ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ! – Kannada News | Bodybuilder Dies After Suddenly Collapsing; Son Passes Away Before Mother’s Eyes
ದಾವಣಗೆರೆ, ಜೂನ್ 17: ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಗೆದ್ದು ಹೆಸರು ಮಾಡಿದ್ದ 26 ವರ್ಷದ ಯುವ ಬಾಡಿ ಬಿಲ್ಡರ್ (Bodybuilder) ಜಿಮ್ನಿಂದ ಮನೆಗೆ ಬಂದ ಕೆಲ ಹೊತ್ತಲ್ಲೇ ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ (heart attack) ಸಾವನ್ನಪ್ಪಿರುವಂತಹ ಆತಂಕಕಾರಿ ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. ಸುಶೀಲಕುಮಾರ್ ಮೃತ ಬಾಡಿ ಬಿಲ್ಡರ್. ಸುಶೀಲಕುಮಾರ್ ಸಾವು ಸ್ನೇಹಿತರಿಗೆ ಅಚ್ಚರಿ ಮೂಡಿಸಿದೆ. ಕುಟುಂಬಸ್ಥರ ಮುಗಿಲು ಆಕ್ರಂದನ ಮುಟ್ಟಿದೆ. ಮುಖ್ಯಾಂಶಗಳು ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಯುವಕ ಹೃದಯಾಘಾತದಿಂದ ಸಾವು…