Category Archives: Blog

Your blog category

ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ – Kannada News | Narendra Modi UAE visit, Energy security, defence and other major pacts between 2 countries

ಯುಎಇ ಅಧ್ಯಕ್ಷ ಶೇಖ್ ಜೊತೆ ನರೇಂದ್ರ ಮೋದಿImage Credit source: PTI

ನವದೆಹಲಿ, ಮೇ 15: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇಗೆ (UAE) ನೀಡಿರುವ ಭೇಟಿಯಿಂದ ಹಲವು ನಿರೀಕ್ಷೆಗಳಿವೆ. ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನಿ ಭೇಟಿಯ ಪ್ರಮುಖ ಕಾರ್ಯಸೂಚಿಯಾಗಿದೆ. ಇಂಧನ ಭದ್ರತೆ, ರಕ್ಷಣಾ ಕ್ಷೇತ್ರ ಹಾಗೂ ವ್ಯಾಪಾರದಲ್ಲಿ ಎರಡೂ ದೇಶಗಳ ಮಧ್ಯೆ ಪ್ರಮುಖ ಒಪ್ಪಂದ ಏರ್ಪಟ್ಟಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ಸುಮಾರು 3 ರೂಪಾಯಿಗಳಷ್ಟು ಏರಿಕೆಯಾಗಿವೆ. ಯುಎಇ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಎಲ್‌ಪಿಜಿ (LPG) ಪೂರೈಕೆ ಮತ್ತು ಪೆಟ್ರೋಲಿಯಂ ಮೀಸಲು (Strategic Petroleum Reserves) ಕುರಿತು ಪ್ರಮುಖ ಒಪ್ಪಂದಗಳಿಗೆ ಸಹಿ (ಎಂಒಯು) ಹಾಕಲಾಗಿದೆ.

ಇದನ್ನೂ ಓದಿ: ಖೈಬರ್ ಪಖ್ತುಂಖ್ವಾದಲ್ಲಿ ಭಾರಿ ಉಗ್ರ ದಾಳಿ: ಪಾಕಿಸ್ತಾನದ 18 ಮಂದಿ ಭದ್ರತಾ ಸಿಬ್ಬಂದಿ ಸಾವು

ಭಾರತದ ಮೂಲಸೌಕರ್ಯ, ಆರ್​ಬಿಎಲ್ ಬ್ಯಾಂಕ್ ಮತ್ತು ಸಮ್ಮಾನ್ ಕ್ಯಾಪಿಟಲ್​ನಲ್ಲಿ ಯುಎಇಯಿಂದ 5 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಬರಲಿದೆ. ಗುಜರಾತ್​ನ ದ್ವಾರಕಾದಲ್ಲಿರುವ ವಾದಿನಾರ್​ನಲ್ಲಿ ಹಡಗು ದುರಸ್ತಿ ಕೇಂದ್ರವನ್ನು ಸ್ಥಾಪಿಸಲೂ ಸಹಿ ಹಾಕಲಾಗಿದೆ.

ಯಾವುದೇ ಪರಿಸ್ಥಿತಿಯಲ್ಲೂ ಯುಎಇಗೆ ಬೆಂಬಲ: ಮೋದಿ

ನಿಯೋಗ ಮಟ್ಟದ ಮಾತುಕತೆ ವೇಳೆ ಮಾತನಾಡಿದ ನರೇಂದ್ರ ಮೋದಿ, ಯುಎಇಗೆ ಎಲ್ಲಾ ರೀತಿಯಲ್ಲೂ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲಾ ಪರಿಸ್ಥಿತಿಯಲ್ಲೂ ಯುಎಇಯೊಂದಿಗೆ ಭಾರತ ಹೆಗಲಿಗೆ ಹೆಗಲು ಕೊಡುತ್ತಾ ಬಂದಿದೆ. ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಿ ತರಲು ಭಾರತ ಸಾಧ್ಯವಾದ ಎಲ್ಲಾ ಸಹಕಾರ ಕೊಡುತ್ತದೆ ಎಂದೂ ಮೋದಿ ತಿಳಿಸಿದ್ದಾರೆ. ಹಾಗೆಯೇ, ಇರಾನ್, ಅಮೆರಿಕ ಯುದ್ಧದ ಮಧ್ಯೆ ಯುಎಇಯ ಸ್ಥಳಗಳ ಮೇಲೆ ನಡೆದ ದಾಳಿಯನ್ನೂ ಮೋದಿ ಇದೇ ವೇಳೆ ಖಂಡಿಸಿದ್ದಾರೆ.

ಭಾರತದ ಇಂಧನ ಭದ್ರತೆಗೆ ಸರ್ಕಾರದ ಪ್ರಯತ್ನಗಳು

ಯುದ್ಧದಿಂದಾಗಿ ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಬೀಳುತ್ತಿರುವುದರಿಂದ, ಪ್ರಧಾನಿಯವರು ದೇಶದ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಮಿತವ್ಯಯದ ಕ್ರಮಗಳನ್ನು ಅನುಸರಿಸಲು ಕರೆ ನೀಡಿದ್ದಾರೆ. ಭಾರತೀಯ ತೈಲ ನಿಗಮ (IOC) ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ನಡುವೆ ಎಲ್‌ಪಿಜಿ ಪೂರೈಕೆಗಾಗಿ ಒಪ್ಪಂದ.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ತೈಲ ಸಂಗ್ರಹಣೆಯನ್ನು ಹೆಚ್ಚಿಸಲು ಭಾರತೀಯ ಆಯಕಟ್ಟಿನ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನೊಂದಿಗೆ ಸಹಯೋಗ ಪಡೆಯಲಾಗಿದೆ.

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇ. 88 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ತೈಲ ಸಾಗಣೆಗೆ ಅಡ್ಡಿಯಾಗಿರುವುದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

ಜಾಗತಿಕ ಅಸ್ಥಿರತೆಯ ನಡುವೆ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ಯುಎಇ ಭೇಟಿ ಅತ್ಯಂತ ನಿರ್ಣಾಯಕವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RRB ALP Recruitment 2026: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ – Kannada News | RRB ALP Recruitment 2026: 11,127 Assistant Loco Pilot Vacancies! Apply by June 14

ರೈಲ್ವೆ ನೇಮಕಾತಿ ಮಂಡಳಿಯು (RRB) ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ ನೀಡಿದೆ. ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸುಮಾರು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಭಾರತೀಯ ರೈಲ್ವೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ತಾಂತ್ರಿಕ ಪದವೀಧರರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದು, ಮೇ 15 ರಿಂದಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಪೋರ್ಟಲ್ rrbapply.gov.in ಗೆ ಭೇಟಿ ನೀಡಿ ತಮ್ಮ ಆದ್ಯತೆಯ ರೈಲ್ವೆ ವಲಯವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಮಾನದಂಡಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರುವುದರ ಜೊತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ (ITI) ಪದವಿ ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಬಿಇ/ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷದೊಳಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ:

ಒಟ್ಟು ಐದು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBT-1 ಮತ್ತು CBT-2) ನಡೆಯುತ್ತವೆ, ನಂತರ ಆಪ್ಟಿಟ್ಯೂಡ್ ಪರೀಕ್ಷೆ (CBAT), ದಾಖಲೆ ಪರಿಶೀಲನೆ ಮತ್ತು ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಇರುತ್ತದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 1/3 ಅಂಕಗಳನ್ನು ಕಡಿತಗೊಳಿಸುವ (Negative Marking) ವ್ಯವಸ್ಥೆ ಇರುವುದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಉತ್ತರಿಸಬೇಕಾಗುತ್ತದೆ. ಅಂತಿಮ ಮೆರಿಟ್ ಪಟ್ಟಿಯನ್ನು CBT-2 ಮತ್ತು ಆಪ್ಟಿಟ್ಯೂಡ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಬಂಗಾಳಕೊಲ್ಲಿ ವಾಯುಭಾರ ಕುಸಿತ, ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ? – Kannada News | Low Pressure Over Bay of Bengal, 3 Days Heavy Rain Karnataka Said By Meteorological director CS Patil

ಬೆಂಗಳೂರು (ಮೇ 15): ಬಿಸಿಲಿನ ಬೇಗೆಯ ನಡುವೆಯೇ ಕರ್ನಾಟಕದಲ್ಲಿ (Karnataka) ಹಲವೆಡೆ ವರುಣ (Rain) ತಂಪೆರೆಯುತ್ತಿದ್ದಾನೆ. ಕೆಲ ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಈ ಮಳೆ ಇನ್ನಷ್ಟು ದಿನ ಮುಂದುವರೆಯಲಿದೆ. ಹೌದು…ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದರಿಂದ 50% ಗಿಂತ ಹೆಚ್ಚಿನ ಪ್ರದೇಶದಲ್ಲಿ 3 ದಿನ ಗುಡುಗು ಮಿಂಚಿನ ಸಮೇತ ಮಳೆಯಾಗುವ ಸಾಧ್ಯತೆಗಳಿವೆ. ಗಂಟೆಗೆ 30ರಿಂದ 40 ಕಿ.ಮೀ ವೇಗ ದಲ್ಲಿ ಗಾಳಿ ಬಿಸಲಿದೆ. ಹೀಗಾಗಿ ಮುಕ್ಕಾಲು ಭಾಗ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಎಲ್ಲೆಲ್ಲಿ ಮಳೆ?

ಇನ್ನು ಈ ಬಗ್ಗೆ ಹವಾಮಾನ ತಜ್ಞರಾದ CS ಪಾಟೀಲ್ ಅವರು ಟಿವಿ9 ಜತೆ ಮಾತನಾಡಿದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ಭಾರಿ ಮಳೆಯಾಗುವ ಸಾಧ್ಯತೆ ಇದೆ. 50% ಗಿಂತ ಹೆಚ್ಚಿನ ಪ್ರದೇಶದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಗುಡುಗು ಮಿಂಚಿನ ಸಮೇತ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ , ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ , ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ಈ ಬಾರಿಯ ಮಳೆಯ ಮೇಲೆ ಎಲ್ ನಿನೋ ಪರಿಣಾಮ ದೊಡ್ಡಮಟ್ಟದಲ್ಲಿ ಬೀರಲಿದೆ. ಇದರಿಂದ ಈ ವರ್ಷವು ನೈರುತ್ಯ ಮಾನ್ಸೂನ್ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗಲಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಕೇಸ್​​: ಆರೋಪಿಗಳ ಸಂಚು ಬಯಲು – Kannada News | Gelatin Stick Found on PM Route; Accused Tried to Stop Narendra Modi’s Visit to Art of Living Foundation Event

ಬೆಂಗಳೂರು, ಮೇ 15: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ ಸಂಬಂಧ ಆರೋಪಿಗಳ ಸಂಚು ಏನಾಗಿತ್ತು ಎಂಬುದೀಗ ಬಹಿರಂಗಗೊಂಡಿದೆ. ಆರ್ಟ್​ ಆಫ್​ ಲಿವಿಂಗ್​​ ಸ್ಥಳಕ್ಕೆ ಮೋದಿ ಬರಲೇಬಾರದು ಎಂದು ಆರೋಪಿಗಳು ಪ್ಲ್ಯಾನ್​​ ಮಾಡಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಲೀಡ್​​ ಸಿಗದ ಹಾಗೆ ಸಂಚು ರೂಪಿಸಿದ್ದರು ಎಂದು ಟಿವಿ9ಗೆ ಪೊಲೀಸ್​​ ಉನ್ನತ ಮೂಲಗಳು ತಿಳಿಸಿವೆ. ಇನ್ನು ಪ್ರಕರಣ ಸಂಬಂಧ ಈವರೆಗೂ ಬೆಂಗಳೂರು ದಕ್ಷಿಣ ಪೊಲೀಸರು ನೂರಾರು ಜನರ ವಿಚಾರಣೆ ನಡೆಸಿದ್ದು, ಆರೋಪಿಗಳ ಪತ್ತೆಯೇ ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್: 7 ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ – Kannada News | 7 Killed After Tractor Falls Off Tungabhadra Bridge in Koppal Following Tanker Collision

ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್Image Credit source: Tv9 Kannada

ಕೊಪ್ಪಳ, ಮೇ 15: ಸೇತುವೆ ಮೇಲಿಂದ ಟ್ರ್ಯಾಕ್ಟರ್‌ ಕೆಳಗೆಬಿದ್ದ ಪರಿಣಾಮ 7 ಜನರು ದುರ್ಮಣ ಹೊಂದಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ತುಂಗಭದ್ರಾ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಕೆಳಗೆಬಿದ್ದು ದುರಂತ ಸಂಭವಿಸಿದ್ದು, ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಮೃತರೆಲ್ಲರೂ ಒಂದೇ ಕುಟುಂಬದವರು ಎಂಬುದು ಗೊತ್ತಾಗಿದೆ. ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಮಾಹಿತಿ ಇದೆ.

ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಟ್ಯಾಂಕರ್​ ಗುದ್ದಿದೆ ಎನ್ನಲಾಗಿದ್ದು, ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದವರು ಎಂಬುದು ತಿಳಿದುಬಂದಿದೆ. ಹುಲಿಗೆಮ್ಮ ದೇವಸ್ಥಾನಕ್ಕೆ ಬ್ಯಾಟಿ ಮಾಡಲು ತೆರಳುತ್ತಿದ್ದ ವೇಳೆ ಭೀಕರ ಅಪಘಾತ ನಡೆದಿದ್ದು, ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಹೊಸಪೇಟೆ ಮತ್ತು ಕೊಪ್ಪಳ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಮಹತ್ವದ ಮಾಹಿತಿ ಹಂಚಿಕೊಂಡ ಚುನಾವಣಾಧಿಕಾರಿ ಅನ್ಬುಕುಮಾರ್ – Kannada News | Karnataka Voter List Revision: Election Officer Anbukumar Shares Important Updates

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್Image Credit source: tv9 kannada

ಬೆಂಗಳೂರು, ಮೇ 15: ರಾಜ್ಯದಲ್ಲಿ (Karnataka) ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ (Voter List Revision) ಚುನಾವಣಾ ಆಯೋಗ ಈಗಾಗಲೇ ದಿನಾಂಕ ಘೋಷಿಸಿದೆ. ಜೂನ್​​ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30ರಿಂದ ಜು.29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಸೇರಲು 18 ವರ್ಷ ಪೂರ್ಣವಾಗಿರಬೇಕು. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ (anbukumar)​ ಮಾಹಿತಿ ನೀಡಿದರು.

ಮುಖ್ಯಾಂಶಗಳು

  • ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ
  • ಮನೆ ಮನೆಗೆ BLO ಭೇಟಿ: ಗಣತಿ ನಮೂನೆ ಮತ್ತು QR ಕೋಡ್ ವೈಶಿಷ್ಟ್ಯಗಳು
  • ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್​ ಮಾಹಿತಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ಕರ್ನಾಟಕದಲ್ಲಿ ಮತದಾರರ ಮ್ಯಾಪಿಂಗ್ ಕೆಲಸವು ವೇಗವಾಗಿ ನಡೆಯುತ್ತಿದ್ದು, ಈಗಾಗಲೇ ಶೇಕಡಾ 86 ರಷ್ಟು ಪ್ರಗತಿ ಸಾಧಿಸಿದೆ ಎಂದರು. ಇನ್ನು ಜಿಲ್ಲಾವಾರು ಮತ್ತು ಕ್ಷೇತ್ರವಾರು ಪ್ರಗತಿಯನ್ನು ಹಂಚಿಕೊಂಡ ಅವರು, ಕೊಡಗು ಜಿಲ್ಲೆಯಲ್ಲಿ ಶೇ. 96 ರಷ್ಟು ಹಾಗೂ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ. 99 ರಷ್ಟು ಮ್ಯಾಪಿಂಗ್ ಕೆಲಸ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಮ್ಯಾಪಿಂಗ್ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮುಂದಿನ ಹಂತದ ಕುರಿತು ಚರ್ಚಿಸಲು ಇಂದು ಸಂಜೆ ಎಲ್ಲಾ ಜಿಲ್ಲಾಧಿಕಾರಿಗಳ (ಡಿಸಿ) ಜೊತೆ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮತದಾರರ ಗಣತಿ ಪ್ರಕ್ರಿಯೆ ಮತ್ತು ಕ್ಯೂಆರ್ ಕೋಡ್ ವೈಶಿಷ್ಟ್ಯ

ಚುನಾವಣಾ ಪ್ರಕ್ರಿಯೆಯ ಮುಂದಿನ ಹಂತಗಳ ಕುರಿತು ಮಾತನಾಡಿದ ಅನ್ಬುಕುಮಾರ್, ಎಸ್ಐಆರ್ ಫಾರಂನಲ್ಲಿ ಗಣತಿ ನಮೂನೆಯೇ ಅತ್ಯಂತ ಮುಖ್ಯ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ 2 ಸೆಟ್ ಗಣತಿ ನಮೂನೆಗಳನ್ನು ತಲುಪಿಸಲಿದ್ದಾರೆ. ವಿಶೇಷವೆಂದರೆ, ಗಣತಿ ನಮೂನೆಯಲ್ಲಿರುವ ಪ್ರತಿ ಮತದಾರರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ಇರಲಿದೆ ಎಂದು ವಿವರಿಸಿದರು.

ಮತದಾರರ ಗಮನಕ್ಕೆ

ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಯನ್ನು ಮನೆಗೆ ತಂದಾಗ ಸಾರ್ವಜನಿಕರು ಅದರಲ್ಲಿ 1 ಸೆಟ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ಮರಳಿ ನೀಡಬೇಕು. ಮತ್ತೊಂದು ಸೆಟ್ ಗಣತಿ ನಮೂನೆಯನ್ನು ಭವಿಷ್ಯದ ಸಾಕ್ಷಿಗಾಗಿ ಮತದಾರರೇ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಇನ್ನು 2002ರ ಮತದಾರರ ಪಟ್ಟಿಯಲ್ಲಿ ಯಾರ ಹೆಸರು ದಾಖಲಾಗಿದೆಯೋ, ಅಂತಹವರ ಹೆಸರುಗಳನ್ನು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Karnataka SIR: ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ

ರಾಜ್ಯದ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿ ಸಭೆ ನಡೆಸಲಾಗಿದೆ. ರಾಜಕೀಯ ಪಕ್ಷಗಳು ಬಿಎಲ್​ಎಗಳನ್ನು ನೇಮಕ ಮಾಡಬಹುದು. ಮಾಧ್ಯಮಗಳಿಗೂ ಸಹ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಗ್ರಾ.ಪಂ. ಮಟ್ಟದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್​ಗಳ ಓಪನ್​​ ಮಾಡಲಾಗುತ್ತದೆ. ಎಸ್​ಐಆರ್​ ಪ್ರಕ್ರಿಯೆಗೆ 25,284 ಬಿಎಲ್​ಎಗಳ ನೇಮಕ ಮಾಡಲಾಗಿದೆ ಎಂದು ಅನ್ಬುಕುಮಾರ್​ ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

“ಬ್ರಿಟನ್‌ಗಿಂತಲೂ ದುಬಾರಿಯಾಯಿತೇ ಬೆಂಗಳೂರು? ಒಬ್ಬರ ಸಂಬಳಕ್ಕೆ ವಿದೇಶದಲ್ಲಿ ಮನೆ ಸಿಗುತ್ತೆ, ಇಲ್ಲಿ ಇಬ್ಬರದ್ದೂ ಸಾಲಲ್ಲ! – Kannada News | “One Salary, One House: Viral Post Sparks Debate on India’s Skyrocketing Property Prices

ಬೆಂಗಳೂರು, ಮೇ,15: ಭಾರತದ ಐಟಿ ಹಬ್ ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಎಷ್ಟು ಕಷ್ಟ ಎಂಬ ಬಗ್ಗೆ ಮಹಿಳೆಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಇಬ್ಬರ ಸಂಬಳವಿದ್ದರೂ ಮನೆ ಖರೀದಿಸಲು ಸಾಧ್ಯವಾಗದ ಮಹಿಳೆ, ಯುಕೆ (UK) ಗೆ ತೆರಳಿದ ಕೇವಲ ಎರಡು ವರ್ಷದಲ್ಲಿ ಅಲ್ಲಿ ಸ್ವಂತ ಮನೆ ಖರೀದಿಸಿರುವುದಾಗಿ ತಿಳಿಸಿದ್ದಾರೆ.

“ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾವು ಇಬ್ಬರು ದುಡಿಯುತ್ತಿದ್ದರೂ ಒಂದು ಫ್ಲಾಟ್ ಖರೀದಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಬೆಂಗಳೂರಿನಲ್ಲಿ ನಮ್ಮಿಂದ ಮನೆ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಪ್ಲಾನ್​​ನ್ನು ಕೈಬಿಟ್ಟೆವು” ಎಂದು ಎಂದು ನೇಹಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆದರೆ ಬ್ರಿಟನ್‌ಗೆ ತೆರಳಿದ ಎರಡೇ ವರ್ಷಗಳಲ್ಲಿ, ಕೇವಲ ಒಬ್ಬರ ಸಂಬಳದಲ್ಲಿ ಮೂರು ಬೆಡ್‌ರೂಂನ ಸ್ವತಂತ್ರ ಮನೆ ಖರೀದಿಸಿರುವುದಾಗಿ ಅವರು ಹೇಳಿದ್ದಾರೆ. ಇದರಲ್ಲಿ ಎಲ್ಲಾ ಆಧುನಿಕ ಗೃಹೋಪಕರಣಗಳು, ಪಾರ್ಕಿಂಗ್ ಮತ್ತು ಸುಂದರವಾದ ವ್ಯೂ (View) ಕೂಡ ಇದೆ ಎಂದು ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಭಾರತದ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚಾಗಿ ಕಂಡುಬರುವ ‘ಬ್ಲ್ಯಾಕ್ ಮನಿ’ (ಕಪ್ಪು ಹಣ) ಬೇಡಿಕೆ ಅಲ್ಲಿಲ್ಲ. 100% ಪಾರದರ್ಶಕತೆ ಮತ್ತು ಮೊದಲ ಬಾರಿ ಮನೆ ಖರೀದಿಸುವವರಿಗೆ ಸಿಗುವ ವಿಶೇಷ ರಿಯಾಯಿತಿಗಳು ಅಲ್ಲಿನ ವ್ಯವಸ್ಥೆಯನ್ನು ಸುಲಭಗೊಳಿಸಿವೆ ಎಂದು ಅವರು ಹೊಗಳಿದ್ದಾರೆ.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು!

ಈ ಪೋಸ್ಟ್ ಸುಮಾರು 4.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಅನೇಕರು ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಲ್ಲಿ ಬಿಸಿನೆಸ್‌ಮನ್‌ಗಳು ಮತ್ತು ಅಧಿಕಾರಿಗಳ ಬಳಿ ಹಣವಿರಬಹುದು, ಆದರೆ ಮಧ್ಯಮ ವರ್ಗದ ಐಟಿ ಉದ್ಯೋಗಿಗಳಿಗೆ ಮನೆ ಖರೀದಿಸುವುದು ಇಂದಿಗೂ ಸವಾಲೇ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲು

Source link

ಮತ್ತೆ ಬರುತ್ತಿದೆ ‘ಸ್ಕ್ಯಾಮ್’: ಈ ಬಾರಿ ಯಾವ ಮೋಸಗಾರನ ಕತೆ? – Kannada News | Hansal Mehta to direct Scam 3 this is about Subrata Roy

ಹಿಂದಿಯ ‘ಸ್ಕ್ಯಾಮ್’ (Scam) ವೆಬ್ ಸರಣಿ (Web series) ಭಾರತದ ಬಲು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಈ ಸ್ಕ್ಯಾಮ್ ವೆಬ್ ಸರಣಿ ಭಾರತದ ನಿಜ ಆರ್ಥಿಕ ಅಪರಾಧಿಗಳ ಕತೆಗಳನ್ನು ಹೇಳುವ ವೆಬ್ ಸರಣಿ. ಪ್ರತಿಭಾವಂತ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನ ಮಾಡುತ್ತಾ ಬರುತ್ತಿರುವ ‘ಸ್ಕ್ಯಾಮ್’ ವೆಬ್ ಸರಣಿಯ ಎರಡು ಸೀಸನ್​​ಗಳು ಈಗಾಗಲೇ ಬಂದಿದ್ದು ಎರಡೂ ಸೂಪರ್ ಹಿಟ್ ಆಗಿವೆ. ಅದರಲ್ಲೂ ಮೊದಲಿಗೆ ಬಂದ ‘ಸ್ಕ್ಯಾಮ್ 1992’, ಷೇರು ಮಾರುಕಟ್ಟೆ ಬಳಸಿ ಕೋಟ್ಯಂತರ ಹಣ ಲೂಟಿ ಮಾಡಿದ್ದ ಹರ್ಷಲ್ ಮೆಹ್ತ ಜೀವನ ಆಧರಿಸಿದ ಕತೆ ಒಳಗೊಂಡಿತ್ತು. ಅದು ಬ್ಲಾಕ್ ಬಸ್ಟರ್ ಆಗಿತ್ತು. ಬಳಿಕ ಕರೀಂ ಲಾಲ್ ತೆಲಗಿ ಕುರಿತ ‘ಸ್ಕ್ಯಾಮ್ 2003’ ಬಂತು. ಇದೀಗ ಮತ್ತೊಬ್ಬ ಆರ್ಥಿಕ ಅಪರಾಧಿಯ ಕತೆಯನ್ನು ಹನ್ಸಲ್ ತೆರೆಗೆ ತರುತ್ತಿದ್ದಾರೆ.

ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಆರ್ಥಿಕ ಅಪರಾಧಿಗಳ ಜೀವನವನ್ನು ಆಯ್ಕೆ ಮಾಡಿಕೊಂಡು ವೆಬ್ ಸರಣಿ ಮಾಡುವ ಹನ್ಸಲ್ ಮೆಹ್ತಾ, ಈ ಬಾರಿ ಸಹಾರಾ ಇಂಡಿಯಾ ಸ್ಥಾಪಕ ಭಾರತೀಯ ಉದ್ಯಮಿ ದಿವಂಗತ ಸುಬ್ರತಾ ರಾಯ್ ಅವರ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹನ್ಸಲ್ ಮೆಹ್ತಾ ಅವರ ‘ಸ್ಕ್ಯಾಮ್ 3’ ನಿರ್ಮಾಪಕರು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲು ಸಜ್ಜಾಗಿದ್ದಾರೆ, ಏಕೆಂದರೆ ಇದರ ಚಿತ್ರೀಕರಣವು ಮೇ 13 ರಿಂದ ಆರಂಭವಾಗಿದೆ ಎನ್ನಲಾಗುತ್ತಿದೆ.

ಭಾರತದ ಅತ್ಯಂತ ವಿವಾದಾತ್ಮಕ ಉದ್ಯಮಿಗಳಲ್ಲಿ ಒಬ್ಬರು ಸುಬ್ರತಾ ರಾಯ್. ಅತ್ಯಂತ ಐಶಾರಾಮಿ ಜೀವನ ನಡೆಸುತ್ತಿದ್ದ ಸುಬ್ರತಾ ರಾಯ್ ಮೇಲೆ ಹಲವು ಆರೋಪಗಳಿದ್ದವು, ವಂಚನೆ, ಪಾಂಜಿ ಸ್ಕ್ಯಾಮ್ ಆರೋಪ, ಮನಿ ಲಾಂಡರಿಂಗ್ ಇನ್ನೂ ಕೆಲವು ಆರೋಪಗಳಿದ್ದವು. ಸುಮಾರು 24 ಸಾವಿರ ಕೋಟಿ ರೂಪಾಯಿಗಳ ಹಣವನ್ನು ಸುಬ್ರತೋ ರಾಯ್ ವಂಚಿಸಿದ್ದರು. ಸುಬ್ರತೋ ರಾಯ್ ಅನ್ನು ಜೈಲಿಗೆ ಹಾಕಿದ ಬಳಿಕ ಅಲ್ಲಿಯೂ ಸಹ ಈ ವ್ಯಕ್ತಿ ಪ್ರಭಾವ ಬಳಸಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಇದನ್ನೂ ಓದಿ:ಜೀ5 ಒಟಿಟಿಯಲ್ಲಿ ಏ.24ರಿಂದ ಪ್ರಸಾರ ಆಗಲಿದೆ ‘ಜೆರಾಕ್ಸ್’ ವೆಬ್ ಸರಣಿ; ಏನಿದರ ಕಥೆ?

ಸುಬ್ರತಾ ರಾಯ್, ತಮ್ಮ ಮಕ್ಕಳ ಮದುವೆಗೆ 500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದರು. ರಾಜಕಾರಣಿಗಳಿಗೆ ಬಲು ಆಪ್ತರಾಗಿದ್ದ ಸುಬ್ರತೋ ರಾಯ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರುಗಳಿಗೆ ಆಗ ಬೆಂಬಲ ನೀಡಿದ್ದರು. ಅಟಲ್ ಅವರು ಸುಬ್ರತೋ ರಾಯ್ ಪುತ್ರನ ಮದುವೆಗೆ ಸಹ ಆಗಮಿಸಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಸುಬ್ರತೋ ರಾಯ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾರ್ಗಿಲ್​​ನಲ್ಲಿ ಮೃತರಾದ ಸೈನಿಕರ ಕುಟುಂಬಕ್ಕೆ ನೆರವಾಗಿದ್ದರು, ಇನ್ನೂ ಹಲವು ಸಾಮಾಜ ಸೇವೆ ಮಾಡಿದ್ದರು. ಆದರೆ ಅಂತಿಮವಾಗಿ ಸುಬ್ರತೋ ಹೃದಯಾಘಾತದಿಂದ ನಿಧನ ಹೊಂದಿದಾಗ ಅವರ ಮಕ್ಕಳು, ಪತ್ನಿ ಸಹ ಅವರನ್ನು ಕಾಣಲು ಬಂದಿರಲಿಲ್ಲ.

ಇದೀಗ ಹನ್ಸಲ್ ಮೆಹ್ತಾ ಅವರು ಸುಬ್ರತಾ ರಾಯ್ ಅವರ ಜೀವನ ಕತೆಯನ್ನು ವೆಬ್ ಸರಣಿ ಮಾಡಲು ತಯಾರಾಗಿದ್ದು, ಚಿತ್ರಕತೆ ರೆಡಿ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಬೋಡ್ಕೆ ಅವರು ಸುಬ್ರತಾ ರಾಯ್ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲೊಂದು ವಿಚಿತ್ರ ಮನೆ, ಈ ಅಪರೂಪದ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ! – Kannada News | Four floor house Build In Just 250 square feet at Bengaluru, residence viral in Social Media

ಬೆಂಗಳೂರು, (ಮೇ 15): ಅನೇಕರು 30*40 ಸೈಟ್ ನಲ್ಲಿ ಮನೆ ಕಟ್ಟಿದ್ದವರೇ ಜಾಗ ಸಾಕಾಗಲ್ಲ, ಮನೆ ಸಣ್ಣದಾಯ್ತು ಎಂದು ಗೋಳಾಡುತ್ತಾರೆ. ಹೀಗಿರುವಾಗ ಬೆಂಗಳೂರಿನಲ್ಲಿ (Bengaluru) ಕೇವಲ 250 ಚದರ ಅಡಿಯಲ್ಲೇ ಬರೋಬ್ಬರಿ 4 ಮಹಡಿ ಮನೆ ತಲೆ ಎತ್ತಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಹೌದು…ರಾಜರಾಜೇಶ್ವರಿ ನಗರದ ಜವರೇಗೌಡ ನಗರದಲ್ಲಿರುವ ಈ ಅಪರೂಪದ ಮನೆ, ಮುಂದಕ್ಕೆ 4 ಅಡಿ, ಹಿಂದಕ್ಕೆ 12 ಅಡಿ ಅಗಲ, 20 ಅಡಿ ಉದ್ದದಲ್ಲಿ ತಲೆ ಎತ್ತಿದ್ದು, ಇದೀಗ ಸ್ಥಳೀಯರಿಗೆ ಅಪಾಯ ತಂದೊಡ್ಡಿದೆ.

ಇಷ್ಟು ಸಣ್ಣ ಜಾದಲ್ಲೇ ನಾಲ್ಕು ಮಹಡಿ ಮನೆ 7 ವರ್ಷದ ಹಿಂದೆಯೇ ಕಟ್ಟಿದ್ದು, ನಿರ್ಮಾಣವಾದ ಒಂದೇ ವರ್ಷದಲ್ಲಿ ಬಿರುಕು ಬಿಟ್ಟಿದೆ. ಮನೆ ಅರ್ಧ ಅಡಿ ಮುಂದಕ್ಕೆ ವಾಲಿದ್ದು, ಪಕ್ಕದ ಮನೆಗೂ ಅಪಾರ ಹಾನಿ ಆತಂಕ ಎದುರಾಗಿದೆ. ಇದರಿಂದ ಪಕ್ಕದ ಮನೆಯವರು ಕಳೆದ 5 ವರ್ಷ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದು, ಶಿಥಿಲಗೊಂಡಿರುವ ಮನೆ ತೆರವು ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯ ಈ ಮನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದೇ ಮೇ 28ರಂದು ಸ್ಥಳ ಮಹಜರು ಮಾಡುವುದಾಗಿ ಮನೆಗೆ ನೋಟೀಸ್ ಅಂಟಿಸಿದ್ದಾರೆ. ಮನೆಯ ಹೊರಭಾಗ, ಒಳಭಾಗದ ಹತ್ತಾರು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವ ಸಮಯದಲ್ಲಿ ಬೀಳುತ್ತೋ ಎನ್ನುವ ಆತಂಕದಲ್ಲಿ ಸ್ಥಳೀಯರಿದ್ದಾರೆ. ಇನ್ನು ಮನೆ ಹೇಗಿದೆ ಎನ್ನುವುದನ್ನು ನೀವು ಒಂದು ಸಲ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link