ರಿಜ್ವಾನ್​ಗೆ ಆರಂಭದಲ್ಲಿ ಇದು ಅರ್ಥವಾಗಲಿಲ್ಲ, ಆದರೆ ಸದರ್ಲ್ಯಾಂಡ್ ಮೂರು ಅಥವಾ ನಾಲ್ಕು ಬಾರಿ ಸನ್ನೆ ಮಾಡಿದಾಗ, ತಮ್ಮನ್ನು ರಿಟೈರ್ಡ್ ಔಟ್ ಎಂದು ಕರೆಯಲಾಗುತ್ತಿದೆ ಎಂದು ಅರಿತುಕೊಂಡರು. ಮುಜುಗರಕ್ಕೊಳಗಾದ ರಿಜ್ವಾನ್ ಪೆವಿಲಿಯನ್​ಗೆ ಹಿಂತಿರುಗಲು ಪ್ರಾರಂಭಿಸಿದರು. ಇದರೊಂದಿಗೆ, ಅವರು ಬಿಬಿಎಲ್​ನಲ್ಲಿ ರಿಟೈರ್ಡ್ ಔಟ್ ಆದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಈ ರೀತಿ ರಿಟೈರ್ಡ್ ಔಟ್ ಆದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಕುಖ್ಯಾತಿಗೂ ಪಾತ್ರರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿ.ಕೆ. ಶಿವಕುಮಾರ್​​ ಬಣದ ನಡುವೆ ಹೊಸ ವಾರ್​​: ಗೆಲ್ಲೋದ್ಯಾರು? – Kannada News | Apex Bank battle: Competition between Siddaramaiah and DK Shivakumar teams over the president’s post

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​​

ಬೆಂಗಳೂರು, ಜನವರಿ 12: ರಾಜ್ಯ ಕಾಂಗ್ರೆಸ್​​ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನಿಸಿದರೂ ಒಳಗೊಳಗೆ ಬಣಗಳ ನಡುವೆ ಬೇಗುದಿ ಹೊಗೆಯಾಡುತ್ತಲೇ ಇದೆ. ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ನಡುವೆ ಪೈಪೋಟಿ ನಡೆಯುತ್ತಿದ್ದು, ಸಿಎಂ ಕುರ್ಚಿ ಕದನ ಹೈಕಮಾಂಡ್​​ ಅಂಗಳಕ್ಕೂ ತಲುಪಿರೋದು ಎಲ್ಲರಿಗೂ ತಿಳಿದ ವಿಚಾರ. ಈ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​​ ಬಣದ ನಡುವೆ ಹೊಸ ಪೈಪೋಟಿಯೊಂದು ಶುರುವಾಗಿದೆ.

ಹೌದು, ಅಪೆಕ್ಸ್ ಬ್ಯಾಂಕ್​ ವಿಚಾರದಲ್ಲೂ ‘ಕೈ’ ನಾಯಕರ ನಡುವೆ ಜಟಾಪಟಿ ಸಾಧ್ಯತೆ ಏರ್ಪಟ್ಟಿದೆ. ಮಾಜಿ ಸಚಿವ ಕೆ.ಎನ್​​. ರಾಜಣ್ಣ ಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಮತ್ತೊಂದೆಡೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಡಿಸಿಎಂ ಡಿಕೆಶಿ ಆಪ್ತರೂ ಪ್ರಯತ್ನ ನಡೆಸುತ್ತಿದ್ದಾರೆ. ಡಿಕೆಶಿ ಸಂಬಂಧಿ MLC ಎಸ್. ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರೋದು ಅಖಾಡವನ್ನು ಮತ್ತಷ್ಟು ರಂಗೇರಿಸಿದೆ.

ಸಂಪುಟ ಪುನಾರಚನೆ ನಡೆದರೆ ಮತ್ತೆ ಸಚಿವರಾಗಲು ಕೆ.ಎನ್.ರಾಜಣ್ಣ ಈಗಾಗಲೇ ತಯಾರಿ ನಡೆಸಿದ್ದು, ಒಂದೊಮ್ಮೆ ಆ ಆಸೆ ಈಡೇರದಿದ್ದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಗಿಟ್ಟಿಸಬೇಕು ಅನ್ನೋದು ಮಾಜಿ ಸಚಿವರ ಲೆಕ್ಕಾಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯ ಸಹಕಾರ ಇಲಾಖೆ ನಿಭಾಯಿಸುತ್ತಿದ್ದು, ತಮ್ಮ ಆಪ್ತರಾಗಿರೋ ಸಿಎಂ ಸಹಕಾರದಿಂದಲೇ ಸ್ಥಾನ ಗಿಟ್ಟಿಸಲು ರಾಜಣ್ಣ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಸಚಿವ ಸ್ಥಾನ ಅಥವಾ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಎರಡರಲ್ಲೊಂದನ್ನು ಪಡೆಯಲು ರಾಜಣ್ಣ ರಣತಂತ್ರ ರೂಪಿಸಿದ್ದಾರೆ.

ಇದನ್ನೂ ಓದಿ: ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಮಲ್ಲಿಕಾರ್ಜುನ ಖರ್ಗೆ

ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಪ್ರತಿನಿಧಿಯಾಗಿ ಅಪೆಕ್ಸ್ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜಪೇಟೆಯಲ್ಲಿರುವ ಅಪೆಕ್ಸ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮಾಜಿ ಸಚಿವ ನಾಮಿನೇಷನ್ ಮಾಡಿದ್ದು, ಇದೇ ವೇಳೆ ಧಾರವಾಡದಿಂದ ಶಿವಕುಮಾರ್ ಗೌಡ ಪಾಟೀಲ್, ಬಳ್ಳಾರಿ ಜಿಲ್ಲಾ ಕೇಂದ್ರ ಸರಕಾರ ಬ್ಯಾಂಕ್​​ನಿಂದ ಪಿ. ಮೂಕಯ್ಯ ಸ್ವಾಮಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​ನಿಂದ ಆರ್. ನರೇಂದ್ರ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​​ನಿಂದ ರಾಹುಲ್​​ ಸತೀಶ್ ಜಾರಕಿಹೊಳಿ, ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​​ನಿಂದ ಶರಣಗೌಡ ಪಾಟೀಲ್, ದಾವಣಗೆರೆ ಡಿಸಿಸಿ ಬ್ಯಾಂಕ್​​ನಿಂದ ಗಿರೀಶ್ ಮುದೇಗೌಡ ಉಮೇದುದಾರಿಕೆ ಸಲ್ಲಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

“ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ – Kannada News | Google engineer quits over external work conflict arpit bhayanis bitter exit

ಬೆಂಗಳೂರು, ಜ.12: ಸಿಲಿಕಾನ್​ ಸಿಟಿಯಲ್ಲಿ ಜೀವನ ನಡೆಸುವುದು ಸುಲಭ, ಆದರೆ ಈ ಐಟಿ, ಬಿಟಿ ಕಂಪನಿಯಲ್ಲಿ ಕೆಲಸ ಮಾಡೋದೇ ದೊಡ್ಡ ತಲೆನೋವು, ಜೀವನದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು, ಆದರೆ ಐಟಿ ಕಂಪನಿಗಳಲ್ಲಾಗುವ ಕಿರಿಕಿರಿ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವು ಟೆಕ್ಕಿಗಳು ದೂರಿದ್ದಾರೆ. ಇದೀಗ ಸೋಶಿಯಲ್​​​ ಮೀಡಿಯಾದಲ್ಲಿ ಇಂತಹದೇ ಒಂದು ಪೋಸ್ಟ್​ ವೈರಲ್​ ಆಗಿದೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ (Google Engineer) ಒಬ್ಬರು ಗೂಗಲ್ ತೊರೆದ ನಂತರ ತನ್ನ ಜೀವನದ ಕಹಿ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕಂಪನಿಯ ಹೊರಗಿನ ಕೆಲಸದಿಂದ ಉಂಟಾದ ಸಂಘರ್ಷದಿಂದ ಕೆಲಸ ಬಿಡಬೇಕಾದ ಪರಿಸ್ಥಿತಿ ಬಂತು. ಇದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ ಎಂದು ತಮ್ಮ ಪೋಸ್ಟ್​​ನಲ್ಲಿ ಹಂಚಿಕೊಂಡಿದ್ದಾರೆ.

ಅರ್ಪಿತ್ ಭಯಾನಿ ಎಂಬುವವರು ಎಕ್ಸ್​ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಗೂಗಲ್‌ನಲ್ಲಿ ತಮ್ಮ ಕೊನೆಯ ದಿನ ಅನಿರೀಕ್ಷಿತ ಕ್ಷಣದ ಬಗ್ಗೆ ಈ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಇದು ಸಿಹಿ-ಕಹಿಯ ಕ್ಷಣ ಅಲ್ಲ, ಸಂಪೂರ್ಣವಾಗಿ ಕಹಿಯ ಕ್ಷಣ ಎಂದು ಹೇಳಿದ್ದಾರೆ. “ನಾನು ಇಲ್ಲಿ ಕೆಲಸ ಬಿಡಬೇಕು ಎಂಬ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ನನಗೆ ಬೇರೆ ದಾರಿ ಇರಲಿಲ್ಲ. ಆನ್‌ಲೈನ್ ಕೋರ್ಸ್‌ಗಳು ಮತ್ತು ಯೂಟ್ಯೂಬ್ ವಿಷಯಕ್ಕೆ ಸಂಬಂಧಿಸಿದಂತೆ ಹೊರಗಿನ ಕೆಲಸದಿಂದ ಈ ಸಮಸ್ಯೆ ಉಂಟಾಗಿದೆ. ಒಮ್ಮೆ ಕೆಲಸ ಬಿಡುವ ನಿರ್ಧಾರ ಮಾಡಿಕೊಂಡರೆ ಮತ್ತೆ ಅದನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಾನು ತುಂಬಾ ಪ್ರೀತಿಸುವ ಒಂದು ಡೊಮೇನ್ ಅನ್ನು ಬಿಡಲು ನನಗೆ ಬೇಸರವಾಗುತ್ತಿದೆ. ಇದು ಇನ್-ಮೆಮೊರಿ ಡೇಟಾಬೇಸ್‌ಗಳು” ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ನಾನು ಒಬ್ಬ ಒಳ್ಳೆಯ ಕೆಲಸಗಾರನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ಅದಕ್ಕಿಂತಲ್ಲೂ ಹೆಚ್ಚು ಒಳ್ಳೆಯ ಜೊತೆಗಾರರ ಜತೆಗೆ ಕೆಲಸ ಮಾಡಿದ್ದೇನೆ. ಇನ್ನು ಒಳ್ಳೆಯ ವಿಚಾರಗಳನ್ನು ಕಲಿಯುವುದನ್ನು ಮಿಸ್​​ ಮಾಡಿಕೊಂಡೆ ಎಂದು ಹೇಳಿದ್ದಾರೆ. ಗೂಗಲ್‌ನಲ್ಲಿ ಎರಡು ವರ್ಷ ಕೆಲಸ ಮಾಡಿರುವ ಭಯಾನಿಗೆ ತುಂಬಾ ತೃಪ್ತಿಕರವಾಗಿತ್ತು ಎಂದು ಹೇಳಿದ್ದಾರೆ. ಇದು ನನಗೆ ಎಂಜಿನಿಯರ್ ಮತ್ತು ಆಪರೇಟರ್ ಆಗಿ ಬೆಳೆಯಲು ಸಹಾಯ ಮಾಡಿದೆ. ನನಗೆ ಈ ಎರಡು ವರ್ಷ ಅವಕಾಶ ನೀಡಿದ್ದಕ್ಕಾಗಿ ನಾನು ಗೂಗಲ್‌ಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನನ್ನನ್ನು ಉತ್ತಮ ಎಂಜಿನಿಯರ್ ಮತ್ತು ಆಪರೇಟರ್ ಆಗಿ ಮಾಡಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕರು ಈ ಬಗ್ಗೆ ಕಮೆಂಟ್​ ಮಾಡಿದ್ದಾರೆ. ನೀವು ಎಷ್ಟು ಪ್ರಮಾಣಿಕವಾಗಿ ಕೆಲಸ ಮಾಡಿದ್ದೀರಿ ಎಂಬುದಕ್ಕೆ ಈ ನಿಮ್ಮ ಮಾತೇ ಸಾಕ್ಷಿ, ಗೂಗಲ್​​ ನಿಮ್ಮ ಕಳೆದುಕೊಂಡು ನಷ್ಟ ಪಡುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಗೂಗಲ್​​ನಲ್ಲೂ ಇಂತಹ ಸಂಘರ್ಷಗಳು ನಡೆಯುತ್ತದೆ ಎಂಬುದನ್ನು ನಂಬಲು ಅಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಳ್ಳೆಯದಾಗಲಿ ಮುಂದೆ ನಿಮಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Makara Sankranti 2026: ಸಂಕ್ರಾಂತಿ ಹಬ್ಬಕ್ಕೆ ಮನೆಯಲ್ಲೇ ಮಾಡಿ ಆರೋಗ್ಯಕರ ಶೇಂಗಾ-ಎಳ್ಳು ಉಂಡೆ – Kannada News | Makara Sankranti 2026: Sankranti special peanut sesame laddu; here is the recipe

ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ (Makara Sankranti) ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬವಾದ ಇದನ್ನು ಉತ್ತರ ಭಾರತದಲ್ಲಿ ಲೋಹ್ರಿ ಎಂದು ಕರೆದರೆ, ತಮಿಳುನಾಡಿನಲ್ಲಿ ಪೊಂಗಲ್‌ ಎಂದೂ ಹಾಗೂ ಕರ್ನಾಟಕ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನು ಸೇವಿಸುವ ಸಂಪ್ರದಾಯವಿದೆ. ಜೊತೆಗೆ ಎಳ್ಳು ಮತ್ತು ಬೆಲ್ಲವನ್ನು ಬಳಸಿ ವಿವಿಧ ಖಾದ್ಯಗಳನ್ನು ಸಹ ತಯಾರಿಸಲಾಗುತ್ತದೆ. ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಶೇಂಗಾ ಎಳ್ಳಿನ ಉಂಡೆಯನ್ನು ಮಾಡಿ. ಈ ಲಡ್ಡು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ.

ಶೇಂಗಾ-ಎಳ್ಳಿನ ಉಂಡೆಯ ಆರೋಗ್ಯ ಪ್ರಯೋಜನ:

ಚಳಿಗಾಲದಲ್ಲಿ ಎಳ್ಳು ಮತ್ತು ಶೇಂಗಾ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಎಳ್ಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ. ಶೇಂಗಾ ಪ್ರೋಟೀನ್‌ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದ್ದು, ಇದು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಈ ಉಂಡೆಯನ್ನು ತಯಾರಿಸಲು ಬೆಲ್ಲವನ್ನು ಬಳಸಲಾಗುತ್ತದೆ. ಈ ಬೆಲ್ಲ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಶೇಂಗಾ ಎಳ್ಳಿನ ಉಂಡೆಯನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳು:

  • ಬಿಳಿ ಎಳ್ಳು – 1 ಕಪ್‌
  • ಶೇಂಗಾ – 1 ಕಪ್‌
  • ಬೆಲ್ಲ – 1 ಕಪ್‌
  • ಅರ್ಧ ಟೀ ಚಮಚ ಏಲಕ್ಕಿ ಪುಡಿ
  • ಸ್ವಲ್ಪ ತುಪ್ಪ

ಇದನ್ನೂ ಓದಿ: ಹೆಂಗಳೆಯರೇ… ಹಬ್ಬದ ದಿನ ಸುಂದರವಾಗಿ ಕಾಣಿಸಿಕೊಳ್ಳಲು ನಿಮ್ಮ ಉಡುಗೆ ಹೀಗಿರಲಿ

ಶೇಂಗಾ ಎಳ್ಳಿನ ಉಂಡೆಯನ್ನು ತಯಾರಿಸುವ ವಿಧಾನ:

ಮೊದಲಿಗೆ ಗ್ಯಾಸ್‌ ಸ್ಟೌವ್‌ ಮೇಲೆ ಒಂದು ಬಾಣಲೆಯನ್ನಿಟ್ಟು ಅದರಲ್ಲಿ ಎಳ್ಳನ್ನು ಕಡಿಮೆ ಉರಿಯಲ್ಲಿ ಗೋಲ್ಡನ್‌ ಬ್ರೌನ್‌ ಬಣ್ಣ ಬರುವವರೆಗೆ ಹುರಿಯಬೇಕು. ಅದನ್ನು ಪಕ್ಕಕ್ಕೆ ಇರಿಸಿ ನಂತರ ಅದೇ ಬಾಣಲೆಯಲ್ಲಿ ಸಿಪ್ಪೆ ತೆಗೆದ ಶೇಂಗಾವನ್ನು ಕಡಿಮೆ ಉರಿಯಲ್ಲಿ ಹುರಿದು, ಅದು ತಣ್ಣಗಾದ ನಂತರ ಸಿಪ್ಪೆ ತೆಗೆಯಿರಿ. ನಂತರ ಆ ಕಡಲೆಕಾಯಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ ಜೊತೆಗೆ ಅದಕ್ಕೆ ಏಲಕ್ಕಿಯನ್ನೂ ಸೇರಿಸಿ.

ಈಗ ಒಂದು ಪ್ಯಾನ್‌ಗೆ ತುಪ್ಪ ಸೇರಿಸಿ ಅದಕ್ಕೆ ಬೆಲ್ಲವನ್ನು ಹಾಕಿ ಪಾಕ ತಯಾರಿಸಿ, ಬೆಲ್ಲ ಸಂಪೂರ್ಣವಾಗಿ ಕರಗಿದ ಬಳಿಕ ಅದಕ್ಕೆ ಹುರಿದ ಎಳ್ಳು ಮತ್ತು ಕಡಲೆಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಲೆಯನ್ನು ಆಫ್‌ ಮಾಡಿ ಮತ್ತು ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಮಿಶ್ರಣ ತಣ್ಣಗಾದ ನಂತರ ನಿಮ್ಮ ಕೈಗಳಿಗೆ ತುಪ್ಪವನ್ನು ಹಚ್ಚಿ, ಉಂಡೆ ತಯಾರಿಸಿದರೆ ರುಚಿಕರ ಹಾಗೆಯೇ ಆರೋಗ್ಯಕರ ಶೇಂಗಾ-ಎಳ್ಳಿನ ಉಂಡೆ ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:44 pm, Mon, 12 January 26

Source link

ಗಣರಾಜ್ಯೋತ್ಸವ ಅಂಗವಾಗಿ ಜ 14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ: ಈ ಬಾರಿ ಥೀಮ್ ಯಾವುದು? ಟಿಕೆಟ್​ ದರವೆಷ್ಟು? – Kannada News | Bengaluru: Lalbagh Flower Show to Begin on January 14 as Part of Republic Day Celebrations; Full Details Here

ಫ್ಲವರ್ ಶೋಗೆ ಸಿದ್ಧತೆ ನಡೆದಿರುವುದು

ಬೆಂಗಳೂರು, ಜನವರಿ 12: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ (Flower Show)  ಅನಾವರಣಗೊಳ್ಳಲಿದೆ. ಗಣರಾಜ್ಯೋತ್ಸವ (Republic Day) ದಿನಾಚರಣೆ ಅಂಗವಾಗಿ ತೋಟಗಾರಿಕಾ ಇಲಾಖೆ ಜನವರಿ 14ರಿಂದ 26ರವರೆಗೆ 219ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದ್ದು, ಜ.14ರ ಸಂಜೆ 4 ಗಂಟೆಗೆ ಸಿಎಂ, ಡಿಸಿಎಂ ಮತ್ತು ಸಂಸದ ತೇಜಸ್ವಿ ಸೂರ್ಯ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್​ ಹೇಳಿದ್ದಿಷ್ಟು

ಫ್ಲವರ್ ಶೋ ಆಯೋಜನೆ ಬಗ್ಗೆ ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜ.14ರಂದು ಉದ್ಘಾಟನೆ ಬಳಿಕ ಸಂಜೆ 5 ಗಂಟೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಇದು 219ನೇ ಫಲಪುಷ್ಪ ಪ್ರದರ್ಶನ. ಮೊದಲನೇ ಪ್ರದರ್ಶನ 1912ರಲ್ಲಿ ನಡೆದಿತ್ತು ಎಂದರು.

ಫ್ಲವರ್ ಶೋನಲ್ಲಿ ಏನೆಲ್ಲಾ ಇರಲಿದೆ

ಪರಿಸರ, ಪ್ರಾಣಿ-ಪಕ್ಷಿಗಳ ಪ್ರೇಮಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕುರಿತು ಈ ಭಾರಿಯ ಪ್ಲವರ್ ಶೋ ಇರಲಿದೆ. ಗಾಜಿನ ಮನೆಯಲ್ಲಿ ಬೃಹತ್ ಬೆಟ್ಟ, ನೀರಿನ ಹರಿ, ಪ್ರಾಣಿ ಪಕ್ಷಿಗಳಿಂದ ಕಂಗೊಳಿಸಲಿದೆ. ತೇಜಸ್ವಿ ಹಾಗೂ ಮಡದಿಯ ಪ್ರತಿಕೃತಿ, ಕರ್ವಾಲೋ ಕಾದಂಬರಿ ಕಾಲ್ಪನಿಕ ಚಿತ್ರಣ, ಬಿಳಿಗಿರ ರಂಗನ ಬೆಟ್ಟದ ಹಳ್ಳಿ ಸೊಗಡು, ಜಾನಪದ, ಡೊಳ್ಳು ಕುಣಿತ, ನಂದಿಗಿರಿಧಾಮ, ನಾರುಬೇರಿನ ಪ್ರದರ್ಶನ ಇರಲಿದೆ.

ಇದನ್ನೂ ಓದಿ: 11 ದಿನಗಳ ಕಬ್ಬನ್ ಪಾರ್ಕ್​​ ಪುಷ್ಪಮೇಳಕ್ಕೆ ಚಾಲನೆ: ಕಣ್ಮನ ಸೆಳೆದ ಬಗೆ ಬಗೆಯ ಹೂಗಳು

ತಮಿಳುನಾಡು, ಕೇರಳ, ಮಹಾರಾಷ್ಟ, ಡಾರ್ಜಿಲಿಂಗ್, ವಯನಾಡು ಕಡೆಯಿಂದ ಹೂಗಳು ಬರಲಿವೆ. 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 32 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗುವುದು. ಈ ಬಾರಿ ಲಾಲ್​ಬಾಗ್​ನಲ್ಲಿ ಬೆಳೆದಿರುವ 27 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರವೇಶ ಶುಲ್ಕ ಎಷ್ಟು?

ಇನ್ನು ಲಾಲ್​​ಬಾಗ್​ ಫ್ಲವರ್ ಶೋಗೆ ಟಿಕೆಟ್​ ದರ ನಿಗದಿ ಮಾಡಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ರಜೆ ದಿನಗಳಲ್ಲಿ 100 ರೂ ಟಿಕೆಟ್ ದರ ಇರಲಿದ್ದು, ಮಕ್ಕಳಿಗೆ 30 ರೂ, 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಅಷ್ಟೇ ಅಲ್ಲದೆ ಫಲಫುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಇಂದಿನಿಂದ ಡಿಸೆಂಬರ್ 7ರವರೆಗೆ ಕಬ್ಬನ್ ಪಾರ್ಕ್​ನಲ್ಲಿ ಫ್ಲವರ್ ಶೋ!

ಕಳೆದ ಬಾರಿ 3 ಕೋಟಿ 5 ಲಕ್ಷ ರೂ ಆದಾಯ ಬಂದಿತ್ತು. ಈ ಬಾರಿ 3 ಕೋಟಿ 2 ಲಕ್ಷ ರೂ ಖರ್ಚು ಮಾಡಿ ಫಲಪುಷ್ಪ ಪ್ರದರ್ಶನ ಮಾಡಲಾಗುತ್ತಿದ್ದು, 10 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ ಎಂದು  ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದ್ದಾರೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Source link

T20 World Cup 2026: ಬಾಂಗ್ಲಾ ಪಂದ್ಯಗಳ ಸ್ಥಳ ಬದಲಾವಣೆ; ಬಿಸಿಸಿಐ ಮಹತ್ವದ ನಿರ್ಧಾರ – Kannada News | 2026 T20 World Cup: Bangladesh Matches Shifted in India? Venues Changed

2026 ರ ಟಿ20 ವಿಶ್ವಕಪ್‌ (T20 World Cup 2026) ವೇಳಾಪಟ್ಟಿ ಬದಲಾಗುವ ಸೂಚನೆಗಳು ಸಿಕ್ಕಿವೆ. ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ (IPL) ಕೈಬಿಟ್ಟ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ಹಿಂದೇಟು ಹಾಕುತ್ತಿದೆ. ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಬೇಕಿತ್ತು. ಆದರೆ ಭದ್ರತೆಯ ದೃಷ್ಟಿಯಿಂದ ಬಾಂಗ್ಲಾದೇಶ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಇದರ ಜೊತೆಗೆ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನು ಐಸಿಸಿ ಮುಂದಿಟ್ಟಿದೆ. ಆದರೆ ಐಸಿಸಿ ಹಾಗೂ ಬಿಸಿಸಿಐ ಮಾತ್ರ ಇದಕ್ಕೆ ಸಿದ್ಧವಿಲ್ಲ. ಆದಾಗ್ಯೂ ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಬಾಂಗ್ಲಾದೇಶ ತಂಡದ ಪಂದ್ಯಗಳ ಸ್ಥಳಗಳನ್ನು ಭಾರತದಲ್ಲೇ ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ (BCCI) ಚಿಂತಿಸಿದೆ.

ಬಾಂಗ್ಲಾ ಪಂದ್ಯಗಳ ಸ್ಥಳ ಬದಲಾವಣೆ

ಕ್ರಿಕ್‌ಬಜ್ ವರದಿಯ ಪ್ರಕಾರ, ಬಾಂಗ್ಲಾದೇಶದ ಪಂದ್ಯಗಳ ಸ್ಥಳವನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆ ಕಡಿಮೆಯದ್ದು, ದಕ್ಷಿಣ ಭಾರತದಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆ ಹೆಚ್ಚು ಎಂದು ವರದಿಯಾಗಿದೆ. ಇದರರ್ಥ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈ ಬದಲಿಗೆ ಚೆನ್ನೈ ಮತ್ತು ತಿರುವನಂತಪುರದಲ್ಲಿ ನಡೆಸಬಹುದು.

ಮೇಲೆ ಹೇಳಿದಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯ ವಿರುದ್ಧದ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಬಿಸಿಸಿಐ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಹಾಕಿತು. ಈ ಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಸಿಸಿಗೆ ಇಮೇಲ್ ಮಾಡಿ, ತನ್ನ ತಂಡದ 2026 ರ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಕೋರಿತು. ಅದರಂತೆ ಬಾಂಗ್ಲಾದೇಶದ ಪಂದ್ಯಗಳ ಸ್ಥಳಗಳನ್ನು ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. ಆದಾಗ್ಯೂ, ಬಿಸಿಸಿಐನ ಈ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಒತ್ತಾಯದಿಂದ ತೆಗೆದುಕೊಂಡಿದೆ ಎಂದು ಹೇಳುವುದು ಕಷ್ಟ. ಏಕೆಂದರೆ ಉತ್ತರ ಭಾರತದಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಆಯೋಜಿಸುವುದು ಕಷ್ಟಕರ ಎಂಬುದನ್ನು ಅರಿತಿರುವ ಬಿಸಿಸಿಐ, ಅದರ ಪಂದ್ಯಗಳನ್ನು ದಕ್ಷಿಣ ಭಾರತಕ್ಕೆ ಸ್ಥಳಾಂತರಿಸಲು ನೋಡುತ್ತಿದೆ.

T20 World Cup 2026: ಟಿ20 ವಿಶ್ವಕಪ್​ನಿಂದ ಬಾಂಗ್ಲಾ ಹಿಂದೆ ಸರಿದರೆ ಯಾವ ತಂಡಕ್ಕೆ ಅವಕಾಶ?

ಬಾಂಗ್ಲಾದೇಶದ ಪ್ರಸ್ತುತ ವೇಳಾಪಟ್ಟಿ

ಬಾಂಗ್ಲಾದೇಶ ಫೆಬ್ರವರಿ 7 ರಂದು 2026 ರ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ವೇಳಾಪಟ್ಟಿಯ ಪ್ರಕಾರ, ಅದು ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಬೇಕಿತ್ತು. ಇದರ ನಂತರ, ಫೆಬ್ರವರಿ 9 ರಂದು ಇಟಲಿ ಮತ್ತು ಫೆಬ್ರವರಿ 14 ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಎರಡೂ ಪಂದ್ಯಗಳು ಸಹ ಕೋಲ್ಕತ್ತಾದಲ್ಲಿ ನಡೆಯಲಿವೆ. ಬಾಂಗ್ಲಾದೇಶ ಫೆಬ್ರವರಿ 17 ರಂದು ಮುಂಬೈನಲ್ಲಿ ನೇಪಾಳ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:10 pm, Mon, 12 January 26

Source link